ಯಾವುದೇ ಒಂದು ದೇಶ ಸಧೃಢವಾಗಿರಬೇಕೆಂದರೆ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು. ಅದರಲ್ಲೂ ವಿದೇಶಿ ವಿತ್ತೀಯ ಮೀಸಲು ನಿಧಿ (forign excnage reserve fund) ಉತ್ತಮ ಮಟ್ಟದಲ್ಲಿದ್ದಾಗಲೇ, ದೇಶಕ್ಕೆ ಯಾವುದೇ ರೀತಿಯ ಅವಘಡಗಳು ಸಂಬವಿಸಿದಲ್ಲಿ ಯಾರದ್ದೇ ನೆರವಿಲ್ಲದೇ, ಅಥವ ನೆರೆರಾಷ್ಟ್ರಗಳ ಕನಿಷ್ಠ ನೆರವಿನಿಂದ ಸುಲಭವಾಗಿ ಚೇತರಿಸಕೊಳ್ಳಬಹುದಾಗಿದೆ. ದುರಾದೃಷ್ಟವಷಾತ್ ಮತಾಂಧತೆಯನ್ನೇ ಮೂಲವನ್ನಾಗಿಸಿಕೊಂಡಿರುವ, ಪ್ರಪಂಚಾದ್ಯಂತ ಧಾಳಿ ನಡೆಸುವ ಬಹುತೇಕರ ಉಗ್ರರ ತರಭೇತಿ ತಾಣವಾಗಿರುವ ಪಾಪೀಸ್ಥಾನದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೇ ಇದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಅಲ್ಲಿನ ಪ್ರಜೆಗಳ ಬಳಿ ತಿನ್ನುವುದಕ್ಕೆ ಆಹಾರವಿಲ್ಲದೇ ಹೋದರೂ ಮತಾಂಧತೆಗೇನೂ ಕಡಿಮೆಯೇನಿಲ್ಲ.
1947ರಲ್ಲಿ ಧರ್ಮಾಧಾರಿತವಾಗಿ ಅಖಂಡ ಭಾರತ ದೇಶದಿಂದ ತುಂಡರಿಸಿಕೊಂಡು ಹೋದ ಪಾಕಿಸ್ಥಾನ ಅಂದಿನಿಂದ ಇಂದಿನವರೆಗೂ ಪದೇ ಪದೇ ಒಂದಲ್ಲಾ ಒಂದು ವಿಷಯಗಳ ಬಗ್ಗೆ ಭಾರತದೊಂದಿಗೆ ಕಾಲು ಕೆರೆದುಕೊಂಡು ಯುದ್ಧ ಮಾಡುತ್ತಾ ಪ್ರತೀ ಬಾರಿಯೂ ಪೆಟ್ಟು ತಿಂದಿದ್ದರೂ ಅಲ್ಲಿಯವರಿಗೆ ಬುದ್ಧಿ ಬಂದಿಲ್ಲ ಎನ್ನುವುದಕ್ಕೆ ತಾಜ ಉದಾಹರಣೆಯಾಗಿ, 2025 ಏಪ್ರಿಲ್ 22ರಂದು ಭಾರತದ ಸ್ವಿಟ್ಜರ್ಲೆಂಡ್ ಎಂದೇ ಜನಪ್ರಿಯವಾಗಿರುವ ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆ ಪ್ರದೇಶದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕ್ ಬೆಂಬಲಿತ ಭಯೋತ್ಪಾದಕರು ಏಕಾಏಕಿ ಅವರ ಧರ್ಮವನ್ನು ಕೇಳಿಕೊಂಡು, ಆವರು ಅಮಾಯಕ ಹಿಂದೂಗಳು ಎಂದು ಖಚಿತ ಪಡಿಸಿಕೊಂಡ ನಂತರ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಸುಮಾರು 26 ಜನರು ಸಾವಿಗೀಡಾಗಿ, ಸುಮಾರು 17 ಜನರು ಗಾಯಗೊಂಡಿದ್ದರು. ಈ ರೀತಿಯ ಅಪ್ರಚೋದಿತ ಗೆರಿಲ್ಲಾ ಮಾದರಿಯ ಧಾಳಿ ದೇಶಾದ್ಯಂತ ಆತಂಕದ ಅಲೆಯನ್ನು ಎಬ್ಬಿಸಿದ್ದಲ್ಲದೇ, ಇತ್ತೀಚೆಗೆ ತಾನೇ ಸುಧಾರಿಸುತ್ತಿದ್ದ ಕಾಶ್ಮೀರದ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟನ್ನು ನೀಡಿರುವುದಂತೂ ಸುಳ್ಳಲ್ಲ.
ಈ ಅಪ್ರಚೋದಿತ ಧಾಳಿಯ ಹಿನ್ನೆಲೆಯಲ್ಲಿ ಭಾರತ ದೇಶವು ಪಾಕಿಸ್ತಾನ ವಿರುದ್ಧ ಆರಂಭದಲ್ಲಿ ಪರೋಕ್ಷವಾಗಿ ಆರ್ಥಿಕ ಸಮರವನ್ನೇ ಸಾರಿದ್ದು ಅದರ ಮೊದಲ ಹಂತವಾಗಿ ಸಿಂಧು ಜಲ ಒಪ್ಪಂದ ಅಮಾನತುಗೊಳಿಸಿದ್ದಲ್ಲದೇ, ಅಟ್ಟಾರಿ-ವಾಘಾ ಗಡಿ ಬಂದ್ ಮಾಡುವ ಮೂಲಕ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿತು. ಅಷ್ಟೇ ಅಲ್ಲದೇ, ಪಾಕ್ ಜನಸಾಮಾನ್ಯರಿಗೆ ನೀಡಲಾಗುತ್ತಿದ್ದ ವೈದ್ಯಕೀಯ ವೀಸಾ ಕೂಡಾ ಸೇರಿದಂತೆ ಎಲ್ಲ ರೀತಿಯ ವೀಸಾ ರದ್ದುಗೊಳಿ ಒಂದು ವಾರದೊಳಗೆ ಪಾಕೀಸ್ಥಾನಿಗಳು ಭಾರತ ಬಿಟ್ಟು ಹೊರೆಗೆ ಹೋಗುವಂತೆ ಸೂಚನೆ ನೀಡಿತು. ಅಷ್ಟೇ ಅಲ್ಲದೇ ಝೀಲಂ ನದಿಯ ಅಣೆಕಟ್ಟೆಯಿಂದ ಏಕಾಏಕಿ ಹೆಚ್ಚುವರಿ ನೀರನ್ನು ಬಿಟ್ಟು ಕೃತಕ ಜಲಪ್ರಳಯವನ್ನು ನಿರ್ಮಾಣ ಮಾಡಿ ಪಾಕೀಗಳ ಕೃಷಿ ಚಟುವಟಿಗೆ ಭಾರೀ ಪೆಟ್ಟನ್ನು ನೀಡಿತು.
ಇಷ್ಟೇ ಅಲ್ಲದೇ, ಪಹಲ್ಗಾಮ್ನ ಭಯೋತ್ಪಾದಕ ದಾಳಿಯ ಪ್ರತಿಧಾಳಿಯಾಗಿ ಭಾರತ ಆಪರೇಷನ್ ಸಿಂದೂರ್ ಎಂಬ ಹೆಸರಿನಲ್ಲಿ ಮೇ 7ರ ಮುಂಜಾನೆ ಪಾಕೀಸ್ಥಾನಿಗಳ ಭಯೋತ್ಪಾದಕ ಶಿಬಿರಗಳನ್ನು ಮಾತ್ರ ಗುರಿಯಾಗಿಸಿಕೊಂಡು ಸುಮಾರು 9 ಧಾಳಿಗಳನ್ನು ನಡೆಸುವ ಮೂಲಕ ಪಾಕೀಸ್ಥಾನಕ್ಕೆ ತಕ್ಕ ಉತ್ತರ ನೀಡಿದ್ದಲ್ಲದೇ, ವಿನಾಕಾರಣ ಪಾಕೀಸ್ಥಾನ ತಮ್ಮೊಂದಿಗೆ ಕುಚೇಷ್ಟೆ ಮಾಡಬಾರದೆಂದು ಪರೋಕ್ಷವಾಗಿ ತಿಳಿಸಿದಾದರೂ, ಮೇ 7–8ರ ರಾತ್ರಿ ಪಾಕಿಸ್ತಾನವು ಉತ್ತರ ಮತ್ತು ಪಶ್ಚಿಮದಲ್ಲಿರುವ ಭಾರತೀಯ ನೆಲೆಗಳ ಮೇಲೆ ತನ್ನ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹಾರಿಸಿ ಉದ್ಧಟತನವನ್ನು ತೋರಿಸಿದ ಪರಿಣಾಮ ಭಾರತದ ರಕ್ಷಣಾ ಪಡೆಗಳು ಭೂ, ವಾಯು ಮತ್ತು ಜಲ ಧಾಳಿಯನ್ನು ನಡೆಸಿ ಪಾಕೀಸ್ಥಾನಕ್ಕೆ ಅಷ್ಟ ದಿಗ್ಭಂಧನ ಹಾಕಿದ್ದಲ್ಲದೇ, ಪಾಕೀಸ್ಥಾನದ ಯುದ್ದ ವಿಮಾನಗಳು ಮತ್ತು ದ್ರೋಣ್ ಗಳು ಮತ್ತು ಅವರ ಚೀನಾ ನಿರ್ಮಿತ ಯುದ್ದ ಉಪಕರಣಗಳನ್ನು ಛಿದ್ರ ಛಿದ್ರ ಗೊಳಿಸಿತು. ಭಾರತದ ಕೇವಲ ಎರಡೇ ಎರಡು ದಿನಗಳ ಸತತವಾದ ಧಾಳಿಗೆ ತತ್ತರಿಸಿ ಹೋದ ಭಿಕಾರಿ ಪಾಕೀಸ್ಥಾನ, ಭಾರತದ ವಿರುದ್ಧ ಹೋರಾಡಲು ತನಗೆ ಆರ್ಥಿಕ ಶಕ್ತಿ ನೀಡಿ ಎಂದು ಕಂಡ ಕಂಡವರ ಮುಂದೆ ಭಿಕ್ಷಾ ಪಾತ್ರೆ ಹಿಡಿಯುವಂತಾಯಿತು.
ಇವೆಲ್ಲದರ ಮಧ್ಯೆ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ನೆರವಾಗಲು 1.3 ಬಿಲಿಯನ್ ಡಾಲರ್ ಹಾಗೂ ಆರ್ಥಿಕ ಸಂಕಷ್ಟ ನಿವಾರಣೆಗೆ 7 ಶತಕೋಟಿ ಡಾಲರ್ ಸಾಲವನ್ನು ನೀಡುವಂತೆ ಪಾಕಿಸ್ತಾನ ಐಎಂಎಫ್ ಸಂಸ್ಥೆಗೆ ಮೊರೆ ಹೋಗಿದ್ದು ಮೇ 9 ರಂದು ಅದರ ಕುರಿಗಾಗಿ ಐಎಂಎಫ್ ಕಾರ್ಯಕಾರಿ ಮಂಡಳಿ ಸಭೆಯನ್ನು ನಡೆಸಿ ಪಾಕ್ ಸಾಲದ ಅರ್ಜಿಯ ಮೇಲೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದ ಕಾರಣ, ಪಹಲ್ಗಾಮ್ ನರಮೇಧದ ಬಳಿಕ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಕಟ್ಟಿ ಹಾಕುವ ನಿಟ್ಟಿನಿಂದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಭಾರತವು ಪಾಕಿಸ್ತಾನಕ್ಕೆ ಯಾವುದೇ ರೀತಿಯ ಸಾಲವನ್ನು ನೀಡ ಬಾರದು ಎಂದು ಪರಿ ಪರಿಯಾಗಿ ಕೇಳಿಕೊಂಡಿತು.
ಪಾಕಿಸ್ತಾನಕ್ಕೆ ನೀಡುವ ಸಾಲದ ಹಣ ಅಭಿವೃದ್ಧಿಗೆ ಬಳಕೆಯಾಗುವುದರ ಬದಲು ಭಯೋತ್ಪಾದನಾ ಚಟುವಟಿಕೆಗಳಿಗೇ ಖರ್ಛು ಮಾಡುವ ಮೂಲಕ ಐ.ಎಂ.ಎಫ್ ನೀಡುವ ಸಾಲದ ಮೂಲ ಉದ್ದೇಶವನ್ನೇ ದುರ್ಬಳಕೆ ಮಾಡಿಕೊಳ್ಳುತ್ತದೆ. ಹಾಗಾಗಿ ಪಾಕಿಸ್ತಾನಕ್ಕೆ ಸಾಲ ನೀಡಬಾರದು ಎಂದು ಒತ್ತಡ ಹೆಚ್ಚಿಸಲು ಮುಂದಾಗಿತ್ತು. ಸಾಮಾನ್ಯವಾಗಿ ಯಾವುದೇ ಬಡ ದೇಶದ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಪುನಃಸ್ಥಾಪಿಸಲು ಹೊಂದಾಣಿಕೆ ನೀತಿಗಳನ್ನು ಜಾರಿಗೆ ತರುವ ಮೂಲಕ ಬಿಕ್ಕಟ್ಟಿನಿಂದ ಬಳಲುತ್ತಿರುವ ದೇಶಗಳಿಗೆ IMF ಆರ್ಥಿಕ ನೆರವು ನೀಡುವ ಮೂಲಕ ಸಹಾಯ ಮಾಡುತ್ತದೆ. ಬಿಕ್ಕಟ್ಟುಗಳನ್ನು ತಡೆಗಟ್ಟಲು ಮತ್ತು ವಿಮೆ ಮಾಡಲು ಮುನ್ನೆಚ್ಚರಿಕೆಯ ಹಣಕಾಸು ಒದಗಿಸುವುದನ್ನು ಸಹ ಇದು ಒದಗಿಸುತ್ತದೆ. ದೇಶಗಳ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು IMF ನ ಸಾಲ ಪರಿಕರಗಳನ್ನು ನಿರಂತರವಾಗಿ ಪರಿಷ್ಕರಿಸಲಾಗುತ್ತದೆ.
ಮೇ 7, ಮೇ 8, ಮೇ 9ರಂದು ನಿರಂತರವಾಗಿ 3 ದಿನಗಳ ಕಾಲ ರಾತ್ರಿ ಭಾರತದ ಗಡಿ ಪ್ರದೇಶದಲ್ಲಿರುವ ನಗರಗಳನ್ನೇ ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದರ ಪ್ರತಿಧಾಳಿಯಾಗಿ ವಿರುದ್ಧವಾಗಿ ಭಾರತ ನಡೆಸುತ್ತಿರುವ ಧಾಳಿ ಸಂಪೂರ್ಣವಾಗಿ ನುಜ್ಜು ನೂರಾಗಿರುವ ಕಾರಣ ಪಾಕೀಸ್ಥಾನಕ್ಕೆ ವಿದೇಶಿ ಸಾಲದ ಅವಶ್ಯಕತೆ ಹೆಚ್ಚಾಗಿಯೇ ಇದೆ. ಹಾಗೆ ಸಿಕ್ಕ ಸಾಲವನ್ನು ತನ್ನ ದೇಶದ ಅಭಿವೃದ್ಧಿಗೆ ಸದ್ಬಳಕೆ ಮಾಡದೇ, ದುರ್ಬಳಕೆ ಮಾಡುವುದೇ ಹೆಚ್ಚು. 1947ರ ದೇಶ ವಿಭಜನೆಯ ಸಂಧರ್ಭದಲ್ಲಿ ಮಹಾತ್ಮಾ ಗಾಂಧಿಯವರ ಸತ್ಯಾಗ್ರಹದ ಪರವಾಗಿ ಅಂದಿನ ಕಾಲದಲ್ಲೇ ಸುಮಾರು 50 ಕೋಟಿ ಹಣವನ್ನು ಭಾರತದಿಂದ ಪಡೆದು, ಆ ಹಣದಿಂದ ದೇಶದ ಅಭಿವೃದ್ಧಿಯನ್ನು ಮಾಡದೇ, ಶಸ್ತ್ರಾಸ್ತ್ರಗಳನ್ನು ಖರೀಧಿಸಿ, ಭಾರತದ ವಿರುದ್ಧ ಧಾಳಿ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದುದು. ಹಾಗಾಗಿ ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಸಾಲ ಕೊಡಬಾರದು ಎಂದು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಎಂಎಫ್ (International Monetary Fund) ಅನ್ನು ಒತ್ತಾಯಿಸಿದ್ದಲ್ಲದೇ, ವಿಶ್ವ ಬ್ಯಾಂಕ್ನ ಅಧ್ಯಕ್ಷ ಅಜಯ್ ಬಂಗಾರವರು ಮೇ 8ರಂದು ಭಾರತಕ್ಕೆ ಬಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಆದರೆ ಪಾಕಿಸ್ತಾನಕ್ಕೆ ಸಾಲ ಕೊಡಕೂಡದು ಎಂಬ ಭಾರತ ಒತ್ತಾಯಕ್ಕೆ ಮಣೆ ಹಾಕದ ಐಎಂಎಫ್ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲ ಮಂಜೂರು ಮಾಡಿದೆ ಎಂಬ ಮಾಹಿತಿ ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ. ಈ ಸಾಲವು ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಆಗಿದ್ದು, ಮಾನವೀಯತೆಯೇ ತಿಳಿಯದ ಪಾಕೀಸ್ಥಾನವು ಖಂಡಿತವಾಗಿ ತನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಬಳಸಿಕೊಳ್ಳದ್ದೇ, ಈ ಸಂಪೂರ್ಣ ಹಣವನ್ನು ಭಯೋತ್ಪಾದನೆಗೆ ಬಳಸಿಕೊಳ್ಳುವ ಮೂಲಕ ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ಶತ್ರುವಿನ ಎರಡು ಕಣ್ಣುಗಳು ಹೋಗಬೇಕು ಎನ್ನುವ ನೀತಿ ನಿಜಕ್ಕೂ ವಿಪರ್ಯಾಸವಾಗಿದೆ.
ಒಂದು ಕಡೆ ಭಯೋತ್ಪಾದನಾ ನಿಗ್ರಹದಲ್ಲಿ ಭಾರತದ ಪರವಾಗಿದ್ದೇವೆ ಎನ್ನುವ ಅಮೇರಿಕಾ ಈಗ ಐಎಂಎಫ್ನಲ್ಲಿ ಶೇ.16 ಕ್ಕಿಂತ ಹೆಚ್ಚು ಪಾಲು ಹೊಂದಿದ್ದರೂ ಪಾಕೀಸ್ಥಾನಕ್ಕೆ ಈ ರೀತಿಯಾಗಿ ಸುಮಾರು 8500 ಕೋಟಿಗಳ ಸಾಲವನ್ನು ಕೊಡುವುದನ್ನು ತಡೆಯದೇ ಹೋದದ್ದು ಅನುಮಾನಕ್ಕೆ ಎಣೆ ಮಾಡಿಕೊಡುತ್ತಿದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂದು ತೋರ್ಪಡಿಕೆಗೆ ಮಾತ್ರಾ ಭಯೋತ್ಪಾದನಾ ಚಟುವಟಿಕೆಯ ವಿರುದ್ಧ ಇದ್ದೇವೆ ಎನ್ನುತ್ತಾ ಪರೋಕ್ಷವಾಗಿ ಭಯೋತ್ಪಾದನೆಯನ್ನು ಪೋಷಿಸುವುದಕ್ಕಾಗಿ ಸಾಲದ ಹಣದಿಂದ ಪಾಕಿಸ್ತಾನ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ತನ್ನಿಂದಲೇ ಖರೀಧಿಸಲಿ ಎಂಬ ಆಶಯವಿದ್ದರೂ ಅಚ್ಚರಿ ಪಡಬೇಕಿಲ್ಲಾ. ಇದಕ್ಕೆ ಪುರಾವೆ ಎನ್ನುವಂತೆ ಪಾಕೀಸ್ಥಾನದ ರಕ್ಷಣಾ ಮಂತ್ರಿ ಖ್ವಾಜಾ ಮುಹಮ್ಮದ್ ಆಸಿಫ್ ಟಿವಿ ಸಂದರ್ಶನದಲ್ಲಿ ಕಳೆದ 30-40 ವರ್ಷಗಳಿಂದ ಅಮೇರಿಕಾ ಮತ್ತು ಕೆಲವು ಯೂರೋಪಿಯನ್ ರಾಷ್ಟ್ರಗಳ ಆಣತಿಯ ಮೇರೆಗೆ ಭಯೋತ್ಪಾದಕ ಚಟುವಟಿಕೆಗಳನ್ನು ಪಾಕೀಸ್ಥಾನದಲ್ಲಿ ಬೆಳಸಿಕೊಂಡು ಪೋಷಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿರುವುದು ಗಮನಾರ್ಹ ಸಂಗತಿಯಾಗಿದೆ.
ಪ್ರಪಂಚದಲ್ಲಿ ಯುದ್ಧವೂ ಸೇರಿದಂತೆ ಇಂದು ನಡೆಯುತ್ತಿರುವ ಬಹುತೇಕ ವಿದ್ಯಮಾನಗಳಲ್ಲಿ ಜಾಗತೀಕ ಹಿತಾಸಕ್ತಿಗಳಿಗಿಂತ ಸ್ವಹಿತಾಸಕ್ತಿಯೇ ಹೆಚ್ಚಾಗಿದ್ದು, ಐಎಂಎಫ್ ಸಾಲವೂ ಸಹಾ ಅದರ ಭಾಗವಾಗಿರ ಬಹುದು ಎಂದೇ ಅನೇಕ ಆರ್ಥಿಕ ತಜ್ಞರ ಅಭಿಪ್ರಾಯವಾಗಿರುವ ಕಾರಣ, ಪಾಕೀಸ್ಥಾನ ಮತ್ತು ಭಾರತದ ನಡುವೆ ಆರಂಭವಾಗಿರುವ ಈ ಯುದ್ಧ ಕೇವಲ ಒಂದೆರಡು ದಿನ/ವಾರಗಳಲ್ಲಿ ಮುಗಿಯದ ಯುದ್ಧವಾಗಿದ್ದು, ಇದೂ ಸಹಾ ಹಮಾಸ್ ಮತ್ತು ಇಸ್ರೇಲ್, ಯುಕ್ರೇನ್ ಮತ್ತು ರಷ್ಯಾ ಯುದ್ಧಗಳಂತೆ ವರ್ಷಾನುಗಟ್ಟಲೆ ನಡೆದಲ್ಲಿ ವಿಶ್ವದ ಮೂರನೇ ಅತಿ ದೊದ್ಡ ಆರ್ಥಿಕ ರಾಷ್ಟವಾಗುವ ಮೂಲಕ ವಿಶ್ವ ಗುರುವಾಗ ಬೇಕು ಎನ್ನುವ ಭಾರತದ ಕನಸು ನನಸು ಗೊಳಿಸುವುದನ್ನು ತಪ್ಪಿಸಲೆಂದೇ ಚೀವಾ ಸಹಾ ಪರೋಕ್ಷವಾಗಿ ಪಾಕೀಸ್ಥಾನದ ಪರವಾಗಿದೆ ಎನ್ನುವ ಅನುಮಾನ ಈಗ ಧೃಢವಾಗುತ್ತಿದೆ. . ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಮತ್ತು ಕಳೆದ ಒಂದು ದಶಕದಿಂದ ಅತ್ಯಂತ ವೇಗವಾಗಿ ಎಲ್ಲರಿಗೂ ಸಡ್ಡು ಹೊಡೆದು ಜಾಗತಿಕವಾಗಿ ಬೆಳೆಯುತ್ತಿರುವ ಭಾರತವನ್ನು ಕಟ್ಟ ಹಾಕಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ತೋಡಿದ ಖೆಡ್ಡಾಕ್ಕೆ ಭಾರತ ಪರೋಕ್ಷವಾಗಿ ಬೀಳುತ್ತಿದೆ ಅಥವಾ ಬಿದ್ದು ಬಿಟ್ಟಿದೆಯೇ? ಎಂಬ ಆತಂಕ ಸಕಲ ಭಾರತೀಯರಿಗೆ ಆಗಿದೆ.
ತಲೆ ಇದ್ದರೆ ಮತ್ರಾ ತಲೆ ನೋವು. ಅದೇ ತಲೇ ಇಲ್ಲದೇ ಹೋದಲ್ಲಿ ತಲೆ ನೋವೇ ಶಾಶ್ವತವಾಗಿ ಪರಿಹಾರವಾಗಬಹುದು ಎನ್ನುವಂತೆ ಸೆರಗಿನಲ್ಲಿ ಕೆಂಡ ಹಿಡಿದು ಕೊಂಡು ಸೆರಗನ್ನು ಸುಟ್ಟಿಕೊಳ್ಳುವ ಬದಲು ಮಗ್ಗುಲ ಮುಳ್ಳಾಗಿರುವ ಈ ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶಗಳನ್ನು ಶಾಶ್ವತವಾಗಿ ಛಿದ್ರ ಛಿದ್ರ ಗೊಳಿಸುವುದಷ್ಟೇ ಅಲ್ಲದೇ ಇಂತಹ ಶತ್ರು ರಾಷ್ಟ್ರದವರಿಗೆ ಸಹಾಯ ಮಾಡುತ್ತಿರುವ ನಮ್ಮ ದೇಶದಲ್ಲೇ ಇರುವ ದೇಶವಿರೋಧಿಗಳನ್ನು ಹುಡುಕಿ ಹುಡುಕಿ ಮಟ್ಟ ಹಾಕುವುದೇ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಎಂದನಿಸುತ್ತದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ
ಲೇಖನದ ಸಾರ ಸಂಗ್ರಹವ ಗಮನಿಸಿದರೆ ಜಾಗತಿಕ ಮಟ್ಟದಲ್ಲಿ ಗೆಳೆಯರು ಕಡಿಮೆ; ಸ್ವಾರ್ಥಿ ಮತ್ತು ಶತ್ರುಗಳೇ ಹೆಚ್ಚು ಎನ್ನುವ ವಾಸ್ತವದತ್ತ ಬೆರಳು ತೋರುತ್ತದೆ. ಈ ವಿಷಮ ಪರಿಸ್ಥಿತಿಯಲ್ಲಿ ಪಾಕಿಗಳು ಹವಾಮಾನ ಬದಲಾವಣೆಯ ಮೇಲೆ ಖರ್ಚು ಮಾಡುವರೆಂಬ ನಂಬಿಕೆಯೇ ಹಾಸ್ಯಾಸ್ಪದ. ಏನೇ ಆಗಲಿ ಭಾರತವು ಈ ಬಾರಿ ದುಷ್ಟರ ಬೆನ್ನು ಮೂಳೆ ಮುರಿದೇ ವಿರಮಿಸಬೇಕು.
LikeLike
[…] ಯಾರದ್ದೋ ದುಡ್ಡು ಪಾಕಿಗಳ ಯುದ್ಧ […]
LikeLike