ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟುವ ಮೂಲಕ ಆರಂಭವಾದ ಮೈಸೂರು ಸಂಸ್ಥಾನ ಈ ದೇಶದಲ್ಲಿ ಹತ್ತು ಹಲವು ಕಾರ್ಯಗಳಿಗೆ ಮೊದಲೆನಿಸಿಕೊಂಡು ಅಂದು ಇಂದು ಮತ್ತು ಎಂದೆಂದಿಗೂ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದೆ.

1799 ರಿಂದ 1868ರ ವರೆಗೆ ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಮೈಸೂರನ್ನು ಹೇಗಾದರೂ ಮಾಡಿ ತಮ್ಮ ಆಡಳಿತಕ್ಕೆ ಒಳಪಡಿಸಲೇಬೇಕು ಎಂದು ಹವಣಿಸುತ್ತಿದ್ದ ಬ್ರಿಟೀಷರು 1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿಲ್ಲ. ಅನಾವಶ್ಯಕ ದುಂದು ವೆಚ್ಚ ಮಾಡುತ್ತಿದ್ದಾರೆ ಮತ್ತು ಆಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಾಗ, ತಾಳ್ಮೆವಂತರಾದ ರಾಜರು ಶಾಂತಿಯಂದ ಬಗೆ ಹರಿಸಿಕೊಳ್ಳುವ ಸಲುವಾಗಿ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಲೇ ಸುಮಾರು 50 ವರ್ಷಗಳ ಕಾಲ ಮುಂದುವರಿಯುತ್ತದೆಯೇ ಹೊರತು ರಾಜ್ಯದ ಆಡಳಿತ ಒಡೆಯರ್ ಅವರ ಸುಪರ್ದಿಗೆ ಒಪ್ಪಿಸಲು ಬ್ರಿಟಿಷರು ಒಪ್ಪಿರಲೇ ಇಲ್ಲ.

kr5ಇದೇ ಸಮಯದಲ್ಲೇ ಮೈಸೂರು ಸಂಸ್ಥಾನದ ಆಪ್ತರಾಗಿದ್ದ ಶ್ರೀ ಚೆಟ್ಟಿಯವರು ಮತ್ತು ಅಸ್ಗರ್ ಅಲಿಯವರು ಬ್ರಿಟೀಷರ ಮೆಲೆ ಒತ್ತಡ ತಂದು ಮೈಸೂರಿಗೆ ಬ್ರಿಟಿಷರಿಂದ ಮರಳಿ ಅಧಿಕಾರ ಕೊಡಿಸಲು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಲೇ ಇದ್ದಾಗಲೇ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಮಗ ಶ್ರೀ ಚಾಮರಾಜ ಒಡೆಯರ್ ಮತ್ತು ಸೊಸೆ ಕೆಂಪ ನಂಜಮ್ಮಣ್ಣಿಯವರಿಗೆ 1884ರ ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನನವಾಗಿತ್ತದೆ. ಕೇವಲ 10 ವರ್ಷದ ಬಾಲಕನಾಗಿರುವಾಗಲೇ 28 ಡಿಸೆಂಬರ್ 1894ರಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕ ಕೃಷ್ಣರಾಜರಿಗೆ ಪೆಬ್ರವರಿ 1, 1895ರಲ್ಲಿ ಪಟ್ಟಾಭಿಷೇಕ ಮಹೋತ್ಸವ ಎಲ್ಲರೂ ಮೆಚ್ಚುವಂತೆ ವೈಭವೋಪೇತವಾಗಿ ನಡೆಸಲಾಗುತ್ತದೆ. ಆರಂಭದಲ್ಲಿ ಕೆಲಕಾಲ ಅಮ್ಮನ ಆಶ್ರಯದಲ್ಲೇ ಆಡಳಿತ ನಡೆಸಿ ಮುಂದೆ ಅಲ್ಲಿಂದ 38 ವರ್ಷಗಳ ಮೈಸೂರು ಸಂಸ್ಥಾನದಲ್ಲಿ ನಭೂತೋ ನಭವಿಷ್ಯತಿ ಎನ್ನುವಂತೆ ಭವ್ಯ ಆಡಳಿತವನ್ನು ನಡೆಸಿದ ಕೀರ್ತಿ ಮತ್ತು ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದಿಗೂ ನೆನಪಿನಲ್ಲಿ ಉಳಿಯುವ ಸಾಕ್ಷಿಗಳಾಗಿ ನಮ್ಮ ಕಣ್ಣ ಮುಂದಿದೆ. ಆಡಳಿತ ಚುಕ್ಕಾಣಿ ಹಿಡಿದ ರಾಜನ ಬಿಗಿಮುಷ್ಠಿಯಲ್ಲಿ ಇಡೀ ರಾಜ್ಯವೇ ಇರಬೇಕು ಎಂದು ಭಾವಿಸಿದೇ ತಾನೊಬ್ಬ ಜನಸೇವಕ. ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಆಗಲೇ ಜನರಿಗೆ ಪರಿಚಯಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜರಿಗೆ ಸಲ್ಲುತ್ತದೆ.

kr2ರಾಜ್ಯಭಾರ ವಹಿಸಿಕೊಂಡ ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಮೈಸೂರು ಸಂಸ್ಥಾನ ಕೃಷ್ಣರಾಜರ ದಕ್ಷಾ ರಾಜ್ಯಭಾರ ಮತ್ತು ದೂರಾಲೋಚನೆಯಿಂದ ಆರಂಭಿಸಿದ ವಿವಿಧ ಕೈಗಾರಿಕೆಗಳಿಂದಾಗಿ ಮುಂದಿನ 30-40 ವರ್ಷಗಳಲ್ಲಿ ದೇಶದ ಶ್ರೀಮಂತರಲ್ಲಿ 2ನೇ ಸ್ಥಾನಗಳಿಸುವಷ್ಟರ ಮಟ್ಟಿಗೆ ಏರಿರುತ್ತಾರೆ ಎಂದರೆ ಅವರ ದಕ್ಷತೆ ಮತ್ತು ಕಾರ್ಯವೈಖರಿ ಹೇಗಿತ್ತು? ಎಂಬುದರ ಅರಿವಾಗುತ್ತದೆ. ರಾಜರು ಚಿಕ್ಕವರಿರುವ ಸಮಯದಲ್ಲೇ ಮೈಸೂರಿಗೆ ಭೇಟಿ ನೀಡಿದ ಲಾರ್ಡ್ ಮೆಕಾಲೆ ವ್ಯವಹಾರದ ದೃಷ್ಥಿಯಿಂದ ರಾಜರುಗಳಿಗೆ ಇಂಗ್ಲೀಷ್ ಕಲಿಯಲು ಸೂಚಿಸಿದ್ದನ್ನು ಸ್ವೀಕರಿಸಿದ ಮಹಾರಾಜರು ತಾವು ಇಂಗ್ಲೀಷ್ ಕಲಿತದ್ದಲ್ಲದೇ ತಮ್ಮ ಮಕ್ಕಳುಗಳಿಗಷ್ಟೇ ಇಂಗ್ಲೀಷ್ ಕಲಿಕೆಯನ್ನು ಸೀಮಿತಗೊಳಿಸದೇ ತಮ್ಮ ಪ್ರಾಂತ್ಯದಲ್ಲಿರುವ ಮಕ್ಕಳುಗಳೂ ಆಂಗ್ಲ ಮಾಧ್ಯಮದ ಶಿಕ್ಷಣ ಪಡೆಯುವಂತೆ ಮಾಡುತ್ತಾರೆ.

ಕೃಷ್ಣರಾಜ ಒಡೆಯರ್ ಅವರು ಕರ್ನಲ್ ಫ್ರೇಜರ್ (ಬೆಂಗಳೂರಿನ ಫ್ರೇಜರ್ ಟೌನ್ ಇವರ ಸವಿ ನೆನಪಿನಲ್ಲಿಯೇ ಇದೆ) ಅವರ ಬಳಿ ಇಂಗ್ಲೀಷ್, ಕಾನೂನು, ರಾಜ್ಯಾಡಳಿತ, ಆಡಳಿತ ನಿರ್ವಹಣೆ ಮುಂತಾದ ವಿಷಯಗಳನ್ನು ಅರಮನೆಯ ಸಮೀಪದಲ್ಲೇ ಇದ್ದ ಖಾಸ್ ಬಂಗಲೆಯಲ್ಲಿ (ಇಂದಿನ ಪ್ರಾಣಿ ಸಂಗ್ರಹಾಲಯ) ಕಲಿಯಲು ಆರಂಭಿಸಿದ ಸಮಯದಲ್ಲೇ ಅರಮನೆಯಲ್ಲಿ ನಡೆಯುತ್ತಿದ್ದ ಖಾಸಗೀ ಶುಭ ಸಮಾರಂಭವೊಂದರಲ್ಲಿ ಅಚಾತುರ್ಯವಾಗಿ ನಡೆದ ಬೆಂಕಿ ಅವಘಡದಲ್ಲಿ ಇಡೀ ಅರಮನೆಯೇ ಹೊತ್ತಿ ಉರಿದಾಗ, ಅದೇ ಫ್ರೇಜರ್ ಅವರು ಮಹಾರಾಜರಿಗೆ ಅಗ್ನಿಶಾಮಕ ದಳದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿದಾಗ ದೇಶದಲ್ಲೇ ಮೊತ್ತ ಮೊದಲಿಗೆ ಅಗ್ನಿಶಾಮಕ ದಳದ ಆರಂಭಕ್ಕೆ ಇದೇ ಕೃಷ್ಣರಾಜ ಒಡೆಯರ್ ಅವರೇ ಕಾರಣೀಭೂತರಾಗುತ್ತಾರೆ

tata_institure1892ರಲ್ಲಿ ತಮ್ಮ ತಂದೆ ಶ್ರೀ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಈ ನಾಡು ಕಂಡ ವೀರ ಸನ್ಯಾಸಿ ಸ್ವಾಮೀ ವಿವೇಕಾನಂದರು ಪರಿವ್ರಾಜಕರಾಗಿ ಮೈಸೂರಿಗೆ ಭೇಟಿ ನೀಡಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶ ಅದರಲ್ಲೂ ಕಾನಕಾನಹಳ್ಳಿ (ಕನಕಪುರದ) ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಲ್ಲದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಹೆಣ್ಣುಮಕ್ಕಳ ಶಾಲೆಯನ್ನು ಆರಂಭಿಸಲು ಸಲಹೆನೀಡಿದಾಗ, ರಾಣಿಯವರ ಹೆಸರಿನಲ್ಲಿ ಅಮ್ಮಣ್ಣಿ ಕಾಲೇಜ್ ಆರಂಭವಾಗಿರುತ್ತದೆ. ಮುಂದೆ ಸ್ವಾಮಿಗಳು ಚಿಕಾಗೋದ ವಿಶ್ವಧರ್ಮ ಸಮ್ಮೇಳನಕ್ಕೆ ಇದೇ ರಾಜಾಶ್ರಯದಿಂದಲೇ ಹೋಗಿ ಹಿಂದಿರುಗುವಾಗ ಹಡಗಿನಲ್ಲಿ ಭೇಟಿಯಾದ ಜೆಮ್ ಷೇಡ್ ಜೀ ಟಾಟಾರವರಿಗೆ ಇಲ್ಲಿನ ಮಕ್ಕಳಿಗೆ ವಿಜ್ಞಾನದ ಶಿಕ್ಷಣವನ್ನು ನೀಡಲು ಒಂದು ಒಳ್ಳೆಯ ವಿದ್ಯಾಸಂಸ್ಥೆಯನ್ನು ಕಟ್ಟಲು ಸೂಚಿಸಿದನ್ನು ಪರಿಗಣಿಸಿ ಮುಂಬೈ ರಾಜ ಅದಕ್ಕೆ ಪೂರಕವಾಗಿ ಸಹಕರಿಸಲು ಒಪ್ಪದೇ ಹೋದಾಗ, ಮತ್ತೇ ವಿವೇಕಾನಂದರಿಂದ ಪ್ರೇರೇಪಿತರಾಗಿ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸೂಕ್ತ ಜಾಗ ಮತ್ತು ಧನ ಸಹಾಯವನ್ನು ಹುಡುಕುತ್ತಿದ್ದ ಜೆಮ್ ಷೇಡ್ ಜೀ ಟಾಟಾರವರನ್ನು ಬೆಂಗಳೂರಿಗೆ ಕರೆಸಿ ಯಶವಂತಪುರದಲ್ಲಿ ಸುಮಾರು 400 ಎಕರೆಯಷ್ಟು ಜಮೀನು ನೀಡಿದ್ದಲ್ಲದೇ ಅಂದಿನ ಕಾಲಕ್ಕೇ ಸುಮಾರು ಐದು ಲಕ್ಷ ರೂಪಾಯಿಗಳ ಧನಸಹಾಯ ಮಾಡಿದ್ದಲ್ಲದೇ ವಾರ್ಷಿಕವಾಗಿ ೫೦,೦೦೦ ರೂಗಳನ್ನು ಕೊಡುವ ವಾಗ್ಧಾನ ಮಾಡಿದವರೂ ಇದೇ ನಾಲ್ವಡಿ ಕೃಷ್ನರಾಜ ಒಡೆಯರ್ ಎಂಬುದು ಹೆಮ್ಮೆಯ ಸಂಗತಿಯಾಗಿದೆ. 27 ಮೇ, 1909 ರಲ್ಲಿ ಸ್ಥಾಪಿಸಲ್ಪಟ್ಟ ಟಾಟಾ ಇನಿಸ್ಟಿಟ್ಯೂಟ್, ಇಂದು ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್ ಹೆಸರಿನಲ್ಲಿ ವಿಶ್ವವಿಖ್ಯಾತವಾಗಿ ಸಾವಿರಾರು ವಿಜ್ಞಾನಿಗಳಿಗೆ ವಿದ್ಯಾತಾಣವಾಗಿದೆ.

ಆರಂಭದಿಂದಲೂ ವಿದೇಶಿಗರೇ ನಿರ್ದೇಶಕರಾಗಿದ್ದ ಟಾಟಾ ಇನಿಸ್ಟಿಟ್ಯೂಟಿನಲ್ಲಿ ಮೊತ್ತ ಮೊದಲ ಬಾರಿಗೆ 1933ರಲ್ಲಿ ನೊಬೆಲ್ ಪುರಸ್ಕೃತರಾಗಿದ್ದ ಸರ್ ಸಿ .ವಿ. ರಾಮನ್ ಅವರನ್ನು ಪ್ರಪ್ರಥಮ ಭಾರತೀಯ ನಿರ್ದೇಶಕರಾಗಿ ನಿಯೋಜಿಸಲಾಯಿತಾದರೂ, ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿ ಅಲ್ಲಿನ ಒಳ ರಾಜಕೀಯದಿಂದ ಬೇಸತ್ತು ಸರ್ ಸಿ.ವಿ.ರಾಮನ್ ಅವರು ರಾಜೀನಾಮೆ ಕೊಟ್ಟು ಕೋಲ್ಕತ್ತಾಗೆ ಹೊರಡಲು ನಿರ್ಧರಿಸಿದಾಗ, ತಮ್ಮ ರಾಜ್ಯದಿಂದ ಪ್ರತಿಭಾಪಲಾಯನವಾಗ ಬಾರದೆಂದು ಅವರನ್ನು ಮೈಸೂರು ರಾಜ್ಯದಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ಡಿಸೆಂಬರ್ 1934ರಲ್ಲಿ ಟಾಟಾ ಇನ್‍ಸ್ಟಿಟ್ಯೂಟ್‍ ಸಮೀಪದಲ್ಲೇ 10 ಎಕರೆ ಜಮೀನು ಮಂಜೂರು ಮಾಡಿ ಮುಂದೆ 1948ರಲ್ಲಿ ಅದೇ ಸ್ಥಳದಲ್ಲಿಯೇ ರಾಮನ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಆರಂಭವಾಗಲು ಕೃಷ್ಣರಾಜ ಒಡೆಯರ್ ಅವರೇ ಕಾರಣರಾದರು.

krs1902ರಲ್ಲಿ ಆರಂಭವಾದ ಶಿಂಷಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಕುಂಟುತ್ತಾ ಸಾಗುತ್ತಾ ಕೇವಲ ಮಳೆಗಾಲದಲ್ಲಿ ಮಾತ್ರವೇ ವಿದ್ಯುತ್ ಉತ್ಪಾದಿಸುತ್ತಾ, ಮೈಸೂರು, ಬೆಂಗಳೂರು ಮತ್ತು ಕೆಜಿಎಫ್ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸುತ್ತಿರುತ್ತದೆ. ವರ್ಷದ 365 ದಿನಗಳೂ ವಿದ್ಯುತ್ ಉತ್ಪಾದಿಸಬೇಕಾದರೇ ನೀರನ್ನು ಎಲ್ಲಾದರೂ ತಡೆ ಹಿಡಿದು ಅದನ್ನು ಪ್ರತಿದಿನವೂ ಪೂರೈಸುವಂತೆ ಮಾಡುವ ಯೋಜನೆಯಿಂದಾಗಿಯೇ ಮೈಸೂರಿನ ಸಮೀಪದ ಕನ್ನಂಬಾಡಿಯಲ್ಲಿ ಕಾವೇರಿ ನದಿಗೆ ಅಣೆಕಟ್ಟೆಯನ್ನು ಕಟ್ಟಿ ನೀರನ್ನು ತಡೆಹಿಡಿಯುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ. ಆ ಸಮದಲ್ಲಿ ಮುಂಬೈಯಲ್ಲಿ ಎಂಜಿನಿಯರ್ ಆಗಿದ್ದ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು 1909 ರಲ್ಲಿ ಮಹಾರಾಜರು  ಮೈಸೂರಿಗೆ ಕರೆಸಿಕೊಂಡು ತಮ್ಮ ಕನಸಿನ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯ 1911ರಲ್ಲಿ ಕನ್ನಂಬಾಡಿ ಅಣೆಕಟ್ಟೆಯ ಮೊದಲ ವರದಿ ಸಿದ್ಧಪಡಿಸುತ್ತಾರೆ. ಆದರೆ ಈ ಯೋಜನೆಗೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಎಂದು ಮದ್ರಾಸ್ ಸರ್ಕಾರದ ಆಕ್ಷೇಪ ಎತ್ತಿದಾಗ, ಆ ಅಣೆಕಟ್ಟೆಗೆ ಹಣವನ್ನು ಹೊಂದಿಸಲು ತಮ್ಮ ರಾಣಿಯವರ ಚಿನ್ನಾಭರಣ, ಬೆಳ್ಳಿಯ ನಾಣ್ಯಗಳು, ಮುತ್ತು, ವಜ್ರ ವೈಡೂರ್ಯಗಳಿದ್ದ ನಾಲ್ಕು ಮೂಟೆಯಲ್ಲಿ ಕೊಂಡೊಯ್ದು ಹೆಚ್ಚಿನ ಪ್ರಮಾಣದಲ್ಲಿ ಹಣ ಸಿಗುವ ಕಾರಣದಿಂದ ದೂರದ ಬಾಂಬೆಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸುಮಾರು 80 ಲಕ್ಷ ರೂಪಾಯಿಗಳನ್ನು ಹೊಂದಿಸುವ ಮೂಲಕ 1911 ಅಕ್ಟೋಬರ್ 12ರಂದು ಅವರ ಕನಸಿನ ಯೋಜನೆ ಆರಂಭವಾಗಿ 1932ರಲ್ಲಿ ಪೂರ್ಣವಾಗಿ ಇಂದಿಗೂ ಮೈಸೂರು ಮಂಡ್ಯ ಕಾವೇರಿ ಜಲಾನಯನ ಪ್ರದೇಶದ ಲಕ್ಷಾಂತರ ಎಕರೆ ಕೃಷಿ ಜಮೀನಿಗೆ ನೀರಿನ ಆಶ್ರಯವಾಗಿರುವುದಲ್ಲದೇ ಬೆಂಗಳೂರು ಮಹಾನಗರವೂ ಸೇರಿದಂತೆ ಕೋಟ್ಯಾಂತರ ಜನರಿಗೆ ಕುಡಿಯುವ ನೀರಿನ ಆಗರವಾಗಿದೆ. ಜೋಗದ ಜಲಪಾತದಲ್ಲಿ ವಿದ್ಯುತ್ ಉತ್ಪಾದನಾ ಘಟಕವೂ ಮಹಾರಾಜರ ಕೊಡುಗೆಯೇ ಆಗಿದೆ.

ಇಂದು ನಾಡಿನಾದ್ಯಂತ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದ್ದರೆ ಆದನ್ನು ನಮ್ಮ ರಾಜರು ಅಂದಿನ ಕಾಲದಲ್ಲೇ ಜಾರಿಗೆ ತಂದು ಪ್ರತೀ ಗ್ರಾಮಗಳಿಗೂ ಒಂದು ಕನ್ನಡಿ ಮತ್ತು ಬಾಚಣಿಗೆ ಕೊಟ್ಟು ಪ್ರತಿಯೊಬ್ಬರೂ ಶುಭ್ರವಾಗಿ ಇರಬೇಕು ಎಂದು ಅಜ್ಞಾಪಿಸಿರುತ್ತಾರೆ. ಅದೇ ರೀತಿ ತಮ್ಮ ದೂರದೃಷ್ಟಿಯಿಂದ ಮೈಸೂರಿನ ಪ್ರತೀ ರಸ್ತೆಗಳು ವಿಶಾಲವಾಗಿ ಇರುವಂತೆ ಎಂದೂ ಕೂಡಾ ರಸ್ತೆಗಳಲ್ಲಿ ಜನ ಸಂದಣಿಯಾಗದಂತೆ ನೋಡಿಕೊಂಡಿರುತ್ತಾರೆ. ಬ್ರಿಟೀಷರೇ ಹೇಳಿದಂತೆ ಬ್ರಿಟನ್ ಬಿಟ್ಟರೇ ಬ್ರಿಟೀಷರು ವಾಸ ಮಾಡುವಂತಹ ಸುಸಜ್ಜಿತ, ವ್ಯವಸ್ಥಿತ ಮತ್ತು ಸುಂದರ ನಗರ ಮತ್ತೊಂದು ಎಂದರೆ ಅದು ಮೈಸೂರು ಎಂದು ಹೇಳಿದ್ದದ್ದು ಮೈಸೂರಿನ ಹೆಮ್ಮೆಯ ಸಂಕೇತವಾಗಿದೆ.

ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್‌, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿಡುವ ಮೂಲಕ ಇಡೀ ದೇಶಕ್ಕೇ ಮಾದರಿಯಾಗಿದ್ದಲ್ಲದೇ, ಅಂದಿನ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಲ್ಲದೇ, ಬೆಂಗಳೂರು, ಮೈಸೂರು ನಗರಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗುವಂತೆ ಮಾಡಿದ್ದು ಇದೇ ನಾಲ್ವಡಿಯವರೇ.

kr3ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ ಅವರು, ಶಿಕ್ಷಣವೇ ಎಲ್ಲರ ಅಭಿವೃದ್ಧಿಗೂ ಮೂಲ ಎಂದು ಭಾವಿಸಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಕ್ಕೆ ಕಾರಣೀಭೂತರಾದರೆ, 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದ್ದಲ್ಲದೇ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿ, ವಯಸ್ಕರಿಗಾಗಿ 7000 ವಯಸ್ಕರ ಶಾಲೆ. ಹೀಗೆ ಒಂದರ ಹಿಂದೆ ಒಂದರಂತೆ ಶಿಕ್ಷಣ ಕ್ಷೇತ್ರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸೇವೆ ಅಪಾರವಾಗಿದೆ.

ಪ್ರಜೆಗಳ ಸಮಸ್ಯೆಯನ್ನು ಆಲಿಸಲು ಪ್ರಜಾ ಪ್ರತಿನಿಧಿ ಸಭೆಯನ್ನು ಬಲಗೊಳಿಸಿ, 1907ರಲ್ಲಿ ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದರು. ಇವರ ಕಾಲದಲ್ಲೇ ದೇವದಾಸಿ ಪದ್ದತಿಯ ನಿರ್ಮೂಲನೆ, ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದಲ್ಲದೇ, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದರು. ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲೇ ಬೇಕೆನ್ನುವ ಕಾನೂನು ರೂಪಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿದ್ದರು.

ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯ್ತಿಗಳ ಕಾಯ್ದೆಯೂ ಸಹಾ ಇವರ ಕಾಲದಲೇ ಜಾರಿಗೆ ಆಗಿತ್ತು. ಯಾಂತ್ರಿಕೃತ ಕೈಗಾರಿಕೆಗಳ ಮೂಲಕ ಹೆಚ್ಚು ಹೆಚ್ಚು ಉತ್ಪಾದಿಸಬಹುದು ಮತ್ತು ಹೆಚ್ಚಿನ ಜನರಿಗೆ ಉದ್ಯೋಗವನ್ನು ಕೊಡಬಹುದು ಎಂದು ನಿರ್ಧರಿಸಿ ಇವರ ಕಾಲದಲ್ಲೇ ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಪೇಪರ್ ಮಿಲ್, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಹಾಗೆ ಹೆಚ್ಚಾಗಿ ತಯಾರಾದ ಗಂಧದ ಎಣ್ಣೆಯು ಹಾಳಾಗದಂತೆ ತಡೆಯಲು ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ, ಹೇರಳವಾಗಿ ಕಬ್ಬು ಬೆಳೆಯುವ ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪನಿ, ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಹೀಗೆ ದಿನವೆಲ್ಲಾ ಪಟ್ಟಿ ಮಾಡ ಬಹುದಾದಷ್ಟು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದ್ದರು.

SBMಪ್ರಜೆಗಳ ಆರೋಗ್ಯಕ್ಕಾಗಿ ಮೊತ್ತ ಮೊದಲ ಬಾರಿಗೆ ಲಸಿಕಾ ಕಾರ್ಯಕ್ರಮವನ್ನು ತಮ್ಮ ಅರಮನೆಯ ಅವರಣದಲ್ಲಿ ಮಹಾರಾಣಿಯವರಿಗೆ ಹಾಕಿಸುವ ಮೂಲಕ ಆರಂಭಿಸಿದ್ದಲ್ಲದೇ, ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳನ್ನೂ ಆರಂಭಿಸಿದ್ದರು. ಇಂದಿಗೂ ಪ್ರಖ್ಯಾತವಾಗಿರುವ ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ, ಮೈಸೂರಿನ ಕ್ಷಯರೋಗ ಆಸ್ಪತ್ರೆಯನ್ನೂ ಅಭಿವೃದ್ಧಿಪಡಿಸಿದರು. ವಾಣಿಜ್ಯ ಕ್ಷೇತ್ರದಲ್ಲಿ ಆರ್ಥಿಕವಾಗಿ ಸಧೃಢತೆಯನ್ನು ಹೊಂದುವ ಸಲುವಾಗಿ ಖಾಸಗೀ ಸಹಭಾಗಿತ್ವದೊಡನೆ ಮೈಸೂರು ಬ್ಯಾಂಕ್ ಆರಂಭಿಸಿದ್ದಲ್ಲದೇ, ರೈತರಿಗೆ ಸ್ಥಳೀಯವಾಗಿ ಸಾಲ ಸೌಲಭ್ಯಗಳು ದೊರೆಯುವಂತಾಗಲು 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಿ ಅದರ ರೈತರು ತಮ್ಮ ಜಮೀನು ಅಡಮಾನ ಇಟ್ಟು ಸಾಲ ಪಡೆದು ನಂತರ ಹಣ ತೀರಿಸಿ ತಮ್ಮ ಜಮೀನು ಬಿಡಿಸಿಕೊಳ್ಳುವಂತಹ ಸಹಕಾರ ಅಡಮಾನ ಬ್ಯಾಂಕುಗಳನ್ನು ಆರಂಭಿಸಿದ ಕೀರ್ತಿಯೂ ಸಹಾ ನಾಲ್ವಡಿ ಕೃಷ್ಣರಾಜರಿಗೇ ಸಲ್ಲುತ್ತದೆ.

ಮೈಸೂರು, ಬೆಂಗಳೂರು ನಗರಗಳಲ್ಲಿ ನಿರ್ಮಾಣವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನ ವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು ಹೀಗೆ ಹತ್ತು ಹಲವು ಕಟ್ಟಡಗಳ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಮಹಾರಾಜರೇ ಕಾರಣೀಭೂತರಾಗಿದ್ದಾರೆ.

halಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಂದ ಉದ್ಯಾನ ನಗರವಾಗಿ, ನಂತರ ಟಾಟಾ ಇನಿಸ್ಟಿಟ್ಯೂಟ್ ಮತ್ತು ರಾಮನ್ ಇನಿಸ್ಟಿಟ್ಯೂಟ್ ಮೂಲಕ ವಿಜ್ಞಾನ ನಗರವಾಗಿ ಬೆಳೆಯುತ್ತಿದ್ದಾಗಲೇ. ಬೆಂಗಳೂರಿಗೆ ವಿಮಾನ ನಗರವೆಂಬ ಖ್ಯಾತಿಯನ್ನೂ ತಂದು ಕೊಡುವ ಸಲುವಾಗಿ ಕೈಗಾರಿಕೋದ್ಯಮಿ ವಾಲ್‌ಚಂದ್ ಹೀರಾಚಂದ್ ಅವರೊಂದಿಗೆ ಒಡಂಬಡಿಕೆಯೊಂದಿಗೆ ಅಂದಿನ ಕಾಲಕ್ಕೇ 4 ಕೋಟಿ ರೂಪಾಯಿಗಳ ಅಧಿಕೃತ ಬಂಡವಾಳದೊಂದಿಗೆ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್ (HAL) ಎಂಬ ಸಂಸ್ಥೆಯನ್ನು ಆರಂಭಿಸಲು ಕಾರಣೀಭೂತರಾಗಿದ್ದರು. ಮಹಾರಾಜರು ಕಾಲವಾದ ಕೆಲವೇ ತಿಂಗಳುಗಳ ನಂತರ ಡಿಸೆಂಬರ್ 23, 1940 ಎಚ್.ಎ.ಎಲ್. ಕಾರ್ಖಾನೆಗೆ ಆರಂಭವಾಗುವ ಮೂಲಕ ಬೆಂಗಳೂರು ವಿಮಾನ ನಗರ ಎಂದೂ ಖ್ಯಾತಿ ಪಡೆಯಿತು. ಈ ಕಾರಣಗಳಿಂದಾಗಿಯೇ ಮುಂದೇ ಬಾಹ್ಯಾಕಾಶ ನಗರ ನಂತರ ಅದು ಎಲೆಕ್ಟ್ರಾನಿಕ್ಸ್ ನಗರವಾಗಿ ಸದ್ಯಕ್ಕೆ ವಿಶ್ವಮಾನ್ಯ ಮಾಹಿತಿ ತಂತ್ರಜ್ಞಾನ ನಗರವಾಗಿದೆ. ವೈಮಾಂತರಿಕ್ಷ ಕ್ಷೇತ್ರ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಇಂದಿನ ಅನನ್ಯ ಸಾಧನೆಗಳಿಗೆ ಮೈಸೂರು ಮಹಾರಾಜರು ತಮ್ಮ ದೂರದೃಷ್ಟಿಯಿಂದ ಸ್ಥಾಪಿಸಿದ ಈ ಎಲ್ಲ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳೇ ಮೂಲ ಕಾರಣ ಎನ್ನುವುದು ಅಪ್ಪಟ ಸತ್ಯವಾಗಿದೆ.

ಸ್ವತಃ ಲಲಿತಕಲೆ, ಸಂಗೀತ ಮತ್ತು ವೇದ ಪಾರಂಗತರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 36000 ಪುಟಗಳ ಋಗ್ವೇದವನ್ನು 1000 ಪುಟಗಳ 36 ಸಂಪುಟದ ಪುಸ್ತವನ್ನಾಗಿ ಮಾಡಿಸಿ ಎಲ್ಲರಿಗೂ ಹಂಚಿಕೆ ಮಾಡಿದ್ದಲ್ಲದೇ, ಸ್ವತಃ 21 ಕೃತಿಗಳನ್ನು ರಚಿಸಿ ಅದಕ್ಕೇ ಅವರೇ ಸ್ವತಃ ರಾಗ ಸಂಯೋಜನೆ ಮಾಡಿ ಆಡು ಮುಟ್ಟದ ಸೊಪ್ಪಿಲ್ಲಾ ಕೃಷ್ಣರಾಜ ಒಡೆಯರ್ ಕೈಯ್ಯಾಡಿಸದ ಕ್ಷೇತ್ರವಿಲ್ಲಾ ಎಂದೇ ಪ್ರಖ್ಯಾತರಾಗಿದ್ದರು.

ಮೈಸೂರಿನ ಹೆಸರನ್ನು ವಿಶ್ವವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಎಲ್ಲವೂ ಹದವಾಗಿ ಬೆರೆಸಿ, ಮೈಸೂರಿನ ಅರಮನೆಯ ಬಾಣಸಿಗರಾಗಿದ್ದ ಶ್ರೀ ಕಾಕಾಸುರ ಮಾದಪ್ಪನವರು ಅಚಾನಕ್ಕಾಗಿ ತಯಾರಿಸಿದ ಈ ಸಿಹಿ ತಿಂಡಿಗೆ ಮೈಸೂರ್ ಪಾಕ್ ಎಂದು ನಾಮಕರಣ ಮಾಡಿದ್ದೂ ಇದೇ ಮಹಾರಾಜರೇ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯ ಬಹುದಾಗಿದೆ

kro1ದೇಶದಲ್ಲಿ ಕರ್ನಾಟಕದ ಭವ್ಯ ಇತಿಹಾಸಕ್ಕೆ ಅಡಿಪಾಯ ಹಾಕಿದ್ದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು ತಮ್ಮ ವಯೋಸಹಜವಾಗಿ ಆಗಸ್ಟ್ 3, 1940ರಲ್ಲಿ ನಿಧನರಾಗುತ್ತಾರೆ. 1895 ರಿಂದ 1902 ವರೆಗೆ 7 ವರ್ಷಗಳ ಕಾಲ ತಾಯಿ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರ ಆಡಳಿತಾವಧಿಯು ಸೇರಿದಂತೆ 1902ರಿಂದ 1940ರ ತನಕದ 38 ವರ್ಷಗಳೂ ಸೇರಿ 45 ವರ್ಷಗಳ ಕಾಲ ನಡೆಸಿದ ಅವರ ಆಡಳಿತಾವಧಿ ಮೈಸೂರಿನ ಸುವರ್ಣಯುಗ ಎಂದರೆ ತಪ್ಪಾಗದು. ಮೈಸೂರು ಸಂಸ್ಥಾನದ ಮಹಾರಾಜರಾಗಿ ಕನ್ನಡಿಗರ ಹೆಮ್ಮೆಯನ್ನು ಪ್ರಪಂಚಾದ್ಯಂತ ಪಸರಿಸಿದ ಪ್ರಾಥಃಸ್ಮರಣೀಯರಾದ ಕರುನಾಡಿನ ಭಾಗ್ಯವಿಧಾತ,  ರಾಜರ್ಷಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನದಿನಂದು ಅವರಿಗೆ ಗೌರವನ್ನು ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಅಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಅಹಲ್ಯಬಾಯಿ ಹೋಳ್ಕರ್

ah1ಭಾರತದ ವೀರ ವನಿತೆಯರು ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸೀರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ, ಚನ್ನಭೈರಾದೇವಿ ಮುಂತಾದ ಮಹಾರಾಣಿಯರು. ಇದೇ ಪ್ರಾಥಃಸ್ಮರಣೀಯರ ಸಾಲಿಗೆ ಸೇರಬಹುದಾದ ಮತ್ತೊಬ್ಬ ಗೌರವಾನ್ವಿತರೇ, ಅಹಲ್ಯಬಾಯಿ ಎಂದರೂ ತಪ್ಪಾಗದು. ಹೋಳ್ಕರ್ ವಂಶದ ಮುಲ್ಲಾರ್ ರಾವ್ ಹೋಳ್ಕರನ ಮಗ ಖಂಡೇರಾಯನ ಪತ್ನಿಯಾಗಿ ತನ್ನ ಪತಿಯ ಮರಣಾನಂತರ ರಾಜ್ಯಭಾರಗಳನ್ನು (1754-1795)ತನ್ನ ತೆಕ್ಕೆಗೆ ತೆಗೆದುಕೊಂಡು 34 ವರ್ಷಗಳ ಕಾಲ ರಾಜ್ಯವನ್ನು ಆದರ್ಶ ರೀತಿಯಲ್ಲಿ ಆಳಿದ್ದಲ್ಲದೇ, ಮೊಘಲ ಧಾಳಿಯಿಂದ ಭಾರತದಾದ್ಯಂತ ನಾಶವಾಗಿದ್ದ ನೂರಾರು ದೇವಾಲಯಗಳು ಮತ್ತು ಧರ್ಮಶಾಲೆಗಳನ್ನು ಪುನರ್ನಿಮಿಸಿದ ಮಹಾನ್ ಹಿಂದೂ ಪ್ರವರ್ತಕಿ. ಅಕೆಯ ಜನ್ಮದಿನಂದು ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಯಶೋಗಾಥೆಗಳನ್ನು ಮೆಲುಕು ಹಾಕುವ ಮೂಲಕ ಆಕೆಗೆ ನಮ್ಮ ಪ್ರಣಾಮಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವೇ ಆಗಿದೆ.

ಮಹಾರಾಷ್ಟ್ರದ ಅಹ್ಮದ್ ನಗರದ ಜಮ್ ಖೇಡ್ ನ ಚೋಂಡಿ ಎಂಬ ಪುಟ್ಟ ಹಳ್ಳಿಯ ಪಟೇಲ್ ಅರ್ಥಾತ್ ಮುಖ್ಯಸ್ಥರಾಗಿದ್ದ ಮಂಕೋಜಿ ರಾವ್ ಶಿಂಧೆ ಮತ್ತು ಸುಶೀಲಾ ಶಿಂಧೆಯವರ ಮಗಳಾಗಿ 1725 ರ ಮೇ 31 ರಂದಲ್ಲಿ ಅಹಲ್ಯಾಬಾಯಿಯುವರ ಜನನವಾಗುತ್ತದೆ. ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ಬಿಡಿ ಗಂಡು ಮಕ್ಕಳಿಗೇ ಶಿಕ್ಷಣ ದೂರೆಯುವುದು ಕಷ್ಟಕರವಾಗಿದ್ದ ಸಮಯದಲ್ಲೇ, ಮನೆಯೇ ಮೊದಲ ಪಾಠಶಾಲೆ. ತಂದೆ ತಾಯಿಯರೇ ಮೊದಲ ಗುರುಗಳು ಎನ್ನುವಂತೆ ಆಕೆಯ ತಂದೆಯೇ ತಮ್ಮ ಮಗಳಿಗೆ ಗುರುವಾಗಿ ಓದು ಬರಹದ ಜೊತೆ ಭಾಷಾಜ್ಞಾನ, ವ್ಯಾವಹಾರಿಕ ಶಿಕ್ಷಣ ಹಾಗೂ ತನ್ನ ಆತ್ಮ ರಕ್ಷಣೆಗಾಗಿ ಯುದ್ಧ ಕಲೆಗಳನ್ನು ಕಲಿತು ರಾಷ್ಟ್ರಾಭಿಮಾನಿಯಾಗುವುದರ ಜೊತೆಯಲ್ಲಿಯೇ ತಾಯಿಯಿಂದ ದೈವ ಭಕ್ತಿ ಮೂಡಿ ಬಂದು ಸನಾತನ ಧರ್ಮದ ಪರಿಪಾಲಕಿಯಾಗಿಯೂ ಕರುಣಾಮಯಿ, ಮಾತೃಹೃದಯಿಯಾಗುವುದರ ಜೊತೆಗೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ದಿಟ್ಟೆ ಮತ್ತು ಸಾಹಸಿಯಾಗಿ ರೂಪುಗೊಳ್ಳುತ್ತಾಳೆ.

ah2ಆಕೆಯ ಸಣ್ಣ ವಯಸ್ಸಿನಲ್ಲಿಯೇ ಪ್ರತಿನಿತ್ಯವೂ ತಮ್ಮೂರಿನ ದೇವಾಲಯದಲ್ಲಿ ಬಡವರಿಗೆ ಮತ್ತು ಹಸಿವಾದವರಿಗೆ ಅನ್ನ ದಾಸೋಹ ಮಾಡುತ್ತಿದ್ದ ಅವರ ತಂದೆಯೊಂದಿಗೆ ಆಕೆಯೂ ಊರಿನ ದೇವಾಲಯಕ್ಕೆ ಹೋಗಿ ತಂದೆಯ ಆ ಪುಣ್ಯ ಕಾರ್ಯದಲ್ಲಿ ಭಾಗಿಯಾಗುತ್ತಿರುತ್ತಾಳೆ. ಅದೊಮ್ಮೆ ಒಂದನೇ ಪೇಶ್ವೆ ಬಾಜೀರಾವ್ ನ ಆಡಳಿತದಲ್ಲಿ ವೀರ ಸೇನಾನಿಯಾಗಿದ್ದ ಮಾಲ್ವಾ ಪ್ರದೇಶದವರಿಗೆ ಅಕ್ಷರಶಃ ದೇವರೇ ಎನಿಸಿಕೊಂಡಿದ್ದ ಮಲ್ಹಾರ್ ರಾವ್ ಹೋಳ್ಕರ್, ಅಹಲ್ಯಾಬಾಯಿಯವರ ಜಮ್ ಖೇಡ್ ಮಾರ್ಗವಾಗಿ ಪುಣೆಗೆ ಹೋಗುವಾಗ ಇದೇ ಅನ್ನ ಸಂತರ್ಪಣೆ ಕಾರ್ಯದಲ್ಲಿ ಭಾಗಿಯಾಗುವ ಸಂಧರ್ಭದಲ್ಲಿ ಅತ್ಯಂತ ಚುರುಕಾಗಿ ಓಡಾಡುತ್ತಿದ್ದ ಆ ಎಂಟು ವರ್ಷದ ಪುಟ್ಟ ಬಾಲಕಿಯತ್ತ ಆಕರ್ಷಿತರಾಗಿ ಆಶ್ಚರ್ಯದಿಂದ ಅಲ್ಲಿದ್ದವರ ಬಳಿ ಆಕೆಯ ಬಗ್ಗೆ ವಿಚಾರಿಸಿ ಅಕೆಯ ಸದ್ಗುಣಗಳಿಂದ ಪ್ರಭಾವಿತನಾಗಿ ಆಕೆ ತನ್ನ ಮಗ ಖಂಡೇರಾವ್ ಹೋಳ್ಕರಿಗೆ ಸೂಕ್ತವಾದ ಕನ್ಯೆ ಎಂದು ತಿಳಿದು ಆಕೆಯ ತಂದಯ ಬಳಿ ಕನ್ಯಾದಾನ ಮಾಡಿಕೊಡಲು ನಿವೇದಿಸಿಕೊಂಡಾಗ ಅದಕ್ಕೆ ಸಂತೋಷದಿಂದ ಒಪ್ಪಿದ ಮಂಕೋಜಿ ರಾವ್ ಶಿಂಧೆ 1733 ರಲ್ಲಿ ತನ್ನ ಎಂಟು ವರ್ಷದ ಮುದ್ದು ಮಗಳಾದ ಅಹಲ್ಯಾಬಾಯಿಯನ್ನು ಮಲ್ಹಾರ್ ರಾವ್ ಹೋಳ್ಕರ್ ಪುತ್ರನಾದ ಖಂಡೇರಾವ್ ಹೋಳ್ಕರ್ ನೊಂದಿಗೆ ವಿವಾಹ ಮಾಡಿಕೊಟ್ಟ ಪರಿಣಾಮ ಅಹಲ್ಯಾ ಬಾಯಿ ಹೋಳ್ಕರ್ ಸಂಸ್ಥಾನದ ಮುದ್ದಿನ ಸೊಸೆಯಾಗಿ ಮಾಲ್ವಾಗೆ ಬಂದು ತನ್ನ ಸಂಸಾರ ಆರಂಭಿಸುತ್ತಾಳೆ. ಸತಿಪತಿಗಳ ಅನ್ಯೋನ್ಯ ದಾಂಪತ್ಯದ ಕುರುಹಾಗಿ ಅಹಲ್ಯಾಬಾಯಿ ಮತ್ತು ಖಂಡೇರಾವ್ ದಂಪತಿಗಳಿಗೆ 1745 ರಲ್ಲಿ ಮಾಲೇರಾವ್ ಹೋಳ್ಕರ್ ಎಂಬ ಮಗ ಮತ್ತು 1748 ರಲ್ಲಿ ಮುಕ್ತಾಬಾಯಿ ಹೋಳ್ಕರ್ ಎಂಬ ಮಕ್ಕಳಾಗಿ, ಮಗ ಮಾಲೇರಾವ್ ಹೋಳ್ಕರ್ ಜನ್ಮತಃ ಮಾನಸಿಕ ಅಸ್ವಸ್ಥತೆ ಮತ್ತು ದೈಹಿಕ ದುರ್ಬಲತೆಯನ್ನು ಹೊಂದಿರುತ್ತಾನೆ.

1754 ರಲ್ಲಿ, ಇಮಾದ್-ಉಲ್-ಮುಲ್ಕ್ ಮತ್ತು ಮೊಘಲ್ ಚಕ್ರವರ್ತಿ ಅಹ್ಮದ್ ಷಾ ಬಹದ್ದೂರ್ ಅವರ ಸೇನಾಪತಿ ಮೀರ್ ಭಕ್ಷಿ ಅವರ ಬೆಂಬಲದ ಕೋರಿಕೆಯ ಮೇರೆಗೆ ಖಂಡೇ ರಾವ್ ಮತ್ತು ಮಲ್ಹಾರ್ ರಾವ್ ಹೋಲ್ಕರ್ ಭರತ್‌ಪುರದ ಜಾಟ್ ರಾಜಾ ಸೂರಜ್ ಮಾಲ್‌ನ ಕುಮ್ಹೇರ್ ಕೋಟೆಯನ್ನು ಮುತ್ತಿಗೆ ಹಾಕುತ್ತಾರೆ. ಮೊಘಲ್ ಚಕ್ರವರ್ತಿಯ ಬಂಡಾಯಗಾರ ವಜೀರ್ ಸಫ್ದರ್ ಜಂಗ್ ಪರವಾಗಿದ್ದ ಸೂರಜ್ ಮಾಲ್ ನ ಜೊತೆ ನಡೆಯುತ್ತಿದ್ದ ಯುದ್ಧದ ಸಮಯದಲ್ಲಿ ತೆರೆದ ಪಲ್ಲಕ್ಕಿಯಲ್ಲಿ ತನ್ನ ಸೈನ್ಯವನ್ನು ಪರಿಶೀಲಿಸುತ್ತಿದ್ದಾಗ ಜಾಟ್ ಸೈನ್ಯದವರು ಫಿರಂಗಿಯಿಂದ ಹಾರಿಸಿದ ಗುಂಡು ಖಂಡೇ ರಾವ್ ಗೆ ಬಡಿದು ಆತ ಸ್ಥಳದಲ್ಲೇ ಮೃತನಾಗುತ್ತಾನೆ. ತನ್ನ ಮಗನ ಮರಣದ ನಂತರ ತನ್ನ ಸೊಸೆ ಅಹಲ್ಯಾ ಬಾಯಿ ಮಗನ ಚಿತೆಯೊಂದಿಗೆ ಸತಿ ಸಹಗಮನವಾಗುವುದನ್ನು ನಿಲ್ಲಿಸಿದ ಮಾವ ಮಲ್ಹಾರ್ ಹೋಳ್ಕರ್ ನಂತರ ತನ್ನ ಸೊಸೆಗೆ ಯುದ್ದದಲ್ಲಿ ಶಸ್ತ್ರಾಸ್ತ್ರಗಳ ಕುರಿತಾಗಿ ತರಬೇತಿ ಮತ್ತು ರಾಜ್ಯಸೂತ್ರಗಳನ್ನು ಕಲಿಸಿದ ನಂತರ ಅಥಿಕೃತವಾಗಿ ಅಕೆಯನ್ನೇ ಇಂದೋರ್ ನ ಮಹಾರಾಣಿಯಾಗಿ ಪಟ್ಟಾಭಿಷೇಕ ಮಾಡುವ ಮೂಲಕ ಮಾಲ್ವ ಪ್ರಾಂತ್ಯದ ಸಮಸ್ತ ಅಧಿಕಾರವನ್ನು ಆಕೆಗೆ ಹಸ್ತಾಂತರಿಸಿ ತಮ್ಮ ಜವಾಬ್ದಾರಿಯಿಂದ ವಿಮುಕ್ತಿ ಹೊಂದುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಮಲ್ಹಾರ್ ರಾವ್ ಹೋಳ್ಕರ್ ವಯೋಸಹಜವಾಗಿ ಸಾವನ್ನಪ್ಪಿದ ನಂತರ ಅಕೆಯ ಜವಾಬ್ಧಾರಿ ಮತ್ತಷ್ಟು ಹೆಚ್ಚುತ್ತದೆ.

a1ತನಗೆ ಸಿಕ್ಕ ಅಧಿಕಾರವನ್ನು ಅತ್ಯಂತ ದಕ್ಷತೆಯಿಂದ ಒಳಾಡಳಿತ ಸರ್ಕಾರವನ್ನು ಸ್ಥಾಪಿಸಿ ಶಾಂತಿಯನ್ನು ನೆಲೆಗೊಳಿಸಿದಳು. ಪ್ರಜೆಗಳ ರಕ್ಷಣೆಯೇ ಆಕೆಯ ಮುಖ್ಯ ಧ್ಯೇಯವಾಗಿತ್ತು. ಆಕೆಯ ಕಾಲದಲ್ಲೇ ಮಾಳವ ಪ್ರಾಂತ್ಯದಲ್ಲಿ ಅತ್ಯಂತ ಸುಖೀ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಯಿತು. ಅಧಿಕಾರದ ದುರಭಿಮಾನದ ಲವಲೇಶವೂ ಇಲ್ಲದೇ, ಉದಾರಚರಿತಳೂ, ಧರ್ಮಿಷ್ಠಳೂ ಆಗಿ ಎಲ್ಲಾ ಮತ ಗ್ರಂಥಗಳ ಅಧ್ಯಯನ ಮಾಡಿ ಅತ್ಯಂತ ದಕ್ಷತೆಯಿಂದ ರಾಜ್ಯವನ್ನು ಆಳಿದಳು ಎಂದು ಬ್ರಿಟಿಷ್ ಇತಿಹಾಸಕಾರ ಸರ್ ಜಾನ್ ಮ್ಯಾಲ್ಕೋಮ್ ಆಕೆಯ ಬಗ್ಗೆ ಹೇಳಿರುವುದು ಗಮನಾರ್ಹವಾಗಿದೆ.

ah3ಅಹಲ್ಯಬಾಯಿ ಇಂದೋರ್ ನ ಆಂತರಿಕ ಭದ್ರತಾ ಉಸ್ತುವಾರಿಯನ್ನು ಮಲ್ಹಾರ್ ರಾವ್ ಹೋಳ್ಕರ್ ಅವರ ದತ್ತು ಪುತ್ರನಾಗಿದ್ದ ತನ್ನ ಮೈದುನ ತುಕೋಜಿ ರಾವ್ ಹೋಳ್ಕರನಿಗೆ ವಹಿಸಿ ಖಡ್ಗ ಹಿಡಿದು ಕುದುರೆಯೇರಿ ಪೂರ್ತಿ ಭಾರತ ಪರ್ಯಟನೆ ಮಾಡಿ ದೇಶದ್ರೋಹಿಗಳ ದಾಳಿಗೆ ಸಿಲುಕಿ ಧ್ವಂಸಗೊಂಡ ಸಾವಿರಾರು ಹಿಂದೂ ದೇವಾಲಯಗಳನ್ನು ರಕ್ಷಿಸಿ ಪುನರುತ್ಥಾನ ಕಲ್ಪಿಸುವ ಮೂಲಕ ಸನಾತನ ಧರ್ಮ ಪರಿಪಾಲನೆಯ ಮಹತ್ಕಾರ್ಯದಲ್ಲಿ ತೊಡಗುತ್ತಾಳೆ. ಇದೇ ಮಹಾರಾಣಿ ಅಹಲ್ಯಾಬಾಯಿಯ ಕಾಲದಲ್ಲೇ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳು, ಹರಿದ್ವಾರ, ಹೃಷಿಕೇಶ, ಬದರೀನಾಥ, ಕಾಂಚಿ, ಅಯೋಧ್ಯ, ಅವಂತಿ,ದ್ವಾರಕಾ, ಮಥುರಾ,ಗಯಾ, ರಾಮೇಶ್ವರ ಹಾಗೂ ಪುರಿ ಜಗನ್ನಾಥ್ ಸಹಿತವಾಗಿ ಸುಮಾರು 3500ಕ್ಕೂ ಅಧಿಕವಾದ ಶಿವ ಮತ್ತು ರಾಮ ದೇವರ ಚಿಕ್ಕಪುಟ್ಟ ಗುಡಿ ಗೋಪುರಗಳು ಪುನರುಜ್ಜೀವನ ಗೊಳ್ಳುತ್ತದೆ.

ah_kaashiಮೊಘಲರ ಆಳ್ವಿಕೆಯಲ್ಲಿ ಬಹುಶಃ ಕಾಶಿ ವಿಶ್ವನಾಥ ದೇವಾಲಯದಷ್ಟು ದಾಳಿಗೊಳಗಾಗಿ ಹಾನಿಗೊಳಗಾದಷ್ಟು ಬೇರಾವ ದೇವಾಲಯವೂ ಆಗಿಲ್ಲ ಎನ್ನುವುದು ದುಃಖಕರವಾದ ವಿಷಯವಾಗಿದೆ. ಮೊಹಮ್ಮದ್ ಗೋರಿಯ ಆದೇಶದಂತೆ ಕುತುಬುದ್ದೀನ್ ಐಬಕ್ ದೇವಾಲಯವನ್ನು ಕೆಡವಿದಾಗ ಅದನ್ನು ರಾಜಾ ಮಾನ್‌ಸಿಂಗ್‌ ಪುನರ್ನಿರ್ಮಾಣ ಮಾಡಿದ್ದರೆ, ಅಕ್ಬರನ ಮರಿಮಗ ಔರಂಗಜೇಬ್ ತನ್ನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ಉರುಳಿಸಿ ಅಲ್ಲಿ ನಿರ್ಮಿಸಿದ ಗ್ಯಾನವಾಪಿ ಮಸೀದಿಯ ಕುರಿತಂತೆ ಪ್ರಸ್ತುತ ವಿಚಾರಣೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಹಾಗೆ ಔರಂಗಜೇಬನಿಂದ ನಾಶವಾದ 111 ವರ್ಷಗಳ ನಂತರ ಅವಳು 1780 ರಲ್ಲಿ ರಾಣಿ ಅಹಲ್ಯಾ ಬಾಯಿ ಹೋಲ್ಕರಳಿಗೆ ಶಿವನು ಕನಸಿನಲ್ಲಿ ಬಂದು ಆದೇಶ ನೀಡಿದ ನಂತರ ರಾಣಿಯು ಕಾಶಿಯ ಗಥವೈಭವವನ್ನು ಮರಳಿಸಬೇಕೆಂದು ನಿರ್ಧರಿಸಿ ಅದರ ಪುನರ್ನಿರ್ಮಾಣಕ್ಕೆ ಲಕ್ಷಾಂತರ ದೇಣಿಗೆ ನೀಡಿದ್ದಲ್ಲದೇ ನಂತರ ಇಂಧೋರ್‌ನ ಮಹಾರಾಜ ರಂಜಿತ್ ಸಿಂಗ್ ಕೂಡಾ ಈ ದೇವಾಲಯದ 4 ಚಿನ್ನದ ಕಂಬಗಳಿಗಾಗಿ ಸುಮಾರು 10 ಟನ್‌ನಷ್ಟು ಬಂಗಾರವನ್ನು ನೀಡಿ ದೇವಾಲಯವನ್ನು ಪುನರ್ನಿಮಾಣ ಮಾಡಿದ್ದದ್ದು ಈಗ ಇತಿಹಾಸ.

ಕೇವಲ ಹಿಂದೂ ದೇವಾಲಯಗಳನ್ನು ಮೋಘಲರಿಂದ ರಕ್ಷಿಸಿ ಪುನರುತ್ಥಾನ ಮಾಡಿದ್ದಲ್ಲದೇ, ತನ್ನ ಆಡಳಿತಾವಧಿಯಲ್ಲಿ ಇಂದೋರ್ ಮತ್ತು ಅದರ ಆಸುಪಾಸಿನ ಅನೇಕ ಹಳ್ಳಿಗಳಲ್ಲಿ ಕೆರೆ ಭಾವಿಗಳನ್ನು ನಿರ್ಮಾಣ ಮಾಡುವ ಮೂಲಕ ಆ ಪ್ರದೇಶಗಳೆಲ್ಲವು ಸದಾಕಾಲವೂ ಕೃಷ್ಟಿ ಚಟುವಟಿಕೆಗಳಿಂದ ಸಮೃದ್ಧವಾಗಿರುವಂತೆ ನೋಡಿಕೊಂಡಿದ್ದಳು. ಸದಾ ಪ್ರಜೆಗಳ ಅಹವಾಲು ಆಲಿಸಿ ಅವರ ಅಗತ್ಯಗಳನ್ನು ಅರಿತು ಪೂರೈಸಿ, ಕಾಲಕಾಲಕ್ಕೆ ಅವರ ವ್ಯಾಪಾರ ವಹಿವಾಟುಗಳಿಗೆ ಎಲ್ಲ ರೀತಿಯಿಂದ ಸಹಕರಿಸುವುದೇ ಅಹಲ್ಯಾಬಾಯಿಯ ಮುಖ್ಯ ಧ್ಯೇಯವಾಗಿತ್ತು.

Rule is a Rule even for a Fool ಎನ್ನುವ ಆಂಗ್ಲ ನಾನ್ನುಡಿಯಂತೆ ತನ್ನ ರಾಜ್ಯದಲ್ಲಿರುವ ಕಾನೂನುಗಳು ತನ್ನ ಕುಟುಂಬಕ್ಕೂ ಅನ್ವಯವಾಗುತ್ತದೆ ಎಂದು ಭಾವಿಸಿದ ಕಾರಣ ಆಕೆ ತನ್ನ ಪ್ರಜೆಗಳ ಪಾಲಿಗೆ ನಿಜವಾಗಿಯೂ ಮಹಾತಾಯಿ ಆಗಿದ್ದಳು ಎನ್ನುವುದಕ್ಕೆ ಈ ಪ್ರಸಂಗವೇ ಸಾಕ್ಷಿ. ಅದೊಮ್ಮೆ ಅಕೆಯ ಮಾನಸಿಕ ಅಸ್ವಸ್ಥ ಮಗ ಮಾಲೇರಾವ್ ಅಡ್ಡಾದಿಡ್ಡಿಯಾಗಿ ರಥ ನಡೆಸುತ್ತಾ, ಜೋಲಿ ತಪ್ಪಿ ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಹಸುವಿನ ಕರುವಿನ ಮೇಲೆ ಹಾಯಿಸಿದ ಕಾರಣ ಆ ಕರು ಸತ್ತುಹೋಗುತ್ತದೆ. ಈ ವಿಷಯವನ್ನು ಅರಿತ ಅಹಲ್ಯಾಬಾಯಿ, ಆ ಕರುವಿಗಾದ ನೋವು ತನ್ನ ಮಗನಿಗೂ ಆಗ ಬೇಕು ಎಂದು ನಿರ್ಧರಿಸಿ, ಆ ಕರು ಸತ್ತ ರಸ್ತೆಯಲ್ಲಿಯೇ ತನ್ನ ಮಗನನ್ನು ಮಲಗಿಸಿ ಆತನ ಮೇಲೆ ತನ್ನ ರಥವನ್ನು ಹಾಯಿಸಿ ಸಾಯಿಸಲು ಪ್ರಯತ್ನಿಸಿದ್ದನ್ನು ಗಮನಿಸಿದ ಇತರರು ಆಕೆಯನ್ನು ತಡೆಯುತ್ತಾಳೆ. ಈ ಘಟನೆಯು ಅಹಲ್ಯಾಬಾಯಿಯ ಧರ್ಮನಿಷ್ಠ ಆಡಳಿತಕ್ಕೆ ಸಾಕ್ಷಿಯಾಗಿದೆ. ಚಿಕ್ಕಂದಿನಿಂದಲೂ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ 1767 ರಲ್ಲಿ ಚಿಕ್ಕವಯಸ್ಸಿನಲ್ಲಿಯೇ ಆತ ಮೃತನಾಗುತ್ತಾನೆ. ಇಂದಿಗೂ ಇಂದೋರಿನಲ್ಲಿ ಈ ಘಟನೆ ನಡೆದ ಪ್ರದೇಶವನ್ನು ಅಡ್ಡ ಬಝಾರ್ ಎಂದೇ ಕರೆಯಲಾಗುತ್ತದೆ. ಮುಂದೆ ತನ್ನ ಸಂಸ್ಥಾನದಲ್ಲಿ ಡಕಾಯಿತರು ಏಕಾಏಕಿಯಾಗಿ ಹಳ್ಳಿಗಳಿಗೆ ನುಗ್ಗಿ ಹಳ್ಳಿಗರನ್ನು ದೋಚುತ್ತಿದ್ದಾಗ ಅಂತಹ ಡಕಾಯಿತರನ್ನು ಧೈರ್ಯದಿಂದ ಎದುರಿಸಿ ಅವರನ್ನು ಸೋಲಿಸುವಲ್ಲಿ ಸಫಲನಾದ ಯಶವಂತ ರಾವ್‌ ಎಂಬ ಅನಾಥ ಸಾಮಾನ್ಯ ಬಡವನ ಸಾಹಸ ಮತ್ತು ಧೈರ್ಯತನಕ್ಕೆ ಮೆಚ್ಚಿ ಆತನೊಂದಿಗೆ ತನ್ನ ಮಗಳನ್ನು ಮದುವೆ ಮಾಡಿಸಿ ತನ್ನ ಅಳಿಯನನ್ನಾಗಿ ಮಾಡಿಕೊಂಡು, ತನ್ನ ರಾಜಧಾನಿ ಮಾಹೇಶ್ವರದ ಆಡಳಿತದಲ್ಲಿ ಕೆಲವು ಜವಾಬ್ದಾರಿ ವಹಿಸಿ ಯಶವಂತ್ ನನ್ನು ತನ್ನ ಕುಟುಂಬದ ಒಬ್ಬ ಸದಸ್ಯನನ್ನಾಗಿ ಕಾಣುತ್ತಾಳೆ.

ಪತಿ ಮತ್ತು ಪುತ್ರ ವಿಯೋಗದಿಂದ ದುಃಖಿತಳಾಗಿದ್ದ ಅಹಲ್ಯಾಬಾಯಿಯನ್ನು ನೋಡಿದ ಕುಟಿಲ ಬುದ್ಧಿಯ ಗಂಗಾಧರ ಎಂಬಾತನು, ಒಬ್ಬ ಹೆಣ್ಣಾಗಿ ರಾಜ್ಯವಾಳುವುದು ಕಷ್ಟಕರವಾದ್ದರಿಂದ ಗಂಡು ಮಗುವೊಂದನ್ನು ದತ್ತು ತೆಗೆದುಕೊಂಡು ಬೆಳೆಸು. ಅವನು ವಯಸ್ಸಿಗೆ ಬರುವವರೆಗೆ ನಾನೇ ಆಳ್ವಿಕೆ ನಡೆಸುತ್ತೇನೆ ಎಂದಾಗ, ಅವನಿಗೆ ಬೈಯ್ದು ಕಳುಹಿಸಿದ್ದರಿಂದ ಕುಪೀತನಾಗಿ ಪೇಶ್ವೆ ಮಾಧವರಾವ್ ಅವರ ತಮ್ಮ ರಘುನಾಥ ರಾವ್ ಅವರಿಗೆ ಗಂಡು ದಿಕ್ಕಿಲ್ಲದ ಇಂದೋರ್ ವಶ ಪಡಿಸಿಕೊಳ್ಳಲು ಇದೇ ಸುಲಭವಕಾಶ ಎಂದು ಪತ್ರ ಬರೆಯುತ್ತಾನೆ. ಆ ಪತ್ರವನ್ನು ಕಂಡು ರಘುನಾಥನು ತನ್ನ ಸೇನೆಯೊಂದಿಗೆ ಇಂದೋರ್ ಮೇಲೆ ಧಾಳಿ ಮಾಡಲು ಸಿದ್ಧವಾಗುವ ವಿಷಯ ಗುಪ್ತಚರರ ಮೂಲಕ ಅಹಲ್ಯಾಬಾಯಿಗೆ ತಿಳಿದು ಇದು ಗಂಗಾಧರನ ಕುಟಿಲ ತಂತ್ರ ಎಂಬುದನ್ನೂ ಅರಿತು, ಕೂಡಲೇ ತನ್ನ ಸುತ್ತಮುತ್ತಲ ಗಾಯಕವಾಡ್, ದಾಬಾಡೇ, ಭೋಂಸ್ಲೆ ಸಾಮಂತ ರಾಜರ ಸಹಾಯದೊಂದಿಗೆ ದೊಡ್ಡದಾದ ಸೈನ್ಯವನ್ನು ಕಟ್ಟಿ ಯುದ್ದಕ್ಕೆ ಸಿದ್ದಳಾದರೂ, ಯುದ್ದವನ್ನು ಮಾಡದೇ ಶತ್ರುವನ್ನು ಹಿಮ್ಮೆಟ್ಟಿರುವ ಯುಕ್ತಿಯನ್ನು ಪ್ರಯೋಗಿಸುತ್ತಾಳೆ.

ಅದರ ಪ್ರಕಾರ ರಘುನಾಥನಿಗೆ ಪತ್ರವೊಂದನ್ನು ಬರೆದು, ನಿಮ್ಮ ವಿರುದ್ಧ ಹೋರಾಡಲು ತನ್ನ ಬಳಿ ಈ ಪ್ರಮಾಣದ ಸೈನ್ಯವು ಸಿದ್ಧವಾಗಿದ್ದು ಮೀಸೆ ಹೊತ್ತ ಗಂಡಸರಾದ ನೀವು, ನನ್ನಂತಹ ಹೆಣ್ಣೊಬ್ಬಳಿಂದ ಸೋತು ಹೋದಲ್ಲಿ ತಲೆತಲಾಂತರದವರೆಗೂ ಆ ಅಪಕೀರ್ತಿ ನಿಮಗೆ ಕಾಡುವ ಕಾರಣ, ನಮ್ಮೊಂದಿಗೆ ಯುದ್ದಮಾಡುವ ಮುನ್ನಾ ಸರಿಯಾಗಿ ಯೋಚಿಸುವುದು ಉತ್ತಮ ಎಂದಿರುತ್ತದೆ. ಆಕೆಯ ಪತ್ರದಿಂದ ಮುಜುಗೊರಕ್ಕೊಳಗಾದ ರಘುನಾಥನು ಜೆಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ, ಪತಿ ಮತ್ತು ಪುತ್ರನ ವಿಯೋಗದಿಂದ ದುಃಖತವಾಗಿದ್ದ ನಿಮಗೆ ಸಾಂತ್ವನ ಹೇಳುವ ಸಲುವಾಗಿ ನಾವು ಬಂದೆವೇ ಹೊರತು ನಿಮ್ಮೊಂದಿಗೆ ಹೋರಾಟ ಮಾಡಲು ಅಲ್ಲಾ ಎಂದು ಪತ್ರ ಬರೆದು, ಯುದ್ಧದಿಂದ ಹಿಂದಿರುಗುತ್ತಾನೆ. ಹೀಗೆ ಯುದ್ದವನ್ನೇ ಮಾಡದೇ ಶತ್ರುಗಳನ್ನು ಮಣಿಸುವ ಕಲೆ ರಾಣಿ ಅಹಲ್ಯಾಳಿಗೆ ಕರಗತವಾಗಿರುತ್ತದೆ.

a3ಅಹಲ್ಯಾ ಬಾಯಿ ಕೇವಲ ಆಡಳಿತ ಮತ್ತು ಹಿಂದೂ ದೇವಾಲಯಗಳ ಹೊರತಾಗಿಯೂ ಆಕೆಯ ರಾಜಧಾನಿ ಮಹೇಶ್ವರದಲ್ಲಿ ಸಾಹಿತ್ಯ, ಸಂಗೀತ, ಕಲಾತ್ಮಕ ಮತ್ತು ಕೈಗಾರಿಕಾ ಉದ್ಯಮದದ ಪ್ರಮುಖ ಕೇಂದ್ರವಾಗಿತ್ತು. ಸುಪ್ರಸಿದ್ಧ ಮರಾಠಿ ಕವಿ ಮೊರೊಪಂತ್ ಮತ್ತು ಮಹಾರಾಷ್ಟ್ರದ ಶಾಹಿರ್ ಅನಂತಫಂಡಿ, ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಖುಶಾಲಿ ರಾಮ್ ಮುಂತಾದವರು ಅಹಲ್ಯಾಬಾಯಿ ಅವರ ಆಶ್ರಯದಲ್ಲೇ ಬೆಳಕಿಗೆ ಬಂದವರಾಗಿದ್ದರು. ಇವರುಗಳಲ್ಲದೇ ನೂರಾರು ಕುಶಲಕರ್ಮಿಗಳು, ಶಿಲ್ಪಿಗಳು ಮತ್ತು ಕಲಾವಿದರು ಆಕೆಯ ಆಶ್ರಯದಲ್ಲಿದ್ದದಲ್ಲದೇ ಇವರುಗಳೇ ಮುಂದೆ. ಮಹೇಶ್ವರದಲ್ಲಿ ಜವಳಿ ಉದ್ಯಮವನ್ನು ಸಹ ಸ್ಥಾಪಿಸಿದ್ದರು.

ah_statueಬಹಳ ಕಾಲದಿಂದಲೂ ಮಕ್ಕಳಿಲ್ಲದ ವಿಧವೆಯರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಇದ್ದ ಸಾಂಪ್ರದಾಯಿಕ ಕಾನೂನನ್ನು ಅಹಲ್ಯಾಬಾಯಿ ರದ್ದುಗೊಳಿಸುವ ಮೂಲಕ ಜನರಿಗೆ ಅತ್ಯಂತ ಪ್ರೀತಿ ಪಾತ್ರಳಾಗಿದ್ದಳು. ಹೀಗೆ ಸತತವಾಗಿ ಮೂರು ದಶಕಗಳ ಕಾಲ ಬಡವರ ಬಂಧುವಾಗಿ, ಪ್ರಜೆಗಳ ಮಹಾತಾಯಿಯಾಗಿ, ಧರ್ಮನಿಷ್ಠೆಯಿಂದ ಸನಾತನ ಧರ್ಮದ ಪರಿಪಾಲನೆ ಮಾಡುತ್ತ ದೇವಾಲಯಗಳ ರಕ್ಷಣೆ ಮತ್ತು ಪುನರುತ್ಥಾನ ಮಾಡುತ್ತಿದ್ದ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ 13 ಆಗಸ್ಟ್ 1795 ರಂದು ತಮ್ಮ 70 ನೇ ವಯಸ್ಸಿನಲ್ಲಿ ದೈವಾಧೀನರಾಗುತ್ತಾರೆ.

ah_Stamp1996 ರಲ್ಲಿ ಭಾರತ ಸರ್ಕಾರವು ಅಹಲ್ಯಾಬಾಯಿ ಹೋಳ್ಕರ್ ಳ 200ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಆಕೆಯ ಅಂಚೆಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಗೌರವವನ್ನು ಕೊಟ್ಟರೆ, ಇಂದಿಗೂ, ಕಾಶೀ, ಗೋಕರ್ಣ, ಬನವಾಸಿ, ಬದರೀನಾಥ ಮತ್ತು ಮಹಾರಾಷ್ಟ್ರದ ನೂರಾರು ದೇವಾಲಯಗಳಲ್ಲಿ ಅಹಲ್ಯಾಬಾಯಿಯ ಹೆಸರಿನಲ್ಲಿ ಪ್ರತಿನಿತ್ಯವೂ ಅರ್ಚನೆ ನಡೆಸುವ ಮೂಲಕ ಅಕೆಯ ಸಹಾಯವನ್ನು ನೆನೆಯಲಾಗುತ್ತದೆ.

ah_samadiಇಂದೋರಿನಲ್ಲಿರುವ ಆಕೆಯ ಸಮಾದಿಯಲ್ಲೂ ಸಹಾ ಪ್ರತಿನಿತ್ಯವೂ ಪೂಜೆ ನಡೆಸುವ ಮೂಲಕ ಆಕೆಯನ್ನು ಕೆಲವೇ ಕೆಲವು ಜನರು ಮಾತ್ರವೇ ನೆನಪಿಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರ ಸಂಗತಿಯಗಾಗಿದೆ. ನುಡಿ-ಗಡಿ-ಗುಡಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದ ಅಹಲ್ಯಭಾಯಿ ಹೋಳ್ಕರ್ ಅಂತಹ ವೀರಮಹಿಳೆಯ ವೀರಗಾಥೆಯನ್ನು ನಮ್ಮ ಇಂದಿನ ಪೀಳಿಗೆಯವರಿಗೂ ತಲುಪಿಸುವ ಮಹತ್ಕಾರ್ಯ ನಮ್ಮ ನಿಮ್ಮದೇ ಆಗಿದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ವಟ ಸಾವಿತ್ರಿ ವ್ರತ

ನಮ್ಮ ಸನಾತನ ಧರ್ಮದ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಲ್ಲಿ ಮುತ್ತೈದೆಯರಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ದೀರ್ಘಸುಮಂಗಲೀ ಭವ ಎಂದೇ ಹಿರಿಯರು ಆಶೀರ್ವದಿಸುತ್ತಾರೆ. ಹೀಗೆ ತಮ್ಮ ದೀರ್ಘಸುಮಂಗಲಿತನಕ್ಕಾಗಿ ತಮ್ಮ ಪತಿಯಂದಿರ ದೀರ್ಘಾಯುಶ್ಯ ಮತ್ತು ಆಯುರಾರೋಗ್ಯಕ್ಕಾಗಿ ಪೂಜೆ ಮಾಡುವ ವಟಸಾವಿತ್ರಿ ವ್ರತವನ್ನು ಬಹುತೇಕ ಹೆಣ್ಣುಮಕ್ಕಳು ಮಾಡುತ್ತಾರೆ. ಅಂತಹ ವಟ ಸಾವಿತ್ರಿ ವ್ರತದ ಹಿನ್ನಲೆ, ಮಹತ್ವ ಮತ್ತು ಆಚರಣೆಯ ಸವಿವರ ಇದೋ ನಿಮಗಾಗಿ.

ಪತಿವ್ರತೆ ಎಂಬ ಪದವನ್ನು ಕೇಳಿದ ತಕ್ಷಣವೇ ನಮ್ಮ ತಲೆಯಲ್ಲಿ ಹೊಳೆಯುವುದೇ ಸತ್ಯವಾನ್ ಸಾವಿತ್ರಿ ಎಂದರೆ ಅತಿಶಯವಲ್ಲ. ವಟ ಸಾವಿತ್ರಿ ವ್ರತ ಎಂಬ ಹೆಸರಿನಲ್ಲೇ ಇರುವಂತೆ ಈ ಹಬ್ಬ ಆಲದ ಮರ ಮತ್ತು ಮೃತನಾದ ತನ್ನ ಪತಿ ಸತ್ಯವಾನನ ಪ್ರಾಣವನ್ನು ಯಮರಾಜನಿಂದ ತನ್ನ ಪತಿ ಸತ್ಯವಾನ್ ಜೀವವನ್ನು ಮರಳಿ ತಂದ ದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತಿದ್ದು ಇದರ ಹಿಂದಿನ ಪೌರಾಣಿಕ ಹಿನ್ನಲೆ ಅತ್ಯಂತ ರೋಚಕವಾಗಿದೆ.

ಪುರಾಣ ಕಾಲದಲ್ಲಿ ಮದ್ರಾ ರಾಜನಾದ ಅಶ್ವಪತಿಗೆ ಬಹಳ ಕಾಲ ಸಂತಾನವಿಲ್ಲದಿದ್ದ ಕಾರಣ, ತಮ್ಮ ಗುರುಗಳ ಆಣತಿಯ ಮೇರೆಗೆ ಸಾವಿತ್ರಿ ದೇವಿ ಕುರಿತು ಯಜ್ಞ – ಯಾಗಾದಿಗಳು ಮತ್ತು ಪೂಜೆಯನ್ನು ಮಾಡುತ್ತಾನೆ. ಆತನ ಕಠಿಣ ಪೂಜೆಯಿಂದ ಸಂತೃಪ್ತಳಾದ ಸಾವಿತ್ರಿ ಆತನಿಗೆ ಬಹಳ ಮುದ್ದಾದ ಹೆಣ್ಣು ಮಗಳನ್ನು ಕರುಣಿಸುತ್ತಾಳೆ. ಸಾವಿತ್ರಿ ದೇವಿಯ ವರಪ್ರಸಾದದಿಂದ ಜನಿಸಿದ ಮಗುವಿಗೆ ಸಾವಿತ್ರಿ ಎಂದೇ ನಾಮಕರಣ ಮಾಡುತ್ತಾನೆ.

vata7ಬೆಳೆದು ದೊಡ್ಡವಳಾದ ಸಾವಿತ್ರಿಯು ಅತ್ಯಂತ ಸುರದ್ರೂಪ್ರಿಯಾಗಿದ್ದು, ಮದುವೆಯ ವಯಸ್ಸಿಗೆ ಆಕೆಯ ತಂದೆ ತನ್ನ ಮಗಳಿಗೆ ಸೂಕ್ತವಾದ ವರನನ್ನು ಹುಡುಕಿಕೊಂಡು ಬರಲು ತನ್ನ ಮಂತ್ರಿಗೆ ಆದೇಶಿಸುತ್ತಾನೆ. ಇದೇ ಸಮಯದಲ್ಲಿ ಸಾಲ್ವ ದೇಶದ ರಾಜನ ಮಗನಾದ ಸತ್ಯವಾನ ಮತ್ತು ಸಾವಿತ್ರಿ ಪರಸ್ಪರ ಪ್ರೀತಿಸಿರುವ ವಿಷಯ ತಿಳಿದ ಆಕೆಯ ತಂದೆ ಅವರಿಬ್ಬರ ಜಾತಕವನ್ನು ತಮ್ಮ ಆಸ್ಥಾನಕ್ಕೆ ಬಂದಿದ್ದ ನಾರದ ಮಹರ್ಷಿಗಳ ಬಳಿ ತೋರಿಸಿದಾಗ, ಸತ್ಯವಾನನು ಅಲ್ಪಾಯುಷಿಯಾಗಿದ್ದು, ಸಾವಿತ್ರಿ ಆತನನ್ನು ಮದುವೆಯಾದ ಕೇವಲ 12 ವರ್ಷಗಳಲ್ಲಿಯೇ ವಿಧವೆಯಾಗುತ್ತಾಳೆ ಎಂಬ ಸತ್ಯವನ್ನು ಹೇಳುತ್ತಾರೆ. ಈ ವಿಷಯವನ್ನು ತನ್ನ ಮಗಳಿಗೆ ತಿಳಿದ ಆಕೆಯ ತಂದೆ, ಬೇರೊಂದು ವರನನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದರೂ, ಸಾವಿತ್ರಿ ಮಾತ್ರಾ ತನ್ನ ತಂದೆಯ ಮಾತನ್ನು ನಿರಾಕರಿಸಿ ಸತ್ಯವಾನನ್ನೇ ವಿವಾಹವಾಗಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ಕಾಡಿನಲ್ಲೇ ವಾಸಿಸಲು ಪ್ರಾರಂಭಿಸುತ್ತಾಳೆ.

vata6ಅವರಿಬ್ಬರ ಅನ್ಯೋನ್ಯವಾದ ಸುಖಃ ದಾಂಪತ್ಯದಲ್ಲಿ 12 ವರ್ಷಗಳು ಕಳೆದದ್ದೇ ಗೊತ್ತಾಗದೆ, ವಿಧಿ ಲಿಖಿತದಂತೆ ಅದೊಂದು ದಿನ ಸತ್ಯವಾನ ದೇಹಾಂತ್ಯವಾಗುತ್ತದೆ. ನಾರದರಿಂದ ಸತ್ಯವಾನನ ಅಲ್ಪಾಯುಷ್ಯದ ಬಗ್ಗೆ ತಿಳಿದಾಗಿನಿಂದ ಸಾವಿತ್ರಿಯು ಉಪವಾಸ ವ್ರತವನ್ನು ಆಚರಿಸುತ್ತಲೇ ಬಂದಿರುತ್ತಾಳೆ. ತನ್ನ ಪತಿ ಸತ್ಯವಾನ ಮರಣಾನಂತರ ಆತನ ಪ್ರಾಣವನ್ನು ತೆಗೆದುಕೊಂಡು ಹೋಗಲು ಬಂದ ಯಮರಾಜನನ್ನೇ ಹಿಂಬಾಲಿಸಿ ಕೊಂಡೇ ಹೋಗುತ್ತಾಳೆ. ಹೀಗೆ ತನ್ನನ್ನು ಹಿಂಬಾಲಿಸಬಾರದೆಂದು ಪರಿಪರಿಯಾಗಿ ಯಮನು ಹೇಳಿದರು, ಯಮನ ಮಾತನ್ನೂ ಕೇಳಿದೇ ಅತನನ್ನೇ ಹಿಂಬಾಲಿಸುತ್ತಿದ್ದನ್ನು ಕಂಡು, ಆಕೆಯ ಪತಿ ಧರ್ಮವನ್ನು ಮೆಚ್ಚಿದ ಯಮನು ನಿನಗೆ ಯಾವ ವರಬೇಕೋ ಕೇಳಿಕೋ ಎಂದಾಗ, ಸಾವಿತ್ರಿಯು ತನ್ನ ವಯಸ್ಸಾದ ಕಣ್ಣು ಕಾಣದ ಅತ್ತೆಯವರು ತಮ್ಮ ಮಗ, ಸೊಸೆ ಮತ್ತು ಮೂಮ್ಮಕ್ಕಳನ್ನು ಆನಂದದಿಂದ ನೂರ್ಕಾಲ ನೋಡುವಂತಾಗಲೀ ಎಂದು ಅತ್ಯಂತ ಜಾಣ್ಮೆಯಿಂದ ಒಂದೇ ವರದಲ್ಲಿ ತನ್ನ ಅತ್ತೆಯವರಿಗೆ ಕಣ್ಣು ಕಾಣಿಸುವ ಹಾಗೆ ಮತ್ತು ತನ್ನ ಗಂಡನಿಗೆ ದೀರ್ಘಾಯುಷ್ಯವನ್ನೂ ಕೊಡುವಂತೆ ಕೇಳಿಕೊಂಡಿರುತ್ತಾಳೆ.

ಸತ್ಯ ಮತ್ತು ಧರ್ಮಕ್ಕೆ ಅಧಿದೇವನಾದ ಯಮನು ಕೊಟ್ಟ ಮಾತಿಗೆ ತಪ್ಪಲಾಗದೇ, ಸಾವಿತ್ರಿಯು ಕೇಳಿದ ಜಾಣ್ಮೆಯ ವರಕ್ಕೆ ಇಲ್ಲಾ ಎನ್ನಲಾಗದೇ, ಯಮರಾಜನು ಸಾವಿತ್ರಿಯ ಪತಿ ಸತ್ಯವಾನ್‌ನ ಪ್ರಾಣವನ್ನು ಕಡಲೆಕಾಳಿನ ರೂಪದಲ್ಲಿ ಪುನಃ ಆಕೆಗೆ ನೀಡುತ್ತಾನೆ. ಹಾಗಾಗಿ ವಟ ಸಾವಿತ್ರಿ ಪೂಜೆಯನ್ನು ಮಾಡುವಾಗ ನೆನೆಸಿದ ಕಡಲೆಕಾಳನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ.

ಸಾವಿತ್ರಿಯು ತನ್ನ ಪತಿ ಸತ್ಯವಾನನ ಆಯುಷ್ಯವನ್ನು ವೃದ್ಧಿ ಮಾಡಿದ ದಿನ ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ಆಗಿದ್ದ ಕಾರಣ, ಈ ದಿನ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಕೋರಿ ಉಪವಾಸದಿಂದ ಭಕ್ತಿ ಭಾವಗಳಿಂದ ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ಆಲದ ಮರವನ್ನೂ ಪೂಜಿಸುತ್ತಾರೆ. ಇನ್ನೂ ಕೆಲವೆಡೆ ಜೇಷ್ಠ ಮಾಸದ ಹುಣ್ಣಿಮೆಯಂದೂ ಆಚರಿಸುವ ಸಂಪ್ರದಾಯವಿದೆ. ಹೀಗೆ ಆಚರಣೆಯ ದಿನಗಳು ಬೇರೆ ಇದ್ದರೂ ವ್ರತಾಚರಣೆಯ ರೀತಿ ಬಹುತೇಕ ಒಂದೇ ಆಗಿದೆ. ಹೀಗೆ ಮಾಡುವುದರಿಂದ ತಮ್ಮ ಪತಿರಾಯರಿಗೆ ದೀರ್ಘಾಯುಷ್ಯದ ಫಲ, ಸಂತೋಷ ಮತ್ತು ಸಮೃದ್ಧಿ ಮತ್ತು ಅಖಂಡ ಸೌಭಾಗ್ಯ ಲಭಿಸುತ್ತದೆ ಎಂಬುದು ಅವರ ನಂಬಿಕೆಯಾಗಿದೆ.

ವಟ ಸಾವಿತ್ರಿ ವ್ರತದ ಪೂಜಾ ವಿಧಾನ ಈ ರೀತಿಯಾಗಿದೆ.

v2

 • ವ್ರತದ ದಿನ ಬೆಳಿಗ್ಗೆ ಮುತ್ತೈದೆಯರು ಮನೆಯನ್ನು ಸ್ವಚ್ಛಗೊಳಿ, ತಲೆ ಸ್ನಾನ ಮಾಡಿ, ಗೋಮೂತ್ರದಿಂದಾಗಲೀ ಇಲ್ಲವೇ ಮಡಿ ನೀರಿನಿಂದ ಮೆನೆಯೆಲ್ಲಾ ಸಿಂಪಡಿಸಿ ಮನೆಯನ್ನು ಪೂಜೆಗಾಗಿ ಶುದ್ಧೀಕರಿಸುತ್ತಾರೆ.
 • ಹೊಸ ಬಟ್ಟೆಯನ್ನು ತೊಟ್ಟು, ಹಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಮುಡಿಗೆ ಹೂ ಮುಡಿದು ಮುತ್ತೈದೆಯ ಲಕ್ಷಣದಲ್ಲಿ ಹೊಸಾ ಬಿದಿರಿನ ಬುಟ್ಟಿಯಲ್ಲಿ ಏಳು ರೀತಿಯ ನೆನಸಿದ ಕಾಳುಗಳು ಅದರಲ್ಲೂ ವಿಶೇಷವಾಗಿ ಕಡಲೇಕಾಳನ್ನು ತುಂಬಿ ಅದರ ಮಧ್ಯೆ ಬ್ರಹ್ಮನ ವಿಗ್ರಹವನ್ನು ಸ್ಥಾಪಿಸಿ ಬ್ರಹ್ಮನ ಎಡಭಾಗದಲ್ಲಿ ಸಾವಿತ್ರಿಯ ವಿಗ್ರಹವನ್ನು ಇಟ್ಟು ಕೊಂಡು ಹತ್ತಿರದ ಆಲದ ಮರದ ಕೆಳಗೆ ತೆಗೆದುಕೊಂಡು ಹೋಗಿ ಇಡುತ್ತಾರೆ.
 • ಮನೆಯಿಂದ ತೆದುಕೊಂಡು ಹೋಗಿದ್ದ ನೀರಿನಿಂದ ಆಲದ ಮರದ ಸುತ್ತಮುತ್ತಲೂ ಶುದ್ಧೀಕರಿಸಿ, ಅರಿಶಿನ ಕುಂಕುಮ, ವಿವಿಧ ಬಗೆಯ ಹೂವು ಮತ್ತು ಪತ್ರೆಗಳಿಂದ ಮತ್ತು ನೆನೆಸಿದ ಹತ್ತಿಯ ಗೆಜ್ಜೆ ವಸ್ತ್ರಗಳಿಂದ ಬ್ರಹ್ಮ ಮತ್ತು ಸಾವಿತ್ರಿಯನ್ನು ಆರಾಧಿಸಿ. ಮಂಗಲ ಸಾವಿತ್ರಿ ದೇವಿಗೆ ಅರ್ಪಿಸಿ ನೆನೆಸಿದ ಕಾಳುಗಳನ್ನು ನೈವೇದ್ಯ ಮಾಡಿ ಧೂಪ ದೀಪಗಳಿಂದ ದೇವರಿಗೆ ಮತ್ತು ವಟ ವೃಕ್ಷಕ್ಕೆ ಮಂಗಳಾರತಿಯನ್ನು ಬೆಳಗುತ್ತಾರೆ.
 • ಪೂಜೆಮುಗಿದ ನಂತರ ಆಲದ ಮರದ ಕಾಂಡದ ಸುತ್ತಲೂ ಮೂರು ಪ್ರದಕ್ಷಿಣೆ ಹಾಗಿ, ಕೆಂಪು ಅಥವಾ ಕೇಸರೀ ದಾರದಿಂದ 5, 11, 21, 51 ಅಥವಾ 108 ಬಾರಿ ಕಟ್ಟುವುದರ ಜೊತೆಗೆ ತಾಮ್ರದ ನಾಣ್ಯ ಇಲ್ಲವೇ ಯಾವುದಾದರೂ ನಾಣ್ಯವನ್ನು ಇಡುತ್ತಾರೆ.
 • ನಂತರ ವಟ ಸಾವಿತ್ರಿಯ ವ್ರತ ಕಥೆಯನ್ನು ಶ್ರವಣ ಮಾಡಿ ಅಲ್ಲಿ ನೆರೆದಿದ್ದ ಮುತ್ತೈದೆಯರಿಗೆ ಅರಿಶಿನ ಕುಂಕುಮ ಮತ್ತು ಯಥಾಶಕ್ತಿ ಕಾಣಿಕೆಯನ್ನು ನೀಡುತ್ತಾರೆ.
 • ಆಲದ ಮರದ ಪೂಜೆಯ ಮಾಡಿ ಮನೆಗೆ ಹಿಂದಿರುಗಿದ ನಂತರ ಅತ್ತೆಯವರ ಪಾದ ಮುಟ್ಟಿ ಆಶೀರ್ವಾದ ಪಡೆಯುವುದು ಸಂಪ್ರದಾಯ.
 • ಪೂಜೆಯೆಲ್ಲವೂ ಸಾಂಗೋಪಾಂಗವಾಗಿ ನಡೆದ ನಂತ್ರ ಬಿದಿರಿನ ಬುಟ್ಟಿಯಲ್ಲಿ ವಸ್ತ್ರ, ಹಣ್ಣು ಮತ್ತು ನೆನಿಸಿಟ್ಟಿದ್ದ ಕಾಳುಗಳನ್ನು ಊರ ಪುರೋಹಿತರಿಗೋ ಇಲ್ಲವೇ ಬ್ರಾಹ್ಮಣರಿಗೆ ದಾನ ಮಾಡುವ ಮೂಲಕ ಪೂಜೆಯು ಸಂಪನ್ನವಾಗುತ್ತದೆ.
 • ಪೂಜೆಯ ನಂತರ ಇಡೀ ದಿನ ಉಪವಾಸ ಮಾಡುತ್ತಾ ತಮ್ಮ ಪತಿರಾಯರ ದೀರ್ಘಾಯುಷ್ಯಕ್ಕೆ ಮುತ್ತೈದೆಯರು ಪ್ರಾರ್ಥಿಸುತ್ತಾರೆ.vata_vrukshaಅನಾದಿ ಕಾಲದಿಂದ ವಟ ಸಾವಿತ್ರಿ ವ್ರತವನ್ನು ಆಚರಿಸಿಕೊಂಡು ಬರಲಾಗುತ್ತಿದ್ದರೂ ಕೆಲ ದಶಕಗಳಿಂದ ಆಲದ ಮರವನ್ನು ಪೂಜಿಸುವ ವಾಡಿಕೆ ರೂಢಿಗೆ ಬಂದಿದೆ. ಈ ರೀತಿ ಆಲದ ಮರ ಪೂಜಿಸಲೂ ಕುತೂಹಲವಾದ ಕಾರಣವಿದೆ. ಸಾವಿತ್ರಿಯು ತನ್ನ ಗಂಡ ಮರಣ ಹೊಂದಿದ ಸಮಯದಲ್ಲಿ ಆತನ ಮೃತ ದೇಹವನ್ನು ಆಲದ ಮರದ ಕೆಳಗೆ ತನ್ನ ಮಡಿಲಲ್ಲೇ ಇಟ್ಟುಕೊಂಡು ಹಾನಿಯಾಗದಂತೆ ಕಾಪಾಡಿದ ಕಾರಣ ಆಲದ ಮರವನ್ನು ಪೂಜಿಸುವ ಪರಿಪಾಠ ಬೆಳೆದಿದೆ ಎನ್ನುಲಾದಾರೂ, ಶಾಸ್ತ್ರದ ಪ್ರಕಾರ, ಆಲದ ಮರದಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ವಾಸವಾಗಿರುವುದರಿಂದ ಇದನ್ನು ಪೂಜಿಸಿದರೆ ಗಂಡನ ಆಯಸ್ಸು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.

ಮನೆಯ ಹತ್ತಿರ ವಟ ವಟವೃಕ್ಷ ಇಲ್ಲದಿದ್ದ ಪಕ್ಷದಲ್ಲಿ ಕೆಲವರು ವಟವೃಕ್ಷದ ಟೊಂಗೆಯನ್ನು ಮನೆಯೊಳಗೆ ತಂದು ಪೂಜಿಸುತ್ತಾದರೂ ಇದರಿಂದ ಅಳುದುಳಿದ ವಟವೃಕ್ಷಗಳನ್ನು ನಾಶ ಮಾಡುವ ಕಾರಣ, ವ್ರತವನ್ನು ಅರ್ಥಪೂರ್ಣವಾಗಿಸುವುದಿಲ್ಲ. ಅದರ ಬದಲು ಸಾಂಕೇತಿಕವಾಗಿ ಮನೆಯಲ್ಲೇ ಶುದ್ಧೀಕರಿಸಿದ ಜಾಗದಲ್ಲಿ ಸಾರಿಸಿ ರಂಗೋಲಿಯಲ್ಲಿ ಚೌಕವನ್ನು ಬರೆದು ಪೂರ್ವ ಪಶ್ಚಿಮವಾಗಿ ಅದರ ಮೇಲೆ ಮಣೆ ಇಟ್ಟು ಅದರ ಮೇಲೆ ಗಂಧದಿಂದ ಅಲದ ಮರದ ಚಿತ್ರವನ್ನು ಬಿಡಿಸಿ ಅದರ ಮುಂದೆ ಬುಟ್ಟಿ, ಬ್ರಹ್ಮ ಮತ್ತು ಸಾವಿತ್ರಿಯ ವಿಗ್ರಹಗಳನ್ನು ಇಟ್ಟು ಭಕ್ತಿಯಿಂದ ಪೂಜಿಸಿದಲ್ಲಿ ವ್ರತವು ಸಾರ್ಥಕವಾಗುತ್ತದೆ.

ಯಾವುದೇ ಪೂಜೆಗಳನ್ನು ಆಡಂಬರವಿಲ್ಲದೇ, ಶ್ರದ್ಧಾ ಭಕ್ತಿಗಳಿಂದ ಶುದ್ಧ ಮನಸ್ಸಿನಿಂದ ಮಾಡಿದಲ್ಲಿ ಪೂಜೆಯು ಸಂಪನ್ನವಾಗಿ ಭಗವಂತನಿಗೆ ತಲುಪುತ್ತದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಈ ದೇಶಕ್ಕಾಗಿ ಅಪಾರವಾಗಿ ಕೊಡುಗೆಯನ್ನು ನೀಡಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಯ ಸುಳ್ಳು ಆರೋಪಗಳಿಂದ ಅವರಿಗೆ ನಿಜವಾಗಿಯೂ ಸಲ್ಲಬೇಕಾಗದ ಗೌರವಗಳಿಂದ ವಂಚಿತರಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಮುಂತಾದವರ ಅನೇಕರ ಪಟ್ಟಿಯಲ್ಲಿ ಡಾ.ಕೇಶವ ಬಲಿರಾಮ ಹೆಡಗೇವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರೂ ಸೇರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ದೇಶದ ಬಗ್ಗೆ ಅವರಿಗಿದ್ದ ದೂರದೃಷ್ಟಿಯಿಂದಾಗಿ ಅವರು ಕಟ್ಟಿದ ಸಂಸ್ಥೆ ಅವರ ನಿಧನವಾಗಿ 8 ದಶಕಗಳ ನಂತರವೂ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು 2025 ರಲ್ಲಿ 100 ವರ್ಷಗಳನ್ನು ದಾಟಲಿದೆ ಎಂಬುದಾದರೆ ಶ್ರೀ ಹೆಡಗೇವಾರ್ ಅವರಲ್ಲಿ ಮತ್ತು ಅವರು ಕಟ್ಟಿದ ಸಂಘದಲ್ಲಿ ಏನೋ ವಿಶೇಷತೆ ಇರಲೇ ಬೇಕಲ್ಲವೇ? ಹಾಗಾದರೆ ಡಾಕ್ಟರ್ ಜೀ ಅಂದರೆ ಯಾರು? ಅವರು ಎಲ್ಲಿಯವರು? ಅವರ ಸಾಧನೆಗಳೇನು? ಈ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅವರ ಪಾತ್ರವೇನು? ಈ ದೇಶಕ್ಕೆ ಅವರು ಸ್ಥಾಪಿಸಿದ ಸಂಘದ ಕೊಡುಗೆ ಏನು? ಇವೆಲ್ಲದರಕುರಿತಾದ ಸತ್ಯ ಮತ್ತು ಮಿಥ್ಯದ ಅವಲೋಕನ ಇದೋ ನಿಮಗಾಗಿ

ಮೂಲತಃ ಆಂಧ್ರಪ್ರದೇಶದ ಕಾಂತಿಕುರ್ತಿ ಗ್ರಾಮದವರಾಗಿದ್ದು, ನಂತರ ಮಹಾರಾಷ್ಟ್ರದ ನಾಗ್ಪುರಕ್ಕೆ ವಲಸೆ ಹೋಗಿದ್ದ ತೆಲುಗು ದೇಶಸ್ಥ ಕುಟುಂಬಕ್ಕೆ ಸೇರಿದ್ದ ಋಗ್ವೇದಿಗಳಾಗಿದ್ದ ಶ್ರೀ ಬಲಿರಾಮ್ ಪಂತ್ ಹೆಡ್ಗೆವಾರ್ ಮತ್ತು ರೇವತಿಬಾಯಿ ದಂಪತಿಗಳಿಗೆ ಏಪ್ರಿಲ್ 1, 1889 ಯುಗಾದಿಯ ದಿನದಂದು ರಂದು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿನ ಬೋಧನ್ ಎಂಬ ಊರಿನಲ್ಲಿ ಕೇಶವ ಅವರ ಜನನವಾಗುತ್ತದೆ. ಕೇಶವ ಅವರಿಗೆ ಕೇವಲ 13 ವರ್ಷವಾಗುವಷ್ಟರಲ್ಲೇ 1902 ಆ ಪ್ರದೇಶದಲ್ಲಿ ಭೀಕರವಾಗಿ ಅಪ್ಪಳಿಸಿದ ಪ್ಲೇಗ್ ಸಾಂಕ್ರಾಮಿಕ ರೋಗದಲ್ಲಿ ಅವರ ತಂದೆ-ತಾಯಿ ಇಬ್ಬರೂ ಮರಣ ಹೊಂದಿದ ಕಾರಣ ಅಣ್ಣಂದಿರ ಆಶ್ರಯದಲ್ಲೇ ಕೇಶವ ಅವರ ಬಾಲ್ಯ ಮುಂದುವರೆಯುತ್ತದೆ. ಅವರ ಕುಟುಂಬವು ಆರ್ಥಿಕವಾಗಿ ಬಹಳ ಹಿಂದುಳಿದರಾಗಿದ್ದರೂ ಶೈಕ್ಷಣಿಕವಾಗಿ ಬಹಳವಾಗಿ ಉನ್ನತ ಮಟ್ಟದಲ್ಲಿ ಇರುತ್ತದೆ.

ಕೇಶವರಿಗೆ ಸಣ್ಣ ವಯಸ್ಸಿನಲ್ಲಿಯೇ ಲೋಕನಾಯಕ್ ಆನೆ ಮತ್ತು ಬಾಬಾಸಾಹೇಬ್ ಪ್ರಾಂಜಪೆಯವರ ಸಂಪರ್ಕ ದೊರೆತು, ಅದಾಗಲೇ ಸ್ವಾತ್ರಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಡಾ ಮುಂಜೆ ಮತ್ತು ಲೋಕಮಾನ್ಯ ತಿಲಕರನ್ನು ತಮ್ಮ ಗುರುಗಳೆಂದು ಪರಿಗಣಿಸುತ್ತಾರೆ. ಇದರ ಜೊತೆಯಲ್ಲಿಯೇ ಸ್ವಾಮಿ ವಿವೇಕಾನಂದರು, ಸಾವರ್ಕರ್ ಮತ್ತು ಯೋಗಿ ಅರವಿಂದರ ಕೃತಿಗಳು ಮತ್ತು ಬರವಣಿಗೆಯಿಂದ ಹೆಚ್ಚು ಪ್ರಭಾವಿತರಾಗಿರಾಗಿ ಅಪಾರವಾದ ದೇಶಭಕ್ತಿ ಅವರಲ್ಲಿ ಜಾಗೃತವಾಗಿರುತ್ತದೆ. ಇದರ ಜೊತೆ ಜೊತೆಯಲ್ಲಿಯೇ ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯ ಗುಡ್ಡಗಾಡಿನ ಮಕ್ಕಳನ್ನು ಒಗ್ಗೂಡಿಸಿ ಸ್ವಯಂಸೇವಕ ಸೈನ್ಯವನ್ನು ರಚಿಸಿ ಮೊಘಲರನ್ನು ಮೆಟ್ಟಿ ನಿಂತು ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದ್ದ ಸಂಗತಿ ಅವರಿಗೆ ಸದಾ ಸ್ಪೂರ್ತಿಯನ್ನು ನೀಡುತ್ತಲೇ ಇರುತ್ತದೆ.

ಅವರು ಶಾಲೆಯಲ್ಲಿದ್ದಾಗಲೇ ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ದಬ್ಬಾಳಿಕೆಯನ್ನು ಮತ್ತು ದಾಸ್ಯ ಪದ್ದತಿಯನ್ನು ಕಟುವಾಗಿ ವಿರೋಧಿಸುತ್ತಲೇ ಇರುತ್ತಾರೆ ಎನ್ನುವುದಕ್ಕೆ ಈ ಸುಂದರ ಪ್ರಸಂಗ ಉದಾಹರಣೆಯಾಗಿದೆ. ಕಿಂಗ್ ಎಡ್ವರ್ಡ್ 7 ರ ಪಟ್ಟಾಭಿಷೇಕ ಸಮಾರಂಭವನ್ನು ವಿರೋಧಿಸಿರುತ್ತಾರೆ. ಅದೇ ರೀತಿ ವಿಕ್ಟೋರಿಯಾ ರಾಣಿಯ ಪಟ್ಟಾಭಿಷೇಕಕ್ಕೆ 60 ವರ್ಷ ಪೂರೈಸಿದ ಸಂದರ್ಭವನ್ನು ಇಡೀ ದೇಶದಲ್ಲಿ ಸಡಗರ ಸಂಭ್ರಮಗಳಿಂದ ಆಚರಿಸಿ ಅಂದು ದೇಶಾದ್ಯಂತ ಇರುವ ಶಾಲಾ ಕಾಲೇಜುಗಳಲ್ಲಿ ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸುತ್ತಿರುತ್ತಾರೆ. ಅದೇ ರೀತಿಯಾಗಿ ಕೇಶವ ಅವರ ಶಾಲೆಯಲ್ಲಿಯೂ ಸಿಹಿ ಹಂಚಿದಾಗ ಅವರ ಉಳಿದೆಲ್ಲಾ ಸಹಪಾಠಿಗಳು ಸಿಹಿತಿಂಡಿಯನ್ನು ತಿಂದು ಸಂಭ್ರಮಿಸಿದರೆ ಬಾಲಕ ಕೇಶವರು ಮಾತ್ರಾ ಆರೀತಿ ಸಿಹಿ ತಿಂಡಿಯನ್ನು ತಿಂದು ಸಂಭ್ರಮಿಸುವುದು ಗುಲಾಮ ಗಿರಿಯ ಸಂಕೇತ ಎಂದು ಆ ಸಿಹಿಯನ್ನು ಕಸದ ಬುಟ್ಟಿಗೆ ಎಸೆದಿರುತ್ತಾರೆ. ಹೀಗೆ ಬಾಲ್ಯದಿಂದಲೂ ಲೋಕಮಾನ್ಯ ತಿಲಕರ ಆಕ್ರಮಣಕಾರಿ ಮತ್ತು ಸ್ಫೋಟಕ ಬರಹಗಳು, ಅವರ ಪತ್ರಿಕೆಗಳಿಂದ, ಕ್ರಾಂತಿಕಾರಿ ಭಯೋತ್ಪಾದಕರು ನಡೆಸಿದ ಚಟುವಟಿಕೆಗಳು ಅವರ ಮನಸ್ಸಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರಿರುತ್ತದೆ. 1914 ರಲ್ಲಿ ತಿಲಕ್ ಅವರು ಮಂಡಾಲಯದ ಜೈಲಿನಿಂದ ಬಿಡುಗಡೆಯಾದಾಗ, ಯುವಕ ಕೇಶವ ಅವರನ್ನು ಭೇಟಿ ಮಾಡಿ ಅವರೊಂದಿಗೆ ಅಂದು ನಡೆಯುತ್ತಿದ್ದ ರಾಜಕೀಯ ಚಳುವಳಿಯ ಬಗ್ಗೆ ಚರ್ಚೆ ನಡೆಸಿರುತ್ತಾರೆ.

ಇವೆಲ್ಲದರ ನಡುವೆಯೇ ತಮ್ಮ ವಿದ್ಯಾಭ್ಯಾಸವನ್ನು ಉನ್ನತ ಶ್ರೇಣಿಯಲ್ಲಿಯೇ ಮುಂದುವರೆಸಿ, ನಂತರ ದೂರದ ಕಲ್ಕತ್ತಾಕ್ಕೆ ತೆರಳಿ ಅಲ್ಲಿ ವೈದ್ಯಕೀಯ ಪದವಿ ಪಡೆದು ಅಧಿಕೃತವಾಗಿ ಡಾಕ್ಟರ್ ಆಗುತ್ತಾರೆ. ಆಗಿನ ಕಾಲದಲ್ಲಿ ಡಾಕ್ಟರ್ ಮತ್ತು ಬ್ಯಾರಿಸ್ಟರ್ ಪದವಿ ಪಡೆದವರು ಹೇರಳವಾಗಿ ಹಣ ಸಂಪಾದನೆ ಮಾಡಿ ಸಮಾಜದಲ್ಲಿ ಅತ್ಯುನ್ನತ ಸ್ಥಾನ ಮಾನ ಪಡೆಯುತ್ತಿದ್ದದ್ದು ಸಹಜವಾಗಿದ್ದರೂ ಡಾ.ಜೀ ಹಣದ ಹಿಂದೆ ಹೋಗದೇ ತಮ್ಮ ದೇಶದ ಸ್ವಾತಂತ್ರ ಚಳುವಳಿಗಳಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ಶಿವಾಜೀ ಮಹರಾಜರು ಮತ್ತು ಸಾವರ್ಕರ್ ಅವರಿಂದ ಪ್ರೇರಿತರಾದ ಕಾರಣ ಅವರಲ್ಲಿ ಕ್ರಾಂತಿಕಾರಿ ಮನೋಭಾವನೆ ಬೆಳೆದು ಅದೇ ನಿಲುವುಗಳನ್ನು ತಳೆದಿದ್ದ ಅನುಶೀಲನ ಸಮಿತಿ, ಜುಗಂತರ್ ಮುಂತಾದ ಸಂಘಟನೆಗಳ ಆಕರ್ಷಣೆಗೆ ಹೆಡ್ಗೆವಾರ್ ಸೆಳೆಯಲ್ಪಟ್ಟರು. ರಾಮಪ್ರಸಾದ್ ಬಿಸ್ಮಿಲ್ಲಾರಂತಹ ಕ್ರಾಂತಿಕಾರಿಗಳ ಸಂಪರ್ಕ ಅವರಿಗಿತ್ತು.

ತಮ್ಮ ವೈದ್ಯಕೀಯ ಪದವಿಯನ್ನು ಮುಗಿಸಿಕೊಂಡು ಕಲ್ಕತ್ತಾದಿಂದ ನಾಗಪುರಕ್ಕೆ ಹಿಂದಿರುಗಿದ ಹೆಡ್ಗೇವಾರ್ ಅವರು 1919-20ರ ಆಸುಪಾಸಿನಲ್ಲಿ ಮತ್ತೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಸಂಪರ್ಕಕ್ಕೆ ಬಂದು, ತಿಲಕ್ ವಾದಿ ಕಾಂಗ್ರೆಸ್ಸಿನ ಕಾರ್ಯಕರ್ತರಾಗುತ್ತಾರೆ. ಅದೇ ಸಮಯದಲ್ಲೇ ಅಂದಿನ ಕ್ರಾಂಗ್ರೇಸ್ ಹಿರಿಯ ನಾಯಕರಾಗಿದ್ದ ಶ್ರೀ ಬಿ. ಎಸ್. ಮೂಂಜೆಯವರ ಪರಿಚಯವೂ ಆಗಿ ಅವರಿಂದ ಹಿಂದೂ ಧರ್ಮತತ್ವಶಾಸ್ತ್ರದ ಬಗ್ಗೆ ಅಪಾರವಾದ ಜ್ಞಾನವನ್ನು ಪಡೆಯುತ್ತಾರೆ. ತಿಲಕರ ನಿಧನದ ನಂತರ ಹೆಡ್ಗೆವಾರ್ ಅವರು ಅರವಿಂದ್ ಘೋಷರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಲು ಪ್ರಯತ್ನಿಸಿದಾಗಾ, ಅದಾಗಲೇ ಆಧ್ಯಾತ್ಮಿಕ ಒಲವಿನಲ್ಲಿದ್ದ ಅರವಿಂದರು ಅದಕ್ಕೆ ಒಪ್ಪದೇ ಹೋದಾದಾಗ ವಿಧಿ ಇಲ್ಲದೇ, ಶ್ರೀ ವಿಜಯರಾಘವಾಚಾರ್ಯರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.

1920 ರ ನಾಗಪುರದಲ್ಲಿ ನಿಗಧಿಯಾಗಿದ್ದ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ ಕಾಂಗ್ರೇಸ್ ಸಹಕಾರ್ಯದರ್ಶಿಯಾಗಿದ್ದ ಹೆಡ್ಗೇವಾರ್ ಅವರು ಆ ಅಧಿವೇಶನದ ಸ್ವಯಂ ಸೇವಕರ ಉಪಮುಖ್ಯಸ್ಥರಾಗಿಯೂ ಆಯ್ಕೆಯಾಗುತ್ತಾರೆ ಆಗ ಡಾ.ಜೀರವರು ಅದಾಗಲೇ ತಾವು ಕಟ್ಟಿದ್ದ ತಮ್ಮ ಭಾರತ್ ಸ್ವಯಂ ಸೇವಕ್ ಮಂಡಲ್ ಎಂಬ 1200 ಪೂರ್ಣಾವಧಿ ಸ್ವಯಂ ಸೇವಕರ ಪಡೆಯೊಂದಿಗೆ ಅವಿಶ್ರಾಂತವಾಗಿ ದುಡಿದ ಪರಿಣಾಮ ಇಡೀ ಅಧಿವೇಶನದ ಅತ್ಯಂತ ಯಶಸ್ಸಿಗೆ ನಡೆಯಲ್ಪಡುತ್ತದೆ. ಡಾ.ಜೀ ಅವರೊಂದಿಗೆ ಡಾ. ಲಕ್ಷ್ಮಣ, ವಿ. ಪರಾಂಜಪೆ ಅವರೂ ಸಹಾ ಈ ಸಂಸ್ಥೆಯ ಭಾಗವಾಗಿರುತ್ತಾರೆ.

ಈ ಅಧಿವೇಶನದ ನಂತರ ಡಾ.ಜೀ ಅವರ ಹೆಸರು ಕಾಂಗ್ರೇಸ್ಸಿನಲ್ಲಿ ಅತ್ಯಂತ ಜನಪ್ರಿಯವಾಗಿದ್ದಲ್ಲದೇ, ತಿಲಕ್ ಸ್ವರಾಜ್ಯ ಫಂಡ್ ನ ಸದಸ್ಯರಾಗುವುದಲ್ಲದೇ, ಗಾಂಧಿಯವರು ಬ್ರಿಟೀಷರ ವಿರುದ್ಧ ದೇಶಾದ್ಯಂತ ಆರಂಭಿಸಿದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ರಾಜದ್ರೋಹದ ಆರೋಪದ ಮೇಲೆ 1921ರಲ್ಲಿ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನೂ ಅನುಭವಿಸುತ್ತಾರೆ. ಮುಂದೆ 1930ರಲ್ಲಿಯೂ ಸಹಾ ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಮತ್ತೆ 9 ತಿಂಗಳ ಕಾಲ ಸೆರೆಮನೆಯಲ್ಲಿ ಇರುತ್ತಾರೆ. ಹೀಗೆ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೇಸ್ಸಿನ ಭಾಗವಾಗಿಯೂ ನಂತರ ತಮ್ಮದೇ ಸಂಘವನ್ನು ಕಟ್ಟಿದ ನಂತರವು ಸೆರೆಮನೆಯ ವಾಸವನ್ನು ಅನುಭವಿಸಿದ್ದಾರೆ.

ತಿಲಕರ ಮರಣದ ನಂತರ ಗಾಂಧಿಯವರು ಸ್ವಾತ್ರಂತ್ರ್ಯ ಹೋರಾಟದಲ್ಲಿ ಮುಂಚೂಣಿಯಾಗಿ ಚಳುವಳಿಯ ಚುಕ್ಕಾಣಿ ಹಿಡಿದು ಅಹಿಂಸಾ ಮಾರ್ಗವನ್ನು ಅನುಸರಿಸತೊಡಗುವುದರೊಂದಿಗೆ ಕಾಂಗ್ರೆಸ್ಸಿನ ಉಗ್ರಗಾಮಿ ಹಂತವೂ ಭಾಗಶಃ ಕೊನೆಯ ಹಂತವನ್ನು ತಲುಪುತ್ತದೆ. ಗಾಂಧೀಜಿಯವರು ದೇಶದ ಏಕತೆಗಾಗಿ ಹಿಂದೂ-ಮುಸ್ಲಿಂ ಐಕ್ಯತೆ ಬಹಳ ಮುಖ್ಯ ಎಂದು ಪ್ರತಿಪಾದಿಸುತ್ತಿರುತ್ತಾರೆ. ಅದಕ್ಕೆ ಪೂರಕ ಎನ್ನುವಂತೆ ಅದೇ ಸಮಯದಲ್ಲೇ ನಾಗ್ಪುರದಲ್ಲಿ ನಡೆದ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನದಲ್ಲಿ ಖಿಲಾಫತ್ ಆಂದೋಲನದ ಜೊತೆಗೆ ಗೋಹತ್ಯೆ ನಿಷೇಧದ ವಿಷಯವನ್ನೂ ತೆಗೆದುಕೊಳ್ಳಬೇಕೆಂದು ಹೆಡ್ಗೇವಾರ್ ಮತ್ತು ಕೆಲ ನಾಯಕರು ಒತ್ತಾಯಿಸಿದಾಗ, ಇದು ಹಿಂದೂ-ಮುಸ್ಲಿಂ ಐಕ್ಯತೆಗೆ ಅಪಾಯವನ್ನುಂಟುಮಾಡುತ್ತದೆ ಎಂಬ ಕಾರಣ ಒಡ್ಡಿದ ಗಾಂಧು ಹೆಡ್ಗೇವಾರರ ಬೇಡಿಕೆಗಳನ್ನು ತಿರಸ್ಕೃಸಿದ್ದು ಮತ್ತು ಅನಗತ್ಯವಾಗಿ ಮುಸಲ್ಮಾನರ ತುಷ್ಟೀಕರಣ ನಡೆಸಲು ಮುಂದಾಗಿದ್ದು ಹೆಡ್ಗೇವಾರ್ ಅಲ್ಲದೇ, ಅಂದಿನ ಬಹುತೇಕ ಕಾಂಗ್ರೇಸ್ ನಾಯಕರಿಗೆ ಬೇಸರ ಉಂಟು ಮಾಡುತ್ತದೆ. ಗಾಂಧಿ ಯವರು ದೇಶದ ಏಕತೆ ಎಂಬ ಹೆಸರಿನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬ ಮಂತ್ರವನ್ನು ಜಪಿಸುತ್ತಿದ್ದರೆ, ಇದಾವುದಕ್ಕೂ ಸೊಪ್ಪು ಹಾಕದ ಮುಸ್ಲಿಮ್ಮರು ಸ್ವಾತ್ರಂತ್ಯ ಚಳುವಳಿಯಲ್ಲಿ ನಿರಾಸಕ್ತಿ ತೋರಿಸುವುದು ಅನೇಕ ಹಿಂದೂ ನಾಯಕರುಗಳಿಗೆ ಬೇಸರವನ್ನು ಉಂಟು ಮಾಡುತ್ತದೆ.

ಇದೇ ಸಮಯದಲ್ಲೇ ಕಾಕೋರಿ ಎಂಬ ಪ್ರದೇಶದಲ್ಲಿ ರೈಲಿನ ದರೋಡೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರವು ಎಲ್ಲಾ ಪೋಲಿಸ್ ಹುದ್ದೆಗಳು ಮತ್ತು ಮ್ಯಾಜಿಸ್ಟ್ರೇಟ್ ಹುದ್ದೆಗಳಿಗೆ ಮುಸ್ಲಿಂ ಅಧಿಕಾರಿಗಳನ್ನು ನೇಮಿಸಿ ಅವರ ಮೂಲಕ ವಿಚಾರಣೆ ನಡೆಸಿ ಆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಕ್ರಾಂತಿಕಾರಿಗಳಿಗೆ ನೇಣು ಅಥವಾ ಕ್ರೂರ ಶಿಕ್ಷೆಗೆ ಗುರಿಪಡಿಸುವ ಮೂಲಕ ದೇಶದ ಹಿಂದೂ ಮುಸ್ಲಿಮ್ಮರಲ್ಲಿ ಒಡಕನ್ನು ತರಲು ಪ್ರಯತ್ನಿಸುತ್ತದೆ. ಅದೇ ರೀತಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ, ಹಿಂದೂಗಳನ್ನು ಒಗ್ಗೂಡುವುದು ದೇಶವಿರೋಧಿ ಕೆಲಸ ಎನಿಸುತ್ತಿದೆ ಎಂದು ಯಾವಾಗ ಕಾಂಗ್ರೇಸ್ ಭಾವಿಸುತ್ತದೇಯೋ ಆಗ ಹತಾಶರಾದ ಡಾ.ಜೀ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಲ್ಲದೇ, ತಮ್ಮದೇ ಆದ ಒಂದು ವೈಶಿಷ್ಟ್ಯ ಪೂರ್ಣವಾದ ಸಂಘವನ್ನು ಕಟ್ಟಲು ನಿರ್ಧರಿಸುತ್ತಾರೆ.

dr3

ಈ ಎಲ್ಲ ಹಿನ್ನೆಲೆಗಳಲ್ಲಿ ತೀವ್ರವಾಗಿ ಚಿಂತಿಸಿದ ಡಾ.ಜೀ ಭಾರತದಲ್ಲಿ ಹಿಂದೂಗಳ ಮೇಲೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ದೌರ್ಜನ್ಯ ನಡೆಯುತ್ತಲೇ ಇದ್ದರೂ ತಮ್ಮ ಸಹಿಷ್ಣುತಾ ಗುಣದಿಂದಾಗಿ ಸಹಿಸಿಕೊಂಡು ಹೋಗುತ್ತಿದ್ದದ್ದು ಮತ್ತು ಹಿಂದೂಗಳಲ್ಲಿದ್ದ ವರ್ಗೀಕೃತ ಸಮಾಜ, ಅಸ್ಪೃಶ್ಯತೆ ಮುಂತಾದವುಗಳೆನೆಲ್ಲಾ ತೊಡೆದು ಹಾಕಲು ಹಿಂದೂಗಳನ್ನು ಒಂದಾಗಿ ಬೆಸೆಯುವಂತಹ, ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಒಂದು ಸಾಂಸ್ಕೃತಿಕ ಒಕ್ಕೂಟವನ್ನು ಸ್ಥಾಪಿಸಬೇಕು ಎಂದು ನಿರ್ಧರಿಸಿ ಅಂಡಮಾನಿನ ಕಾಲಾಪಾನಿಯಿಂದ ರತ್ನಗಿರಿಯ ಕಾರಾಗೃಹದಲ್ಲಿದ್ದ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಭೇಟಿ ಮಾಡಿ ಅವರ ಅಶೀರ್ವಾದದೊಂದಿಗೆ, ಹಿಂದೂಸ್ಥಾನವು ಹಿಂದೂಗಳ ದೇಶವಾಗಿರುವುದರಿಂದ ಈ ದೇಶದ ಭವಿಷ್ಯವನ್ನು ಹಿಂದೂಗಳೇ ನಿರ್ಧರಿಸಬೇಕು ಎಂಬ ಧೃಢ ಸಂಕಲ್ಪದಿಂದ, 1925 ವಿಜಯದಶಮಿಯಂದು ನಾಗಪುರದ ಮೋಹಿತೇವಾಡ ಎಂಬ ಸ್ಥಳದಲ್ಲಿ ಶಿವಾಜಿ ಮಹಾರಾಜರಿಂದ ಪ್ರೇರೇಪಿಸಲ್ಪಟ್ಟು 10-12 ಹುಡುಗರನ್ನು ಒಟ್ಟು ಗೂಡಿಸಿ ಅವರಿಗೆ ಆಟವನ್ನು ಆಡಿಸುವ ಮೂಲಕ ಅಧಿಕೃತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭವಾಗುತ್ತದೆ.

ghandhi

ನಾಗಪುರದಲ್ಲಿ ಕೆಲ ವರ್ಷಗಳ ಕಾಲ ಪ್ರತೀ ದಿನವೂ ಒಂದು ಘಂಟೆಗಳ ಕಾಲ ಹತ್ತಾರು ಸ್ವಯಂ ಸೇವಕರು ಜಾತಿ ಬೇಧಗಳ ಹಂಗಿಲ್ಲದೇ, ಒಂದಾಗಿ ಆಟ, ವ್ಯಾಯಾಮದ ಜೊತೆ ದೇಶ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಚರ್ಚೆ ನಡೆಸುತ್ತಾ ಸಂಘ ಯಶಸ್ವಿಯಾದ ನಂತರ ಈ ರೀತಿಯ ಸಂಘ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ತನ್ನ ಶಾಖೆಯನ್ನು ಹೊಂದಿರ ಬೇಕು ಎಂಬ ಆಶಯದಿಂದ ಎಲ್ಲಾ ಕಡೆಯಲ್ಲೂ ವಿಸ್ತಾರವಾಗುತ್ತಾ ನೋಡ ನೋಡುತ್ತಿದ್ದಂತೆಯೇ ದೇಶಾದ್ಯಂತ ಸಾವಿರಾರು ಶಾಖೆಗಳಾಗಿ ವಿಸ್ತರಿಸಲ್ಪಡುತ್ತದೆ. ವಾರ್ಧಾದಲ್ಲಿ ನಡೆಯುತ್ತಿದ್ದ ಸಂಘದ ಶಿಬಿರವೊಂದಕ್ಕೆ ಶ್ರೀ ಜಮ್ನಾಲಾಲ್ ಬಜಾಜ್ ಅವರೊಂದಿಗೆ ಭೇಟಿ ನೀಡಿದ ಮಹಾತ್ಮಾ ಗಾಂಧಿಯವರು ಸ್ವಯಂಸೇವಕರ ಶಿಸ್ತು, ಅಸ್ಪೃಶ್ಯತೆಯ ಸಂಪೂರ್ಣ ಅನುಪಸ್ಥಿತಿ ಮತ್ತು ಕಠಿಣ ಸರಳತೆಯಿಂದ ಬಹಳ ಪ್ರಭಾವಿತರಾಗಿ ಸಂಘದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಈ ರೀತಿಯಾಗಿ ಕಾಂಗ್ರೇಸ್ ಪಕ್ಷದಲ್ಲಿ ಸಾಧಿಸಲಾಗಲಿಲ್ಲ ಎಂದು ಪಶ್ಚಾತ್ತಾಪ ಪಟ್ಟಿದ್ದರು ಎನ್ನುವುದು ಎನ್ನುವುದು ಗಮನಾರ್ಹವಾಗಿದೆ.

dr2

ಜೂನ್ 21, 1940ರಲ್ಲಿ ನಾಗಪುರದಲ್ಲಿ ವಯೋಸಹಜವಾಗಿ ನಿಧನರಾಗುವ ಕೆಲ ವರ್ಷಗಳ ಮುನ್ನಾ ವಾರಣಾಸಿಯ ಹಿಂದೂ ವಿಶ್ವವಿಧ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದ ಶ್ರೀ ಮಾಧವ ಸದಾಶಿವ ಗೋಳ್ವಾಲ್ಕರ್ ಅವರನ್ನು ಸಂಘಕ್ಕೆ ಕರೆತಂದು ಅವರನ್ನು ತಮ್ಮ ನಂತರ ಸಂಘದ ಮುಂದಿನ ಸರಸಂಘಚಾಲಕ್ ಜವಾಬ್ಧಾರಿಯನ್ನು ನಿಭಾಯಿಸಲು ನೇಮಿಸಿದ್ದರು. ಬ್ರಿಟೀಷರ ವಿರುದ್ಧ ಹೋರಾಡಲು ಆಜಾದ್ ಹಿಂದು ಫೌಜ್ ಸೇನೆಯನು ಕಟ್ಟಲು ನಿರತರಾಗಿದ್ದ ಸುಭಾಷ್ ಚಂದ್ರ ಬೋಸರು ಸಹಾ ಡಾ.ಜೀ ಸಾಯುವ ಕೆಲವೇ ದಿನಗಳ ಹಿಂದೆ ಭೇಟಿ ಮಾಡಿ ಮಹತ್ವವಾದ ವಿಷಯಗಳನ್ನು ಚರ್ಚಿಸಿದ್ದದ್ದು ಈಗ ಇತಿಹಾಸ.

dr4

ನಂತರದ ದಿನಗಳಲ್ಲಿ ಗುರುಜೀ ಅವರ ನೇತೃತ್ವದಲ್ಲಿ ಸಂಘ ವಿಸ್ತಾರಗೊಂಡು ಸಂಘ ಪರಿವಾರದ ಹೆಸರಿನಲ್ಲಿ ನೂರಾರು ಸಂಘಟನೆಗಳ ಮೂಲಕ, ದೇಶ ಅನುಭವಿಸಿದ ನೂರಾರು ವಿಪತ್ತಿನ ಸನ್ನಿವೇಶಗಳಲ್ಲಿ ಸಂಘದ ಸ್ವಯಂಸೇವಕರು ಪಾಲ್ಗೊಳ್ಳುವುದನ್ನು ಸಂಘದ ವಿರೋಧಿಗಳು ಮೆಚ್ಚುವಂತೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

dr6

ಇಂದು ಡಾ. ಹೆಡ್ಗೆವಾರ್ ಅವರ ಚಿಂತನೆಗಳಿಂದ ದೇಶ ವಿದೇಶದಲ್ಲಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುತ್ತಿರುವುದಲ್ಲದೇ, ದೇಶಕ್ಕೆ ಲಕ್ಷಾಂತರ ನಿಷ್ಟಾವಂತ ಕಾರ್ಯಕರ್ತರು, ಸಾವಿರಾರು ಉತ್ತಮ ನೇತಾರರನ್ನು ನೀಡುತ್ತಾ ಬಂದಿದ್ದು ಪ್ರಸ್ತುತವಾಗಿ ಈ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿಗಳಲ್ಲದೇ, ಹತ್ತು ಹಲವಾರು ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಾಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಇಂದು ರಾಷ್ಟ್ರೀಯವಾಗಿ ಮತ್ತು ಅಂತರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸಂಘದ ನಿಲುವೇನು ಎಂಬುದರ ಬಗ್ಗೆ ಕೇಳುತ್ತಾರೆ ಎಂದರೆ, ಅಂತಹ ಸಂಘವನ್ನು ಸ್ಥಾಪನೆ ಮಾಡಿದ ಡಾ. ಕೇಶವ ಬಲಿರಾಮ ಹೆಡಗೇವಾರರ ಮೌಲ್ಯ, ಹಿರಿಮೆ ಮತ್ತು ಗರಿಮೆಯನ್ನು ತೋರಿಸುತ್ತದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಸಮಾಜದಲ್ಲಿ ಸಂಘದ ಸ್ವಯಂಸೇವಕರ ಕೊಡುಗೆಗಳು ಕುರಿತಾದ ಸಮಗ್ರ ಮಾಹಿತಿಯ ಕುರಿತಾದ ಲೇಖನ

ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ಸಂಘದ ಕುರಿತಾಗಿ ಸ್ವಯಂಸೇವಕರ ಮನದಾಳದ ಮಾತು ಇದೋ ನಿಮಗಾಗಿ

ಸಂಘ ಮತ್ತು ಸಂಘದ ಸ್ವಯಂಸೇವಕರು

ಅಆಇಈ ಯಲ್ಲೂ ಅಪಸವ್ಯವೇ?

ನಾವು ಚಿಕ್ಕವರಿದ್ದಾಗ ಸಮಾಜ ಶಾಸ್ತ್ರದಲ್ಲಿ ಭಾರತವನ್ನು ಕಂಡುಹಿಡಿದವರು ಯಾರು? ಎಂಬ ಪ್ರಶ್ನೆಗೆ 1492 ರಲ್ಲಿ ಪೋರ್ಚುಗೀಸ್ ಮೂಲದ ನಾವಿಕನಾದ ವಾಸ್ಕೋ ಡಿ ಗಾಮಾ ಪೋರ್ಚುಗಲ್‌ನ ಲಿಸ್ಬನ್‌ನಿಂದ ನೌಕಾಯಾನ ಮಾಡುತ್ತಾ ಅಟ್ಲಾಂಟಿಕ್ ಸಾಗರದ ಮೂಲಕ ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿಕೊಂಡು ಆಫ್ರಿಕಾದ ಪೂರ್ವ ಕರಾವಳಿಯ ಮಲಿಂಡಿಯಲ್ಲಿ ಕೆಲಕಾಲ ಲಂಗರು ಹಾಕಿ ಅಂತಿಮವಾಗಿ ಕೇರಳದ ಮಲಬಾರ್ ಕರಾವಳಿಯ ಕ್ಯಾಲಿಕಟ್‌ಗೆ ಬರುವ ಮೂಲಕ ಭಾರತವನ್ನು ಕಂಡು ಹಿಡಿದರು ಎಂದೇ ಹೇಳಿಕೊಡಲಾಗುತ್ತಿತ್ತು. ಹಾಗಾದರೆ ಅದಕ್ಕೂ ಮುಂಚೆ ಭಾರತದ ಅಸ್ತಿತ್ವವೇ ಇರಲಿಲ್ಲವೇ?

book1ಅದೇ ರೀತಿ ಉನ್ನತ ತರಗತಿಗಳಿಗೆ ಹೋಗುತ್ತಿದ್ದಂತೆಲ್ಲಾ. ಬಾಬರನ ಮಗ, ಹುಮಾಯೂನ್, ಹುಮಾಯೂನನ ಮಗ ಅಕ್ಬರ್, ಅಕ್ಬರನ ಮಗ ಜಹಾಂಗೀರ್, ಜಹಾಂಗೀರನ ಮಗ ಷಹಜಹಾನ್, ಷಹಜಹಾನನ ಮಗ ಔರಂಗಜೇಬ ಇವರೆಲ್ಲರೂ ಭಾರತ ದೇಶವನ್ನು ಆಳುತ್ತಿದ್ದಾಗ ಭಾರತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ದೊರೆಗಳು ಲಲಿತ ಕಲೆ. ಸಾಹಿತ್ಯ, ಸಂಗೀತಗಳಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಲ್ಲದೇ ಈ ಮೊಘಲರ ಕಾಲದಲ್ಲಿಯೇ ಜಗತ್ರ್ಪಸಿದ್ಧವಾದ ತಾಜ್ ಮಹಲ್, ಕುತುಬ್ ಮಿನಾರ್ ಗಳಲ್ಲೇ ನೂರಾರು ವಿಶ್ವವಿಖ್ಯಾತ ಕಟ್ಟಡಗಳು ಭಾರತದಲ್ಲಿ ತಲೆ ಎತ್ತುವ ಮೂಲಕ ಭಾರತ ಸಾಂಸ್ಕೃತಿಕವಾಗಿ ಬೆಳೆಯಿತು ಎನ್ನುವುದನ್ನೇ ಕಲಿಸಿಕೊಡಲಾಗುತ್ತಿತ್ತು. ಹಾಗಾದರೆ ಕಲೆ ಸಾಹಿತ್ಯ, ಸಂಸ್ಕೃತಿ, ವಾಸ್ತು ಶಿಲ್ಪ, ವಿಜ್ಞಾನ, ಗಣಿತ ಮುಂತಾದವುಗಳಿಗೆ ಭಾರತ ಸಹಸ್ರಾರು ವರ್ಷಗಳ ಮುಂಚೆಯೇ ವಿಶ್ವ ಗುರುವಾಗಿರಲಿಲ್ಲವೇ?

ಇದರ ಜೊತೆಯಲ್ಲೇ ದ್ರಾವಿಡರು ಈ ದೇಶದ ಮೂಲವಾಸಿಗಳಾಗಿದ್ದು, ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಆರ್ಯರು ಈ ದ್ರಾವಿಡರ ಮೇಲೆ ದಬ್ಬಾಳಿಕೆ ನಡೆಸಿದರು ಎಂಬ ಸಾಕ್ಷಾಧಾರವಿಲ್ಲದ ಹಸೀ ಸುಳ್ಳನ್ನೇ ಕಲಿಸಿಕೊಡುವ ಮೂಲಕ ನಮ್ಮವರಿಗೆ ನಮ್ಮವರ ಮೇಲೇ ದ್ವೇಷಬರುವಂತೆ ನೋಡಿಕೊಳ್ಳಲು ಸಫಲರಾದರು. ಇನ್ನು ಇದೇ ಮೊಘಲರ ಬಳಿ ಸಾಮಂತನಾಗಿದ್ದ ಶಹಾಜಿಯವರ ಮಗ ಶಿವಾಜಿ ತನ್ನ ತಂದೆಯವರ ದಾಸ್ಯದಿಂದ ಸಿಡಿದೆದ್ದು ಗುಡ್ಡಗಾಡಿನ ಮಾವಳೀ ಹುಡುಗರ ಸೈನ್ಯವನ್ನು ಕಟ್ಟಿಕೊಂಡು ಮೊಘಲರ ಸದ್ದನ್ನು ಹುಟ್ಟಡಗಿಸಿ ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದ ಶಿವಾಜಿ ಮಹಾರಾಜರನ್ನು ಗುಡ್ಡಗಾಡಿನಲ್ಲಿ ಗೆರಿಲ್ಲಾ ಮಾದರಿಯ ಧಾಳಿಕೋರ ಎಂದರೆ, ಮಹಾರಾಣಾ ಪ್ರತಾಪ್ ಹಲವು ಬಾರಿ ಸೋತು ಸುಣ್ಣವಾಗಿ ಹೊದ ರಾಜ ಎಂದೇ ಪರಿಚಯಿಸಿದ್ದವರಿಗೆ ರಾಣಾ ಪ್ರತಾಪ ತಾನು ಸೋಲಿಸಿದ್ದ ಮೊಘಲರ ರಾಜನಿಗೆ ಪ್ರಾಣ ಬಿಕ್ಷೇ ನೀಡಿ ಕಳುಹಿದ್ದದ್ದನ್ನು ತಿಳಿಸದಿರುವ ಜಾಣ ಮರವು ಏಕೇ?

ಇನ್ನು ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಮತ್ತು ಜವಹರ್ ಲಾಲ್ ನೆಹರು ಅವರ ನೇತೃತ್ವದಲ್ಲಿ ನಡೆಸಿದ ಉಪವಾಸಗಳಿಂದ ಕೂಡಿದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಗಳಿಂದಾಗಿಯೇ ಆಗಸ್ಟ್ 15, 1947ರಲ್ಲಿ ಬ್ರಿಟಿಷರಿಂದ ಸ್ವಾತ್ರಂತ್ಯ್ರ ದೊರಕಿತು ಎಂಬುದಷ್ಟೇ ಗಿಣಿಪಾಠವನ್ನು ಹೇಳಿಕೊಟ್ಟರೇ ವಿನಃ ಅದೇ ಸ್ವಾತ್ರಂತ್ಯ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ತ್ಯಾಗ ಮಾಡಿದ, ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್, ಲಾಲ್ ,ಬಾಲ್, ಪಾಲ್ ತ್ರಿವಳಿಗಳು, ಭಗತ್ ಸಿಂಗ್ ರಾಜಗುರು, ಸುಖ್ ದೇವ್, ಬಟುಕೇಶ್ವರ ದತ್ತ, ಸುಭಾಷ್ ಚಂದ್ರ ಬೋಸ್ ಅಂತಹ ಕ್ರಾಂತಿಕಾರಿಗಳ ಹೋರಾಟವನ್ನು ನಮ್ಮ ಮಕ್ಕಳಿಗೆ ತಿಳಿಸಿ ಕೊಡಲಿಲ್ಲವೇಕೇ?  1847ರ ಪ್ರಥಮ ಸಂಗ್ರಾಮದ ಕಿಚ್ಚನ್ನು ಹತ್ತಿಸಿದ ಮಂಗಲ್ ಪಾಂಡೆಯನ್ನು ಖಳನಾಯಕನಂತೆ ಸಿಪಾಯಿ ದಂಗೆ ಮಾಡಿದವ ಎಂದೇ ಕಲಿಸಿಕೊಡುವುದೇಕೇ?

ನನ್ನನ್ನು ಹಂದಿ ಎಂದು ಬೇಕಾದರೂ ಕರೆಯಿರಿ. ಅದರೆ ಹಿಂದೂ ಎಂದು ಮಾತ್ರ ಕರೆಯದಿರಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಂತಹ ಮತ್ತು ಎಡಪಂಥೀಯ ಮನೋಭಾವನೆಯನ್ನೇ ಹೊಂದಿದ್ದಂತಹ ವ್ಯಕ್ತಿ ಈ ದೇಶದ ಪ್ರಧಾನಿಯಾಗಿ ಸತತವಾಗಿ ೨೦-೨೫ ವರ್ಷ ಅಲ್ಪಸಂಖ್ಯಾತ ವರ್ಗಕ್ಕೇ ಸೇರಿದವರೇ ಸ್ವತಂತ್ರ್ಯ ಭಾರತದ ಶಿಕ್ಷಣ ಮಂತ್ರಿಯಾದ ನಂತರ ಸರ್ಕಾರದ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಸಿದ್ದೇಲ್ಲವೂ ಹಿಂದೂ ವಿರೋಧಿ ಭಾವನೆಯೇ. ದೇಶಕ್ಕೆ ಸ್ವಾತಂತ್ಯ್ರ ಬಂದರೂ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಮಾಧ್ಯಮಗಳು ಕಮ್ಯೂನಿಷ್ಟರ ಕಪಿಮುಷ್ಟಿಯಲ್ಲಿದ್ದ ಕಾರಣ ನಮ್ಮ ನಿರಂತರವಾಗಿ ನಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ದೇಶದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದ ವೀರ ಯೋಧರ ಬದಲಾಗಿ ದೇಶವನ್ನು ಕೊಳ್ಳೆ ಹೊಡೆದವರನ್ನೇ ಗ್ರೇಟ್ ಎಂದು ಹೇಳಿಕೊಳ್ಡುವ ಮೂಲಕ ನಮ್ಮ ದೇಶದ ಬಗ್ಗೆ ಕೀಳರಿಮೆಯನ್ನೇ ಬೆಳಸುತ್ತಾ ಹೋದದ್ದು ಸುಳ್ಳಲ್ಲ.

book4ಕರ್ನಾಟಕದಲ್ಲಿ ಆರಂಭದಿಂದಲೂ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಶೂದ್ರ ಸಾಹಿತ್ಯ ಎಂದು ಸಾರಸ್ವತ ಲೋಕದಲ್ಲಿಯೂ ಜಾತಿಯತೆಯಿಂದ ತುಂಬಿ ತುಳುಕುವಂತೆ ಮಾಡಿದರೆ, ಕಳೆದ ಬಾರಿಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಬರಗೂರು ರಾಮಚಂದ್ರಪ್ಪನವರು
ಆಯ್ಕೆಯಾದ ಮೇಲಂತೂ ಏಕ ಪಕ್ಷೀಯವಾಗಿ ತಮ್ಮ ಎಡ ಪಂತೀಯ ಸಿದ್ಧಾಂತದ ಮನಸ್ಥಿಯಿಂದಾಗಿ, ಭಾರತದ ನೈಜ ಇತಿಹಾಸವನ್ನು ತಿರುಚಿದ್ದಲ್ಲದೇ, ಪಠ್ಯ ಪುಸ್ತಕದ ಸಾಹಿತಿಗಳಲ್ಲೂ ಜಾತಿ, ಧರ್ಮ, ಕ್ಷೇತ್ರಿಯ ವಿಭಜನೆಯ ಮೂಲಕ ಅತ್ಯಂತ ಕೆಟ್ಟ ರೀತಿಯ ಪುಸ್ತಕವನ್ನು ಹೊರತಂದದ್ದನ್ನು ಗಮನಿಸಿದ್ದ ಪ್ರಸ್ತುತ ಸರ್ಕಾರ, ಅವೆಲ್ಲವನ್ನು ಸರಿಪಡಿಸುವ ಸಲುವಾಗಿ ಮೂಲತಃ ಗಣಿತ ಮತ್ತು ವಿಜ್ಣಾನಗಳನ್ನು ಬೋಧಿಸುವ, ಪ್ರವೃತ್ತಿಯಲ್ಲಿ 40+ ಪುಸ್ತಕಗಳು, ರಾಜ್ಯದ ಬಹುತೇಕ ಎಲ್ಲಾ ದಿನಪತ್ರಿಕೆಗಳಲ್ಲೂ ಅಂಕಣಕಾರಾಗಿ ಮಿಂಚುತ್ತಿರುವ, ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಬಹುತೇಕರ ಮನ ಮತ್ತು ಮನೆಗಳಲ್ಲಿಯೂ ಚಿರಪರಿಚಿತರಾಗಿರುವ ರೋಹಿತ್ ಚಕ್ರತೀರ್ಥ ಅವರನ್ನು ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಸರ್ಕಾರ ಘೋಷಿಸುತ್ತಿದ್ದಂತೆಯೇ ಸರ್ಕಾರದ ಕೃಟಾಕಟಾಕ್ಷದಿಂದಾಗಿ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಸ್ವತಃ ತಮಗೆ ತಾವೇ ಬುದ್ಧಿ ಜೀವಿಗಳು ಎಂದು ಕರೆದುಕೊಳ್ಳುವ ಮಂದಿ ಆರ್ತನಾದ ಕೇಳದಾಗಿದೆ.
book3
ಇವೆಲ್ಲದರ ನಡುವೆಯೂ ನಿಗಧಿತ ಸಮಯಕ್ಕೆ ಸರಿಯಾಗಿ ರೋಹಿತ್ ಚಕ್ರತೀರ್ಥ ಅವರ ಸಾರಥ್ಯದ ಪುಸ್ತಕ ಪರಿಷ್ಕರರಣ ಸಮಿತಿ 1 ರಿಂದ 10ನೇ ತರಗತಿಯ ವರಗೆ ಕನ್ನಡ ಮತ್ತು ಸಮಾಜ ಶಾಸ್ತ್ರದ ಪುಸ್ತಕಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ, ಹಿಂದಿನ ಸಮಿಯ ತಪ್ಪುಗಳನ್ನೆಲ್ಲಾ ಸರಿ ಪಡಿಸುವ ಜೊತೆ ಜೊತೆಯಲ್ಲೇ ಚಿಕ್ಕ ಮಕ್ಕಳಿಗೆ ವಯಸ್ಕರ ಶಿಕ್ಷಣದಂತಿದ್ದ ಕೆಲವು ಪದ್ಯ ಮತ್ತು ಗದ್ಯಗಳನ್ನು ತೆಗೆದು ಹಾಕಿ ಅವುಗಳ ಜೊತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಹೆಡಗೇವಾರ್ ಅವರ ಭಾಷಣದ ಪಾಠದ ಜೊತೆಗೆ ಚಕ್ರವರ್ತಿ ಸೂಲೆಬೆಲೆಯವರ ಸುಖ್ ದೇವ್ ಮತ್ತು ರಾಜಗುರು ಅವರ ಕುರಿತಾದ ಕೆಲವು ಪಠ್ಯಗಳನ್ನು ಸೇರಿಸಿದ ಕೂಡಲೇ ಪಠ್ಯಪುಸ್ತಕದಲ್ಲಿ ಕೇಸರೀಕರಣ, ಬ್ರಾಹ್ಮಣ್ಯತೆ ಎಂದು ಬೊಬ್ಬಿರಿಯಲಾರಂಭಿಸಿರುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತದೆ.

book9ನಿಜ ಹೇಳಬೇಕೆಂದರೆ, ಕೂಸು ಹುಟ್ಟುವ ಮೊದಲೇ ಕುಲವಿ ಹೊಲಿಸಿದರಂತೆ, ಹೀಗೆ ಅಪಸ್ವರವನ್ನು ಎತ್ತಿದ ಬಹುತೇಕರು ಪುಸ್ತಕ ಬಿಡುಗಡೆಗೂ ಮುನ್ನವೇ ಪುಸ್ತಕದಲ್ಲಿರುವ ವಿಷಯಗಳ ಬಗ್ಗೆ ಅರಿಯದೆಯೇ ಕೇವಲ ಅಂತೆ ಕಂತೆಯ ಮಾತುಗಳನ್ನೇ ನಂಬಿ, ಪುಸ್ತಕದ ಬಗ್ಗೆ ಅವಸವ್ಯವನ್ನು ಎತ್ತಿದ್ದಲ್ಲದೇ, ಮಕ್ಕಳಿಗೆ ಕಲಿಸುವ ಪಠ್ಯಪುಸ್ತಕಗಳು ತಮ್ಮ ಮೂಗಿನ ನೇರಕ್ಕೆ ಇರುವಂತೆ ಅನುಕೂಲ ಸಿಂಧುತನವನ್ನು ತೋರುತ್ತಾ ಗದ್ದಲ ಎಬ್ಬಿಸಿ, ಶತ್ರುಗಳ ಶತ್ರುವೇ ಮಿತ್ರ ಎನ್ನುವಂತೆ ತೆರೆಯ ಮರೆಯಿಂದಲೇ ಬರ್ಗೂರು ರಾಮಚಂದ್ರಪ್ಪ ಅ ರೀತಿಯ ಚಾರ್ವಾಕರಿಗೆ ಬೆಂಬಲ ನೀಡುತ್ತಿರುವುದು ಈಗ ಜನರಿಗೆ ಅರಿಯದ ವಿಷಯವೇನಲ್ಲ. ಅವರ ಜೊತೆ ಅವರದ್ದೇ ಪಟಾಲಂ ಪುರುಶೋತ್ತಮ ಬಿಳಿಮಲೆ ಮತ್ತು ದೇವನೂರು ಮಹದೇವ ಮುಂತಾದವರು ಸೇರಿಕೊಳ್ಳುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ಸೀಮೆ ಎಣ್ಣೆ ಸುರಿದಂತಾಗಿದೆ.

book2ಯಾವುದೇ ಟಿವಿ ಛಾನೆಲ್ಲುಗಳನ್ನು ಹಾಕಲೀ, ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳನ್ನು ತೆರೆದರೂ, ಎಲ್ಲಾ ಕಡೆಯಲ್ಲೂ ಪುಸ್ತಕ ಪರಿಷ್ಕರಣೆಯ ಪರ ಮತ್ತು ವಿರೋಧಿ ಹೋರಾಟಗಳು ಆರಂಭವಾಗಿ ಎರಡೂ ಬಣಗಳ ವಾಗ್ಸಮರ ತಾರಕ್ಕಕ್ಕೇರಿದೆ. ತಮ್ಮ ದೇಶದ ಇತಿಹಾಸವನ್ನು ಅರಿಯದವರು/ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಸತ್ಯಗೊತ್ತಿದ್ದರೂ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದರ ಅರಿವಿದ್ದರೂ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ವಿದ್ಯಾರ್ಥಿಗಳ ಬಗ್ಗೆ ಯಾರೂ ಸಹಾ ಗಮನಿಸದೇ ಪಠ್ಯಪುಸ್ತಕಗಳಲ್ಲಿಯೂ ತಮ್ಮ ಜಾತಿ, ಧರ್ಮ ಮತ್ತು ರಾಜಕೀಯಗಳನ್ನು ಬೆರೆಸಲು ಮುಂದಾಗಿರುವುದು ನಿಜಕ್ಕೂ ಹೇಯಕರವೇ ಸರಿ.

ಇನ್ನು ರಾಜ್ಯಾದ್ಯಂತ ನಾಯಿಕೊಡೆಗಳಂತೆ ಗಲ್ಲಿಗಲ್ಲಿಗೆ ರಾಜ್ಯಾಧ್ಯಕ್ಷರುಗಳನ್ನು ಹೊಂದಿರುವ, ಹೆಸರಿಗಷ್ಟೇ ಕನ್ನಡ ಸಂಘಗಳಾಗಿ ಬಹಿರಂಗವಾಗಿಯೇ ಕನ್ನಡ ಹೆಸರಿನಲ್ಲಿ ಸರ್ಕಾರೀ ಅನುಧಾನವನ್ನು ಹೊಡೆಯುತ್ತಾ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿರುವ ಕನ್ನಡ ಸಂಘಗಳೂ ಈ ಪ್ರತಿಭಟನೆ ಮಾಡಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ? ಎನ್ನುವುದೇ ಅರ್ಥವಾಗುತ್ತಿಲ್ಲ. ಇವರ ಜೊತೆ ಮುಸ್ಲಿಂ ಸಂಘಟನೆಗಳೂ ಕೈ ಜೋಡಿಸಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ.

ಹಿಂದೂಗಳಲ್ಲಿ ಪರಸ್ಪರ ಒಗ್ಗಟ್ಟಿಲ್ಲದ್ದನ್ನೇ ಬಳಸಿಕೊಂಡು ನಮ್ಮ ನಮ್ಮಲ್ಲೇ ಯಾದವೀ ಕಲಹ ತಂದು ದೇಶವನ್ನು ಲೂಟಿ ಮಾಡಿದ ಇತಿಹಾಸ ನಮ್ಮ ಕಣ್ಣ ಮುಂದಿದ್ದರೂ, ಆದರಿಂದ ಆದ ಪ್ರಮಾದಗಳನ್ನು ಹೇಗೆ ಬಗೆಹರಿಸಬೇಕೆಂಬುದರ ಬಗ್ಗೆ ಯೋಚಿಸದೇ, ಪರಸ್ಪರ ಕೆಸರೆರಚಾಟದ ಮೂಲದ ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಕರ್ನಾಟಕದ ಮಾನವನ್ನು ಹರಾಜು ಹಾಕಲು ಮುಂದಾಗಿರುವ ಪಟ್ಟಭಧ್ರ ಹಿತಾಸಕ್ತಿಗಳ ನಡೆ ಆತಂಕಕಾರಿಯಾಗಿದೆ.

ನಾವುಗಳು ಶಾಲೆಯಲ್ಲಿ ಕುವೆಂಪು, ಮಾಸ್ತಿ, ಬೇಂದ್ರೇ, ಬಸವಣ್ಣ, ಶಿಶುನಾಳ ಷರೀಫ್ ಇವರುಗಳು ಪದ್ಯ ಮತ್ತು ಗದ್ಯವನ್ನು ಓದಿ ಬೆಳೆದವಾದರೂ, ಆ ಲೇಖಕರು ಯಾವ ಜಾತಿ ಎಂಬುದೇ ನಮಗೆ ಅರಿವಿರಲಿಲ್ಲ ಎನ್ನುವುದನ್ನು ಬಿಡಿ ಮತ್ತು ಅದನ್ನು ನಮಗೆ ರಸವತ್ತಾಗಿ ಹೇಳಿಕೊಟ್ಟು ನಮ್ಮನ್ನು ತಿದ್ದಿ ತೀಡಿ ವಿದ್ಯಾವಂತರನ್ನಾಗಿ ಮಾಡಿದ ನಮ್ಮ ಗುರುಗಳಾದ ವಿಮಲಾ , ವೃತ್ತಾಬಾಯಿ, ಸರಸ್ವತಿ, ಗಾಯತ್ರಿ, ಜಯಮ್ಮ, ರಂಗನಾಧ್, ಗೋಪಣ್ಣ, ಅನಂತನಾರಾಯಣ್, ಜಿನರಾಜ್, ನಾಗವೇಣಿ, ಶರ್ಘನಿಜಾ, ಇವೆರೆಲ್ಲರೂ ಯಾವ ಜಾತಿಯವರು ? ಎಂಬುದನ್ನು ತಿಳಿದುಕೊಳ್ಳುವ ಪ್ರಮೇಯವೇ ನಮಗೆ ಇರಲಿಲ್ಲ.

ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿತವಾದ ಮೂಲ ಸಂವಿಧಾನದಲ್ಲಿ ಇಲ್ಲದೇ ಇದ್ದ ಜಾತ್ಯಾತೀತೆ ಎಂಬ ಪದವನ್ನು ತಮ್ಮ ರಾಜಕೀಯದ ತೆವಲಿಗಾಗಿ ಬಲವಂತವಾಗಿ ತುರುಕಿದ ರಾಜಕಾರಣಿಗಳು ಭಾರತ ಹೆಸರಿಗಷ್ಟೇ ಜಾತ್ಯಾತೀತ ಎನಿಸಿಕೊಂಡಿದ್ದು ಮಕ್ಕಳು ಹುಟ್ವುವಾಗ, ಶಾಲೆಗೆ ಸೇರಿಸುವಾಗ, ಕೆಲಸಕ್ಕೆ ಸೇರುವಾಗ, ಕಡೆಗೆ ಪಂಕ್ತಿಯಲ್ಲಿ ಊಟಮಾಡುವಾಗ, ಅಂತಿಮವಾಗಿ ಸತ್ತ ನಂತರ ಸ್ಮಶಾನದಲ್ಲಿ ಹೂಳುವಾಗಲೂ ಧರ್ಮ, ಜಾತಿ ಆಧಾರಿತವಾಗಿ ಹೋಗಿರುವುದು ವಿಪರ್ಯಾಸವಾಗಿದೆ.

ಪಠ್ಯದಲ್ಲಿರುವ ವಿಷಯಗಳು ಆಯಾ ಹಂತದ ಮಕ್ಕಳ ವಿಕಸನಕ್ಕೆ ಪ್ರೋತ್ಸಾಹಕ ಮತ್ತು ಉಪಯುಕ್ತವಾಗಿರ ಬೇಕೇ ಹೊರತು, ಅದನ್ನು ಬರೆದವರ/ಕಲಿಸಿದವರ ಕುಲ ಗೋತ್ರ ಅವರ ಸಿದ್ಧಾಂತದ ಪರ ವಿರೋಧದಿಂದ ಈ ರೀತಿಯಾಗಿ ವಿವಾದ ಮಾಡುತ್ತಲೇ ಹೋದಲ್ಲಿ ಮಕ್ಕಳ ಮೇಲೆ ಖಂಡಿತವಾಗಿಯೂ ದುಷ್ಪರಿಣಾಮ ಬೀರುವುದರಲ್ಲಿ ಸಂದೇಹವೇ ಇಲ್ಲ.

book6ಮಕ್ಕಳ ಪಠ್ಯ ಪುಸ್ತಕದ ವಿಚಾರದಲ್ಲಿ ಗೊಂದಲ ಎಬ್ಬಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಂದಾಗಿರುವುವವರು, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂದು ಚಿಕ್ಕ ಮಕ್ಕಳ ಪಠ್ಯಪುಸ್ತಕಗಳೊಂದಿಗೆ ಚಲ್ಲಾಟವಾಡುವ ಬದಲು ಮುಂಬರುವ ಚುನಾವಣೆಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಇದರ ಕುರಿತಂತೆ ಜನಾಂಧೋಲನ ನಡೆಸಿ ಜನತೆ ಯಾರ ಪರ ಇದ್ದಾರೆ ಎಂದು ತಿಳಿಯಬಹುದಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಪತ್ರಿಕಾ ಧರ್ಮ

ಯಾವುದೇ ಕಾರ್ಯ ಅಥವಾ ಕಾರ್ಯಕ್ರಮವನ್ನು ನಡೆಸಿದ ನಂತರ ಅದರ ಫಲವನ್ನು ಯಾರು ಯಾರು ಅನುಭವಿಸಬಹುದು? ಎಂಬುದನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಈ ಸಂಸ್ಕೃತ ಸುಭಾಷಿತದಲ್ಲಿ ಉಲ್ಲೇಖಿಸಿಲಾಗಿದೆ.

ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ |
ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ ||
ಯಾವುದೇ ಒಳ್ಳೆಯ ಕೆಲಸವೇ ಇರಲಿ ಅಥವಾ ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು. ಈ ನಾಲ್ಕೂ ಜನರೂ ಆ ಕರ್ಮಗಳಿಗೆ ಸಮಭಾಗಿಗಳಾಗಿ ಫಲವನ್ನು ಪಡೆಯುತ್ತಾರೆ ಎಂಬುದು ಇದರ ಅರ್ಥವಾಗಿದೆ.

ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ, ವಿಶ್ವೇಶ್ವರ ಭಟ್ಟರ ಸಾರಥ್ಯದಲ್ಲಿ ಪ್ರಕಟವಾಗುತ್ತಿರುವ ವಿಶ್ವವಾಣಿ ಪತ್ರಿಕೆಯಲ್ಲಿ ಅಂಕಣಕಾರ ಜಯವೀರ ಗೌಡ ಎಂಬುವರು, ಇತ್ತೀಚೆಗೆ ಶೃಂಗೇರಿಯ ಕಿರಿಯ ಶ್ರೀಗಳು ಶಂಕರಪುರದ ಪೋಲೀಸ್ ಠಾಣೆಗೆ ಭೇಟಿಕೊಟ್ಟು ಅಲ್ಲಿನ ಸಿಬ್ಬಂಧಿ ವರ್ಗದವರನ್ನು ಆಶೀರ್ವದಿಸಿ ಬಂದ ಸಣ್ಣ ಘಟನೆಯನ್ನೇ ಹುಲಿ ಬಂತು ಹುಲಿ ಎನ್ನುವಂತೆ ಶೃಂಗೇರಿ ಶ್ರೀಗಳನ್ನು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಬಾರದಿತ್ತು ಎಂದು ಮೇಲ್ನೋಟಕ್ಕೆ ಸ್ವಾಮಿಗಳ ಬಗ್ಗೆ ಕಕ್ಕುಲತೆ ತೋರಿದಂತಿದ್ದರೂ, ಲೇಖನವನ್ನು ಸೂಕ್ಷ್ಮವಾಗಿ ಓದಿ ಅರ್ಥೈಸಿಕೊಳ್ಳುವವರಿಗೆ ಅದು ಕುಹಕವಾಗಿ ಮತ್ತು ವಿಡಂಬಣಾತ್ಮಕವಾಗಿ ಸ್ವಾಮಿಗಳ ಅವಹೇಳಣ ಮಾಡುವಂತಿದ್ದ ಕಾರಣ, ಜಾತಿ ಮತ ಬೇಧವಿಲ್ಲದೇ ಸಮಸ್ತ ಹಿಂದೂಗಳೂ ವಿಶ್ವೇಶ್ವರ ಭಟ್ಟರು ಮತ್ತು ಆ ಅಂಕಣಕಾರರ ಬಗ್ಗೆ ಆಕ್ಷೇಪ ವ್ಯಕ್ತಡಿಸುತ್ತಿದ್ದಾರೆ.

ಈ ರೀತಿಯ ಅಪಸವ್ಯಗಳನ್ನು ನಂದಿ ಬ್ರಾಂಡ್ ಇಲ್ಲವೇ ವಾಂತಿ ಭಾರತಿಯವರು ಬರೆದಿದ್ದರೆ ಅಥವಾ ASSking ಪರಕಾಚನೋ ಇಲ್ಲವೇ ಭಗವಾನ್ ಕೇಳಿದ್ದರೇ ನಾಯಿ ಬೊಗಳಿದರೆ ದೇವಲೋಕಕ್ಕೇನೂ ಹಾನಿಯಾಗೋದಿಲ್ಲಾ ಎಂದು ಸುಮ್ಮನಾಗಬಹುದಾಗಿತ್ತು. ಆದರೆ ಇದು ಶೃಂಗೇರಿ ಮಹಾಸಂಸ್ಥಾನದ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಭಟ್ಟರು ತಮ್ಮ ಶಿಷ್ಯ ಅಂಕಣಕಾರ ಜಯವೀರ ಗೌಡರ (ಭಟ್ಟರೇ ಆ ಹೆಸರಿನಲ್ಲಿ ಅಗ್ಗಾಗ್ಗೆ ಬರೆಯುತ್ತಾರೆ ಎಂಬ ಗುಮಾನಿಯೂ ಇದೆ) ಕೈಯ್ಯಲ್ಲಿ ಬರೆಸಿರುವಂತಹ ಈ ಲೇಖನ ಖಂಡಿತವಾಗಿಯೂ ಯಾವುದೇ ರೀತಿಯಲ್ಲಿ ನೋಡಿದರೂ ಪತ್ರಿಕಾಧರ್ಮಕ್ಕೆ ವಿರುದ್ಧವಾಗಿದೆ. ರವಿ ಕಾಣದ್ದನ್ನು ಕವಿ ಕಂಡ. ಕವಿ ಕಾಣದ್ದನ್ನು ಪತ್ರಕರ್ತ ಕಂಡ ಎನ್ನುವ ಮಾತಿನಂತೆ, ಪತ್ರಕರ್ತನೊಬ್ಬ ತನ್ನ ಲೇಖನ ಬರೆಯುವ ಮುನ್ನಾ ಸಾಕಷ್ಟು ಸಿದ್ಧತೆ ಮಾಡಿಕೊಂಡು ಪೂರ್ವಾಪರವಿಲ್ಲದೇ, ತಾನು ಬರೆಯುವಂತಹ ವಿಷಯದ ಬಗ್ಗೆ ಸಂಪೂರ್ಣ ಪೂರ್ವಾಪರವನ್ನು ವಿಚಾರಿಸಿ ಬರೆಯ ಬೇಕಾಗುವುದು ಪತ್ರಿಕಾ ಸಹಜ ಧರ್ಮ

WhatsApp Image 2022-05-21 at 10.04.10 PMಸಾಮಾನ್ಯವಾಗಿ ಸರ್ಕಾರಿ ಕಛೇರಿಗಳ ನಿರ್ಮಾಣ ಮತ್ತು ನಿರ್ವಹಣೆ ಸರ್ಕಾರದ ಜವಾಬ್ಧಾರಿಯಾಗಿದ್ದರೂ, ಕೆಲವೊಮ್ಮೆ ಆ ಕಟ್ಟಡ ಕಟ್ಟಲು ಸ್ಥಳ ದಾನಿಗಳು ಇಲ್ಲವೇ ಸಹಾಯ ಮಾಡಿದವರನ್ನು ಸ್ಮರಿಸುವುದು ನಮ್ಮ ಧರ್ಮದ ಭಾಗವಾಗಿದೆ. ಲೇಖನ ಬರೆಯುವ ಮುನ್ನಾ ಶಂಕರಪುರ ಪೋಲೀಸ್ ಠಾಣೆಯ ನವೀಕೃತ ಕಟ್ಟದದ ಲೋಕಾರ್ಪಣೆಯ ಫಲಕದಲ್ಲಿ ಶ್ರೀ ಶ್ರೀ ಶೃಂಗೇರೀ ಜಗದ್ಗುರುಗಳ ಆಶೀರ್ವಾದದಿಂದ ಎಂಬುದನ್ನು ಏಕೆ ಹಾಕಿಸಿದ್ದಾರೆ? ಎಂಬುದರ ಕುರಿತಾಗಿ ವಿಚಾರಿಸಿದ್ದಲ್ಲಿ ಎಲ್ಲವೂ ತಿಳಿದು ಈ ರೀತಿಯ ಲೇಖನ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.  ದುರಾದೃಷ್ಟವಷಾತ್ ಪೂರ್ವಾಗ್ರಹ ಪೀಡಿತರಾಗಿ ಯಾರದ್ದೋ ಹೇಳಿಕೆಯನ್ನು ಕೇಳಿ ಸ್ಥಳ ಪರಿಶೀಲನೇಯೇ ಮಾಡದೇ ಈ ಲೇಖನವನ್ನು ಬರೆದಿರುವುದು ಸ್ಪಷ್ಟವಾಗಿ ಕಾಣುತ್ತದೆ.

guruಇಂದು ಬಹುತೇಕ ಮಠಮಾನ್ಯಗಳು ಮತ್ತು ಧಾರ್ಮಿಕ ಸಂಘಸಂಸ್ಥೆಗಳು ಸರ್ಕಾರಕ್ಕೆ ನಮಗೆ ಈ ಜಾಗವನ್ನು ಇಷ್ಟು ಅನುದಾನ ಕೊಡಿ, ಇಲ್ಲವೇ ಈ ದೇವಸ್ಥಾನದ ಸುಪರ್ದಿಯನ್ನು ನಮಗೇ ವಹಿಸಿಕೊಡಿ ಎಂದು ಬೇಡುತ್ತಿರುವುದನ್ನೇ ನೋಡಿರುವ ನಮಗೆ ಅಪರೂಪಕ್ಕೆ ಎನ್ನುವಂತೆ, ಈ ರೀತಿಯ ಯಾವುದೇ ರಾಜಕೀಯ ಲಾಭಿಗಳ ಗೋಜಿಗೇ ಹೋಗದೇ, ಸರ್ಕಾರದಿಂದ ತನಗೆ ಯಾವ ಅನುಕೂಲ, ಅನುದಾನ, ಜಾಗವನ್ನೂ, ಧನವನ್ನೂ ಅಪೇಕ್ಷಿಸದೇ ಇರುವ ಕೆಲವೇ ಕೆಲವು ಮಠಗಳಲ್ಲಿ ಶ್ರೀ ಶೃಂಗೇರಿ ಜಗದ್ಗುರು ಮಹಾಸಂಸ್ಥಾನವೂ ಒಂದಾಗಿದೆ. ಹಾಗಾಗಿಯೇ ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಮತ್ತು ಪೀಠಸ್ಥರ ಪ್ರತಿಯೊಂದು ನಡೆ ನುಡಿಗಳನ್ನು ಸಮಸ್ತ ದೇಶವಾಸಿಗಳು ಅತ್ಯಂತ ಗೌರವಿಸುತ್ತಾರೆ.

ಹಾಗಾಗಿ  ಭಕ್ತಾದಿಗಳಿಂದ ಕೇವಲ ಶ್ರೀ ಮಠಕ್ಕೆ ಕಾಣಿಕೆಗಳನ್ನು/ದೇಣಿಗೆಗಳನ್ನು ಪಡೆಯುವುದರ ಜೊತೆಗೆ, ಅಗತ್ಯಬಿದ್ದಾಗ ಶ್ರೀ ಮಠದಿಂದ ಸಮಾಜದ ಹಿತಕ್ಕಾಗಿ ಮಠದ ವತಿಯಿಂದ ದಾನ ಧರ್ಮಗಳನ್ನು ಮಾಡುವ ಸಂಪ್ರದಾಯವನ್ನು ಅನೂಚಾನಾಗಿ ನಡೆಸಿಕೊಂಡು ಬಂದಿದೆ. ಅದರ ಮುಂದುವರೆದ ಭಾಗವಾಗಿಯೇ ಬೆಂಗಳೂರಿನ ಹೃದಯಭಾಗದಲ್ಲಿ ಕೋಟ್ಯಾಂತರ ಬೆಲೆಬಾಳುವ ತಮ್ಮ ಶಂಕರಪುರದ ಶ್ರೀ ಶಂಕರಮಠದ ಆವರಣದಲ್ಲಿ ಆಸ್ಪತ್ರೆ, ಬುದ್ಧಿಮಾಂದ್ಯ ಮಕ್ಕಳ ಶಾಲೆ, ಅಂಚೇ ಕಛೇರಿ, ಕಲ್ಯಾಣ ಮಂಟಪವನ್ನು ಕಟ್ಟಿಸಿ, ಅದರಲ್ಲಿ ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ಆಸ್ಪತ್ರೆ ಮತ್ತು ಶಾಲೆಯನ್ನು ಮಠವೇ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈಗ ನವೀಕೃತ ಪೋಲಿಸ್ ಠಾಣೆಯೂ ಸಹಾ ಶ್ರೀ ಮಠಕ್ಕೆ ಸೇರಿದ ಜಾಗದಲ್ಲಿಯೇ ಇರುವುದು ವಿಶೇಷವಾಗಿದೆ.

shank_muttಶ್ರೀ ಮಠದ ಸಮಾಜ ಸೇವೆಗಳು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುವ ಜಾಯಮಾನದ್ದಾಗಿದ್ದ ಕಾರಣ, ಸಾರ್ವಜನಿಕರ ಹಿತಾಸಕ್ತಿ ಮತ್ತು ರಕ್ಷಣೆಗಾಗಿ, ತನ್ನ ಮಠಕ್ಕೆ ಸೇರಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಪೋಲೀಸ್ ಠಾಣೆಯ ಕಟ್ಟಡಕ್ಕೆ ನೀಡುವ ಮೂಲಕ ಉಳಿದ ಮಠಮಾನ್ಯಗಳಿಗೆ ಮಾದರಿಯಾಗಿದೆ ಎಂದರೂ ತಪ್ಪಾಗದು. ಭಟ್ಟರು ಈ ರೀತಿಯ ವಿಕೃತ ವಿತಂಡವಾದವನ್ನು ಆರಂಭಿಸದೇ ಹೋಗಿದ್ದಲ್ಲಿ, ಬಹುಶಃ ಶೃಂಗೇರಿ ಶ್ರೀಗಳು ದಾನವಾಗಿ ನೀಡಿದ್ದ ಜಾಗದಲ್ಲೇ ಪೊಲೀಸ್ ಠಾಣೆ ನಿರ್ಮಾಣವಾಗಿದೆ ಎಂಬುದೇ ಯಾರಿಗೂ ತಿಳಿಯದೇ ಹೋಗಿರುತ್ತಿದ್ದ ಕಾರಣ ಪರೋಕ್ಷವಾಗಿ ಶ್ರೀಮಠದ ಸಮಾಜಮುಖೀ ಕಾರ್ಯಗಳನ್ನು ಜನರಿಗೆ ತಿಳಿಸಿದ ಕೀರ್ತಿಗೆ ಭಟ್ಟರು ಭಾಜನರಾಗಿದ್ದಾರೆ.

WhatsApp Image 2022-05-21 at 11.32.57 PMಲೋಕಕಲ್ಯಾಣಕ್ಕಾಗಿ ಮತ್ತು ಸಕಲ ಭಕ್ತಾದಿಗಳನ್ನು ಅಶೀರ್ವದಿಸುವುದಕ್ಕಾಗಿ ಬೆಂಗಳೂರಿನ ಶಂಕರ ಮಠದಲ್ಲಿ ಕೆಲ ದಿನಗಳ ಕಾಲ ವಾಸ್ತವ್ಯವನ್ನು ಹೂಡಿರುವ ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಶ್ರೀಗಳಿಗೆ ಅವರ ಮಠದ ಆವರಣದಲ್ಲೇ ಅತ್ಯಾಧುನಿಕ ರೀತಿಯಲ್ಲಿ ನವೀಕೃತಗೊಂಡ ಪೊಲೀಸ್ ಠಾಣೆಯನ್ನು ವೀಕ್ಷಿಸಿ ಅಲ್ಲಿನ ಸಿಬ್ಬಂಧಿವರ್ಗದವರನ್ನು ಅನುಗ್ರಹಿಸಬೇಕೆಂದು ಗುರುಗಳನು ಕೃತಜ್ಣತಾಪೂರ್ವಕವಾಗಿ ಕೇಳಿಕೊಂಡಿರುವ ಕಾರಣದಿಂದಾಗಿ ಜಗದ್ಗುರುಗಳು ಸ್ವಲ್ಪ ಸಮಯ ಮಾಡಿಕೊಂಡು ಠಾಣೆಗೆ ಭೇಟಿ ನೀಡಿದ್ದಾರೆಯೇ ಹೊರತು, ಯಾರ ಮೇಲೆ ದೂರು ದಾಖಲಿಸುವ ಸಲುವಾಗಿಯೋ, ಇಲ್ಲವೇ ತಮ್ಮ ವಿರುದ್ಧ ಮೊಕ್ಕದ್ದಮೆಗಾಗಿಯೋ ಅಲ್ಲ ಎನ್ನುವುದನ್ನು ಭಟ್ಟರು ಮತ್ತವರ ಶಿಷ್ಯರು ಗಮನಿಸದೇ ಹೋದದ್ದು ವಿಷಾಧನೀಯವಾಗಿದೆ.

ಲೇಖನದ ಆರಂಭದಲ್ಲಿ ಹೇಳಿರುವ ಸುಭಾಷಿತದಲ್ಲಿನ ಮೊದಲಿನ ಸಾಲಿನಲ್ಲಿ ಹೇಳಿರುವ ಹಾಗೆ, ಒಳ್ಳೆಯ ಕೆಲಸವನ್ನು ಮಾಡಿದವರು ಇಲ್ಲವೇ, ಮಾಡಿಸಿದವರು ಅಥವಾ ಅದಕ್ಕೆ ಪ್ರೇರಣೆ ನೀಡಿದವರು ಅದರ ಫಲವನ್ನು ಅನುಭವಿಸುತ್ತಾರೆ ಎನ್ನುವಂತೆ, ತಮ್ಮ ಮಠದ ಆವರಣದಲ್ಲಿ ತಾವು ನೀಡಿದ್ದ ಸ್ಥಳದಲ್ಲಿ ತಲೆ ಎತ್ತಿದ ಪೋಲೀಸ್ ಠಾಣೆಗೆ ಕಚೇರಿಗೆ ಭೇಟಿ ನೀಡಿದ್ದು ಯಾವುದೇ ತಪ್ಪಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದೇ ರೀತಿಯಾಗಿ ಈ ಲೇಖನದ ಸಂಪೂರ್ಣ ಕರ್ಮ ಫಲಾಫಲಗಳು ಲೇಖಕಕರಿಗೇ ಸೇರಿದ್ದು ಇಲ್ಲವೇ, ಈ ಲೇಖನ ತಮ್ಮ ಗಮನಕ್ಕೆ ಬಾರದೇ ಅಚ್ಚಾಗಿದೆ ಎಂದು ಸಬೂಬು ಹೇಳಿ ಮಾಡಿದ ತಪ್ಪಿನಿಂದ ನುಸಿಳಿಕೊಳ್ಳಲು ಭಟ್ಟರು ಪ್ರಯತ್ನ ಪಟ್ಟಲ್ಲಿ ಸುಭಾಷಿತದ ಎರಡನೇ ಸಾಲಿನಲ್ಲಿ ಹೇಳಿರುವಂತೆ ಈ ಲೇಖನಕ್ಕೆ ಪ್ರೇರಣೆ ಕೊಟ್ಟವರು ಇಲ್ಲವೇ, ಅದರ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರೂ ಸಹಾ ಆ ಕರ್ಮದಲ್ಲಿ ಸಮಭಾಗಿಗಳಾಗಿ ಫಲವನ್ನು ಪಡೆಯುತ್ತಾರೆ ಎಂದಿರುವ ಕಾರಣ ಈ ಸಮಸ್ತ ಆಸ್ತಿಕ ಬಂಧುಗಳ ಆಕ್ರೋಶವನ್ನು ಭಟ್ಟರೂ ಹೊರಲೇ ಬೇಕಾಗಿದೆ ಮತ್ತು ಅದಕ್ಕೆ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳುವ ಮೂಲಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇ ಬೇಕಾಗಿದೆ.

shoeಇನ್ನು ನಮ್ಮ ದೇಶದಲ್ಲಿ ಪ್ರತ್ಯಕ್ಷ ದೇವರುಗಳದ ಸೂರ್ಯ ಚಂದ್ರರ ನಂತರದ ಸ್ಥಾನಮಾನವನ್ನು ತಂದೆ ತಾಯಿಗಳಿಗೆ ನೀಡಿ ಮೂರನೇ ಸ್ಥಾನವನ್ನು ಆಚಾರ್ಯ ದೇವೋಭವ ಎಂದು ಗುರುಗಳಿಗೆ ನೀಡಿದ್ದೇವೆ. ತಮ್ಮ ಮಗನೇ ಗುರುಸ್ಥಾನದಲ್ಲಿ ಕುಳಿತಿದ್ದರೂ, ಅವರಿಗೆ ಜನ್ಮ ನೀಡಿದ ತಂದೆಯೇ ನಮಸ್ಕಾರ ಮಾಡುತ್ತಾರೆ. ಇನ್ನು ಸಮಾಜದ ಹಿತಕ್ಕಾಗಿಯೇ ಎಂತಹ ಸಂದರ್ಭದಲ್ಲಿಯೂ ಊಟೋಪಹಾರಗಳನ್ನೂ ಲೆಕ್ಕಿಸದೆ ಕರ್ತವ್ಯ ನಿಷ್ಠರಾಗಿ ಹಗಲೂ ಇರುಳು ದುಡಿಯುವ, ಪೋಲೀಸ್ ಇಲಾಖೆಯ ಸಿಬ್ಬಂದಿಗಳಿಗೂ ಗುರುಗಳ ಅನುಗ್ರಹ ಖಂಡಿತವಾಗಿಯೂ ಅತ್ಯಾವಶ್ಯಕವಾಗಿದೆ. ಜಗದ್ಗುರುಗಳ ದರ್ಶನಕ್ಕೆ ಬರುವ ಭಕ್ತರನ್ನು ಬಿಡಿ, ಈ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನ ಮಂತ್ರಿಯಾದಿಯಾಗಿ ಸಕಲ ಆಡಳಿತ ವರ್ಗ ಭಕ್ತಿ ಪೂರ್ವಕವಾಗಿ ತಮ್ಮ ಪಾದರಕ್ಷಣೆಗಳನ್ನು ಪಕ್ಕಕ್ಕಿಟ್ಟು ಭಕ್ತಿ ಭಾವಗಳಿಂದ ಜಗದ್ಗುರುಗಳ ಆಶೀರ್ವಾದ ಪಡೆಯುವುದು ಇಲ್ಲಿನ ಸಂಸ್ಕಾರ. ಅದೇ ರೀತಿಯಾಗಿಯೇ ಅಲ್ಲಿನ ಸಿಬ್ಬಂದ್ಧಿ ವರ್ಗದವರೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ತಮ್ಮ ಪೋಲಿಸ್ ಸಮವಸ್ತ್ರಧಾರಿಗಳಾಗಿಯೇ ಕೇವಲ ಪದವೇಷವನ್ನು ಕಳಚಿಟ್ಟಿದ್ದನ್ನು ಎತ್ತಿ ತೋರಿಸುವ ಮೂಲಕ ಕುಚೋದ್ಯ ಮಾಡಿದ್ದು, ಲೇಖಕರಿಗೆ ನಮ್ಮ ಆಚಾರ ವಿಚಾರ ಮತ್ತು ಪದ್ಧತಿಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೇ ಇರುವ ಅವರ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.

ಅಂದು ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದೇ ಹೋದದ್ದನ್ನೇ ಬಂಡವಾಳ ಮಾಡಿಕೊಂಡು ನಮ್ಮ ನಮ್ಮಲ್ಲೇ ಜಗಳವನ್ನು ತಂದಿಟ್ಟು ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಬ್ರಿಟೀಷರು ಮೂರ್ನಾಲ್ಕು ಶತಮಾನಗಳ ಕಾಲ ದಾಸ್ಯದಲ್ಲಿಟ್ಟುಕೊಂಡಿದ್ದಲ್ಲದೇ, ನಮ್ಮ ದೇಶವನ್ನು ಲೂಟಿ ಹೊಡೆದಿದ್ದ ವಿಚಾರಗಳು ತಿಳಿದೂ ಮತ್ತು ದೇಶದ ಬಹುಸಂಖ್ಯಾತ ಹಿಂದೂಗಳನ್ನು ಮೆಟ್ಟಿ ನಿಲ್ಲಲು ವಿದೇಶೀ ನೆರವಿನೊಂದಿಗೆ ಅಲ್ಪಸಂಖ್ಯಾತರುಗಳು ಪದೇ ಪದೇ ಮಾಡುತ್ತಿರುವ ಷಡ್ಯಂತರಗಳನ್ನು ಅರಿತೂ ಭಟ್ಟರು ಪೂರ್ವಾಗ್ರಹ ಪೀಡಿತರಾಗಿ ನಮ್ಮ ನಮ್ಮಲ್ಲೇ ಈ ರೀತಿಯಾಗಿ ಕುಚೇಷ್ಟೆ ಮಾಡುತ್ತಾ ಒಡಕನ್ನು ತಂದಿಡಲು ಮುಂದಾಗಿರುವುದು ನಿಜಕ್ಕೂ ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿದ್ದು ಅಕ್ಷಮ್ಯ ಅಪರಾಧವಾಗಿದೆ.

ಭಟ್ರೇ ಸುಮ್ಮನೇ ನಿಮ್ಮ ಲೇಖನದಲ್ಲಿ ನಾವೆಲ್ಲಾ ಹಿಂದು, ನಾವೆಲ್ಲಾ ಒಂದು ಎಂದು ಬರೆದರೆ ಸಾಲದು ಅದನ್ನು ಜೀವನದಲ್ಲಿ ಅಕ್ಷರಶಃ ಪಾಲಿಸಿದಲ್ಲಿ ಮಾತ್ರವೇ, ನಿಮಗೂ ಮತ್ತು ನಿಮ್ಮ ಲೇಖನಕ್ಕೂ ಒಂದು ಬೆಲೆ ಬರುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಊಟ ತನ್ನಿಷ್ಟ, ನೋಟ ಪರರಿಷ್ಟ

ಕೆಲವು ವರ್ಷಗಳ ಹಿಂದೆ ನಿಜಕ್ಕೂ ನಮ್ಮ ಬಹುತೇಕರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ದುಡಿಯುವ ಕೈ ಎರಡಾದರೇ ಕುಳಿತು ತಿನ್ನುವ ಕೈ ಹತ್ತಾರು ಇರುತ್ತಿತ್ತು. ಸರಿಯಾಗಿ ಎರಡು ಹೊತ್ತು ಹೊಟ್ಟೆ ತುಂಬಾ ಊಟವೂ ಇಲ್ಲದಿರುವಂತಹ ಸಂಧರ್ಭವೂ ಇತ್ತು. ಆದರೂ ನಮ್ಮ ಅಜ್ಜ-ಅಜ್ಜಿಯರ ಆಯಸ್ಸು 80-90 ರ ಆಸುಪಾಸಿನಲ್ಲಿಯೇ ಇರುತ್ತಿತ್ತು. ಆಷ್ಟು ವರ್ಷಗಳ ಕಾಲ ಅವರು ಕಷ್ಟದಲ್ಲೇ ಜೀವಿಸಿದರೂ ಅವರಿಗೆಂದೂ ಬಿಪಿ, ಶುಗರ್, ಕಿಡ್ನಿ ತೊಂದರೆಯಾಗಲಿ ಇರಲೇ ಇಲ್ಲ. ಹೃದಯಾಘಾತ ಎನ್ನುವುದನ್ನು ಕೇಳೇ ಇರಲಿಲ್ಲ ಅವರೆಲ್ಲರೂ ಗಂಡಾ ಗುಂಡೀ ಮಾಡಿಯಾದರೂ ತುಪ್ಪಾ ತಿನ್ನು ಎಂದು ಆರಾಮವಾಗಿ ಆರೋಗ್ಯವಾಗಿ ಇರುತ್ತಿದ್ದದ್ದಕ್ಕೆ ಮುಖ್ಯ ಕಾರಣ ಎಂದರೆ ಅವರೆಲ್ಲರೂ ಕಷ್ಟ ಪಟ್ಟು ದೇಹ ದಂಡಿಸಿ ದುಡಿದು ಸಂಪಾದನೆ ಮಾಡುತ್ತಿದ್ದದ್ದಲ್ಲದೇ ಇದ್ದದ್ದರಲ್ಲೇ ಸಂತೋಷವಾಗಿ ಹಂಚಿಕೊಂಡು ತಿನ್ನುತ್ತಿದ್ದ ಕಾರಣ ಅಷ್ಟು ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಇರುತ್ತಿದ್ದರು.

ಅದಕ್ಕೆ ಏನೋ 70ರ ದಶಕದಲ್ಲಿ ಬಂದ ಭೂತಯ್ಯನ ಮಗ ಅಯ್ಯೂ ಕನ್ನಡದ ಚಿತ್ರದಲ್ಲಿ ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ ನಾ ಮನಸೋತೆನೆ ಚಿನ್ನ… ಹಾಡಿನಲ್ಲಿ ನಾಯಕಿಯ ಸಣ್ಣದಾದ ನಡುವಿನ ಬಗ್ಗೆ ಸೊಗಸಾಗಿ ಹೇಳಿದ್ದಾರೆ. ಅದೇ 2002ರದ ಹೊತ್ತಿಗೆ ಬಿಡುಗಡೆಯಾದ ಸುದೀಪ್ ಅಭಿನಯದ ಚಂದು ಸಿನಿಮಾದಲ್ಲಿ ಸೊಂಟದ ವಿಸ್ಯಾ ಬೇಡವೋ ಸಿಸ್ಯಾ ಸೊಂಟ ಸೂಪರು ಆದ್ರೇ ಡೇಂಜರೂ… ಎಂಬ ಹಾಡನ್ನೂ ಹೇಳುವ ಮೂಲಕ 3 ದಶಕಗಳಲ್ಲಿ ನಮ್ಮ ಯುವಕ ಯುವತಿಯರಲ್ಲಿ ಆದ ಭಾರೀ ಬದಲಾವಣೆಯನ್ನು ಆ ಹಾಡಿನ ಮೂಲಕ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

post70-80 ರ ದಶಕದವರೆಗೂ ಈ ಪರಿಯ ನಗರೀಕರಣವಾಗದೇ ಇದ್ದು ಮಳೆ ಬೆಳೆಯೂ ಚೆನ್ನಾಗಿ ಆಗುತ್ತಿದ್ದ ಕಾರಣ ಬಹುತೇಕರು ಪಟ್ಟಣದಿಂದ ದೂರವೇ ಉಳಿದು ಹಳ್ಳಿಯಿಂದ ಬೆಳೆಗ್ಗೆ ಎದ್ದು ಹೆಣ್ಣು ಮಕ್ಕಳು ಕಸ ಗುಡಿಸಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಬಿಟ್ಟು ಊರಿನ ಮುಂದಿನ ಕೆರೆಕಡೆಗೆ ಹೋಗಿ ಪಾತ್ರೇ ತೊಳೆದುಕೊಂಡು ಊರ ಹೊರಗಿನ ಸಿಹಿ ನೀರಿನ ಭಾವಿಯಿಂದ ಕುಡಿಯಲು ನೀರು ತಂದು ಮನೆಯ ಮುಂದಿನ ಭಾವಿಯಿಂದ ಬಚ್ಚಲು ಮನೆಗೆ ನೀರು ತುಂಬಿಸಿ, ಮನೆಯವರಿಗೆ ಅಡುಗೆ ಮಾಡಲು ಅಡುಗೆ ಮನೆ ಸೇರಿಕೊಂಡರೆ, ಬಂದರೆ ಗಂಡಸರು ಕೊಟ್ಟಿಗೆ ಗುಡಿಸಿ ಸಗಣಿ ಬಾಚಿ ತಿಪ್ಪಗೆ ಹಾಕಿ ದನಕರುಗಳನ್ನು ಹೊಡೆದು ಕೊಂಡು ಸೂರ್ಯ ನೆತ್ತಿಗೆ ಬರುವ ವರೆಗೂ ರೆಟ್ಟೆ ಬಗ್ಗಿಸಿ ಬೆವರು ಬರುವ ವರೆಗೂ ಕೃಷಿ ಚಟುವಟಿಕೆಗಳಲ್ಲಿ ಮಾಡುತ್ತಿದ್ದರೆ, ಮನೆಯವರಿಗಾಗಿ ಬಿಸಿ ಬಿಸಿ ಮುದ್ದೇ ಬಸ್ಸಾರು ಮಾಡಿಕೊಂಡು ಹೊಲಕ್ಕೆ ತೆಗೆದುಕೊಂಡು ಬಂದು ಅಲ್ಲೇ ಮರದ ನೆರಳಿನಲ್ಲಿ ಒಟ್ಟಿಗೆ ಕುಳಿತುಕೊಂಡು ಊಟಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕಾರಣ ಮೈಯ್ಯಲ್ಲಿದ ಕೊಬ್ಬೆಲ್ಲಾ ಅವರಿಗೇ ಅರಿವಿಲ್ಲದಂತೆ ಅವರು ಮಾಡುತ್ತಿದ ಕೆಲಸ ಕಾರ್ಯಗಳ ಮೂಲಕ ಕರಗಿ ಹೋಗಿ ಸ್ಥೂಲಕಾಯ ಎನ್ನುವುದರ ಅರಿವೇ ಇರಲಿಲ್ಲ.

foor_mill80ರ ಅಂತ್ಯದ ಹೊತ್ತಿಗೆ ನಿಧಾನವಾಗಿ ಒಂದೊಂದೇ ಯಾಂತ್ರಿಕೃತವಾಗಿ ಬತ್ತ ಕುಟ್ಟುವ ಒನಕೆ ಮತ್ತು ಹಿಟ್ಟು ಬೀಸುವ ಬೀಸೋ ಕಲ್ಲಿನ ಜಾಗದಲ್ಲಿ ಊರಿನಲ್ಲಿ floor millಗಳು ಬಂದವೋ ಒನಕೆ ಮತ್ತು ಬೀಸೋಕಲ್ಲು ಅಟ್ಟ ಸೇರಿಕೊಂಡವು. ಇನ್ನು ರುಬ್ಬಲು, ತಿರುವಲು ಬಳಸುತ್ತಿದ್ದ ಒರಳುಕಲ್ಲಿನ ಜಾಗಕ್ಕೆ mixer grinder/wet grinderಗಳು ಬಂದು ಹೆಣ್ಣು ಮಕ್ಕಳನ್ನು ಮತ್ತಷ್ಟು ಸೋಮಾರಿಗಳನ್ನಾಗಿಸಿತು ಎಂದರೂ ತಪ್ಪಾಗದು. ಇನ್ನು ಕಾಡೆಲ್ಲಾ ಕಡಿದು ನಾಡು ಮಾಡಿದ ಕಾರಣ ಮಳೆ ಎಲ್ಲವೂ ಕಡಿಮೆ ಆಗಿ ಅಂತರ್ಜಲ ಮಟ್ಟ ಕುಸಿದು ಊರಿನ ಬಾವಿಗಳು ಬರಿದಾದಾಗ ನೂರಾರು ಅಡಿಗಳ ಆಳಕ್ಕೆ ಕೊಳವೇ ಭಾವಿ ಕೊರೆದು ಅದಕ್ಕೆ ಮೋಟರ್ ಪಂಪ್ ಅಳವಡಿಸಿ, ಯಾವಾಗ ಸ್ವಿಚ್ ಒತ್ತಿದ ತಕ್ಷಣ ನೀರು ಬರಲು ಆರಂಭಿಸಿತೋ, ಅದುವರೆಗೂ ಸಾವಿರಾರು ನೀರಿನ ಕೊಡವನ್ನು ಹೊತ್ತಿದ್ದ ಸೊಂಟಗಳು ನಿಸ್ತೇಜವಾಗಿದ್ದಲ್ಲದೇ ನಿಧಾನವಾಗಿ ದೇಹದಲ್ಲಿ ಕೊಬ್ಬು ನಮಗೇ ಅರಿವಿಲ್ಲದಂತೆಯೇ ಬೆಳೆಯುತ್ತಾ ಹೋಗಿದ್ದಲ್ಲದೇ ಕಲಬೆರಕೆ ಎಣ್ಣೆ, ಆಹಾರಗಳಿಂದ ಮೂವತ್ತಕ್ಕೆಲ್ಲಾ ಕೂದಲು ಬೆಳ್ಳಗಾಗುವುದೋ ಇಲ್ಲವೇ ಸಂಪೂರ್ಣ ಉದುರಿಹೋಗುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ, ದೇಹಕ್ಕೆ ಯಾವುದೇ ವ್ಯಾಯಾಮವಿಲ್ಲದಿರುವ ಕಾರಣ, ಹೆಂಗಸು ಮತ್ತು ಗಂಡಸರು ಎನ್ನುವ ಬೇಧ ಭಾವವಿಲ್ಲದೇ, ಯದ್ವಾ ತದ್ವಾ ದಪ್ಪವಾಗಿ ಸ್ಥೂಲಕಾಯವಾಗುತ್ತಿರುವ ಕಾರಣದಿಂದ ಸಣ್ಣ ವಯಸ್ಸಿನಲ್ಲಿಯೇ ಬಿಪಿ, ಶುಗರ್, ಕಿಡ್ನಿ ತೊಂದರೆ ಅನುಭವಿಸುತ್ತಿದ್ದು 40-45ರ ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗಿ 50+ ಇರುವುದೇ ಬೋನಸ್ ಎನಿಸುವಂತಾಗಿರುವುದು ಸುಳ್ಳಲ್ಲ.

jfಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಎಂದರೆ ಇಂದಿನ ಯುವ ಜನತೆ ಉತ್ತಮ ಆಹಾರಕ್ಕಿಂತ ಜಂಕ್ ಫುಡ್ ಕಡೆಗೆ ಹೆಚ್ಚು ಆಕರ್ಷಿತರಾಗಿರುವುದಲ್ಲದೇ, ಮೇಲೆ ಹೇಳಿದಂತೆ ಯಾವುದೇ ಆರೋಗ್ಯಕರ ದೇಹದಂಡಿಸುವ ಕಾರ್ಯದಲ್ಲಿ ಭಾಗವಹಿಸದಿರುವ ಕಾರಣ ಸಣ್ಣ ವಯಸ್ಸೀಗೇ ಸ್ಥೂಲ ಕಾಯರಾಗಿ, ಡುಮ್ಮ ಅಥವಾ ಡುಮ್ಮಿ ಎನಿಸಿಕೊಂಡು Dummy dummy Duplicate Door No. 88 ಎಂದು ಚಿಕ್ಕವಯಸ್ಸಿನ ಮಕ್ಕಳೂ ಆಡಿಕೊಳ್ಳುವಂತಾಗಿದ್ದಾರೆ. ಹಾಗಾಗಿ ಬಹುತೇಕರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿರುವುದು ತಪ್ಪಲ್ಲವಾದರೂ ಅವರು ಅನುಸರಿಸುತ್ತಿರುವ ಮಾರ್ಗ ತಪ್ಪಾಗಿದೆ.

ನನ್ನ ವಯಕ್ತಿಕ ಅನುಭವದ ಪ್ರಕಾರ ಪ್ರತಿಯೊಬ್ಬರೂ ಆರೋಗ್ಯಕರವಾಗಿರಲು 60% ಆಹಾರ ಪದ್ದತಿ ಮತ್ತು 40% ನಿಯಮಿತ ವ್ಯಾಯಾಮ ಅತ್ಯಾವಶ್ಕಕ. ದುರಾದೃಷ್ಟವಷಾತ್ ಇಂದಿನ ಯುವಕರು ಇವೆರಡರಲ್ಲೂ ಎಡವಿ ಊಟ ತನ್ನಿಷ್ಟ ಎಂದು ಯದ್ವಾ ತದ್ವಾ ತಿಂದು ದೇಹ ಬೆಳಸಿಕೊಂಡು ನಂತರ ನೋಟ ಪರರ ಇಷ್ಟ ಎಂದು ಅದನ್ನು ಬೆವರು ಸುರಿಸದೇ ಕರಗಿಸಿಕೊಳ್ಳುವ ಸಲುವಾಗಿ ಲಕ್ಷಾಂತರ ಹಣ ಖರ್ಚು ಮಾಡಿ Fat shaming ಹಿಂದೆ ಬಿದ್ದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಅದ್ನಾನ್ ಸಾಮಿ ಎಂಬ ಪಾಕ್ ಮೂಲದ ಬಾಲಿವುಡ್ ಗಾಯಕ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಮೂಲಕ ದಿಢೀರ್ ಎಂದು ಸಾಕಷ್ಟು ತೂಕವನ್ನು ತೂಕ ಕಳೆದುಕೊಂಡು ಸಣ್ಣಗಾಗಿ ಎಲ್ಲಗೂ ಮೂಗಿನ ಮೇಲೆ ಬೆರಳಿಡುವಂತ ಮಾಡಿದ ನಂತರ ಬಹುತೇಕರು ಅದೇ shortcut method ಅನುಸರಿಸಲು ಹೋಗಿ ಕಡೆಗೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಕೇಂದ್ರ ಸರ್ಕಾರದ ಸಚಿವ ಅರುಣ್ ಜೇಟ್ಲಿಯವರಂತೂ ತಮ್ಮ ತೂಕ ಇಳಿಸಲು ಒಳಗಾಗಿದ್ದರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದರೆ, ಮೈಸೂರಿನ ಮಾಜಿ ಯುವರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೂ ಕೂಡ ತಮ್ಮ ದೇಹದ ತೂಕವನ್ನು ಒಮ್ಮಿಂದೊಮ್ಮೆಲ್ಲೆ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಫಲಾಕಾರಿಯಾಗದ ಕಾರಣವೇ ಅವರು ದೇಹಾಂತ್ಯವಾದರು ಎಂದು ಓದಿದ ನೆನಪು. ಇನ್ನು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕೂಡಾ ತಮ್ಮ ದೇಹದ ತೂಕವನ್ನು ಅಸಾಂಪ್ರಾದಾಯಕವಾಗಿ ಕಡಿಮೆ ಮಾಡಿಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಚಿಕಿತ್ಸೆ ಮಧ್ಯದಲ್ಲಿಯೇ ಕೋಮಾಕ್ಕೆ ಜಾರಿ ಸುಮಾರು ತಿಂಗಳುಗಳ ನಂತರ ಆರೋಗ್ಯವಂತರಾಗಿ ಮನೆಗೆ ಹಿಂತಿರುಗಿ ಬಂದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಾಗದೇ ಮೃತರಾದರೆ, ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಹಾ ಇದೇ ರೀತಿಯ ಧಿಡೀರ್ ಸಣ್ಣಗಾಗಲು ಹೋಗಿ ಹೈರಾಣಾಗಿ ಕಡೆಗೆ ಶಿವನ ಪಾದ ಸೇರಿರುವುದು ಈಗ ಇತಿಹಾಸವಾಗಿದೆ.

ellyಪ್ರೊಫೆಸರ್ ಹಕ್ಸಲೆ ಎಂಬ ಪಾಶ್ಚಾತ್ಯ ಪಂಡಿತರು ಹೇಳಿದ ಹಾಗೆ Be careful, your body is the living temple of God ಅಂದರೆ, ನಮ್ಮ ದೇಹವು ಜೀವಂತ ದೇವರು ಇರುವ ದೇವಾಲಯ ಹಾಗಾಗಿ ಜಾಗರೂಕರಾಗಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ನಮ್ಮ ದೇಹ ಯಾವುದೇ ಪತ್ರವನ್ನೇ ಆಗಲಿ ಸ್ವೀಕಾರ ಮಾಡುವ ಅಂಚೆ ಪೆಟ್ಟಿಗೆ (Post box) ಅಥವಾ ಎಲ್ಲಾ ರೀತೀಯ ಗಲೀಜನ್ನು ಹಾಕಲು ಬಳೆಸುವ ಕಸದ ಡಬ್ಬ( Dust bin) ಅಂತೂ ಅಲ್ಲವೇ ಅಲ್ಲ. ಹಾಗಾಗಿ ಮೊದಲು ನಾವೇ ನಮ್ಮ ದೇಹವನ್ನು ಪ್ರೀತಿಸುವುದನ್ನು ರೂಢಿಮಾಡಿಕೊಳ್ಳಬೇಕು. ನಮ್ಮ ದೇಹ ಸುಸ್ಥಿತಿಯಲ್ಲಿರಲು ಏನು ಬೇಕು? ಏನು ಬೇಡ? ಏನನ್ನು? ಎಷ್ಟು ತಿನ್ನಬೇಕು? ಯಾವುದನ್ನು ಬಿಡಬೇಕು? ನಮ್ಮ ದೇಹಕ್ಕೆ ಅನುಗುಣವಾಗಿ ಎಷ್ಟು ಹೊತ್ತು? ಯಾವ ರೀತಿಯ ವ್ಯಾಯಾಮ ಮಾಡಬೇಕು? ಯಾವ ರೀತಿಯಾಗಿ ನಮ್ಮ ಜೀವನ ಶೈಲಿ ಇರಬೇಕು? ಎಂಬುದನ್ನು ಪಟ್ಟಿ ಮಾಡಿಕೊಂಡು ಅದೇ ರೀತಿಯಾಗಿ ನಿಯಮಿತವಾಗಿ ಪಾಲಿಸಬೇಕು.

ಇಂದಿನ ಯುವಜನತೆ ಎದುರಿಸುತ್ತಿರುವ ಬಹುತೇಕ ರೋಗಗಳಿಗೆ ಸ್ಥೂಲಕಾಯ ಅತ್ಯಂತ ಮಾರಕವಾಗಿದ್ದು ಅದನ್ನು ಹೇಗೆ ಪಡೆದು ಕೊಂಡೆವೋ ಹಾಗೆಯೇ ನಿಧಾನವಾಗಿ ನಿಯಮಿತವಾದ ವ್ಯಾಯಾಮ ಮತ್ತು ಯೋಜಿತ ಆಹಾರ ಪದ್ದತಿಯ ಮೂಲಕ ಆರೋಗ್ಯಕರವಾದ ರೀತಿಯಲ್ಲಿ ತೂಕವನ್ನು ಕಾಯ್ದುಕೊಳ್ಳುವ ಮೂಲಕ ನಾನಾ ವಿವಿಧ ರೋಗ ರುಜಿನಗಳಿಂದ ಮುಕ್ತರಾಗಿರಬಹುದಾಗಿದೆ. ಇದನ್ನು ಚೆನ್ನಾಗಿಯೇ ಅರಿತಿದ್ದ ನಮ್ಮ ಪೂರ್ವಜರು ಲಂಘನಂ ಪರಮೌಷಧಂ ಎಂದರೆ ಉಪವಾಸವೇ ಸಕಲ ಖಾಯಿಲೆಗಳಿಗೆ ಪರಮೌಷಧ ಎಂದು ಹೇಳಿದ್ದಾರೆ. Something is better than nothing ಎನ್ನುವಂತೆ, ಯಾವುದೇ ರೀತಿಯ ವ್ಯಾಯಾಮವನ್ನೇ ಮಾಡದೇ ಇರುವುದಕ್ಕಿಂತಲೂ, ಅಲ್ಪ ಸ್ವಲ್ಪ ನಮ್ಮ ದೇಹಕ್ಕೆ ಅನುಗುಣವಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ. ವಾರದಲ್ಲಿ ಕನಿಷ್ಠ ಪಕ್ಷ ನಾಲ್ಕೈದು ದಿನಗಳಾದರೂ ದಿನದಲ್ಲಿ 30-60 ನಿಮಿಷ ವ್ಯಾಯಾಮ ಮಾಡುವುದು ಅತ್ಯುತ್ತವಾದ ಅಭ್ಯಾಸ. ಯಾವುದೇ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ದೇಹವನ್ನು ದಂಡಿಸಲು ಮತ್ತು ಸುಸ್ಥಿತಿಯಲ್ಲಿಡಲು ದೀರ್ಘ ನಡಿಗೆ ಮತ್ತು ಯೋಗಾಸನ ಮತ್ತು ಪ್ರಾಣಾಯಾಮಗಳು ಅತ್ಯುತ್ತಮ ವಿಧಾನಗಳಾಗಿವೆ. ಅದರಲ್ಲೂ ಸೂರ್ಯ ನಮಸ್ಕಾರದ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚಿನ Calories burn ಮಾಡಬಹುದಾಗಿದೆ.

ಇಂದಿನ ಜನರ ಪರಿಸ್ಥಿತಿ ಹೇಗಿದೆ ಎಂದರೆ,

ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು
ಬೈಕ್ ಓಡಿಸಿ ಬೆನ್ನು ನೋವಾಗಿ ಕಾರ್ ಬಂತು
ಕಾರ್ ಓಡಿಸುವಾಗ ಕೈಕಾಲು ಆಡಿಸದ ಕಾರಣ ಹೊಟ್ಟೆ ಬಂತು
ಆ ಹೊಟ್ಟೆ ಕರಗಿಸಲು ಮತ್ತೆ ಜಿಮ್ಮಿನಲ್ಲಿ ಸೈಕಲ್ ತುಳಿಯುವ ಹಾಗಾಯ್ತು

belly2ಮೊದಲು ನಾಲಿಗೆಯನ್ನು ಹಿಡಿತಲ್ಲಿ ಇಟ್ಟು ಕೊಳ್ಳಲಾಗದೇ ಉಟತನ್ನಿಷ್ಟ ಎಂದು ಸಿಕ್ಕಾ ಪಟ್ಟೆ ತಿಂದು ದಪ್ಪಗಾಗಿ ನಂತರ ಮತ್ತೊಬ್ಬರ ಕಣ್ಣಿಗೆ ಸಣ್ಣಗೆ ಕಾಣುವ ಸಲುವಾಗಿ ಕಳೆದ ವಾರವಷ್ಟೇ, ಕಿರುತೆರೆ ನಟಿಯೊಬ್ಬರು ದೇಹದ ಕೊಬ್ಬು ಕರಗಿಸಲು ತನ್ನ ಪೋಷಕರು ಮತ್ತು ಸ್ನೇಹಿತರಿಗೂ ಹೇಳಿದೇ, ಶಸ್ತ್ರಚಿಕ್ತಿತ್ಸೆಗೆ ಒಳಗಾಗಿ ಚಿಕಿತ್ಸೆಯ ಸಮಯದಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿದ ಕಾರಣ ಅಸುನೀಗಿರುವುದು ನಿಜಕ್ಕೂ ದುಃಖಕರವೇ ಸರಿ. ಮೇಲ್ನೋಟಕ್ಕೆ ಇದು ಎಷ್ಟೇ ವೈದ್ಯರ ನಿರ್ಲಕ್ಷ್ಯ ಎಂಬಂತೆ ಕಂಡರೂ, ಚಿಕಿತ್ಸೆಯ ಸಮಯದಲ್ಲಿ ಆಗ ಬಹುದಾದ ಅವಘಢಗಳಿಗೆ ವೈದ್ಯರು ಜವಾಬ್ಧಾರಲ್ಲಾ ಎಂಬ ಎಲ್ಲಾ ರೀತಿಯ ಕರಾರು ಪತ್ರಗಳಿಗೆ ಸಹಿ ಹಾಕಿಸಿಕೊಂಡಿರುವ ಕಾರಣ ಕಾನೂನಾತ್ಮಕವಾಗಿ ವೈದ್ಯರನ್ನೇನು ಮಾಡಲಾಗದು. ಈಗ ಎಷ್ಟೇ ಬಡಿದಾಡಿದರೂ ಹೋದ ಜೀವವನ್ನು ಮರಳಿ ತರಲಾಗದ ಕಾರಣ, ಈ ಲೇಖನವನ್ನು ಓದಿದ ನಂತರವಾದರೂ ವ್ಯಾಯಮ ಮತ್ತು ಸರಿಯಾದ ಆಹಾರ ಪದ್ದತಿಗಳಿಲ್ಲದೇ ದಿಢೀರ್ ಎಂದು ಸಣ್ಣಗಾಗುವುದು ಆಘಾತಕಾರಿ ವಿಷಯ ಎಂದು ತಿಳಿದು ಯಾರು ಏನೇ ಹೇಳಿದರೂ ಅದನ್ನು ತಲೆಗೆ ಹಾಗಿಕೊಳ್ಳದೇ, ನಾವು ಹೇಗಿದ್ದೇವೋ ಅದನ್ನೇ ಒಪ್ಪಿಕೊಂಡು ಬದುಕುವುದು ಉತ್ತಮ.

hemicalಇನ್ನೂ ಕೆಲವರು ಗುಳಿಗೆ ಮತ್ತು ಪುಡಿಗಳ ರೂಪದಲ್ಲಿ ರಾಸಾಯನಿಕ ವಸ್ತುಗಳನ್ನು ಸೇವಿಸಿ ಹಲವರು ತೂಕ ಇಳಿಸಿಕೊಂಡಿರುವ ಉದಾಹರಣೆ ಇದ್ದರೂ, ಅದರಿಂದ ಸದ್ಯಕ್ಕೆ ಜೀವಕ್ಕೆ ಅಪಾಯ ಇಲ್ಲದೇ ಇದ್ದರೂ, long term ನಲ್ಲಿ ಖಂಡಿತವಾಗಿಯೂ ಅದರ ಅಡ್ಡಪರಿಣಾಮವನ್ನು ಅನುಭವವಿಸಲೇ ಬೇಕಾಗುತ್ತದೆ. Thyroid, BP, sugar ಮುಂತಾದವುಗಳಿಗೆ ಕಟ್ಟು ನಿಟ್ಟಿನ ಆಹಾರ, ನಿಯಮಿತವಾದ, ಅಷ್ಟೇ ಹಿತಮಿತವಾದ ವ್ಯಾಯಾಮ ಮಾಡಿಕೊಳ್ಳುವ ಮೂಲಕ ನೆಮ್ಮದಿಯ ಜೀವನವನ್ನು ಸಾಗಿಸಬಹುದಾಗಿದೆ. There is no shortcut for success in life ಎನ್ನುವುದನ್ನು ಮನಗಂಡು ಬೇಸಿಗೆಯಲ್ಲಿ ಒಣಗುವ, ಚಳಿಯಲ್ಲಿ ಬೆದರುವ ಈ ಹುಲುಶರೀರಕ್ಕೆ ? ಒಂದು ದಿನ ಜೀವನ ಮುಗಿಸಲೇ ಬೇಕಾದ ಈ ಶರೀರಕ್ಕೆ ಅನಗತ್ಯವಾದ ಹಿಂಸೆಯನ್ನು ತೆಗೆದುಕೊಳ್ಳದೇ ಆರಾಮಾಗಿ ಇರೋಣ. ಜೀವ ಇದ್ದಲ್ಲಿ ಮಾತ್ರವೇ ಜೀವನ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಪೂರ್ಣಾಂಕ

sslc42022ರ ಮಾರ್ಚ್ ತಿಂಗಳಿನಲ್ಲಿ ಹತ್ತನೇ ತರಗತಿಯ ಪರೀಕ್ಶೆಗಳನ್ನು ಯಶಸ್ವಿಯಾಗಿ ಮುಗಿಸಿ, ಏಪ್ರಿಲ್ ತಿಂಗಳಿನಲ್ಲಿ ಮೌಲ್ಯಮಾಪನವನ್ನೂ ಮುಗಿಸಿ, ಮೇ 19 ಕ್ಕೆ ಫಲಿತಾಂಶಗಳನ್ನು ಪ್ರಕಟಮಾಡಿರುವುದಕ್ಕೆ ಶಿಕ್ಷಣ ಮಂತ್ರಿಗಳೂ ಸೇರಿದಂತೆ ಇಡೀ ಶಿಕ್ಷಣ ಇಲಾಖೆಗೊಂದು ಹೃತ್ಪೂರ್ವಕ ಅಭಿನಂದನೆಗಳು. ರಾಜ್ಯದಲ್ಲಿ ಈ ಬಾರಿ 853438 ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಒಟ್ಟು 730881 ವಿದ್ಯಾರ್ಥಿಗಳು ಶೇ 85.6 ಸರಾಸರಿಯಲ್ಲಿ ತೇರ್ಗಡೆಯಾಗಿರುವುದು ಬಹಳ ಸಂತೋಷಕರವಾದ ವಿಷಯವಾಗಿದೆ. ಆದರೆ ಈ ಲೇಖನ ಬರೆಯಲು ಪ್ರೇರಣಾದಾಯಕವಾದ ಮತ್ತೊಂದು ಅಂಶವೆಂದರೆ ಈ ಬಾರಿ 145 ವಿಧ್ಯಾರ್ಥಿಗಳು 625/625 ಅಂಕಗಳೊಂದಿಗೆ 100% ಫಲಿತಾಂಶವನ್ನು ಪಡೆದಿದ್ದು ಅದರಲ್ಲಿ 21 ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಓದಿದವರಾಗಿದ್ದಾರೆ ಎನ್ನುವುದು ಗಮನಾರ್ಹವಾದ ವಿಷಯವಾಗಿದೆ.

sslc60-70 ರ ದಶಕದವರೆಗೂ ಪರೀಕ್ಷೇಯಲ್ಲಿ ಪಾಸ್ ಆದರೆ ಸಾಕು ಎಂಬಂತಾಗಿದ್ದು ಸರಾಸರಿ 20-30% ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿದ್ದರೆ, 80 ಮತ್ತು 90ರ ದಶಕದಲ್ಲಿ ತೇರ್ಗಡೆಯ ಫಲಿತಾಂಶ ಗಣನೀಯವಾಗಿ ಏರುತ್ತಾ 40-45% ವರೆಗು ತಲುಪಿ ಮೊದಲ ದರ್ಜೆಯಲ್ಲಿ (60%) ಪಡೆದರೂ ಸಾಕು ಎನ್ನುವಂತಹ ಪರಿಸ್ಥಿತಿ ಕ್ರಮೇಣ ಬದಲಾಗುತ್ತಾ ಹೋಗಿ 80% – 90% ತೆಗೆದುಕೊಂಡ ವಿದ್ಯಾರ್ಥಿಗಲೂ ಕಡಿಮೆ ಅಂಕ ಬಂದಿದೆ ಎಂದು ದುಃಖ ಪಟ್ಟು ಕೆಲವು ದುರ್ಬಲ ವಿದ್ಯಾರ್ಥಿಗಳು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವ ಉದಾಹರಣೆ ಇದೆ.

ranjithಬಹುಶಃ ಕರ್ನಾಟಕ ಶಿಕ್ಢಣ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ, 2016ರಲ್ಲಿ ಭದ್ರಾವತಿಯ ವಿದ್ಯಾರ್ಥಿ ರಂಜನ್ ಎಸ್ 625/625 ಅಂಕಗಳೊಂದಿಗೆ 100% ಫಲಿತಾಂಶವನ್ನು ಪಡೆದು ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ ನಂತರ 2018 ರಲ್ಲಿ ಮೈಸೂರಿನ ಸದ್ವಿದ್ಯಾ ಹೈಸ್ಕೂಲ್‌ನ ಯಶಸ್ ಎಂ ಎಸ್ ಮತ್ತು ಬೆಂಗಳೂರಿನ ಹೋಲಿ ಚೈಲ್ಡ್ ಆಂಗ್ಲ ಶಾಲೆಯ ವಿದ್ಯಾರ್ಥಿ ಸುದರ್ಶನ್ ಕೆ ಎಸ್ ಶೇ 100 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡ ನಂತರ ಶೇ 100 ಅಂಕಗಳಿಸುವುದೇ ಮಾನದಂಡವಾಗಿ  ಮತ್ತೆ 2019ರಲ್ಲಿ 02 ವಿದ್ಯಾರ್ಥಿಗಳು, 2020 ರಲ್ಲಿ 06 ವಿದ್ಯಾರ್ಥಿಗಳು, 2021 158 ವಿದ್ಯಾರ್ಥಿಗಳು (ಕೋವಿಡ್ ನಿಂದಾಗಿ ಪೂರ್ಣ ಪ್ರಮಾಣದ ಪರೀಕ್ಷೆ ನಡೆದಿರಲಿಲ್ಲ) ಪ್ರಸ್ತುತ 2022ರಲ್ಲಿ ನಡೆದ ಪೂರ್ಣಪ್ರಮಾಣದ ಪರೀಕ್ಷೆಯಲ್ಲಿ 145 ವಿದ್ಯಾರ್ಥಿಗಳು ಶೇ 100 ಅಂಕಗಳಿಸಿರುವುದು ನಿಜಕ್ಕೂ ಅಚ್ಚರಿಯ ಜೊತೆಗೆ ಶಿಕ್ಷಣ ಗುಣಮಟ್ಟದೆಡೆಗೆ ಅಥವಾ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ರೀತಿಯ ಬಗ್ಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರೂ ತಪ್ಪಾಗದು.

ಈ ಕುರಿತಂತೆ ಇಂದಿನ education system ಸರಿಯಿಲ್ಲ, ಶಾಲೆಗಳು ಸರಿಯಿಲ್ಲ ಎಂದು ಕೆಲವರು ಟೀಕೆಗಳನ್ನು ಮಾಡಲಾರಂಭಿಸಿದರೆ, ನಿಮ್ಮ‌ಮನೆಯ ಮಕ್ಕಳು ಇದೇ ರೀತಿ ಪೂರ್ಣಾಂಕಗಳನ್ನು ಪಡೆದಿದ್ದರೆ, ನಿಮ್ಮ ನಿಲುವು ಹೀಗೆಯೇ ಇರುತ್ತಿತ್ತೇ ಎಂಬ ಸವಾಲನ್ನು ಕೆಲವರು ಹಾಕುವ ಮೂಲಕ ವಾದ ವಿವಾದಗಳ ಚರ್ಚೆ ನಡೆಯುತ್ತಿದೆ.

ಸಾಧಾರಣವಾಗಿ ಗಣಿತ ಮತ್ತು ವಿಜ್ಣಾನಗಳಲ್ಲಿ 100% ತೆಗೆದುಕೊಳ್ಳುವುದು ಸುಲಭವಾದರೂ, ಭಾಷಾ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ತೆಗೆದುಕೊಳ್ಳುವುದು ತುಸು ಕಷ್ಟಕರವೇ ಸರಿ. ಪರೀಕ್ಷೆಯ ಮೂರು ಗಂಟೆಯ ಅವಧಿಯಲ್ಲಿ ಒಂದೂ ತಪ್ಪಿಲ್ಲದೇ ಭಾಷಾ ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಅಷ್ಟು ಸುಲಭವಲ್ಲ ಎಂಬ ಭಾವನೆಯಿಂದಲೇ 2016ರಲ್ಲಿ 100% ಅಂಕಗಳನ್ನು ಗಳಿಸಿದ್ದ ಭದ್ರಾವತಿಯ ವಿದ್ಯಾರ್ಥಿ ರಂಜನ್ ಎಸ್ ಉತ್ತರ ಪತ್ರಿಕೆಯ ನಕಲನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಮಾದರೀ ಉತ್ತರ ಪತ್ರಿಕೆಯನ್ನಾಗಿ ತೋರಿಸಬೇಕೆಂದು ನನ್ನನ್ನೂ ಒಳಗೊಂಡು ಹಲವರು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದದ್ದರೂ ಅದು ನೆನೆಗುದಿಗೆ ಬಿದ್ದಿತ್ತು. ಈಗ ಈ ಪ್ರಮಾಣದ ವಿದ್ಯಾರ್ಥಿಗಳು 100% ಅಂಕಗಳನ್ನು ಗಳಿಸಿರುವಾಗ ಖಂಡಿತವಾಗಿಯೂ ಅವರ ಉತ್ತರ ಪತ್ರಿಕೆಗಳನ್ನು ಎಲ್ಲರಿಗೂ ಭಹಿರಂಗ ಪಡಿಸಿದಾಗ ಎಲ್ಲರ ಅನುಮಾನಗಳೂ ಪರಿಹಾರವಾಗಿ ಮುಂದಿನ ಮಕ್ಕಳಿಗೆ ಪ್ರೇರಣಾದಾಯಕವಾಗಬಲ್ಲದು.

ಹಿಂದೆಲ್ಲಾ ಮೌಲ್ಯಮಾಪಕರು ಹಾಕಿದ್ದೇ ಅಂಕ ಎಂಬಂತಾಗಿ, ಯಾರೋ ಯಾರೋ ಗೀಚೀ ಹೋದಾ.. ಹಾಳು ಹಣೆಯ ಬರಹಾ.. ಎನ್ನುವ ಹಾಡಂತಾಗಿತ್ತು. ಆದರೆ ಇಂದು ಯಾರು ಬೇಕಾದರೂ ತಮ್ಮ ಅಂಕಗಳ ಬಗ್ಗೆ ಸಂದೇಹವಿದ್ದಲ್ಲಿ ಸೂಕ್ತವಾದ ಹಣವನ್ನು ಕಟ್ಟಿ ತಮ್ಮ ಉತ್ತರ ಪತ್ರಿಕೆಯ ನಕಲನ್ನು ಪಡೆದು ಮೌಲ್ಯಮಾಪನವನ್ನೇ ಪುರರ್ಮೌಲ್ಯಮಾಪನ ಮಾಡಿ ತಕರಾರು ಇದ್ದಲ್ಲಿ ಶಿಕ್ಶಣ ಇಲಾಖೆಗೆ ದೂರು ಸಲ್ಲಿಸಿ ಸರಿ ಪಡಿಸಿಕೊಳ್ಳಬಹುದಾಗಿದೆ. ಅದೇ ರೀತಿ ಮೌಲ್ಯಮಾಪನ ಮಾಡುವಾಗಲೂ ಕೂಡಾ ಯಾವುದೇ ರೀತಿಯ ತಪ್ಪುಗಳಾಗದೇ ಇರಲಿ ಎಂದು 90+ ಅಂಕಪಡೆದ ಉತ್ತರ ಪತ್ರಿಕೆಗಳು ಗುರುತು ಪರಿಚಯವೇ ಇಲ್ಲದ ಆರು ಮೌಲ್ಯಮಾಪಕರಿಂದ ಪರಿಶೀಲಿಸಿದ ನಂತರವೇ ಅವರಿಗೆ ಅಂಕಗಳನ್ನು ನೀಡುವ ಕಾರಣ, ಉತ್ತರ ಬರೆದ ಜಾಣ ವಿದ್ಯಾರ್ಥಿಯ ಪೂರ್ಣಂಕ ಪಡೆದ ಉತ್ತರಪತ್ರಿಕೆಗಳು ಮೌಲ್ಯಮಾಪನ ಸರಿಯಾಗಿಯೇ ನಡೆದಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಪೂರ್ಣಾಂಕ ಪಡೆದ ಮಕ್ಕಳನ್ನೂ ಅವರಿಗೆ ವಿದ್ಯೆ ಕಲಿಸಿದ ಗುರುಗಳನ್ನೂ ಮತ್ತು ಅವರಿಗೆ ಪ್ರೋತ್ಸಾಹ ನೀಡಿದ ತಂದೆ ತಾಯಿಯರನ್ನು ಮನಸಾರೆ ಅಭಿನಂದಿಸಲೇ ಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತ್ಯವೇ ಅಗಿದೆ.

sslc3ಹಾಗಾದರೆ 10-20 ವರ್ಷಗಳ ಹಿಂದಿನ ವಿದ್ಯಾರ್ಥಿಳಲ್ಲಿ ಪೂರ್ಣಾಂಕ ಪಡೆಯಲು ಸಾಮರ್ಥ್ಯವಿರಲಿಲ್ಲವೇ? ಅವರೆಲ್ಲಾ ಅಷ್ಟು ದಡ್ಡರೇ? ಎಂಬ ಜಿಜ್ಣಾಸೆಯೂ ಮೂಡುತ್ತದೆ. ಹೌದು ನಿಜ. ಖಂಡಿತವಾಗಿಯೂ ಈ ಹಿಂದಿನ ವಿದ್ಯಾರ್ಥಿಗಳಲ್ಲಿ ಪೂರ್ಣಾಂಕ ಪಡೆಯುವ ಸಂಪೂರ್ಣವಾದ ಸಾಮ್ಯಥ್ಯವಿತ್ತಾದರೂ ಅಗಿನ ಪರೀಕ್ಷೆ ಮತ್ತು ಮೌಲ್ಯಮಾಪನ ಈಗಿನ ರೀತಿಯಾಗಿ ಸುಲಭವಾಗಿ ಇರಲಿಲ್ಲ. ಆಗ ಪ್ರತಿಯೊಬ್ಬರೂ ಅಂಕಗಳಿಗಿಂತ ವಿಷಯವನ್ನು ಅಧ್ಯಯನ ಮಾಡಿಕೊಂಡು ಮನನ ಮಾಡಿ ಅದನ್ನು ಜೀವನ ಪೂರ್ತಿ ಅಳವಡಿಸಿಕೊಳ್ಳುವತ್ತ ಗಮನಿಸುತ್ತಿದ್ದರು. ಈಗ ಎಲ್ಲವೂ ಅಂಕಮಯವಾಗಿ ಪರಿವರ್ತಿತವಾಗಿ ಸಂತೆಗೆ ತಕ್ಕಂತೆ ಬಂತೆ ಎಂಬಂತೆ ಪ್ರತಿಯೊಂದನ್ನೂ ಉರು ಹೊಡೆದು ಪರೀಕ್ಷೆಯ ಸಮಯದಲ್ಲಿ ಉರುಹೊಡೆದದ್ದನ್ನು ಉತ್ತರ ಪತ್ರಿಕೆಗಳಲ್ಲಿ ಕಕ್ಕಿದ ನಂತರ ಓದಿದ ವಿಷಯವನ್ನೂ ಮರೆತು ಬಿಡುವ ಅನೇಕ ಉದಾರಣೆಗಳನ್ನು ತೋರಿಸಬಲ್ಲೆ. ಅದಕ್ಕೆ ಸರಳವಾದ ಉದಾಹರಣೆಯೆಂದರೆ ಮಗ್ಗಿ. ಈಗ 45+ ಆಗಿರುವ ಬಹುತೇಕರ ಬಳಿ 1-20ರ ವರೆಗಿನ ಮಗ್ಗಿಯನ್ನು ಕೇಳಿದರೆ ಅವರು ಸುಲಭವಾಗಿ ಥಟ್ ಎಂದು ಹೇಳುವ ಸಾಮರ್ಥ ಹೊಂದಿರುತ್ತಾರೆ. ಇಂದು ಶೇ 100% ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಅದಕ್ಕೆ ಖಂಡಿತವಾಗಿಯೂ ತಡವರಿಸುತ್ತಾರೆ. ಮಗ್ಗಿಯೇಕೆ ಬೇಕು? ನಮ್ಮ ಬಳಿ ಕ್ಯಾಲುಕ್ಲೇಟರ್ ಇದೆ. ಮೊಬೈಲ್ ಇದೆ ಅದರಲ್ಲೇ ಸುಲಭವಾಗಿ ಕೂಡು, ಕಳೆ, ಗುಣಾಕಾರ, ಭಾಗಾಕಾರ ಕರಾರುವಾಕ್ಕಾಗಿ ಹಾಕುತ್ತೇವೆ ಎಂಬ ಉದ್ಧಟತನದ ಉತ್ತರವನ್ನು ಹೇಳುತ್ತಾರೆ.

ಅದೂ ಅಲ್ಲದೇ, ಶಿಕ್ಷಣ ಇಲಾಖೆಯವರೇ ಹೇಳಿರುವಂತೆ

 • ಈಗಿನ ಪ್ರಶ್ನಪತ್ರಿಕೆಗಳು ಅತ್ಯಂತ ಸರಳ ಮತ್ತು ಸುಲಭವಾಗಿರುವಂತೆ ತಯಾರಿಸಲಾಗಿರುತ್ತದೆ.
  ಮೊದಲಿದ್ದ 20 ಕಠಿಣ ಪ್ರಶ್ನೆಗಳನ್ನು ಈಗ ೧೦ಕ್ಕೆ ಇಳಿಸಲಾಗಿದೆ.
 • ಒಂದು ಅಂಕದ ಪ್ರಶ್ನೆಗಳೇ ಹೆಚ್ಚಾಗಿವೆ
 • ಬಹು ಆಯ್ಕೆಯ ಪ್ರಶ್ನೆಗಳು
 • 20 ಆಂತರಿಕ ಅಂಕಗಳು ಮತ್ತು 10% ಕೃಪಾಂಕಗಳು

ಹೀಗಿರುವಾಗ ಈ ರೀತಿಯಾಗಿ ಅಂಕಗಳನ್ನು ಪಡೆದು ಶಿಕ್ಷಣ ಪಡೆದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಯಾವ ಪರಿ ಇರುತ್ತದೆ? ಎಂಬುದನ್ನು ಊಹಿಸಬಹುದಾಗಿದೆ. ವಿಜ್ಞಾನ ಮತ್ತು ಗಣಿತಗಳಲ್ಲಿ ಒಂದಂಕ ಮತ್ತು ಬಹು ಆಯ್ಕೆಯ ಪ್ರಶ್ನೆಗಳು ಒಪ್ಪುವಂತಾದರೂ ಭಾಷೇ ಮತ್ತು ಸಮಾಜ ಶಾಸ್ತ್ರದ ವಿಷಯಗಳನ್ನು ಮಂಡಿಸುವಗ ಸುದೀರ್ಘವಾಗಿ ಬರೆದಾಗಲೇ ಆ ವಿದ್ಯಾರ್ಥಿಯ ಭಾಷಾ ಜ್ಞಾನ, ವ್ಯಾಕರಣ, ಪದ ಜೋಡಣೆ, ಕಾಗುಣಿತ ಎಲ್ಲವುದರ ಅರಿವಾಗುತ್ತದೆಯಲ್ಲವೇ? ಇಂದಿನ ಮಕ್ಕಳಿಗೆ ಭಾಷಾ ಜ್ಞಾನವೇ ಇಲ್ಲಾ ವ್ಯಾಕರಣ ಬದ್ಧವಾಗಿ ಸರಿಯಾಗಿ ಎರಡು ಮೂರು ಪದಗಳನ್ನು ಜೋಡಿಸಿಕೊಂಡು ತಡವರಿಸದೇ ಮಾತನಾಡಲೂ ಬರುವುದಿಲ್ಲ ಎನ್ನುವುದರ ಹಿಂದಿನ ಕರಾಳ ಸತ್ಯವನ್ನು ಎಲ್ಲರೂ ಅರಿಯಲೇ ಬೇಕಾಗಿದೆ.

ಈಗಾಗಲೇ ಜಾತಿಯಾಧಾರಿತವಾಗಿ ಎಗ್ಗಿಲ್ಲದೆ ಮೀಸಲಾತಿಯನ್ನು ಏರಿಸಿ (ಇಂದಿಗೂ ಹತ್ತಾರು ಮಠಗಳ ಸ್ವಾಮಿಗಳು ತಮ್ಮ ತಮ್ಮ ಜಾತಿಯ ಮೀಸಲಾತಿ ಹೆಚ್ಚಿಸಲು ಧರಣಿ, ಹೋರಾಟ, ಬ್ಲಾಕ್ಮೇಲ್ ) ಎಂದು ಸರ್ಕಾರದ ಮೇಲೆ ಒತ್ತಾಯ ಹಾಕುತ್ತಾ 30-40% ಅಂಕ ಗಳಿಸಿದವನಿಗೆ ಸರ್ಕಾರಿ ನೌಕರಿಯ ಜೊತೆಗೆ ಕಾಲ ಕಾಲಕ್ಕೆ ಭಡ್ತಿಯನ್ನು ಕೊಡುತ್ತಾ ಸಮಾಜ ಮತ್ತು ಸರ್ಕಾರೀ ಕೆಲಸದ ಗುಣಮಟ್ಟವನ್ನು ಹಾಳು ಗೆಡವಿರುವಾಗ ಮತ್ತೆ ಯಾರನ್ನೋ ಮೆಚ್ಚಿಸಲೋ ಇಲ್ಲವೇ ಎಲ್ಲರೂ ತೇರ್ಗಡೆಯಾಗಲು ಪ್ರಶ್ನೆ ಪತ್ರಿಯನ್ನೇ ಸರಳೀಕರಿಸುವ ಬದಲು ಪರೀಕ್ಷೆಯನ್ನೇ ಮಾಡದೇ ತೇರ್ಗಡೆ ಮಾಡ ಬಹುದಲ್ಲವೆ?

ಹಿಂದಿನ ಗುರುಕುಲದಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಸಂಸ್ಕೃತ, ವ್ಯಾಕರಣ, ಛಂದಸ್ಸು, ವೇದ, ಉಪನಿಷತ್ತು, ಯೋಗ, ಭಗವದ್ವೀತೆಯ ಜೊತೆಗೆ ಸಮಾಜದಲ್ಲಿ ಬೆಳೆದು ದೊಡ್ಡವನಾದ ಮೇಲೆ ಜೀವನದಲ್ಲಿ ಪ್ರಾಯೋಗಿಕವಾಗಿ ಅವಶ್ಯಕವಿದ್ದ ಉಳಿದ ಎಲ್ಲಾ ವಿದ್ಯೆಗಳನ್ನೂ ಕಲಿಸಿಕೊಡುತ್ತಿದ್ದರು. ಅದರಲ್ಲಿ ಭಿಕ್ಷೇ ಬೇಡುವುದೂ ಇಂದು ಶಿಕ್ಷಣ ಪದ್ದತಿಯಾಗಿ, ರಾಜನ ಮಗನಿಂದ ಹಿಡಿದು ಬಿಕ್ಷುಕನ ಮಗನ ವರೆಗೂ ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿದ್ದವರೆಲ್ಲರೂ ತಮ್ಮ ದೈನಂದಿನ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಅಕ್ಕ ಪಕ್ಕದ ಊರಿನಿಂದ ಭಿಕ್ಷಾಟನೆ ಮಾಡಿ ತಂದು ಅದನ್ನೆಲ್ಲಾ ಗುರುಗಳು ಮತ್ತು ಇತರ ವಿದ್ಯಾರ್ಥಿಗಳೊಡನೆ ಹಂಚಿಕೊಂಡು ತಿನ್ನುವ ಪದ್ದತಿ ಇತ್ತು. ಹೀಗೆ ಭಿಕ್ಷೇ ಬೇಡಲು ಹೋದಾಗ ಅವರುಗಳಿಗೆ ಸಮಾಜವನ್ನು ಹತ್ತಿರದಿಂದ ನೋಡುತ್ತಾ ಅಲ್ಲಿನ ಕಷ್ಟ ಸುಖಃಗಳನ್ನು ಅರಿತು ಅದಕ್ಕೆ ತಮ್ಮಿದೇನಾದರೂ ಪರಿಹಾರ ಮಾಡಬಹುದೇ ಎಂದು ಯೋಚಿಸಿ ತಮ್ಮ ಕೈಲಾದ ಮಟ್ಟಿಗೆ ಪರಿಹರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಿದ್ದರು
. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಬೇಡುವಾಗ ಅವರಲ್ಲಿದ್ದ ಅಹಂ ಮಾಯವಾಗಿ ಮತ್ತೊಬ್ಬರ ಬಳಿ ಸಹಾಯ ಕೇಳುವುದು ಮತ್ತು ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಮನಸ್ಥಿತಿ ಅವರಲ್ಲಿ ಬೆಳಿಯುತ್ತಿತ್ತು.

ಸುಮಾರು ಎರಡು ದಶಕಗಳ ಮುಂಚೆಯೂ ಬಹುತೇಕ ಶಾಲೆಗಳಲ್ಲಿ ನೀತಿಶಾಸ್ತ್ರದ ತರಗತಿಗಳು ಇರುತ್ತಿದ್ದರೆ ಹಳ್ಳಿಗಾಡಿನಲ್ಲಿ ಕೃಷಿ ಚಟುವಟುಕೆಗಳು ಮತ್ತು ಇತರೇ ವಿಷಯಗಳ ಪ್ರಾಯೋಗಿಕ ತರಗತಿಗಳು ಇರುತ್ತಿದ್ದವು. ಈಗ ಅವೆಲ್ಲವೂ ಮಾಯವಾಗಿ ಎಲ್ಲವೂ ಅಂಕಮಯವಾಗಿರುವುದರಿಂದಲೇ ಶಿಕ್ಷಣದ ಮಟ್ಟ ಕುಸಿತವಾಗಿದೆ ಎಂದರೂ ತಪ್ಪಾಗದು

ಹೈಜಂಪ್ ಆಗಲೀ ಲಾಂಗ್ ಜಂಪ್ ಸ್ಪರ್ಥೆಗಳಲ್ಲಿ ಪ್ರತೀ ಬಾರಿಯೂ ಪ್ರತೀ ಸ್ಪರ್ಥಿಯೂ ತಾನು ಹಾರುವ ಇಲ್ಲವೇ ನೆಗೆಯುವ ದೂರವನ್ನು ಹೆಚ್ಚಿಸಿ ಕೊಳ್ಳುತ್ತಾ ಹೋಗಿ ಅಂತಿಮವಾಗಿ ವಿಜಯಶಾಲಿಯಾಗುತ್ತಾನೆಯೇ ಹೊರತು ತನ್ನ ಎತ್ತರದ ಮಟ್ಟವನ್ನಗಲೀ ಜಿಗಿಯುವ ದೂರವನ್ನಾಗಲೀ ಕಡಿಮೇ ಮಾಡಿಕೊಳ್ಳುವುದಿಲ್ಲ. ಇದೇ ಮಾನದಂಡ ಶಿಕ್ಷಣ ಕ್ಷೇತ್ರದಲ್ಲಿಯೂ ಅಳವಡಿಕೆಯಾಗಬೇಕಲ್ಲವೇ? ಇಂದಿನ ಮಕ್ಕಳೇ, ದೇಶದ ನಾಳಿದ ಹೆಮ್ಮೆಯ ಪ್ರಜೆಗಳು. ಅಂತಹ ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮವಾದ ಶಿಕ್ಷಣವನ್ನು ಕೊಡಿಸುವುದು ನಮ್ಮ ನಿಮ್ಮದೇ ಕರ್ತವ್ಯವಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ

ಪ್ರಪಂಚದಲ್ಲಿ ಹೆಣ್ಣನ್ನು ಪರಮಪೂಜ್ಯಳೆಂದು ಗೌರವಿಸುವ  ಯಾವುದಾದರೂ ದೇಶದಲ್ಲಿ ಅದು ಖಂಡಿತವಾಗಿಯೂ ನಮ್ಮ ಭಾರತದೇಶ ಎಂದು ಹೆಮ್ಮೆಯಾಗಿ ಹೇಳಬಹುದು. ಅದಕ್ಕಾಗಿಯೇ ನಮ್ಮ ಪೂರ್ವಜರು

ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ | 
ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ ||

ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಅದೇ ರೀತಿ ಎಲ್ಲಿ  ಸ್ತ್ರೀಯರನ್ನು ದೂಷಣೆ ಮಾಡುತ್ತರೋ ಅಲ್ಲಿ ಸಮಾಜವು ನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

chdಹಿಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿ ತಂದರೆ ದ್ದರೆ, ಹೆಂಗಸರು ಮನೆಯಲ್ಲಿಯೇ ಕುಳಿತುಕೊಂಡು ಅವರಿಗಿಂತಲೂ ಹೆಚ್ಚಾಗಿಯೇ ದುಡಿಯುತ್ತಿದ್ದದ್ದಲ್ಲದೇ, ತಮ್ಮ ಮನೆಯ ಗಂಡಸರು ದುಡಿದು ತಂದ  ಸಂಪತ್ತಿನ  ಸಂಪೂರ್ಣ ನಿರ್ವಹಣೆ ಮನೆಯ ಹಿರಿಯ ಹೆಂಗಸಿನ ಕೈಯಲ್ಲಿಯೇ ಇರುತ್ತಿತ್ತು. ಹಾಗಾಗಿಯೇ ಭಾರತದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ನೂರಾರು ರಾಜ್ಯಗಳನ್ನು ಸುಮಾರು ರಾಣಿಯರು ಆಳ್ವಿಕೆ ನಡೆಸಿದ್ದಾರೆ. ಹಾಗೆ ಭಾರತದ ಇತಿಹಾಸದಲ್ಲಿಯೇ  ಅತಿ ಹೆಚ್ಚು ಕಾಲ ರಾಣಿಯಾಗಿ ರಾಜ್ಯವಾಳಿದ ಕೀರ್ತಿ  ಸಾಳ್ವ ವಂಶದ ಕಾಳುಮೆಣಸಿನ ರಾಣಿ ಎಂದೇ ಹೆಸರಾಗಿದ್ದ  ರಾಣಿ ಚೆನ್ನಭೈರಾದೇವಿಗೆ ಸಲ್ಲುತ್ತದೆ. ಆಕೆ ಕ್ರಿಶ 1552ರಿಂದ 1606 ರವರೆಗೆ ಬರೊಬ್ಬರಿ 54 ವರ್ಷಗಳಷ್ಟು ಕಾಲ ಸಂಪದ್ಭರಿತವಾಗಿ ತನ್ನ ರಾಜ್ಯವನ್ನು ಮುನ್ನಡೆಸಿದ್ದಳು.

kk2ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪಾ ಆಗಿನ ನಗರಬಸ್ತಿಕೇರಿಯನ್ನು ರಾಜಧಾನಿಯಾಗಿಸಿಕೊಂಡಿದ್ದ ವಿಜಯನಗರ ಸಾಮ್ರಾಜ್ಯದ ಒಂದು ಮಹಾಮಂಡಳೇಶ್ವರರಾಗಿ, ಸಾಮಂತ ರಾಜರಾಗಿದ್ದರು. ತುಳುವಾ-ಸಾಳುವಾ ವಂಶದವಳಾಗಿದ್ದ ರಾಣಿ ಚೆನ್ನ ಭೈರಾದೇವಿ ಧಾರ್ಮಿಕವಾಗಿ ಜೈನಧರ್ಮವನ್ನು ಆಚರಿಸುತ್ತಿದ್ದದ್ದಲ್ಲದೇ,  ಕಾನೂರು ಕೋಟೆಯನ್ನು ನಿರ್ಮಿಸುವುದರ  ಜೊತೆಗೆ ತನ್ನ ಆಡಳಿತದ ಅವಧಿಯಲ್ಲಿ ನೂರಾರು ಜೈನ ಬಸದಿಗಳನ್ನು ನಿರ್ಮಿಸಿದರು.

ಅಂದಿನ ಕಾಲದಲ್ಲಿ ಉತ್ತರಕನ್ನಡ ಸಾಂಬಾರು ಪದಾರ್ಥಗಳಿಗೆ ಹೆಸರುವಾಸಿಯಾಗಿದ್ದ ಕಾರಣ ಯುರೋಪಿಯನ್ನರು  ಇದೇ ಸಾಂಬಾರು ಪದಾರ್ಥಗಳನ್ನು ಕೊಳ್ಳುವ ಸಲುವಾಗಿ  ಅರಬ್ಬೀ ಸಮುದ್ರದ ಮಾರ್ಗವಾಗಿ  ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಬಂದು ವ್ಯಾಪಾರ ನಡೆಸುತ್ತಿದ್ದರು. ಹಾಗೆ ವ್ಯಾಪಾರಕ್ಕೆ ಬಂದ ಪೋರ್ಚುಗೀಸರು ನಂತರ ಗೋವಾವನ್ನು ವಸಾಹತು ಮಾಡಿಕೊಂಡು ದಕ್ಷಿಣ ಕೊಂಕಣಕ್ಕೆ ತಮ್ಮ ಒಡೆತನವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ಅನುವಾಗಿದ್ದಲ್ಲದೇ,  ತಮ್ಮ ನಾವೆಗಳ ನಿರ್ಮಾಣಕ್ಕೆ ಬೇಕಾದ ಮಾವು, ಗುಳಮಾವು, ಸುರಹೊನ್ನೆ, ಹೆಬ್ಬಲಸು ಮುಂತಾದ ಮರಗಳನ್ನು ಕಡಿದು ಕದ್ದೊಯ್ದು ಇಡೀ ಪಶ್ಚಿಮಘಟ್ಟದ ದಟ್ಟ ಅಡವಿಯನ್ನು ಅಂದೇ ಬೆತ್ತಲಾಗಿಸಲು ಮುಂದಾಗಿದ್ದ ಪೋರ್ಚುಗೀಸರ ಪ್ರಯತ್ನಕ್ಕೆ  ಸಿಂಹಿಣಿಯಂತೆ ತಡೆಗೋಡೆಯಾಗಿ ಅಡ್ಡ ನಿಂತು ಇಡೀ ಕರಾವಳಿ ಪ್ರದೇಶವನ್ನು ಸಂರಕ್ಷಿಸಿದ ಕೀರ್ತಿ ಚೆನ್ನಭೈರಾದೇವಿಗೆ ಸಲ್ಲುತ್ತದೆ. ಪರಂಗಿಯವರೊಡನೆ ಅಗತ್ಯವಿದ್ದಾಗ ಸ್ನೇಹ, ಅನಿವಾರ್ಯವಾದಾಗ ಸಮರ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದವಳು. ಅಪ್ಪಟ  ರಾಷ್ಟ್ರಾಭಿಮಾನದ ಚಿಲುಮೆ,  ಸ್ವಾಭಿಮಾನದ ಸಂಕೇತ, ಧೈರ್ಯ – ಸಾಹಸದ ರೂಪಕವಾಗಿದ್ದ ಚೆನ್ನ ಭೈರಾದೇವಿ. 1559 ರಿಂದ 1570 ರಲ್ಲಿ ಪೋರ್ಚುಗೀಸರ ಮೇಲಿನ ಯುದ್ಧದಲ್ಲಿ ತನ್ನ ಚಾಣಕ್ಯತನದಿಂದ ಪೋರ್ಚುಗೀಸರನ್ನು ಸೋಲಿದ್ದಲ್ಲದೇ ತನ್ನ ತನ್ನ ಜೀವನದುದ್ದಕ್ಕೂ ಪೋರ್ಚುಗೀಸರೊಂದಿಗೆ ಹೋರಾಡಿ ಒಮ್ಮೆಯೂ ಸೋಲದೇ ಸ್ವಾಭಿಮಾನಿಯಾಗಿಯೇ  ಬದುಕಿ ಬಾಳಿದ್ದು  ಆಕೆಯ ಮಹತ್ತರ ಸಾಧನೆಗಳಲ್ಲಿ ಒಂದಾಗಿದೆ.

ರಾಜಕೀಯವಾಗಿ ಪೋರ್ಚುಗೀಸರೊಂದಿಗೆ ವೈಮನಸ್ಯವಿದ್ದರೂ ವ್ಯಾವಹಾರಿಕವಾಗಿ ಅವರೊಂದಿಗೆ ಅಕ್ಕಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಬೆಲ್ಲ, ಬೆತ್ತ, ಗಂಧ, ಶುಂಠಿ, ಲವಂಗ, ದಂತ ಮುಂತಾದ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರಿಂದಲೇ ಪೋರ್ಚುಗೀಸರು ಅವಳನ್ನು Rainha Da Pimenta- The Pepper Queen ಅರ್ಥಾತ್ ಕಾಳುಮೆಣಸಿನ ರಾಣಿ ಎಂದೇ ಕರೆಯುತ್ತಿದ್ದರು. ಕೇವಲ ಪೋರ್ಚುಗೀಸರೊಂದಿಗಷ್ಟೇ ಅಲ್ಲದೇ ಅನೇಕ ದೇಶ ವಿದೇಶಗಳೊಂದಿಗೆ ಸಾಂಬಾರ ಪದಾರ್ಥಗಳ ವ್ಯಾಪಾರವನ್ನು ಅತ್ಯಂತ ಚಾಣಾಕ್ಷತನದಿಂದ ಮಾಡುತ್ತಿದ್ದಳು.

kk1ಗೇರುಸೊಪ್ಪೆಯನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿದರೂ ಪದೇ ಪದೇ ತನ್ನ ಮೇಲೆ ಪೋರ್ಚುಗೀಸರು ಧಾಳಿನಡೆಸುತ್ತಿದ್ದ ಕಾರಣ ತನ್ನ ಗುಪ್ತ ಧನ, ಗುಪ್ತ ದಳ ಮತ್ತು ಆಪತ್ತಿನ ಸಂದರ್ಭದಲ್ಲಿ ತನ್ನ ರಹಸ್ಯ ವಾಸ್ತವ್ಯಕ್ಕೆ ಆಕೆ ಅತ್ಯಂತ ಕಡಿದಾದ ಶಿಖರದ ತುದಿಯಲ್ಲಿದ್ದ ಮತ್ತು ಅತ್ಯಂತ ಸುರಕ್ಷಿತ ಎನಿಸಿಕೊಂಡಿದ್ದ ಕಾನೂರು ಕೋಟೆಯನ್ನು ತನ್ನ ಸಂಪತ್ತನ್ನು ಸಂಗ್ರಹಿಸಿಡಲು ಬಳಸಿಕೊಂಡಳು.

ಆಪತ್ಕಾಲದಲ್ಲಿ ನೆರವಾಗಲೆಂದು ಈ ಕೋಟೆಯಲ್ಲಿ ದವಸ ಧಾನ್ಯ, ಧನ ಕನಕಗಳ ಜೊತೆ ಮದ್ದು ಗುಂಡುಗಳನ್ನೂ ಈ ಕೋಟೆಯಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬುದಕ್ಕೆ  ಅನೇಕ ಸಾಕ್ಷಿಗಳು ಇಂದಿಗೂ ಲಭ್ಯವಿದೆ. ಮೂರು ದಿಕ್ಕಿನಲ್ಲಿಯೂ ಪ್ರಕೃತಿ ನಿರ್ಮಿತ ಸಾವಿರ ಅಡಿಗಳಿಗೂ ಆಳವಾದ ಕಣಿವೆಯನ್ನು ಹೊಂದಿರುವ, ಕಡಿದಾದ ಶಿಖರದೆತ್ತರದಲ್ಲಿ ಅತಿ ಸುರಕ್ಷಿತವಾಗಿದ ಕೋಟೆಯಾಗಿತ್ತು. ಆಕೆ ಮಲೆನಾಡಿನ ಪ್ರಾಂತ್ಯದಿಂದ ಕಾಳು ಮೆಣಸನ್ನು ಖರೀದಿಸಿ ಅದನ್ನು ಶರಾವತಿ ನದಿಯ ದಂಡೆಯ ಮೂಲಕ ಸಾಗಿಸುತ್ತಿದ್ದರಿಂದಲೇ ಆ ಪ್ರದೇಶಕ್ಕೆ ಮೆಣಸುಗಾರು ಎಂಬ ಹೆಸರು ಬಂದಿತ್ತು ಎಂದರೆ ಆಕೆಯ  ಕಾಳು ಮೆಣಸಿನ ವ್ಯಾಪಾರ ಎಷ್ಟರ ಮಟ್ಟಿಗೆ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎಂಬುದರ ಅರಿವಾಗುತ್ತದೆ. ಹಾಗೆ  ಸಂಗ್ರಹಿಸಿದ ಕಾಳುಮೆಣಸನ್ನು ಇದೇ ಕಾನೂರು ಕೋಟೇಯಲ್ಲಿಯೇ ಸುರಕ್ಷಿತವಾಗಿ ದಾಸ್ತಾನು  ಮಾಡುತ್ತಿದ್ದಳು.

kk4ಇದೇ ಸಾಂಬಾರು ಪದಾರ್ಥಗಳನ್ನು ಬೆನ್ನತ್ತಿಯೇ ಗೋವಾದಿಂದ ಬಂದ ಪೋರ್ಚುಗೀಸರ ಕ್ಯಾಪ್ಟನ್ ಲೂಯೀಸ್ ದೆ ಅಟಾಯ್ದೆ 1559ರಲ್ಲಿ 113 ನಾವೆ ಮತ್ತು 2500 ಯೋಧರೊಂದಿಗೆ ಹೊನ್ನಾವರವನ್ನು ಧ್ವಂಸಗೊಳಿಸಿ  ಗೇರುಸೊಪ್ಪೆಯನ್ನು ಆಕ್ರಮಿಸಲು ಬಂದಾಗ ಅಲ್ಲಿನ ನಿರ್ಜನವಾದ ಪ್ರದೇಶವನ್ನು ಕಂಡು ಆಶ್ವರ್ಯ ಚಕಿತನಾಗಿ ಕಡೆಗೆ ರಾಣಿ ಚನ್ನಭೈರಾದೇವಿ ಕಾನೂರಿನಲ್ಲಿರುವುದನ್ನು ತಿಳಿದು ಅದನ್ನು ವಶಪದಿಸಿಕೊಳ್ಳಲು ತನ್ನ ಸೈನ್ಯದೊಂದಿಗೆ ಕಡಿದಾದ ಶಿಖರವನ್ನೇರಲು ತೊಡಗಿದಾಗ ರಾಣಿಯ ಸೈನಿಕರು ಶಿಖರದ ತುದಿಯಿಂದ ಉರುಳು ಗಲ್ಲುಗಳನ್ನು ಪೋರ್ಚುಗೀಸ್  ಸೈನಿಕರ ತಲೆಯ ಮೇಲೆ ಉರುಳಿಸತೊಡಗಿದ್ದನ್ನು ಕಂಡು ಬೆಚ್ಚಿಬಿದ್ದ  ಪೋರ್ಚುಗೀಸ್  ಸೈನಿಕರು ಕಾನೂರು  ಕೋಟೆಯನ್ನು ವಶಪಡಿಸಿಕೊಳ್ಳುವ ಯೋಚನೆಯನ್ನು ಕೈಬಿಟ್ಟು  ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು  ದಿಕ್ಕಪಾಲಾಗಿ  ಪರಾರಿಯಾಗಿ ಕಡಲ ತೀರ ಬಸ್ರೂರಿಗೆ ಮುತ್ತಿಗೆ  ಹಾಕುತ್ತಾರೆ.  ಆಗ ರಾಣಿ ಚೆನ್ನಭೈರಾದೇವಿ ಕಾನೂರಿನಿಂದಲೇ ಬಸ್ರೂರು ದೊರೆಗೆ ಬೆಂಬಲಿಸಿ ಪೋರ್ಚುಗಿಸರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಳು. ಉರುಳುಗಲ್ಲಿನ  ಮೂಲಕ  ಕಾನೂರು ಕೋಟೆಯನ್ನು ರಕ್ಷಿಸಿಕೊಂಡ ಕಾರಣ ಅಂದಿನಿಂದ ಆ ಪ್ರದೇಶ ಉರುಳುಗಲ್ಲು ಎಂದೇ ಹೆಸರಾಗಿದ್ದಲ್ಲದೇ, ಇಂದಿಗೂ ಆ ಕಾನೂರು ಕೋಟೆಯು ಉರುಳುಗಲ್ಲು ಗ್ರಾಮಕ್ಕೇ ಸೇರುತ್ತದೆ.

ಹೊರಗಿನ ಶತ್ರುಗಳನ್ನು ಗುರುತಿಸಿ ಅವರೊಂದಿಗೆ  ಹೋರಾಟ ಮಾಡುವುದು ಸುಲಭ ಆದರೆ ತಮ್ಮೊಂದಿಗೆ  ಮಿತ್ರರಾಗಿದ್ದು ಕೊಂಡು ಸಮಯ ಸಾಧಕರಾಗಿ ಅದೊಂದು ದಿನ ನಮಗೇ ಅರಿವಿಲ್ಲದಂತೆ ತಮ್ಮ ಬೆನ್ನಿಗೆ ಚೂರಿ  ಇರಿಯುವ ಹಿತಶತ್ರುಗಳನ್ನು ಗುರುತಿಸುವುದು ಬಹಳ ಕಷ್ಟಕರವೇ ಸರಿ. ರಾಣಿ ಚನ್ನಬೈರಾದೇವಿಯ  ವಿಷಯದಲ್ಲೂ ಇದೇ ರೀತಿಯಾಗಿ  ಕಾಳುಮೆಣಸಿನ ವ್ಯಾಪಾರದಲ್ಲಿ ವಿದೇಶೀಯರೊಂದಿಗಿದ್ದ ರಾಣಿಯ ಏಕಸ್ವಾಮ್ಯವನ್ನು ಹತ್ತಿಕ್ಕಲು  ಕೆಳದಿ ನಾಯಕರು ಮತ್ತು ಬಿಳಗಿ ಅರಸರು ಹರಸಾಹಸ ಪಡುತ್ತಿದ್ದರು. ಹಾಗಾಗಿ  ಅವರು ವಿದೇಶಿಗರೊಂದಿಗಿನ ವ್ಯಾಪಾರದ ಕೊಂಡಿಯಾಗಿದ್ದ ಬೈಂದೂರು, ಹೊನ್ನಾವರ, ಮಿರ್ಜಾನ ಅಂಕೋಲ ಬಂದರುಗಳನ್ನು ವಶಪಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ, ಕಾನೂರು ಕೋಟೆಯ ಭದ್ರತೆ ಮತ್ತು ಚೆನ್ನಭೈರಾದೇವಿಯ ಪ್ರತಾಪದೆದುರು ಸೋಲನ್ನಪ್ಪುತ್ತಿದ್ದರು.

ಹಾಗಾಗಿ ರಾಣಿಯನ್ನು ಮಣಿಸಲೆಂದೇ, 1606ರಲ್ಲಿ ಕೆಳದಿಯ ಅರಸು ಹಿರಿಯ ವೆಂಕಟಪ್ಪ ನಾಯಕ ಮತ್ತು ಬಿಳಿಗಿಯ ಅರಸರು ಇಬ್ಬರೂ ಪರಸ್ಪರ ಒಂದಾಗಿ ದಳವಾಯಿ ಲಿಂಗಣ್ಣ ಎನ್ನುವ ಸರದಾರನಿಗೆ ಆಮಿಷವೊಡ್ಡಿ ಅವನ ಮೂಲಕ ಮೋಸದಿಂದ  ರಾಣಿಯನ್ನು ಸೆರೆ ಹಿಡಿಸಿ  ಆಕೆಯನ್ನು ಹಳೆ ಇಕ್ಕೇರಿ ಕೋಟೆಯಲ್ಲಿ ಸುಮಾರು ಕಾಲ  ಬಂಧನಲ್ಲಿ ಇಟ್ಟಿದ್ದಾಗಲೇ ಆಕೆ ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ. ಕೆಳದಿಯ ನಾಯಕರು  ಕಾನೂರು  ಕೋಟೆಯನ್ನು ವಶಪಡಿಸಿಕೊಂಡ ನಂತರ ಆದಕ್ಕೆ ಮತ್ತಷ್ಟು ಜೀರ್ಣೋಧ್ದಾರ ಮಾಡಿಸಿದ ನಂತರ ಅದು  ಕೆಳದಿ ಕೋಟೆ ಎಂದೇ ಪ್ರಸಿದ್ಧವಾಗುತ್ತದೆ.

kk5ಇಂದು ಜನಸಾಮಾನ್ಯರಿಗೆ ಕಾನೂರು ಕೋಟೆಗೆ ಹೋಗಲು  ಅರಣ್ಯ ಇಲಾಖೆಯ ಅಪ್ಪಣೆ ಬೇಕಿದ್ದರೂ, ಆ ವೀರ ಮಹಿಳೆಯ ಶಕ್ತಿಕೇಂದ್ರವಾಗಿ, ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆಗೆ ಪುರಾತತ್ವ ಇಲಾಖೆಯಿಂದ ಅವಗಣನೆಗೊಳಗಾಗಿ ವಿನಾಶದ ಅಂಚನ್ನು ತಲುಪಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅಲ್ಲೊಂದು ಭವ್ಯವಾದ ಕೋಟೆ ಇತ್ತು ಎನ್ನುವುದಕ್ಕೆ ಬಾವಿ, ಕಲ್ಲಿನ ದ್ವಜಸ್ಥಂಭ, ರಾಣಿವಾಸ, ಸುರಂಗ ಮಾರ್ಗಗಳು ಕುರುಹುಗಳಾಗಿ ಉಳಿದಿವೆ.

kk6ಆ ಕೋಟೆಯಲ್ಲಿದ್ದ ಜಿನಮಂದಿರ  ಮತ್ತು  ಶಿವಾಲಯ ಇಂದು ಕಳ್ಳ ಖದೀಮರ ಕೈಗೆ ಸಿಕ್ಕು ದಯನೀಯ ಸ್ಥಿತಿ ತಲುಪಿದೆ.  ನಿಧಿಯಾಸೆಗಾಗಿ ದ್ವಜಸ್ಥಂಭವನ್ನು ಉರುಳಿಸಿದ್ದರೆ ಅಲ್ಲಿನ ಶಿವಲಿಂಗವನ್ನು ಭಿನ್ನಗೊಳಿಸಿ ಹೊರಗೆ ಬಿಸಾಡಲಾಗಿದೆ. ಜಿನಮಂದಿರವು ಇಂದೋ ಇಲ್ಲವೇ ನಾಳೆಯೂ ಉರುಳಿ ಬೀಳಬಹುದಾದಂತಹ ದುಃಸ್ಥಿತಿಯಲ್ಲಿದ್ದರೆ  ರಾಣೀ ಚನ್ನಭೈರಾದೇವಿಯ ವಾಸಸ್ಥಾನವಿಂದು ಹಾವು ಮತ್ತು ಹಾವುರಾಣಿಗಳ ವಾಸಸ್ಥಾನವಾಗಿದ್ದು  ಅವುಗಳ ಮಧ್ಯದಲ್ಲಿ ದಟ್ಟವಾಗಿ ಮರ ಗಿಡಗಳು ಬೆಳೆದು ಅವುಗಳ ಬೇರಿನಿಂದಾಗಿ  ಗೋಡೆಗಳಲ್ಲವೂ ಶಿಥಿಲವಾಗಿ ಉದುರಿ ಹೋಗಿದೆ. ರಾಣಿ ಚನ್ನಭೈರಾದೇವಿಯ ಕಾಲದಲ್ಲಿ ಸುವರ್ಣಾವಸ್ಥೆಯಲ್ಲಿದ್ದ ಈ ಕೋಟೆಯ ನಾನಾ ಭಾಗಗಳಲ್ಲಿ ಆಕೆ ಸಾಕಷ್ಟು ನಿಧಿಯನ್ನು ಅವಿತಿಟ್ಟಿರಬಹುದು ಎಂಬ ಅಸೆಯಿಂದಾಗಿ ಇಂದಿಗೂ  ಆ ನಿಧಿಯಾಸೆಗಾಗಿ ಪುಂಡ ಪೋಕರಿಗಳು ರಾತ್ರೋರಾತ್ರಿ ಅನಧಿಕೃತವಾಗಿ  ಎಗ್ಗಿಲ್ಲದ್ದೇ ಎಲ್ಲೆಂದರಲ್ಲಿ  ಅಗೆದು ಬಿಸಾಡಿರುವುದನ್ನು ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ.

koteಪ್ರಸ್ತುತ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ವಿನಾಶದಂಚಿನಲ್ಕಿ ನಿಂತಿರುವ ಕೋಟೆಯ ಹೆಬ್ಬಾಗಿಲು,  ಶಿಥಿಲಾವಸ್ಥೆಯಲ್ಲಿದ್ದು ಬಹುತೇಕ ಉರುಳಿ ಹೋಗಿರುವ  ಕೋಟೆಯ ಗೋಡೆಗಳು,ಬಹುತೇಕ ವಿನಾಶವಾಗಿರುವ ರಾಣೀವಾಸದ ಕಟ್ಟಡ ಮತ್ತು ಅಲ್ಲಿರುವ ಬಾವಿಗಳು, ಸುರಂಗ ಮಾರ್ಗಗಳ ರಕ್ಷಣೆಗೆ ಪುರಾತತ್ವ ಇಲಾಖೆಯಾಗಲೀ, ಸ್ಥಳೀಯ  ಸಾಂಸ್ಕೃತಿಕ ಅಥವಾ ಇತಿಹಾಸ ಅಕಾಡಮಿಗಳಾಗಲೀ  ಗಮನ ವಹಿಸದೇ ಇರುವುದು ನಿಜಕ್ಕೂ  ದೌರ್ಭಾಗ್ಯದ ಸಂಗತಿಯಾಗಿದೆ.  ಇದು ಈ ದೇಶದ ಚರಿತ್ರೆಗೆ ನಾವುಗಳು ಮಾಡುತ್ತಿರುವ ಚರಿತ್ರಾರ್ಹ ಅನ್ಯಾಯವೆಂದರೂ ತಪ್ಪಾಗದು.

kk3ನಿಜ ಹೇಳಬೇಕೆಂದರೆ ಅಂತಹ ಕಗ್ಗಾಡಿನ ನಡುವಿನ ದುರ್ಗಮ ಪರ್ವತದ ನೆತ್ತಿಯಲ್ಲಿ ಇಂತಹ ಆಯಕಟ್ಟಿನ ಸ್ಥಳವೊಂದರಲ್ಲಿ ಅಭೇಧ್ಯ ಕೋಟೆಯನ್ನು ಕಟ್ಟಿ ಅದರಲ್ಲಿ ಸಾಕಷ್ಟು ಧನಕನಕಗಳನ್ನು ಆ ಕಾಲದಲ್ಲಿ ಸುರಕ್ಷಿತವಾಗಿ ಸಂಗ್ರಹಿಟ್ಟಿದ್ದರೆ, ಇಂದಿರುವ ಸಕಲ ಸೌಲಭ್ಯಗಳನ್ನು ಬಳಸಿಕೊಂಡು ಖಂಡಿತವಾಗಿಯೂ ಕಾನೂರು ಕೋಟೆಯ ಗತವೈಭವವನ್ನು ಮರಕಳಿಸಲು ಕೇವಲ ಇಚ್ಚಾಶಕ್ತಿಯ ಕೊರತೆಯಿದೆ ಅಷ್ಟೇ.

ಆಧುನಿಕ ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ಹಣವನ್ನು ಖರ್ಚುಮಾಡುತ್ತಿರುವ ಸರ್ಕಾರ, ಕಾನೂರು ಕೋಟೆಯಂತಹ ಐತಿಹಾಸಿಕ ಮಹತ್ವದ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಅಣಿಗೊಳಿಸಿದಲ್ಲಿ ನಮ್ಮ ಭವ್ಯವಾದ ಪರಂಪರೆ ಮತ್ತು ಈ ನೆಲದ  ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಪರಿಚಯಿಸುವುದರ ಜೊತೆಗೆ ಪ್ರವಾಸಿಗರ ಮನಸ್ಸಿಗೂ  ಮುದ ನೀಡಿದಂತಾಗುತ್ತದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಂಪದ ಸಾಲು ಮಾಸ ಪತ್ರಿಕೆಯ 2022ರ ಮೇ ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.ChennaBairadevi_Sampa