ಪರೀಕ್ಷೆ ಬರುತ್ತಿದ್ದ ಹಾಗೆ ಉಡಾಳರೂ ಹೇಗೆ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಲು ಆರಂಭಿಸುತ್ತಾರೋ, ಹಾಗೆಯೇ ಚುನಾವಣೆ ಸಮೀಸುತ್ತಿದ್ದಂತೆಯೇ ನಮ್ಮ ದೇಶದ ಬಹುತೇಕ ರಾಜಕಾರಣಿಗಳು ಆದರಲ್ಲೂ ಕಾಂಗ್ರೇಸ್ ಮತ್ತದರ ಮಿತ್ರಪಕ್ಷಗಳು ಇದ್ದಕ್ಕಿಂದ್ದಂತೆಯೇ ಜಾಗೃತರಾಗಿ, ತಾವು ಅಧಿಕಾರದಲ್ಲಿ ಇದ್ದಾಗ ಸಾಧಿಸಲಾಗದಿದ್ದರೂ, ಅದನ್ನು ಪ್ರಸ್ತುತ ಸರ್ಕಾರ ಸಾಧಿಸಬಾರದು. ಹೇಗಾದರೂ ಮಾಡಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ತಾವು ಮತ್ತೆ ಅಧಿಕಾರದ ಪಟ್ಟಕ್ಕೆ ಏರಬೇಕು ಎಂಬ ಆಶಯದಿಂದ ವಿವಿದ ತಂತ್ರಗಳಾದ ಸಾಮ, ದಾನ, ಭೇದ, ದಂಡಗಳ ಪ್ರಯೋಗವನ್ನು ಮಾಡಲು ಆರಂಭಿಸುತ್ತಿದ್ದು ಅವಉಗಳಲ್ಲಿ ಪ್ರಮುಖವಾಗಿ ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆಯಲು ಮುಂದಾಗಿವೆ. ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಸಕಲ ಹಿಂದೂಗಳನ್ನು ಕಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಒಂದು ಕಾಲದಲ್ಲಿ ಇಡೀ ದೇಶವನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಕಾಂಗ್ರೇಸ್ ಪಕ್ಷದ ಒಂದೊಂದೇ ಕುಟಿಲತೆಗಳು ಜನರಿಗೆ ಅರ್ಥವಾಗುತ್ತಿದ್ದಂತೆಯೇ, ಪ್ರಜ್ಞಾವಂತರಾದ ಜನರು ದೇಶದ ಬಹುತೇಕ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಒಂದು ದಶಕಗಳಿಗಿಂತಲೂ ಅಧಿಕ ಸಮಯದಿಂದ ಅಧಿಕಾರದಿಂದ ಹೊರಗೆ ಇಟ್ಟಿದ್ದನ್ನು ಸಹಿಸಲಾಗದ ಕಾಂಗ್ರೇಸ್ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನರಿತು, ಪ್ರಾದೇಶಿಕ ಪಕ್ಷಗಳೊಡನೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡರೂ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡದೇ ಹೋದಾಗ ಅವರಿಗೆ ನೆನಪಾದದ್ದೇ, ತಮಿಳುನಾಡು ಮತ್ತು ದೆಹಲಿಯ ಉಚಿತ ಆಮಿಷಗಳು.
ಇದೇ ಉಚಿತ ಭಾಗ್ಯಗಳ ಆಧಾರದ ಮೇಲೆ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿದ ನಂತರ ಇದೇ ಬಿಟ್ಟಿ ಭಾಗ್ಯಗಳನ್ನು ಖಟಾ ಖಟ್, ಟಕಾ ಟಕ್ ಎಂದು ಲೋಕಸಭೆಯಲ್ಲೂ ಚಲಾವಣೆಗೆ ತಂದ ಕಾರಣದಿಂದಲೇ, ಕಳೆದ ಎರಡು ಚುನಾವಣೆಗಳಲ್ಲಿ ಅಧಿಕೃತ ವಿರೋಧ ಪಕ್ಷವಾಗುವಷ್ಟೂ ಸಂಖ್ಯಾ ಬಲ ಹೊಂದಿರದಿದ್ದ ಕಾಂಗ್ರೇಸ್ ಈ ಬಾರಿ 99 ಸಾಂಸದರನ್ನು ಹೊಂದುವ ಮೂಲಕ ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆದು ಅವರ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿದ್ದಾರೆ, 99/543 = 18.2% ಸ್ಥಾನ ಗಳಿಸಿದ್ದರೂ, 99/100 ಗಳಿಸಿರುವ ಹಾಗೆ ಆಡುತ್ತಿರುವ ವಿಷಯ ಅತನ ಅನ್ವರ್ಥ ನಾಮ ಪಪ್ಪು ಎಂಬುದಕ್ಕೆ ಹೇಳಿ ಮಾಡಿಸಿದಂತಿತ್ತು.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲೂ ಕೊಡೇ ಹಿಡಿದನಂತೆ ಅಥವಾ ಹೊಸದರಲ್ಲಿ ಅಗಸ ಗೋಣಿ ಚೀಲವನ್ನು ಎತ್ತಿ ಎತ್ತೀ ಒಗೆದನಂತೆ ಎನ್ನುವಂತೆ ಅಧಿಕೃತವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಒಂದು ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದು, ಮತ್ತೊಂದು ಕೈಯಲ್ಲಿ ಶಿವನ ಪೋಟೋ ಹಿಡಿದು ಓತ ಪ್ರೋತವಾಗಿ ಮತ್ತು ಅಷ್ಟೇ ಅಸಂವೈಧಾನಿಕವಾಗಿ ಮಾತನಾಡಿ ತಾನೇನೋ ಮಹಾನ್ ಸಾಧನೆ ಗೈದಂತೆ ಪೋಸ್ ಕೊಟ್ಟಿದ್ದಕ್ಕೆ ಮಾರನೇ ದಿನವೇ ನಿರ್ಮಲಾ ಸೀತಾರಾಮನ್, ಅನುರಾಗ್ ಠಾಕೂರ್ ಸಂವಿಧಾನದ ಪುಸ್ತಕದಲ್ಲಿ ಎಷ್ಟು ಪುಟಗಳಿವೆ? ಕುರುಕ್ಷೇತ್ರದಲ್ಲಿ ಅಭಿಮನ್ಯುವಿನನ್ನು ಎಷ್ಟು ಜನರು ಕೊಂದರು? ಅಪ್ಪಾ ಪಾರ್ಸಿ, ಅಮ್ಮಾ ರೋಮನ್ ಕ್ಯಾಥೋಲಿಕ್ ಮಗ ಕೌಲ್ ಬ್ರಾಹ್ಮಣ ಹೇಗಾಗುತ್ತಾನೆ? ಎಂಬ ಪ್ರಶ್ನೆಗಳ ಮೂಲಕ ತಪರಾಕಿ ಹಾಕಿಸಿಕೊಂಡು, ಅಂಡು ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಓಡಾಡುತ್ತಾ, ಕಡೆಗೆ ಸಂಸದ್ ಭವನದಲ್ಲೇ ಗಡದ್ದಾಗಿ ನಿದ್ದೇ ಹೋದ ರಾಗಾನನ್ನು ಎಲ್ಲರೂ ನೋಡಿದ್ದಾರೆ.
ಹೇಗಾದರೂ ಆಗಲೀ ಶತಾಯ ಗತಾಯ ತಾನು ಪ್ರಧಾನ ಮಂತ್ರಿ ಆಗಲೇ ಬೇಕು ಎಂದು ತೀರ್ಮಾನಿಸಿರುವ ರಾಹುಲ್ ಈಗ ಜಾತಿ ಸಮೀಕ್ಷೇಯ ಮಾತುಗಳನ್ನು ಚಾಲ್ತಿಯಲ್ಲಿ ತಂದಿದ್ದಾನೆ. ಇದನ್ನೇ ಗಮನಿಸಿದ ಅನುರಾಗ್ ಠಾಕೂರ್ ಪರೋಕ್ಷವಾಗಿ ತನ್ನ ಜಾತಿಯನ್ನೇ ಅರಿಯದ ನಾಯಕನೊಬ್ಬ ಜಾತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದಿದ್ದರೂ, ರಾಹುಲ್ ಗಾಂಧಿಯ ಜಾತಿಯ ಅಮಲು ಯಾವ ಪರಿಯಾಗಿದೆ ಎಂದರೆ, ತನ್ನನ್ನು ಪ್ರಶ್ನಿಸಿದ ಸಂದರ್ಶಕನಿಗೆ ಸೂಕ್ತವಾದ ಉತ್ತರವನ್ನು ನೀಡಲು ತಡಬಡಾಯಿಸಿ ನಂತರ, ನೀನು ಯಾವ ಜಾತಿಯವನು? ನಿನ್ನ ಛಾನೆಲ್ ಮಾಲಿಕ ಯಾವ ಜಾತಿಯವನು? ಎಂಬೆಲ್ಲಾ ಅಪ್ರಬುದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ತನ್ನ ಬೌದ್ಧಿಕ ದೀವಾಳಿತನವನ್ನು ತೋರಿಸಿದ್ದೂ ಸಹಾ ಎಲ್ಲರೂ ನೋಡಿದ್ದಾರೆ.
ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರ ಜೊತೆ ಬಜೆಟ್ ಮಂಡಿಸಲು ಬಂದ ಸಹಚರರಲ್ಲಿ ಯಾರೂ ಸಹಾ, ಅಲ್ಪಸಂಖ್ಯಾತ, ದಲಿತ, ಬುಡಕಟ್ಟು ಜನಾಂಗದವರು ಇಲ್ಲಾ! ಎಂಬ ಖ್ಯಾತೆ ತೆಗೆದಿದ ಪಪ್ಪು ಈಗ ಅದರ ಮುಂದುವರೆದ ಭಾಗವಾಗಿ, ಮಾಜಿ ಮಿಸ್ ಇಂಡಿಯಾದ ಪಟ್ಟಿಯನ್ನು ಪರಿಶೀಲಿಸಿದ್ದು, ಅದರಲ್ಲಿ ವಿಜೇತರಾದವರಲ್ಲಿ ಯಾರು ದಲಿತ, ಬುಡಕಟ್ಟು ಅಥವಾ ಒಬಿಸಿಯ ಮಹಿಳೆಯರಿಲ್ಲ ದೇಶದ ಜನಸಂಖ್ಯೆಯಲ್ಲಿ ಶೇ. 90 ರಷ್ಟಿರುವ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯದ ಜನರ ಭಾಗವಹಿಸುವಿಕೆ ಇಲ್ಲದೆ ದೇಶ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಬಾಲಿವುಡ್ ನಲ್ಲಿ ಚಮ್ಮಾರ ಅಥವಾ ಪ್ಲಂಬರ್ (ಕೇವಲ ಹಿಂದುಳಿದವರು ಮಾತ್ರಾ ಆಗಿರುತ್ತಾರೆ ಯಾವ ಮುಠ್ಠಾಳ ಹೇಳಿದನೋ ಗೊತ್ತಿಲ್ಲ) ಅನ್ನು ಯಾರೂ ತೋರಿಸುವುದಿಲ್ಲ. ಕ್ರಿಕೆಟ್ಟಿನಲ್ಲಿಯೂ ಸಹಾ ಮೀಸಲಾತಿ ಇಲ್ಲಾ ಎಂಬ ಹೊಸಾ ಹೇಳಿಕೆಯನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಸಂವಿಧಾನ ಸಮ್ಮಾನ್ ಸಮ್ಮೇಳನದಲ್ಲಿ ಸಂದರ್ಭದಲ್ಲಿ ಹೇಳುವ ಮೂಲಕ ಎಲ್ಲರ ಹುಬ್ಬನ್ನು ಏರಿಸುವಂತೆ ಮಾಡಿದ್ದಾರೆ.
ಅದೇ ರೀತಿ ದೇಶದ ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ಮುಂದುವರೆಸಿದ ರಾಗಾ, ಮಾಧ್ಯಮಗಳಲ್ಲಿರುವ ಉನ್ನತ ಸಂದರ್ಶಕರಲ್ಲಿಯೂ ಸಹಾ ದಲಿತ, ಆದಿವಾಸಿ ಮಹಿಳೆಯರು ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಪ್ರಧಾನಿ ಮೋದಿ ಯಾರನ್ನೋ ಅಪ್ಪಿಕೊಂಡು ನಾವು ಸೂಪರ್ ಪವರ್ ಆಗಿದ್ದೇವೆ ಎಂದು ಹೇಗೆ ಹೇಳುತ್ತಾರೆ? ಎಂದು ಹಾರಿ ಹಾಯ್ದಿದ್ದಾರೆ. ಶೇ.50ರಷ್ಟು ಮೀಸಲಾತಿ ಮಿತಿ ರದ್ದುಪಡಿಸಿ, ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸಿ ಅದರ ಆಧಾರದ ಮೇಲೆ ಮೀಸಲಾತಿ ನೀಡ ಬೇಕೆಂದು ಒತ್ತಾಯಿಸುವ ಮೂಲಕ, ಬ್ರಿಟೀಷರು ಭಾರತೀಯರ ಒಗ್ಗಟ್ಟನ್ನು ಮುರಿಯಲು ದಲಿತ, ಬಲಿತ ಎಂದು ಹೂಡಿದ್ದ ತಂತ್ರವನ್ನೇ ರಾಹುಲ್ ಗಾಂಧಿ ನಕಲು ಮಾಡುತ್ತಿರುವುದಲ್ಲದೇ, ನಾನು ಜಾತಿ ಗಣತಿಗೆ ಒತ್ತಾಯಿಸುವ ಮೂಲಕ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬಹಳಷ್ಟು ಖಾಸಗಿ ಸಂಸ್ಥೆಗಳಲ್ಲಿ ಮತ್ತು ಕಾರ್ಪೋರೇಟರ್ ವಲಯದಲ್ಲಿ, ಬಾಲಿವುಡ್, ಮಿಸ್ ಇಂಡಿಯಾ ವಿಜೇತರಲ್ಲಿ ದಲಿತ, ಆದಿವಾಸಿ, ಒಬಿಸಿಯವವರಿಗೆ ಪ್ರಾಧಾನ್ಯತೆ ಇಲ್ಲದೇ ಇರುವುದು ಸತ್ಯವಾದ ಸಂಗತಿಯಾಗಿದ್ದು ಹಾಗಾಗಿ ಇದರ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕೆಂಬ ಕರೆ ನೀಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ನಿಜ ಹೇಳಬೇಕೆಂದರೆ ಅಂಬೇಡ್ಕರ್ ಅವರ ಸಾರಥ್ಯದಲ್ಲಿ ರಚಿಸಲಾದ ಸಂವಿಧಾನ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಲ್ಲೇ ರಚಿತವಾಗಿ, ಸಾವಿರಾರು ವರ್ಷಗಳ ಕಾಲದಿಂದ ಶೋಷಣೆಗೆ ಒಳಗಾಗಿದ್ದರು ಎನ್ನಲಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆನ್ನುವ ಕಾರಣದಿಂದ ಕೇವಲ 10 ವರ್ಷಗಳ ಕಾಲ ಮಾತ್ರಾ ವಿಶೇಷ ಸವಲತ್ತುಗಳ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಸ್ವಾತ್ರಂತ್ಯ್ರ ಬಂದ ಆರಂಭದ ವರ್ಷಗಳಲ್ಲಿ ದೇಶಾದ್ಯಂತ ಕಾಂಗ್ರೇಸ್ ಪಕ್ಷದದ್ದೇ ಪಾರುಪತ್ಯ ಮೆರೆದು ನಂತರ ಪ್ರಾದೇಶಿಕ ಮತ್ತು ಪ್ರಭಲ ವಿರೋಧ ಪಕ್ಷಗಳ ಆಗಮನದಿಂದ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುತ್ತಾ ಬಂದಾಗ, ಇದೇ ರಾಹುಲ್ ಗಾಂಧಿಯ ಅಜ್ಜಿ ಇಂದಿರಾಗಾಂಧಿ ಅಲ್ಪಸಂಖ್ಯಾತರ ಓಲೈಕೆಗಾಗಿ 1976 ರಲ್ಲಿ ಭಾರತದ ಸಂವಿಧಾನದ ನಲವತ್ತೆರಡನೇ ತಿದ್ದುಪಡಿಯೊಂದಿಗೆ, ಸಂವಿಧಾನದ ಪೀಠಿಕೆಯಲ್ಲಿ ಭಾರತವು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದ್ದಲ್ಲದೇ, ಬಲವಂತವಾಗಿ ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ ಎಂಬ ಪದಗಳನ್ನು ಸಂವಿಧಾನದಲ್ಲಿ ಸೇರಿಸಲಾಯಿತು.
ದುರಾದೃಷ್ಟವಷಾತ್, ರಾಹುಲ್ ಗಾಂಧಿಯ ಅಜ್ಜಿಯೇ ಹೇಳಿದ ಜಾತ್ಯಾತೀತ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ, ರಾಹುಲ್ ಗಾಂಧಿ ಸದಾ ಕಾಲವೂ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ಪ್ರತಿಯೊಂದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆ ಎಂಬ ಹೊಸ ವ್ಯಾಖ್ಯಾನವನ್ನು ಮಾಡುವ ಮೂಲಕ ಸಂವಿಧಾನದ ರಕ್ಷಣೆ ಮಾಡುತ್ತಿದ್ದೇವೆ ಎನ್ನುವುದು ನಿಜಕ್ಕೂ ಹಾಸ್ಯಾಸ್ಪದವಲ್ಲದೇ ಮತ್ತಿನ್ನೇನು?
ಎಲ್ಲಾ ಕ್ಷೇತ್ರಗಳಲ್ಲಿ OBC ಯನ್ನು ಸೇರಿಸಲು ರಾಹುಲ್ ಗಾಂಧಿಗೆ ಇಷ್ಟೊಂದು ಆಸಕ್ತಿ ಇದ್ದಿದ್ದಲ್ಲಿ, ಇದುವರೆವಿಗೂ ಕಾಂಗ್ರೇಸ್ ಪಕ್ಷದಿಂದ ದೇಶದ ಪ್ರಧಾನ ಮಂತ್ರಿಗಳಾದವರೆಲ್ಲರೂ ಮುಂದುವರೆದ ಜಾತಿಗೇ ಸೇರಿದವರೇ ಏಕಾಗಬೇಕಿತ್ತು?- ಮಿಸ್ ಇಂಡಿಯಾದಲ್ಲಿ ದಲಿತರು ಬುಡಕಟ್ಟಿನವರು ಏಕಿಲ್ಲಾ? ಎಂದು ಪ್ರಶ್ನಿಸುವ ರಾಹುಲ್ ಅಧಿಕೃತವಾಗಿ ಇನ್ನೂ ಅವಿವಾಹಿತ ಎಂದೇ ಹೇಳಿಕೊಂಡಿರುವ ಕಾರಣ, 40 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ OBC ಮಹಿಳೆಯನ್ನು ಮದುವೆಯಾಗಿ ಆಕೆಗೊಂದು ಜೀವನ ಕೊಡುವ ಮೂಲಕ ಸಮಾನತೆ ತೋರಿಸಲು ಮುಂದಾಗುವುದಿಲ್ಲವೇಕೇ?
- ಪ್ರಸ್ತುತ ವಿರೋಧ ಪಕ್ಷದ ನಾಯಕನ ಸ್ಥಾನ ಮತ್ತು ಭಾವೀ ಪ್ರಧಾನ ಮಂತ್ರಿಯ ಪಟ್ಟವನ್ನು ಬುಡಕಟ್ಟಿನವರಿಗೆ ಮತ್ತು ದಲಿತರಿಗೆ ಏಕೆ ಕೊಡುವುದಿಲ್ಲ?
ಕಾಶ್ಮೀರಕ್ಕೆ ಹೋದರೆ ಶರ್ಟಿನ ಮೇಲೆ ಜನಿವಾರ ಧರಿಸುವ ಕೌಲ್ ಬ್ರಾಹ್ಮಣ, ಕೇರಳದ ವಯನಾಡಿಗೆ ಹೋದರೆ ತೂತು ತೂತು ಟೋಪಿ ಧರಿಸಿದ ಮುಸಲ್ನಾನ, ಗೋವ ಮತ್ತು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದಾಗ ತನ್ನನ್ನು ತಾನು ರೋಮನ್ ಕ್ಯಾಥೋಲಿಕ್ ಎಂದು ಕರೆದುಕೊಳ್ಳುತ್ತಾ, ಸಮಯಕ್ಕೆ ಸರಿಯಾಗಿ ಬಣ್ಣ ಬದಲಿಸುವ ಗೋಸುಂಬೆಯಂತೆ ವರ್ತಿಸುವ ಬದಲು, ಸಾರ್ವಜನಿಕವಾಗಿ ಮತ್ತು ಅಧಿಕೃತವಾಗಿ ಮೊದಲು ತನ್ನ ಅಸಲೀ ಜಾತಿಯನ್ನು ಘೋಷಿಸಿಕೊಂಡು ಮತ್ತೊಂದು ಜಾತಿಯ ಬಗ್ಗೆ ಆಲೋಚಿಸಿದರೆ ಒಳಿತು.
ಕಾಶ್ಮೀರ ಮತ್ತು ಹರ್ಯಾಣ ಚುನಾವಣೆಗಳ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಜಾತಿ, ಧರ್ಮದ ಹೊರತಾಗಿ ಆಭಿವೃದ್ಧಿಯ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತಿರುವ BJP ಯನ್ನು ಮಣಿಸುವ ಸಲುವಾಗಿ FREE FREE FREE ಎಂಬ ಬಹಳ ಸುಲಭವಾದ ಮಾರ್ಗದ ಮೂಲಕ ರಾಜ್ಯ/ದೇಶದ ಮತದಾರರ ದಿಕ್ಕನ್ನು ತಪ್ಪಿಸುತ್ತಾ, ಜಾತಿ ಜಾತಿಗಳಲ್ಲಿ ಒಡಕನ್ನು ತರುತ್ತಾ ಅಧಿಕಾರಕ್ಕೆ ಬರಲು ಹವಣಿಸುತ್ತಿರುವುದು ನಿಜಕ್ಕೂ ಭಯಾನಕವಾಗಿದೆ. ಕಾಶ್ಮೀರದ ಚುನಾವಣೆಗೆ ಕಾಂಗ್ರೇಸ್ ಪಕ್ಷ ಹೊರತಂದಿರುವ ಪ್ರಣಾಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಎಲ್ಲವೂ ಅರ್ಥವಾಗುತ್ತದೆ.
- ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತ (ಕರ್ನಾಟಕದಲ್ಲಿ ಇದು ಸಂಪೂರ್ಣವಾಗಿ ಜಾರಿಗೆಯಾಗಿಲ್ಲ)
- ವರ್ಷಕ್ಕೆ 12 ಅಡುಗೆ ಅನಿಲ ಉಚಿತ
- ಪ್ರತೀ ತಿಂಗಳು ಮಹಿಳೆಯ ಖಾತೆಗೆ ₹5000 (ಕರ್ನಾಟಕದಲ್ಲಿ ತಿಂಗಳಿಗೆ ೨೦೦೦/- ಹಾಕಲು ಸಾಧ್ಯವಾಗುತ್ತಿಲ್ಲ)
- ಯುವಕರಿಗೆ 1 ಲಕ್ಷ ಉದ್ಯೋಗ ಸೃಷ್ಟಿ (ಸೈನಿಕರ ವಿರುದ್ಧ ಕಲ್ಲು ತೂರಾಡುವುದನ್ನೇ ಅಧಿಕೃತ ಗೊಳಿಸುವಂತೆ ಕಾಣುತ್ತಿದೆ)
- ಪದವಿಯವರೆಗೆ ಉಚಿತ ವಿದ್ಯಾಭ್ಯಾಸ (ಇಷ್ಟು ವರ್ಷ ಜಾರಿಗೆ ತರದವರು ಈಗ ಹೇಗೆ ತರುತ್ತಾರೆ ಎಂಬುದಕ್ಕೆ ಸೂಕ್ತವಾದ ಯೋಚನೆ ಇಲ್ಲಾ)
- Article 370, 35(A) ಮತ್ತು ಈ ಹಿಂದೆ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನ ಮಾನ ಪುನರ್ ಜಾರಿ (ಇದು ಅವರ ಸಮಾನತೆಯ ಆಶಯಕ್ಕೆ ವಿರುದ್ಧ ಎನಿಸುತ್ತಿಲ್ಲವೇ)
- ರಾಜಕೀಯ ಕೈದಿಗಳನ್ನು ಬಿಡುಗಡೆ (ದೇಶವಿರೋಧಿಗಳನ್ನು ಸದಾ ಕಾಲವೂ ಸಮರ್ಥಿಸುವ ಕಾಂಗ್ರೇಸ್ ನೀತಿ ಜಗಜ್ಜಾಹೀರಾತು)
ಕಳೆದ ಒಂದು ದಶಕದಲ್ಲಿ ಕೇವಲ ದೇಶದಲ್ಲಷ್ಟೇ ಅಲ್ಲದೇ, ವಿದೇಶದಲ್ಲಿಗಳಲ್ಲಿಯೂ ಭಾರತದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿಹಿಡಿಯುವ ಮೂಲಕ ಭಾರತವನ್ನು ಮತ್ತೊಮ್ಮೆ ವಿಶ್ವಗುರು ಮಾಡಲು ಪ್ರಧಾನ ಮಂತ್ರಿಗಳಾದ ಮೋದಿಯವರು ಶ್ರಮಿಸುತ್ತಿದ್ದರೆ, ಕೇವಲ ಅಧಿಕಾರದ ಆಸೆಗಾಗಿ ಕುಂಬಾರನಿಗೆ ವರ್ಷ, ದೊಣ್ಣೆಗೆ ಒಂದು ನಿಮಿಷ ಎನ್ನುವಂತೆ, ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಮತ್ತೊಮ್ಮೆ ಧರ್ಮ, ಜಾತಿಗಳ ಹೆಸರಿನಲ್ಲಿ ವಿಭಜನೆ ಮಾಡುತ್ತಾ, ವಿವಿಧ ಉಚಿತ ಆಮಿಷಗಳ ಮೂಲಕ ದೇಶದ ಜನರನ್ನು ಸೋಮಾರಿಗಳನ್ನಾಗಿಸಲು ಮುಂದಾಗಿರುವ ರಾಹುಲ್ ಗಾಂಧಿ ಮತ್ತವನ I.N.D.I ಮೈತ್ರಿಕೂಟವನ್ನು ಗಮನಿಸಿದಾಗ, ಇದ್ದದ್ದನ್ನು ಇದ್ದಂತೆ ಹೇಳುವವರು ನಮ್ಮ ಶ್ರೇಯೋಭಿಲಾಷಿಗಳು, ಅದೇ ಬಣ್ಣ ಬಣ್ಣದ ಆಮಿಷಗಳ ಮೂಲಕ ನಯವಾಗಿ ಹೇಳುವವರು ನಯ ವಂಚಕರು ಎಂದು ನಮ್ಮ ಹಿಂದಿನವರು ಹೇಳುತ್ತಿದ್ದದ್ದು ನೆನಪಾಗುತ್ತಿರುವುದು ನನಗೊಬ್ಬನಿಗೇನಾ? ಅಥವಾ ನಿಮಗೂ ಹಾಗೇ ಅನ್ನಿಸ್ತಾ ಇದೆಯಾ?
ಏನಂತೀರೀ?
ನಿಮ್ಮವನೇ ಉಮಾಸುತ