ಕ್ರಿ.ಶ. 1492ರಲ್ಲಿ ಹಡಗನ್ನೇರಿ ಭಾರತವನ್ನು ಅರಸಲು ಬಂದ ಬ್ರಿಟಿಷ್ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಭಾರತೀಯರೆಂದು ತಿಳಿದು ಆವರನ್ನೇ ರೆಡ್ ಇಂಡಿಯನ್ಸ್ ಎಂದು ಕರೆದದ್ದಲ್ಲದೇ, ಅಲ್ಲಿನ ಮೂಲನಿವಾಸಿಗಳನ್ನೆಲ್ಲಾ ನಾಶಪಡಿಸಿದ ಬ್ರಿಟಿಷರು ಅಮೇರಿಕಾ ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಕೈಗಾರಿಕಾ ಕ್ರಾಂತಿಯಿಂದಾಗಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆದದ್ದಲ್ಲದೇ, ತಮ್ಮ ಉತ್ಪನ್ನಗಳಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ಹುಡುಕಲು ಹವಣಿಸುತ್ತಿದ್ದ ಸಂಧರ್ಭದಲ್ಲಿ John Benny ಎಂಬ ಅಮೇರಿಕಾದ ಪ್ರಖ್ಯಾತ ಲೇಖಕನ ಸಲಹೆಯ ಮೇರೆಗೆ World Trade Congress ಎಂಬ ಕಾರ್ಯಕ್ರಮವನ್ನು 1893 ಮೇ ತಿಂಗಳಿನಿಂದ ಡಿಸೆಂಬರ್ ವರೆಗೂ ನಡೆಸಲು ತೀರ್ಮಾನಿಸಲಾಯಿತು. ಅಮೇರಿಕಾದ 400 ವರ್ಷಗಳ ಸಂಭ್ರಮಾಚರಣೆಯ ಜೊತೆಗೆ ಒಂದಷ್ಟು ವ್ಯಾಪಾರದ ಮಾರುಕಟ್ಟೆಯನ್ನು ವೃಧ್ಧಿಸಿಕೊಳ್ಳುವ ಮತ್ತು ವಿಶ್ವದಲ್ಲಿ ಧರ್ಮವೆಂದು ಯಾವುದಾದರೂ ಇದ್ದಲ್ಲಿ ಅದು ಕೇವಲ ಕ್ರೈಸ್ತ ಧರ್ಮವೊಂದೇ. ಮಿಕ್ಕೆಲ್ಲಾ ಧರ್ಮಗಳು ಕೇವಲ ಪೊಳ್ಳು ಧರ್ಮಗಳು. ಪರಮ ಸಹಿಷ್ಣುವಾದ ಕ್ರೈಸ್ತ ಮತದಿಂದ ಮಾತ್ರವೇ ಎಲ್ಲರೂ ಸದ್ಗತಿ ಕಾಣಲು ಸಾಧ್ಯ. ಹಾಗಾಗಿ ಉಳಿದ ಧರ್ಮೀಯರಿಗೆ ಕ್ರೈಸ್ತ ಮತದ ಹಿರಿಮೆ ಗರಿಮೆಯನ್ನು ಎತ್ತಿ ತೋರಿಸಿ ಅವರನ್ನೆಲ್ಲಾ ಕ್ರೈಸ್ತ ಮತಕ್ಕೆ ಮತಾಂತರಿಸುವ ಮೂಲಕ ಪಾಪ ಮುಕ್ತರನ್ನಾಗಿಸುವ ಹೊಣೆಗಾರಿಕೆ ತಮ್ಮ ಮೇಲಿರುವುದರಿಂದ 1893ರ ಸೆಪ್ಟೆಂಬರ್ 11-27ರ ವರೆಗೆ ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಧರ್ಮ ಸಮ್ಮೇಳನದ ಆಯೋಜನೆ ಮಾಡಲಾಗಿತ್ತು.
ಅದೇ ಸಂಧರ್ಭದಲ್ಲಿ ಭಾರತ ಒಂದು ಬಡರಾಷ್ಟ್ರ. ಅಲ್ಲಿನ ಜನರು ಅನಾಗರೀಕರು. ಅದೊಂದು ಹಾವಾಡಿಗರ ದೇಶ. ಹಿಂದೂಗಳು ಎಂದು ಮೂಢ ನಂಬಿಕೆಯನ್ನು ನಂಬುವ ಜನ ಎಂದೇ ಇಡೀ ಜಗತ್ತು ನಂಬಿರುವಾಗ, 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪರಮ ಭಕ್ತ, ಮತ್ತು ಅಪ್ಪಟ ಹಿಂದೂ ಸನ್ಯಾಸಿ ಸ್ವಾಮಿ ವಿವೇಕಾನಂದರು ತಾಯಿ ಭಾರತಿಯನ್ನು ಮನದಲ್ಲಿಯೇ ವಂದಿಸಿ, ಅಮೇರಿಕಾದ ನನ್ನ ನೆಚ್ಚಿನ ಸಹೋದರಿ, ಸಹೋದರರೇ ( Sisters & Brothers of America) ಎಂದು ಭಾಷಣ ಆರಂಭಿಸುತ್ತಿದ್ದಂತೆಯೇ ಅಲ್ಲಿ ನರೆದಿದ್ದ ಸಹಸ್ರಾರು ಜನರಲ್ಲಿ ವಿದ್ಯುತ್ ಸಂಚಲನವುಂಟಾಗಿ ಆ ಜನಸ್ತೋಮ ತಮಗರಿವಿಲ್ಲದಂತೆಯೇ ಸುಮಾರು ಎರಡು ನಿಮಿಷಕ್ಕೂ ಅಧಿಕ ಕಾಲ ಮಾಡಿದ ಕರತಾಡನ ಇಡೀ ಸಭಾಂಗಣದಲ್ಲಿ ಮಾರ್ಧನಿಸಿದ್ದಲ್ಲದೇ, ಮುಂದಿನ ಐದು ವರ್ಷಗಳ ಕಾಲ ಇಡೀ ಅಮೇರಿಕಾ ಸ್ವಾಮೀ ವಿವೇಕಾನಂದರ ವಿದ್ವತ್ತಿಗೆ ಮಾರು ಹೋಗಿ ಭಾರತ ದೇಶ ಮತ್ತು ಹಿಂದೂಗಳ ಮೇಲಿದ್ದ ಅವರ ಅಪನಂಬಿಕೆ ದೂರ ಹೋಗುವಂತಾಗಿದ್ದು ಈಗ ಇತಿಹಾಸ.
ಪ್ರಸ್ತುತ 2025ರಲ್ಲೂ , ಕೆಲವು ಆಂತರಿಕ ಗುಲಾಮೀ ಮನಸ್ಥಿತಿಯವರಿಗೆ ಭಾರತ ಇನ್ನೂ ಒಂದು ಬಡ ದೇಶ, ದೇವರು ದಿಂಡರನ್ನು ನಂಬುವಂತಹ ಮೂಢರು. ದೇವರ ಹೆಸರಿನಲ್ಲಿ ನದಿಗಳಲ್ಲಿ ಮುಳುಗಿದರೆ ಬಡತನ ನಿವಾರಣೆ ಆಗುತ್ತದೆಯೇ? ಎಂದು ಸುಳ್ಳನ್ನಾಡುವವರು ಮುಟ್ಟಿನ ನೋಡಿಕೊಳ್ಳುವಂತೆ 2025 ಜನವರಿ-15 ಫೆಬ್ರವರಿ26ರ ವರೆಗೆ ಗಂಗಾ ಜಮುನಾ ಸರಸ್ವತಿ ಸಂಗಮವಾಗುವ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಭೂತೋ ನಭವಿಷ್ಯತಿ ಎನ್ನುವಂತೆ 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭ ಮೇಳವನ್ನು ಬಹಳ ಅದ್ದೂರಿಯಾಗಿ ಮತ್ತು ವೈಭವೋಪೇತವಾಗಿ ಮುಖ್ಯಮಂತ್ರಿ ಯೋಗಿ ಅವರು ಆಯೋಜಿಸುಸುವ ಮೂಲಕ ಇಡೀ ವಿಶ್ವವೇ ಭಾರತದತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡುವುದರಲ್ಲಿ ಯಶ್ವಸಿಯಾಗಿರುವುದು ಅದ್ಭುತ ಮತ್ತು ಅಭಿನಂದನಾರ್ಹ.
ಯಾವುದೇ ರೀತಿಯ ಅಧಿಕೃತ ಆಹ್ವಾನವಿಲ್ಲದೇ ಇದ್ದರೂ, ಸ್ವಪ್ರೇರಣೆಯಿಂದ ದೇಶ ವಿದೇಶಗಳಿಂದಲೂ ಜಾತಿ, ಧರ್ಮ, ಪಂತ, ಬಡವ ಬಲ್ಲಿದ ಎಂಬ ಬೇಧವಿಲ್ಲದೇ, ಹಿರಿಯ, ಕಿರಿಯ ಎಂಬ ತಾರತಮ್ಯವಿಲ್ಲದೇ,65 ಕೋಟಿಗೂ ಅಧಿಕ ಜನರು ಪ್ರಯಾಗಕ್ಕೆ ಬಂದು, ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಮಿಂದು, ಭಕ್ತಿ ಪರವಶದಲ್ಲಿ ಸಂಭ್ರಮಿಸಿದ ಇತಿಹಾಸ ಪ್ರಪಂಚದ ಯಾವ ಧರ್ಮದಲ್ಲೂ ದಾಖಲೆಯಾಗಿಲ್ಲ ಎನ್ನುವುದು ಗಮನಾರ್ಹ. ಕೇವಲ 45 ದಿನಗಳಲ್ಲಿ ಈ ಬೃಹತ್ ಪ್ರಮಾಣದ ಜನ ಜಂಗುಳಿ ಒಂದು ಕಡೆ ಸೇರುವಾಗ, ಬೆರಳೆಣಿಕೆಯಷ್ಟು ಅನಾಹುತ ಮತ್ತು ಅಪಘಡಗಳ ಹೊರತಾಗಿ, ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಮತ್ತವರ ತಂಡದ ಧೃಢಸಂಕಲ್ಪ, ಮುಂದಾಲೋಚನೆ, ಕಾರ್ಯತತ್ಪರತೆ ಮತ್ತು ಎಲ್ಲಕ್ಕಿಂತಲೂ ಹೆಚ್ಚಿನದಾಗಿ ಛಲದಿಂದಾಗಿ, ಪ್ರಧಾನಿ ಮೋದಿ ಮತ್ತವರ ಮಂತ್ರಿಮಂಡಲದ ಸಹಕಾರ ಮತ್ತು ಬೆಂಬಲದಿಂದಾಗಿ ಕೋಟ್ಯಾಂತರ ಹಿಂದುಗಳನ್ನು ಒಗ್ಗೂಡಿಸಿದ್ದಲ್ಲದೇ, ಅವರ ಭಕ್ತಿ ಭಾವನೆಗಳಿಗೆ ಸಂಗಮವಾಗಿದ್ದಲ್ಲದೇ, ಲಕ್ಷಾಂತರ ಜನರಿಗೆ ತಾತ್ಕಾಲಿಕ ವ್ಯಾಪಾರ ಮತ್ತು ಉದ್ಯೋಗವನ್ನು ನೀಡುವ ಮೂಲಕ ದೇವಾಲಯಗಳು ಮತ್ತು ಧಾರ್ಮಿಕ ಕ್ಷೇತ್ರಗಳು ದೇಶದ ಆರ್ಥಿಕತೆಗೆ ಪೂರಕವಾಗಿದೆ ಎಂಬುದನ್ನು ಸಾಭೀತು ಪಡಿಸಿವೆ.
144 ವರ್ಷಕ್ಕೊಮ್ಮೆ ಬರುವ ಈ ಮಹಾಕುಂಭ ಮೇಳದ ಸಿದ್ಧತೆ ಸುಮಾರು ಎರಡು ಮೂರು ವರ್ಷಗಳ ಮುಂಚೆಯೇ ಆರಂಭಿಸಿದ ಯೋಗಿ ಸರ್ಕಾರ, ನಲವತ್ತೈದು ದಿನಗಳ ಕಾಲ ನಡೆಯುವ ಈ ಶತಮಾನದ ಅದ್ಭುತ, ಜಗತ್ತಿನ ವಿಸ್ಮಯ ಮತ್ತು ಜಾಗತಿಕ ಜನಜಾತ್ರೆಗೆ ಸುಮಾರು ನಲವತ್ತೈದು ಕೋಟಿಗಳಷ್ಟು ಜನರು ಬರಬಹುದು ಎಂದು ಅಂದಾಜಿಸಿ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿತ್ತು. ಯೋಗಿ ಮತ್ತವರ ತಂಡದ ಎಲ್ಲಾ ನಿರೀಕ್ಷೆಗಳನ್ನೂ ಹುಸಿ ಮಾಡಿದ ಜನರು ದೇಶ ವಿದೇಶಗಳಿಂದ ಸುಮಾರು ಅರವತ್ತೈದು ಕೋಟಿಗೂ ಅಧಿಕ ಸನಾತನಿಗಳು ಅರ್ಥಾತ್ ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ಈ ಮಹಾಕುಂಭ ಮೇಳದಲ್ಲಿ ಸೇರುವ ಮೂಲಕ ಹಿಂದುಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಿರೂಪಿಸಿದ್ದಾರೆ. ಇಂತಹ ಧಾರ್ಮಿಕ ಕಾರ್ಯಕ್ರಮಕ್ಕೆ ಏಳು ಸಾವಿರದ ಐನೂರು ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ಖರ್ಚು ಮಾಡಿದ್ದಾರೆ ಎಂದು ವಿರೋಧ ಪಕ್ಷಗಳು ಆಡಿಕೊಂಡಿದ್ದಕ್ಕೆ ಉತ್ತರವಾಗಿ ಇದುವರೆವಿಗೂ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವಾಗಿದ್ದು, ಮಳೆ ನಿಂತು ಹೋದ ಮೇಲೆ ಮರಗಳ ಎಲೆಗಳಿಂದ ಹನಿಗಳು ಉದುರುವಂತೆ, ಮಹಾಕುಂಭದ ಸಮಯದಲ್ಲಿ ವಿವಿಧ ಕಾರಣಗಳಿಂದ ಬರಲಾಗದೇ ಹೋದವರು ಇನ್ನೂ ಎರಡು ಮೂರು ತಿಂಗಳುಗಳ ಕಾಲ ಕೇವಲ ಪ್ರಯಾಗ್ ರಾಜ್ ಅಲ್ಲದೇ, ಕಾಶಿ ಅಯೋದ್ಯ ಸೇರಿದಂತೆ ಹತ್ತಾರು ತೀರ್ಥಕ್ಷೇತ್ರಗಳಿಗೆ ಬರುವ ನಿರೀಕ್ಷೆ ಇದ್ದು, ಅ ಮೂಲಕವೂ ಕೋಟಿ ಕೋಟಿ ಆದಾಯ ತರುವ ಮೂಲಕ ಕುಂಭಮೇಳದಿಂದ ಬಡತನ ನಿವಾರಣೆ ಆಗಬಲ್ಲದೇ ಎಂದು ಹೀಯ್ಯಾಳಿಸುವವರಿಗೆ ತಕ್ಕ ಉತ್ತರವನ್ನು ನೀಡಲಿದೆ.
ಆರಂಭದಲ್ಲಿ ಕಾಲ್ತುಳಿತಕ್ಕೆ ಸುಮಾರು 30 ಜನರು ಮೃತಪಟ್ಟಾಗ ಇಲ್ಲಿನ ವ್ಯವಸ್ಥೆ ಸರಿಯಿಲ್ಲಾ. ಇದು ಮೃತ್ಯು ಕುಂಭ, ಕಾಲ್ತುಳಿತಕ್ಕೆ ಸತ್ತವರ ಸಂಖ್ಯೆ ಸರಿಯಾಗಿ ನೀಡಿಲ್ಲಾ. ಇದು ಬಡವರ ಕುಂಭವಾಗಿರದೇ ಕೇವಲ ವಿವಿಐಪಿ ಗಳ ಕುಂಭವಾಗಿದೆ, ಪ್ರಯಾಗ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಲ್ಲಾ ಎಂಬ ಹಸೀ ಸುಳ್ಳುಗಳನ್ನಾಡುವ ಮೂಲಕ ಕುಂಭಮೇಳಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ ಕಾಂಗ್ರೇಸ್ ನೇತೃತ್ವದ ಇಂಡಿ ಒಕ್ಕೂಟದ ಪಕ್ಷಗಳ ಹೇಳಿಕೆಗೆ ಕಿವಿಗೊಡದೆ ಅವರದ್ದೇ ಪಕ್ಷದ ಹಿರಿಯ ನಾಯಕರುಗಳು ಮತ್ತವರ ಕುಟುಂಬದವರು ನೇರವಾಗಿ ಕುಂಭ ಮೇಳದ ಪವಿತ್ರ ಸ್ನಾನದಲ್ಲಿ ಭಾಗಿಯಾಗಿ ಪುನೀತರಾದರೇ, ಇನ್ನೂ ಕೆಲವರು ಅನಂತರದ ದಿನಗಳಲ್ಲಿ ಗೌಪ್ಯವಾಗಿ ಬಂದು ತ್ರಿವೇಣಿಯಲ್ಲಿ ಮಿಂದೆದ್ದಿದ್ದಾರೆ. ಮಾತಿಗೆ ಮುಂಚೆ ಜಾತಿ, ಬ್ರಾಹ್ಮಣತ್ವ, ಪುರೋಹಿತಶಾಹಿ ಎಂದು ಆಡಿಕೊಳ್ಳುವವರಿಗೆ ಈ ಬಾರಿ ಕೆಲಸವೇ ಇಲ್ಲದಂತೆ ಇಲ್ಲಿ ಯಾವುದೇ ದೇಗುಲವಾಗಲೀ, ದೇವರರಾಗಲೀ ಇರಲಿಲ್ಲ ಪೂಜೆ ಪುನಸ್ಕಾರಗಳೇ ಇಲ್ಲದಿದ್ದಲ್ಲಿ, ಪೂಜಾರಿಗಳು ಮತ್ತು ತಟ್ಟೆ ಕಾಸಿನ ಮಾತೇ ಬರುವುದಿಲ್ಲ. ಯಾವುದೇ ಜಾತಿ ಧರ್ಮ, ಬಡವ ಬಲ್ಲಿದನೆಂಬ ಬೇಧಭಾವಿಲ್ಲದೇ ಎಲ್ಲರೂ ಒಂದೇ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಸನಾತನ ಧರ್ಮದ ವಸುದೈವ ಕುಟುಂಬಕಂ ಮಾತನ್ನು ಅಕ್ಷರಶಃ ನಿರೂಪಿಸಿದ್ದಾರೆ.
ನಾಲ್ಕು ಜನರ ಹೆಗಲಿನ ಮೇಲೆ ಚಟ್ಟ ಇದ್ದಲ್ಲಿ ಮಾತ್ರಾವೇ ಹಿಂದೂಗಳು ಒಗ್ಗೂಡುತ್ತಾರೆ ಎಂದು ಆಡಿಕೊಳ್ಳುತ್ತಿದ್ದದ್ದನ್ನು ಹುಸಿ ಗೊಳಿಸಿದ ಸನಾತನಿಗಳು ಯಾವುದೇ ವಿಶೇಷ ಆಹ್ವಾನವಿಲ್ಲದೇ, ಸ್ವಪ್ರೇರಿತರಾಗಿ, ಸ್ವಂತ ಖರ್ಚಿನಲ್ಲಿ ಪ್ರಯಾಗಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಒಂದು ಅದ್ಭುತವಾದ ಕ್ಷಣದ ಭಾಗವಾಗಿದ್ದಲ್ಲದೇ, ತಮ್ಮ ಜೀವಮಾನದಲ್ಲಿ ನೋಡಲಾರದಷ್ಟು ಜನರನ್ನು ಒಂದೇ ಕಡೆ ನೋಡಿ ಕಣ್ತುಂಬಿಸಿಕೊಂಡು ಆನಂದ ಭಾಷ್ಪವನ್ನು ಹರಿಸಿದ್ದಾರೆ.

- ಮಹಾಕುಂಭದಲ್ಲಿ ಭಾಗಿಗಳಾದ 65+ ಕೋಟಿ ಜನರಲ್ಲಿ ನಾನು ಬ್ರಾಹ್ಮಣ, ಜಾಟ್, ವೈಶ್ಯ, ಒಕ್ಕಲಿಗ, ಲಿಂಗಾಯತ. ಕುರುಬ ಕುಂಬಾರ, ದಲಿತ ಎಂಬ ಭಾವನೆ ಮೂಡಲೇ ಇಲ್ಲಾ. ಪವಿತ್ರ ಸ್ನಾನಕ್ಕಾಗಿ ಅವರ್ಯಾರಿಗೂ ಪ್ರತ್ಯೇಕ ಘಾಟ್‌ಗಳು ಇಲ್ಲದೇ ಎಲ್ಲರೂ ಒಂದೇ ಘಾಟ್ ನಲ್ಲಿ ಸ್ನಾನ ಮಾಡಲು ಯಾರೂ ಆಕ್ಷೇಪಣೆ ವ್ಯಕ್ತ ಪಡಿಸಲಿಲ್ಲ ಬದಲಾಗಿ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟದ್ದು ಗಮನಾರ್ಹ.
- ಅಷ್ಟು ಜನರು ಸನಾತನಿಗಳು ಸೇರಿದ್ದ ಜಾಗದಲ್ಲಿ ಯಾವುದೇ ರಾಜಕೀಯ ಇರಲಿಲ್ಲ. ಸ್ವಾಮೀಗಳು ಮತ್ತು ಸನ್ಯಾಸಿಗಳಿಂದ ಅನ್ಯ ಧರ್ಮದ ವಿರುದ್ಧ ಉದ್ರೇಕಿಸಿ ನರಮೇಧಕ್ಕೆ ಕರೆ ನೀಡುವ ಭಾಷಣಗಳಿರಲಿಲ್ಲ. ಅಲ್ಲಿ ನೆರೆದಿದ್ದ ಎಲ್ಲರ ಬಾಯಲ್ಲೂ ಒಂದೇ ಘೋಷಣೆ ಅದುವೇ ಹರ ಹರ ಮಹಾದೇವ್ ಎಂಬುದಷ್ಟೇ ಆಗಿದ್ದು ಗಮನಾರ್ಹ.
- ಪ್ರತೀ ದಿನ ಕೋಟ್ಯಾಂತರ ಜನರು ಸೇರುತ್ತಿದ್ದ ಆ ಪ್ರದೇಶದಲ್ಲಿ ಯಾರೂ ಸಹಾ ಹೊಟ್ಟೆ ಹಸಿವಿನಿಂದ ನರಳಲಿಲ್ಲ. ಅಲ್ಲಿ ದಾಸೋಹ ಮಾಡುತ್ತಿದ್ದವರ್ಯಾರೂ ಸಹಾ ಜ್ಯೂಸ್, ರೊಟ್ಟಿ ಅಥವಾ ಚಹಾಗಳ ಮೇಲೆ ಉಗುಳಲಿಲ್ಲ. ಜಾತಿ, ಧರ್ಮ ಯಾವುದನ್ನೂ ಕೇಳದೇ ನಿರಂತರವಾಗಿ ದಾಸೋಹ ಮಾಡಿದ್ದದ್ದು ಗಮನಾರ್ಹ.
- ಅಷ್ಟು ದೊಡ್ಡ ಪ್ರಮಾಣದಲ್ಲಿ ರಸ್ತೆ, ರೈಲುಗಳು ಮತ್ತು ವಿಮಾನಗಳಲ್ಲಿ ಸ್ವಂತ ಹಣದಲ್ಲಿ ಬಂದರೇ ಹೊರತು ಯಾರೂ ಸಹಾ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಿಲ್ಲ. ಒಬ್ಬನೇ ಒಬ್ಬ ಹಿಂದೂ ಸಹಾ ರಸ್ತೆಗಳಲ್ಲಿ, ರೈಲುಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಪ್ರಾರ್ಥನೆ ಸಲ್ಲಿಸದೇ, ಮೌನವಾಗಿ ಭಗವಂತನನ್ನು ತಮ್ಮೊಳಗೇ ಅನುಭವಿಸಿದ್ದು ಗಮನಾರ್ಹ.
- ಅಷ್ಟು ಜನ ಜಂಗುಳಿಯಿದ್ದ ಪ್ರದೇಶದಲ್ಲಿ ತಪ್ಪಿಸಿಕೊಂಡವರು ಇರಲೇ ಇಲ್ಲಾ. ಅಪ್ಪೀ ತಪ್ಪೀ ತಪ್ಪಿಸಿಕೊಂಡರೂ, ಕ್ಷಣ ಮಾತ್ರದಲ್ಲಿ ಅವರನ್ನು ಹುಡುಕಿ ಕೊಡುವಂತಹ ಅದ್ಭುತವಾದ ವ್ಯವಸ್ಥೆ ಅಲ್ಲಿತ್ತು. ಇಡೀ ಕುಂಭಮೇಳದ ಮತ್ತೊಂದು ಅಚ್ಚರಿಯಿಂದರೆ, ಅಲ್ಲಿನ ಅಧಿಕಾರಿಗಳು, ರಕ್ಷಣಾ ಸಿಬ್ಬಂಧಿಗಳು, ಶೌಚಾಲಯವನ್ನು ಶುದ್ಧಿಮಾಡುವ ಕರ್ಮಚಾರಿಗಳು ಎಲ್ಲದ್ದಕ್ಕಿಂತಲೂ ವಿಶೇಷವಾಗಿ ಪೋಲೀಸರು ದಿನದ 24 ಗಂಟೆಗಳು ಸರದಿಯಲ್ಲಿ ಸೇವೆ ಮಾಡಿದ್ದಲ್ಲದೇ, ಬಂದವರ ಒಬ್ಬರ ಮೇಲು ಏರಿದ ಧ್ವನಿಯಲ್ಲಿ ಮಾತನಾಡಲಿಲ್ಲ ಎನ್ನುವುದು ಗಮನಾರ್ಹ.
- ಕೋಟ್ಯಂತರ ಹಿಂದೂಗಳು ಪ್ರಯಾಗ್ ರಾಜ್ ನಲ್ಲಿ ಸೇರಿದ್ದರೂ, ಅಲ್ಲಿನ ಸ್ಥಳೀಯ ಮಸೀದಿ ಮತ್ತು ಚರ್ಚುಗಳಲ್ಲಿ ಎಂದಿನಂತೆ ಐದು ಬಾರಿ ಆಜಾನ್ ಅಥವಾ ಸಾಮೂಹಿಕ ಪ್ರಾರ್ಥನೆಗಳು ನಿರಂತವಾಗಿ ನಡೆದಿದ್ದು, ಯಾವುದೇ ಹಿಂದುವಾಗಲೀ ಅನ್ಯ ಧರ್ಮೀಯರ ಪ್ರಾರ್ಥನಾ ಮಂದಿರಗಳ ಮೇಲೆ ಕಲ್ಲು ತೂರಾಡುವುದಾಗಲೀ, ಕುಂಭ ಮೇಳಕ್ಕೆ ಬಂದಂತಹ ಅನ್ಯಧರ್ಮೀಯರು/ವಿದೇಶಿಯರನ್ನು ಬಲವಂತವಾಗಿಯೋ ಇಲ್ಲವೇ ಒಪ್ಪಿಗೆಯ ಮೇಲೆ ಮತಾಂತರಿಸಲು ಪ್ರಯತ್ನಿಸಲಿಲ್ಲ ಎನ್ನುವುದು ಗಮನಾರ್ಹ.
- ಕುಂಭಮೇಳದ ವಿರುದ್ಧವಾಗಿ ಮಾತನಾಡಿದ ಹಿಂದೂ ವಿರೋಧಿಗಳ ಕುರಿತಾಗಿ ರಣಹದ್ದುಗಳಿಗೆ ಶವಗಳೇ ಕಂಡರೆ, ಹಂದಿಗಳಿಗೆ ಬರೀ ಹೊಲಸು ಕಾಣಿಸಿದರೆ, ಭಕ್ತರಿಗೆ ಸ್ವಚ್ಛತೆ, ಸುವ್ಯವಸ್ಥೆ ಕಾಣಿಸಿತು. ಕೆಲವರಿಗೆ ರಸ್ತೆ ಜಾಮ್ ಕಾಣಿಸಿದರೆ, ಬಡವರಿಗೆ ಬಾಳು ದೊರೆತು, ವರ್ತಕರಿಗೆ ಒಳ್ಳೆಯ ವ್ಯಾಪಾರವಾಯಿತು. ದಯಾಳುಗಳಿಗೆ ಕರುಣೆ ಪ್ರಾಪ್ತಿಯಾದರೆ, ಆಸ್ತಿಕರಿಗೆ ಆಧ್ಯಾತ್ಮಿಕತೆ ಮತ್ತು ದೈವತ್ವ ಕಾಣಿಸುತ್ತದೆ. ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಸಾಗಿದೆ ಎನ್ನುವುದೇ ಈ ಕುಂಭಮೇಳದ ಯಶಸ್ವಿಗೆ ಕಾರಣವಾಗಿದೆ ಎನ್ನುವುದನ್ನು ಯೋಗಿಯವರು ಅಲ್ಲಿನ ವಿಧಾನ ಸೌಧದಲ್ಲಿ ಉತ್ತರಿಸಿದ ಪರಿ ನಿಜಕ್ಕೂ ಗಮನಾರ್ಹ.
- ವಿವಿಧ ಸಮಸ್ಯೆಗಳು ಮತ್ತು ಕಾರಣಗಳಿಂದಾಗಿ ಈ ಬಾರಿಯ ಮಹಾ ಕುಂಭಮೇಳದಲ್ಲಿ ಖುದ್ದಾಗಿ ಅಲ್ಲಿ ಹೋಗಿ ಸ್ನಾನ ಮಾಡಲು ಆಗದೇ ಹೋದ ನನ್ನಂತಹ ಕೋಟ್ಯಾಂತರ ಆಸ್ತಿಕರಿಗೂ ಬೇಸರವಾಗದಂತೆ, ಕುಂಭ ಮೇಳಕ್ಕೆ ಹೋದವರು ಅಲ್ಲಿನ ಪೋಟೋ ಮತ್ತು ವೀಡೀಯೋಗಳನ್ನು ಕಳುಹಿಸಿಕೊಡುವುದು, ಅವರಿಗಾದ ದೈವೀ ಅನುಭವವನ್ನು ಹಂಚಿಕೊಂಡಷ್ಟೇ ಅಲ್ಲದೇ, ಕೇಳದೇ ಹೋದರೂ ಪವಿತ್ರ ಗಂಗಾಜಲವನ್ನು ತಂದು ಕೊಡುವ ಮೂಲಕ ಮನೆಯಲ್ಲಿಯೇ ಕುಳಿತು ಗಂಗಾಸ್ನಾನವನ್ನು ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದು ಸಹಾ ಗಮನಾರ್ಹ.
2027ರ ಜುಲೈ 17 ರಿಂದ ಆಗಸ್ಟ್ 17ರ ವರಗೆ ಸುಮಾರು ಒಂದು ತಿಂಗಳ ಕಾಲ ಮಹಾರಾಷ್ಘ್ರದ ನಾಸಿಕ್‌ನಿಂದ ಸುಮಾರು 38 ಕಿಮೀ ದೂರದಲ್ಲಿರುವ ಜ್ಯೋತ್ರಿರ್ಲಿಂಗ ಇರುವ ಪುಣ್ಯಕ್ಷೇತ್ರಗಳಲ್ಲಿ ಒಂದಾದ ತ್ರಯಂಬಕೇಶ್ವರದ ಗೋದಾವರಿ ನದಿಯ ದಡದಲ್ಲಿ ನಡೆಯಲಿದ್ದು, ಮಹಾರಾಷ್ಟ್ರದ ಸರ್ಕಾರ ಈಗಾಗಲೇ ಈ ಕುಂಭಮೇಳದ ಸಿದ್ಧತೆಯನ್ನು ಆರಂಭಿಸಿದೆ. ವಿವಿಧ ಕಾರಣಗಳಿಂದ ಈ ಬಾರಿಯ ಪ್ರಯಾಗ್ ರಾಜ್ ಮಹಾ ಕುಂಭ ಮೇಳವನ್ನು ತಪ್ಪಿಸಿಕೊಂಡಿದ್ದವರು ಈಗಲಿಂದಲೇ ಸಂಕಲ್ಪ ಮಾಡಿಕೊಂಡು ನಾಸಿಕ್ ಕುಂಭಮೇಳದಲ್ಲಿ ಭಾಗವಹಿಸುವ ಸುವರ್ಣಾವಕಾಶವೂ ಇರುವುದು ಗಮನಾರ್ಹ.
ಶೀರ್ಷಿಕೆಯಲ್ಲಿಯೇ ಹೇಳಿರುವಂತೆ ಅಂದು ಸ್ವಾಮೀ ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಜಗತ್ತಿಗೆ ಜಾಗೃತಿ ಮೂಡಿಸಿದ್ದನ್ನು ಇಂದು ಯೋಗಿ ಅದಿತ್ಯನಾಥ್ ಮತ್ತಷ್ಟೂ ಮುಂದುವರೆಸಿಕೊಂಡು ಹೋಗುವ ಮೂಲಕ ಒಬ್ಬ ಸನಾತನಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದರೆ ಒಂದು ಧಾರ್ಮಿಕ ಕಾರ್ಯಕ್ರಮ ಎಷ್ಟು ಅಚ್ಚುಕಟ್ಟಾಗಿ ಮತ್ತು ಸುರಕ್ಷತೆಯಿಂದ ನಡೆಯಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿರುವುದಲ್ಲದೇ, ಹಿಂದೂ ದೇವಾಲಯಗಳ ಬಗ್ಗೆ ತುಚ್ಛರೀತಿಯಲ್ಲಿ ಅವಹೇಳನ ಮಾಡುತ್ತಿರುವವರಿಗೆ ಹಿಂದೂ ದೇವಾಲಯಗಳ ಆರ್ಥಿಕತೆಯನ್ನು ತೋರಿಸಿದ್ದಾರೆ.
ನೆನ್ನೆ ಕುಂಭ ಮೇಳ ಮುಗಿದೆ ಎಂದು ಆರಾಮಾಗಿ ಕಾಲು ಚಾಚಿಕೊಂಡು ಕೂರದೇ, ಇಂದಿನಿಂದಲೇ ಗಂಗಾ ಶುಧ್ಧೀಕರಣವನ್ನು ಆರಂಭಿಸಿರುವುದು ಅವರ ಕಾರ್ಯತತ್ಪರತೆಯನ್ನು ತೋರಿಸುತ್ತದೆ. ಛೇ!! ನಮ್ಮ ರಾಜ್ಯದಲ್ಲೂ ಇಂತಹದ್ದೇ ಮುಖ್ಯಮಂತ್ರಿ ಇರಬೇಕಿತ್ತು ಎಂದು ಅನಿಸುತ್ತಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ
Excellent summary n aptly concluded!!
LikeLike
ಧನ್ಯೋಸ್ಮಿ
LikeLike