ಅತ್ಯಂತ ಭಾರವಾದ ಹೃದಯದಿಂದ ಬಹಳ ದುಃಖದಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ವಿಶ್ವಾದ್ಯಂತ ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನಾಗಿ ಆಚರಣೆ ಮಾಡಿದರೆ, ಭಾರತೀಯರ ಪಾಲಿಗಂತೂ ಅದೂ ಮರೆಯಲಾಗದ ಕರಾಳ ದಿನ ಎಂದೇ ಹೇಳಬಹುದು. 2019ರ ಫೆಬ್ರವರಿ 14 ರಂದು ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪುಲ್ವಾಮಾ ಎಂಬ ಪ್ರದೇಶದ ಹೆದ್ದಾರಿಯಲ್ಲಿ ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ಉಗ್ರಗಾಮಿಗಳು ಸ್ಫೋಟಕ ತುಂಬಿದ್ದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಬೆಂಗಾವಲು ಪಡೆಯ ಮೇಲೆ ಭೀಕರವಾಗಿ ಆತ್ಮಾಹುತಿ ಮಾದರಿಯಲ್ಲಿ ದಾಳಿ ನಡೆಸಿದ ಪರಿಣಾಮವಾಗಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಸುಟ್ಟು ಕರುಕಲಾಗಿ ಹೋದದ್ದಕ್ಕಾಗಿ ಇಡೀ ಭಾರತವೇ ಶೋಕಾಚರಣೆ ಆಚರಿಸಿ, ಮರುಕ ವ್ಯಕ್ತಪಡಿಸಿತ್ತು.
ಈಗ ಅದೇ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ಎಂಬ ಪ್ರದೇಶದ ಮಿನಿ ಸ್ವಿಡ್ಜರ್ಲ್ಯಾಂಡ್ ಎಂದೇ ಪ್ರಸಿದ್ಧವಾಗಿರುವ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಅಧೀನ ಸಂಸ್ಥೆ ಎಂದೇ ಘೋಷಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬ ಗುಂಪಿನ ಸೈನಿಕರ ವೇಷದಲ್ಲಿದ್ದ 4 ರಿಂದ 6 ಮಂದಿಯ ಭಯೋತ್ಪಾದಕರ ಗುಂಪೊಂದು ದಾಳಿ ನಡೆಸಿ ಸುಮಾರು 28 ಜನರನ್ನು ಕೊಂದು ಹಾಕಿರುವುದಲ್ಲದೇ ಹಲವಾರು ಜನರನ್ನು ಗಾಯಗೊಳಿಸಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ವಿದೇಶಿ ಪ್ರಜೆಗಳಾಗಿದ್ದರೆ, ಉಳಿದವರೆಲ್ಲರೂ ಹಿಂದೂಗಳಾಗಿರುವುದು ಆಘಾತಕಾರಿಯಾದ ವಿಷಯವಾಗಿದೆ
ಪೆಹಲ್ಗಾಮ್ ಪ್ರದೇಶದಲ್ಲಿ ಅರುವ್ಯಾಲಿ, ಬೇತಾಬ್ ವ್ಯಾಲಿ, ಮಿನಿ ಸ್ವಿಡ್ಜರ್ಲ್ಯಾಂಡ್ ಅಲ್ಲದೇ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಮರ್ ನಾಥ್ ಯಾತ್ರೆಗೆ ಹೋಗುವ ಬೇಸ್ ಕ್ಯಾಂಪ್ ಸಹಾ ಆಗಿದ್ದು, ಇದೇ ಕಾರಣಕ್ಕಾಗಿಯೇ ಕಾಶ್ಮೀರಕ್ಕೆ ಬರುವ ಬಹುತೇಕ ಪ್ರವಾಸಿಗಳು ಪೆಹಲ್ಗಾಮ್ ಪ್ರದೇಶಕ್ಕೆ ತಪ್ಪದೇ ಬಂದೇ ಬರುತ್ತಾರೆ. ದೂರದ ಸ್ವಿಜರ್ ಲೆಂಡ್ ನಲ್ಲಿ ಆಗುವಂತಹ ಅನುಭವವೇ, ಭೂಲೋಕದ ಸ್ವರ್ಗ ಎಂದೇ ಕರಿಸಿಕೊಳ್ಳುವ ಕಾಶ್ಮೀರದ ಪೆಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಆಗುವ ಕಾರಣ ಬಹುತೇಕ ಪ್ರವಾಸಿಗರು ಆ ಪ್ರದೇಶಕ್ಕೆ ಹೋಗಲು ಇಚ್ಚಿಸುತ್ತಾರೆ. ಹಾಗಾಗಿಯೇ ಅಸಂಖ್ಯಾತ ಭಾರತೀಯ ಅನೇಕ ಸಿನಿಮಾಗಳ ಹಾಡುಗಳು ಇಲ್ಲಿ ಚಿತ್ರೀಕರಿಸುವ ಮೂಲಕ ಅಲ್ಲಿನ ಪ್ರಕೃತಿ ಸಿರಿಯನ್ನು ಈಗಾಗಲೇ ಭಾರತೀಯರು ನೋಡಿದ್ದಾರೆ. ಮಿನಿ ಸ್ವಿಡ್ಜರ್ಲ್ಯಾಂಡ್ ಪ್ರದೇಶವು ಬಹಳ ಎತ್ತರದ ಪ್ರದೇಶದಲ್ಲಿದ್ದು ಅಲ್ಲಿಗೆ ಕೇವಲ ನಡಿಗೆಯಿಂದಾಗಲೀ ಇಲ್ಲವೇ ಕುದುರೇ ಸವಾರಿಯ ಮೂಲಕವೇ ಹೋಗ ಬೇಕಾಗಿದ್ದು ಪ್ರತಿಯೊಬ್ಬರೂ ಸುಮಾರು 1800-2400 ರೂಪಾಯಿಗಷ್ಟು ರೂಪಾಯಿ ಹಣವನ್ನು ಖರ್ಚು ಮಾಡಿ ಕುದುರೆಯ ಮೇಲೆ ಪ್ರಯಾಣಿಸಿ ಕೆಲವೊಮ್ಮೆ ಜೀವವೇ ಬಾಯಿಗೆ ಬರುವಂತಹ ಅನುಭವವನ್ನು ಅನುಭವಿಸಿ ಅಲ್ಲಿಗೆ ಹೋಗ ಬೇಕಾಗುತ್ತದೆ. ಎಂದಿನಂತೆ 2025ರ ಏಪ್ರಿಲ್ 22ರಂದು ಸಹಾ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸುಮಾರು 1200-1500 ಮಂದಿ ಪ್ರವಾಸಿಗರು ಆ ಪ್ರದೇಶಕ್ಕೆ ಹೋಗಿದ್ದಾರೆ.
ಮಂಗಳವಾರ ಮಧ್ಯಾಹ್ನ 2:30 ರ ಸುಮಾರಿಗೆ ಇದ್ದಕ್ಕಿದ್ದಂತೆಯೇ ಕಣಿವೆಯ ಮೇಲಿನಿಂದ ಇಳಿದು ಬಂದ ಸೈನಿಕವೇಷದಲ್ಲಿದ್ದ ಭಯೋತ್ಪಾದಕರು ಕೇವಲ ಗಂಡಸರನ್ನಷ್ಟೇ ಕೇಂದ್ರೀಕರಿಸಿ ಅವರ ಹೆಸರು ಮತ್ತು ಧರ್ಮವನ್ನು ವಿಚಾರಿಸಿ ಅನುಮಾನ ಬಂದಲ್ಲಿ ಅವರ ಪ್ಯಾಂಟ್ ಕಳಚಿ ಅವರು ಮುಸಲ್ಮಾನರಲ್ಲಾ ಎಂಬುದನ್ನು ಖಚಿತ ಪಡಿಸಿಕೊಂಡು ಅವರ ಹಣೆಗೆ ಗುಂಡಿಕ್ಕಿ ಕೊಲ್ಲುವ ಮೂಲಕ ಆ ಸುಪ್ರಸಿದ್ಧ ತಾಣ ಉಗ್ರರ ಹುಚ್ಚಾಟ. ಮತ್ತು ಅಟ್ಟಹಾಸಕ್ಕೆ ಬಲಿಯಾಗಿ ರಕ್ತಸಿಕ್ತವಾಗಿ ಹೋಗಿದೆ. ಪಹಲ್ಗಾಂನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಮತ್ತೊಬ್ಬ ಬೆಂಗಳೂರಿನ ನಿವಾಸಿಯೂ ಸೇರಿದಂತೆ ಸುಮಾರು 26 ಮಂದಿ ಬಲಿಯಾಗಿದ್ದು ಅದರಲ್ಲಿ ಕೇವಲ ಏಳು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಹರಿಯಾಣದ ಕರ್ನಾಲ್ ಜಿಲ್ಲೆಯವರಾದ ವಿನಯ್ ನರ್ವಾಲ್ ಎಂಬ 26 ವರ್ಷದ ನೌಕಾಪಡೆ ಅಧಿಕಾರಿಯೂ ಮೃತಪಟ್ಟಿದ್ದಾರೆ. ತಮ್ಮ ಮಧುಚಂದ್ರ ಸುಮಧುರ ಕ್ಷಣಗಳನ್ನು ಕಳೆಯಲು ಕಾಶ್ಮೀರ ಪ್ರವಾಸ ಕೈಗೊಂಡಿದ್ದು ಅವರ ಪತ್ನಿಯ ಕೈಯಲ್ಲಿದ್ದ ಮೆಹಂದಿ ಅಳಿಸಿ ಹೋಗುವ ಮುನ್ನವೇ ವಿಧಿಯು ಇವರ ಬಾಳಿನಲ್ಲಿ ಆಟವಾಡಿದ್ದು, ನರ್ವಾಲ್ ಶವದ ಮುಂದೆ ಕುಳಿತು ಅವರ ಪತ್ನಿ ದುಃಖಿಸುತ್ತಿರುವ ಫೋಟೋ ಈಗ ಭಾರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿ ಸಕಲ ಭಾರತೀಯರ ಮನಕಲಕುವಂತೆ ಮಾಡಿದೆ.
ಕುಟುಂಬ ಸಮೇತ ಅಲ್ಲಿನ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದ ಕುಟುಂಬದ ಮುಂದೆ ಏಕಾ ಏಕಿ ಧಾಳಿ ನಡೆಸಿದ ಭಯೋತ್ಪಾದಕರು ಅವರ ಪತ್ನಿ ಮತ್ತು ಮಕ್ಕಳ ಕಣ್ಣ ಮುಂದೆಯೇ ಅವರ ಪತಿಗೆ ಗುಂಡು ಹಾರಿಸಿ ರಕ್ತದ ಮಡುವಿನಲ್ಲಿ ಮುಳುಗಿಸಿದಾಗ, ಭಯಭೀತರಾಗಿ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವ ಹೆಂಗಳೆಯರ ವೀಡಿಯೋ ಸಹಾ ವೈರಲ್ ಆಗಿದ್ದು, ಅದನ್ನು ನೋಡಲು ಮನಸ್ಸು ಬಾರದಾಗಿದೆ. ಶಿವಮೊಗ್ಗ ಮೂಲಕ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ಎನ್ನುವವರ ಪುತ್ರ ಪಿಯುಸಿ ಪರೀಕ್ಷೆಯಲ್ಲಿ 98% ಅಂಕಗಳನ್ನು ಗಳಿಸಿದ್ದರ ಸಲುವಾಗಿ ಆರಂಭದಲ್ಲಿ ರಾಜಸ್ಥಾನದ ಪ್ರವಾಸ ಮಾಡಬೇಕು ಎಂದು ಕೊಂಡಿದ್ದವರು ನಂತರ ತಮ್ಮ ಸಂಬಂಧೀಕರ ಮಾತು ಕೇಳಿ ಕಾಶ್ಮೀರಕ್ಕೆ ಹೋಗಿದ್ದಾಗ, ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ತಮ್ಮ ಪತಿಯನ್ನು ಕೊಂದ ಭಯೋತ್ಪಾದಕರ ಬಳಿ ಹೋಗಿ ನನ್ನನ್ನೇಕೆ ಉಳಿಸಿದೆ? ನನ್ನನ್ನೂ ಕೊಂದು ಬಿಡು ಎಂದು ಆವರ ಪತ್ನಿ ಕೇಳಿಕೊಂಡಾಗ, ಮೋದಿಯವರ ಬಳಿ ಹೋಗಿ ಹೇಳು ಎಂಬ ಉದ್ಧಟನವನ್ನು ಭಯೋತ್ಪಾದಕರು ಮೆರೆದಿರುವುದು ನಿಜಕ್ಕೂ ಆಘಾತಕಾರಿಯಾದ ವಿಚಾರವಾಗಿದೆ.
ಕಾಶ್ಮೀರದಲ್ಲಿ ಉಗ್ರದ ದಾಳಿಯಿಂದ ಮೃತರಾದ ಹಾವೇರಿಯ ಮೂಲದ 41ವಯಸ್ಸಿನ ಭರತ್ ಭೂಷಣ್ ಎನ್ನುವವರು ಸಾಫ್ಟ್ವೇರ್ ಇಂಜಿನೀಯರ್ ಆಗಿದ್ದು ಪ್ರಸ್ತುತ ಬೆಂಗಳೂರಿನ ಮತ್ತೀಕೆರೆಯ ಹತ್ತಿರದ ಗೋಕುಲ ಬಡಾವಣೆಯ ನಿವಾಸಿಯಾಗಿದ್ದು ಅವರು ತಮ್ಮ ಪತ್ನಿ ಸುಜಾತ ಮತ್ತು ಮೂರು ವರ್ಷದ ಪುತ್ರನೊಂದಿಗೆ ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಭಯೋತ್ಪಾದಕರು ಕಲ್ಮಾ ಓದಲು ಹೇಳಿ ಅದನ್ನು ಓದಲು ಆಗದೇ ಹೋದಾಗ, ಇವರು ಹಿಂದು ಎಂದು ಹೇಳುತ್ತಲೇ ಅವರ ಮೇಲೆ ಗುಂಡಿನ ಸುರಿಮಳೆಗರೆದಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಬೆಂಗಳೂರಿನ ಮೂರನೇ ವ್ಯಕ್ತಿ ಮಧುಸೂದನ್ ರಾವ್ ಎನ್ನುವವರು ಮೂಲತಃ ಆಂದ್ರದ ನೆಲ್ಲೂರಿನವರಾಗಿದ್ದು ಬೆಂಗಳೂರಿನಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರೀ, ಮತ್ತು ಮಗ ಮುಕುಂದ ಶ್ರೀದತ್ತ ಅಲ್ಲದೇ ಇನ್ನೂ ಮೂರ್ನಾಲ್ಕು ಕುಟುಂಬದೊಡನೆ ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದಾಗ, ಕೆಲವರು ಊಟ ತರಲು ಹೊರಗೆ ಹೋಗಿದ್ದಾಗ ಮಧುಸೂದನ್ ರಾವ್ ಮತ್ತಿತರಉ ಬಸ್ ನಲ್ಲೇ ಕುಳಿತಿದ್ದಾಗ, ಏಕಾ ಏಕಿ ಬಸ್ಸಿನೊಳಗೆ ಭಾರತೀಯ ಸೈನ್ಯದ ಯೂನಿಫಾರಂ ತೊಟ್ಟಿದ್ದ ನುಗ್ಗಿದ ಉಗ್ರರು, ಮಧುಸೂದನ್ ಬಳಿ ಬಂದು ನಿನ್ನದು ಯಾವ ಧರ್ಮ? ಹಿಂದುನಾ? ಮುಸ್ಲಿಮ್ಮಾ? ಎಂದು ಕೇಳಿದ್ದಾರೆ. ಭಯದಿಂದ ಮಧುಸೂದನ್ ಮುಸ್ಲಿಂ ಎಂದಿದ್ದೇ ತಡಾ, ಆ ಉಗ್ರ ತನ್ನ ಜೇಬಿನಿಂದ ಕುರಾನ್ ತೆಗೆದು ಓದುವಂತೆ ಹೇಳಿದಾಗ, ನನಗೆ ನನಗೆ ಮರೆತು ಹೋಗಿದೆ ಎಂದು ಮಧುಸೂದನ್ ಅಂದಾಗ, ಸರಿ, ನಿನ್ನ ಪ್ಯಾಂಟ್ ಬಿಚ್ಚು ಎಂದು ತಾಕೀತು ಮಾಡಿದಾಗ, ಮತ್ತೆ ಭಯದಿಂದ ನಾನು ಹಿಂದೂ ಎಂದು ಹೇಳುತ್ತಿದ್ದಂತೆಯೇ, ಆ ಉಗ್ರರ ಬಂದೂಕಿನ ಗುಂಡು ಮಧುಸೂದನ್ ಅವರ ತಲೆಯನ್ನು ಸೀಳಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಅಂಗಿ ಬಿಚ್ಚಿಸಿ ಜಾತಿ ನೋಡಿದ್ದು, ನೆನ್ನೆ ಕಾಶ್ಮೀರದಲ್ಲಿ ಲುಂಗಿ ಬಿಚ್ಚಿಸಿ ಧರ್ಮ ನೋಡಿದ್ದು, ಎರಡೂ ಸಹಾ ಧರ್ಮಾಂಧತೆ ಮತ್ತು ಮತಾಂಧತೆಯ ಭಾಗವೇ ಆಗಿ, ಸದ್ದಿಲ್ಲದೇ ಕೆಲವು ದುಷ್ಟ ಶಕ್ತಿಗಳು ಮತ್ತು ಅಧಿಕಾರಕ್ಕಾಗಿ, ಓಟ್ ಆಸೆಗಾಗಿ ಅವರೊಡನೆ ಕೈ ಜೋಡಿಸಿರುವ ಕೆಲವರು ಹಿಂದುಗಳನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಒಡಿತಾ ಇದ್ರೂ, ಸಹಾ, ನಾನು ಕನ್ನಡಿಗ, ನೀನು ಹಿಂದೀವಾಲ ಎಂದು ರಸ್ತೆಯಲ್ಲಿ ಬಡಿದಾಡುತ್ತಾ, ನಾನು ಬ್ರಾಹ್ಮಣ, ಲಿಂಗಾಯಿತ, ಗೌಡ, ಕುರುಬ ದಲಿತ ಅಂತಾ ಜಾತಿಯ ಹೆಸರಿನಲ್ಲಿ ಕಚ್ಚಾಡುತ್ತಲೇ ಇದ್ದರೆ, ಇನ್ನು ಕೇವಲ ಕೆಲವೇ ವರ್ಷಗಳಲ್ಲಿ ಹಿಂದೂಸ್ಥಾನ ಎಂಬುದು ಈ ಪ್ರಪಂಚದ ಭೂಪಟದಲ್ಲಿ ಇತ್ತು ಎನ್ನುವುದನ್ನೂ ಹೇಳಲಾಗದಷ್ಟು ಮಾಯವಾಗಿ ಬಿಡುತ್ತದೆ.
ಭಾರತದಂತಹ ದೇಶದೊಳಗೆ ಇಷ್ಟು ಸಲೀಸಾಗಿ ಭಯೋತ್ಪಾದಕರು ಪದೇ ಪದೇ ಧಾಳಿ ಮಾಡಿ ನುಸುಳುತ್ತಾರೆ ಎಂದರೆ ಅದು ನಿಸ್ಸಂದೇಹವಾಗಿಯೂ ದೇಶದ ಭದ್ರತಾ ವೈಫಲ್ಯವಾಗಿದ್ದು ಇದಕ್ಕೆ ನೇರವಾಗಿ ಅಲ್ಲಿನ ರಾಜ್ಯಸರ್ಕಾರ ಮತ್ತು ಕೇಂದ್ರ ಸರ್ಕಾರವೇ ಹೊಣೆಯನ್ನು ಹೊರಬೇಕಾಗುತ್ತದೆ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಇದಕ್ಕೆ ಸ್ಥಳೀಯರ ಬೆಂಬಲ ಶೇ200 ರಷ್ಟು ಇದ್ದದ್ದರಿಂದಲೇ ಇಷ್ಟೆಲ್ಲಾ ಸಾಧ್ಯವಾಗಿದೆ ಎಂಬುದೂ ಸಹಾ ಸತ್ಯವಾಗಿದೆ.
ಪುಲ್ವಾಮಾ ಧಾಳಿಯ ನಂತರ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆಗಸ್ಟ್ 5, 2019 ರಂದು, ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ಸಾಂವಿಧಾನಿಕವಾಗಿ ರದ್ದು ಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಘಿಸಿ, ಹೇರಳವಾಗಿ ಅಭಿವೃದ್ಧಿಯನ್ನು ಮಾಡಿದ ಫಲವಾಗಿ ಅಲ್ಲಿನ ಬಡವರು ಮತ್ತು ವಂಚಿತರ ತಮ್ಮ ಹಕ್ಕುಗಳನ್ನು ಪಡೆದದ್ದಲ್ಲದೇ, ಪ್ರತ್ಯೇಕತಾವಾದ ಮತ್ತು ಸೈನಿಕರತ್ತ ನಡೆಯುತ್ತಿದ್ದ ಕಲ್ಲು ತೂರಾಟವು ನಿಂತಿದ್ದಲ್ಲದೇ, ಪ್ರವಾಸೋದ್ಯಮವೂ ಸಹಾ ಉತ್ತಮಗೊಂಡಿತ್ತು. ಆನಂತರದ ದಿನಗಳಲ್ಲಿ ಪ್ರತಿವರ್ಷವೂ ಸುಮಾರು 32 ಲಕ್ಷಕ್ಕೂ ಅಧಿಕ ಪ್ರವಾಸಿಗರು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದ ಕಾರಣ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಕೇಂದ್ರ ಸರ್ಕಾರವೂ ವಿಧಾನ ಸಭಾ ಚುನಾವಣೆ ನಡೆಸಿ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವೂ ಅಧಿಕಾರಕ್ಕೆ ಬಂದಿತ್ತು.
ಕಳೆದ ವರ್ಷ ಇದೇ ಸಮಯದಲ್ಲಿ ಕುಟುಂಬ ಸಮೇತ ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದಾಗ, ಕಾಶ್ಮೀರದಲ್ಲಿ ಶಾಂತಿ ನೆಲೆಸಿರುವುದು ನಿಜವೇ ಎಂದು ತಿಳಿಯಲು ಪ್ರಯತ್ನಿಸಿದಾಗ ಕಂಡ ಬಂದ ವಿಷಯ ನಿಜಕ್ಕೂ ಅಚ್ಚರಿಯದಾಗಿತ್ತು. ಪ್ರತಿಯೊಂದು ರಸ್ತೆಯ ಆರಂಭ ಮತ್ತು ಅಂತ್ಯದಲ್ಲಿ ಮಿಲಿಟರಿ ಪಡೆಗಳು ಗಸ್ತು ತಿರುಗುತ್ತಿದ್ದು ಅನುಮಾನ ಬಂದವನ್ನು ಕೂಡಲೇ ತಪಾಸಣೆ ಮಾಡುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಎರೆಡೆರಡು ಬಾರಿ ತಪಾಸಣೆ ನಡೆಸಲಾಗುತ್ತದೆ. ಅಲ್ಲಿನ ಸ್ಥಳೀಯರಿಗಂತೂ 370ನೇ ವಿಧಿಯ ರದ್ದತಿಯ ಕುರಿತಾಗಿ ಅಸಮಧಾನ ಇನ್ನೂ ಬೂದಿ ಮುಚ್ಚಿದ್ದ ಕೆಂಡದಂತೆಯೇ ಇದ್ದು, ಭೌಗೋಳಿಕವಾಗಿ ಭಾರತದಲ್ಲೇ ಇದ್ದರೂ ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ಪಾಕೀಸ್ಥಾನದ ಪರವಾಗಿಯೇ ಇದ್ದದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅವರನ್ನು ಭಾರತೀಯ ಮುಖ್ಯಧಾರೆಗೆ ಕರೆತರಲು ಭಾರತ ಸರ್ಕಾರ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಖರ್ಚು ಮಾಡುತ್ತಿದ್ದರೂ ಅಲ್ಲಿನವರೆಂದೂ ಭಾರತದೊಂದಿಗೆ ಮುಕ್ತವಾಗಿ ಬರಲು ಒಪ್ಪುವುದಿಲ್ಲ.
ಕಾಶ್ಮೀರಕ್ಕೆ ಬರುವ ಪ್ರವಾಸಿಗರೊಂದಿಗೆ ವ್ಯವಹಾರಿಕವಾಗಿ ಚನ್ನಾಗಿ ಕಾಣಿಸಿಕೊಳ್ಳುತ್ತಾ, ಕೊಟ್ಟ ಹಣಕ್ಕೆ ಮೋಸವಾಗದಂತೆ ಅನುಕೂಲಗಳನ್ನು ಮಾಡಿಕೊಡುತ್ತಾರಾದರೂ, ಮಾನಸಿಕವಾಗಿ ಅವರೆಂದೂ ಭಾರತೀಯರಂತೆ ಕಾಣಿಸಲೇ ಇಲ್ಲಾ ಎನ್ನುವುದು ಸ್ಪಷ್ಟವಾಗಿತ್ತು. ಅಲ್ಲಿನವರ ಮಾನಸಿಕ ಪರಿಸ್ಥಿತಿ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಚೆನ್ನಾಗಿ ವಿವರಿಸಿದ್ದಾರೆ. ಅವರ ಹೋಟೇಲಿನಲ್ಲಿ ನೆಟ್ವರ್ಕ್ ಸರಿ ಇರಲಿಲ್ಲದ ಕಾರಣ, ವೈಫೈ ಕೇಳಿದ ಸಮಯದಲ್ಲಿ ಸ್ವಲ್ಪ ಮುಖ ಕೆಟ್ಟದು ಮಾಡಿಕೊಂಡು, ನಿಮ್ಮ ಅಮಿತ್ ಶಾ ಗೆ ಹೇಳಿ ಇಲ್ಲಿ ಒಳ್ಳೇ ನೆಟ್ ವರ್ಕ್ ಕೊಡಕ್ಕೆ..ಫೈ ಜೀ ನೆಟ್ವರ್ಕ್ ಕೊಡಕ್ಕೆ” ಎಂದನಂತೆ ಆಗ ವರ ಪಿತ್ತ ನೆತ್ತಿಗೆ ಏರಿ, ಒಳ್ಳೇ ನೆಟ್ವರ್ಕ್ ಕೊಟ್ಟಾಗ…ನೀವು ಅದನ್ನ ಹೇಗೆ ಉಪಯೋಗ ಮಾಡಿದ್ರಿ? ಎಂದು ಕೇಳಿ ಆತನನ್ನು ಸುಮ್ಮನಾಗಿಸಿದ್ದರಂತೆ, ಅಗತ್ಯಕ್ಕೆ ಮೀರಿ ಅಲ್ಲಿ ಏನೇ ಸೌಲಭ್ಯ ಕೊಟ್ಟರೂ ಅದು ಉಪಯೋಗ ಆಗೋದು ದೇಶ ವಿರೋಧಿ ಕೃತ್ಯಕ್ಕೇ ಎನ್ನುವುದು ನಿರ್ವಿವಾದವಾಗಿದೆ. ಕಾಶ್ಮೀರಿಗರು ನೆನ್ನೆ ಕ್ಯಾಂಡಲ್ ಹಿಡಿದು ನಮಗೂ ಭಯೋತ್ಪಾದಕತೆಗೂ ಸಂಬಧವೇ ಇಲ್ಲಾ, ನಾವೆಲ್ಲರೂ ಭಾರತೀಯರು, ದಯವಿಟ್ಟು ಪ್ರವಾಸಿಗರು ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಾಶ್ಮೀರಕ್ಕೆ ಬರುವುದನ್ನು ನಿಲ್ಲಿಸ ಬೇಡಿ ಎಂದು ಗೋಗರೆದಿದ್ದಾರೆ. ಕಾಶ್ಮೀರಿಗರು ನಿಜಕ್ಕೂ ಒಳ್ಳೇವರಾಗಿದ್ದರೆ ಅದರಲ್ಲೂ ಮುಖ್ಯವಾಗಿ ಶಾಂತಿ ಪ್ರಿಯರಾಗಿದ್ದರೆ, ಭಯೋತ್ಪಾದನೆಯನ್ನು ಆರಂಭದಲ್ಲೇ ಚಿವುಟಿ ಹಾಗುತ್ತಿದ್ದರೂ, ಆಕಸ್ಮಾತ್ ಅಲ್ಲಿ ಇಲ್ಲಿ ಭಯೋತ್ಪಾದಕರು ನುಸುಳುದರೂ, ಅವರನ್ನು ಹಿಡಿದು ಪೋಲೀಸರಿಗೋ ಇಲ್ಲವೋ ಸೈನ್ಯದ ವಶಕ್ಕೆ ಕೊಡುತ್ತಿದ್ದರು. ಪಾಕೀಸ್ಥಾನದ ಎಂಜಿಲಿನ ಆಸೆಗೆ, ಭಯೋತ್ಪಾದಕರಾಗುತ್ತಿರಲಿಲ್ಲ ಮತ್ತು ಸೈನಿಕರತ್ತ ಕಲ್ಲು ತೂರುತ್ತಿರಲಿಲ್ಲ. ಈಗ ಎಷ್ಟೇ ತಿಪ್ಪರಲಾಗ ಹಾಕಿದರೂ ಹಿಂದೂಗಳು ಕಾಶ್ಮೀರೀ ಮುಸಲ್ಮಾನರನ್ನು ನಂಬುವ ಸ್ಥಿತಿಯಲ್ಲಿಲ್ಲ ಎನ್ನುವುದೇ ಸತ್ಯ.
ಸೌದಿ ಪ್ರವಾಸವನ್ನು ಮೊಟುಕುಗೊಳಿಸಿ ಭಾರತಕ್ಕೆ ಹಿಂದಿರಿಗಿರುವ ಪ್ರಧಾನ ಮಂತ್ರಿಗಳು ಈಗಾಗಲೇ ಉನ್ನತ ಮಟ್ಟದ ಮಾತು ಕತೆ ನಡೆಸಿದ್ದಲ್ಲದೇ, ಇದಕ್ಕೆ ತಕ್ಕ ಪ್ರತೀಕಾರವನ್ನು ಕೊಟ್ಟೇ ತೀರುತ್ತೇವೆ ಎಂದು ಘೋಷಣೆ ಮಾಡಿಯಾಗಿದೆ. ಗೃಹಮಂತ್ರಿ ಅಮಿತ್ ಶಾ ಖುದ್ದಾಗಿ ಶ್ರೀನಗರಕ್ಕೆ ಹೋಗಿ ಅಲ್ಲಿನ ಮುಖ್ಯಮಂತ್ರಿ ಮತ್ತು ಇತರೇ ರಕ್ಷಣಾ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಮುಂದಿನ ನಡೆಗಳ ಬಗ್ಗೆ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಈ ಹಿಂದೆ ಧಾಳಿ ನಡೆಸಿದಾಗ ಇದೇ ಪ್ರಧಾನ ಮಂತ್ರಿಗಳ ತಂಡ ಯಾವ ಪರಿಯಾಗಿ ಪ್ರತ್ಯುತ್ತರ ನೀಡಿತ್ತು ಎಂಬುದನ್ನು ನೋಡಿರುವ ನಮಗೆ ಕೇಂದ್ರ ಸರ್ಕಾರದ ಮೇಲೆ ನಂಬಿಕೆಯಂತೂ ಇದೆ. ಆದರೆ prevention is better than cure ಎನ್ನುವಂತೆ ಪ್ರತೀ ಬಾರಿ ಧಾಳಿ ಆದಾಗ ಅದಕ್ಕೆ ಪ್ರತ್ಯುತ್ತರ ನೀಡುವ ಬದಲು, ಈ ರೀತಿಯ ಘಟನೆಗಳೇ ನಡೆಯದಂತೆ ನೋಡಿಕೊಳ್ಳುವುದಲ್ಲದೇ, ಈ ಬಾರಿ ಭಾರತದ ಪ್ತತ್ಯುತ್ತರ ಪಾಕೀಸ್ಥಾನ ಮತ್ತು ಅದರ ಬೆಂಬಲಿತ ಭಯೋತ್ಪಾದಕರು ಮತ್ತೆಂದೂ ಏಳದಂತೆ ಮಾಡಬೇಕು ಎನ್ನುವುದೇ ಸಕಲ ಭಾರತೀಯರ ಆಶಯವಾಗಿದೆ.
ಸರ್ಕಾರ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿದ್ದರೆ, ದೇಶ/ಧರ್ಮ ವಿರೋಧಿ ಮನಸ್ಥಿತಿಯ ಕಾಶ್ಮೀರಿಗರನ್ನು ಮಟ್ಟ ಹಾಕುವ ಸಲುವಾಗಿ ದೇಶಾದ್ಯಂತ #Ban Kashmir ಅಭಿಯಾನ ಈ ಕೂಡಲೇ ಆಗಬೇಕಿದೆ. ಆಷ್ಟೇ ಅಲ್ಲದೇ, ಅಮರ್ ನಾಥ್ ಯಾತ್ರೆಯೂ ಸೇರಿದಂತೆ ಮುಂದಿನ ನಾಲ್ಕೈದು ವರ್ಷಗಳ ಕಾಲ ಕಾಶ್ಮೀರಕ್ಕೆ ಭಾರತೀಯರು ಯಾರೂ ಹೋಗದೇ ಇದ್ದಾಗ ನಿಶ್ಚಿತವಾಗಿಯೂ ಕಾಶ್ಮೀರಿಗರ ಮುಖ್ಯ ಆದಾಯವಾದ ಪ್ರವಾಸೋದ್ಯಮ ಕುಂಠಿತವಾಗಿ ಅವರ ಕುಟುಂಬ ಮತ್ತು ಮಕ್ಕಳು ಹೊಟ್ಟೆಯ ಹಸಿವಿನಿಂದ ನರಳಿದಾಗಲೇ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಅಂದು ಬಿಕಾರಿ ಪಾಕೀಸ್ಥಾನ ಕೊಡುತ್ತಿದ್ದ 500 ರೂಪಾಯಿ ಆಸೆಗೆ ಭಾರತೀಯ ಸೈನಿಕರ ವಿರುದ್ಧ ಕಲ್ಲು ತೂರಿತ್ತಿದ್ದವರಿಗೆ ಇಂದು ಅದೇ ಪಾಕೀಸ್ಥಾನದ ಪ್ರಜೆಗಳಂತೆಯೇ ಒಂದು ತುತ್ತಿನ ಊಟಕ್ಕೂ ನರಳುವಂತಾದಾಗಲೇ ಅವರ ಮನೆಗಳಿಂದ ಉಗ್ರರಿಗೆ ನೀಡುತ್ತಿದ ನೆರವು ತೆರವಾಗುತ್ತದೆ. ಈಗಾಗಲೇ ಲಕ್ಷಾಂತರ ಜನರು ತಮ್ಮ ಕಾಶ್ಮೀರಿ ಪ್ರವಾಸವನ್ನು ಮೊಟುಕುಗೊಳಿಸಿ ತಮ್ಮ ತಮ್ಮ ಪ್ರದೇಶಗಳಿಗೆ ಹಿಂದಿರುಗುತ್ತಿದ್ದರೆ, ಲಕ್ಷಾಂತರ ಜನರು ತಮ್ಮ ಪ್ರವಾಸವನ್ನು ರದ್ದು ಮಾಡುವ ಮೂಲಕ #Ban Kashmir ಅಭಿಯಾನಕ್ಕೆ ಬೆಂಬಲವನ್ನು ನೀಡುತ್ತಿದ್ದಾರೆ.
ಅದೇ ರೀತಿ ಭಯೋತ್ಪಾದನೆಗೆ ಧರ್ಮ ಇಲ್ಲಾ. ಕಾಶ್ಮೀರೀ ಫೈಲ್ಸ್ ಎನ್ನುವುದೆಲ್ಲಾ ಕಟ್ಟು ಕಥೆ, ಪುಲ್ವಾಮ ಧಾಳಿ ಸರ್ಕಾರಿ ಪ್ರಾಯೋಜಿತ, ಸರ್ಜಿಕಲ್ ಸ್ಟ್ರೈಕ್ ದಾಖಲೆ ಕೊಡಿ, I support palistien ಎಂಬ ಚೀಲವನ್ನು ನೇತು ಹಾಕಿಕೊಂಡು ಸಂಸತ್ತಿಗೆ ಹೋದ ಅಧಿಕಾರದಾಹಿ ದೇಶವಿರೋಧಿ ಮನಸ್ಥಿತಿಯವರನ್ನೂ ದಯವಿಟ್ಟು ದೂರವಿಡಿ. ಅಧಿಕಾರದ ಆಸೆಗಾಗಿ ದೇಶವನ್ನೇ ಅಡಾ ಇಡುವ ಅನ್ನಾ ಹಾಕಿದ ಮನೆಗೆ ಕನ್ನ ಕೊರೆಯುವವರ ಬೆಂಬಲಕ್ಕೆ ನಿಲ್ಲದಿರಿ.
ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ ಎನ್ನುವ ಅರ್ಥಾತ್ ಒಗ್ಗಟ್ಟಿನಲ್ಲಿ ಬಲವಿದೆ. ಧರ್ಮೋರಕ್ಷತಿ ರಕ್ಷಿತಃ ಎನ್ನುವ ಮಾತುಗಳು ಪ್ರಸ್ತುತವಾಗಿ ಬಹಳಷ್ಟು ಸತ್ಯವಾಗಿರುವ ಕಾರಣ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಭಾವನೆಯೊಂದಿಗೆ ನಾವೆಲ್ಲಾ ಭಾರತೀಯರು ಒಗ್ಗಟ್ಟಿನಿಂದ ಪರಿಸ್ಥಿತಿಯನ್ನು ನಿಭಾಯಿಸೋಣ ಮತ್ತು ಭಯೋತ್ಪಾದಕರ ದಾಳಿಯಲ್ಲಿ ಅದುನೀಗಿದ ಆತ್ಮಗಳಿಗೆ ಭಗವಂತ ಸದ್ಗತಿಯನ್ನು ನೀಡಲಿ ಮತ್ತು ಅವರ ಅಕಾಲಿಕ ಅಗಲಿಕೆಯನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ಆ ಭಗವಂತ ಅ ಕುಟುಂಬಗಳಿಗ ನೀಡಲಿ ಮತ್ತು ಅಗತ್ಯವಿದ್ದಲ್ಲಿ ಅಂತಹ ಕುಟಂಬಗಳಿಗೆ ಯಾವುದೇ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡುವಂತನ ಶಕ್ತಿಯನ್ನು ನಮ್ಮೆಲ್ಲರಿಗೂ ಕರುಣಿಸಲಿ ಎಂದೇ ಭಗವಂತನನ್ನು ಕೇಳಿಕೊಳ್ಳೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ