ಹಣ ನೋಡಿದ್ರೇ ಹೆಣಾ ಕೂಡಾ ಬಾಯಿ ಬಿಡುತ್ತದೆ ಎಂಬ ಮಾತಿದೆ. ಅದೇ ರೀತಿಯಲ್ಲಿ ಹಣ ಕೊಡ್ತಾರೇ ಅಂದ್ರೇ ಏನು ಬೇಕಾದರೂ ಮಾಡಿಕೊಡುವವರು ನಮ್ಮ ಸುತ್ತಮುತ್ತಲೇ ಇದ್ದಾರೆ ಅಂದ್ರೇ ನಿಜಕ್ಕೂ ಅಚ್ಚರಿಯಷ್ಟೇ ಅಲ್ಲದೇ ಕೋಪ ಕೂಡಾ ಬರುತ್ತದೆ. ನಮ್ಮ ನೆರೆಯ ರಾಷ್ಟ್ರವಾದ ಬಾಂಗ್ಲಾ ದೇಶ ಮತ್ತು ಬರ್ಮಾದಿಂದ ರೋಹಿಂಗ್ಯಾಗಳು ನಿರಂತವಾಗಿ ಭಾರತಕ್ಕೆ ಬರುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಅವರು ಮುಖಚರ್ಯೆಗಳೂ ಸಹಾ ಭಾರತೀಯರಂತೆಯೇ ಇರುವುದರಿಂದ (ಭಾರತದ ವಿಭಜನೆಗಿಂತಲೂ ಮುಂಚೆ ಅವರೂ ಸಹಾ ಭಾರತದ ಭಾಗವೇ ಆಗಿದ್ದರು) ಅವರನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಾಗದೇ ಇರುವುದೊಂದು ಸಮಸ್ಯೆಯಾದರೆ, ಹಾಗೆ ಅಕ್ರಮವಾಗಿ ವಲಸಿಗರಾಗಿ ಬರುವ ವಿದೇಶಿಗರಿಗೆ ಇಲ್ಲಿ ನಮ್ಮವರೇ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿಕೊಡುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.
ಇದು ಕೇವಲ ಇಂದಿನ ಕಥೆಯಾಗಿರದೇ ಬಹಳ ವರ್ಷಗಳಿಂದಲೂ ನಡೆಯುತ್ತಿದ್ದು ಅನೇಕ ಪೋಲೀಸ್ ಅಧಿಕಾರಿಗಳಿಗೂ ಮತ್ತು ಸರ್ಕಾರಿ ಅಧಿಕಾರಿಗಳಿಗೆ ತಿಳಿದ ವಿಷಯವೇ ಆಗಿದ್ದರೂ, ನಮ್ಮ ರಾಜಕಾರಣಿಗಳ ಒಂದು ಧರ್ಮದವರ ತುಷ್ಟೀಕರಣ ರಾಜಕಾರಣಕ್ಕಾಗಿ ಸುಮ್ಮನಾಗಿರುತ್ತಿರುವುದು ದೇಶದ ಭಧ್ರತೆ ದೃಷ್ಟಿಯಿಂದ ಆಘಾತಕಾರಿಯಾಗಿದೆ. ಇಂತಹದ್ದೇ ಒಂದು ಘಟನೆ ಹಾಸನದ ಡಿಸಿ ಕಛೇರಿಯಲ್ಲೇ ಇರುವ ಆಧಾರ್ ಸಂಸ್ಥೆಯಲ್ಲಿ ನಡೆದಿದ್ದು ವಿಷಯ ತಿಳಿದ ಪೋಲೀಸರು ಧಾಳಿ ನಡಿಸಿ ಅಲ್ಲಿನ ಕಂಪ್ಯೂಟರ್ ಆಪರೇಟರ್ ಅನುಶ್ರೀ ಅವರನ್ನು ಬಂಧಿಸಿ ಹೆಚ್ಚಿನ ರೀತಿಯ ತನಿಖೆಯನ್ನು ನಡೆಸುತ್ತಿದ್ದಾರೆ.
ಕಳೆದ ಎರಡುವರೆ ವರ್ಷದಿಂದ ಹಾಸನದ ಜಿಲ್ಲಾಧಿಕಾರಿ ಕಛೇರಿ ಕಟ್ಟಡದಲ್ಲೇ ಇರುವ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬಾಕೆ ಹಣವನ್ನು ಪಡೆದುಕೊಂಡು ಖಾಸಗೀ ಇಂಟರ್ ಪಾರ್ಲರ್ ಸಹಾಯದಿಂದ ನಕಲಿ ಜನ್ಮದಿನಾಂಕವನ್ನು ಸೃಷ್ಠಿಸಿ, ಆ ದಾಖಲೆಯ ಆಧಾರದ ಮೇಲೇ ಅದನ್ನು ಈಕೆ ಆಧಾರ್ ಗೆ ಲಿಂಕ್ ಮಾಡಿ ಕೊಡುವುದರ ಮೂಲಕ ಅಕ್ರಮ ವಲಸೆಗಾರರನ್ನು ಸಕ್ರಮ ಮಾಡುವ ದೇಶದ್ರೋಹಿ ದಂಧೆಯಲ್ಲಿ ನಿರತರಾಗಿರುವುದು ತಿಳಿದು ಬಂದಿದೆ. ಈ ರೀತಿಯ ದೇಶದ್ರೋಹಿ ಕೆಲಸಕ್ಕೆ ಪ್ರತಿಯೊಬ್ಬರಿಂದ 5 ರಿಂದ 10 ಸಾವಿರದವರೆಗೂ ಹಣ ಪಡೆಯುತ್ತಿದ್ದ ವಿಷಯವನ್ನು ತಿಳಿದ ಅಲ್ಲಿನ ಸಿಬ್ಬಂದ್ಧಿಯೊಬ್ಬರು ಈ ವಿಷಯವನ್ನು ಬೆಂಗಳೂರಿನ ಕೇಂದ್ರ ಕಛೇರಿಗೆ ತಿಳಿಸಿದಾಗ ಬೆಂಗಳೂರಿನ ರೀಜನಲ್ ಅಧಿಕಾರಿ ವಿಜಯಕುಮಾರ್ ಅವರು ಹಾಸನದ ಕಛೇರಿಗೆ ಆಗಮಿಸಿ ಈ ಕುರಿತಾಗಿ ಕೂಲಂಕುಶವಾದ ಪರಿಶೀಲನೆ ಮಾಡಿದಾಗ ಅನುಶ್ರೀ ಐಡಿಯಿಂದ ನಕಲಿ ದಾಖಲೆ ಸೃಷ್ಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕಂಪ್ಯೂಟರ್ ಆಪರೇಟರ್ ಅನುಶ್ರೀ ಮಾಡುತ್ತಿದ್ದ ಈ ಕುಕೃತ್ಯವನ್ನು ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ತಿಳಿಸಿದಾಗ ಅವರು ಆಕೆಯನ್ನು ತಮ್ಮ ಕಛೇರಿಗೆ ಕರೆಯಿಸಿ ವಿಚಾರಿಸಿದಾಗ, ಆರಂಭದಲ್ಲಿ ಆರೋಪವನ್ನು ಒಪ್ಪದಿದ್ದ ಅನುಶ್ರೀ ನಂತರ ಹೆಚ್ಚಿನ ಹಣದ ಆಸೆಗಾಗಿ ಈ ರೀತಿಯ ದೇಶದ್ರೋಹಿ ಕೆಲಸದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾಳೆ. ನಮ್ಮಲ್ಲೇ ನಮ್ಮವರೇ ಈ ರೀತಿಯಾದ ದೇಶದ್ರೋಹಿ ಕೆಲಸದಲ್ಲಿ ಭಾಗಿಯಾಗಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಬೇಸರವನ್ನು ವ್ಯಕ್ತಪಡಿಸಿದ್ದಲ್ಲದೇ, ಪೋಲೀಸ್ ಅಧಿಕಾರಿಗಳನ್ನು ಕರೆಸಿ ಕೂಡಲೇ ಈಕೆ ಮೇಲೆ ದೂರು ದಾಖಲಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಲ್ಲದೇ, ಆಕೆಯ ಎರಡುವರೆ ವರ್ಷದ ಕೆಲಸವಧಿಯ ಎಲ್ಲಾ ದಾಖಲೆಯನ್ನು ಪರಿಶೀಲಿಸುವಂತೆ ಆಜ್ಞೆ ಮಾಡಿದ್ದಾರೆ.
ಬೆಂಗಳೂರಿನಿಂದ ತನಿಖೆಗೆ ಬಂದಿದ್ದ ವಿಜಯಕುಮಾರ್ ಅವರು ಹೇಳಿದ ಪ್ರಕಾರ, ಆಕೆ ನಕಲಿಯಾಗಿ ಸೃಷ್ಟಿಸುತ್ತಿದ್ದ ಬಹುತೇಕ ದಾಖಲೆಗಳಲ್ಲಿ ತಂದೆ ತಾಯಿಯರ ಹೆಸರು ಒಂದೇ ಆಗಿದ್ದು, ಕೇವಲ ಹೆಸರು ಮತ್ತು ಜನ್ಮದಿನಾಂಕವನ್ನು ಬದಲಿಸಿ ಅದರ ಮೂಲಕ ನಕಲಿ ಆಧಾರ್ ಕಾರ್ಡುಗಳನ್ನು ತಯಾರಿಸುತ್ತಿದ್ದದ್ದಲ್ಲದೇ, ಹಾಗೆ ತಯಾರಿಸಿದ ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಉಳಿಸದೇ ಅದನ್ನು ತಕ್ಷಣವೇ ಅಳಿಸಿಬಿಡುತ್ತಿದ್ದ ಕಾರಣ ಯಾರಿಗೂ ಈ ವಿಷಯ ತಿಳಿಯುತ್ತಿರಲಿಲ್ಲ. ಆದರೆ ವಿಜಯ್ ಕುಮಾರ್ ಅವರು ಸೂಕ್ಷ್ಮವಾಗಿ ಮತ್ತು ಅಷ್ಟೇ ಕೂಲಂಕುಶವಾಗಿ ನೋಡಿದಾಗ ಆಕೆ ಅಳಿಸಿ ಹಾಕುತ್ತಿದ್ದ ದಾಖಲೆಗಳು ಕಂಪ್ಯೂಟರಿನ ರಿಸೈಕಲ್ ಬಿನ್ ನಲ್ಲಿ ಹಾಗೇ ಇದ್ದದ್ದನ್ನು ಗಮನಿಸಿ ಎಲ್ಲರ ಗಮನಕ್ಕೆ ತಂದಿದ್ದಾರೆ. ಈಕೆ ಎಷ್ಟು ದಿನಗಳಿಂದ ಎಷ್ಟು ಜನರಿಗೆ ಈ ರೀತಿಯಾದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿದ್ದಾಳೆ ಎಂಬುದರ ಬಗ್ಗೆ ಹೆಚ್ಚಿನ ತನಿಖೆಯನ್ನು ಪೋಲಿಸರು ಮಾಡುತ್ತಿದ್ದಾರೆ. ಈ ರೀತಿಯಾಗಿ ನಕಲಿ ದಾಖಲೆ ಪಡೆದ ಅನೇಕರು ಹಾಸನ, ಸಕಲೇಶಪುರ, ಕೊಡಗು, ಚಿಕ್ಕಮಗಳೂರಿನ ಸುತ್ತಮುತ್ತಲಿರುವ ಕಾಫೀ ಮತ್ತು ಟೀ ಎಸ್ಟೇಟುಗಳಲ್ಲಿ ಅಸ್ಸಾಂ ನಿಂದ ಬಂದ ಭಾರತೀಯರು ಎಂದು ಈ ನಕಲೀ ದಾಖಲೆ ತೋರಿಸಿಕೊಂಡು ಕೂಲಿ ಕೆಲಸಕ್ಕೆ ಸೇರಿಕೊಂಡು ತಮ್ಮ ಜನರದ್ದೇ ದೊಡ್ಡ ಸಂಖ್ಯೆ ಮಾಡಿಕೊಂಡು ಸ್ಥಳೀಯರ ಮೇಲೆ ಧಾಳಿ ನಡೆಸಿದ ಪ್ರಕರಣಗಳು ಇತ್ತೀಚೆಗೆ ಈ ಎಲ್ಲಾ ಕಡೆಯಲ್ಲಿ ಹೆಚ್ಚಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ.
ಇದೇ ರೀತಿ ಅಕ್ರಮ ಬಾಂಗ್ಲಾದೇಶದ ವಲಸಿಗರಿಗೆ ಕೇವಲ 500 ರೂಪಾಯಿಗಳಿಗೆ ಆಧಾರ್ ಕಾರ್ಡ್ ಸೇರಿದಂತೆ ಭಾರತೀಯ ನಾಗರಿಕರೆಂದು ನಿರೂಪಿಸಲು ಸರ್ಕಾರಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಬೃಹತ್ ಜಾಲವನ್ನು ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಕಂಡು ಹಿಡಿದು ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿದಂತೆ ಸುಮಾರು 9 ಜನರನ್ನು ಬಂಧಿಸಿದ್ದರೆ ಸುಮಾರು ಐವರು ಬಾಂಗ್ಲಾ ಪ್ರಜೆಗಳಿಗೆ ಕಾರ್ಯಾಚರಣೆಯ ಸಮಯದಲ್ಲಿ ತಪ್ಪಿಸಿಕೊಂಡಿದ್ದರು. ಬಾಂಗ್ಲಾ ಮೂಲದ ಸೈದುಲ್ ಅಕೂನ್ ಅಲಿಯಾಸ್ ಶಾಹಿದ್ ಅಹಮ್ಮದ್ ಈ ಸರ್ಕಾರಿ ದಾಖಲೆಗಳ ಸೃಷ್ಟಿಯ ಅಕ್ರಮ ಜಾಲದ ಮಾಸ್ಟರ್ ಮೈಂಡ್ ಆಗಿದ್ದು, ಅವನ ಜೊತೆ ಮೊಹಮ್ಮದ್ ಅಬ್ದುಲ್ ಅಲೀಂ ಅಲ್ಲದೇ ಡಿ.ಜೆ.ಹಳ್ಳಿಯ ಸುಹೈಲ್ ಅಹಮ್ಮದ್, ಮೊಹಮ್ಮದ್ ಇದಾಯತ್, ಜೆ.ಪಿ.ನಗರದ ಸೈಯ್ಯದ್ ಮನ್ಸೂರ್, ಇಸ್ತಿಯಾ, ಚಾಮರಾಜಪೇಟೆಯ ಆಯೇಷಾ, ಪಿಳ್ಳಣ್ಣ ಗಾರ್ಡನ್‌ನ ಅಮೀನ್ ಸೇಠ್ ಮುಂತಾದವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರೆಲ್ಲರೂ ತಮ್ಮ ಧರ್ಮದವರೆಂದು ಅವರಿಗೆ ಸಹಾಯ ಮಾಡಿದ್ದನ್ನು ಒಪ್ಪಿಕೊಂಡಿದ್ದರು.
ವಿಚಾರಣೆಯ ಸಮಯದಲ್ಲಿ ಆರೋಪಿಗನ್ನು ತನಿಖೆ ನಡೆಸಿದಾಗ ಅವರ ಬಳಿ ಬೌರಿಂಗ್, ವಾಣಿ ವಿಲಾಸ ಆಸ್ಪತ್ರೆ ಹಾಗೂ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ 5 ನಕಲಿ ಸೀಲ್‌ಗಳು, 26 ಗೆಜೆಟೆಡ್ ಅಧಿಕಾರಿಗಳ ಲೆಟರ್‌ಹೆಡ್, 16 ಮೊಬೈಲ್, 31 ಆಧಾರ್ ಕಾರ್ಡ್, 13 ಪ್ಯಾನ್ ಕಾರ್ಡ್, 28 ಮತದಾರ ಗುರುತಿನ ಪತ್ರ, 5 ಚಾಲನಾ ಪರವಾನಗಿ, 3 ಆಯುಷ್ಮಾನ್ ಕಾರ್ಡ್, 92 ಬಿಬಿಎಂಪಿ ಮೆಡಿಕಲ್ ಆಫೀಸರ್‌ಗಳ ಸೀಲು ಮತ್ತು ಸಹಿ ಇರುವ ಸರ್ಟಿಫಿಕೇಟ್ ಫಾರ್ ಆಧಾರ್ ಎನ್ರೋಲ್‌ಮೆಂಟ್ ಫಾರಂ ಗಳು ದೊರತಿದ್ದು, ಮತಾಂಧತೆಯಿಂದ ಈ ರೀತಿಯಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದದ್ದು ತಿಳಿದು ಬಂದಿದೆ. ಈ ಘಟನೆ ನಡೆದ ಕೆಲವು ದಿನಗಳ ಮುಂಚೆ ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಹಟ್ಟಿಸಮೀಪ ಎಂಟಿಎ ಕೇಂದ್ರದ ಹಣ ಕಳ್ಳತನ ಪ್ರಕರಣದ ತನಿಖೆ ಮಾಡುತ್ತಿದ್ದ ಸಮಯದಲ್ಲಿ ಈ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ಸಿಕ್ಕಿದ್ದು, ಆ ಸುಳಿವಿನ ಅಧಾರದ ಮೇಲೆ ಹೆಚ್ಚಿನ ತನಿಖೆ ನಡೆಸಿದಾಗ ಬಾಂಗ್ಲಾ ಪ್ರಜೆಗಳಿಗೆ ಸರ್ಕಾರಿ ದಾಖಲೆ ಸೃಷ್ಟಿಸುತ್ತಿದ್ದ ಈ ಜಾಲ ಪತ್ತೆಯಾಗಿತ್ತು.
ಅಸ್ಸಾಂ ಮತ್ತು ತ್ರಿಪುರ ರಾಜ್ಯದ ಗಡಿಯಿಂದ ಅಕ್ರಮವಾಗಿ ನಸುಳಿ ಭಾರತ ಪ್ರವೇಶಿಸುತ್ತಿದ್ದ ಈ ಬಾಂಗ್ಲಾ ಪ್ರಜೆಗಳು, ನಂತರ ತಮ್ಮ ಜಾಲದ ಮೂಲಕ ಬೆಂಗಳೂರಿನ ಹೊರವಲಯದಲ್ಲಿ ಬಂದು ಶಾಶ್ವತವಾಗಿ ನೆಲೆಸಿ ಆರಂಭದಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸಂಗ್ರಹ ಮಾಡಿ ಜೀವನ ಸಾಗಿಸುತ್ತಿದ್ದರಲ್ಲದೇ, ಸ್ಥಳೀಯ ನಾಗರಿಕರೆಂದು ನಿರೂಪಿಸುವ ಸಲುವಾಗಿ ಈ ರೀತಿಯ ಅಕ್ರಮದಿಂದ ಆಧಾರ್ ಕಾರ್ಡ್, ಮತದಾರ ಗುರುತಿನ ಪತ್ರ ಸೇರಿದಂತೆ ಸರ್ಕಾರಿ ದಾಖಲೆಗಳನ್ನು ಪಡೆದ ನಂತರ ಕಳ್ಳತನ, ಸುಲಿಗೆಗಳಲ್ಲಿಯೂ ಭಾಗಿಗಳಾಗುತ್ತಿದ್ದರು.
ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಕನ್ನ ಹಾಕಿದ್ದ ದುಷ್ಕರ್ಮಿಗಳು ಅಲ್ಲಿಂದ 18 ಲಕ್ಷ ದೋಚಿದ್ದರ ಕುರಿತಾಗಿ ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಇಸ್ಮಾಯಿಲ್ ಎಂಬಾತನನ್ನು ಬಂಧಿಸಿ ಆತನನ್ನು ಪೋಲೀಸ್ ರೀತಿಯಲ್ಲಿ ವಿಶೇಷ ರೀತಿಯಾಗಿ ವಿಚಾರಣೆ ಮಾಡಿದಾಗ, ಆತ ತಾನು ಬಾಂಗ್ಲಾ ಪ್ರಜೆ ಎಂದು ಒಪ್ಪಿಕೊಂಡಿದ್ದಲ್ಲದೇ ಕಳ್ಳತನ ಮಾಡಿದ 18 ಲಕ್ಷಗಲ ಪೈಕಿ ತನಗೆ ಕೇವಲ 2 ಲಕ್ಷ ಮಾತ್ರ ಸಿಕ್ಕಿದ್ದು ಉಳಿದ ಹಣದ ಸಮೇತ ಉಳಿದವರು ಬಾಂಗ್ಲಾ ದೇಶಕ್ಕೆ ಸೇರಿದ್ದ ಆಘಾತಕಾರಿ ವಿಷಯವನ್ನು ತಿಳಿಸಿದ್ದ. ಈ ರೀತಿಯಾಗಿ ಈ ಆರೋಪಿ ನೀಡಿದ್ದ ಸಂಪರ್ಕ ಜಾಲವನ್ನು ಜಾಲಾಡಿದಾಗ ಬಾಂಗ್ಲಾ ಪ್ರಜೆಗಳಿಗೆ ಸರ್ಕಾರಿ ದಾಖಲೆ ಪೂರೈಸುವ ಪ್ಲಾಸ್ಟಿಕ್ ವ್ಯಾಪಾರಿ ಸೈದುಲ್ ಅಕೂನ್ ತಂಡ ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದರು.
ನಗರದ ಹೊರ ವಲಯದಲ್ಲಿ ಎಸ್‌ಎ ಪ್ಲಾಸ್ಟಿಕ್ಸ್ ಎಂಬ ಹೆಸರಿನ ಸಂಸ್ಥೆಯನ್ನು ಹೊಂದಿರುವ ಸೈದುಲ್, ಈ ಅಕ್ರಮವಾಗಿ ಬೆಂಗಳೂರಿಗೆ ನುಸುಳಿರುವ ಬಾಂಗ್ಲಾ ಪ್ರಜೆಗಳ ಮೂಲಕ ಗುಜರಿ ವಸ್ತುಗಳನ್ನು ಸಂಗ್ರಹಿಸಿ ಅದನ್ನು ವಿಲೇವಾರಿ ನಡೆಸುವ ವ್ಯವಹಾರ ನಡೆಸುತ್ತಿದ್ದದಲ್ಲದೇ, ಆ ಬಾಂಗ್ಲಾ ಪ್ರಜೆಗಳು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಪಾಲನ್ನು ತನ್ನ ಜಾಲದ ಮೂಲಕ ರಹಸ್ಯವಾಗಿ ಬಾಂಗ್ಲಾ ದೇಶದಲ್ಲಿ ಅವರ ಕುಟುಂಬದವರಿಗೆ ತಲುಪಿಸುವ ಕೆಲಸದಲ್ಲೂ ನಿರತನಾಗಿದ್ದ. ಕೇವಲ ಒಂದು ವರ್ಷದ ಅವಧಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಹಣವನ್ನು ಆತ ಬಾಂಗ್ಲಾ ದೇಶದ ನಗಧಿಗೆ ಬದಲಾಯಿಸಿ ವರ್ಗಾವಣೆ ಮಾಡಿರುವುದು ಸಹಾ ತನಿಖಾ ವೇಳೆಯಲ್ಲಿ ಪತ್ತೆಯಾಗಿತ್ತು.
ಈ ರೀತಿಯ ಆಕ್ರಮ ಕೆಲಸಕ್ಕೆ ಸಹಾಯವಾಗಲೆಂದೇ, ಎಸ್‌ಬಿಐ ಮತ್ತು ಆ್ಯಕ್ಸಿಸ್ ಬ್ಯಾಂಕ್‌ಗಳಲ್ಲಿ 13 ಖಾತೆಗಳನ್ನು ಹೊಂದಿದ್ದ ಸೈದುಲ್ ಈ ಖಾತೆಗಳಿಗೆ ಬಾಂಗ್ಲಾ ನಾಗರಿಕರಿಂದ ಹಣವನ್ನು ಜಮೆ ಮಾಡಿಸಿ, ನಂತರ ಕೊಲ್ಕತ್ತಾ, ಚೆನ್ನೈ ಮತ್ತು ಪಂಜಾಬ್‌ಗಳಲ್ಲಿ ನೆಲೆಸಿದ್ದ ತನ್ನ ಪರಿಚಿತರ ಮೂಲಕ ಹಣವನ್ನು ಬಾಂಗ್ಲಾ ಕರೆನ್ಸಿಗೆ ಪರಿವರ್ತನೆ ಮಾಡಿಸಿ, ವ್ಯಾಪಾರದ ಸೋಗಿನಲ್ಲಿ ಬಾಂಗ್ಲಾ ಗಡಿ ಭಾಗಕ್ಕೆ ಆಗ್ಗಾಗ್ಗೇ ಹೋಗಿ ಅಲ್ಲಿನ ಸ್ಥಳೀಯ ವ್ಯಾಪಾರಿಗಳ ಮೂಲಕ ಬಾಂಗ್ಲಾ ಪ್ರಜೆಗಳ ಪರಿವಾರಕ್ಕೆ ಹಣ ಪೂರೈಸುತ್ತಿದ್ದ.
ಇಷ್ಟು ವಿಶಾಲವಾದ ಮತ್ತು ಅನೇಕತೆಯನ್ನು ಹೊಂದಿರುವ ನಮ್ಮ ರಾಷ್ಟ್ರದಲ್ಲಿ ಈ ರೀತಿಯಾಗಿ ಅಕ್ರಮವಾಗಿ ಬಂದಿರುವ ಬಾಂಗ್ಲಾ ಮತ್ತು ರೋಹಿಂಗ್ಯಾ ವಲಸಿಗರನ್ನು ಮತ್ತು ಅವರಿಗೆ ಆಶ್ರಯ ನೀಡಿ ಅವರಿಗೆ ಸಕಲ ರೀತಿಯ ಸಹಕಾರ ನೀಡುತ್ತಿರುವವರನ್ನು ಕಂಡು ಹಿಡಿಯುವುದು ಕೇವಲ ಪೋಲೀಸರ ಕರ್ತವ್ಯವಷ್ಟೇ ಆಗಿರದೇ, ಅದು ಪ್ರತಿಯೊಬ್ಬ ನಿಷ್ಠಾವಂತ ಭಾರತೀಯರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಯಾವುದೇ ಧರ್ಮ, ಜಾತಿ, ಭಾಷೆಗಳನ್ನೂ ನೋಡದೇ, ಸಂಶಯಾಸ್ಪದವಾಗಿ ಕಂಡು ಬಂದ ಅಕ್ರಮ ವಲಸಿಗರು ಮತ್ತು ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಒದಗಿಸುವವರ ಬಗ್ಗೆ ಮಾಹಿತಿಯನ್ನು ಪೋಲಿಸರಿಗೆ ತಿಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗೋಣ.
ಅದೇ ರೀತಿಯಾಗಿ ಈ ವಿಷಯವನ್ನು ತಮಗೆ ತಿಳಿದಿರುವ ಬಂಧು ಮಿತ್ರರಿಗೆ ತಿಳಿಸುವುದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಇದರ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳೋಣ. ಯಾರಿಗೇ ಮನೆಯನ್ನು ಬಾಡಿಗೆ ಕೊಡುವಾಗ ಮತ್ತು ಯಾರನ್ನೇ ಹೊಸದಾಗಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ, ಅಥವಾ ಯಾರೊಂದಿಗೇ ಆಗಲೀ ವ್ಯಾಪಾರ ವಹಿವಾಟುಗಳನ್ನು ನಡೆಸುವಾಗ, ಅವರ ಕುರಿತು ಎಲ್ಲಾ ಮಾಹಿತಿಗಳನ್ನೂ ಕೇಳಿ ಅವರು ನಮ್ಮ ಭಾರತೀಯರೇ ಎಂದು ಖಚಿತವಾದ ನಂತರವಷ್ಟೇ ಅವರೊಂದಿಗೆ ಸಂಬಂಧ ಮುಂದುವರೆಸೋಣ. ಇಂತಹದ್ದಲ್ಲವನ್ನೇ ತಿಳಿದ ಕೇಂದ್ರ ಸರ್ಕಾರ NRC & CAA ಜಾರಿಗೆ ತರುವ ಮೂಲಕ ದೇಶದ ಆಂತರಿಕ ಭಧ್ರತೆಯ ಬಗ್ಗೆ ಮತ್ತು ಅಕ್ರಮ ನುಸುಳಿಕೊರರ ಬಗ್ಗೆ ಎಚ್ಚರಿಕೆ ವಹಿಸಲು ಮುಂದಾದರೆ ದುರಾದೃಷ್ಟವಷಾತ್ ಕೆಲ ಮತಾಂಧರು ಇದರ ವಿರುದ್ಧ ದೇಶಾದ್ಯಂತ ದಂಗೆಗಳನ್ನು ಎಬ್ಬಿಸುವುದರ ವಿರುದ್ಧವೂ ಹೋರಾಡಲೇ ಬೇಕಾದ ಅನಿವಾರ್ಯ ಸಂಧರ್ಭ ನೈಜ ಭಾರತೀಯರಿಗೆ ಬಂದಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯೇ ಆಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ