ಕಳೆದ ನಾಲೈದು ದಿನಗಳಿಂದ ಇದ್ದಕ್ಕಿದ್ದಂತಯೇ ಕೆಲವು ಸ್ವಘೋಷಿತ ದೊಣ್ಣೇ ನಾಯಕರುಗಳ ಆಟಾಟೋಪಗಳು ನಮ್ಮ ರಾಜ್ಯದಲ್ಲಿ ಹೆಚ್ಚಾಗಿದೆ. ಯಾವ ದಂಡನಾಯಕರು ಮತ್ತು ಯಾವ ವಿಷಯ ಎಂದು ತಿಳಿಯುವುದಕ್ಕೆ ಮುಂಚೆ ದೊಣ್ಣೇನಾಯಕರು ಎಂದರೆ ಯಾರು? ಏನು ಎಂದು ಸ್ವಲ್ಪ ತಿಳಿದುಕೊಳ್ಳೋಣ. ಹಾಳಾದ ಊರಿಗೆ ಉಳಿದವರೇ ದೊಣ್ಣೆ ನಾಯಕರು ಎಂಬ ಗಾದೆ ಮಾತಿನಂತೆ ಹಿಂದಿನ ಕಾಲದಲ್ಲಿ ಮೈ ಮುರಿದು ಕೆಲಸ ಮಾಡಲಾಗದ ಕೆಲವು ದಾಂಡಿಗರು ಗಿರಿಜಾ ಮೀಸೆ ಬಿಟ್ಟುಕೊಂಡು ಕೈಯ್ಯಲ್ಲೊಂದು ದೊಣ್ಣೆ ಹಿಡಿದುಕೊಂಡು ಹಾದಿ ಬೀದಿಯಲ್ಲಿ ಹೋಗುವವರನ್ನು ಹೆಸರಿಸಿ ಬೆದರಿಸಿ ಅವರ ಕೈಯ್ಯಲ್ಲಿದ್ದದ್ದನ್ನು ಕಿತ್ತುಕೊಂಡು ತಮ್ಮ ಜೀವನ ನಡೆಸುತ್ತಿದ್ದರು. ಹಾಗಾಗಿ ಅಂತಹವರನ್ನು ದೊಣ್ಣೆ ನಾಯಕ ಇಲ್ಲವೇ ದಂಡದ ನಾಯಕರು ಎಂದು ಕರೆಯುತ್ತಿದ್ದರು. ಇಂದು ಸಹಾ ಅದೇ ರೀತಿಯ ದೊಣ್ಣೇ ನಾಯಕರ ಹಾವಳಿ ಕರ್ನಾಟಕದಲ್ಲಿ ವಿವಿಧ ರೀತಿಯಲ್ಲಿ ಆಗ್ತಾ ಇದೆ.
ತನ್ನ ಅಭಿನಯದಿಂದ ದೇಶಾದ್ಯಂತ ಪ್ರಖ್ಯಾತವಾಗಿರುವ, ಕನ್ನಡ ಚಿತ್ರರಂಗದ ನಾಯಕರಾದ ಕಿಚ್ಚ ಸುದೀಪ್ ಅವರು ತಮ್ಮ ವಯಕ್ತಿಕ ಕಾರಣದಿಂದಾಗಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಅವರು ಹೇಳಿದವರ ಪರವಾಗಿ ಪರವಾಗಿ ಪ್ರಚಾರ ಮಾಡುವುದಾಗಿ ಕಳೆದವಾರ ಬಹಿರಂಗವಾಗಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ ಕೂಡಲೇ ಇದ್ದಕ್ಕಿದ್ದಂತೆಯೇ ಹತ್ತು ಹಲವಾರು ಜನರು ಮೈ ಮೇಲಿನ ಬಟ್ಟೆ ಹರಿದುಕೊಂಡು ಮೈ ಕೈ ಪರಚಿಕೊಂಡು ಸಾರ್ವಜನಿಕವಾಗಿ ಗೋಳಾಡುತ್ತಿರುವುದು ನಿಜಕ್ಕೂ ಅಸಹನೀಯವಾಗಿದೆ.
ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರುವ ಇಲ್ಲವೇ ಬೆಂಬಲ ಕೊಡುವ ಸೂಚನೆ ಹಿಂದಿನ ದಿನವೇ ಸಾರ್ವಜನಿಕಗೊಳ್ಳುತ್ತಿದ್ದಂತೆಯೇ, ತುಕ್ಡೇ ತುಕ್ಡೇ ಗ್ಯಾಂಗ್ ನಾಯಕ ಪ್ರ(ಕು)ಖ್ಯಾತ ನಟ ಪ್ರಕಾಶ್ ರೈ ಸುದೀಪ್ ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲಾ ಎಂದು ನನ್ನ ಭಾವನೆ ಎಂದು ಟ್ವಿಟ್ ಮಾಡಿದ್ವರು. ಮಾರನೇಯ ದಿನ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳುತ್ತಿದ್ದಂತೆಯೇ, ಮತ್ತೆ ಸರಣಿ ಟ್ವೀಟ್ ಮೂಲಕ ಕಿಚ್ಚನ್ನು ಕಿಚಾಯಿಸಲು ಮುಂದಾಗಿದ್ದಾರೆ. ಎಲ್ಲರೂ ಪ್ರೀತಿಸುವ ಕಲಾವಿದರಾಗಿ ಜನರ ಧ್ವನಿಯಾಗುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ ಆದರೆ ರಾಜಕೀಯ ಪಕ್ಷವನ್ನು ಬಣ್ಣಿಸಲು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಟಾಂಗ್ ನೀಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ವ್ಯಂಗ್ಯ ಚಿತ್ರ ಶೇರ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ನಿಮ್ ಮಾಮನೊ ನಿಮ್ ಅತ್ತೇನೊ ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ ನೀವು ದುಡಿದಿದ್ರಲ್ಲಿ ಕೋಡಿ ಸುದೀಪ್ ವಿರುದ್ಧ ಗುಡುಗಿದ್ದಾರೆ. ತಮ್ಮ ಕಷ್ಟದಲ್ಲಿ ಆದವರ ಋಣ ಸಂದಾಯ ಮಾಡಲು ಹಣದ ರೂಪವೇ ಆಗಬೇಕು ಎಂದೇನಿಲ್ಲಾ ಅಲ್ಲವೇ? ತನು ಮನದ ರೂಪದಲ್ಲೂ ಸಹಾಯ ಮಾಡಬಹುದು ಎನ್ನುವ ಸಂಸ್ಕಾರ ನಮ್ಮದಲ್ಲವೇ? ಹಾಗಾಗಿ ತಮಗೆ ಸಹಾಯ ಮಾಡಿದವರ ಪರವಾಗಿ ಸುದೀಪ್ ಪ್ರಚಾರ ಮಾಡಿದರೆ, ಪರಕಾಚ ಏಕೆ ಮೈ ಕೈ ಪರಚಿಕೊಳ್ಳಬೇಕು? ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯ ಕಾವೇರಿ ನೀರು ಕುಡಿದು ಬೆಳದ ಇದೇ ಪರಕಾಚ ಕಾವೇರಿ ನದಿ ನೀರಿನ ಹಂಚಿಕೆಯ ಸಂದರ್ಭದಲ್ಲಿ ತಮಿಳುನಾಡಿನ ಪರವಹಿಸಿಕೊಂಡವರು ಈಗ ಸುದೀಪ್ ಅವರನ್ನು ಪ್ರಶ್ನಿಸುವ ಯಾವ ಹಕ್ಕಿದೆ?
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು ಎಂಬುದರ ಅರಿವಿದ್ದರೂ, ಇಂತಾ ತೋಲಾಂಡಿ ನಾಯಕರ ಮಾತುಗಳನ್ನೇಕೆ ಕೇಳಬೇಕು? ಪತ್ರಕರ್ತೆ ಗೌರಿ ಹೆಣ ಮುಂದೆ ಇಟ್ಟುಕೊಂಡು ಇದೇ JustAs(s)king ಆಭಿಯಾನ ಆರಂಭಿಸಿದ ಪರಕಾಚ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ದೇಶದ್ರೋಹಿಗಳನ್ನು ಸಮರ್ಥನೆ ಮಾಡುತ್ತಾ ಈ ದೇಶವನ್ನು ಮತ್ತೊಮ್ಮೆ ಧರ್ಮಾಧಾರಿತವಾಗಿ ಒಡೆಯಲು ಹುನ್ನಾರ ಮಾಡುತ್ತಿರುವ ತುಕ್ಡೇ ತುಕ್ಡೇ ಗ್ಯಾಂಗ್ ಪರ ವಹಿಸಿದ ಉದಾಹಣೆ ನಮ್ಮ ಕಣ್ಣ ಮುಂದಿದೆ. ಪರೋಕ್ಷವಾಗಿ ಸುದೀಪ್ ಹಣದ ಆಸೆಗಾಗಿ ಬಿಜೆಪಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಆಪಾದನೆ ಮಾಡುತ್ತಿರುವ ಪ್ರಕಾಶ್ ರೈ, ಮೊನ್ನೆ ಮೊನ್ನೆಯಷ್ಟೇ ಈ ದೇಶವನ್ನು ಜೋಡಿಸ್ತೀನಿ ಎಂದು ದೇಶಾದ್ಯಂತ ಅಡ್ಡಾಡಿದ ರಾಹುಲ್ ಗಾಂಧಿಯ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಎಷ್ಟು ಹಣ ಪಡೆದರು? ಎಂದು ಸಾಮಾನ್ಯ ಜನರೂ ಸಹಾ ಕೇಳಬಹುದಲ್ವೇ? ಸ್ವಭಾವತಃ ಕಮ್ಯೂನಿಸ್ಠ್ ಆಗಿದ್ದು ಈ ದೇಶವನ್ನು ಇಬ್ಬಾಗ ಮಾಡುವ ಮನಸ್ಥಿತಿಯ, ಆರು ಕೊಟ್ಟರೆ ಅತ್ತೇ ಕಡೇ ಮೂರು ಕೊಟ್ಟರೆ ಸೊಸೇ ಕಡೇ ಎನ್ನುತ್ತಾ ನಿರ್ಮಾಪಕ ಮತ್ತು ನಿರ್ದೇಶಕರ ಕಾಸಿಗೆ ತಕ್ಕಂತೆ ಕುಣಿಯುವ ಇಂತಹ ಗೋಸುಂಬೆ ಮನಸ್ಥಿತಿಯ ಆಂತರಿಕ ಶತ್ರುವನ್ನು ಜನರು ಮುಖಾ ಮುಲಾಜಿಲ್ಲದೇ ಠೇವಣಿ ಉಳಿಯದಂತೆ ಸೋಲಿಸಿದ್ದರೂ ಮತ್ತೆ ಮತ್ತೆ ದೇಶದಲ್ಲಿ ಆಂತರಿಕ ದಳ್ಳುರಿಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿರುವುದು ಈ ದೇಶದ ಐಕ್ಯತೆಯ ದೃಷ್ಟಿಯಿಂದ ಮಾರಕವಾಗಿರುವುದು ನಿಜಕ್ಕೂ ವಿಪರ್ಯಾಸ.
ಇನ್ನು ರಾಜ್ಯದ ಮೂರು ಜಿಲ್ಲೆಗಳಿಗಷ್ಟೇ ಸೀಮಿತವಾಗಿರುವ, ಕೈಯ್ಯಲ್ಲಾಗದೇ ವಯಸ್ಸಾಗಿ ಅಸ್ಪತ್ರೆಯನ್ನು ಸೇರಿರಿರುವ ಅಪ್ಪನ ಆರೋಗ್ಯವನ್ನೂ ಲೆಖ್ಖಿಸದೇ, ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಅಪ್ಪನನ್ನು ಗಾಲಿ ಖುರ್ಚಿಯ ಮೇಲೆ ವೇದಿಕೆಗೆ ಕರೆ ತಂದು ಆವರ ಹೆಸರಿನಲ್ಲಿ ಮತಯಾಚನೆ ಮಾಡುವಂತಹ ದೈನೇಸಿ ಸ್ಥಿತಿಯನ್ನು ತಲುಪಿರುವ ಮತ್ತು ಅವಕಾಶವಾದಿತನದಿಂದ ಮತ್ತೊಮ್ಮೆ ಹಿಂಬಾಗಿಲಿನಿಂದ ಅಧಿಕಾರಕ್ಕೆ ಏರಲು ಹುನ್ನಾರ ನಡೆಸಿರುವ ಕುಮಾರಸ್ವಾಮಿಯದು ಮತ್ತೊಂದು ರೀತಿಯ ಗೋಳು. ಸ್ವತಃ ತಾನೇ ಚಿತ್ರಪ್ರದರ್ಶಕ, ವಿತರಕ ನಂತರ ಚಿತ್ರ ನಿರ್ಮಾಕರಾದ ನಂತರ ತಮ್ಮ ಮಗನ ವಯಸ್ಸಿನ ಕನ್ನಡ ಚಿತ್ರರಂಗದ ನಾಯಕಿಯಾದ ರಾಧಿಕಾರನ್ನು ಎರಡನೇ ಮದುವೆಯಾದ, ತಮ್ಮ ಮಗನನ್ನು ಕನ್ನಡ ಚಿತ್ರರಂಗದ ನಾಯಕ ನಟನನ್ನಾಗಿ ಮಾಡಲು ಹೋಗಿ ಉಚಿತವಾಗಿ ಟಿಕೆಟ್ ಕೊಟ್ಟರೂ ಜನ ಚಿತ್ರವನ್ನು ನೋಡದಿರುವಂತ ಕುಮಾರ ಸ್ವಾಮಿಯವರಿಗೆ ಚುನಾವಣೆ ಸಮಯ ಬಂದ ಕೂಡಲೇ ಇದ್ದಕ್ಕಿಂದಂತೆಯೇ ಜನರನ್ನು ತಪ್ಪು ದಾರಿಗೆ ಎಳೆಯುವುದರಲ್ಲಿ ಅದೇನೋ ಒಂದು ರೀತಿಯ ವಿಕೃತ ಸಂತೋಷ.
ತಮ್ಮ ರಾಜಕೀಯ ಲಾಭಕ್ಕಾಗಿ ಯಾರನ್ನು ಬೇಕಾದರೂ ತಲೆ ಮೇಲೆ ಕೂರಿಸಿಕೊಂಡು ಅವರಿಂದ ಇನ್ನು ಮುಂದೆ ಹೆಚ್ಚಿನ ಲಾಭ ಇಲ್ಲಾ ಎಂಬ ಅರಿವಾಗುತ್ತಿದ್ದಂತೆಯೇ ಕಾಲ ಕಸದಂತೆ ನೋಡುವ ಕುಮಾರಸ್ವಾಮಿಗೂ ಸಹಾ ಸುದೀಪ್ ಬಿಜೆಪಿ ಪರವಾಗಿ ಸುದೀಪ್ ಪ್ರಚಾರ ಮಾಡುವುದರಿಂದ ನವರಂದ್ರಗಳಲ್ಲಿಯೂ ಉರಿ ಹತ್ತಿಕೊಂಡು ಅವರೂ ಸಹಾ ತಮ್ಮದೂ ಒಂದು ಹೇಳಿಕೆ ಇರಲಿ ಎಂದು ನಮ್ಮ ಪಕ್ಷಕ್ಕೆ ನಾವೇ ಸ್ಟಾರ್ ಪ್ರಚಾರಕರು, ನಮಗೆ ಯಾವ ಚಲನಚಿತ್ರದ ಸ್ಟಾರ್ಗಳು ಅವಶ್ಯಕತೆ ಇಲ್ಲಾ ಎಂದಿದ್ದಾರೆ. ನಿಜ ಹೇಳಬೇಕೆಂದರೆ, ಯಾವುದೇ ಸ್ಟಾರ್ ಬಿಡಿ, ಸದ್ಯದ ಪರಿಸ್ಥಿತಿಯಲ್ಲಿ ಸ್ವತಃ ಅವರ ಒಡಹುಟ್ಟಿದ ಅಣ್ಣ ರೇವಣ್ಣ ಮತ್ತವರ ಕುಟುಂಬವೇ ಕುಮಾರಸ್ವಾಮಿಯ ಜೊತೆಗಿಲ್ಲದೇ ತಿರುಗಿಬಿದ್ದಿದ್ದರೇ, ಚುನಾವಣಾ ಪ್ರಕ್ರಿಯೆಗಳು ಆರಂಭವಾಗುತ್ತಿದ್ದಂತೆಯೇ ದಿನೇ ದಿನೇ ಅವರ ಜನತಾದಳದ ಒಂದೊಂದೇ ದಳಗಳು ಉದುರಿ, ಪಕ್ಷವೇ ಅವಸಾನವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕಳೆದ ತಿಂಗಳು ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಕಕ್ಷರಾದ ಶ್ರೀಯುತ ಡಿ.ಕೆ.ಶಿವಕುಮಾರ್ ಆವರು ಇದೇ ಸುದೀಪ್ ಮನೆಗೆ ಹೋಗಿ ಬಂದಾಗ, ಸುದೀಪ್ ಕಾಂಗ್ರೇಸ್ ಸೇರುತ್ತಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ, ಅಂತಹ ಮೇರು ನಟ ನಮ್ಮ ಪಕ್ಷಕ್ಕೆ ಬಂದಲ್ಲಿ ಒಳ್ಳೆಯದು ಎಂದು ಅಹ್ವಾನಿಸಿದ್ದೇವೆ. ಅವರು ನಮ್ಮ ಅಹ್ವಾನವನ್ನು ಮನ್ನಿಸಿ ಪಕ್ಷಕ್ಕೆ ಬಂದಲ್ಲಿ ಅವರಿಗೆ ಸೂಕ್ತವಾದ ಸ್ಥಾನ ಮಾನವನ್ನು ನೀಡುತ್ತೇವೆ ಎಂಬ ಮಾತನ್ನು ಹೇಳಿದರು.ಸುದೀಪ್ ಡಿಕೆಶಿ ಅವರ ಅಹ್ವಾನವನ್ನು ನಯವಾಗಿ ತಿರಸ್ಕರಿಸಿ, ತಮ್ಮ ಕಷ್ಟದ ದಿನಗಳಲ್ಲಿ ತಮ್ಮ ಕೈ ಹಿಡಿದು ಸಹಾಯ ಮಾಡಿದ ತಮ್ಮ ಆಪ್ತರಾದ ಬಸವರಾಜ್ ಬೊಮ್ಮಾಯಿ ಅವರ ಪರವಾಗಿ ಬಹಿರಂಗ ಬೆಂಬಲ ನೀಡಿದಾಗ ಸಹಜವಾಗಿಯೇ ಕಾಂಗ್ರೇಸ್ ಪಕ್ಷಕ್ಕೆ ಬೇಸರವನ್ನು ತರಿಸಿದೆ. ಅದರೆ ಆ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಮುಜುಗೊರದಿಂದ ದ್ರಾಕ್ಷಿ ಸಿಗದೇ ಹೋದಾಗ ದ್ರಾಕ್ಷಿ ಎಲ್ಲಾ ಹುಳಿ ಎಂದ ನರಿಯಂತೆ ಕ್ರಾಂಗೇಸ್ ಪಕ್ಷದ ಮರಿ ಖರ್ಗೆ, ಮೋದಿ ಮತ್ತು ಅಮಿತ್ ಶಾ ಅವರ ಸಭೆಗಳಿಗೆ ಜನರು ಸೇರುತ್ತಿಲ್ಲಾ ಹಾಗಾಗಿ ಬಿಜೆಪಿ ನಟರನ್ನು ಮುಂದಿಟ್ಟುಕೊಂಡು ಮತವನ್ನು ಕೇಳುವಂತಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ನಟಿ ರಮ್ಯಾ ಮಂಡ್ಯಾದಿಂದ ಸಾಂಸದೆ ಆಗಿರಲಿಲ್ಲವೇ? ಕೇವಲ ಕೆಲವು ತಿಂಗಳುಗಳ ಹಿಂದೆಯಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಎಸ್. ನಾರಾಯಣ್ ಅವರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲವೇ? . ಅದೇ ರೀತಿ ನಟಿ ಭಾವನ ಯಶವಂತಪುರ ಕ್ಷೇತ್ರದ ಆಕಾಂಕ್ಷಿಯಾಗಿ 2 ಲಕ್ಷದ ಡಿಡಿ ಕೊಟ್ಟು ಟಿಕೆಟ್ ಸಿಗದೇ ಗೋಳೋ ಎಂದು ಅಳುತ್ತಿಲ್ಲವೇ? ಇನ್ನು ಹಾಸ್ಯ ನಟ ನಟಿಯರಾದ ಸಾಧುಕೋಕಿಲ ಮತ್ತು ಉಮಾಶ್ರೀಯವರೇ ಕಾಂಗ್ರೇಸ್ ಪಕ್ಷದ ಸ್ಟಾರ್ ಪ್ರಚಾರಕರಲ್ಲವೇ?. ಎಲ್ಲಾ ಸಭೆ ಸಮಾರಂಭಗಳಲ್ಲಿಯೂ ಜನಾಕರ್ಷಣೆಗಾಗಿ ಇವರನ್ನೇ ಕರೆದುಕೊಂಡು ಹೋಗುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಷ್ಟೆಲ್ಲಾ ಸಿನಿಮಾ ಮಂದಿಯವರು ಕಾಂಗ್ರೇಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದಲ್ಲದೇ ಅಭ್ಯರ್ಥಿಗಳಾಗಿಯೂ ಕಣಕ್ಕೆ ಇಳಿಯಲು ಸಜ್ಜಾಗಿರುವಾಗ ಅಷ್ಟು ಸಣ್ಣ ಪ್ರಾಯದ ಪ್ರಿಯಾಂಕ್ ಖರ್ಗೆಗೆ ಇಷ್ಟು ಮರೆಗುಳಿತನವೇ?
ಮಾತಿಗೆ ಮುಂಚೆ ಅಂಬೇಡ್ಕರ್ ನೀಡಿದ ಸಂವಿಧಾನ. ನಾವು ಸಂವಿಧಾನಾತ್ಮಕವಾಗಿ ನಡೆಯುತ್ತೇವೆ ಎಂದು ತಮ್ಮೆಲ್ಲಾ ತಪ್ಪಿಗೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಗುರಾಣಿಯಾಗಿ ಹಿಡಿಯುವವರಿಗಷ್ಟೇ ಈ ಸಂವಿಧಾನ ಇರದೇ, ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅವರದ್ದೇ ಆದ ಹಕ್ಕಿದೆ. ಅವರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದೆ. ಹಾಗಾಗಿ ಅವರು ಅವರವರ ಕ್ಷೇತ್ರದಲ್ಲಿ ಎಷ್ಟೇ ಪ್ರಸಿದ್ಧರಾಗಿದ್ದರೂ, ಚುನಾವಣಾ ಸಮಯದಲ್ಲಿ ಅವರೊಬ್ಬ ಮತದಾರ ಅಷ್ಟೇ. ಹಾಗಾಗಿ ಅವರು ತಮಗೆ ಇಷ್ಟ ಬಂದ ಪಕ್ಷಕ್ಕೆ ಪ್ರಚಾರ ಮಾಡುತ್ತಾರೆ ಮತ್ತು ತಮ್ಮ ನೆಚ್ಚಿನವರಿಗೆ ಮತ ಹಾಕುತ್ತಾರೆ. ಇನ್ನು ಕೇವಲ ಒಬ್ಬ ನಟ ಒಂದು ಪಕ್ಷದ ಪರ ಪ್ರಚಾರ ಮಾಡಿದಾಕ್ಷಣ, ಅವರ ಅಭಿಮಾನಿಗಳು ಅವರ ಸ್ವಜಾತಿಯವರು ಸಂಪೂರ್ಣವಾಗಿ ಅತನನ್ನೇ ಬೆಂಬಲಿಸುತ್ತಾರೆ ಇಲ್ಲವೇ ಆತ ಹೇಳಿದವರಿಗಷ್ಟೇ ಮತ ನೀಡುತ್ತಾರೆ ಎಂಬುದಕ್ಕೆ ಯಾವುದೇ ಸ್ಪಷ್ಟತೆ ಇರುವುದಿಲ್ಲ. ಎಲ್ಲಾ ನಟರ ಅಭಿಮಾನಿಗಳಿಗೂ ಅವರದ್ದೇ ಆದ ಇಷ್ಟ ಕಷ್ಟಗಳು ಇರುತ್ತವೆ ಮತ್ತು ಅವರು ಅದಕ್ಕೆ ತಕ್ಕಂತೆ ನಡೆದುಕೊಂಡು ಹೋಗುತ್ತಾರೆ. ಹಾಗಾಗಿ ಇಂತಹ ತೋಲಾಂಡಿ ನಾಯಕರುಗಳು ಯಾರದ್ದೇ ಇಷ್ಟ ಮತ್ತು ಅಭಿಪ್ರಾಯಗಳನ್ನು ಪ್ರಶ್ನಿಸುವ ಮತ್ತು ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯ ಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? ಈ ವಿಚಾರದಲ್ಲಿ ಅನಗತ್ಯವಾಗಿ ಅಸಹ್ಯಕರವಾಗಿ ಈ ರೀತಿಯಾಗಿ ಕೀಳು ಮಟ್ಟದ ರಾಜಕೀಯ ಮಾಡಿದಷ್ಟೂ ಆವರದ್ದೇ ಮಾನ ಹಾಳಾಗುತ್ತದೆ ಅಲ್ವೇ?.
2014 ರಲ್ಲಿ ಮೋದಿಯವನ್ನು ಮೌತ್ ಕೀ ಸೌದಾಗರ್ ಅರ್ಧಾತ್ ಸಾವಿನ ಸರದಾರ ಎಂದು ಸೋನಿಯಾ ದೂಷಿಸಿದ್ದರೆ, ಚಾಯ್ ವಾಲಾ ಎಂದು ತುಚ್ಚವಾಗಿ ಕಾಂಗ್ರೇಸ್ಸಿಗರು ಕರೆದಿದ್ದಕ್ಕಾಗಿ ಜನರು ಆಕ್ರೋಶಗೊಂಡು ಕಾಂಗ್ರೇಸ್ ಪಕ್ಷ ಅಧಿಕೃತ ವಿರೋಧ ಪಕ್ಷವೂ ಆಗದಂತೆ ನೋಡಿಕೊಂಡಿದ್ದಲ್ಲದೇ, ಪ್ರಥಮಬಾರಿಗೆ ಮೋದಿಯವರನ್ನು ಈ ದೇಶದ ಪ್ರಧಾನಿಯನ್ನಾಗಿಸಿದರು. ಅದೇ ರೀತಿಯಲ್ಲಿ ಕಳೆದ ಚುನಾವಣೆಯಲ್ಲೂ ಸಹಾ ರಫೇಲ್ ಕುರಿತಾಗಿ ಅನಾವಶ್ಯಕವಾಗಿ ಸುಳ್ಳು ಸುದ್ದಿ ಹರಡುತ್ತಾ, ಚೌಕಿದಾರ್ ಚೋರ್ ಹೈ ಎಂದು ಗುಲ್ಲೆಬ್ಬೀಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಜನರು 300+ ಸ್ಥಾನಗಳನ್ನು ನೀಡಿ ಎರಡನೇ ಬಾರಿ ಪ್ರಧಾನಿಯನ್ನಾಗಿಸಿದರು. ಅದೇ ರೀತಿಯಾಗಿ ಎಲ್ಲಾ ಕಳ್ಳರ ಹೆಸರು ಮೋದಿ ಎಂದೇ ಏಕೆ ಇರುತ್ತದೆ? ಎಂದು ಬಹಿರಂಗ ಸಭೆಯಲ್ಲಿ ಪ್ರಶ್ನಿಸಿದ್ದಕ್ಕಾಗಿ ರಾಹುಲ್ ಆನರ್ಹ ಸಂಸದರಾಗಿದ್ದನ್ನು ಮರೆತು ಪದೇ ಪದೇ ಈ ರೀತಿ ತುಚ್ಚವಾಗಿ ಮಾತನಾಡಿದಷ್ಟೂ ಕುರಿ ಹೆಚ್ಚಿದಷ್ಟೂ ಕುರುಬನಿಗೇ ಲಾಭ ಎನ್ನುವಂತೆ ಬಿಜೆಪಿಗೇ ಲಾಭ ಆಗುತ್ತದೆ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ
ಕ್ರಿಮಿ ಕೀಟಗಳಿಗೆ ಉತ್ತರಿಸುತ್ತ ಹೋದರೆ, ಜೀವನ ಮುಂದೆ ಹೇಗೆ ಸಾಗುವುದು? ಸುದೀಪ ಇವರಿಗೆ ಉತ್ತರ ಬಿಡಿ, ತಿರುಗಿ ಕೂಡ ನೋಡುವುದಿಲ್ಲ.
ಹೀಗಂತಿನಿ,
ಇಂತವನಿಗೆ, ಇಷ್ಟು ದೋಡ್ಡ ಲೇಖನ ಬರೆದು ತಮ್ಮ ಜೀವನದ ಅತ್ಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಿರಿ! ಇವನು ಆಶಯ ಕೋಡ ಇದೆಯೆ, ಸದಾ ಸುದ್ದಿಯಲ್ಲಿ ಇರುವುದು, ಹೇಗೆ?… ಹೀಗೆ
ಬೇಶರತ್ತಗಿ ಒಪ್ಪಲೆ ಬೇಕಾದ ವಿಶಯ he is Just Ass King!
LikeLiked by 1 person
ಖಂಡಿತ
LikeLiked by 1 person