ಭಾರತೀಯ ಯೋಗ ಮತ್ತು ಜೀವನ ಪದ್ದತಿ

ವಿದ್ಯಾರಣ್ಯಪುರ ಮಂಥನದ ಒಂಬತ್ತನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ಭಾರತೀಯ ಯೋಗ ಮತ್ತು ಜೀವನ ಪದ್ದತಿ ಕುರಿತಾದ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಹೆಚ್. ಪಿ. ಕುಂಟೋಜಿ (ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ಪ್ರಸ್ತುತ ಯೋಗ ಶಿಕ್ಷಕರು) ಅವರ ಅಮೃತ ಹಸ್ತದಿಂದ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಕೆಲ ಮಾತೆಯವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಯುತ ಕುಂಟೋಜಿಯವರು ಇಂದಿನ ವಿಷಯವಾಗಿದ್ದ ಭಾರತೀಯ ಯೋಗ ಮತ್ತು ಜೀವನ ಪದ್ದತಿ… Read More ಭಾರತೀಯ ಯೋಗ ಮತ್ತು ಜೀವನ ಪದ್ದತಿ

ಪರಿಸರದ ಮೇಲೆ ಪ್ಲಾಸ್ಟಿಕ್ ಎಂಬ ಮಾರಿ

ಸರಿ ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದೆ ಯಾವುದೇ ಮನೆಗಳಿಗೆ ಹೋದರೂ ನಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದದ್ದು ಬಾಗಿಲಿಗೆ ಕಟ್ಟಿರುವ ಒಣಗಿದ ಮಾವಿನ ಎಲೆಯ ತೋರಣ. ತೋರಣದ ಅಡಿಯಲ್ಲಿ ತಲೆಬಾಗಿ ಮನೆಯ ಒಳ ಹೊಕ್ಕಲ್ಲಿ ವಿಶಾಲವಾದ ಪ್ರಾಂಗಣ ಅದರ ಮೂಲೆಯಲ್ಲೊಂದು ಕಾಲ್ತೊಳೆಯುವ ಸ್ಥಳ. ತಾಮ್ರವೋ ಇಲ್ಲವೇ ಹಿತ್ತಾಳೆ ಕೊಳಗದಲ್ಲಿದ್ದ ನೀರನ್ನು ತಂಬಿಗೆಯಿಂದ ತುಂಬಿಕೊಂಡು ಕಾಲ್ತೊಳೆದುಕೊಂಡು, ಶುದ್ಧವಾದ ವಸ್ತ್ರದಿಂದ ಒರೆಸಿಕೊಂಡು ಹಜಾರದಲ್ಲಿ ಹಾಕಿರುವ ನಾನಾ ರೀತಿಯ ಮರದ ಪೀಠೋಪರಣದ ಮೇಲೆ ಆಸೀನರಾಗುತ್ತಿದ್ದಂತೆಯೇ ಮನೆಯೊಡತಿ ಪಳ ಪಳನೆ ಹೊಳೆಯುತ್ತಿದ್ದ ಹಿತ್ತಾಳೆ ಲೋಟದಲ್ಲಿ… Read More ಪರಿಸರದ ಮೇಲೆ ಪ್ಲಾಸ್ಟಿಕ್ ಎಂಬ ಮಾರಿ

ಬ್ಲಾಕ್ ಟೈಗರ್

ಲೇಖಕರು : ಶ್ರೀ ನಿರಂಜನ್ ಹವ್ಯಾಸಿ ಬರಹಗಾರರು ದೇಶದ ರಕ್ಷಣೆಗೆ ಸಂಬಂಧ ಪಟ್ಟ ವಿಷಯದಲ್ಲಿ ಗೂಢಾಚಾರಿಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ.   ಅವರು ದೇಶಕ್ಕಾಗಿ ತಮ್ಮ ಜೀವನದ ಹಂಗನ್ನೇ ತೊರೆದು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಶತೃ ರಾಷ್ಟ್ರಗಳಲ್ಲಿ  ಕೆಲಸ ನಿರ್ವಹಿಸುತ್ತಾ ಕಾಲ ಕಾಲಕ್ಕೆ ಶತೃ ದೇಶದ ಗೌಪ್ಯ ಮಾಹಿತಿಗಳನ್ನು ತಮ್ಮ ಮಾತೃದೇಶಕ್ಕೆ ಕಳುಹಿಸಿಕೊಡುತ್ತಾ ಶತೃಗಳ ಆಕ್ರಮಣದಿಂದ ದೇಶವನ್ನು ರಕ್ಷಿಸುವ ಮಹತ್ಕಾರ್ಯದಲ್ಲಿ ಭಾಗಿಗಳಾಗಿರುತ್ತಾರೆ. ಅಂತಹ ಒಬ್ಬ ಧೀರ ಯೋಧ ಗೂಢಾಚಾರಿ ಆಗಿದ್ದ  ದಿ. ಶ್ರೀ ರವೀಂದ್ರ ಕೌಶಿಕ್ ಅವರ ಕುರಿತಾಗಿ… Read More ಬ್ಲಾಕ್ ಟೈಗರ್

ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

ನಮ್ಮ ಸ್ನೇಹಿತರ ವಾಟ್ಯಾಪ್ ಗುಂಪಿನಲ್ಲಿ ಪ್ರತಿನಿತ್ಯ ವಿವಿಧ ದೇವಾಲಯಗಳ ಮತ್ತು ದೇವರುಗಳ ಚಿತ್ರಗಳನ್ನು ಹಂಚಿಕೊಳ್ಳುವ ಸಂಪ್ರದಾಯ ಬಹಳ ದಿನಗಳಿಂದ ಜಾರಿಯಲ್ಲಿದೆ. ಅದರಂತೆ ನಾನು ಹೋದ ಬಂದ ಕಡೆಯೆಲ್ಲಾ ನೋಡುವ ದೇವರ ಚಿತ್ರಗಳನ್ನು ಜತನದಿಂದ ಸಂಗ್ರಹಿಸಿ ಒಂದೊಂದೇ ಫೋಟೋಗಳನ್ನು ಅದರ ಜೊತೆಗೆ ಸಾಧ್ಯವಾದ ಮಟ್ಟಿಗೆ ಆ ದೇವರುಗಳ ಮಹಾತ್ಮೆ ಅಥವಾ ಆ ಕ್ಷೇತ್ರದ ವಿಶೇಷತೆ ಅಥವಾ ಹೆಗ್ಗಳಿಕೆಯನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಅದೇ ರೀತಿಯಾಗಿ ನನಗೆ ನನ್ನ ಸ್ನೇಹಿತ ಜಗದೀಶ ಪ್ರತೀ ದಿನವೂ ಉಡುಪಿಯ ಕೃಷ್ಣಮಠದ ಫೋಟೋಗಳನ್ನು ಕಳುಹಿಸುತ್ತಿದ್ದ.… Read More ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಶಂಕರ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕದಾದ ಚೊಕ್ಕದಾದ ಸಂಸಾರ. ಮಕ್ಕಳು ಶಾಲಾ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮಡದಿ ಗೃಹಿಣಿ. ನೆಮ್ಮದಿಯಾದ ಸಂಸಾರ.  ಶಂಕರನಿಗೆ  ಬರವಣಿಗೆಯಲ್ಲಿ  ಕೊಂಚ ಹೆಚ್ಚಿನ ಆಸಕ್ತಿ. ಅದರಲ್ಲೂ  ರಾಜಕೀಯ ವಿಷಯಗಳೆಂದರೆ ಪಂಚಪ್ರಾಣ.  ಎಷ್ಟೇ ಚಟುವಟಿಕೆಗಳಿಂದ ಕೂಡಿದ್ದರೂ ಅದು ಹೇಗೋ ಸಮಯ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಧರ್ಮ,  ನೆಚ್ಚಿನ ಸಿದ್ಧಾಂತ ಮತ್ತು ರಾಜಕೀಯ ನಾಯಕರುಗಳ ಪರವಾಗಿ  ಪ್ರಖರವಾಗಿ ಲೇಖನ ಬರೆಯುತ್ತಿದ್ದ. ಅಂತಯೇ ಇನ್ನೊಬ್ಬರ ಬರಹಗಳಿಗೆ ವಾದ ಪ್ರತಿರೋಧ ಮಾಡುತ್ತಿದ್ದ. ಅವನ  ಬರವಣಿಗೆ,… Read More ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಅಮ್ಮಾ

ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದ್ದಕ್ಕೇ ಆಗಲಿ ಪರ್ಯಾಯ ಹುಡುಕ ಬಹುದೇನೋ, ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತಿಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಅಂಡಾಣುವಿನಿಂದ ಮಗುವಿನ ರೂಪ ತಾಳುವವರೆಗೆ ಜೋಪಾನವಾಗಿಟ್ಟುಕೊಂಡು, ತಾನು ತಿನ್ನುವ ಆಹಾರವನ್ನೇ ತನ್ನ ಒಡಲಿನಲ್ಲಿರುವ ಮಗುವಿನೊಂದಿಗೆ ಕರಳು ಬಳ್ಳಿಯ ಮೂಲಕ ಹಂಚಿಕೊಂಡು ದೇಹದ… Read More ಅಮ್ಮಾ

ಕೊಬ್ಬರೀ ಮಿಠಾಯಿ ಪುರಾಣ

ಸಂಕ್ರಾಂತಿ ಹಬ್ಬಕ್ಕೆ ತಂದ ತೆಂಗಿನಕಾಯಿಗಳನ್ನು ಹಾಗೆ ಜಾಸ್ತೀ ದಿನ ಇಟ್ರೆ ಕೆಟ್ಟು ಹೋಗಬಹುದು. ಅದಕ್ಕೇ ಈ ರೀತಿಯಾಗಿ ರುಚಿ ರುಚಿಯಾದ ಘಮ ಘಮವಾದ ಕೊಬ್ಬರಿ ಮಿಠಾಯಿ ತಯಾರಿಸಿ ಮನೆಯವರಿಗೆ ಕೊಡಿ ಅದರ ಜೊತೆಯಲ್ಲೇ ನನ್ನ ಕೊಬ್ಬರೀ ಮಿಠಾಯಿ ಪುರಾಣವನ್ನು ಓದಿ ಆನಂದಿಸಿ. ಕೊಬ್ಬರೀ ಮಿಠಾಯಿ ಮಾಡಲು ಬೇಕಾಗುವ ಸಾಮಗ್ರಿಗಳು. ಸಕ್ಕರೆ – ಮುಕ್ಕಾಲು ಕಪ್ ಹಾಲು – 1 ಕಪ್(ಬೇಕಿದ್ದಲ್ಲಿ ಹಾಲಿನಪುಡಿಯನ್ನೂ ಬಳಸಬಹುದು) ಏಲಕ್ಕಿ – ಪುಡಿ ಮಾಡಿದ 5ರಿಂದ 6 ಏಲಕ್ಕಿ ( ಏಲಕ್ಕಿ ಎಷೆನ್ಸ್… Read More ಕೊಬ್ಬರೀ ಮಿಠಾಯಿ ಪುರಾಣ

ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

2019ರ ಲೋಕಸಭಾ ಚುನಾವಣೆ ಕಾಂಗ್ರೇಸ್ ಮತ್ತು ಇತರೇ ವಿರೋಧ ಪಕ್ಷಗಳಿಗೆ ಒಂದು ರೀತಿಯ ಮಾಡು ಇಲ್ಲವೇ ಮಡಿ ಎನ್ನುವ ಚುನಾವಣೆಯಾಗಿತ್ತು. ಹೇಗಾದರೂ ಮಾಡಿ ಮೋದಿಯವರನ್ನು ಹಣಿಯದಿದ್ದರೆ ತಮ್ಮ ಉಳಿಗಾಲವಿಲ್ಲ ಎಂಬುದನ್ನು ಎಲ್ಲರೂ ಮನಗಂಡಿದ್ದರು. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಇದನ್ನು ಬಾಯಿ ಬಿಟ್ಟೇ ಹೇಳಿಯೂ ಬಿಟ್ಟರು. ಅದಕ್ಕಾಗಿಯೇ ಎಲ್ಲರೂ ಮೋದಿ…ಮೋದಿ…ಮೋದಿ… ಈ ಒಂದೇ ಒಂದು ಹೆಸರು ದೇಶಾದ್ಯಂತ ಯಾವ ರೀತಿಯ ಒಂದು ಹವಾ ಸೃಷ್ಟಿಸಿತೆಂದರೆ, ಮೋದಿಯವರ ಬೆಂಬಲಿಗರು ಬಿಡಿ ಮೋದಿಯವರ ವಿರೋಧಿಗಳ ಬಾಯಲ್ಲೂ ಮೊದಲು ಬರುವ ಪದವೇ ಮೋದಿ… Read More ನೀನು ಕಳ್ಳಾ ಮತ್ತು ನಿಮ್ಮಪ್ಪಾನೂ ಕಳ್ಳಾ

ಆದಿ ಶಂಕರಾಚಾರ್ಯ

ಶಂಕರರಿಲ್ಲದಿದ್ದಿದ್ದರೆ ಇಂದು ವೇದಾಂತ ತತ್ವ ಯಾರಿಗೂ ಅರ್ಥವಾಗುತ್ತಿರಲಿಲ್ಲ, ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ! ಅನಾದಿ ಕಾಲದಿಂದಲೂ ವೇದ ಭೂಮಿಯಾಗಿರುವ ಭಾರತ ಸಾರಿದ್ದು ಅದ್ವೈತ ಸಿದ್ಧಾಂತವನ್ನೇ. ವೇದಗಳ ಅದ್ವೈತ ಸಾರವನ್ನು ವೇದವ್ಯಾಸರಿಂದ ಯಾಜ್ಞವಲ್ಕ್ಯವರೆಗೂ ಸಾರಿದ್ದಾರೆ, ವೇದಾಂತ ಸಿದ್ಧಾಂತದ ಅದ್ವೈತವನ್ನು ದೃಢವಾಗಿ ಪ್ರತಿಪಾದಿಸಿದ್ದಾರೆ. ಅದ್ವೈತ ಸಿದ್ಧಾಂತ ವೇದ-ಉಪನಿಷತ್ ಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಕಾಲಕ್ರಮೇಣ ಧರ್ಮಕ್ಕೆ ಗ್ಲಾನಿಯುಂಟಾದಾಗ ಪಂಡಿತರೂ ವಿದ್ವಾಂಸರು ತಪ್ಪಾಗಿ ಅರ್ಥೈಸಿಕೊಂಡು ಅದ್ವೈತವನ್ನು ಮರೆತರು. ಜ್ಞಾನ ಮಾರ್ಗಕ್ಕಿಂತ ಕರ್ಮಕಾಂಡಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಶೃತಿ (ವೇದ)ಯ ಸಿದ್ಧಾಂತದ ಮೂಲ ಉದ್ದೇಶಕ್ಕೆ ಧಕ್ಕೆ… Read More ಆದಿ ಶಂಕರಾಚಾರ್ಯ