ನಮ್ಮ ಹಿಂದೂಸ್ಥಾನದ ಮೇಲೆ ಸತವಾಗಿ ಎಂಟನೇ ಶತಮಾನಗಳಿಂದಲೂ ಧಾಳಿ ಮಾಡುತ್ತಲೇ ಬಂದ ಮೊಘಲರು ಅಂತಿಮವಾಗಿ ಹನ್ನೆರಡನೇ ಶತಮಾನದಲ್ಲಿ ದೆಹಲಿ ಸುಲ್ತಾನರಿಂದ ಆರಂಭವಾದ ಮೊಘಲ್ ಸಾಮ್ರಾಜ್ಯದ 1800ರ ದಶಕದ ಮಧ್ಯಭಾಗದವರೆಗೂ ಸುಮಾರು 500 ರಿಂದ 700 ವರ್ಷಗಳ ಕಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಮೊಘಲರು ಭಾರತವನ್ನು ಕೇವಲ ಆರ್ಥಿಕವಾಗಿ ಲೂಟಿ ಮಾಡಿದ್ದಷ್ಟೇ ಅಲ್ಲದೇ, ಇಲ್ಲಿನ ಹಿಂದೂಗಳನ್ನು ಆಮಿಷಗಳಿಂದಲೋ ಇಲ್ಲವೇ ಬಲವಂತದಿಂದಲೋ ಆರಂಭಿಸಿದ ಮತಾಂತರ ಸ್ವಾತ್ರಂತ್ರ ಬಂದು 79 ವರ್ಷಗಳ ನಂತರವೂ ವಿವಿಧ ರೂಪದಲ್ಲಿ ನಡೆದುಕೊಂಡು ಬರುತ್ತಲೇ ಇರುವುದು ಆಘಾತಕಾರಿ ವಿಷಯವಾಗಿದೆ.
ಅದರಲ್ಲೂ 2007-2009ರ ಅವಧಿಯಲ್ಲಿ ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹಿಂದೂ ಅಥವಾ ಕ್ರಿಶ್ಚಿಯನ್ ಧರ್ಮೀಯ ಯುವತಿಯರನ್ನು ಕೆಲ ಮುಸ್ಲಿಂ ಯುವಕರು ಪ್ರೀತಿಸುವ ನಾಟಕವಾಡಿ, ಮದುವೆಯ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಅವರಿಗೆ ನಾಲ್ಕಾರು ಮಕ್ಕಳನ್ನು ಕರುಣಿಸಿ ಕಡೆಗೆ ಬೀದಿಗೆ ಇಲ್ಲವೇ ದೂರದ ಊರುಗಳ ವೇಶ್ಯಾವಾಟಿಕೆಗೆ ತಳ್ಳುವ ಧಂದೆಯೊಂದು ನಡೆಯುತ್ತಿದೆ ಎಂದು 2009ರಲ್ಲಿ ಕೇರಳದ ಕ್ಯಾಥೋಲಿಕ್ ಚರ್ಚ್‌ಗಳು ಮತ್ತು ಕರ್ನಾಟಕದ ಸಂಘಟನೆಗಳು ಆರೋಪಿಸಿದ್ದಲ್ಲದೇ ಇಂತಹ ಸಂಘಟಿತ ಮತಾಂತರಕ್ಕೆ ಲವ್ ಜೆಹಾದ್ ಎಂದು ಕರೆದರು. ಇದರ ವಿರುದ್ಧವಾಗಿ ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ (ಮತಾಂತರ ವಿರೋಧಿ ಕಾನೂನು) ಜಾರಿಗೆ ತರಲಾಗಿದ್ದರೂ ಇಂದಿಗೂ ವಿವಿಧ ಆಮಿಷ, ಬಲವಂತ ಇಲ್ಲವೇ ಅಧಿಕಾರಾದ ಮೂಲಕ ಮತಾಂತರ ನಡೆಯುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ಐಟಿ ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆಯ ನಾಸಿಕ್ಕಿನ ಬಿಪಿಓ ಕಚೇರಿಯಲ್ಲಿ ವ್ಯವಸ್ಥಿತ ಲೈಂಗಿಕ ಮತ್ತು ಧಾರ್ಮಿಕ ಶೋಷಣೆಯ ಆರೋಪ ಕೇಳಿ ಬಂದಿದ್ದು ಈ ಸಂಬಂಧವಾಗಿ ಅಲ್ಲಿನ ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಮೇರೆಗೆ ಒಬ್ಬ ಮಹಿಳಾ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರೂ ಸೇರಿದಂತೆ 09 ವ್ಯಕ್ತಿಗಳನ್ನು ಮಹಾರಾಷ್ಟ್ರದ ಪೋಲೀಸರು ಬಂಧಿಸಿದ ಸುದ್ದಿ ಈ ಪಂಚರಾಜ್ಯ ಚುನಾವಣೆಯ ಭರಾಟೆಯಲ್ಲಿ ಮುನ್ನಲೆಗೆ ಬಾರದೇ ಹೋಗಿರುವುದು ವಿಷಾಧನೀಯವಾಗಿದೆ.
ಈ ಮೂದಲು ಬೆಂಗಳೂರಿನ ಕಾರ್ಪೊರೇಟ್ ಕಂಪನಿಗಳಲ್ಲಿ ಉತ್ತರ ಭಾರತೀಯರು, ಮಲೆಯಾಳಿಗಳು ಮತ್ತು ತಮಿಳರ ಪ್ರಾಭಲ್ಯವಿದ್ದು, ಅಲ್ಲಿ ಉನ್ನತ ಹುದ್ದೆಯಲ್ಲಿರುವವರು ತಮ್ಮ ತಂಡಕ್ಕೆ ಅವರವರ ಊರು ಮತ್ತು ಭಾಷಿಕರಿಗೇ ಕೆಲಸ ಕೊಡುವ ಮತ್ತು ಕೆಲಸದಲ್ಲಿ ಭಡ್ತಿ ಕೊಡುತ್ತಿದ್ದ ಆರೋಪ ನಿರಂತವಾಗಿ ಕೇಳಿ ಬರುತ್ತಿತ್ತು. ಆದರೆ ಈಗ ಉದ್ಯೋಗದ ಅಗತ್ಯತೆ ಮತ್ತು ವೃತ್ತಿಜೀವನದ ಬೆಳವಣಿಗೆಯನ್ನೇ ಪ್ರಭಲವಾದ ಅಸ್ತ್ರವಾಗಿ ಬಳಸಿಕೊಂಡು ಪ್ರಸ್ತುತ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಉದ್ಯೋಗ ಕಡಿತದ ಭೀತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಾ, ಹಿಂದೂ ಮಹಿಳಾ ಉದ್ಯೋಗಿಗಳ ಧಾರ್ಮಿಕ ನಿಷ್ಠೆಯನ್ನು ಬದಲಿಸಲು ಅವ್ಯಾಹತವಾಗಿ ಸುಮಾರು ಫೆಬ್ರವರಿ 2022ರಿಂದ ಮಾರ್ಚ್ 2026ರ ಅವಧಿಯಲ್ಲಿ ನಡೆಸುತ್ತಾ, ಅದರಲ್ಲಿ ಭಾಗಶಃ ಯಶಸ್ವಿಯಾಗಿರುವುದು ನಿಜಕ್ಕೂ ಆತಂಕಕಾರಿಯಾದ ಸಂಗತಿಯಾಗಿದೆ. ಸಾಮಾನ್ಯವಾಗಿ ಒಂದು ನಿರ್ಧಿಷ್ಟ ಧರ್ಮದ ಅಥವಾ ಏಕವ್ಯಕ್ತಿಯ ಕಂಪನಿಗಳಲ್ಲಿ ಈ ರೀತಿಯ ಸಂಭನೀಯತೆ ಹೆಚ್ಚಾಗಿದ್ದರೆ, ವೃತ್ತಿಪರತೆಗೆ ಹೆಸರಾಗಿರುವ ಟಿಸಿಎಸ್ ನಂತಹ ಅಪ್ಪಟ ಭಾರತೀಯ ಕಾರ್ಪೊರೇಟ್ ಕಂಪನಿಯಲ್ಲಿ ಈ ರೀತಿಯ ಮತಾಂಧತೆಯ ನಡೆದಿರುವುದು ನಿಜಕ್ಕೂ ಆತಂಕವನ್ನು ಹೆಚ್ಚುಮಾಡಿದೆ.
ಈ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಸೋಬಿಯಾ ಖಾನ್ ಎಂಬ ಮಹಿಳೆ ಹಿಂದೂ ಹುಡುಗಿಯರನ್ನು ನೇಮಕ ಮಾಡಿಕೊಂಡು ಅಂತಹವರುಗಳನ್ನು ನಿರ್ದಿಷ್ಟವಾಗಿ ಇರ್ಫಾನ್ ಶೇಖ್, ಸಾಜಿದ್ ಶೇಖ್, ಸಮೀರ್ ಶೇಖ್, ಅರ್ಷದ್ ಖಾನ್ ಇನ್ನು ಮುಂತಾದ ಮುಸ್ಲಿಂ ನಾಯಕರು ಇರುವ ತಂಡದಲ್ಲೇ ಅವರುಗಳನ್ನು ಸೇರಿಸಲಾಗುತ್ತಿತ್ತು. ಆರಂಭದ ಕೆಲವು ದಿನಗಳಲ್ಲಿ ಅತ್ಯಂತ ಸ್ನೇಹಮಯೀ ಕೆಲಸದ ವಾತಾವರಣವನ್ನು ನಿರ್ಮಿಸುವ ಮೂಲಕ ಆ ಎಲ್ಲಾ ಮಹಿಳಾ ಉದ್ಯೋಗಿಗಳನ್ನು ತಮ್ಮ ಮೋಸದ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ ತಂಡ ನಂತರ ಅನಗತ್ಯವಾಗಿ ಅವರುಗಳ ಮೇಲೆ ಹೆಚ್ಚಿನ ಕೆಲಸಗಳನ್ನು ನೀಡುವ ಮೂಲಕ ಬಲವಂತವಾಗಿ ಒತ್ತಡವನ್ನು ಹೇರಲಾಗುತ್ತಿತ್ತು. ಕೊಟ್ಟ ಕೆಲಸವನ್ನು ನಿಗಧಿತ ಸಮಯದಲ್ಲಿ ಮಾಡದೇ ಹೋದಲ್ಲಿ ಅವರಿಗೆ incentive Cut or lay off (ಕೆಲಸದಿಂದ ತೆಗೆಯುವ) ಮಾಡುವುದಾಗಿ ಬೆದರಿಸಿ, ತಮ್ಮ ಕೆಲಸ ಉಳಿಸಿಕೊಳ್ಳಬೇಕಾದರೆ, ತಮ್ಮೊಂದಿಗೆ ಸಹಕರಿಸಬೇಕು ಎಂಬ ಆಮಿಷವನ್ನು ಒಡ್ಡಲಾಗುತ್ತಿತ್ತು.
ಕುಟುಂಬದ ಆರ್ಥಿಕತೆಯ ಅನಿವಾರ್ಯತೆಯೋ ಇಲ್ಲವೇ ಕೆಲಸವನ್ನು ಕಳೆದುಕೊಳ್ಳುವ ಭಯದಿಂದ ಅವರುಗಳು ಹೇಳಿದ್ದಕ್ಕೆ ಒಪ್ಪಿಕೊಳ್ಳುತ್ತಿದ್ದಂತೆಯೇ ವಾರಾಂತ್ಯದಲ್ಲಿ ಕಾರ್ಪೊರೇಟ್ ಪ್ರವಾಸಗಳ ಸೋಗಿನಲ್ಲಿ ಹತ್ತಿರದ ಹೋಟೆಲ್ ಇಲ್ಲವೇ ರೆಸಾರ್ಟ್‌ಗಳಿಗೆ ಕರೆದೊಯ್ದು ಅವರುಗಳ ಮೇಳೆ ಲೈಂಗಿಕ ಕಿರುಕುಳ/ದೌರ್ಜನ್ಯ ನಡೆಸಿ ಅದರ ವೀಡಿಯೋ ಮಾಡಿಕೊಂಡು ಮುಂದೇ ಅದನ್ನೇ ಬ್ಲ್ಯಾಕ್‌ಮೇಲ್ ಮಾಡುತ್ತಾ ಆ ಅಮಾಯಕ ಹಿಂದೂ ಉದ್ಯೋಗಿಗಳನ್ನು ಬಲಿಪಶುಗಳನ್ನಾಗಿ ಮಾಡಿಕೊಳ್ಳಲಾಗುತ್ತಿತ್ತು.
ಇದಷ್ಟೇ ಅಲ್ಲಡೇ ವೃತ್ತಿಪರತೆಯ ಹೆಸರಿನಲ್ಲಿ ಕುಂಕುಮ ಧರಿಸಿಕೊಳ್ಳುವುದು, ಕೈಗೆ ಬಳೆ ಅಥವಾ ವಿವಿಧ ದಾರಗಳನ್ನು ಕಟ್ಟಿಕೊಳ್ಳುವಂತಹ ಹಿಂದೂ ಧಾರ್ಮಿಕ ಪದ್ದತಿಗಳನ್ನು ನಿಷೇಧಿಸಿದ್ದಲ್ಲದೇ, ಲಿಪ್‌ಸ್ಟಿಕ್ ಧರಿಸುವುದಕ್ಕೂ ಅಕ್ಷೇಪಣೆ ಮಾಡಲಾಗುತ್ತಿತ್ತು. ಇದಲ್ಲದೇ ಆ ಹಿಂದೂ ಮಹಿಳಾ ಉದ್ಯೋಗಿಗಳು ಕಛೇರಿಯ ಸಮಯದಲ್ಲೇ ಅಲ್ಲಿನ ಪ್ರಾರ್ಥನಾ ಕೊಠಡಿಗಳಲ್ಲಿ ಹಿಜಾಬ್ ಧರಿಸಿ ನಮಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು ಎಂಬ ಆರೋಪಗಳೂ ಸಹಾ ಕೇಳಿಬಂದಿದೆ. ಇದಷ್ಟೇ ಅಲ್ಲದೇ, ಹಿಂದೂ ಉದ್ಯೋಗಿಗಳಿಗೆ ಬಲವಂತವಾಗಿ ಮಾಂಸಾಹಾರ, ಅದರಲ್ಲೂ ವಿಶೇಷವಾಗಿ ಗೋಮಾಂಸ ಸೇವಿಸುವಂತೆ ಒತ್ತಾಯಿಸಿ ಅವರ ಸಾಂಸ್ಕೃತಿಕ ಬೇರುಗಳನ್ನು ತುಂಡರಿಸುವ ಪ್ರಯತ್ನವೂ ಸಹಾ ನಡೆದಿದೆ.
ತಮ್ಮ ತಂಡ ಮುಸ್ಲಿಂ ನಾಯಕರುಗಳಿಂದ ಈ ರೀತಿಯ ಅಸಂಬದ್ಧ ನಡವಳಿಕೆಯಿಂದ ಬೇಸತ್ತ ಕೆಲವು ಹಿಂದೂ ಮಹಿಳಾ ಉದ್ಯೋಗಿಗಳು ತಮ್ಮ ಮೇಲೆ ಲೈಂಗಿಕ ಕಿರುಕುಳ, ಧಾರ್ಮಿಕ ಒತ್ತಡ ಮತ್ತು ಪರೋಕ್ಷವಾಗಿ ಮತಾಂತರ ಆಗುವಂತೆ ಬಲಾತ್ಕಾರ ಮಾಡಲಾಗುತ್ತಿದೆ ಎಂದು ಆಲ್ಲಿನ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಅರ್ಥಾತ್ ಎಚ್.ಆರ್ ಮ್ಯಾನೇಜರ್ ಆಗಿದ್ದಂತಹ ಸೋಬಿಯಾ ಖಾನ್ ಎಂಬ ಮಹಿಳೆ ಅಧಿಕಾರಿಕೆ ದೂರು ನೀಡಲೂ ಮುಂದಾದಾಗ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ ಈಗಾಗಲೇ ತಿಳಿಸಿದಂತೆ ಆಕೆಯೂ ಈ ಕುಕೃತ್ಯದ ಭಾಗವಾಗಿದ್ದ ಕಾರಣ, ದೂರುದಾರರಿಗೆ ಆಗೆ ನ್ಯಾಯ ಒದಗಿಸುವ ಬದಲು ಸಂತ್ರಸ್ತರನ್ನೇ ದಬಾಯಿಸಿ ಕಳುಹಿಸುತ್ತಿದ್ದಳು ಎನ್ನಲಾಗಿದೆ. ಇದರ ಕುರಿತಾಗಿ ಯಾರಾದರೂ ಹೆಚ್ಚಿನ ರೀತಿಯಲ್ಲಿ ಅಕ್ಷೇಪಣೆ ಇಲ್ಲವೇ ವಾದ ಮಾಡಿದರೆ, ದೂರು ನೀಡುವವರನ್ನೇ ಕೆಲಸದಿಂದ ತೆಗೆದುಹಾಕುತ್ತೇನೆ ಇಲ್ಲವೇ ನಿಮ್ಮ ಕೆರಿಯರ್ ಹಾಳು ಮಾಡುತ್ತೇನೆ ಎಂದು ಬೆದರಿಕೆಯನ್ನೂ ಆಕೆ ಹಾಕುತ್ತಿದ್ದಳು ಎನ್ನುವ ಆರೋಪ ಮಾಡಲಾಗಿದೆ.
ಹೀಗೆ ಹಿಂದೂ ಮಹಿಳಾ ಉದ್ಯೋಗಿಗಳ ಮೇಲೆ ನಿರಂತವಾಗಿ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿ ಗೋಮಾಂಸ ತಿನ್ನುವಂತೆ ಒತ್ತಡ ಹೇರಿದ್ದ ಎಲ್ಲಾ ವಿಷಯಗಳ ಕುರಿತಾಗಿ ಸ್ವಲ್ಪ ಧೈರ್ಯ ತೋರಿಸಿ ಹತ್ತಿರದ ಪೋಲೀಸ್ ಕಛೇರಿಗೆ ದೂರನ್ನು ಯಾರೂ ಸಹಾ ಸಲ್ಲಿಸದೇ ಇದ್ದ ಕಾರಣ ಇದು ನಿರಂತವಾಗಿ ಜಾರಿಯಲ್ಲಿತ್ತು. ಆದರೆ ಇತ್ತೀಚೆಗೆ ಮದುವೆ ಆಗುತೇನೆ ಎಂಬ ಸುಳ್ಳು ಭರವಸೆ ನೀಡಿ ಸಹೋದ್ಯೋಗಿಯೊಬ್ಬ ತನ್ನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್ ತನಿಖೆ ಆರಂಭವಾಗುವ ಸೂಚನೆ ದೊರೆಯುತ್ತಿದ್ದಂತೆಯೇ ಇನ್ನೂ ಕೆಲವು ಮಹಿಳಾ ಉದ್ಯೋಗಿಗಳೂ ಸಹಾ ಈ ಮತಾಂಧರ ಲೈಂಗಿಕ ಕಿರುಕುಳದ ಪುಂಡಾಂಟದ ಬಗ್ಗೆ ಲಿಖಿತ ದೂರನ್ನು ಸಲ್ಲಿಸಿದ್ದನ್ನು ಗಂಭಿರವಾಗಿ ಪರಿಗಣಿಸಿದ ನಾಸಿಕ್ ಪೊಲೀಸ್ ಇಲಾಖೆಯು ತಮ್ಮ ಏಳು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಮಾರುವೇಷದಲ್ಲಿ ಕೆಲ ದಿನಗಳ ಕಾಲ ಟಿಸಿಎಸ್ ಕಚೇರಿಯಲ್ಲಿ ಗುಪ್ತ ಕಾರ್ಯಾಚರಣೆಗೆ ಕಳುಹಿಸಿದ್ದಾರೆ. ಹೀಗೆ ಪೋಲೀಸರ ಗುಪ್ತ ಕಾರ್ಯಾಚರಣೆ ನಡೆಯುತ್ತಿದ್ದ ಸಂಧರ್ಭದಲ್ಲಿಯೇ ಆರೋಪಿಗಳಲ್ಲಿ ಒಬ್ಬನು ತನ್ನ ಹಿಂದೂ ಮಹಿಳಾ ಸಹೋದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನ್ನು ಗಮನಿಸಿ ಆತನನ್ನು ಕೂಡಲೇ ಆ ಸ್ಥಳದಲ್ಲೇ ಬಂಧಿಸಿ ಅಲ್ಲಿಂದ ತನಿಖೆ ನಡೆಸಿದಾಗ ಆ ಇಡೀ ತಂಡದ ಕುಕೃತ್ಯ ಬಯಲಾಗಿದ್ದು, ಆರೋಪ ಹೊತ್ತ ಎಲ್ಲಾ ನೌಕರರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೋಲೀಸರು ಕರೆದೊಯ್ದಿದ್ದಾರೆ.
ನಾಸಿಕ್‌ನ ಟಾಟಾ ಕನ್ಸಲ್ವೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯಲ್ಲಿ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರದ ಆರೋಪದ ಸುದ್ದಿ ಕಾಳ್ಗಿಚ್ಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಎಚ್ಚೆತ್ತ ಅತ್ಯಂತ ಆತಂಕಕಾರಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಇದು ಅತ್ಯಂತ ಕಖವಳಕಾರಿ ಸುದ್ದಿಯಾಗಿದ್ದು ನಮ್ಮ ಶಾಖೆಯ ಎಂಟು ಮಹಿಳಾ ಉದ್ಯೋಗಿಗಳು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಟಿಸಿಎಸ್, ಸಿಒಒ ಅರು ಸುಬ್ರಮಣಿಯನ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೂ ಆದೇಶಿಸಲಾಗಿದೆ. ಆರೋಪಿಗಳ ವಿರುದ್ಧ ನಡೆಯುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಮಾಡಿದ್ದು, ಕಿರುಕುಳದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ತಮ್ಮ ಕಂಪನಿ ಅನುಸರಿಸುತ್ತಿದ್ದು, ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ.
ಸದ್ಯ ಪೊಲೀಸರು ಆ ಕಛೇರಿಯಲ್ಲಿದ್ದ ಸುಮಾರು 40 ಕ್ಕೂ ಹೆಚ್ಚಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಅದರ ಮೂಲಕ ಆ ಮಹಿಳಾ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳ ವಿರುದ್ಧ ಮಾಡಿರುವ ಆರೋಪಗಳಾದ, ಅಸಭ್ಯವಾಗಿ ಮುಟ್ಟುವುದು, ಅವರ ವೈಯಕ್ತಿಕ ಜೀವನದ ಬಗ್ಗೆ ಅಶ್ಲೀಲ ಹಾಗೂ ಅವಮಾನಕಾರಿ ಟಿಪ್ಪಣಿಗಳು ಮಾಡುವುದು, ದೇಹದ ಬಗ್ಗೆ ಹೀನಾಯವಾಗಿ ಮಾತನಾಡುವುದು, ಬಲವಂತವಾಗಿ ಮಾಂಸಾಹಾರಿ ಆಹಾರ ಸೇವಿಸಲು ಒತ್ತಾಯಿಸುವುದು ಮತ್ತು ಹಿಂಬಾಲಿಸುವುದು ಈ ಎಲ್ಲದರ ಕುರಿತಾಗಿ ಮಾಹಿತಿಗಳು ಮತ್ತು ಸಾಕ್ಷಿಗಳನ್ನು ಸಂಗ್ರಹಿಸಿ ನಿಸ್ಪಕ್ಷಪಾತವಾದ ತನಿಖೆಯನ್ನು ಮುಂದುವರೆಸಿದ್ದಾರೆ.
ಸಾಮಾನ್ಯವಾಗಿ ಭಾರತದಲ್ಲಿರುವ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಇಲ್ಲಿನ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ (ಡಿಇಐ) ನಿಯಮಗಳನ್ನು ಅನುಸರಿಸುತ್ತವೆ. ಅದರಲ್ಲೂ ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ POSH (Prevention of Sexual Harassment) ಅರ್ಥಾತ್ ಲೈಂಗಿಕ ಕಿರುಕುಳ ತಡೆಗಟ್ಟುವಿಕೆಯ ಕುರಿತಾಗಿ ಬಲು ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಲೇ ಬೇಕಾದ ನಿಯಮವಿರುವಾಗ ನಾಸಿಕ್ ನ ಟಿಸಿಎಸ್ ಕಂಪನಿಯಲ್ಲಿ ಮತಾಂಧರು ಆ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿ ಕಾರ್ಪೋರೇಟ್ ಜೆಹಾದ್ ನಡೆಸಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದ್ದು, ಇಂತಹವರಿಗೆ ಕಠಿಣಾತೀತ ಕಠಿಣ ಶಿಕ್ಷೆಯನ್ನು ಕೊಡುವ ಮೂಲಕ ಮುಂದೆ ಯಾವ ಮತಾಂಧರೂ ಯಾವುದೇ ಧರ್ಮದ ಹೆಣ್ಣುಮಕ್ಕಳ ಮೇಲೂ ಈ ರೀತಿಯ ದೌರ್ಜನ್ಯನ್ನನ್ನು ಮಾಡುವುದನ್ನು ತಡೆಯಬಹುದಾಗಿದೆ. ಅಪರಾಧಕ್ಕೆ ಧರ್ಮ ಇಲ್ಲಾ ಎನ್ನುವುದು ಎಷ್ಟು ಸತ್ಯವೋ ಅದೇ ರೀತಿ ಅಪರಾಧಿಗಳಿಗೆ ಧರ್ಮವೇ ಗುರಾಣಿ ಆಗಬಾರದು ಎನ್ನುವುದಾದರೆ, ಆದಷ್ಟು ಬೇಗನೇ ಏಕರೂಪ ನಾಗರೀಕತೆ ಈ ದೇಶದಲ್ಲಿ ಜಾರಿಗೆ ಆಗಬೇಕು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ