ಗೆಜ್ಜೆ ಘಲ್ ಘಲ್, ಎದೆ ಝಲ್ ಝಲ್

ನೆನ್ನೆ ಮಧ್ಯಾಹ್ನ ಕಛೇರಿಯಲ್ಲಿ ಕೆಲಸನಿರತನಾಗಿದ್ದಾಗ  ನನ್ನ ಆತ್ಮೀಯ ಗೆಳೆಯ ಹರಿ ಕರೆ ಮಾಡಿದ. ಸಾಮಾನ್ಯವಾಗಿ ವಾರಂತ್ಯದಲ್ಲಿಯೋ ಇಲ್ಲವೇ ರಾತ್ರಿಯ ಹೊತ್ತು ನಾವಿಬ್ಬರು ಮಾತನಾಡುವ ಪ್ರತೀತಿ.  ಇಂದು ಅಚಾನಕ್ಕಾಗಿ ಕರೆ ಮಾಡಿರುವುದು ನನ್ನಲ್ಲಿ ಒಂದು ಕ್ಷಣ ಆತಂಕವನ್ನೇ ಸೃಷ್ಟಿಮಾಡಿತು. ಸರಿ ಏನಾದರೂ ಆಗಲೀ ಎಂದು ಕರೆಯನ್ನು ಸ್ವೀಕರಿಸಿ, ಹೇಳಪ್ಪಾ ಏನು ಸಮಾಚಾರ ಎಂದು ಕೇಳುತ್ತಿದ್ದಂತೆಯೇ. ನನ್ನ ಊಹೆ ಸರಿಯಾಗಿ, ಕ್ಷೀಣ ಸ್ವರದಲ್ಲಿ ದುಃಖಭರಿತನಾಗಿ ಶ್ರೀಕಂಠಾ ನಮ್ಮ ತಾತ ಹೋಗ್ಬಿಟ್ರೋ ಎಂದ.   ಹರಿ ಹಾಗೆ ಹೇಳುತ್ತಿದ್ದಂತೆಯೇ, ಛೇ ಹೋಗ್ಬಿಟ್ರಾ? ಎಲ್ಲಿ?… Read More ಗೆಜ್ಜೆ ಘಲ್ ಘಲ್, ಎದೆ ಝಲ್ ಝಲ್

ಅಪಘಾತಕ್ಕೆ ಯಾವ ಧರ್ಮವೂ ಇರುವುದಿಲ್ಲ

ಮೊನ್ನೆ  ಶುಕ್ರವಾರ ಯಾವುದೋ ಕೆಲಸದ ನಿಮಿತ್ತ ರಜೆ ಹಾಕಿದ್ದೆ.  ಸುಮಾರು ಒಂದು ಗಂಟೆ ಸಮಯ ನಮ್ಮ ಏರಿಯಾದಲ್ಲಿಯೇ ಇದ್ದ ಸ್ನೇಹಿತರ ಮನೆಗೆ  ದ್ವಿಚಕ್ರ ವಾಹನವೇರಿ ಹೊರಟೆ. ಇಲ್ಲೇ ನಮ್ಮದೇ ಬಡಾವಣೆ ಅಲ್ವಾ ಅನ್ನೂ ನಿರ್ಲಕ್ಷದಿಂದ ಗಾಡಿಯೊಳಗಿದ್ದ ಹೆಲ್ಮೆಟ್ ಕೂಡಾ ಹಾಗದೆ ದಿಮ್ಮಾಲೆ ರಂಗಾ ಎಂದು ಹೋಗುತ್ತಿದ್ದಾಗ, ಇದ್ದಕ್ಕಿಂದಂತೆಯೇ ಹಳೆಯ ತೆಲುಗು ಸಿನಿಮಾದಲ್ಲಿ ರಾಕ್ಷಸರು ಪ್ರತ್ಯಕ್ಷವಾಗೋ ಹಾಗೆ ಅದೆಲ್ಲಿಂದಲೂ ಪೋಲೀಸ್ ಪೇದೆಯೊಬ್ಬರು  ನನ್ನ ಮುಂದೆ ಧಗ್ಗನೆ ಪ್ರತ್ಯಕ್ಷರಾಗಿ ಸೀಟಿ ಊದುತ್ತಾ ಎರಡೂ ಕೈಗಳನ್ನೂ ತೋರಿಸುತ್ತಾ ಗಾಡಿ ನಿಲ್ಲಿಸಲು ಹೇಳಿದರು.… Read More ಅಪಘಾತಕ್ಕೆ ಯಾವ ಧರ್ಮವೂ ಇರುವುದಿಲ್ಲ

ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆ

ವಿದ್ಯಾರಣ್ಯಪುರ ಮಂಥನದ ಆರನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆಯ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀ ಎಸ್. ರವಿ ವಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು ಬಿಇಎಂಎಲ್ ಅವರ ಅಮೃತ ಹಸ್ತದಿಂದ ಜಾಲಹಳ್ಳಿ ನಗರದ ಸಂಘಚಾಲಕರಾದ ಶ್ರೀ ನಾಗರಾಜ್ ಮೌದ್ಗಲ್ ಅವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಯುತ ರವಿಯವರು ಆರಂಭದಲ್ಲಿ ತಮ್ಮ ದೀರ್ಘಕಾಲದ ಅನುಭವ ಮತ್ತು ಪರಿಣಿತಿಯಿಂದ ನಾನಾ ರೀತಿಯ ವಿಮಾನಗಳು, ಅವುಗಳ ಶಕ್ತಿ… Read More ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆ

ರಾಷ್ಟ್ರಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿದ ಕರ್ಮಯೋಗಿ ಮನೋಹರ್ ಪರಿಕ್ಕರ್ ಅವರಿಗೆ ನುಡಿ ನಮನ

​1955 ಡಿಸೆಂಬರ್​ 13 ಗೋವಾದ ಮಾಪೂಸ ಎಂಬ ಪ್ರಾಂತ್ಯದಲ್ಲಿ ರಾಧಾಭಾಯಿ ಮತ್ತು ಗೋಪಾಲಕೃಷ್ಣ ದಂಪತಿಗಳಿಗೆ ಜನಿಸಿದ ನೋಡಲು ಮನೋಹರವಾಗಿದ್ದ ಮಗುವಿಗೆ  ಅನ್ವರ್ಥವಾಗುವಂತೆಯೇ ಮನೋಹರ ಪರಿಕ್ಕರ್ ಎಂದು ನಾಮಕರಣ ಮಾಡಿದರು. ಬಾಲ್ಯದಿಂದಲೂ ಆಟ  ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ ಹುಡುಗ, ಓದಿನ ಜೊತೆಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂಟಿನೊಂದಿಗೆ ರಾಷ್ಟ್ರೀಯತೆಯನ್ನೂ ಬೆಳೆಸಿಕೊಂಡ.  ಮಾರ್ಗೋವಾದಲ್ಲಿನ ಲೊಯೋಲಾ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ 1978ರಲ್ಲಿ  ಮುಂಬಯಿ -ಐಐಟಿಯಲ್ಲಿ  ಮೆಟಲರ್ಜಿಕಲ್ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದು ಕೈತುಂಬಾ ಹಣ ಗಳಿಸಬಹುದಾಗಿದ್ದರೂ, ಸಂಘದ ಪ್ರಭಾವದಿಂದಾಗಿ  ಸಮಾಜ… Read More ರಾಷ್ಟ್ರಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿದ ಕರ್ಮಯೋಗಿ ಮನೋಹರ್ ಪರಿಕ್ಕರ್ ಅವರಿಗೆ ನುಡಿ ನಮನ

ಅಭ್ಯಾಸ- ದುರಭ್ಯಾಸ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಹುಡುಗನೊಬ್ಬ ಜಾರುತ್ತಿರುವ ತನ್ನ ದೊಡ್ಡದಾದ ಚೆಡ್ಡಿಯನ್ನು ಎಡಗೈನಲ್ಲಿ ಹಿಡಿದುಕೊಂಡು ಹೋಗುತ್ತಿರುವ ಚಿತ್ರ ವೈರಲ್ ಆಗಿದೆ. ಆ ಪುಟ್ಟ ಬಾಲಕನು ಬೆರಳು ಚೀಪುವ ದುರಾಭ್ಯಾಸವನ್ನು ತಪ್ಪಿಸಲು ಅವನ ಪೋಷಕರು ಈ ರೀತಿಯ ಜಾಣ್ಮೆಗೆ ಮೊರೆ ಹೋಗಿದ್ದಾರೆ ಎಂಬ ತಲೆಬರಹ ನನ್ನನ್ನು ನನ್ನ ಬ್ಯಾಲ್ಯಾವಸ್ಥೆಗೆ ಕರೆದುಕೊಂಡು ಹೋಯಿತು. ನಾನು ಮತ್ತು ನನ್ನ ಚಿಕ್ಕ ತಂಗಿ ಇಬ್ಬರೂ ಸಹಾ ಬೆರಳು ಚೀಪುತ್ತಿದ್ದವರೇ. ನಾನು ಎಡಗೈ ಹೆಬ್ಬರಳನ್ನು ಮಲಗುವಾಗ ಮಾತ್ರ, ಒಂದು ಶುಭ್ರವಾದ ಪಂಚೆಯ ತುದಿಯೊಂದಿಗೆ ಚಿಪುತ್ತಿದ್ದರೆ,… Read More ಅಭ್ಯಾಸ- ದುರಭ್ಯಾಸ

ಉಡುದಾರದ ಪಜೀತಿ

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನೇಕ ಪದ್ದತಿಗಳು ನಮ್ಮ ಜೀವನದ ಅವಿಭಾಜ್ಯವಾಗಿ ರೂಢಿಯಲ್ಲಿರುತ್ತವೆ. ಅನೇಕರಿಗೆ ಅದರ ಅವಶ್ಯಕತೆಯಾಗಲೀ ಅದರ ಅನುಕೂಲವಾಗಲೀ ವೈಜ್ಞಾನಿಕ ಕಾರಣಗಳಾಗಲೀ ಗೊತ್ತಿಲ್ಲದಿದ್ದರೂ ಹಿರಿಯರಿಂದ ಬಂದ ಸಂಪ್ರದಾಯ ಎಂದು ಅದಕ್ಕೆ ಪ್ರತಿರೋಧ ತೋರದೆ ಚಾಚೂ ತಪ್ಪದೆ ಅದನ್ನು ಆಚರಿಸಿಕೊಂಡು ಬರುತ್ತಾರೆ. ಅಂತಹ ಪದ್ದತಿಯಲ್ಲಿ ಗಂಡು ಮಕ್ಕಳ ಸೊಂಟಕ್ಕೆ ಕಟ್ಟುವ ಉಡುದಾರವೂ ಹೌದು. ಹಾಗೆ ಕಟ್ಟಿ ಕೊಂಡ ಉಡುದಾರವೇ ನಮ್ಮ ಶಂಕರನನ್ನು ಪಜೀತಿಗೆ ಸಿಕ್ಕಿಸಿದ ಮೋಜಿನ ಪ್ರಸಂಗವನ್ನೇ ಇಲ್ಲಿ ಹೇಳ ಹೊರಟಿದ್ದೇನೆ. ಉಡುದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು,… Read More ಉಡುದಾರದ ಪಜೀತಿ

ತಾತ ಮೊಮ್ಮಗನ ಸಂಬಂಧ- ಅನುಬಂಧ

ಶಂಕರ ಆಗಿನ್ನು ಚಿಕ್ಕ ಹುಡುಗ. ನಾಲ್ಕನೇಯದೋ ಇಲ್ಲವೇ ಐದನೆಯ ತರಗತಿಯಲ್ಲಿ ಓದುತ್ತಿದ್ದ. ಅದೊಂದು ದಿನ ಸಂಜೆ ಊರಿನಿಂದ ಅವರ ಮನೆಗೆ Father is serious. Start immediately ಎನ್ನುವ ಸಂದೇಶವಿದ್ದ ಟೆಲಿಗ್ರಾಂ ಬಂದಿತು. ಸರಿ ಆಷ್ಟು ಹೊತ್ತಿನಲಲ್ಲಿ ಮಕ್ಕಳನ್ನು ಎಲ್ಲಿಗೆ ಬಿಟ್ಟು ಹೋಗುವುದು ಎಂದು ತಿಳಿದು ಶಂಕರ, ಅವನ ತಂಗಿಯರನ್ನೂ ಕರೆದುಕೊಂಡು ಶಂಕರನ ತಂದೆ ಮತ್ತು ತಾಯಿ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ಹತ್ತಿ , ಆಗಿನ್ನೂ ಟೆಲಿಫೋನ್ ಇಲ್ಲದಿದ್ದರಿಂದ ಮಲ್ಲೇಶ್ವರದಲ್ಲಿಯೇ ಶಂಕರನ ತಂದೆ ಇಳಿದು ಅವರ… Read More ತಾತ ಮೊಮ್ಮಗನ ಸಂಬಂಧ- ಅನುಬಂಧ

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬ

ದೇಶದ ಜನರ ರಕ್ಷಣೆಗೆ ಪ್ರಾಣ ಕೊಟ್ಟ ವೀರ ಸೇನಾನಿ. ತನ್ನ ಸಂಬಳವನ್ನೇ ಬಡವರಿಗಾಗಿ ಬಳಸುತ್ತಿದ್ದ ಆ ಮಹಾನ್ ಚೇತನದ ಜಯಂತಿಯನ್ನು ಇಂದು 15.03.2019 ಗುರುವಾರದಂದು ಸಂಜೆ 5 ಘಂಟೆಗೆ ಯಲಹಕಂದ ಹಾರೋಹಳ್ಳಿಯ ಬಳಿಯಲ್ಲಿರುವ ಇಸ್ರೋ ಲೇಔಟ್ನಲ್ಲಿ ಅವರ ಮನೆಯಲ್ಲಿ ರಾಷ್ಟ್ರಭಕ್ತರ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಡಿ.ಸಿ.ಪಿ.ಯಾಗಿರುವ ಶ್ರೀ ಅಣ್ಣಾಮಲೈ ಅವರು ನಮ್ಮೊಂದಿಗೆ ಇರಲಿದ್ದಾರೆ. || ವಿಶೇಷ ಆಹ್ವಾನಿತರು || 1. ಶ್ರೀಮತಿ ಬಸವಣ್ಣೆವ್ವ ಕುಲಕರ್ಣಿ- ಕಾರ್ಗಿಲ್ ವೀರಯೋಧ ಹುತಾತ್ಮ ಶ್ರೀ… Read More ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬ

ಪ್ರಜಾಪ್ರಭುತ್ವ ಅಂದರೆ ಕುಟುಂಬ ರಾಜಕಾರಣವೇ?

ಸಾವಿರಾರು ವರ್ಷಗಳ ಕಾಲ ಪ್ರಪಂಚಾದ್ಯಂತ ರಾಜ ಮಹಾರಾಜರ ಆಳ್ವಿಕೆಯೇ ಜಾರಿಗೆಯಲ್ಲಿತ್ತು. ರಾಜನ ಮರಣಾನಂತರ ಆತನ ಮಗನೋ ಇಲ್ಲವೇ ಆತನ ಸಂಬಂಧೀಕರೇ ಆ ರಾಜ್ಯಕ್ಕೆ  ಉತ್ತರಾಧಿಕಾರಿಯಾಗಿ ಆಡಳಿತ ವಂಶಪಾರಂಪರ್ಯವಾಗಿ ನಡೆಯುತ್ತಲಿತ್ತು. ಅಂದು ರಾಜ ಪ್ರತ್ಯಕ್ಶ ದೇವತಾ ಎಂದೇ ಭಾವಿಸಿದ್ದರು. ಆದರೆ ಕಾಲ ಕ್ರಮೇಣ ಕೆಲ ರಾಜರುಗಳ, ಮತ್ತವರ ಸಾಮಂತರ ದೌರ್ಜ್ಯನ್ಯಕ್ಕೆ , ದುರಾಡಳಿತಕ್ಕೆ ಮತ್ತು  ಸರ್ವಾಧಿಕಾರಿತನದಿಂದ ಬೇಸತ್ತು  ಜನ ದಂಗೆ ಎದ್ದ ಪರಿಣಾಮವಾಗಿಯೇ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಾಗಿಯೇ  ಇರುವಂತಹ ಪ್ರಜಾಪ್ರಭುತ್ವಕ್ಕೆ ನಾಂದಿಯಾಯಿತು.  ಈ ಮಾದರಿಯಲ್ಲಿ  ಪ್ರಜೆಗಳೇ ನೇರವಾಗಿ ತಮ್ಮ… Read More ಪ್ರಜಾಪ್ರಭುತ್ವ ಅಂದರೆ ಕುಟುಂಬ ರಾಜಕಾರಣವೇ?