ಟಿ20 ವಿಶ್ವಕಪ್ 2024ರ ಫೈನಲ್ಸ್  ಪಂದ್ಯದ ಪ್ರಮುಖ ಅಂಕಿ ಅಂಶಗಳು

t20ಶನಿವಾರ 29.06.24ರಂದು  ಟಿ20, 2024ರ 55ನೇ ಪಂದ್ಯ, ಅರ್ಥಾತ್ ಪಂದ್ಯಾವಳಿಯಲ್ಲಿ  ಅಜೇಯರಾಗಿಯೇ ಉಳಿದಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಅಂತಿಮ ಹಣಾಹಣಿಯು ವೆಸ್ಟ್ ಇಂಡೀಸ್ ನ ಬಾರ್ಬೊಡೋಸ್ ನಲ್ಲಿ ನಡೆದು ಇಡೀ ಪಂದ್ಯದುದ್ದಕ್ಕೂ ಗೆಲುವಿನ ಮಾಲೆ ತೂಗೂಯ್ಯಾಲೆಯಲ್ಲಿಯೇ  ಇದ್ದು ಅಂತಿಮ ಚಂಡಿನವರೆಗೂ ಕದನ ಕುತೂಹಲವೇರ್ಪಟ್ಟು  ಅಂತಿಮವಾಗಿ ಭಾರತ ಏಳು ರನ್‌ಗಳ ವಿಜಯವನ್ನು ಸಾಧಿಸಿದ್ದು ಈ ಈಗ ಇತಿಹಾಸವಾಗಿದೆ. ಮಳೆ ನಿಂತು ಹೋದ ಮೇಲೆ ಮರದ ಎಲೆಗಳಿಂದ  ಹನಿಗಳು ತೊಟ್ಟಿಕ್ಕುವಂತೆ ಕಳೆದ ಎರಡು ದಿನಗಳಿಂದಲೂ ವಿಶ್ವಾದ್ಯಂತ  ಅದೇ ಪಂದ್ಯದ ಬಗ್ಗೆಯೇ ಮಾತನಾಡಿಕೊಳ್ಳುತ್ತಿರುವಾಗಲೇ, ಕ್ರಿಕೆಟ್ ಅಂಕಿ ಅಂಶಗಳ ತಜ್ಞರೂ, ಸರಿ ಸುಮಾರು 80ರ ಆಸುಪಾಸಿನಲ್ಲಿರುವ ವಯೋವೃದ್ಧರೂ ಆಗಿರುವ  ಮತ್ತು ವಯಕ್ತಿವಾಗಿ ನನ್ನ ಹಿತೈಷಿಗಳಾಗಿರುವ ಶ್ರೀ H R ಗೋಪಾಲಕೃಷ್ಣ ಅವರು ಇಡೀ ಪಂದ್ಯದ ಕುರಿತಾದ ಅಪರೂಪದ ಅಂಕಿ ಅಂಶಗಳನ್ನು ವಿಶೇಷವಾಗಿ ನಮ್ಮ ಏನಂತೀರೀ? ಓದುಗರೊಂದಿಗೆ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

  • ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗೆ 176 ರನ್ ಗಳಿಸಿ ವಿಶ್ವಕಪ್‌ನ ಫೈನಲ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಗರಿಷ್ಠ ತಂಡದ ಮೊತ್ತವನ್ನು ದಾಖಲಿಸಿತು. 14.11.2021 ರಂದು ದುಬೈ-ಡಿಐಸಿಎಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 2 ವಿಕೆಟ್‌ಗೆ 173 ರನ್ ಗಳಿಸಿದ್ದು ವಿಶ್ವಕಪ್ ಫೈನಲ್‌ನಲ್ಲಿ ತಂಡದಿಂದ ಹಿಂದಿನ ಗರಿಷ್ಠ ಮೊತ್ತವಾಗಿತ್ತು.
  • ವಿಶ್ವಕಪ್‌ನ ಫೈನಲ್‌ನಲ್ಲಿ ತಂಡವೊಂದು ಇನ್ನಿಂಗ್ಸ್‌ನಲ್ಲಿ ಒಟ್ಟು 170 ಪ್ಲಸ್ ರನ್‌ಗಳನ್ನು ಗಳಿಸಿದ ಮೂರನೇ ಸಂದರ್ಭವನ್ನು ಒದಗಿಸುವ ಸಲುವಾಗಿ ಭಾರತ ಈ ಪಂದ್ಯದಲ್ಲಿ 7 ವಿಕೆಟ್‌ಗೆ 176 ರನ್ ಗಳಿಸಿತು. ಭಾರತ ಮತ್ತು ಆಸ್ಟ್ರೇಲಿಯಾವನ್ನು ಹೊರತುಪಡಿಸಿ, ನ್ಯೂಜಿಲೆಂಡ್11.2021 ರಂದು ದುಬೈ-ಡಿಐಸಿಎಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗೆ 172 ರನ್ ಗಳಿಸಿತ್ತು.
  • ಈ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ 76 ರನ್ ಗಳಿಸಿ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳ 347 ನೇ ಸಂದರ್ಭವನ್ನು ಒದಗಿಸಿದರು. ಈ ಮೂಲಕ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಿದ 50 ನೇ ಸಂದರ್ಭವಿದು.
  • ಈ ಮೂಲಕ ವಿಶ್ವಕಪ್‌ನಲ್ಲಿ 50 ಅರ್ಧ ಶತಕ ಬಾರಿಸಿದ ಮೊದಲ ತಂಡವಾಗಿ ಭಾರತ ಹೊರಹೊಮ್ಮಿದೆ.
  • ಈ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ 76 ರನ್ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಿದ 173ನೇ ಸಂದರ್ಭವಾಗಿದೆ.   ಅದೇ ರೀತಿ ವಿಶ್ವಕಪ್‌ನಲ್ಲಿ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಅರ್ಧ ಶತಕ ಗಳಿಸಿದ 20 ನೇ ಸಂದರ್ಭವಾಗಿದೆ.
  • ಈ ಮೂಲಕ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಅರ್ಧ ಶತಕಗಳನ್ನು ಗಳಿಸಿದ ತನ್ನ ಆರಂಭಿಕ ಬ್ಯಾಟ್ಸ್‌ಮನ್ ಹೊಂದಿರುವ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇದಕ್ಕೂ ಮೊದಲು ಆಸ್ಟ್ರೇಲಿಯಾ (23) ಮತ್ತು ಶ್ರೀಲಂಕಾ (20) ಇಂತಹ ಸಾಧನೆ ಮಾಡಿದ ಉಳಿದೆರಡು ತಂಡಗಳಾಗಿವೆ.
  • ಈ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ 76 ರನ್ ಗಳಿಸಿ ವಿಶ್ವಕಪ್ ಫೈನಲ್ಸ್‌ನಲ್ಲಿ ಬ್ಯಾಟ್ಸ್‌ಮನ್ ಅರ್ಧ ಶತಕ ಬಾರಿಸಿದ 15 ನೇ ಸಂದರ್ಭವಾಗಿದೆ. ಇದು ವಿಶ್ವಕಪ್ ಫೈನಲ್‌ನಲ್ಲಿ ಇನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ನ ಮೂರನೇ ಸಂದರ್ಭವಾಗಿದೆ. ಈ ಮೊದಲು09.2007 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗೌತಮ್ ಗಂಭೀರ್ ಅವರ 75 ಮತ್ತು 06.04.2014 ರಂದು ಮಿರ್‌ಪುರದಲ್ಲಿ ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ಅವರೇ 77 ರನ್ ಗಳಿಸಿದ್ದರು.
  • ಭಾರತದ ವಿರಾಟ್ ಕೊಹ್ಲಿ ವಿಶ್ವಕಪ್ ಫೈನಲ್‌ನಲ್ಲಿ ಎರಡು ಸಂದರ್ಭಗಳಲ್ಲಿ ಅರ್ಧ ಶತಕ ಗಳಿಸಿದ ವಿಶ್ವದ ಮೂರನೇ ಮತ್ತು ಭಾರತದ ಮೊದಲನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇವರಿಗೂ ಮುನ್ನಾ ವೆಸ್ಟ್ ಇಂಡೀಸ್‌ನ ಎಂಎನ್ ಸ್ಯಾಮ್ಯುಯೆಲ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ವಿಶ್ವಕಪ್ ಫೈನಲ್‌ನಲ್ಲಿ ಇಂತಹ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.
  • ಈ ಪಂದ್ಯದಲ್ಲಿ ವಿರಾತ್ ಕೊಹ್ಲಿ ಅವರ 76 ಓಟಗಳನ್ನು ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಅವರು 15 ನೇ ಅರ್ಧ ಶತಕಗಳಿಸಿದ್ದಲ್ಲದೇ, ವಿಶ್ವಕಪ್ ಇತಿಹಾಸದಲ್ಲಿ 15 ಅರ್ಧ ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು
  • ಈ ಮೂಲಕ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 15 ಅರ್ಧ ಶತಕಗಳೊಂದಿಗೆ ಒಟ್ಟು 1005 ರನ್ ಗಳಿಸಿದ್ದಾರೆ. ಈ ಅರ್ಧ ಶತಕಗಳೊಂದಿಗೆ ವಿಶ್ವಕಪ್‌ನ ಇತಿಹಾಸದಲ್ಲಿ 1000 ಪ್ಲಸ್ ರನ್‌ಗಳನ್ನು ಒಟ್ಟುಗೂಡಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.
  • ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರ ರನ್ ಒಟ್ಟು ಗಳಿಸಿದ ಓಟಗಳು 1292 ಆಗಿದ್ದು, ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಹೊಂದಿದ್ದಾರೆ. 1220 ಓಟಗಳನ್ನು ಕಲೆ ಹಾಕಿರುವ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.
  • ವಿಶ್ವಕಪ್ ನಲ್ಲಿ ಭಾರತ ಗೆಲುವು ಕಂಡ ಪಂದ್ಯಗಳಲ್ಲಿ ರೋಹಿತ್ ಶರ್ಮಾ 959 ರನ್‌ಗಳನ್ನು ಗಳಿಸಿದ್ದರೆ, ಈ ಪಂದ್ಯದಲ್ಲಿ ವಿರಾಟ್ 76 ಓಟಗಳನ್ನು ಗಳಿಸುವ ಮೂಲಕ ಒಟ್ಟು 960 ಗಳಿಸುವ ಮೂಲಕ  ವಿಶ್ವಕಪ್ ನ ಗೆಲುವಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗೆ ಭಾಜನರಾಗಿದ್ದಾರೆ.
  • ಅದೇ ರೀತಿಯಾಗಿ ಈ ಪಂದ್ಯದಲ್ಲಿ ಅರ್ಧಶತಕಗಳನ್ನು ಗಳಿಸುವ ಮೂಲಕ ವಿರಾಟ್ ಅವರು ರೋಹಿತ್ ಅವರ ವಿಶ್ವಕಪ್ ಗೆದ್ದ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ ಹನ್ನೊಂದು ಅರ್ಧಶತಕ ಗಳಿಸಿದ್ದಾರೆ.
  • ಈ ಪಂದ್ಯದಲ್ಲಿ ರಿಷಭ್ ಪಂತ್ ಶೂನ್ಯಕ್ಕೆ ಔಟ್ ಆಗುವ ಮೂಲಕ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ  509 ನೇ ಆಟಗಾರರಾದರು. ಅಷ್ಟೇ ಅಲ್ಲದೇ ವಿಶ್ವಕಪ್‌ ಪೈನಲ್ಲಿನಲ್ಲಿ ಶೂನ್ಯಕ್ಕೆ ಔಟಾದ ಮೊದಲ  ಭಾರತೀಯ ಬ್ಯಾಟ್ಸ್‌ಮನ್ ಸಹಾ ಆಗಿದ್ದಾರೆ.
  • ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ 44 ನೇ ವಿಕೆಟ್ ಕೀಪರ್  ಆಗಿರುವುದಲ್ಲದೇ, ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ವಿಕೆಟ್ ಕೀಪರ್ ಸಹಾ ಆಗಿದ್ದಾರೆ.
  • ವಿಶ್ವಕಪ್ ಫೈನಲ್‌ನಲ್ಲಿ ಶೂನ್ಯಕ್ಕೆ ಔಟಾದ ಬ್ಯಾಟ್ಸ್‌ಮನ್ನುಗಳ ಪೈಕಿ ರಿಷಭ್ ಪಂತ್ 13ನೇಯವರಾಗಿದ್ದು, ಈ ಮೊದಲೇ ತಿಳಿಸಿದಂತೆ, ವಿಶ್ವಕಪ್‌ನಲ್ಲಿ ಫೈನಲ್ ನಲ್ಲಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಸಹಾ ಆಗಿದ್ದಾರೆ.
  • ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಚ್ ಕ್ಲಾಸೆನ್ 52 ರನ್ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದ 348 ನೇ ಆಟಗಾರ ಎನಿಸಿಕೊಂಡಿದ್ದಲ್ಲದೇ, ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಪರ ಅರ್ಧ ಶತಕ ಗಳಿಸಿದ 30ನೇ ಆಟಗಾರರಾದರು.
  • ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಚ್ ಕ್ಲಾಸೆನ್ 52 ರನ್ ಗಳಿಸುವ ಮೂಲಕ, ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ 16ನೇ ಆಟಗಾರರಾಗಿದ್ದಲ್ಲದೇ, ವಿಶ್ವಕಪ್ ಫೈನಲ್‌ನಲ್ಲಿ ಅರ್ಧ ಶತಕ ಗಳಿಸಿದ ಮೊದಲ ದಕ್ಷಿಣ ಆಫ್ರಿಕಾದ ಆಟಗಾರ ಎನಿಸಿಕೊಂಡಿದ್ದಾರೆ.
  • ಈ ಪಂದ್ಯದಲ್ಲಿ ಅರ್ಧ ಶತಕದ ಗಳಿಸಿಯೂ ವಿಶ್ವಕಪ್‌ನಲ್ಲಿ  ಸೋಲುಂಡ ತಂಡದ ಪರವಾಗಿ 111 ಆಟಗಾರ ಎನಿಸಿಕೊಂಡಿದ್ದಲ್ಲದೇ, ದಕ್ಷಿಣ ಆಫ್ರಿಕಾದ ಒಂಬತ್ತನೇ ಆಟಗಾರರಾದರು.
  • ಈ ಪಂದ್ಯದಲ್ಲಿ ಎಚ್ ಕ್ಲಾಸೆನ್ ಅವರ 52 ರನ್‌ಗಳನ್ನು ಕಲೆ ಹಾಗಿದರೂ, ವಿಶ್ವಕಪ್ ಫೈನಲ್‌ನಲ್ಲಿ  ಅರ್ಧ ಶತಕ ಗಳಿಸಿಯೂ ಸೋಲುಂಡ ತಂಡದ ಆರನೇ ಆಟಗಾರ ಮತ್ತು ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಎನಿಸಿಕೊಂಡರು.
  • ಈ ಪಂದ್ಯವನ್ನು ಏಳು ರನ್‌ಗಳಿಂದ ಭಾರತ ಗೆಲ್ಲುವ ಮೂಲಕ ಏಕ ಅಂಕಿಗಳ ಅಂತರದಿಂದ ವಿಶ್ವಕಪ್ ಪಂದ್ಯವನ್ನು ಗೆದ್ದ 34ನೇ ತಂಡ ಎನಿಸಿಕೊಂಡಿದ್ದಲ್ಲದೇ, ಇದು  ಭಾರತದ ಪರ ಒಂದೇ ಅಂಕಿಯ ಅಂತರದಿಂದ ಗೆದ್ದ ಆರನೇ  ಪಂದ್ಯವಾಗಿದೆ.
  • ಭಾರತವು ಈ ಪಂದ್ಯವನ್ನು ಏಳು ರನ್‌ಗಳಿಂದ ಗೆಲ್ಲುವ ಮೂಲಕ ವಿಶ್ವಕಪ್ ಫೈನಲ್‌ನಲ್ಲಿ ಏಕ ಅಂಕಿಗಳ ಅಂತರದಿಂದ ಗೆದ್ದ ಎರಡನೇ ತಂಡವಾಗಿದೆ. ಈ ಮುನ್ನಾ ಭಾರತ ತಂಡವೇ ಪಾಕೀಸ್ಥಾನದ ವಿರುದ್ಧ 2007ರಲ್ಲಿ 24,09.2007 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ  ಮೊದಲ ಟಿ20 ವಿಶ್ವಕಪ್ ಫೈನಲ್‌ನಲ್ಲಿ 5 ರನ್ನುಗಳ  ಅಂತರದಿಂದ ಸೋಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದಾಗಿದೆ.

Golakrishnaದೇವನೊಬ್ಬ ನಾಮ ಹಲವು ಎನ್ನುವಂತೆ ಆಡಿದ  ಪಂದ್ಯ ಒಂದೇ ಆದರೂ ಅದರಿಂದ ತಂಡದ ಪರವಾಗಿ, ಆಟಗಾರರ ವಯಕ್ತಿಕ ಪರವಾಗಿ ನೂರಾರು ದಾಖಲೆಗಳು ನಿರ್ಮಾಣ ಆಗುವುದು ನಿಜಕ್ಕೂ ಅದ್ಭುತವೇ ಆಗಿದ್ದು, ಇವಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿಕೊಂಡು ಎಲ್ಲವನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಕ್ರಿಕೆಟ್ ಅಂಕಿ ಅಂಶ ತಜ್ಞರು ಅದರಲ್ಲೂ ಶ್ರೀ H R ಗೋಪಾಲಕೃಷ್ಣ ಅಂತಹವರು ವಿಶೇಷ ಎನಿಸಿಕೊಳ್ಳುತ್ತಾರೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a comment