ಸಾಮಾನ್ಯವಾಗಿ ರಸ್ತೆ ಅಪಘಾತಗಳನ್ನು ಪದೇ ಪದೇ ಕೇಳುತ್ತಿರುತ್ತೇವೆ. ನಮ್ಮ ದೇಶದಲ್ಲಿ ಸಣ್ಣ ಪುಟ್ಟ ಲೆವೆಲ್ ಕ್ರಾಸ್ರಿಂಗ್ ಅಪಘಾತ, ವಂಡೇಭಾರತ್ ರೈಲಿಗೆ ಕಲ್ಲು ತೂರಾಟದಂತಹ ಅವಘಡಗಳ ಹೊರತಾಗಿ ಈ ಪರಿಯ ರೈಲು ಅಪಘಾತ ವಿಷಯ ಕೇಳಿ ಸುಮಾರು ಎರಡು ದಶಕಗಳೇ ಆಗಿತ್ತು. ಅನೇಕ ಬಾರಿ ರೈಲುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದೋ ಇಲ್ಲವೇ ರೈಲ್ವೇ ಹಳಿಗಳ ನಾಶದಿಂದಾಗಿ ರೈಲ್ವೇ ಬೋಗಿಗಳು ಹಳಿತಪ್ಪುವುದು ಇಲ್ಲವೇ ಬೆಟ್ಟದ ಮೇಲಿಂದ ಏಕಾಏಕಿ ಕಲ್ಲು ಬಂಡೆಗಳು (ದೊಡ್ಡಬಳ್ಳಾಪುರ-ಗೌರೀಬಿದನೂರಿನ್ಗ ಮಧ್ಯದಲ್ಲಿ ಈ ಹಿಂದೆ ನಡೆದಿತ್ತು) ಉರುಳಿಯೋ, ಚಂಡಮಾರುತ ಇಲ್ಲವೇ ಸುಂಟರಗಾಳಿಯಿಂದಾಗಿ ರೈಲ್ವೇ ಅಪಘಾತಗಳಾಗಿದ್ದನ್ನು ಕೇಳಿದ್ದೇವೆ. ಆದರೆ ಈ ಬಾರಿ ಒಂದಲ್ಲಾ ಎರಡಲ್ಲಾ, ಮೂರು ರೈಲುಗಳು ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿ ನೂರಾರು ಜನರು ಮೃತಪಟ್ಟಿದ್ದು ಸಾವಿರಾರು ಜನರಿಗೆ ಮಾರಣಾಂತಿಕ ಪೆಟ್ಟುಗಳು ಆಗಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ
ಕಳೆದ ಶುಕ್ರವಾರ 02.06.2023 ರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ, ಒರಿಸ್ಸಾದ ಬಾಲಸೋರಿನ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಕಡೆಗೆ ವೇಗವಾಗಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅದೇ ಹಳಿಯ ಮೇಲೆ ನಿಂತಿದ್ದ ಗೂಡ್ಸ್ ರೈಲಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಅನೇಕ ಬೋಗಿಗಳು ದಿಕ್ಕಾಪಾಲಾಗಿ ಚಲ್ಲಾಪಿಲ್ಲಿಯಾಗಿ ಪಕ್ಕದಲ್ಲೇ ಇದ್ದ ಮತ್ತೊಂದು ಹಳಿಯ ಮೇಲೆ ಬೀಳುತ್ತಿದ್ದ ಸಮಯದಲ್ಲೇ ಅದೇ ಹಳಿಯ ಮೇಲೆ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಕೂಡಾ ಬಂದು ಕೋರಮಂಡಲ್ ಎಕ್ಸೆಪ್ರೆಸ್ ರೈಲಿನ ಭೋಗಿಗಳು ತಾಕಿ ಯಶವಂತಪುರ ಹೌರಾ ಎಕ್ಸಪ್ರೆಸ್ ಕೂಡಾ ಹಳಿತಪ್ಪುವ ಮೂಲಕ ಭಾರತದ ರೈಲ್ವೇ ಇತಿಹಾಸದಲ್ಲಿ ಕಂಡೂ ಕೇಳರಿಯದ ರೀತಿಯ ಅಪಘಾತ ಸಂಭವಿಸಿದೆ.
ಘಟನೆ ನಡೆದ ಕಲವೇ ಗಂಟೆಗಳಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ರೈಲ್ವೇ ಇಲಾಖೆಯ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅಲ್ಲದೇ ಸ್ವತಃ ಪ್ರಧಾನ ಮಂತ್ರಿಗಳೂ ಕೂಡಾ ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ, ಪರಿಹಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲದೇ, ಅಪಘಾತ ನಡೆಯಲು ಏನು ಕಾರಣ ಎಂಬ ಪ್ರಾಥಮಿಕ ತನಿಖೆಯನ್ನು ನಡೆಸಿದ್ದು ಆರಂಭದಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳು ತನಿಖೆ ಮಾಡಿ ಕೊಟ್ಟ ಅವರದಿಯ ಪ್ರಕಾರ ಆ ಎರಡು ರೈಲುಗಳು ಓಡಾಡುತ್ತಿದ್ದ ಮಾರ್ಗವು ಭಾಗಶಃ ತುಕ್ಕು ಹಿಡಿದಿತ್ತು ಎಂದು ವರದಿ ಮಾಡಿದ್ದರೆ, ನಂತರದ ಪ್ರಾಥಮಿಕ ತನಿಖೆಯಲ್ಲಿ ಸ್ಥಳೀಯ ನಿಲ್ದಾಣದ ಸಿಬ್ಬಂದಿಯವರು ಸಿಗ್ನಲ್‌ನಲ್ಲಿ ಮಾಡಿದ ಗೊಂದಲವೇ ಈ ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದ್ದು, ಈ ಕುರಿತಂತೆ ಹೆಚ್ಚಿನ ತನಿಖೆಗಾಗಿ ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿರುವುದು ಉತ್ತಮವಾದ ವಿಷಯವಾಗಿದೆ.
ಲೂಪ್ ಲೈನ್ ಎನ್ನುವುದು ಪ್ರತ್ಯೇಕ ರೈಲ್ವೇ ಹಳಿಯಾಗಿದ್ದು ಅದು ಮುಖ್ಯ ಮಾರ್ಗದಿಂದ ರೈಲುಗಳನ್ನು ಬೇರೆಡೆಗೆ ತಿರುಗಿಸಿ ಸ್ವಲ್ಪ ದೂರದ ನಂತರ ಮತ್ತೆ ಸ್ವಲ್ಪ ದೂರದಲ್ಲೇ ಅದೇ ರೈಲುಮಾರ್ಗವನ್ನು ಸೇರಿಸುತ್ತದೆ. ಸರಳವಾಗಿ ಹೇಳಬೇಕೆಂದರೆ, ರಸ್ತೆಯ ಮಾರ್ಗದಲ್ಲಿ ಊರನ್ನು ದಾಟಿಕೊಂಡು ಹೋಗುವ ರಿಂಗ ರಸ್ತೆಗಳ ಮಾದರಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಇತರ ರೈಲುಗಳ ಮೇಲೆ ಪರಿಣಾಮ ಬೀರದಂತೆ ರೈಲುಗಳು ನಿಲುಗಡೆ ಮಾಡಲು ಈ ಹಳಿಗಳನ್ನು ಬಳಸಿಕೊಳ್ಳಲಾಗುತ್ತದೆ. ವೇಗವಾಗಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸಪ್ರೆಸ್ ರೈಲನ್ನು ಇದೇ ಲೂಪ್ ಲೈನ್ ಮೂಲಕ ಹಳಿ ಬದಲಿಸಿದ ಪರಿಣಾಮ ಅದಾಗಲೇ ಆ ಹಳಿಯ ಮೇಲೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ 21 ಬೋಗಿಗಳು ಹಳಿತಪ್ಪಿದರೆ, ಅದರ ಪಕ್ಕದ ಹಳಿಗಳ ಮೇಲೆ ವೇಗವಾಗಿ ಬಂದ ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12864) ರೈಲಿನ ಎರಡು ಬೋಗಿಗಳು ಹಳಿತಪ್ಪಿ ಮಗುಚಿ ಬಿದ್ದಿವೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಇಂತಹ ಅಪಘಾತಗಳು ನಡೆಯಂತೆ ತಡೆಗಟ್ಟುವ ಸಲುವಾಗಿ ರೈಲ್ವೇ ಇಲಾಖೆ ಕವಚ ಎನ್ನುವ ಒಂದು ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯನ್ನು ಭಾರತೀಯ ರೈಲ್ವೇ ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಮೂಲಕ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆಯಲ್ಲದೇ ಇದು ವಿಶ್ವದ ಅತ್ಯಂತ ಅಗ್ಗದ ಸ್ವಯಂಚಾಲಿತ ರೈಲು ಡಿಕ್ಕಿ ರಕ್ಷಣೆ ವ್ಯವಸ್ಥೆಯಾಗಿದೆ. ಮಾರ್ಚ್ 4, 2022 ರಂದು ಸಿಕಂದರಾಬಾದ್ ವಿಭಾಗದ ಗುಲ್ಲಗುಡಾ ಮತ್ತು ಚಿಟ್ಗಿಡ್ಡಾ ರೈಲು ನಿಲ್ದಾಣಗಳ ನಡುವೆ ಕವಚದ ರಕ್ಷಣಾ ವ್ಯವಸ್ಥೆಯನ್ನು ಖುದ್ದು ರೈಲ್ವೇ ಸಚಿವರ ಸಮ್ಮುಖದಲ್ಲೇ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಪ್ರಸ್ತುತವಾಗಿ ಭಾರತದಲ್ಲಿನ ರೈಲು ಮಾರ್ಗದ ಉದ್ದ 68000 ಕಿಮೀ ಆಗಿದ್ದು, ಈ ಬಾರಿಯ 2022-23 ರ ಬಜೆಟ್‌ನಲ್ಲಿ 2000 ಕಿಮೀ ಟ್ರ್ಯಾಕ್‌ನಲ್ಲಿ ಕವಚ್ ವ್ಯವಸ್ಥೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ನಿಧಿಯನ್ನು ನಿಗದಿಪಡಿಸಾಗಿದೆ. ಕವಚ ಅನುಷ್ಠಾನಕ್ಕೆ ಪ್ರತಿ ಕಿಲೋಮೀಟರಿಗೆ 50 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, 2027-28 ರ ವೇಳೆಗೆ ಸುಮಾರು 34000 ಕಿಲೋಮೀಟರು ಹಳಿಯಲ್ಲಿ ಕವಚ್ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸುವ ಗುರಿ ಹೊಂದಲಾಗಿದೆ. ದುರಾದೃಷ್ಟವಷಾತ್ ಕವಚ ರಕ್ಷಣಾವ್ಯವಸ್ಥೆ ಇನ್ನೂ ಈ ಭಾಗದ ಮಾರ್ಗದಲ್ಲಿ ಆಗದೇ ಹೊದ ಪರಿಣಾಮ ಈ ಪರಿಯ ಅವಘಡ ನಡೆಯುವಂತಾಗಿದೆ.
ಈ ಎರಡೂ ಹಳಿಗಳು ಪೂರ್ವ ಭಾರತ ಮತ್ತು ದಕ್ಷಿಣಭಾರತವನ್ನು ಸೇರಿಸುವ ಪ್ರಮುಖ ರೈಲು ಮಾರ್ಗವಾಗಿದ್ದು ಈ ಪರಿಯ ಅಪಘಾತದಿಂದಾಗಿ ಸುಮಾರು ಎರಡು ದಿನಗಳ ಕಾಲ ಆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನು ಅನಿವಾರ್ಯವಾಗಿ ರದ್ದುಗೊಳಿಸಲಾದ ಪರಿಣಾಮದಿಂದ ಶನಿವಾರದಿಂದ ಸಾವಿರಾರು ಪ್ರಯಾಣಿಕರು ನಗರದ ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದು ಅವರನ್ನು ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆಯನ್ನು ಆ ಮಾರ್ಗದ ಎಲ್ಲಾ ರಾಜ್ಯ ಸರ್ಕಾರಗಳ ಜೊತೆಗೆ ಹಲವು ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳು ಸಹಾಯ ಹಸ್ತ ಚಾಚಿರಿವುದು ತುಸು ನೆಮ್ಮದಿಯ ಸಂಗತಿಯಾಗಿದೆ.
ಇಂತಹ ತೀವ್ರತರವಾದ ಅಪಘಾತಕ್ಕೆ ಶತ್ರುರಾಷ್ಟ್ರ ಪಾಕೀಸ್ಥಾನವೂ ಸೇರಿದಂತೆ ಅನೇಕ ರಾಷ್ಟ್ರಗಳು ತಮ್ಮ ಸಂತಾಪವನ್ನು ಸೂಚಿಸಿರುವುದಲ್ಲದೇ, ತಮ್ಮಿಂದ ಯಾವುದೇ ರೀತಿಯ ಬೇಕಿದ್ದಲ್ಲಿ ಅಗತ್ಯವಾಗಿ ಭಾರತ ಸರ್ಕಾರ ಕೇಳಬಹುದಾಗಿದೆ ಎಂದು ತೋರಿಸುವ ಮೂಲಕ ತಮ್ಮ ದೊಡ್ಡತನವನ್ನು ಮೆರೆದ್ದಿದ್ದರೆ, ಯಥಾಪ್ರಕಾರ ಎಷ್ಟು ದೊಡ್ಡದಾದ ದಬ್ಬೇ ಕಟ್ಟಿದರೂ ನಾಯಿಯ ಬಾಲದೊಂಕು ಎನ್ನುವಂತೆ ನಮ್ಮ ದೇಶದ ಅತಿದೊಡ್ಡ ವಿರೋಧಪಕ್ಷವಾದ ಕಾಂಗ್ರೇಸ್ ಇದರಲ್ಲಿಯೂ ಸಹಾ ರಾಜಕಿಯವನ್ನು ಬೆರಸಲು ಪ್ರಯತಿನಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅದರಲ್ಲೂ ಆ ಪಕ್ಷದ ಅನರ್ಹ ಸಾಂಸದ ದೂರದ ಅಮೇರಿಕಾದಲ್ಲಿ ಈ ಕುರಿತಂತೆ ದೇಶದ ಮಾನವನ್ನು ಹರಾಜು ಹಾಕುತ್ತಿರುವುದಲ್ಲದೇ, ನಮ್ಮ ಕಾಲದಲ್ಲಿ ಈ ರೀತಿಯಾದ ಅವಘಡಗಳು ಸಂಭವಿಸಿದ ಕೂಡಲೇ ಸಂಬಧ ಪಟ್ಟ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡುತ್ತಿದ್ದರು. ಅದರೆ ದೇಶದಲ್ಲಿ ದ್ವೇಷದ ರಾಜಕಾಣ ಮಾಡುತ್ತಿರುವ ಮೋದಿ ಸರ್ಕಾರದಿಂದ ಆ ರೀತಿಯಾಗಿ ನೀರೀಕ್ಷಿಸಲು ಅಸಾಧ್ಯ ಎಂದು ಕುಚೋದ್ಯವಾಡಿರುವುದು, ಒಬ್ಬ ಜವಾಬ್ಧಾರಿ ಸ್ಥಾನದಲ್ಲಿನ ವ್ಯಕ್ತಿಯೊಬ್ಬನ ಅಪ್ರಬುದ್ಧ ಮಾನಸಿಕತೆಯನ್ನು ಎತ್ತಿ ತೋರಿಸುತ್ತಿದೆ.

ಪ್ರತಿಬಾರಿಯೂ ಈ ರೀತಿಯ ರೈಲು ದುರಂತಗಳಾದಾಗ ಸ್ಥಳಕ್ಕೆ ಆಗಮಿಸುವ ಸಂಬಂಧ ಪಟ್ಟ ಮಂತ್ರಿಗಳು ಕಾಟಾಚಾರಕ್ಕೆ ತನಿಖೆಗೆ ಚಾಲನೆ ನೀಡಿ ಸುಮ್ಮನೇ ಈ ರಗಳೆಯನ್ನು ತಮ್ಮ ತಲೆಯಮೇಲೇಕೆ ಎಳೆದುಕೊಳ್ಳ ಬೇಕು ಎಂದು ರಾಜಿನಾಮೆ ಕೊಟ್ಟಂತೆ ಮಾಡಿ ಕೆಲವೇ ದಿನಗಳಲ್ಲಿ ಮತ್ತೊಂದು ಮಂತ್ರಿಗಿರಿಯನ್ನು ಹೊಂದುವುದನ್ನು ನೋಡಿದ್ದೇವೆ. ಆದರೆ ಅಪರೂಪ ಎನ್ನುವಂತೆ ಪ್ರಸ್ತುತ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಮೊದಲೇ ತಿಳಿಸಿದಂತೆ ಅಪಘಾತದ ಸುದ್ದಿ ಕೇಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಅಲ್ಲಿನ ಜನರೊಂದಿಗೆ ನಿಂತು ಪರಿಹಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ, ಅವರ ದುಃಖಗಳಲ್ಲಿ ಸರಿಸಮನಾಗಿ ಭಾಗಿಯಾಗುತ್ತಲೇ, ಸ್ಥಳೀಯ ರೈಲ್ವೇ ಅಧಿಕಾರಿಗಳನ್ನು ಕರೆದು ಅವರೊಂದಿಗೆ ಮಾತು ಕತೆ ನಡೆಸಿ ದಾಖಲೆಯ ಸಮಯವಾದ ೫೧ ಗಂಟೆಗಳಲ್ಲಿ ಮತ್ತೇ ಹಳಿಗಳನ್ನು ಯಥಾಸ್ಥಿಗೆ ತಂದು ಪರಿಕ್ಷಾರ್ಥ ರೈಲುಗಳು ಅದರ ಮೇಲೆ ಸಂಚರಿಸಿ ಎಲ್ಲವೂ ಸುಗಮ ಎಂದು ತಿಳಿದು ನಿಗಧಿತ ರೈಲುಗಳ ಸಂಚಾರ ಆರಂಭವಾದ ನಂತರವೇ ಆ ಜಾಗದಿಂದ ಮತ್ತೆ ದೆಹಲಿಗೆ ಹೋಗುವ ಮುನ್ನಾ ರೈಲು ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದ್ದು, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿ ಮಾರ್ಪಾಡು ಮಾಡಿದ್ದರಿಂದ ಇಂತಹ ಅವಘಡ ಸಂಭವಿಸಿದೆ, ಈಗಾಗಲೇ ತನಿಖೆ ಚುರುಕುಗೊಂಡಿದ್ದು, ಇದು ಅಪಘಾತವಾಗಿರದೇ, ಯಾರದ್ದೋ ವಿಧ್ವಮ್ಸಕ ಪಿತೂರಿ ಎಂದೇನಾದರೂ, ದೃಢಪಟ್ಟಲ್ಲಿ ಅದನ್ನು ಮಾಡಿದವರನ್ನು ಖಂಡಿತವಾಗಿಯೂ ಸುಮ್ಮನೇ ಬಿಡಲಾಗುವುದಿಲ್ಲ ಎಂಬ ಎಚ್ಚರಿಕೆ ನೀಡಿರುವುದು ಮತ್ತಷ್ಟು ಹೊಸಾ ಆಯಾಮಗಳಿಗೆ
ಹುಟ್ಟು ಹಾಕಿದೆ.
ಇತ್ತೀಚೆಗಷ್ಟೇ, ಇದೇ ರೈಲ್ವೇ ಮಂತ್ರಿಗಲು ನಮ್ಮ ರೈಲ್ವೇ ಸುರಕ್ಷತೆ ಗೆ ಸುಧಾರಿಸುತ್ತಿದ್ದೇವೆ ಎಂಬುದರ ಕುರಿತು ಪ್ರಸ್ತುತಿಯನ್ನು ನೀಡಿದ್ದಲ್ಲದೇ, 3 ವರ್ಷಗಳ ಹಿಂದೆ, ನಾವು ZERO ಪ್ರಯಾಣಿಕರ ಸಾವಿನ ದಾಖಲೆಯನ್ನು ಆಚರಿಸಿದ್ದೇವೆ ಕಳೆದ 166 ವರ್ಷಗಳ ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೊಂದು ಅತ್ಯುತ್ತಮವಾದ ಸುರಕ್ಷತಾ ದಾಖಲೆ ಎಂದು ತಿಳಿಸಿದ್ದರು. ಅದೇ ರೀತಿಯಾಗೊ 2024 ರ ವೇಳೆಗೆ ರೈಲ್ವೆಯ ಎಲ್ಲಾ ಮಾರ್ಗಗಳನ್ನೂ 100% ವಿದ್ಯುದೀಕರಣ ಮಾಡುವುದಾಗಿ ಘೋಷಿಸಿದ್ದಲ್ಲದೇ, ರೈಲ್ವೇ ವಿದ್ಯುದೀಕರಣದ ವಿಷಯದಲ್ಲಿ ಭಾರತವು ಪ್ರಪಂಚದ ಇತರ ದೊಡ್ಡ ರೈಲ್ವೆ ಜಾಲಗಳಿಗಿಂತ ಎಷ್ಟು ಮುಂದಿದೆ ಎಂಬುದನ್ನು ಅಂಕಿ ಅಂಶಗಳ ಮೂಲಕ ಪ್ರಸ್ತುತ ಪಡಿಸಿದ್ದರು.
ಅಮೇರೀಕಾದಲ್ಲಿ ರೈಲ್ವೇ ವಿದ್ಯುದೀಕರಣ ಇದುವರೆವಿಗೇ ಕೇವಲ 1% ಆಗಿದ್ದರೆ, ಯುರೋಪ್ 60% ಮತ್ತು ಚೀನಾದಲ್ಲಿ 72% ಇದೆ. ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುವುದಷ್ಟೇ ಅಲ್ಲದೇ, ಪ್ರಸ್ತುತವಾದ ಮುಂಬೈ ಸ್ಥಳೀಯ ರೈಲುಗಳ ಬದಲಿಗೆ, 238 ಅತ್ಯಾಧುನಿಕ ವಂದೇ ಮೆಟ್ರೋ ರೈಲುಗಳನ್ನು ಸಹಾ ಓಡಿಸಲಿದ್ದೇವೆ ಎಂಬುದನ್ನು ಬಹಳ ಹೆಮ್ಮೆಯಿಂದ ಹೇಳಿದ್ದರು.
ಆದರೆ ದುರಾದೃಷ್ಟವಾಷಾತ್ ಮೋದಿ ಮತ್ತು ಬಿಜೆಪಿ ಪಕ್ಷದ ಮೇಲಿನ ಸೈದ್ಧಾಂತಿಕ ವಿರೋಧವನ್ನು ಹೊಂದಿರುವ ಕೆಲವು ವಿಕೃತ ಮನಸ್ಸಿನ ರಾಜಕಾರಣಿಗಳ ಕುಮ್ಮಕ್ಕಿನಿಂದಾಗಿ ಈ ಎಲ್ಲಾ ಹೊಸಾ ಪ್ರಯತ್ನಗಳಿಗೂ ಮೇಲಿಂದ ಮೇಲೆ ತಡೆ ಒಡ್ಡುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ. ಬಿಜೇಪಿಯೇತರ ರಾಜ್ಯಗಳಲ್ಲಿ ವಂದೇ ಭಾರತ್ ರೈಲುಗಳ ಮೇಲೆ ಕಲ್ಲಿನ ಮಳೆಯನ್ನು ಸುರಿಸಲಾಗುತ್ತಿದೆ. ರೈಲಿನ ಪೀಠೋಪಕರಣಗಳನ್ನು ಹಾಳು ಮಾಡುತ್ತಿರುವುದನ್ನು ಈಗಾಗಲೇ ನಾವು ನೋಡಿದ್ದೇವೆ. ಈಗ ಈ ರೀತಿಯಾಗಿ ರೈಲುಗಳ ಹಳಿಯನ್ನು ತಪ್ಪಿಸಿ ಇಂತಹ ಅಪಘಾತಗಳನ್ನು ಸೃಷ್ಟಿಸಲು ಸಹಾ ಅಂತಹ ವಿಕೃತ ಮನಸ್ಸುಗಳು ಹೇಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಇನ್ನು ಭಾರತದ ರೈಲ್ವೇ ಇಲಾಖೆಯಲ್ಲಿ ವಿದ್ಯುದೀಕರಣದ ಬಗ್ಗೆ ದೂರದ ಅಮೇರಿಕಾ ಕಂಪನಿಯೊಂದು ಚಿಂತಿತವಾಗಿದೆ ಎಂದರೆ ಅಶ್ಚರ್ಯವಾಗಬಹುದು. ಅಮೇರಿಕಾದ ಮೂಲದ ಲೋಕೋಮೋಟಿವ್ ಇಂಜಿನ್ ತಯಾರಿಸುವ ಸಂಸ್ಥೆಯೊಂದು ಕಳೆದ 10 ವರ್ಷಗಳಲ್ಲಿ 1,000 ಇಂಜಿನ್ಗಳನ್ನು ತಯಾರಿಸಿ ಕೊಡುವ ಬಹು ಬಿಲಿಯನ್ ಡಾಲರ್ ಡೀಸೆಲ್ ಲೋಕೋಮೋಟಿವ್ ಉತ್ಪಾದನಾ ಒಪ್ಪಂದದ ಮಾಡಿಕೊಂಡಿದ್ದು ಆ ಕಂಪನಿಯೂ ಅಹಾ ತನ್ನ ಭವಿಷ್ಯದ ಬಗ್ಗೆ ಚಿಂತಿತವಾಗಿದ್ದು, ಶತ್ರುವಿನ ಶತ್ರು ತನ್ನ ಮಿತ್ರ ಎನ್ನುವ ಗಾದೆಯಂತೆ ದೇಶ ವಿರೋಧಿಗಳೊಂದಿಗೆ ಕೈ ಜೋಡಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.
ಇನ್ನು ಭವಿಷ್ಯದಲ್ಲಿ ಪ್ರಧಾನಿಯಾಗ ಬೇಕೆಂದು ಸುಮಾರು ಒಂದು ದಶಕಗಳ ಕಾಲದಿಂದಲೂ ಹಪಾಹಪಿಸುತ್ತಿರುವ ಚಿರ ತರುಣನೊಬ್ಬ ನಾವು ಸರ್ಕಾರದ ವಿರುದ್ಧ ಹೋರಾಡುತ್ತಿಲ್ಲ, ನಾವು ಸಂಪೂರ್ಣ ಸರ್ಕಾರದ ಮೂಲಸೌಕರ್ಯದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಇತ್ತೀಗಷ್ಟೇ ಅಮೇರಿಕಾದಲ್ಲಿ ಹೇಳುತ್ತಿರುವುದಲ್ಲದೇ, ಆತ ಪ್ರತೀಬಾರಿಯೂ ವಿದೇಶಕ್ಕೆ ಹೋದಾಗ, ಭಾರತದಲ್ಲಿ ಒಂದಲ್ಲಾ ಒಂದು ಅಪಘಡಗಳು ರಾಜಕೀಯ ವಿದ್ರೋಹಗಳು, ದೇಶವಿರೋಧಿ ಚಟುವಟಿಕೆಗಳು ಕೇವಲ ಕಾಕತಾಳೀಯವಾಗಿರದು ಎಂಬುದನ್ನು ಭಾರತೀಯರು ಗ್ರಹಿಸುತ್ತಿದ್ದು ಅದಕ್ಕೆ ತಕ್ಕ ಉತ್ತರವನ್ನು ಸಮಯ ಬಂದಾಗ ಕೊಡುತ್ತಾರೆ ಎಂಬ ಆಶಯ ನೈಜ ಭಾರತೀಯರದ್ದಾಗಿದೆ.
ವಿನಾಕಾರಣ ಅಪಘಾತದಲ್ಲಿ ಮಡಿದ ನೂರಾರು ಜನರ ಆತ್ಮಕ್ಕೆ ಆ ಭಗವಂತನು ಸದ್ಗತಿಯನ್ನು ಕೊಡಲಿ ಅವರ ಅಕಾಲಿಕ ಅಗಲಿಕೆಯ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಮತ್ತು ವಿವಿಧ ರೀತಿಯ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರೆಲ್ಲರೂ ಅತೀ ಶೀಘ್ರವಾಗಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲೀ ಎಂದು ಪ್ರಾರ್ಥಿಸಿರುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ. ಇಷ್ಟೆಲ್ಲಾ ವಿರೋಧಗಳ ಮಧ್ಯೆಯೂ ಸಹಾ ಎಂದಿನಂತೆ ಸಂಘದ ಸ್ವಯಂಸೇವಕರು ನಿಸ್ವಾರ್ಥವಾಗಿ ಯಾವುದೇ ಪ್ರಚಾರವಿಲ್ಲದೇ ಪರಿಹಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೆ, ಈ ಬಾರಿ ಅವರೊಂದಿಗೆ ಕೈ ಜೋಡಿಸಲು ನೂರಾರು ಸ್ಥಳೀಯ ಯುವಕರುಗಳು ಸ್ವಯಂ ಪ್ರೇರಿತವಾಗಿ ಬಂದಿರುವುದು ಉತ್ತಮ ಬೆಳವಣಿಯಾಗಿದೆ. ಅದೇ ರೀತಿ ರೈಲು ಅಪಘಾತ ಸಂತ್ರಸ್ತರ ಮಕ್ಕಳಿಗೆ ಸಹಾಯ ಮತ್ತು ಅವರ ಶಾಲಾ ಶಿಕ್ಷಣಕ್ಕೆ ಧನ ಸಹಾಯ ನೀಡುವುದಾಗಿ ಅದಾನಿ ಗ್ರೂಪ್ ತಿಳಿಸಿರುವುದು, ತಾವೂ ಸಹಾಯ ಮಾಡುವುದಿಲ್ಲ ಮತ್ತು ಮತ್ತೊಬ್ಬರು ಸಹಾಯ ಮಾಡಿದರೂ ಸಹಿಸದೇ ಇರುವ ಕೆಲವು ವಿಕೃತ ಮನಸ್ಥಿತಿಯವರ ಕಿಚ್ಚಿಗೂ ಕಾರಣವಾಗಿರುವುದು ವಿಪರ್ಯಾಸವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಪುಣೆಯಿಂದ ಮಿತ್ರರೊಬ್ಬರು ಇದು ಅಪಘಾತ ಅಲ್ಲ, ಸಮಾಜವಿರೋಧಿ ಕೃತ್ಯ ಅಂದಿದ್ದಾರೆ. ನನಗೂ ಈ ಬಗ್ಗೆ ಸಂಶಯ ಇದೆ.
LikeLiked by 1 person
ಎಲ್ಲರೂ ಅದೇ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮೋದಿಯವರ ಹೆಸರನ್ನು ಕೆಡಿಸಲು ಅವರ ವಿರೋಧಿಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎನ್ನುವುದು ತೀಸ್ತಾ ಸೆತಲ್ವಾಡ್ ವಿಷಯದಲ್ಲಿ ಸಾಭೀತಾಗಿದೆ
LikeLike
ಇದೊಂದು ಉದ್ದೇಶ ಪೂರ್ವಕ ವಿದ್ವಸಂಕ ಕ್ರತ್ಯ ಎಂದು ಕಂಡು ಬರುತ್ತದೆ.
LikeLike