ಬಿಟ್ಟಿ ಭಾಗ್ಯ ಬಿಡಿ, ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಎಡವಟ್ಟು ಮಾಡಿಕೊಂಡ ಕಾಂಗ್ರೇಸ್ ಸರ್ಕಾರ

bitti_Bhgyaಯಾವುದೇ ಧ್ಯೇಯೋದ್ದೇಶವಿಲ್ಲದೇ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನೂ ಗಮನಿಸಿದೇ, ಕೇವಲ ಅಧಿಕಾರದ ತೆವಲಿಗಾಗಿ ಒಂದಿಷ್ಟು ಬಿಟ್ಟಿ ಭಾಗ್ಯಗಳ ಆಮಿಷವನ್ನು ಮತದಾರರಿಗೆ ಒಡ್ಡಿ  ಅಧಿಕಾರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರ  ಅಧಿಕಾರಕ್ಕೆ ಬಂದು 20 ತಿಂಗಳಾದರೂ ಇನ್ನೂ ಟೇಕಾಫ್ ಆಗದೇ ನಿಂತಲ್ಲೇ ನಿಂತು ಸರ್ಕಾರಿ ಅಧಿಕಾರಿಗಳ ಟ್ರಾನ್ಸ್ ಫರ್ ಹಗರಣ, ಮೂಡ ಹಗರಣ, ಖರ್ಗೆ ಕುಟುಂಬದ ಭೂಕಬಳಿಕೆ, ಗಣೇಶ ಹಬ್ಬ ಮತ್ತು ದೀಪಾವಳಿ ಹಬ್ಬಕ್ಕೆ ನಾನಾ ರೀತಿಯ ಅಂಕುಶವನ್ನು ಹೇರುವುದು, ಜಮೀರ್ ಕುಮ್ಮಕ್ಕಿನ ಮೂಲಕ ವಕ್ಫ್ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಭೂಕಬಳಿಕೆ ಮೂಲಕ ಅಭಿವೃದ್ಧಿ ಎಲ್ಲವೂ ಶೂನ್ಯವಾಗಿ, ಹಿಂದೂ ವಿರೋಧಿ ಕೃತ್ಯಗಳಲ್ಲಿ ಮಗ್ನವಾಗಿರುವುದೇ ಸಾಧನೆಯಾಗಿದೆ.

bb2ಈ ಎಲ್ಲಾ ಅಪಸವ್ಯಗಳಿಗೂ ಬಿಟ್ಟಿ ಭಾಗ್ಯಗಳೇ ಕಾರಣ ಎಂಬ ಕಠು ಸತ್ಯ  ಎಂಬುದು  ಕಾಂಗ್ರೇಸ್ ಪಕ್ಷದವರಿಗೂ ಸೇರಿದಂತೆ ಎಲ್ಲರಿಗೂ ತಿಳಿದಿದ್ದರೂ, ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲವೂ ಸರಿ ಇದ್ದು ವಿರೋಧ ಪಕ್ಷಗಳು  ಸುಮ್ಮನೆ ರಾಜಕೀಯ ಮಾಡುತ್ತಿವೆ  ಎಂದು ಆರೋಪಿಸುತ್ತಿರುವ ಸಿದ್ದರಾಮಯ್ಯನವರ ಸವಿವಸಂಪುಟ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಹಿಂದೂಗಳ ಸಾಲು ಸಾಲು ಹಬ್ಬಗಳಿರುವ ವಿಷಯ ಸರ್ಕಾರಕ್ಕೆ ಅರಿವಿದ್ದರೂ, ಕಳೆದ ಎರಡು ತಿಂಗಳುಗಳಿಂದ  ಆರೋಗ್ಯ ಇಲಾಖೆ, ನ್ಯಾಯಾಂಗ ಇಲಾಖೆಯೂ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ನೌಕರುಗಳಿಗೆ ಸರಿಯಾಗಿ ಸಂಬಳವನ್ನೇ ನೀಡದೇ, ಹಿಂದೂಗಳು ಸರಿಯಾಗಿ ಹಬ್ಬವನ್ನೂ ಆಚರಿಸದಂತಹ ಪರಿಸ್ಥಿತಿಯನ್ನು ಉಂಟು ಮಾಡುವ ಮೂಲಕ  ಮತ್ತೊಮ್ಮೆ ಈ ಕಾಂಗ್ರೇಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಜಗಜ್ಜಾಹೀರಾತಾಗಿದೆ.

ಶಕ್ತಿ ಯೋಜನೆಯಿಂದ  ರಾಜ್ಯ ಸಾರಿಗೆ ಸಂಸ್ಥೆ  ಭಾರೀ ಲಾಭದಲ್ಲಿ ನಡೆಯುತ್ತಿದೆ ಎಂದು ಹಸೀ ಸುಳ್ಳು ಹೇಳುವ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರು ಈ ಬಾರಿಯ ಆಯುಧ ಪೂಜೆಗೆ ಬಸ್ಸುಗಳ ಅಲಂಕಾರಕ್ಕೆ ಎಷ್ಟು ಕೊಟ್ಟರು? ಮತ್ತು ಎಷ್ಟು ತಿಂಗಳಿನಿಂದ ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿಲ್ಲ? ಎಂಬುದನ್ನು ಮಾತ್ರಾ ಹೇಳಲು ಜಾಣ ಮೌನವಹಿಸುವುದು ನಿಜಕ್ಕೂ ವಿಪರ್ಯಾಸವೇ ಸರಿ. ಇವೆಲ್ಲದರ ಮಧ್ಯೆ  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್ಥಿಕವಾಗಿ ಸದೃಢವಾಗಿರುವವರು, ಐಟಿಬಿಟಿ ಸಂಸ್ಥೆಯವರು, ಎಂಎನ್ ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಕರೆ ಮಾಡಿ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿರುವ ಕಾರಣ, ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಮರು ಪರಿಶೀಲಿಸುತ್ತೇವೆ ಎಂದು  ಹೇಳಿರುವುದು ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲಾ ಎಂಬುದನ್ನು ಎತ್ತಿ ತೋರಿಸುತ್ತಿದೆ.

ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಡಿಸಿಎಂ ಹೇಳಿಕೆ ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗಿರುವುದಲ್ಲದೇ,  ರಾಜ್ಯದ ಮೂರು ಕಡೆಯ ಉಪಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆಯ ಮೇಲೆ ಇದು ಪರಿಣಾಮ ಬೀರಬಹುದು ಎಂಬುದನ್ನು ಗಮನಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿ ವೇದಿಕೆಯ ಮೇಲೆಯೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದಲ್ಲದೇ,   ಯಾವುದೇ ಕಾರಣಕ್ಕೂ ನಾವು ಘೋಷಿಸಿರುವ  ಯೋಜನೆಗಳನ್ನು ನಿಲ್ಲಿಸಿದಲ್ಲಿ ಜನರಿಗೆ ತಪ್ಪು ಕಲ್ಪನೆ ಮೂಡಿಸುತ್ತದೆ ಎಂಬ ಕಿವಿಮಾತನ್ನು ಹೇಳಿರುವುದು ಚರ್ಚಾಸ್ಪದವಾಗಿದೆ.

ಇವೆಲ್ಲದರ ಮಧ್ಯೆ ಎಂದಿನಂತೆ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 2024 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 69 ಮಂದಿ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿಯ ಭಾಗವಾಗಿ ಐದು ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಕೊಡುವುದಲ್ಲದೇ, ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷದ ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ -50  ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದು  ಆರಂಭದಲ್ಲಿ ಪ್ರಶಸ್ತಿ ಫಲಕದ ಜೊತೆ 50,000 ಎಂದು ಘೋಷಿಸಿದ್ದವರು ರಾತ್ರೋರಾತ್ರಿ  ಅದನ್ನು 1,00,000ಕ್ಕೆ ಹೆಚ್ಚಿಗೆ ಮಾಡಿ ಒಟ್ಟು 69 + 100 ಹೀಗೆ 169 ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದರು, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆಯಲ್ಲದೇ, ಅರ್ಜಿ ಹಾಕದಿರುವ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ ಅವರಿಗೂ ಸಹಾ ಪ್ರಶಸ್ತಿ ನೀಡಲಾಗುತ್ತದೆ ಎಂದು ಕೊಚ್ಛಿಕೊಂಡಿದ್ದರು.

moilyಅಯೋಧ್ಯೆಯಲ್ಲಿ ಬಾಲರಾಮನನ್ನು ಕೆತ್ತಿದ್ದ  ಅರುಣ್ ಯೋಗಿರಾಜ್, ವಿಜಯನಗರ ಜಿಲ್ಲೆಯ ಬಯಲಾಟ ಕ್ಷೇತ್ರದಲ್ಲಿ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ, ಬೀದರ್ ಜಿಲ್ಲೆಯ ಜಾನಪದ ಕ್ಷೇತ್ರದಲ್ಲಿ ಅಂದಕಲಾವಿದರಾದ ನರಸಿಂಹಲು ಸೇರಿದಂತೆ 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆಯಾದರೂ ಸೂಕ್ಶ್ಮವಾಗಿ ಗಮನಿಸಿದರೆ,  ಅರ್ಹರಿಗಿಂತಲೂ ಬಹುತೇಕ ಕಾಂಗ್ರೇಸ್ ಸಿದ್ಧಾಂತದಲ್ಲಿ ನಂಬಿಕೆ ಇರುವವರಿಗೇ ಕೊಟ್ಟಿರುವುದು ಸ್ಪಷ್ಟವಾಗಿದೆ ಎನ್ನುವುದಕ್ಕೆ ಮಾಜೀ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವರಾಗಿದ್ದ ವೀರಪ್ಪ ಮೊಯ್ಲಿಯವರಿಗೆ ಸಾಹಿತ್ಯ ಪ್ರಾಕಾರದಲ್ಲಿ ಪ್ರಶಸ್ತಿ ನೀಡಿರುವುದರಿಂದ ತಿಳಿಯುತ್ತದೆ. ವೀರಪ್ಪ ಮೊಯ್ಲಿಯವರು ಬರೆದಿರುವುದು (ಮತ್ತೊಬ್ಬರಿಂದ ಬರೆಸಿರುವುದು ಎಂದೇ ಎಲ್ಲರ ಅಂಬೋಣ) ಎರಡೇ ಮಹಾಕಾವ್ಯಗಳಾಗಿದ್ದು ಅದನ್ನು ಅವರೇ ಕುಳಿತುಕೊಂಡು ಓದಿದರೂ ಅವರಿಗೇ ಅರ್ಥವಾಗದು ಎಂದೇ ಎಲ್ಲರೂ ಹೇಳುವಾಗ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಹಿಂದೆ ಮಧ್ಯಪ್ರದೇಶದಲ್ಲಿ ಕಾಂಗ್ರೇಸ್ ಸರ್ಕಾರವಿದ್ದಾಗ, ತಮ್ಮ ಪ್ರಭಾವ ಬಳಸಿ ಸರಸ್ವತಿ ಸನ್ಮಾನ್ ಪ್ರಶಸ್ತಿಯನ್ನು ಪಡೆದಿದ್ದು, ನಂತರ ತಮ್ಮ ಅಧಿಕಾರದವನ್ನು ಬಳಸಿಕೊಂಡು ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯಲು ಲಾಬಿ ನಡೆಸಿದ್ದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.

WhatsApp Image 2024-11-02 at 10.22.51ಇನ್ನು ಸ್ಪೀಕರ್ ಯು.ಟಿ. ಖಾದರ್ ಅವರ ಉಳ್ಳಾಲ ಕ್ಷೇತ್ರದಲ್ಲಿ ಅಸಂಖ್ಯಾತ (ಅಲ್ಪಸಂಖ್ಯಾತ ಎಂದು ಓದಿ ಕೊಂಡರೂ ತಪ್ಪಾಗದು) ಪಾರ್ಥೀವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿರುವ ಮೂಲಕ ಸಮಾಜ ಸೇವಕರಾಗಿ ಪ್ರಖ್ಯಾತರಾಗಿರುವ ಬಾಬು ಪಿಲಾರ್  ಎಂಬುವರಿಗೆ ಈ ಬಾರಿಯ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ತಮ್ಮ ಹೆಸರು ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮನವರು ಕರೆ ಹಿನ್ನೆಲೆಯಲ್ಲಿ ಅವರು ಸಹಾ ಬೆಂಗಳೂರಿಗೆ ಸಂತಸದಿಂದ  ಬಂದಾಗ ಆವರನ್ನು ಸರ್ಕಾರಿ ಅತಿಥಿ ಗೃಹ  ಕುಮಾರಕೃಪಾದಲ್ಲಿ ಕೊಠಡಿ ನೀಡಿ  ಗೌರವಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಶುಕ್ರವಾರ ಸಂಜೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಸ್ ಹತ್ತುವ ವೇಳೆ ದಯವಿಟ್ಟು ಕ್ಷಮಿಸಿಬಾಬು ಕಿಲಾರ್ ಎಂಬವರಿಗೆ ಪ್ರಶಸ್ತಿ ಬಂದಿದ್ದು ನಾವುಗಳು ತಪ್ಪಾಗಿ ಬಾಬು ಪಿಲಾರ್ ಆದ ನಿಮ್ಮನ್ನು ಕರೆದಿದ್ದೆವು ಎಂಬ ಸಮಜಾಯಿಷಿ ನೀಡಿ ಅವರಿಗೆ ಅವಮಾನ ಮಾಡಿರುವುದು ಈಗ ಎಲ್ಲೆಡೆಯಿಂದಲೂ ಎಲ್ಲರಿಂದಲೂ ಆಕ್ರೋಶ ವ್ಯಕಪಡಿಸುತ್ತಿರುವುದು ಸರ್ಕಾರದ ಎಡವಟ್ಟಿಗೆ ಪುರಾವೆಯಾಗಿದೆ. 

ಕಾಕತಾಳೀಯವೆಂದರೆ, ಇದೇ ಬಾಬು ಪಿಲಾರ್  ಅವರು ದಕ್ಷಿಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೂ ಆಯ್ಕೆಯಾಗಿದ್ದು,  ಅವರ ಹೆಸರು  ಈ ಬಾರಿಯ ರಾಜ್ಯಸರ್ಕಾರದ ಸುವರ್ಣ ಮಹೋತ್ಸವದ ಸಂಕೀರ್ಣ ವಿಭಾಗದಲ್ಲಿ ಬಾಬು ಕಿಲಾರ್ ಹೆಸರು ಘೋಷಣೆಯಾದ ಕಾರಣ ಅವರ ಹೆಸರನ್ನು ಕೈಬಿಟ್ಟಿತ್ತು. ಈಗ   ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಡವಟ್ಟಿನಿಂದಾಗಿ ಬಾಬು ಪಿಲಾರ್ ಅವರಿಗೆ ಅತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲದೇ  ಇತ್ತ ರಾಜ್ಯ ಪ್ರಶಸ್ತಿಯೂ ಇಲ್ಲದೇ ಬೆಂಗಳೂರಿನಲ್ಲಿ ಬಾಬು ಪಿಲಾರ್ ಏಕಾಂಗಿಯಾಗಿಸಿದ್ದಾರೆ.

ಹಾಗೆ ನೋಡಿದರೆ, ದ.ಕ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಹೀಗೆ ಎರಡೂ ಕಡೆಗಳಲ್ಲಿ ಪಶಸ್ತಿಗೆ ಭಾಜರಾಗಿದ್ದಂತಹ ಬಾಬು ಪಿಲಾಲ್ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದ ಹೊರತಾಗಿ ಮತ್ಯಾವ ಸಮಾಜ ಸೇವೆಯನ್ನು  ಮಾಡಿದ್ದಾರೆ? ಎಂದು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದು ಬಂದ ವಿಷಯ ಮತ್ತಷ್ಟು ರೋಚಕವಾಗಿದ್ದು, ಈ ಎಲ್ಲಾ ಪ್ರಶಸ್ತಿಗಳ ಆಯ್ಕೆ ಮಾಡುವ ಕಾಂಗ್ರೇಸ್ ಸರ್ಕಾರದ ಮಾನದಂಡವೇನು? ಎಂಬುದರ ಅರ್ಥವಾಗುತ್ತದೆ.

WhatsApp Image 2024-11-02 at 07.58.132024ರ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ  ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ದೇಶಾದ್ಯಂತ ರಾಮಭಕ್ತರಿಗೆ ಅಕ್ಕಿಗೆ ಅರಿಶಿಣ-ಕುಂಕುಮ ಹಾಗೂ ತುಪ್ಪದ ಮಿಶ್ರಣ ಲೇಪನ ಮಾಡಿದ ಪವಿತ್ರ ಮಂತ್ರಾಕ್ಷತೆಯನ್ನು ಅಯೋಧ್ಯೆಯಲ್ಲಿ ಪೂಜೆ ಮಾಡಿ ನಂತರ ದೇಶಾದ್ಯಂತ ಜ. 15ರೊಳಗೆ ಎಲ್ಲರಿಗೂ ವಿತರಿಸಲು ರಾಮಜನ್ಮಭೂಮಿ ಟ್ರಸ್ಟ್‌ ನಿರ್ಧರಿಸಿಯಾಗಿತ್ತು, ಸಾಮಾನ್ಯವಾಗಿ ದೇವರಿಗೆ ನೈವೇದ್ಯವನ್ನು ಅರ್ಪಿಸುವಾಗ ಮಾಡಿದ ಎಲ್ಲಾ ಭಕ್ಷ ಭೋಜನಗಳ ಸ್ವಲ್ಪ ಪ್ರಮಾಣವನ್ನು ದೇವರ ಮುಂದಿರಿಸಿ ಅದನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ ನಂತರ ಅದನ್ನು ತಂದು ಉಳಿದ ಭೋಜನಕ್ಕೆ ಸೇರಿಸಿದಾಗ ಅದು ಸಂಪೂರ್ಣವಾಗಿ ಪ್ರಸಾದ ಎನಿಸಿಕೊಳ್ಳುತ್ತದೆ ಎಂಬ ಕನಿಷ್ಟ ಜ್ಞಾನವೂ ಇಲ್ಲದಿರುವ  ಇದೇ ಬಾಬು ಪಿಲಾರ್, ವಿಶ್ವಹಿಂದೂ ಪರಿಷತ್ತಿನ ಅಕ್ಷತೆ ಆಹ್ವಾನ ಮಹಾ ಅಭಿಯಾನದ ಕುರಿತಾಗಿ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಕೇವಲ ಕರಾವಳಿಯಲ್ಲದೇ, ರಾಜ್ಯಾದ್ಯಂತ ಕುಖ್ಯಾತಿಯನ್ನು ಪಡೆದಿದ್ದ.  ಇಂತಹ ಕಾಂಗ್ರೇಸ್ ವ್ಯಕ್ತಿಯನ್ನು ಆಯ್ಕೆ ಮಾಡಿರುವ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ  ಬಾಬು ಕಿಲಾರ್ ಅವರ ಬದಲಿಗೆ ಬಾಬು ಪಿಲಾರ್ ಎಂಬುವವರ ಹೆಸರು  ಅಧಿಕಾರಿಗಳ ಅಚಾತುರ್ಯದಿಂದಾಗಿ ಪ್ರಶಸ್ತಿ ಪಟ್ಟಿಯಲ್ಲಿ  ಸೇರಿಕೊಂಡಿತ್ತು ಎಂದು ಎಂದಿನಂತೆ ಅಧಿಕಾರಿಗಳ ಮೇಲೆ ಅರೋಪ ಮಾಡಿ ತಿಪ್ಪೇ ಸಾರಿಸಿದೆ ಈ ಸರ್ಕಾರ. ಇನ್ನು ಪ್ರಶಸ್ತಿ ಪಡೆದಿರುವ ಈ ಬಾಬು ಕಿಲಾರ್ ಯಾರು?  ಎಂಬ ಕುತೂಹಲದಿಂದ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಿದರೂ ಅ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇರುವುದನ್ನು ನೋಡಿದರೆ, ಬಿಟ್ಟಿ ಭಾಗ್ಯಗಳ ಆಸೆಗಾಗಿ ಇಂತಹ ಎಡವಟ್ಟಿನ ಸರ್ಕಾರವನ್ನು ಆಯ್ಕೆ ಮಾಡಿಕೊಂಡೆವಲ್ಲಾ ಎಂದು ಜನರು ಪರಿತಪಿಸುತವಂತಾಗಿದ್ದು, ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಎನ್ನುವಂತಾಗಿರುವುದು ಸುಳ್ಳಲ್ಲಾ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

Leave a comment