ಇದೇ 2024ರ ಅಕ್ಟೋಬರ್ 7 ಹಾಗೂ 8 ರಂದು ವಿಜಯಪುರ ಜಿಲ್ಲೆಗೆ ಪ್ರವಾಸದ ನೆಪದಲ್ಲಿ ಬಂದ ಕರ್ನಾಟಕದ ರಾಜ್ಯ ಸರ್ಕಾರದ ವಸತಿ, ವಕ್ಫ್ (Waqf) ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್, ವಕ್ಫ್ ಅದಾಲತ್ ನಡೆಸಿ ವಕ್ಫ್ ಆಸ್ತಿಗಳ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದಲ್ಲದೇ, ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಕ್ಫ್ ಆಸ್ತಿಗಳ ಖಾತಾ ಆಗದೇ ಇರುವ ಎಲ್ಲಾ ಆಸ್ತಿಗಳ ಖಾತೆಗಳನ್ನು ಮುಂದಿನ 30 ದಿನಗಳಲ್ಲಿ ಮಾಡಬೇಕೆಂದು ಸೂಚನೆಯನ್ನು ಅಲ್ಲಿನ ಅಧಿಕಾರಿಗಳಿಗೆ ನೀಡಿರುವುದೇ ವಿಜಾಪುರ ಸುತ್ತ ಮುತ್ತಲಿನ ಸುಮಾರು 15 ಸಾವಿರ ಎಕರೆಯ ಜಮೀನಿನಲ್ಲಿ ತಲೆ ತಲಾಂತರಗಳಿಂದಲೂ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಸಹಸ್ರಾರು ರೈತರಿಗೆ ಆತಂಕಕ್ಕೀಡಾಗಿದ್ದಾರೆ.
ಕಾಂಗ್ರೇಸ್ ಸರ್ಕಾರ ಮತ್ತು ಮಂತ್ರಿಗಳ ಕೃಪಾಶೀರ್ವಾದವೇ ಇರುವುದರಿಂದ ವಕ್ಫ್ ಮಂಡಳಿ ಕೂಡಲೇ. ತಾಳಿಕೋಟೆ, ತಿಕೋಟ, ಹೊನವಾಡ, ಬಬಲೇಶ್ವರ, ದೇವರಹಿಪ್ಪರಗಿ, ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ರೈತರಿಗೆ ನಿಮ್ಮ ಜಮೀನೆಲ್ಲವೂ ವಕ್ಫ್ ಆಸ್ತಿಯಾಗಿದ್ದು, ಕಾಲಂ ನಂಬರ್ 11 ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ಗೆ ಸೇರಿಸಲಾಗುತ್ತಿದೆ ಎಂಬ ನೋಟಿಸ್ ನೀಡಿರುವ ಕಾರಣ 1920ರಿಂದಲೂ ತಮ್ಮ ಭೂಮಿಯ ಎಲ್ಲಾ ದಾಖಲೆಗಳು ಇದ್ದರೂ ಸಹಾ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸಹಜವಾಗಿ ವಕ್ಫ್ ಮತ್ತು ಸಚಿವ ಜಮೀರ್ ಅಹ್ಮದ್ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ ಹೆಚ್ಚಾಗಿದ್ದು, ಆದೇಶದ ವಿರುದ್ಧ ಜಿಲ್ಲೆಯ ರೈತ ಸಂಘಟನೆಗಳಾದ ಕರ್ನಾಟಕ ಹಸಿರು ಸೇನೆ, ರಾಜ್ಯ ರೈತ ಸಂಘದ ಜೊತೆ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಸಹಾ ಸೇರಿಕೊಂಡು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಮುಂದಾಗಿರುವುದು ಗಮನಾರ್ಹವಾಗಿದೆ.
ಭೂಮಿ ಕಳೆದುಕೊಳ್ಳುತ್ತಿರುವ ರೈತರ ಪರ ಜಿಲ್ಲೆಯ ರೈತ ಸಂಘಟನೆಗಳು ಜಿಲ್ಲಾಧಿಕಾರಿ ಟಿ ಭೂಬಾಲನ್ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿದ್ದಲ್ಲದೇ, ರೈತರ ಹೋರಾಟಕ್ಕೆ ಕಾಂಗ್ರೇಸ್ ಪಕ್ಷದ ಹೊರತಾಗಿ ಪಕ್ಷಾತೀತವಾಗಿ ಉಳಿದೆಲ್ಲಾ ಸಂಘಟನೆಗಳು ಸೇರಿಕೊಂಡು ಹೋರಾಟದ ಕಾವು ಜೋರಾಗುತ್ತಿದಂತೇಯೇ ವಕ್ಫ್ ನೀಡಿರುವ ನೋಟಿಸ್ ನಿಂದ ರೈತರು ಆತಂಕ ಪಡಬೇಕಿಲ್ಲ. ನಿಮ್ಮ ಬಳಿ ಜಮೀನು ಸಂಬಂಧಿಸಿದಂತ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇರುವಾಗ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲಾ. ನಿಮ್ಮ ಬಳಿ ಇರುವ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲನೆ ಮಾಡಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಾಂತ್ವನ ನೀಡಿರುವುದು ರೈತರ ಪಾಲಿಗೆ ಮರುಭೂಮಿಯಲ್ಲಿ ನೀರು ಸಿಕ್ಕಂತಾಗಿದೆ. ವಕ್ಫ್ ಮಂಡಳಿಯ ಈ ರೀತಿಯ ಆಟಾಟೋಪ ಕೇವಲ ವಿಜಾಪುರಕ್ಕೆ ಮಾತ್ರವೇ ಮೀಸಲಾಗಿರದೇ, ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿಯೂ ಇದೇ ರೀತಿಯಾದ ಹುಚ್ಚಾಟವನ್ನು ನಡೆಸಲು ಮುಂದಾಗಿರುವ ವಿಷಯ ನಿಧಾನವಾಗಿ ತಿಳಿದು ಬರುತ್ತಿರುವುದು ದೇಶಾದ್ಯಂತ ಆತಂಕವನ್ನುಂಟು ಮಾಡಿದೆ.
ಹಾಗೆ ನೋಡಿದರೆ, 1947ರಲ್ಲಿ ಬ್ರಿಟೀಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಧರ್ಮಾಧಾರಿತವಾಗಿ ಮೂರು ಭಾಗಗಳನ್ನಾಗಿ ತುಂಡರಿಸಿ ಭಾರತಕ್ಕೆ ಎರಡೂ ಬದಿಯಲ್ಲಿ ಮಗ್ಗಲ ಮುಳ್ಳಾಗಿ ಪೂರ್ವ ಮತ್ತು ಪಶ್ಚಿಮ ಪಾಕೀಸ್ಥಾನಕ್ಕೆ ಕಾರಣೀಭೂತರಾದರು. ಅಂದು ಪಾಕೀಸ್ಥಾನ ಉಗಮಕ್ಕೆ ಕಾರಣೀಭೂತನಾಗಿದ್ದ ಜಿನ್ನಾ ಬಹಿರಂಗವಾಗಿಯೇ ಹಸ್ತೇ ಹಸ್ತೇ ಲಿಯೇ ಪಾಕಿಸ್ತಾನ್, ಲಡ್ತೇ ಲಡ್ತೇ ಲೇಂಗೇ ಹಿಂದೂಸ್ತಾನ್ ಎಂದು ಹೇಳಿದ್ದನ್ನು ಶಿರಸಾ ಪಾಲಿಸಲು ಸ್ವತ್ರಂತ್ರ ಭಾರತದ ಮೊದಲ ಪ್ರಧಾನಿ ನೆಹರು ಮತ್ತು ಅವರ ನಂತರ ಆಳ್ವಿಕೆ ಮಾಡಿದ ಕಾಂಗ್ರೇಸ್ ಪ್ರಧಾನ ಮಂತ್ರಿಗಳ ಮುಸಲ್ಮಾನರ ಓಲೈಕೆಯ ಪಾಪದ ಕೂಸೇ ಈ ವಕ್ಫ್ ಕಾಯ್ದೆ ಎಂದರೂ ತಪ್ಪಾಗದು.
ದೇಶ ವಿಭಜನೆಯಾದಾಗ ಭಾರತದ ಅನೇಕ ಮುಸಲ್ಮಾನರು ಪಾಕೀಸ್ತಾನಕ್ಕೆ ಹೋದಾಗ ಅವರ ಇಲ್ಲಿನ ಆಸ್ತಿ ಪಾಸ್ತಿಗಳು ಅನ್ಯರ ಪಾಲಾಗಬಾರದೆಂಬ ಆಶಯದಿಂದ 1954ರಲ್ಲಿ ಮೊದಲ ಬಾರಿಗೆ ನೆಹರು ಅವರ ನೇತೃತ್ವದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತರಲಾಯಿತು. ನಂತರದ ದಿನಗಳಲ್ಲಿ ಕೆಲವು ಶ್ರೀಮಂತ ಮುಸಲ್ಮಾನರು ತಮ್ಮ ಆಸ್ತಿಯನ್ನು ಈ ವಕ್ಫ್ ಬೋರ್ಡಿಗೆ ದಾನ ನೀಡುವ ಮೂಲಕ ಅದರಿಂದ ಬರುವ ಆದಾಯದಿಂದ ಬಡ ಮತ್ತು ನಿರ್ಗತಿಕ ಮುಸಲ್ಮಾನರಿಗೆ ಆರ್ಥಿಕ ನೆರವನ್ನು ನೀಡುವುದದರ ಜೊತೆಗೆ ಅವರ ಶಿಕ್ಷಣ, ಆರೋಗ್ಯ,ಕ್ಕಾಗಿ ಆಸ್ಪತೆಗಳ ನಿರ್ಮಾಣ ಇಲ್ಲವೇ ದುರಸ್ತಿ, ಮಸೀದಿಗಳ ನಿರ್ವಹಣೆ ಇಲ್ಲವೇ ನಿರ್ಮಾಣದಂತಹ ಕೆಲಸಗಳಿಗೆ ಉಪಯೋಗಿಸಿಕೊಳ್ಳಬೇಕೆಂಬ ಉದ್ದೇಶವಿತ್ತು. ಇಸ್ಲಾಂ ಪ್ರಕಾರ ವಾಕಿಫ್ ಅಂದರೆ ದೇವರ ಕಾರ್ಯಕ್ಕಾಗಿ ಗುರುತಿಸಲ್ಪಟ್ಟ ಯಾವುದೇ ಉದ್ದೇಶಕ್ಕಾಗಿ ತನ್ನ ಸಂಪತ್ತನ್ನು ಅರ್ಪಿಸುವ ವ್ಯಕ್ತಿ ಎಂದು ಅರ್ಥವಾಗಿತ್ತು. ಆದರೆ ದುರಾದೃಷ್ಟವಷಾತ್ ಈ ಆಶಯಗಳೆಲ್ಲವೂ ಮೂಲೆ ಗುಂಪಾಗಿ ವಕ್ಫ್ ಆಸ್ತಿಗಳೆಲ್ಲವೂ ಪ್ರಭಾರಿಗಳ ಪಾಲಾಗಿ ಹೋಗಿದ್ದಲ್ಲದೇ ವಕ್ಫ್ ಒಂದು ರೀತಿಯ ರಿಯಲ್ ಎಸ್ಟೇಟ್ ದಂಧೆಯಾಗಿ ಹೋಗಿದ್ದು ದುರಾದೃಷ್ಟಕರ.
1990ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಕುರಿತಾಗಿ ವಿಶ್ವ ಹಿಂದು ಪರಿಷತ್ತು ಮತ್ತು ಬಿಜೆಪಿಯ ಅಂದಿದ ಅಧ್ಯಕ್ಷರಾಗಿದ್ದ ಲಾಲ ಕೃಷ್ಣ ಅಡ್ವಾನಿಯವರ ನೇತೃತ್ವದಲ್ಲಿ ಕರಸೇವೆ ನಡೆದಾಗ ಮುಲಯಂ ಸಿಂಗ್ ಅವರ ಹುಚ್ಚುತನದಿಂದಾಗಿ ಕರಸೇವಕರ ಮೇಲೆ ಗೋಲಿ ಬಾರ್ ನಡೆದು ಹಿಂದೂಗಳನ್ನು ಕೆರಳಿಸಿದ ಪರಿಣಾಮ ಮುಂದಿನ ಮುಂದಿನ ಕರಸೇವೆಯ ಸಮಯದಲ್ಲಿ ಬಾಬರಿ ಮಸೀದಿ ನೆಲ ಸಮ ಮಾಡಿದ್ದರ ಹಿಂದೆ ಅಂದಿನ ಪ್ರಧಾನಿಗಳಾಗಿದ್ದ ನರಸಿಂಹ ರಾವ್ ಅವರ ಪರೋಕ್ಷ ನೆರವಿತ್ತು ಎಂದು ಮುಸಲ್ಮಾನರು ಬೇಸರಿಸಿಕೊಂಡ ಪರಿಣಾಮ ಮುಸಲ್ಮಾನರನ್ನು ಓಲೈಸಿಕೊಳ್ಳುವ ಸಲುವಾಗಿ 1995ರಲ್ಲಿ ನರಸಿಂಹ ರಾವ್ ಅವರು ವಕ್ಫ್ ಮಂಡಳಿಗೆ ದಾನ ಮಾಡಲಾದ ಔಕಾಫ್ ಆಸ್ತಿಗಳ ಕುರಿತಾಗಿ ಹಿಂದಿದ್ದ ಎಲ್ಲಾ ನಿಯಮಗಳನ್ನೂ ಗಾಳಿಗೆ ವಕ್ಫ್ ಮಂಡಲಿಗೆ ಅನೇಕ ವಿಶೇಷ ಅಧಿಕಾರಗಳನ್ನು ನೀಡಿರುವುದೇ ಈಗಿನ ಸಮಸ್ಯೆಗೆ ಮೂಲ ಕಾರಣವಾಗಿದೆ. ಆ ತಿದ್ದುಪಡಿಯ ಮೂಲಕ

- ವಕ್ಫ್ ಮಂಡಳಿ ದೇಶದಲ್ಲಿರುವ ಯಾವುದೇ ಆಸ್ತಿಗಳನ್ನು ಗುರುತಿಸಿ ಅದಕ್ಕೆ ನೋಟೀಸ್ ಕೊಡುವ ಮೂಲಕ ಆಸ್ತಿಗಳನ್ನು ಅಧಿಕೃತವಾಗಿ ವಕ್ಫ್ ಆಸ್ತಿಗೆ ಸೇರಿಸಿಕೊಳ್ಳಬಹುದು.
- ವಕ್ಫ್ ಮಂಡಳಿ ಈ ರೀತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಯಾವುದೇ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ. ಈ ಕುರಿತಾಗಿ ಭೂಮಿಯನ್ನು ಕಳೆದುಕೊಂಡವರು ಈ ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
- ಈ ಆಸ್ತಿಯ ವಿವಾದಗಳ ಕುರಿತು ವಕ್ಫ್ ನ್ಯಾಯಮಂಡಳಿಯ ನಿರ್ಧಾರಗಳೇ ಅಂತಿಮ
- ಪ್ರಸ್ತುತವಾಗಿ ದೇಶಲ್ಲಿ ಒಟ್ಟು 30 ವಕ್ಫ್ ಮಂಡಳಿಗಳಿದ್ದು, ಅವುಗಳು ಕಾಲ ಕಾಲಕ್ಕೆ ಕೇಂದ್ರ ವಕ್ಫ್ ಕೌನ್ಸಿಲ್‌ಗೆ ಹಣಕಾಸಿನ ಕಾರ್ಯಕ್ಷಮತೆ, ಆಸ್ತಿ ಸಮೀಕ್ಷೆಗಳು ಮತ್ತು ಅತಿಕ್ರಮಣಗಳ ಬಗ್ಗೆ ಮಾಹಿತಿಯನ್ನು ನೀಡಬೇಕು.
ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ ಎನ್ನುವಂತೆ ಈ ದೇಶವನ್ನು ಹೇಗಾದರೂ ಮಾಡಿ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುಲೇ ಬೇಕೆನ್ನುವ ಹಪಾಹಪಿಯಲ್ಲಿರುವ ಮುಸಲ್ಮಾನರಿಗೆ ಈ ರೀತಿ ಏಕ ಪಕ್ಷೀಯ ತಿದ್ದು ಪಡಿಗಳು ವರದಾನವಾಗಿ ದೇಶದಲ್ಲಿ ರೈಲ್ವೇ, ಮಿಲಿಟರಿಯ ನಂತರ ಅತಿ ಹೆಚ್ಚು ಭೂಮಿಯನ್ನು ಹೊಂದಿರುವ ಮೂರನೇ ಸ್ಥಾನದಲ್ಲಿದ್ದು ನಂತರದ ಸ್ಥಾನ ಕ್ಯಾಥೋಲಿಕ್ ಚರ್ಚ್ ಹೊಂದಿರುವ ಮೂಲಕ ಹಿಂದೂಸ್ಥಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. 1995ರಲ್ಲಿ ನರಸಿಂಹ ರಾವ್ ಸರ್ಕಾರ ವಕ್ಫ್ ಬೋರ್ಡ್ ತಿದ್ದು ಪಡಿತರುವ ಮುನ್ನಾ ಸುಮಾರು 4 ಲಕ್ಷ ಎಕರೆಯಷ್ಟಿದ್ದ ಜಮೀನುಗಳು, 2009ರಷ್ಟರಲ್ಲಿ 8 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಯನ್ನು ಹೊಂದುವ ಮೂಲಕ.ಕೆಲವೇ ವರ್ಷಗಳಲ್ಲಿ ದ್ವಿಗುಣಗೊಂಡಿರುವುದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸುತ್ತದೆ, ಈ ಭೂಮಿಯಲ್ಲಿ ಹೆಚ್ಚಾಗಿ ಮಸೀದಿಗಳು, ಮದರಸಾಗಳು ಮತ್ತು ಸ್ಮಶಾನಗಳೂ ಸೇರಿದ್ದು, ಅಲ್ಪಸಂಖ್ಯಾತ ಸಚಿವಾಲಯ ಲೋಕಸಭೆಗೆ ಡಿಸೆಂಬರ್ 2022 ರ ವೇಳೆಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ ವಕ್ಫ್ ಮಂಡಳಿಯು ಒಟ್ಟು 9.40 ಲಕ್ಷ ಎಕರೆ ಪ್ರದೇಶದಲ್ಲಿ ದೇಶಾದ್ಯಂತ ವಕ್ಫ್ ಆಸ್ತಿ ಇದೆ ಎಂದು ತಿಳಿಸಿರುವುದು ವಕ್ಫ್ ಯಾವ ಪರಿಮಾಣದಲ್ಲಿ ಭೂಕಬಳಿಕೆಯಲ್ಲಿ ನಿರತವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ದೇಶಾದ್ಯಂತ ವಕ್ಫ್ ಮಂಡಳಿ ಯವ ರೀತಿಯಲ್ಲಿ ಅತಿಕ್ರಮಣ ಮಾಡುತ್ತಿದೆ ಎಂದರೆ,
- ತಮಿಳುನಾಡಿನ ತಿರುಚಿರಪಳ್ಳಿ ಜಿಲ್ಲೆಯ ಕಾವೇರಿ ನದಿಯ ದಂಡೆಯ ಮೇಲಿರುವ ತಿರುಚೆಂತುರೈ ಎಂಬ ಹಿಂದೂಗಳೇ ಹೆಚ್ಚಾಗಿರುವ ಗ್ರಾಮದಲ್ಲಿರುವ 1,500 ವರ್ಷಗಳಷ್ಟು ಹಳೆಯದಾದ ಸುಂದರೇಶ್ವರ ದೇವಾಲಯವನ್ನು ವಕ್ಫ್ ಬೋರ್ಡ್ ತನ್ನದು ಎಂದು ಹೇಳಿಕೊಂಡಿದೆ.
- ತಮಿಳುನಾಡು ಮತ್ತೊಂದು 1500 ವರ್ಷಗಳಷ್ಟು ಹಳೆಯದಾದ ಮನೆಂಡಿಯವಳ್ಳಿ ಚಂದ್ರಶೇಖರ ಸ್ವಾಮಿ ದೇವಸ್ಥಾನದ ಜಮೀನಿನ ಮಾಲೀಕತ್ವವೂ ಸಹಾ ವಕ್ಫ್ ಬೋರ್ಡ್ ತನ್ನದೆಂದು ಮುಟ್ಟುಗೋಲು ಹಾಕಿಕೊಂಡಿದೆ.
- ವಕ್ಫ್ ಮಂಡಳಿ ಹೇಳಿಕೊಂಡಿರುವಂತೆ ರಾಜಸ್ಥಾನದಾದ್ಯಂತ ಸುಮಾರು 18,000 ಕ್ಕೂ ಹೆಚ್ಚು ಆಸ್ತಿಗಳನ್ನು ಹೊಂದಿದ್ದು ಅವುಗಳಲ್ಲಿ 7,000 ಕ್ಕೂ ಹೆಚ್ಚು ಆಸ್ತಿಗಳಿಂದ ಆದಾಯವನ್ನು ಗಳಿಸುತ್ತಿದ್ದರೂ, ರಾಜಸ್ಥಾನ ಬೋರ್ಡ್ ಆಫ್ ಮುಸ್ಲಿಂ ವಕ್ಫ್ ತನ್ನ ಕಾರ್ಮಿಕರ ಸಂಬಳವನ್ನು ಪಾವತಿಸಲು ರಾಜಸ್ಥಾನ ಸರ್ಕಾರದಿಂದ ಹಣಕಾಸಿನ ನೆರವು ಕೋರಿದ್ದು ಅದನ್ನು ಅಂದಿನ ಕಾಂಗ್ರೇಸ್ ಸರ್ಕಾರ ಮನ್ನಣೆಕೊಟ್ಟಿರುವ ಮೂಲಕ ಪ್ರತ್ಯಕ್ಷವಾಗಿಯೇ ವಕ್ಫ್ ಮಂಡಳಿಯ ಎಲ್ಲಾ ಭೂಕಬಳಿಕೆಗೆ ಸಹಾಯ ಮಾಡುತ್ತಿದೆ
- 2021ರಲ್ಲಿ,ಗುಜರಾತಿನ ದ್ವಾರಕಾದಲ್ಲಿರುವ ಬೇಟ್ ದ್ವಾರಕಾ ಸಹಾ ತನ್ನದೆಂದು ವಕ್ಫ್ ಬೋರ್ಡ್ ಗುಜರಾತ್ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರ ವಿರುದ್ದ ನ್ಯಾಯಾಲಯವೇ ಕೋಪಗೊಂಡು ಆ ಅರ್ಜಿಯನ್ನು ತಿರಸ್ಕರಿಸಿ ಆ ಕುರಿತಾದ ವಿಚಾರಣೆಯನ್ನು ನಿರಾಕರಿಸಿತು.
- ಇತ್ತೀಚಿನ ಟಿವಿ ಸಂದರ್ಶನದಲ್ಲಿ ಮುಸ್ಲಿಂ ಮುಖಂಡರೊಬ್ಬರು ಕರ್ನಾಟಕದ ಆಡಳಿತ ಸೌಧ, ವಿಧಾನ ಸೌಧವೂ ಸಹಾ ವಕ್ಫ್ ಆಸ್ತಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಡೀ ಭಾರತದ ಬಹುತೇಕ ಸರ್ಕಾರೀ ಆಸ್ತಿಗಳನ್ನು ವಕ್ಫ್ ಮಂಡಳಿ ಕಬಳಿಸಲು ಮುಂದಾಗಿದೆ.
ದೇಶದಲ್ಲಿ ಈ ಪರಿಯಾಗಿ ಭೂಕಬಳಿಯಲ್ಲಿ ಮುಂದಾಗಿರುವ ವಕ್ಫ್ ಮಂಡಳಿಯ ವಿರುದ್ಧ ಅನೇಕರು ಧ್ವನಿ ಎತ್ತಿದ್ದನ್ನು ಗಮನಿಸಿದ ಪ್ರಸ್ತುತ ನರೇಂದ್ರ ಮೋದಿಯವರ 3.0 ಸರ್ಕಾರ, ವಕ್ಫ್ ಕಾಯ್ದೆಯಲ್ಲಿ 40 ಬದಲಾವಣೆಗಳನ್ನು ತರುವ ಮಸೂದೆಯನ್ನು ತರಲು ನಿರ್ಧಾರ ಮಾಡಿದಾಗ, ಸಹಜವಾಗಿಯೇ ಕಾಂಗ್ರೇಸ್ ಮತ್ತದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸಿದ ಕಾರಣ ಜಂಟಿ ಸಂಸತ್ತಿನ ಮಂಡಳಿಯನ್ನು ನೇಮಿಸಿದ್ದು ಆ ಬದಲಾವಣೆಗಳಲ್ಲಿರುವ ಪ್ರಮುಖವಾಗಿರುವ ಅಂಶಗಳು ಹೀಗಿದೆ.
- ವಕ್ಫ್ ಮಂಡಳಿಗಳ ಆಸ್ತಿಗಳನ್ನು ನಿರ್ವಹಿಸುವ ಅಧಿಕಾರವನ್ನು ಮಿತಿಗೊಳಿಸಿ ಹೆಚ್ಚಿನ ಸರ್ಕಾರಿ ಮೇಲ್ವಿಚಾರಣೆಯನ್ನು ಪರಿಚಯಿಸುತ್ತದೆ.
- ವಕ್ಫ್ ನ ಎಲ್ಲಾ ಆಸ್ತಿಗಳನ್ನು ಮೌಲ್ಯಮಾಪನಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಬೇಕು.
- ಇನ್ನು ಮುಂದೆ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಕಬಳಿಕೊಳ್ಳಲಾಗದೇ, ಆ ಆಸ್ತಿ ವಕ್ಫ್ ಆಸ್ತಿಯೋ ಇಲ್ಲವೇ ಸರ್ಕಾರಿ ಆಸ್ತಿಯೇ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತವಾದ ತನಿಖೆ ನಡಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
- ಜಿಲ್ಲಾಧಿಕಾರಿಗಳು ಈ ರೀತಿಯಾಗಿ ನಿರ್ಧಾರ ಕೈಗೊಂಡ ನಂತರ ಅವರು ಕಂದಾಯ ದಾಖಲೆಗಳನ್ನು ನವೀಕರಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವವರೆಗೂ ಆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ.
- ವಕ್ಫ್ ಮಂಡಳಿಯ ಭೂಕಬಳಿಕೆಯ ಬಗ್ಗೆ ಭಿನ್ನಾಭಿಪ್ರಾಯವಿದ್ದಲ್ಲಿ, ವಕ್ಫ್ ಮಂಡಳಿಯ ಬದಲಾಗಿ ನೇರವಾಗಿ ಸ್ಥಳೀಯ ಹೈಕೋರ್ಟ್‌ಗಳಿಗೆ ಮೇಲ್ಮನವಿ ಸಲ್ಲಿಸಬಹುದು.
- ವಕ್ಫ್ ಆಸ್ತಿಯ ಕುರಿತಾಗಿ ಕೇಂದ್ರ ಸರ್ಕಾರವು ಯಾವಾಗ ಬೇಕಾದರೂ ಭಾರತದ ಕಂಟ್ರೋಲರ್ ಮತ್ತು ಆಡಿಟರ್-ಜನರಲ್ ಅಥವಾ ಕೇಂದ್ರ ಸರ್ಕಾರದಿಂದ ಗೊತ್ತುಪಡಿಸಿದ ಯಾವುದೇ ಅಧಿಕಾರಿಯಿಂದ ಲೆಕ್ಕಪರಿಶೋಧನೆಯನ್ನು ನಡೆಸುವ ಅಧಿಕಾರವನ್ನು ಹೊಂದಿರುತ್ತದೆ,
- ಪ್ರಸ್ತುತ ರಾಜ್ಯ ಮತ್ತು ಕೇಂದ್ರ ವಕ್ಫ್ ಮಂಡಳಿಯಲ್ಲಿ ಯಾವುದೇ ಮಹಿಳಾ ಪ್ರಾತಿನಿಧ್ಯವಿಲ್ಲದೇ ಇರುವ ಕಾರಣ, ಮಹಿಳಾ ಪ್ರಾತಿನಿಧ್ಯವನ್ನು ತರುವ ಮೂಲಕ ವಕ್ಫ್ ಮಂಡಳಿಗೆ ಮೂಗುದಾರ ತೊಡಿಸುವ ಅಂಶಗಳು ಹೊಸಾ ಮಸೂದೆ ಹೊಂದಿದೆ.
ಈ ಮಸೂದೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಮುಸ್ಲಿಂ ನಾಯಕರು ಮತ್ತು ಕಾಂಗ್ರೇಸ್ಸಿಗರು ಹೇಳುತ್ತಿರುವುದರ ವಿರುದ್ದ, ಸರ್ಕಾರವು ತನ್ನ ನಿಲುವನ್ನು ಸ್ಪಷ್ಟ ಪಡಿಸಿದ್ದು, ಈ ತಿದ್ದುಪಡಿಯ ಮೂಲಕ ಯಾವುದೇ ಧರ್ಮದ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶವಿರದೇ, ಈ ಮಸೂದೆ ಮೂಲಕ ಎಂದಿಗೂ ಅವಕಾಶ ಸಿಗದೇ ಇರುವವರಿಗೆ ಹಕ್ಕು ನೀಡಲಾಗುವುದು ಎಂದು ಸಮರ್ಥಿಸಿಕೊಂಡಿದ್ದು ಈ ಚಳಿಗಾಲದ ಅಧಿವೇಶನದ ಸಮಯದಲ್ಲಿ ನಿಶ್ಚಿತವಾಗಿಯೂ ಈ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ.
ಈ ಮಸೂದೆಯನ್ನು ಜಾರಿಗೆ ತರಲು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಆಡಳಿತ ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದನ್ನು ಗಮನಿಸಿರುವ ರಾಜ್ಯ ಸರ್ಕಾರ ಆ ಮಸೂದೆ ಜಾರಿಗೆ ಬರುವ ಮುನ್ನವೇ ರಾಜ್ಯದ ಬಹುತೇಕ ಜಿಲ್ಲೆಗಳ ಬಡ ಹಿಂದೂ ರೈತರ ಜಮೀನುಗಳನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸುವ ಹುನ್ನಾರ ಮಾಡುತ್ತಿರುವುದನ್ನು ಪಕ್ಷಾತೀತವಾಗಿ ಎಲ್ಲರೂ ಸೇರಿ ಒಗ್ಗಟ್ಟಾಗಿ ತಡೆಯದೇ ಹೋದಲ್ಲಿ ಹಿಂದೂಸ್ಥಾನದ ರೈತರ ಭೂಮಿಯಷ್ಟೇ ಅಲ್ಲದೇ, ಇಡೀ ಹಿಂದೂಸ್ಥಾನವೇ ಅವರ ವಶವಾಗಬಹುದು ಎಂದೆನಿಸುತ್ತದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ