ಪ್ರಜಾಪ್ರಭುತ್ವ ರೀತಿಯಿಂದಾಗಿ ಬಿಜೆಪಿಯನ್ನು ಸೋಲಿಸಲಾಗದೇ, ಕಳೆದ 12 ವರ್ಶಗಳಿಂದಲೂ ಕೇಂದ್ರದಲ್ಲಿ ಅಧಿಕಾರದಿಂದ ವಂಚಿತರಾಗಿ ಹತಾಶರಾಗಿರುವ ರಾಹುಲ್ ಗಾಂಧಿ ಎಂಬ ಅವಕಾಶವಾದಿ ರಾಜಕಾರಣಿ ಹೇಗಾದರೂ 2025-2026ರಲ್ಲಿ ಬಿಜೆಪಿಯವರು ಚುನಾವಣಾ ಆಯೋಗದೊಂದಿಗೆ ಸೇರಿಕೊಂಡು ಅಕ್ರಮವಾಗಿ ಮತಗಳನ್ನು ಅಳಿಸುವ/ಸೇರಿಸುವ ಮೂಲಕ ವೋಟ್ ಚೋರಿ (ಮತ ಕಳ್ಳತನ) ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಇತ್ತೀಚಿನ ದಿನಗಳಲ್ಲಿ ಮಾಡುತ್ತಲೇ ಇದ್ದಾರೆ, ಇದಕ್ಕೆ ಪೂರಕ ಎನ್ನುವಂತೆ ಕರ್ನಾಟಕದ ಆಳಂದ ಮತ್ತು ಬೆಂಗಳೂರು ಸೆಂಟ್ರಲ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿ ಅಕ್ರಮಗಳ ಬಗ್ಗೆ ಪುಂಖಾನುಪುಂಖವಾಗಿ PPT Presentation ಮೂಲಕ ತೋರಿಸಿದ ಎಲ್ಲಾ ದಾಖಲೆಗಳೂ ನಂತರದ ದಿನಗಳಲ್ಲಿ ಸುಳ್ಳು ಎಂದು ಸಾಭೀತಾಗಿ ಜನರು ನಂಬದೇ ಹೋದದ್ದು ಈಗ ಇತಿಹಾಸ. ಆದರೆ ಅದೇ 2023ರಲ್ಲಿ ನಡೆದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಜೇಗೌಡ ಅವರು ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂಬ ಫಲಿತಾಂಶ ಬಂದಾಗ, ಅಂಚೆ ಮತಗಳ ಮರು ಎಣಿಕೆಯಲ್ಲಿ ಲೋಪವಾಗಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಜೀವರಾಜ್ ಅಂದೇ ನ್ಯಾಯಾಲಯದ ಮೊರೆ ಹೋದಾಗ, ಸುಮಾರು ಮೂರು ವರ್ಷಗಳ ಕಾಲ ತನಿಖೆ ನಡೆದು, 2026ರ ಮೇ 2ರಂದು ಮತಗಳ ಮರು ಎಣಿಕೆ ಮಾಡಲು ನೀಡಿದ ಆಜ್ಞೆಯಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಹಳ ಹೈಡ್ರಾಮ ನಡೆದು ಅಂತಿಮವಾಗಿ ತಡರಾತ್ರಿ 12:30ರ ವೇಳೆಗೆ 52 ಮತಗಳ ಅಂತರದಿಂದ ಜೀವರಾಜ್ ಅವರು ವಿಜಯಿಶಾಲಿಗಳಾಗಿದ್ದು ಅಸಲೀ ಓಟ್ ಚೋರಿ ಶೃಂಗೇರಿಯ ಮಾಜೀ ಶಾಸಕರಾಗಿದ್ದಂತಹ ರಾಜೇಗೌಡರಿಂದ ನಡೆದಿರುವುದು ಈಗ ಕಾಂಗ್ರೇಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ.
2023ರ ಫಲಿತಾಂಶದ ವಿರುದ್ದ ಹೈಕೋರ್ಟ್ ಆದೇಶದ ಮೇರೆಗೆ ಮರು ಎಣಿಕೆ ಪ್ರಕ್ರಿಯೆ ಚುನಾವಣಾಧಿಕಾರಿ ಗೌರವ್ ಶೆಟ್ಟಿ ನೇತೃತ್ವದಲ್ಲಿ ಮತ ಎಣಿಕೆ ಮೇ ೨ರಂದು ಚಿಕ್ಕಮಗಳೂರಿನ ಚಿಕ್ಕಮಗಳೂರು ನಗರದ ಐಡಿಎಸ್‌ಜಿ (IDSG) ಕಾಲೇಜಿನಲ್ಲಿ ಒಂದೇ ಟೇಬಲ್ ಮೇಲೆ 6 ಜನ ಸಹಾಯಕ ಚುನಾವಣಾಧಿಕಾರಿಗಳ ಸಹಾಯದಿಂದಿಗೆ ಸಿಸಿ ಟಿವಿ ಸಮ್ಮುಖದಲ್ಲಿ ಅಂಚೆ ಮತಗಳ ಮರು ಎಣಿಕೆ ಕಾರ್ಯರಣೆಗೆ ಸಿದ್ಧಗೊಳಿಸಿತ್ತು. ಬೆಳಿಗ್ಗೆ ಇಂದು ಬೆಳಗ್ಗೆ 9ಕ್ಕೆ ಸ್ಟ್ರಾಂಗ್ ರೂಮ್ ತೆಗೆದ ಸಂಧರ್ಭದಲ್ಲಿ ಒಟ್ಟು 20 ಟ್ರಂಕ್ ಗಳಲ್ಲಿರುವ ಅಂಚೆ ಮತಪತ್ರಗಳನ್ನು ಹೊರತೆಗೆಯುವ ವೇಳೆಯಲ್ಲಿ ಕೆಲ ಟ್ರಂಕ್ ಗಳ ಬೀಗ ಒಡೆದು ಹೋಗಿದ್ದರೆ ಇನ್ನೂ ಕೆಲವು ಟ್ರಂಕ್ ಗಳು ಡ್ಯಾಮೇಜ್ ಆಗಿರುವ ಕಾರಣ ಇಲ್ಲಿ ಏನೋ ಅಕ್ರಮ ನದೆದಿದೆ ಎಂದು ಶಾಸಕ ರಾಜೇಗೌಡ ಹಾಗೂ ಅವರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಚುನಾವಣಾಧಿರಾರಿಗಲು ಈ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣವಾಗಿದ್ದು ಅದನ್ನು ಪರಿಶೀಲಿಸಿದಾಗ, ಮತ ಪತ್ರಗಳು ಇದ್ದ ಪೆಟ್ಟಿಕೆಗಳು ಸುಭದ್ರವಾಗಿ ಬೀಗ ತೆರೆರಿದ್ದ ಪಟ್ಟಿಗೆಗಳಲ್ಲಿ ಚುನಾವಣೆಗೆ ಸಂಬಂಧ ಪಟ್ಟ ದಾಖಲೆಗಳು ಇದ್ದವೆಂದು ತಿಳಿಸುವ ಹೊತ್ತಿನಲ್ಲಿ ಮಧ್ಯಾಹ್ನವಾಗಿತ್ತು. ರಾಜೇಗೌಡರು ಮತ್ತು ಅವರ ತಂಡ ಇಷ್ಟೆಲ್ಲಾ ಹೈಡ್ರಾಮ ಮಾಡುತ್ತಿದ್ದಾಗಲೂ ಜೀವರಾಜ್ ಶೃಂಗೇರಿಯ ಶಾರಾದಾದೇವಿಯ ಮೇಲೆ ನಂಬಿಕೆ ಇರಿಸಿ ತಾಳ್ಮೆಯಿಂದಲೇ ಇದ್ದು ಮತಗಳ ಎಣಿಕೆಗೆ ಸಹಕರಿಸುತ್ತಿದರು.
ಹೇಗಿದ್ದರೂ ಗೆಲುವು ತನ್ನಕಡೆಯೇ ಇದೆ ಎಂಬ ಹುಂಬತನದದಿಂದ ಮಧ್ಯಾಹ್ನ ಸ್ವತಃ ರಾಜೇಗೌಡರೇ ಮಾಧ್ಯಮಗಳ ಮುಂದೆ ಬಂದು ಓಪನ್ ಇದ್ದ ಪೆಟ್ಟಿಗೆಯಲ್ಲಿ ಕೇವಲ ಚುನಾವಣೆಗೆ ಸಂಬಂಧಿಸಿದ ಪತ್ರಗಳು ಮಾತ್ರ ಇತ್ತು ಎಂಬ ಹೇಳಿಕೆಯನ್ನು ಕೊಟ್ಟರೂ, ಅವರ ಕಾರ್ಯಕರ್ತರೊಬ್ಬರು ಸ್ಟ್ರಾಂಗ್ ರೂಮ್ ನಲ್ಲಿ ಕಾಯುತ್ತಿದ್ದ ಕಾನ್ಸ್ಟೆಬಲ್ಸ್ ಮತ್ತು ಡಿ ದರ್ಜೆಯ ನೌಕರರಿಗೆ ಬಿಜೆಪಿಯವರು ಲಂಚಕೊಟ್ಟು ಒಳಗೆ ನುಗ್ಗಿದ್ದಾರೆ ಎಂದು ಆರೋಪ ಮಾಡಿದಾಗಲೂ ಬಿಜೆಪಿ ಕಾರ್ಯಕರ್ತರನ್ನು ಸುಮ್ಮನಿರಿಸುವಲ್ಲಿ ಜೀವರಾಜ್ ಸಫಲರಾಗಿದ್ದರು.
ಇಷ್ಟೆಕ್ಕಾ ಗೊಂದಲಗಳ ನಡುವೆಯೇ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಎಣಿಕೆ ಪ್ರಕ್ರಿಯೆ ಒಳಗೆ ನಡೆಯುತ್ತಿರುವಾಗಲೇ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಅವರು ಎಣಿಕೆ ಕೇಂದ್ರದಿಂದ ಹೊರಬಂದು ರಾಜೇಗೌಡರಿಗೆ ಹಿಂದಿನ ಬಾರಿಗಿಂತ ಎರಡು ಮತ ಹೆಚ್ಚಿಗೆ ಬಂದಿದ್ದು ಅವರೇ ವಿಜಯಶಾಲಿಗಳಾಗಿದ್ದಾರೆ ಎಂದು ತಿಳಿಸುತ್ತಿದ್ದಂತೆಯೇ. ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಮುಗಿಲು ಮುಟ್ಟಿದ್ದಲ್ಲದೇ, ವಿಶೇಷವಾಗಿ ಎನ್ ಆರ್ ಪುರದಲ್ಲಿ ಕಾಂಗ್ರೆಸ್ ಕಾರ್ಯಕರು ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಪಡುತ್ತಿದ್ದರೆ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಸಪ್ಪೆ ಮೊರೆ ಹಾಕಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹಿಂದಿರುಗುತ್ತಿದ್ದರು.
ಎಣಿಕೆ ಕೇಂದ್ರದಲ್ಲಿ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶ ಇಲ್ಲದೇ ಇದ್ದ ಕಾರಣ ಹೊರೆಗೆ ನಡೆಯುತ್ತಿದ್ದ ಈ ಸಂಗತಿಗಳು ಯಾವುದೂ ಗೊತ್ತಿಲ್ಲದೇ ತಮ್ಮ ಪಾಡಿಗೆ ತಾವು ಮತಗಳ ಎಣಿಕೆಯನ್ನು ಮುಂದುವರೆದು, ಅಂತಿಮವಾಗಿ ನಡೆಸಿದ ಮತ ಮರು ಎಣಿಕೆಯಲ್ಲಿ 2023ರ ಚುನಾವಣೆಯಲ್ಲಿ ಮಾನ್ಯವಾಗಿದ್ದ ಮತಗಳ ಪೈಕಿ ಹಾಲಿ ಶಾಸಕರಾಗಿರುವ ಕಾಂಗ್ರೆಸ್ ನಾಯಕ ಟಿ.ಡಿ.ರಾಜೇಗೌಡ ಅವರ 255 ಮತಗಳು ಅಮಾನ್ಯವಾಗಿದ್ದು, ಬಿಜೆಪಿ ಅಭ್ಯರ್ಥಿಗೆ ಬಂದಿದ್ದ ಜೀವರಾಜ್‌ಗೆ ಬಂದಿದ್ದ ಮತಗಳಲ್ಲಿ 2 ಮತಗಳು ಅಮಾನ್ಯವಾಗಿದೆ. ಈ ಮೂಲಕ ಜೀವರಾಜ್ ಅವರು ಸುಮಾರು 52 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಈ ಮತ ಮರು ಎಣಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅವರು 2023ರ ಚುನಾವಣೆಯಲ್ಲಿ ಎಣಿಕೆಯಲ್ಲಿ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆ 692 ಮತಗಳು ಮತ್ತು ಟಿ.ಡಿ.ರಾಜೇಗೌಡಗೆ 569 ಮತ ಬಿದ್ದಿತ್ತು. ಆದರೆ ಈಗ ನಡೆಸಿದ ಮರು ಎಣಿಕೆಯಲ್ಲಿ ಜೀವರಾಜ್ ಅವರ ಈ ಹಿಂದಿನ 2 ಮತಗಳು ಅಮಾನ್ಯವಾಗಿ 690 ಮತಗಳು ಲಭಿಸಿದರೆ, ಟಿ.ಡಿ.ರಾಜೇಗೌಡ ಅವರ 569 ಮತಗಳ ಪೈಕಿ 255 ಅಮಾನ್ಯವಾಗಿದ್ದು, ಈ ಅವರ ಒಟ್ಟು ಅಂಜೆ ಮತಗಳ ಸಂಖ್ಯೆ 314ಕ್ಕೆ ಇಳಿಕೆಯಾಗಿದ್ದ ಕಾರಣ, ಜೀವರಾಜ್ ಅವರು ಸುಮಾರು 52 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿಸಿದ್ದಲ್ಲದೇ, ನ್ಯಾಯಾಲಯದ ಆದೇಶದಂತೆ ಮತ್ತೆ ನಡೆದ ಅಂಚೆ ಮತಗಳನ್ನು ಪರಿಶೀಲನೆ ಹಾಗೂ ಮರುಎಣಿಕೆಯ ನಂತರ ಮತ ಪತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಮತ್ತೆ ಭಧ್ರವಾಗಿ ಇರಿಸಲಾಗಿದ್ದು, ಪ್ರಸ್ತುತ ಮರು ಎಣಿಕೆಯಲ್ಲಿ ಕಂಡು ಬಂದ ವ್ಯತ್ಯಾಸವನ್ನು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದ್ದು ಅವರ ಅದೇಶದಂತೆ ಮುಂದಿನ ಕಾರ್ಯವನ್ನು ನಡೆಸುವುದಾಗಿ ತಿಳಿಸಿದ್ದಾರೆ.
ಇಷ್ಟೆಲ್ಲಾ ಆಗುವಷ್ಟರಲ್ಲಿ ಗಂಟೆ ತಡರಾತ್ರಿ 12:30 ಆದರೂ, ಮತ ಎಣಿಕೆಯ ಕೇಂದ್ರದ ಸುತ್ತಲೇ ಇದ್ದ ಬಿಜೆಪಿಯ ಹಿರಿಯ ನಾಯಕರುಗಳು ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳಾದ ಸಿ.ಟಿ.ರವಿ, ಪ್ರಾಣೇಶ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರೆ, ಯಥಾ ಪ್ರಕಾರ ಮತ ಪತ್ರಗಳನ್ನು ತಿದ್ದಲಾಗಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಸೇರಿದಂಟೆ 3 ಜನರ ವಿರುದ್ದ ಕಾಂಗ್ರೆಸ್ ದೂರು ದಾಖಲಿಸಿದ್ದು, ಇನ್ನೂ ಅಧಿಕೃತವಾಗಿ ಫಲಿತಾಂಶ ಹೊರಬಂದಿಲ್ಲವಾದ್ದರಿಂದ ಪ್ರಕರಣ ಬೂದಿ ಮುಂಚಿದ ಕೆಂಡದಂತಿದೆ.
ಶೃಂಗೇರಿಯ ಈ ಹಿಂದಿನ ಫಲಿತಾಂಶ ಮತ್ತು ಇಂದಿನ ಫಲಿತಾಂಶ ಪ್ರಜಾಪ್ರಭುತ್ವದಲ್ಲಿ ಮತ ಪತ್ರಗಳ ಮೂಲಕ ಆಗಬಹುದಾದ ಅನಾಚಾರಕ್ಕೆ ಕೈ ಹಿಡಿದ ಕನ್ನಡಿಯಾಗಿದ್ದು, ಮತ್ತು ಇದೇ ಕಾರಣಕ್ಕಾಗಿಯೇ ಕಾಂಗ್ರೇಸ್ ಮತ್ತು ಇಂಡಿ ಒಕ್ಕೂಟದವರು ಪದೇ ಪದೇ ಇ.ವಿ.ಎಂ.ಗಳ ಕುರಿತಾಗಿ ಆಕ್ಷೇಪಣೆ ಎತ್ತುತ್ತಿದ್ದದ್ದಕ್ಕೆ ಸಾಕ್ಷಿಯಾಗಿದೆ. ೨೦೨೩ರಲ್ಲೇ ಬಹುಶಃ ರಾಜೇಗೌಡರಿಗೆ ಈ ಅಂಚೆ ಮತದಾನದ ಫಲಿತಾಂಶ ಗೊತ್ತಾಗಿದ್ದು, ಆಂದಿನ ಮಧ್ಯಾಹ್ನದ ಹೊತ್ತಿಗಾಗಲೇ ಕಾಂಗ್ರೇಸ್ ಸರ್ಕಾರಕ್ಕೆ ಬಹುಮತ ಬರುವುದು ಸ್ಪಷ್ಟವಾಗುತ್ತಿದ್ದದ್ದನ್ನು ಗಮನಿಸಿ ಹೇಗೂ ಹಾಲೀ ಶಾಸಕರಾಗಿದ್ದ ರಾಜೇಗೌಡರೇ ಅಲ್ಲಿದ್ದ ಚುನಾವಣಾಧಿಕಾರಿಗಳ ಮೇಲೆ ತಮ್ಮ ಅಧಿಕಾರದ ಸಹಾಯದಿಂದ ಒತ್ತಡ ಹೇರಿಯೋ, ಇಲ್ಲವೇ ಅ ಅಧಿಕಾರಿಗಳೇ ರಾಜೇಗೌಡರ ಜೊತೆ ಶಾಮೀಲಾಗಿ ಮಾಡಿದ ತಪ್ಪಿಗಾಗಿ ನಿರಾಯಾಸವಾಗಿ ಕುತಂತ್ರದಿಂದ ಮೂರು ವರ್ಷಗಳ ಕಾಲ ಶಾಸಕ ಸ್ಥಾನವನ್ನು ಅನೈತಿಕವಾಗಿ ಅಲಂಕರಿಸಿದ್ದು ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದೆ,
ಇದೇ ಕುರಿತಾಗಿ ಆರ್.ಅಶೋಕ್, ಅವರು ಎಕ್ಸ್ ಪೋಸ್ಟ್‌ನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ. ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ ನೀಡಿದ ತಕ್ಕ ಉತ್ತರ. ಕಳೆದ ಮೂರು ವರ್ಷಗಳಿಂದ ಅನರ್ಹವಾಗಿ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ಗೆ ಈಗ ಮುಖಭಂಗವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಗೆಲುವು. ಶೃಂಗೇರಿಯ ಮತದಾರರ ಮತದ ಮೌಲ್ಯಕ್ಕೆ ಸಂದ ಜಯ. ನ್ಯಾಯದೇವತೆಯ ಮೇಲೆ ವಿಶ್ವಾಸವಿಟ್ಟು ಸಂವಿಧಾನಾತ್ಮಕವಾಗಿ ಹೋರಾಡಿ ನ್ಯಾಯ ಪಡೆದ ಡಿ.ಎನ್. ಜೀವರಾಜ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಸತ್ಯಮೇವ ಜಯತೇ! ಎಂದು ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ಅಧಿಕಾರ ಹಿಡಿದ ರಾಜ್ಯಗಳಲ್ಲಿ ಅಕ್ರಮ ನಡೆದಿದೆ. ಚುಣಾವಣೆ ಆಯೋಗದಂತಹ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಎದುರಾಳಿ ಪಕ್ಷಗಳನ್ನು ಈ ಮೂಲಕ ಹಣಿಯುತ್ತಿದೆ ಎಂದೆಲ್ಲಾ ಹೋದ ಬಂದ ಕಡೆಯಲ್ಲೆಲ್ಲಾ ಆರೋಪ ಮಾಡುತ್ತಾ ವೋಟ್ ಚೋರಿ ಅಭಿಯಾನ ಮಾಡುತ್ತಿದ್ದ ರಾಹುಲ್ ಗಾಂಧಿ ಇದರ ಕುರಿತಾಗಿ ಏನು ಹೇಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿಸಿದೆ.
ಇದೀಗ ಮರು ಎಣಿಕೆಯಲ್ಲಿ ಅಕ್ರಮವಾಗಿ ತಿರಸ್ಕರಿಸಿದ ಮತಗಳು ಸೇರಿ ಮರು ಎಣಿಕೆ ಆಗಿದ್ದು, ಬಿಜೆಪಿ ಗೆದ್ದಿದೆ ಮತ್ತು ಮೂರು ವರ್ಷದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ರಾಜೇಗೌಡರ ಶಾಸಕ ಸ್ಥಾನ ರದ್ದಾಗಿದೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿರುವುದು ೨೦೨೮ರಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶಕ್ಕೆ ಮುನ್ನುಡಿಯಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ