ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್

dron_pratapಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರ್ತಾರೆ ಎನ್ನುವ ಮಾತು ಇದೆ. ಅಮಾಯಕ ಜನರು ತಮ್ಮನ್ನು ಸ್ವಲ್ಪ ನಂಬುತ್ತಾ ಇದ್ದಾರೆ ಅಂತಾ ಗೊತ್ತಾಗುತ್ತಿದ್ದಾ ಹಾಗೆ, ಕೆಲವರು ತಮ್ಮ ವರಸೆ ಬದಲಾಯಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಾರೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲೂ ಸಹಾ ಪ್ರತಾಪ್ ಎಂಬ ಹುಡುಗಾ ಏಕಾ ಏಕೀ ತಾನು ತಯಾರಿಸಿದ ದ್ರೋಣ್ ಮಾದರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಂದು ಘೋಷಿಸಿಕೊಂಡಿದ್ದನ್ನು ನಂಬಿದ ನಟ ಮತ್ತು ಸದ್ಯದ ರಾಜ್ಯಸಭಾ ಸದಸ್ಯ ಜಗ್ಗೇಶ್ ಜೀ ಟಿವಿಯಲ್ಲಿ ಆ ಹುಡುಗನಿಗೆ ಸ್ವಲ್ಪ ಪ್ರಚಾರ ನೀಡಿದ್ದೇ ತಡಾ, ಬೆಳ್ಳಂಬೆಳಿಗ್ಗೆಯೇ ಪ್ರತಾಪ್ ದ್ರೋಣ್ ಪ್ರತಾಪ್ ಆಗಿ ರಾಜ್ಯಾದ್ಯಂತ ಚಿರಪರಿಚಿತನಾಗಿ, ಪುಂಖಾನುಪುಂಖವಾಗಿ ಸುಳ್ಳಿನ ಸರಮಾಲೆಯನ್ನು ಸುರಿಸಿದ್ದಲಲ್ದೇ, ತನಗೆ ಈ ದೇಶದ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವಂತೆ ಸ್ವತಃ ಪ್ರಧಾನ ಮಂತ್ರಿಗಳೇ ಆಹ್ವಾನಿಸಿದ್ದಾರೆ ಎಂಬ ಮಟ್ಟಕ್ಕೆ ಹೋಗಿತ್ತು. ನಂತರ ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎಂದು ಕಲವು ಆತ ಹೇಳಿದ್ದನ್ನು ಹುಡುಕುತ್ತಾ ಹೋದಾಗ, ಆತ ಹೇಳಿದ್ದೆಲ್ಲವೂ ಸುಳ್ಳು ಎಂದು ತಿಳಿಯಿತು. ಬೆಳೆಯುತ್ತಿರುವ ಹುಡುಗ ಪ್ರಚಾರಕ್ಕೆ ಹೀಗೆ ಮಾಡಿರಬಹುದು ಎಂದು ಆತನ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮ್ಮೆ ಹೂಡದೇ ಸುಮ್ಮನಾದರು. ಕೆಲ ದಿನಗಳ ಹಿಂದೆ ತಮಿಳುನಾಡಿದಲ್ಲೂ ವಿಕಲಚೇತನರಾದ ಗಾಲಿಕುರ್ಚಿಯ ಮೇಲೇ ತನ್ನ ಜೀವನವನ್ನು ನಡೆಸುವ ತಮಿಳುನಾಡಿನ ಸುಮಾರು 40 ವರ್ಷದ ವಿನೋದ್ ಬಾಬು ಎಂಬಾತನೂ ಸಹಾ ಅಂತಹದ್ದೇ ಕಾಗೆ ಹಾರಿಸಿರುವ ರೋಚಕತೆಯನ್ನು ತಿಳಿಯೋಣ ಬನ್ನಿ.

vinod22023 ರ ಜನವರಿ 9ರಂದು ತಮಿಳುನಾಡಿನ ರಾಮನಾಥಪುರದ ಜಿಲ್ಲಾಧಿಕಾರಿಗಳಾದ ಶ್ರೀ ಜಾನಿ ಟಾಮ್ ವರ್ಗೀಸ್ ಅವರನ್ನು ಗಾಲಿಕುರ್ಚಿಯ ಮೇಲೆ ಕುಳಿತು ದೊಡ್ಡದಾದ ಟ್ರೋಫಿಯನ್ನು ಹಿಡಿದು ಭೇಟಿಯಾದ ವಿಕಲಚೇತನರಾದ ವಿನೋದ್ ಬಾಬು ಎಂಬುವರು, ನನ್ನ ಹೆಸರು ವಿನೋದ್ ಬಾಬು ಎಂಬುದಾಗಿದ್ದು, ನಾನು ರಾಮನಾಥಪುರಂ ಜಿಲ್ಲೆಯ ಗೀಜೆಲವನೂರಿನವನಾಗಿದ್ದು, ಭಾರತದ ವೀಲ್ ಚೇರ್ ಕ್ರಿಕೆಟ್ ತಂಡದ ನಾಯಕನಾಗಿದ್ದೇನೆ. ಕಳೆದ ಡಿಸೆಂಬರ್ 21 2022 ರಂದು ಪಾಕಿಸ್ತಾನದ ಕರಾಚಿಯಲ್ಲಿ ನಡೆದ 2022 ರ ಏಷ್ಯಾ ಕಪ್ ವೀಲ್‌ಚೇರ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಲ್ಲದೇ ಪ್ರಶಸ್ತಿಯನ್ನೂ ಸಹಾ ಪದೆದಿದ್ದೇನೆ. ಇಂತಹ ಪ್ರಶಸ್ತಿ ಪಡೆದರೂ ಜೀವನೋಪಾಯಕ್ಕಾಗಿ ಮಡದಿ ಮತ್ತು 2 ಮಕ್ಕಳೊಂದಿಗೆ ಮನೆಯಿಲ್ಲದೇ ನಿರಾಶ್ರಿತನಾಗಿರುವ ಕಾರಣ, ಸರಕಾರದ ವತಿಯಿಂದ ಉದ್ಯೋಗ ನೀಡುವಂತೆ ಮನವಿ ಮಾಡಿದರು.

ಹೀಗೆ ವಿನೋದ್ ಬಾಬು ಅವರು ಹೇಳಿದ್ದನ್ನು ಕೇಳಿ ಅದರ ಪೂರ್ವಾಪರವನ್ನು ವಿಚಾರಿಸದ ಆ ಅಧಿಕಾರಿಗಳು ವಿನೋದ್ ಬಾಬು ಮತ್ತು ಅವರ ಕುಟುಂಬವನ್ನು ಕರೆಯಿಸಿ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಗೌರವನ್ನು ಸಲ್ಲಿಸುತ್ತಾರೆ. ಈ ವಿಷಯ ಅಲ್ಲಿನ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿ ಅದನ್ನು ಗಮನಿಸಿದ ತಮಿಳುನಾಡಿನ ಸಚಿವರಾದ ರಾಜಕಣ್ಣಪ್ಪನವರು ತಮ್ಮ ಕ್ಷೇತ್ರದವರೊಬ್ಬರು ಇಂತಹ ಅತ್ಯುತ್ತಮ ಸಾಧೆನೆಯನ್ನು ಮಾಡಿರುವುದನ್ನು ಓದಿ ತಿಳಿದು ಅದರಿಂದ ಸಂತೋಷಗೊಂಡು  ವಿನೋದ್ ಬಾಬು ಅವರು ಭೇಟಿಯಾಗಿ ಅಭಿನಂದಿಸಿದಾಗ. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎಂದು ಭಾವಿಸಿದ ವಿನೋದ್ ಬಾಬು, ವಿದೇಶದಲ್ಲಿ ನಡೆಯಲಿರುವ ಮತ್ತೊಂದು ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ನೆರವು ಕೋರುತ್ತಾರೆ, ಆ ಸಚಿವರು ವಿನೋದ್ ಅವರ ಪೂರ್ವಾಪರ ವಿಚಾರಿಸದೇ, ಆತನನ್ನು ಸಂಪೂರ್ನವಾಗಿ ನಂಬಿ ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ನೆರವನ್ನೂ ನೀಡುತ್ತಾರೆ.

vinod_babuಇದಿಷ್ಟೇ ನಡೆದಿದ್ದಲ್ಲಿ ಎಲ್ಲವೂ ಚನ್ನಾಗಿತ್ತೇನೋ? ತಮ್ಮನ್ನು ನಂಬಿದ ಸಚಿವರ ಪರಿಸ್ಥಿತಿಯ ದುರ್ಲಾಭವನ್ನು ಪಡೆಯಲು ಮುಂದಾದ ವಿನೋದ್ ಬಾಬು ಕೆಲ ದಿನಗಳ ನಂತರ ಮತ್ತೆ ಸಚಿವರನ್ನು ಭೇಟಿ ಮಾಡಿ ತಾನು ಲಂಡನ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿಯೂ ಸಹಾ ಭಾರತಕ್ಕೆ ಜಯ ತಂದಿದ್ದೇನೆ ಎಂದು ತಮಗಿಂತಲೂ ದೊಡ್ಡದಾದ ಟ್ರೋಫಿಯನ್ನು ತೋರಿಸಿದಾಗ, ಅದರಿಂದ ಮತ್ತಷ್ಟು ಸಂತುಷ್ಟರಾದ ಸಚಿವರು, ವಿನೋದ್ ಬಾಬು ಅವರನ್ನು ತಮ್ಮ ಜೊತೆಯಲ್ಲಿಯೇ ನೇರವಾಗಿ ತಮಿಳುನಾಡಿನ ರಾಜಧಾನಿ ಚೆನ್ನೈಗೆ ಕರೆದುಕೊಂಡು ಹೋಗಿ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಿಸಿದಾಗ ಅವರೂ ಸಹಾ ವಿನೋದ್ ಬಾಬು ಅವರು ಲಂಡನ್ ನಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಭಾರತವನ್ನು ವಿಜಯಶಾಲಿಯನ್ನಾಗಿಸಿದ್ದಕ್ಕಾಗಿ ಅಭಿನಂದಿಸಿದ್ದಲ್ಲದೇ ಸರ್ಕಾರದ ಪರವಾಗಿ ಆವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ.

vinod4ಹೀಗೆಯೇ ವಿನೋದ್ ಬಾಬು, ಆನಂದ್ ಪಾಂಡ್ಯರಾಜ್ ಎಂಬುವರನ್ನು ಭೇಟಿಯಾಗಿ, ಮತ್ತೇ ತಾನು ಭಾರತೀಯ ವೀಲ್ ಚೇರ್ ಕ್ರಿಕೆಟ್‌ನ ನಾಯಕರಾಗಿ, ಕರಾಚಿಯಲ್ಲಿ ನಡೆದ ಪಂದ್ಯಾವಳಿಯನ್ನು ಗೆದ್ದಿದ್ದೇನೆ. ಮುಂಬರುವ ಲಂಡನ್‌ನಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವಷ್ಟು ಆರ್ಥಿಕ ಶಕ್ತಿ ಇಲ್ಲ. ಹಾಗಾಗಿ ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡಾಗ, ಇಂತಹ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉಮ್ಮೇದಿನಿಂದ ವಯಕ್ತಿಕವಾಗಿ 1 ಲಕ್ಷ ರೂಪಾಯಿ ಸಹಾಯಧನ ನೀಡಿದ್ದಲ್ಲದೇ, ದಿನೇಶ್ ಕುಮಾರ್ ಎಂಬ ಮತ್ತೊಬ್ಬರನ್ನೂ ಸಹಾ ವಿನೋದ್ ಬಾಬು ಅವರಿಗೆ ಪರಿಚಯಿಸುತ್ತಾರೆ. ಅವರ ಬಳಿಯಲ್ಲೂ ವಿನೋದ್ ಬಾಬು ಲಂಡನ್ ವೀಲ್ ಚೇರ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು 95,000 ರೂ.ವರೆಗೆ ವೆಚ್ಚವಾಗುತ್ತದೆ. ಅದಕ್ಕಾಗಿ ಇಲ್ಲಿಯವರೆಗೆ ಕೇವಲ 15,000 ರೂ. ಮಾತ್ರ ತಮ್ಮ ಬಳಿಯಿದ್ದು, ದಯವಿಟ್ಟು ಆರ್ಥಿಕವಾಗಿ ಸಹಾಯ ಮಾಡಬೇಕೆಂದು ಕೋರಿದಾಗ, ಆರಂಭದಲ್ಲಿ ಕೇವಲ 10,000 ರೂಪಾಯಿಗಳನ್ನು ಕೊಡಲು ನಿರ್ಧರಿಸಿದ್ದವರು, ನಂತರ ವಿನೋದ್ ಬಾಬು ಅವರ ಪರಿಸ್ಥಿತಿ ಪರಿಗಣಿಸಿ 1 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ. ಇದಾದ ಕೆಲವು ದಿನಗಳ ನಂತರ ವಿನೋದ್ ಬಾಬು ಅವರಿಬ್ಬರಿಗೂ ಇಂದು ಆಸ್ಟ್ರೇಲಿಯಾದಲ್ಲಿ ಫೈನಲ್ ಪಂದ್ಯ ಆಡುತ್ತಿರುವುದಾಗಿ ವಾಟ್ಸಾಪ್‌ನಲ್ಲಿ ಧ್ವನಿ ಸಂದೇಶ ಕಳುಹಿಸಿದ್ದಲ್ಲದೇ, ಎರಡು ದಿನಗಳ ನಂತರ ಅವರು ಪಂದ್ಯವನ್ನು ಗೆದ್ದು ಚೆನ್ನೈಗೆ ಮರಳಿದ್ದೇನೆ ಎಂದು ಟ್ರೋಫಿಯೊಡನೆ ಇರುವ ಚಿತ್ರವನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದಾಗ ಆ ಸ್ನೇಹಿತರಿಬ್ಬರೂ, ತಾವು ಕೊಟ್ಟ ಹಣ ಸದ್ವಿನಿಯೋಗ ಆಗಿದ್ದಕ್ಕಾಗಿ ಬಹಳ ಸಂತೋಷ ಪಟ್ಟಿದ್ದಾರೆ.

ಈ ರೀತಿ ಏಕಾಏಕಿಯಾಗಿ ದಿನಬೆಳಗಾಗುವುದರೊಳಗೆ ಪ್ರಸಿದ್ಧಿಗೆ ಬಂದ ವಿನೋದ್ ಬಾಬು ಅವರನ್ನು ಕಂಡ ಅವರ ನೆರೆ ಹೊರೆಯವರು ಅರೇ, ಈತ ಆಟಗಾರನೇ ಅಲ್ಲಾ. ಅದೂ ಅಲ್ಲದೇ ತಮಗೆ ತಿಳಿದಂತೆ ಆತ ತಿಳಿಸಿದ ದಿನಗಳಲ್ಲಿ ತಮ್ಮ ಹಳ್ಳಿಯನ್ನು ಬಿಟ್ಟೂ ಸಹಾ ಹೋಗಿಲ್ಲಾ. ಹಾಗಾಗಿ ಆತನ ವಿರುದ್ಧ ತನಿಖೆ ನಡೆಸಬೇಕೆಂದು ಸ್ಥಳೀಯ ಪೋಲಿಸರಿಗೆ ಕೊಟ್ಟ ದೂರಿನ ಅನ್ವಯದಂತೆ ಪೋಲಿಸರು ಆತನ ವಿರುದ್ಧ ತನಿಖೆಗೆ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸುತ್ತಾರೆ. ತನಿಖೆಯನ್ನು ಕೈಗೆತ್ತಿಕೊಂಡ ಗುಪ್ತಚರ ದಳ ವಿಚಾರಣೆಗಾಗಿ ವಿನೋದ್ ಬಾಬು ಅವರನ್ನು ಕರೆಸಿ ತಮ್ಮ ಎಂದಿನ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಿಳಿದ ಬಂದ ಸತ್ಯವೇನೆಂದರೆ, ಆತ ವಿದೇಶಕ್ಕೆ ಹೋಗುವುದು ಬಿಡಿ, ಹಾಗೆ ಹೋಗಲು ಅತ್ಯಾವಶ್ಯಕವಾದ ಪಾಸ್‌ಪೋರ್ಟ್ ಸಹಾ ಆತನ ಬಳಿ ಇಲ್ಲಾ. ಆತ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟಿಗನಲ್ಲ ಮತ್ತು ಆತ ಯಾವುದೇ ಪಂದ್ಯಗಳಲ್ಲಿ ಆಡಿಲ್ಲ. ಆತನೊಬ್ಬ ನಕಲಿ ವ್ಯಕ್ತಿ ಎಂದು ತಿಳಿದು ಬಂದಿದ್ದು ಆದೇ ವರದಿಯನ್ನು ಗುಪ್ತಚರ ದಳ ಇಲಾಖೆಯು ತಮಿಳು ನಾಡಿನ ಮುಖ್ಯಮಂತ್ರಿಗಳ ಘಟಕಕ್ಕೆ ಕಳುಹಿಸಿಕೊಟ್ಟಿರುವುದಲ್ಲದೇ ಆತ ಹಾಗೇಕೆ ಮೋಸ ಮಾಡಲು ಮುಂದಾದ ಎಂಬುದರ ಕುರಿತಾಗಿ ಹೆಚ್ಚಿನ ತನಿಖೆಯನ್ನು ಮುಂದುವರೆಸುತ್ತಿದೆ.

vinod3ಆದರೆ ವಿನೋದ್ ಬಾಬು ಮಾತ್ರಾ, ತಾನು ಪ್ಯಾರಾ ಒಲಿಂಪಿಕ್ ವೇಟ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಆಡಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ನಡೆದ, ಏಷ್ಯಾ ಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ವೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾನು ಭಾರತ ತಂಡದ ನಾಯಕನಾಗಿದ್ದೆ. ನಾನೇ ಸ್ವಯಂ ಪ್ರೇರಣೆಯಿಂದ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಸರ್ಕಾರಿ ನೌಕರಿ ನೀಡುವಂತೆ ಮನವಿ ಮಾಡಿದ್ದೇನೆ. ನನಗೆ ಯಾರಿಗೂ ಮೋಸ ಮಾಡುವ ಉದ್ದೇಶ ಇಲ್ಲ ಕೇವಲ ಬಾಯಿ ತಪ್ಪಿ ನಾನು ವಿದೇಶಕ್ಕೆ ಹೋಗಿ ಅಲ್ಲಿನ ಪಂದ್ಯಗಳನ್ನು ಗೆದ್ದಿದ್ದೇನೆ ಎಂದು ತಪ್ಪಾಗಿ ಹೇಳಿದ್ದೇನೆ ಎಂದು ವಾದವನ್ನು ಮಂಡಿಸುತ್ತಿದ್ದಾರೆ.

ಈ ಆಘಾತಕಾರಿ ವಿಷಯ ತಮಿಳುನಾಡಿನ ಎಲ್ಲಾ ಮಾಧ್ಯಮಗಳಲ್ಲಿಯೂ ಪ್ರಸಾರವಾಗುತ್ತಿದ್ದಂತೆಯೇ, ವಿನೋದ್ ಬಾಬುವಿನಿಂದ ತಾವು ಮೋಸಹೋಗಿದ್ದೇವೆ ಎಂಬುದನ್ನು ಅರಿತ ದಿನೇಶ್ ಕುಮಾರ್ ಮತ್ತು ಆನಂದ್ ಪಾಂಡ್ಯರಾಜ್ ಸಹಾ, ತಮ್ಮನ್ನು ನಂಬಿಸಿ ಆರ್ಥಿಕವಾಗಿ ತಮಗೆ ಮೋಸ ಮಾಡಿರುವ ವಿನೋದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರು ನಮಗೆ ವಂಚಿಸಿದ ಹಣವನ್ನು ಹಿಂದಿರುಗಿ ಕೊಡಬೇಕು ಎಂದು ಪೋಲಿಸರಲ್ಲಿ ದೂರನ್ನು ಕೊಟ್ಟಿದ್ದಾರೆ.

ಕುಂಟನಿಗೆ ಎಂಟು ಚೇಷ್ಟೆ ಆದರೆ ಕುರುಡನಿಗೆ ನಾನಾ ಚೇಷ್ಟೆ ಎನ್ನುವ ಗಾದೆ ಮಾತಿನಂತೆ, ಇಂದಿನ ಆಧುನಿಕ ಯುಗದಲ್ಲಿ‌ ಮಾಹಿತಿಗಳೆಲ್ಲವೂ ಬೆರಳಿನ ತುದಿಯಲ್ಲಿ ಕ್ಷಣಾರ್ಧದಲ್ಲಿ ಸಿಗುವಂತಹ ಕಾಲದಲ್ಲೂ, ಗಾಲಿ ಕುರ್ಚಿಯ ಮೇಲೆ ಕುಳಿತೇ, ಜನ ಸಾಮಾನ್ಯರನ್ನಲ್ಲದೇ, ತಮಿಳುನಾಡಿನ ಸಚಿವರು ಮತ್ತು ಮುಖ್ಯಮಂತ್ರಿಗಳಿಗೇ ಮೋಸ ಮಾಡಿರುವ ಇಂತಹ ವ್ಯಕ್ತಿಯನ್ನು, ಆತ ವಿಕಲಚೇತನ ಎಂಬ ಯಾವುದೇ ರೀತಿಯ ಕನಿಕರ ತೋರಿ ಕ್ಷಮೆಯನ್ನು ನೀಡದೇ ಕಠಿಣವಾಗಿ ಶಿಕ್ಷೆಗೆ ಗುರಿಪಡಿಸಿದಾಗಲೇ, ಮುಂದೆ ಯಾರೂ ಸಹಾ ಈ ರೀತಿಕ ಕುಕೃತ್ಯಗಳಿಗೆ ಮುಂದಾಗುವುದಿಲ್ಲ ಎನ್ನುವುದೇ ಎಲ್ಲರ ನಂಬಿಕೆಯಾಗಿದೆ.

ಏನಂತೀರೀ?
ನಿಮ್ಮವಣೇ ಉಮಾಸುತ

2 thoughts on “ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್

    1. ಇಂದಿನ ಆಧುನಿಕ ಯುಗದಲ್ಲಿ‌ ಮಾಹಿತಿಗಳೆಲ್ಲವೂ ಬೆರಳಿನ ತುದಿಯಲ್ಲಿ ಕ್ಷಣಾರ್ಧದಲ್ಲಿ ಸಿಗುವಂತಹ ಕಾಲದಲ್ಲೂ ಈರೀತಿಯಲ್ಲಿ ಮೋಸ ಮಾಡುವವರಿಗೆ ಖಂಡಿತವಾಗಿಯೂ ತಕ್ಕ ಶಿಕ್ಷೆ ಆಗಲೇ ಬೇಕು

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s