ಕಳೆದ ಲೇಖನದಲ್ಲಿ ಮಹಿಷ ದಸರಾ ಕುರಿತಾದ ವಿಸ್ತೃತವಾದ ಲೇಖನದಲ್ಲಿ ಹೇಗೆ ವಕ್ಫ್ ಈ ದೇಶದ ಆಸ್ತಿಯನ್ನು ಸದ್ದಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳುತ್ತಿದೆಯೋ ಹಾಗೆಯೇ, ಹಿಂದೂ ದೇವಾಲಯಗಳು ಹಿಂದೂ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಮತಾಂತರಗೊಂಡ ನವ ಬೌದ್ಧರು ಜಾತಿಯ ಹೆಸರಿನಲ್ಲಿ ತಮ್ಮದೇ ಹಸೀ ಸುಳ್ಳುಗಳ ಮೂಲಕ ಒಡೆಯಲು ಸಿದ್ಧರಾಗಿದ್ದಾರೆ ಎಂಬುದನ್ನು ಸವಿವರವಾಗಿ ಬರೆದಿದ್ದೆ. ಅದೇ ರೀತಿ ಸಿದ್ದರಾಮಯ್ಯನವರ ಕಾಂಗ್ರೇಸ್ ಕೂಡಾ ಇದಕ್ಕೆ ಪರೋಕ್ಷವಾಗಿ ಕುಮ್ಮುಕ್ಕು ನೀಡುತ್ತಿರುವ ಕಾರಣದಿಂದಲೇ, ಆವರ ಅಧಿಕಾರ ಇರುವಾಗಲೆಲ್ಲಾ ಮಹಿಷ ದಸರಾ ಎಂಬ ಹೊಸಾ ಅಚರಣೆಗಳನ್ನು ಸ್ವಘೋಷಿತ ಬುದ್ದಿಜೀವಿಗಳು ಆಚರಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕಾರಣ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಬಾರದೆಂದು ಬಹುತೇಕ ಹಿಂದೂಗಳ ಆಶಯವಾಗಿತ್ತು. ದುರಾದೃಷ್ಟವಶಾತ್ ಸಿದ್ದರಾಮಯ್ಯನವರ ಬಲಗೈ ಭಂಟ ಹೆಚ್. ಸಿ. ಮಹದೇವಪ್ಪನವರೇ ಮಹಿಷ ದಸರಾ ಆಚರಣೆಗೆ ಅಡ್ಡಿ ಮಾಡುವುದಿಲ್ಲಾ ಎಂಬ ಹೇಳಿಕೆ ಕೊಟ್ಟ ಮೇಲಂತೂ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಗಿತ್ತು.
ಅಂಬೇಡ್ಕರ್ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದವರನ್ನು ಸಮಾಜದಲ್ಲಿ ಮುನ್ನಲೆಗೆ ತರಬೇಕೆಂಬ ಆಶಯದಿಂದ ಮೀಸಲಾತಿ ತಂದರೇ ಹೊರತು, ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆಯುವುದಾಗಲೀ ಹಿಂದೂಗಳ ಆಚರಣೆಯ ಪದ್ದತಿಯನ್ನು ತೆಗಳಬೇಕೆಂದು ಎಲ್ಲೂ ಹೇಳಿಲ್ಲ. ಮಾತಿಗೆ ಮುಂಚೆ ಅಂಬೇಡ್ಕರ್ ಅವರ ಗುರಾಣಿಯನ್ನು ಹಿಡಿಯುವ ಮತ್ತು ಹಿಂದೂ ಧರ್ಮದ ವಿಚಾರದಲ್ಲಿ ಆಗ್ಗಾಗ್ಗೇ ತನ್ನ ಕೊಳಕು ನಾಲಿಗೆ ಹರಿಬಿಡುತ್ತಾ, ಒಂದಲ್ಲಾ ಒಂದು ಸುದ್ದಿಯಲ್ಲಿರುವ ಕೊಳಕು ನಾಗರಹಾವಿನಂತಹ ಭಗವಾನ್ ಮತ್ತೆ ಮೈಸೂರಿನ ಮಹಿಷ ದಸರಾದಲ್ಲಿ ಶೂದ್ರರು ಎಂದರೆ ಯಾರು? ಹಿಂದೂ ಧರ್ಮ ಎಂದರೆ ಏನು? ಹಿಂದೂಗಳು ಅಂತಾ ಯಾರಿಗೆ ಕರೆಯುತ್ತಾರೆ? ಎಂಬುವ ವಿಷಯವನ್ನು ತನ್ನದೇ ಕೆಟ್ಟ ಕೊಳಕು ಮನಸ್ಥಿತಿಯಲ್ಲಿ ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹಿಂದೂ ಧರ್ಮ ಅಂದರೆ ಅದು ಹಿಂದೂಗಳ ಧರ್ಮವಲ್ಲ, ಅದು ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದುವರೆಯಲು ಬಿಡೋದಿಲ್ಲ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನನ್ನು ಬ್ರಾಹ್ಮಣರು ಅನ್ನಲ್ಲ ಅವರನ್ನು ಶೂದ್ರರು ಎನ್ನುತ್ತಾರೆ. ಜ್ಞಾನದ ಹಸಿವಿಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ ಎಂದು ಓತಪ್ರೋತವಾಗಿ ಹೇಳುವ ಮೂಲಕ ಮತ್ತೊಮ್ಮೆ ತಮ್ಮ ಬೌದ್ಧಿಕ ದೀವಾಳಿತನವನ್ನು ಜಗಜ್ಜಾಹೀರಾತು ಮಾಡಿದ್ದಾರೆ. ಉಳಿದ ಧರ್ಮಗಳಲ್ಲಿ ಹೆಣ್ಣುಗಳನ್ನು ಭೋಗದ ವಸ್ತು, ಮಕ್ಕಳನ್ನು ಹೆರುವ ಯಂತ್ರ ಎಂದು ಭಾವಿಸಿರುವಾಗ, ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ| ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ||ಎಂಬ ಶ್ಲೋಕ ಹಿಂದೂ ಧರ್ಮದಲ್ಲಿ ಪ್ರಚಲಿತದಲ್ಲಿದೆ.ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೈವತ್ವವು ಅರಳುತ್ತದೆ ಮತ್ತು ಎಲ್ಲಿ ಮಹಿಳೆಯರನ್ನು ಅವಮಾನಿಸಲಾಗುತ್ತದೆಯೂ ಅಲ್ಲಿ ಯಾವ ಕ್ರಿಯೆಗಳೂ ಫಲಪ್ರದವಾಗುವುದಿಲ್ಲ ಎಂದು ಹೆಣ್ಣು ಮಕ್ಕಳನ್ನು ಬಹಳ ಗೌರವಯುತವಾಗಿ ಮತ್ತು ತಾಯಿ, ಸಹೋದರಿಯ ರೂಪದಲ್ಲಿ ಕಾಣುವಂತಹ ಏಕೈಕ ಧರ್ಮವೆಂದರೆ ಅದು ಹಿಂದೂ ಧರ್ಮ ಎಂಬುದು ಗೊತ್ತಿದ್ದರೂ ಭಗವಾನ್ ಮಾತುಗಳನ್ನು ನಂಬಲು ಸಾಧ್ಯವೇ?
ದೇವಸ್ಥಾನ ಕಟ್ಟುವವರು ಶೂದ್ರರು. ದೇವಸ್ಥಾನದ ಒಳಗೆ ಇರುವವರು ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಒಳಗೆ ಬಿಟ್ಟುಕೊಳ್ಳುವುದಿಲ್ಲ ಹಾಗಾಗಿ ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಮತ್ತು ನಾವು ಶೂದ್ರರಲ್ಲ ಎಂದು ಹೇಳಬೇಕು ಎಂಬ ಮಾತನ್ನಾಡಿದ್ದಾರೆ. ಸರಿ ನೀವು ಶೂದ್ರರಲ್ಲಾ ಎಂದ ಮೇಲೆ ನಿಮಗೆ ಸಿಗುವ ಮೀಸಲಾತಿ ಸೌಲಭ್ಯಗಳನ್ನೂ ತೆಗೆದುಕೊಳ್ಳಬಾರದು ಎಂದು ಕೇಳಿದರೆ ಅದಕ್ಕೆ ಮಾತ್ರಾ ಜಾಣ ಮೌನಕ್ಕೆ ಜಾರುತ್ತಾರೆ. ಸ್ವಾತ್ರಂತ್ರ್ಯ ಬಂದ ನಂತರ ಬಹುತೇಕ ಹಿಂದೂ ದೇವಾಲಯಗಳಲ್ಲಿ ಇಲ್ಲಿ ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲರಿಗೂ ದರ್ಶನದ ಅವಕಾಶವಿದೆ ಎಂಬ ಬೋರ್ಡುಗಳನ್ನು ಸ್ಪಷ್ಟವಾಗಿ ಹಾಕಿರುವುದಲ್ಲದೇ, ಯಾವುದೇ ಜನಾಂಗ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ಭಕ್ತಾದಿಗಳಿಗೂ ಹಿಂದೂ ದೇವರ ದರ್ಶನದ ಅವಕಾಶ ಇರುವ ಮತ್ತು ಸಹ ಪಂಕ್ತಿ ಭೋಜನದ ವ್ಯವಸ್ಥೆ ಇರುವಂತಹ ಇಂದಿನ ಕಾಲದಲ್ಲೂ ಭಗವಾನ್ ನಂತಹವರು, ನಾನು 50 ವರ್ಷಗಳಿಂದಲೂ ದೇವಸ್ಥಾನಕ್ಕೆ ಹೋಗಿಲ್ಲ. ದೇವಸ್ಥಾನಕ್ಕೆ ಹೋಗುವುದರಿಂದ ಏನು ಆಗುವುದಿಲ್ಲ. ತಟ್ಟೆಗೆ ದುಡ್ಡು ಹಾಕುತ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ ಅಷ್ಟೇ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು ಎಂದಿದ್ದಾರೆ. ಇದೇ ಲಜ್ಜೆಗೆಟ್ಟ ಸರ್ಕಾರ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲಿ ಹುಂಡಿಯಲ್ಲಿ ಹಾಕಿದ ಕಾಸು ದೇವರಿಗೆ, ತಟ್ಟೆಗೆ ಹಾಕಿದ ಕಾಸು ಅರ್ಚಕರಿಗೆ ಎಂದು ಹಿಂದೂಗಳನ್ನು ಮರುಳು ಮಾಡಿ ಹುಂಡಿ ತುಂಬಿಸಿಕೊಂಡು ಅದೇ ಹಣದಲ್ಲಿ ಮಸೀದಿ, ಚರ್ಚ್ಗಳನ್ನು ನಿರ್ಮಾಣ ಮಾಡಲು ಮತ್ತು ಅಲ್ಲಿನ ಮೌಲ್ವಿಗಳು ಮತ್ತು ಪಾದ್ರಿಗಳಿಗೆ ಹಣ ಕೊಡುತ್ತಿರುವ ಸಂಗತಿ ಭಗವಾನ್ ನಂತಹ ಗೋಸುಂಬೆಗಳಿಗೆ ಚೆನ್ನಾಗಿ ಅರಿವಿದ್ದರೂ ತನ್ನ ಕೆಟ್ಟ ನಾಲಿಗೆಯನ್ನು ಹರಿಬಿಡುವುದು ಅಸಹ್ಯಕರವೇ ಸರಿ
ಎಲ್ಲರೂ ಬೌದ್ಧ ಗುರುಗಳನ್ನು ನಂಬಿ ಮತ್ತು ನಾನು ಹೇಳಿದ್ದನ್ನು ಮಾತ್ರಾ ನಂಬಿ ಎಂದು ಬುದ್ಧ ಎಂದೂ ಹೇಳಿಲ್ಲ ಎಂದು ಹೇಳುವ ಇದೇ ಭಗವಾನ್ ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಿಲ್ಲ. ಯಾರು ಹೀನನಾಗಿದ್ದಾನೆಯೋ ಅವನು ಹಿಂದೂ. ಹಿಂದೂ ಎಂದರೆ ಹೀನಾ ಎಂದು ಅರ್ಥ. ಯಾರು ಹಿಂದೂ ಆಗಬಾರದೆಂದು ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು ಎಂದು ಹೇಳುತ್ತಾರೆ. ಇದೊಂದೇ ಹೇಳಿಕೆಯಿಂದಲೇ ಭಗವಾನ್ ಎಂತಹ ತಿಕ್ಕಲು ಮನುಷ್ಯ ಎಂಬುದು ತಿಳಿಯುತ್ತದೆ, ಬುದ್ಧನೇ ತನ್ನನ್ನು ಮಾತ್ರಾ ನಂಬಿ ಎಂದು ಹೇಳಿಲ್ಲಾ ಎಂದು ಹೇಳುವವರೇ, ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ, ಪರೋಕ್ಷವಾಗಿ ಬೌಧ್ದ ಧರ್ಮಕ್ಕೆ ಅನುಯಾಯಿಗಳಾಗಬೇಕು ಎನ್ನುತ್ತಾರೆ. ಅಚ್ಚರಿಯ ವಿಷಯವೇನೆಂದರೆ ಈ ರೀತಿಯಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುವವರೆಲ್ಲಾ ಜನ್ಮತಃ ಹಿಂದೂಗಳೇ ಆಗಿದ್ದು, ಯಾರೋ ಹಾಕುವ ಎಂಜಲು ಕಾಸಿನ ಆಸೆಗಾಗಿ ತಮ್ಮ ಬೌದ್ಧಧರ್ಮಕ್ಕೆ ಮತಾಂತರ ಆಗಿರುತ್ತಾರೆ. ಹಾಗೆ ಬೌದ್ಧ ಧರ್ಮಕ್ಕೆ ಮತಾಂತವಾದರೂ, ತಮ್ಮ ಜನ್ಮತಃ ದೊರತ ಮೀಸಲಾತಿಯನ್ನು ಮಾತ್ರಾ ಬಿಡದೇ ಇರುವುದು ಮಾತ್ರಾ ಹಾಸ್ಯಾಸ್ಪದ ಎನಿಸುತ್ತದೆ ಅಲ್ಲವೇ?
ಇನ್ನು ಮಹಿಷ ದಸರಾ ವಿಚಾರವಾಗಿ ಪರ-ವಿರೋಧದ ಅಭಿಪ್ರಾಯಗಳು ಹಾಗೂ ಹೋರಾಟದ ಎಚ್ಚರಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು ಮತ್ತು ಯಾರೂ ಸಹಾ ಚಾಮುಂಡಿ ಬೆಟ್ಟದ ಮೇಲಿರುವ ಮಹಿಷಾಸುರನ ಪ್ರತಿಮೆಗೆ ಮಾಲಾರ್ಪಣೆ ಮಾಡುವುದನ್ನು ನಿಷೇಧಿಸಲಾಗಿತ್ತಾದರೂ, ನೀ ಹೊಡೆದ ಹಾಗೆ ಮಾಡು ನಾನು ಅತ್ತ ಹಾಗೆ ಮಾಡುತ್ತೇನೆ ಎನ್ನುವಂತೆ ಮಹಿಷ ದಸರಾ ಆಚರಣಾ ಸಮಿತಿಯವರು ಪುರಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದನ್ನೇ ಮುಂದು ಮಾಡಿಕೊಂಡು ಮೈಸೂರಿನಲ್ಲೇ ಇದ್ದ ಮುಖ್ಯಮಂತ್ರಿಗಳ ಬಳಿಗೆ ಸಮಿತಿಯ ಪದಾಧಿಕಾರಿಗಳನ್ನು ಪೊಲೀಸರೇ ಕರೆದುಕೊಂಡು ಹೋಗಿ ಜಿಲ್ಲಾಡಳಿತದ ಅನುಮತಿಯನ್ನು ಕೊಡಿಸಿ ರಾತ್ರಿ 8.30ರ ಹೊತ್ತಿನಲ್ಲಿ ಮಾಜೀ ಮೇಯರ್ ಮತ್ತು ಮಹಿಷ ದಸರಾ ಆಚರಣಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್, ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮತ್ತು ದಲಿತ ಮುಖಂಡ ಕಲ್ಲಹಳ್ಳಿ ಕುಮಾರ್ ಚಾಮುಂಡಿಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆಗೆ ಸದ್ದಿಲ್ಲದೇ ಪುಷ್ಪಾರ್ಚನೆ ನೆರವೇರಿಸಿ ಪೋಲೀಸರೇ ನಿಷೇಧಾಜ್ಞೆಯನ್ನು ಮುರಿದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದ್ದು ನಂತರ ಅಂತಹ ಘಟನೆಯೇ ನಡೆದಿಲ್ಲಾ ಎಂದು ಹೇಳಿರುವುದು ಈ ಸರ್ಕಾರದ ಇಬ್ಬಂದಿ ತನವನ್ನು ತೋರಿಸುವುದಲ್ಲದೇ, ಈ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಳಿಗೆ ಬೆಲೆಯೇ ಇಲ್ಲಾ ಎಂಬುದು ಸಾಭೀತಾಗಿದೆ.
ಈ ರೀತಿಯಾಗಿ ನಗರದ ಪುರಭವನ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯಿಂದ ಮಹಿಷ ಮಂಡಲೋತ್ಸವ (ಮಹಿಷ ದಸರಾ) ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದಲ್ಲದೇ, ಅಲ್ಲಿ ಮಾತನಾಡಿದ ಎಲ್ಲರೂ ಸಮಾಜದಲ್ಲಿ ಸ್ವಾಸ್ತ್ಯವನ್ನು ಕೆಡೆಸುವಂತಹ ಮಾತುಗಳನ್ನೇ ಆಡಿದರೂ, ಕಾಂಗ್ರಸ್ನ ಮಾಜಿ ಮೇಯರ್ ಪುರುಶೋತ್ತಮ್ ಮಾತ್ರಾ ತಮ್ಮ ಭಾಷಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದ್ದರೂ ಸರ್ಕಾರ ಅವಕಾಶ ಮಾಡಿಕೊಡದೇ ಇದ್ದ ಕಾರಣ, ನಮ್ಮ ಭಾವನೆಗಳಿಗೆ ಧಕ್ಕೆಯಾಗಿರುವ ಕಾರಣ, ನಾಡ ದಸರಾ ಉತ್ಸವವನ್ನು ನೀವು ಯಾವ ರೀತಿ ಆಚರಿಸುತ್ತಿರೋ ನೋಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ನೇರವಾಗಿ ಸವಾಲು ಹಾಕುವ ಮೂಲಕ ಈ ಬಾರಿಯ ನಾಡಹಬ್ಬ ದಸರಾ ಉತ್ಸವಕ್ಕೆ ಅಡ್ಡಿ ಪಡಿಸಲಾಗುವುದು ಎಂದು ಬಹಿರಂಗವಾಗಿ ಬೆದರಿಕೆ ಹಾಕುವ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚುವ ಇಂತಹವರನ್ನು ಸ್ವಪಕ್ಷೀಯ ಎನ್ನುವ ಕಾರಣದಿಂದ 48 ಗಂಟೆಗಳಾದರೂ ಈ ಸರ್ಕಾರ ಅವರ ವಿರುದ್ಧ ಯಾವುದೇ ರೀತಿಯ ಕಾರ್ಯಾವರಣೆಯನ್ನೂ ಮಾಡಿಲ್ಲ ಎಂದರೆ ಈ ಸರ್ಕಾರ ಎಂತಹ ದುರ್ಬಲ ಸರ್ಕಾರ ಮತ್ತು ನಿಸ್ಸಂದೇಹವಾಗಿಯೂ ಇದು ಹಿಂದೂ ವಿರೋಧಿ ಸರ್ಕಾರ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಧರ್ಮೋ ರಕ್ಷತಿ ರಕ್ಷಿತಃ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ ಎನ್ನುತ್ತದೆ ನಮ್ಮ ಸನಾತನ ಧರ್ಮ. ಅದೇ ರೀತಿ ವಸುದೈವ ಕುಟುಂಬಕಂ ಎನ್ನುವ ಮೂಲಕ ಇಡೀ ವಿಶ್ವವೇ ಒಂದು ಕುಟುಂಬ ಇಲ್ಲಿ ಸರ್ವೇ ಜನಾಃ ಸುಖಿನೋ ಭವಂತು. ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದೇ ಹೇಳುವುದಲ್ಲದೇ, ವಿವಿಧತೆಯಲ್ಲೂ ಏಕತೆಯನ್ನು ಹೊಂದಿರುವ ನಮ್ಮ ಈ ಹಿಂದೂಸ್ಥಾನದಲ್ಲಿ ತಮ್ಮ ರಾಜಕೀಯ ವಿರೋಧಾಭಾಸಕ್ಕಾಗಿ ಮತ್ತು ಅಧಿಕಾರ ಮತ್ತು ಸವಲತ್ತುಗಳ ಆಸೆಗಾಗಿ ಹಿಂದೂಗಳನ್ನೇ ಹಿಂದುಳಿದವರು, ದಲಿತರು, ಶೂದ್ರರು ಎಂದು ವಿಭಜಿಸಿ ಅವರನ್ನು ಎತ್ತಿ ಕಟ್ಟುವ ಮೂಲಕ ಅಂದು ಬ್ರಿಟೀಷರು ಈ ದೇಶವನ್ನು ವಿಭಜನೆ ಮಾಡಿದಂತೆಯೇ ಇಂದು ಈ ಮಹಿಷ ದಸರಾ ಸಮಿತಿಯವರ ಮೂಲಕ ಕಾಂಗ್ರೇಸ್ ಪಕ್ಷ ಮಾಡಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ