ಉಕ್ರೇನ್  ಮತ್ತು ರಷ್ಯಾ ಯುದ್ಧದಲ್ಲಿ ಬಯಲಾದ ಭಾರತೀಯರ ಮನಸ್ಥಿತಿ

ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಉಕ್ರೇನ್ ಮತ್ತು ರಷ್ಯಾ ನಡುವೆ ಒಂದು ರೀತಿಯ ಯುದ್ಧದ ಭೀತಿಯಿದ್ದ ವಿಷಯ  ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ.  ಕನ್ನಡದಲ್ಲಿರುವ ಪ್ರಸಿದ್ಧ ಗಾದೆ ಹುಟ್ತಾ ಹುಟ್ತಾ ಅಣ್ಣಾ ತಮ್ಮಂದಿರು ಬೆಳಿತಾ ಬೆಳಿತಾ ದಾಯಾದಿಗಳು ಎನ್ನುವಂತೆ 90ರ ದಶಕವರೆಗೂ ಈ  ಎರಡೂ ರಾಷ್ಟ್ರಗಳು ಸೋವಿಯತ್ ರಷ್ಯಾದ ಭಾಗವಾಗಿದ್ದವು.  ಆ ಸಮಯದಲ್ಲಿ ಮಿಖಾಯಿಲ್ ಗೊರ್ಬಚೋವ್ ನೇತೃತ್ವದಲ್ಲಿ ಬೀಸಿದ ಬದಲಾವಣೆಯ ಗಾಳಿಯಿಂದಾಗಿ ಪ್ರಪಂಚದ ಅತಿದೊಡ್ಡ ಕಮ್ಯೂನಿಷ್ಟ್ ರಾಷ್ಟ್ರ ಹತ್ತಾರು ರಾಷ್ಟ್ರಗಳಾಗಿ ಛಿದ್ರಗೊಂಡಿದ್ದು ಈಗ ಇತಿಹಾಸ.

ಮೊದಲಿನಿಂದಲೂ  ಇಡೀ ವಿಶ್ವದ ಮೇಲೆ ಪ್ರಭುತ್ವವನ್ನು ಸಾಧಿಸುವ ಸಲುವಾಗಿ ದೊಡ್ಡಣ್ಣ ಪಾತ್ರವನ್ನು ವಹಿಸಿಕೊಳ್ಳುದುವಕ್ಕಾಗಿ ಅಮೇರಿಕಾ ಮತ್ತು ರಷ್ಯಾ ಪರಸ್ಪರ ಪರೋಕ್ಷವಾಗಿ  ಕಿತ್ತಾಡುತ್ತಿದ್ದದ್ದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ರಷ್ಯಾವನ್ನು ಪರೋಕ್ಷವಾಗಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಅಮೇರಿಕಾ ಉಕ್ರೇನಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಲೇ ಹೋದಾಗಾ, ಹೇಗೋ ವಿಶ್ವದ ದೊಡ್ಡಣ್ಣನ ಬೆಂಬಲವಿದ್ದಾಗ ತನಗೇಕೆ ಭಯ ಎಂದು ಐಶಾರಾಮೀ ಜೀವನ ನಡೆಸುತ್ತಲೇ ಅಮೇರಿಕಾದ ಕುಮ್ಮಕ್ಕಿನಿಂದ ರಷ್ಯಾದ  ಮೇಲೆ ಕಾಲು ಕೆರೆದುಕೊಂಡು ಹೋಗಿ ಈಗ ಬೆಣೆಯನ್ನು ತೆಗೆಯಲು ಹೋಗಿ ಬಾಲವನ್ನು ಸಿಕ್ಕಿಸಿಕೊಂಡ ಪರದಾಡಿದ ಇಂಗು ತಿಂದ ಮಂಗನಂತಾಗಿದೆ.

ಉಕ್ರೇನಿನಲ್ಲಿ ಈ ರೀತಿಯ ಕ್ಷಿಪ್ರ ರಾಜಕೀಯ ಬೆಳವಣಿಯನ್ನು ಗಮನಿಸಿದ ಭಾರತ ಸರ್ಕಾರ ಮತ್ತು ಭಾರತೀಯ ಧೂತನಿವಾಸ ಉಕ್ರೇನಿನಲ್ಲಿ ಕೆಲಸ ಮಾಡುತ್ತಿರುವ ಮತ್ತು ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯರಿಗೆ ಎಚ್ಚರಿಕೆಯನ್ನು ನೀಡಿದ್ದಲ್ಲದೇ ಕೂಡಲೇ ಭಾರತಕ್ಕೆ ಹಿಂದಿರುಗ ಬೇಕೆಂದು ಸೂಚಿಸಿತ್ತು

WhatsApp Image 2022-03-03 at 10.58.56 AMಪರಿಸ್ಥಿತಿಯ  ಗಂಭೀರತೆಯನ್ನು ಅರಿಯದೆಯೋ, ಇಲ್ಲವೆ ಭಾರತ ಸರ್ಕಾರವೇ ತಮ್ಮನ್ನು ಕರೆದೊಯ್ಯಲೀ ಎಂಬ  ಉದ್ಧಟನದ ಧೋರಣೆಯಿಂದಾಗಿ ಸರ್ಕಾರದ ಎಚ್ಚರಿಕೆಯನ್ನು ತಳ್ಳಿ ಹಾಕಿದ ಬಹುತೇಕರು ಯುದ್ಧ ಶುರುವಾದ ಕೂಡಲೇ  ಅಂಬೋ ಎಂದು ಗೀಳಿಡಲು ಶುರು ಹಚ್ಚಿಕೊಂಡಿದ್ದಾರೆ.  ಈ ರೀತಿಯ ಆಕ್ರಂದನ ಕೇವಲ ಭಾರತೀಯರದ್ದಾಗಿರದೇ,  ಅಮೇರಿಕಾ, ಚೀನಾ, ಪಾಕೀಸ್ಥಾನ, ಯೂರೋಪಿನ ಬಹುತೇಕ ರಾಷ್ಟ್ರಗಳು   ಉಕ್ರೇನಿನಲ್ಲಿದ  ಅವರ ದೇಶದ ಪ್ರಜೆಗಳಿಗೆ ನಿಮ್ಮ ಜವಾಬ್ಧಾರಿಯನ್ನು ನೀವೇ ನೋಡಿ ಕೊಳ್ಳಬೇಕು ಎಂದು ಕೈ ಎತ್ತಿದರೆ, ಭಾರತ ಸರ್ಕಾರ ಮಾತ್ರಾ, ಆಪರೇಷನ್ ಗಂಗಾ ಎಂಬ ಕಾರ್ಯಾಚರಣೆ  ಆರಂಭಿಸಿ, ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ತುರ್ತಾಗಿ  ಉಕ್ರೇನಿನ ಗಡಿ ದೇಶಗಳಾದ ರುಮೇನಿಯಾ ಮತ್ತು ಮಾಲ್ಡೋವದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ,  ಹಂಗೇರಿಯಲ್ಲಿ  ಹರದೀಪ್ ಸಿಂಗ್, ಸ್ಲೋವಾಕಿಯ ದಲ್ಲಿ ಕಿರಣ್ ರಿಜುಜು ,ಪೋಲೆಂಡಿನಲ್ಲಿ  ಪಿ ಕೆ ಸಿಂಗ್  ಅವರುಗಳು   ಖುದ್ದಾಗಿ ಅಲ್ಲಿಯೇ ಇದ್ದು ನಾಗರೀಕ ವಿಮಾನಗಳಲ್ಲಿ ಹೆಚ್ಚಿನ ಜನರನ್ನು ಕರೆತರಲು ಸಾಧ್ಯವಿಲ್ಲ ಎಂಬುದನ್ನರಿತು,  ಪ್ರಪಂಚದ ಅತಿ ದೊಡ್ಡ ಸರಕು ಸಾಗಾಣಿಕಾ ವಿಮಾನವಾದ ಸಿ-17 ಗ್ಲೋಬ್ ಮಾಸ್ಟ್ ನಲ್ಲಿ ಕರೆತರುವ ವ್ಯವಸ್ಥೆ ಮಾಡುತ್ತಿದ್ದಾರೆ ಇದರ ಅಂಗವಾಗಿ  ಭಾಗವಾಗಿ ಇದುವರೆವಿಗೂ  ಸುಮಾರು 20000ಕ್ಕೂ ಅಧಿಕ ಭಾರತೀಯರನ್ನು ಏರ್ ಲಿಫ್ಟ್ ಮಾಡಿಸಿದ್ದಲ್ಲದೇ, ಮತ್ತಷ್ಟು ವಿಮಾನಗಳನ್ನು ಕಳುಹಿಸಿ ಪ್ರತಿಯೊಬ್ಬ ಭಾರತೀಯರನ್ನೂ ಅಲ್ಲಿಂದ ಕರೆತರುವ ಜವಾಬ್ಧಾರಿಯನ್ನು ಹೊತ್ತಿಕೊಂಡಿರುವುದನ್ನು  ನೋಡಿದ ಇಡೀ ಪ್ರಪಂಚವೇ  ಅಭಿನಂದಿಸಲಾರಂಬಿತೋ,  ವಿರೋಧ ಪಕ್ಷಗಳಿಗೆ ನವರಂಧ್ರಗಳಲ್ಲಿಯೂ ತಡೆಯಲಾರದ ಉರಿಯಲಾರಂಭಿಸಿ ದೇಶಾದ್ಯಂತ ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ.  ಇದು ಮೋದಿ  ಸರ್ಕಾರ ವಿದೇಶಾಂಗ ನೀತಿಯ ದುಷ್ಪರಿಣಾಮ ಎಂದು ಬೊಬ್ಬಿರಿಯಲು ಆರಂಭಿಸಿದರೆ, ಅದೇ ಲೂಟಿಯನ್ಸ್ ಮೀಡಿಯಾ ಸಹಾ ಅದನ್ನೇ ಬಿತ್ತರಿಸಿ ಕೇಂದ್ರ ಸರ್ಕಾರವನ್ನೇ ಖಳನಾಯಕನಂತೆ ಬಿಂಬಿಸಲು ಹೋರಟಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

WhatsApp Image 2022-03-03 at 11.03.08 PMನಿಜ ಹೇಳಬೇಕೆಂದರೆ, ಅಧಿಕಾರಕ್ಕೇರಿದ ಆರಂಭದಲ್ಲಿ ಪ್ರಧಾನಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ವಿದೇಶಗಳನ್ನು ಸುತ್ತುತ್ತಿದ್ದಾಗ ಅವಹೇಳನ ಮಾಡಿದ್ದವರಿಗೆ ಇಂದು ಅವರು ಹಾಗೇಕೆ ಸುತ್ತುತ್ತಿದ್ದರು ಎಂಬ ಪರಿಚಯವಾಗಬೇಕಿತ್ತು. ರಷ್ಯಾ ಮತ್ತು ಉಕ್ರೇನ್ ಪರ ಮತ್ತು ವಿರೋಧದ ಗುಂಪುಗಾರಿಕೆ ಆರಂಭವಾದಾಗ, ರಷ್ಯಾ ಭಾರತದ ಪರ ಸದಾಕಾವಿದ್ದು, ಉಕ್ರೇನ್ ಸದಾಕಾಲ ಭಾರತದ ವಿರುದ್ಧವೇ ಇದ್ದರೂ ಸಹಾ ಭಾರತ  ಈ ಸಂದರ್ಭದಲ್ಲಿ ಎರಡೂ ದೇಶಗಳೊಡನೆ ಸಮಾನ ಅಂತರ ಕಾಯ್ದುಕೊಂಡಿದ್ದಲ್ಲದೇ,  ತಮ್ಮ ದೇಶದ ಪ್ರಜೆಗಳಿಗೆ ಯಾವುದೇ ರೀತಿಯ ತೊಂದರೆ ಮಾಡಬಾರದು ಎಂದು ಎರಡೂ ದೇಶಗಳಿಗೆ ಸೂಚನೆ ನೀಡಿತು.  ಭಾರತದ ಆ ಮನವಿಯನ್ನು ಪುರಸ್ಕರಿಸಿದ ಎರಡೂ ದೇಶಗಳು ಭಾರತದ ಧ್ವಜ  ಹಾಕಿದ್ದ ವಾಹನಗಳು ಮತ್ತು ಭಾರತದ ಪಾಸ್ ಪೋರ್ಟ್ ಹೊಂದಿದ್ದವರಿಗೆ ಯಾವುದೇ ತೊಂದರೆ ನೀಡದೇ ಅವರು ಸುರಕ್ಷಿತವಾಗಿ ಗಡಿ ದಾಟಿ ಅಕ್ಕ ಪಕ್ಕ ದೇಶಕ್ಕೆ ತಲುಪಿದಲ್ಲಿ ಅಲ್ಲಿಂದ ಕರೆದೊಯ್ಯಲು ಭಾರತ ಸರ್ಕಾರದ ವಿಮಾನಗಳು ಸಿದ್ಧವಿದ್ದವು.

ದುರಾದೃಷ್ಟವಷಾತ್, ಕಮ್ಯೂನಿಷ್ಟ್ ಮಾಧ್ಯಮಗಳು, ವಿರೋಧ ಪಕ್ಷಗಳು ಮತ್ತು ತುಕ್ಡೇ ತುಕ್ಡೇ ಗ್ಯಾಂಗ್ ಒಂದಾಗಿ ಏರ್ ಸ್ಟ್ರೈಕ್ ಸಮಯದಲ್ಲಿ ದಾಖಲೆ ಕೇಳಿದಂತೆ  ಸರ್ಕಾರದ ಏರ್ ಲಿಫ್ಟ್ ಸರಿ ಇಲ್ಲಾ ಎಂದು ತೋರಿಸುವುದಕ್ಕಾಗಿ ಕಾಂಗ್ರೇಸ್ ನಾಯಕ  ರಾಜೀವ್ ಶುಕ್ಲಾ ಒಡೆತನದ ನ್ಯೂಸ್ 24, ಉಕ್ರೇನಿನಲ್ಲಿ ನೂರಾರು ಹೆಣಗಳ ರಾಶಿಯ ಮೇಲೆ ಬಟ್ಟೆ ಮುಚ್ಚಿರುವವರ ಮಧ್ಯದಲ್ಲಿ ನಿಂತಿರುವ ಒಬ್ಬ ಹುಡುಗ ತನ್ನನ್ನು ಪಾರು ಮಾಡಿ ಎಂದು ಮೊರೆ ಇಡುತ್ತಿರುವ  ಅಳಲನ್ನು ತೋಡಿಕೊಳ್ಳುತ್ತಿರುವ ದೃಶ್ಯವನ್ನು  ಪ್ರಸಾರ ಮಾಡುತ್ತಿರುವ ಸಮಯದಲ್ಲೇ, ಶವದಂತೆ ಮಲಗಿದ್ದ ವ್ಯಕ್ತಿಯೊಬ್ಬನ್ನು ಇದ್ದಕ್ಕಿದ್ದಂತೆಯೇ ತನ್ನ ಮೇಲೆ ಹೊದ್ದಿಸಿದ್ದ ಬಟ್ಟೆಯನ್ನು ತೆಗೆದಾಗಲೇ ಅದೊಂದು ಸ್ಟುಡಿಯೋ ಸೆಟಪ್ ಎಂದು ಜಗಜ್ಜಾಹೀರಾಯಿತು.

WhatsApp Image 2022-03-02 at 6.29.09 PMಇದೇ ರೀತಿಯಲ್ಲೇ ವೈಶಾಲಿ ಯಾದವ್ ಎಂಬುವ ಹುಡುಗಿ ತಾನು ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯವಳೆಂದೂ, ಮೋದಿ ಹಾಗು ಯೋಗಿ ಸರ್ಕಾರದ ನನಗೆ ಭಾರತಕ್ಕೆ ಬರಲು ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂಬ  ವಿಡಿಯೋ ತುಣುಕುಗಳನ್ನು ಕಳುಹಿಸಿದಾಗ ಅದರ ಸತ್ಯಾಸತ್ಯತೆಯನ್ನು ತಿಳಿಯಲು ಪೋಲೀಸರು ಅವಳ ಊರಿಗೆ ಹೋದಾಗ ತಿಳಿದ ಬಂದ ಆಘಾತಕಾರಿ ವಿಷಯವೇನೆಂದರೆ ಆಕೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರ ಮಗಳಾಗಿದ್ದು ಉತ್ತರ ಪ್ರದೇಶದ ಚುನಾವಣಾ ಸಮಯದಲ್ಲಿ  ಮೋದಿ ಹಾಗು ಯೋಗಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಸಲುವಾಗಿ ಈ ರೀತಿಯ ನಕಲಿ ಸುದ್ದಿಯನ್ನು ಹರಡಿಸುತ್ತಿದ್ದನ್ನು ಖಚಿತಪಡಿಸಿಕೊಂಡು ಈಗ ಪೋಲಿಸರ ಆತಿಧ್ಯ ಪಡೆಯುತ್ತಿದ್ದಾಳೆ.

WhatsApp Image 2022-03-04 at 6.44.28 AMಇನ್ನು ಅಪರೇಷನ್  ಗಂಗಾ ಎಂಬ ಹೆಸರಿಟ್ಟಿದ್ದಕ್ಕೂ ಕರ್ನಾಟಕದ ಹುಂಬ, ತುಷ್ಟೀಕರಣದ ಭಾಗ್ಯಗಳ ಸರದಾರ,  ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಷೇಪಣೆ ವ್ಯಕ್ತಪಡಿಸಿದರೆ, ಇನ್ನು ಬಂಡೆ ವ್ಯಾಪಾರದಲ್ಲಿ ರಾಜ್ಯದ ಗ್ರೈನೈಟ್ ಲೂಟಿ ಮಾಡಿ ಈಗ ಮೇಕೆದಾಟು ಹೆಸರಿನಲ್ಲಿ ಮೋಜು ಮಸ್ತಿಯ ಪಾದಯಾತ್ರೆ ಮಾಡುತ್ತಿರುವ ಬಂಡೆ ಬ್ರದರ್ಸ್ ಮತ್ತವರ ಪಟಾಲಾಂ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಕುಹಕವಾಡಿರುವುದು ನಿಜಕ್ಕೂ  ಹಾಸ್ಯಸ್ಪದ ಎನಿಸುತ್ತಿದೆ.

WhatsApp Image 2022-03-02 at 6.22.21 PMಇವೆಲ್ಲದರ ಮಧ್ಯೆ ಉಕ್ರೇನಿನಲ್ಲಿ ಮೆಡಿಕಲ್ ಓದುತ್ತಿದ್ದ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿ ನವೀನ್ ರಷ್ಯಾದ ಬಾಂಬ್ ಧಾಳಿಯಲ್ಲಿ ಮೃತಪಟ್ಟಿರುವುದು ನಿಜಕ್ಕೂ ದುಃಖಕರವಾಗಿದೆ. ನವೀನ್ ಪಿಯೂಸಿಯಲ್ಲಿ 97% ಅಂಕಗಳನ್ನು ಗಳಿಸಿದ್ದರೂ 35% ಗಳಿಸಿದ ವಿದ್ಯಾರ್ಥಿಗಳಿಗೆ ಜಾತಿಯ ಆಧಾರದಲ್ಲಿ  ಸೀಟ್ ಮೀಸಲಾತಿ ಮಾಡಿದ ಕಾರಣ ದೂರದ ಉಕ್ರೇನಿಗೆ ಸಾಲ ಸೋಲ ಮಾಡಿ ಕಳುಹಿಸಿ ಈಗ ಮಗನನ್ನು ಕಳೆದುಕೊಳ್ಳಬೇಕಾಯಿತು ಅವರ  ತಂದೆಯವರೇ ಖಾಸಗೀ ಛಾನೆಲ್ಲಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರೂ, ನಮ್ಮ ಖನ್ನಢ ಓರಾ(ಲಾ)ಟಗಾರ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಓದಿ ಹೊಟ್ಟೆಯ ಪಾಡಿಗೆ ಕನ್ನಡ ಹೆಸರಿನಲ್ಲಿ ತಿರುಪೆ ಎತ್ತುತ್ತಿರುವ ಟ್ಯೂಬ್ ಲೈಟ್ ಸ್ವಘೋಷಿತ ಹೋರಾಟಗಾರರಿಬ್ಬರೂ ನಂದೆಲ್ಲಿ ಇಡಲೀ ನಂದ ಗೋಪಾಲ ಎಂದು ನವೀನ್ ಸಾಯುವುದಕ್ಕೆ ನೀಟ್ ಪರೀಕ್ಷೇಯೇ ಕಾರಣ. ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳ ಸಂಖ್ಯೆ 60. ಉತ್ತರ ಪ್ರದೇಶದಲ್ಲಿರುವ ಮೆಡಿಕಲ್ ಕಾಲೇಜುಗಳ‌ ಸಂಖ್ಯೆ 55. ಕರ್ನಾಟಕದ ಜನಸಂಖ್ಯೆ 6.4 ಕೋಟಿಯಾದರೆ,‌ ಉತ್ತರಪ್ರದೇಶದ ಜನಸಂಖ್ಯೆ 20.4 ಕೋಟಿ. ನೀಟ್ ಇಲ್ಲದೇ ಹೋಗಿದ್ದಲ್ಲಿ ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳ ಸೀಟ್ ಕನ್ನಡಿಗರಿಗೆ ಸಾಕಾಗುತ್ತಿತ್ತು.  ನೀಟ್ ಬಂದಮೇಲೆ ಸೀಟುಗಳು ಹಿಂದಿ  ರಾಜ್ಯಗಳ ಪಾಲಾಗುತ್ತಿವೆ. ಕನ್ನಡಿಗರ ಜಾಗ, ಕನ್ನಡಿಗರ ದುಡ್ಡು, ಕರ್ನಾಟಕದ ಮೂಲಭೂತ ಸೌಕರ್ಯಗಳು, ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ #BanNEET ಎಂಬ ವ್ಯರ್ಥ ಪ್ರಲಾಪ ಇಟ್ಟಿದ್ದಾರೆ.

ದೇಶದ ಒಕ್ಕೂಟ ವ್ಯವಸ್ಥೆಯ ಅರಿವಿಲ್ಲದೇ ಪ್ರಾದೇಶಿಕವಾಗಿ ಸಂಕುಚಿತ ಮನೋಭಾವನೆಯ ಇಂತಹವವರು  ರಾಜಕೀಯ ತೆವಲುಗಳಿಗೆ ಓಟ್ ಬ್ಯಾಂಕಿಗಾಗಿ ಸ್ವಾತಂತ್ರ್ಯ ಬಂದು 70+ ವರ್ಷಗಳಾದರೂ  ಜಾತಿಯ ಆಧಾರದ ಮೇಲೆ ದೇಶಾದ್ಯಂತ 50% ಸೀಟುಗಳನ್ನು ಮೀಸಲು ಮುಂದುವರೆಸಿಕೊಂಡು ಹೋಗಿರುವ ರಾಜಕಾರಣಿಗಳ ವಿರುದ್ಧವೇಕೆ ಪ್ರತಿಭಟನೆ ನಡೆಸುವುದಿಲ್ಲ ಎನ್ನುವುದು ಚಿದಂಬರ ರಹಸ್ಯವಾಗಿದೆ. ಸ್ವಘೋಷಿತ ಹೋರಾಟಗಾರರು ಹೊಟ್ಟೆ ಪಾಡಿಗಾಗಿ ಚಿಕ್ಕವಯಸಿನಲ್ಲೇ ದೂರದ ಮುಂಬೈಗೆ ಹೋಟೆಲ್/ಬಾರ್ ನಲ್ಲಿ ಕೆಲಸಕ್ಕೆ ಹೋಗಿ ಅಲ್ಲಿಯ ಜನರ ಕೆಲಸ ಕಿತ್ತುಕೊಂಡು ಅವರ  ಹೊಟ್ಟೆಯ ಮೇಲೆ ಹೊಡೆದದ್ದನ್ನು ಇಷ್ಟು ಬೇಗ ಮರೆತರೇ?  ಕನ್ನಡದ ಹೆಸರಿನಲ್ಲಿ ಇವರುಗಳು ಆಚರಿಸುವ ಕಾಟಾಚಾರದ ಉತ್ಸವಗಳಿಗೆ ಪ್ರತೀವರ್ಷವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತೆಗೆದುಕೊಳ್ಳುವ ಕೋಟ್ಯಾಂತರ ರೂಪಾಯಿ ಜನರ ತೆರಿಗೆಯ ಹಣವನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. 

WhatsApp Image 2022-03-03 at 8.04.28 AMಇನ್ನು ಭಾರತದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲಾರದ ವಿದ್ಯಾರ್ಥಿಗಳಷ್ಟೇ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದ ಉಕ್ರೇನ್ ದೇಶಕ್ಕೆ ಹೋಗುತ್ತಾರೆ. ಅಲ್ಲಿ  ಡಿಗ್ರಿ ಪಡೆದವರು ವಾಪಸು ಬಂದು ಇಲ್ಲಿ ಪ್ರಾಕ್ಟೀಸ್ ಮಾಡಲು ಇರುವ  ಅರ್ಹತಾ ಪರೀಕ್ಷೆಯಲ್ಲಿ ಪಾಸಾಗುವುದು ಬಹಳ ಕಡಿಮೆ. ಇನ್ನು  ಅಪ್ಪಿ ತಪ್ಪಿ ಪಾಸಾದರೂ, ಅವರು ಕೊಡುವ ಚಿಕಿತ್ಸೆ ಯಾವ ಮಟ್ಟದಲ್ಲಿ ಇರಬಹುದು?  ಎಂಬ ಆಣಿ ಮುತ್ತನ್ನು  ಕರ್ನಾಟಕದವರೇ ಆದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ನೀಡಿರುವ ಹೇಳಿಕೆಯೂ ಅಷ್ಟೇ ಅಕ್ಷಮ್ಯ  ಅಪರಾಧವೇ ಅಗಿದೆ. ಹೌದು ನಿಜ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಕಾಲೇಜುಗಳ ಸಂಖ್ಯೆ ಕಡಿಮೆ ಇದೆ ಮತ್ತು ವೈದ್ಯಕೀಯ ಶಿಕ್ಷಣದ ಶಿಕ್ಷಣದ ವೆಚ್ಚವೂ ದುಬಾರಿಯಾಗಿದೆ. ಇದರ ಜೊತೆಗೆ ಮೀಸಲಾತಿಯ ಪಿಡುಗೂ ಸಹಾ ಇರುವ ಕಾರಣ, ಮುಂದುವರೆದ ಜಾತಿಯಲ್ಲಿ ಹುಟ್ಟಿದ  ಪ್ರತಿಭಾವಂತ‌ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿಲ್ಲ.ತಾರತಮ್ಯವನ್ನು ಸರಿ ಪಡಿಸುತ್ತೇವೆ ಎಂದು ಹೇಳಿದ್ದರೆ ಅವರನ್ನು ಮೆಚ್ಚಿಕೊಳ್ಳಬಹುದಿತ್ತು.

ಇಷ್ಟೆಲ್ಲಾ ಹೇಳಿದ್ದು ಲೇಖನದ ಮೊದಲಾರ್ಧವಾದರೆ ದ್ವಿತೀಯಾರ್ಧವಂತೂ ಇನ್ನೂ ಅಚ್ಚರಿಯ ಜೊತೆಗೆ ಆತಂಕವನ್ನುಂಟು ಮಾಡುತ್ತದೆ. ಉಕ್ರೇನ್ ಮತ್ತು ರಷ್ಯಾದ ನಡುವಿನ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂಬ ವಿಷಯ ಖಚಿತವಾಗುತ್ತಿದ್ದಂತೆಯೇ, ಭಾರತಿಯ ಧೂತವಾಸ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳು ಮತ್ತು ಇತರೇ ಎಲ್ಲಾ ಭಾರತೀಯರಿಗೂ ಭಾರತಕ್ಕೆ ಕ್ಷೇಮವಾಗಿ ಹಿಂದಿರುಗುವ ಸಲುವಾಗಿ  ಏರ್ ಇಂಡಿಯಾ ವಿಮಾನಗಳ ವ್ಯವಸ್ಥೆ ಮಾಡಿರುವ ವಿಷಯ ತಿಳಿಸಿ ಈ ಕೂಡಲೇ ಹೊರಡಬೇಕೆಂದು ಪ್ರತೀೆ ಎರಡು ದಿನಗಳಿಗೊಮ್ಮೆ ಎಚ್ಚರಿಸಿದ್ದರೂ,  ಅಲ್ಲಿನ ಕಾಲೇಜುಗಳು online ತರಗತಿಗಳನ್ನು ತೆಗೆದುಕೊಳ್ಳುವುದಿಲ್ಲ. ಕೇವಲ offline ತರಗತಿಗಳನ್ನು ಮಾತ್ರವೇ ತೆಗೆದುಕೊಳ್ಳುತ್ತೇವೆ ಎಂದಿರುವ ಕಾರಣ ನಮಗೆ ವಿದ್ಯೆಯೇ ಮುಖ್ಯ ಎಂದು ಕೆಲವು ವಿದ್ಯಾರ್ಥಿಗಳು  ಧೂತವಾಸದ ಎಚ್ಚರಿಕೆಯನ್ನು ತೆಗೆದುಹಾಕಿದರೆ ಇನ್ನೂ ಕೆಲವರು ಯುದ್ದ ನಡೆದರೆ ಉಕ್ರೇನಿನ ರಾಜಧಾನಿ ಕೀವ್ಸ್ ನಗರಕ್ಕೆ ಸೀಮಿತವಾಗಿರುತ್ತದೆ. ನಾವಿರುವ ಪ್ರದೇಶ ಸುರಕ್ಷಿತವಾಗಿರುವ ಕಾರಣ ನಾವು ಭಾರತಕ್ಕೆ ಹಿಂದಿರುಗುವ ಪ್ರಮೇಯವೇ ಇಲ್ಲ ಎಂಬ ಧೋರಣೆ ತೋರಿದ್ದು ಸತ್ಯ.

WhatsApp Image 2022-03-02 at 9.18.18 AMಇದ್ದಕ್ಕಿದ್ದಂತೆಯೇ ಯುದ್ದದ ತೀವ್ರತೆ ಹೆಚ್ಚಾಗಿ  ಉಕ್ರೇನಿನ  ಬಹುತೇಕ ನಗರಗಳ ಅಕ್ಕ ಪಕ್ಕದಲ್ಲೇ ರಷ್ಯಾದ ಬಾಂಬುಗಳು ಬೀಳತೊಡಗಿದವೋ ಆಗ ಎಚ್ಚೆತ್ತ ಈ ಎಲ್ಲಾ ವಿದ್ಯಾರ್ಥಿಗಳು ಎದ್ದೂ ಬಿದ್ದೂ ನಮ್ಮನ್ನು ಕಾಪಾಡೀ ಕಾಪಾಡೀ ಎಂದು ದಂಬಾಲು ಬೀಳುವ ಹೊತ್ತಿಗೆ ಯುದ್ಧ ನಡೆಯುತ್ತಿದ್ದ ಉಕ್ರೇನಿನೊಳಗೆ ಯಾವುದೇ  ವಿಮಾನಗಳ ಹಾರಾಟ ಮಾಡಲು ಅವಕಾಶ ಸಿಗದ ಕಾರಣ ಉಕ್ರೇನಿನ ಅಕ್ಕ ಪಕ್ಕದ ದೇಶಗಳೊಂದಿಗೆ ಮಾತನಾಡಿದ ಭಾರತ ಸರ್ಕಾರ ಭಾರತೀಯರಿಗೆ ಯಾವುದೇ ಸಮಸ್ಯೆಯಾಗದಂತೆ ಗಡಿ ದಾಟಲು ಅವಕಾಶ ನೀಡಬೇಕೆಂದು ಕೋರಿ,  ಅಲ್ಲಿನ ಗಡಿ ಪ್ರದೇಶದವರೆಗೂ ನಮ್ಮ ವಿಮಾನಗಳನ್ನು ತೆಗೆದುಕೊಂಡು ಹೋಗಿ ಗಡಿ ದಾಟಿ ಬರುವ 2-3 ಸಾವಿರ ಭಾರತೀಯರನ್ನು  ಪ್ರತೀ ದಿನವೂ ಭಾರತಕ್ಕೆ ಕರೆತರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿಯಾಗಿ ತನ್ನ ಪ್ರಜೆಗಳ ಬಗ್ಗೆ ಮಾನವೀಯ ಕಾಳಜಿ ತೋರಿಸುತ್ತಿರುವ  ಏಕೈಕ ರಾಷ್ಟ್ರ ಭಾರತ  ಎಂದು ಇಡೀ ವಿಶ್ವವೇ ಕೊಂಡಾಡುತ್ತಿದೆ.

WhatsApp Image 2022-03-03 at 11.08.56 PMಆದರೆ, ಇಲ್ಲಿ ಹುಟ್ಟಿ ಬೆಳೆದು ಇಲ್ಲಿಯೇ  ಪ್ರೌಢಶಿಕ್ಷಣ ಮುಗಿಸಿ  ಅವರವರ ತೆವಲುಗಳಿಗೆ (ಆಕ್ರೋಶದಿಂದ ಈ ಪದ ಬಳಸುತ್ತಿರುವುದಕ್ಕಾಗಿ ಕ್ಷಮೆ ಇರಲಿ) ಭಾರತದ ಪಾಸ್ ಪೋರ್ಟ್ ತೆಗೆದುಕೊಂಡು ಉಕ್ರೇನಿಗೆ ಓದಲು ಹೋದರೇ ವಿನಃ  ಅದರ ಹೊರತಾಗಿ ಇವರಿಗೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವೇ ಇಲ್ಲಾ.  ಅಮೇರಿಕಾ, ಚೀನಾ, ನೆರೆಯ ಪಾಪೀಸ್ಥಾನ,  ಯುರೋಪಿಯನ್ ದೇಶಗಳ ರಾಜತಾಂತ್ರಿಕದವರೇ ಕೈ ಚೆಲ್ಲಿ ಕುಳಿತಿರುವಾಗ ನಮ್ಮ ದೇಶ 4 ಕೇಂದ್ರ‌ ಸಚಿವರನ್ನು ಗಡಿ ದೇಶಗಳಿಗೆ  ಕಳುಹಿಸಿ ಅಲ್ಲಿಂದ ಏರ್ ಲಿಫ್ಟ್ ಮಾಡಿಸುತ್ತಿರುವಾಗ ಅದೇ ಸೌಲಭ್ಯವನ್ನು ಪಡೆದುಕೊಂಡು ಭಾರತಕ್ಕೆ ಹಿಂದಿರುಗಿ  ನಮ್ಮನ್ನು ಸುರಕ್ಷಿತವಾಗಿ ಕರೆತರಲು  ಭಾರತ ಸರ್ಕಾರ ಯಾವುದೇ ಪ್ರಯತ್ನ ಮಾಡಲಿಲ್ಲ. ಭಾರತಕ್ಕೆ ಉಕ್ರೇನ್ ಒಳಗೆ ಕಾಲು ಇಡಲು ಗಟ್ಸ್ ಇಲ್ಲಾ. ನಾವೇ ಕಷ್ಟಪಟ್ಟು ಶ್ರಮವಹಿಸಿ ಗಡಿಯನ್ನು ದಾಟಿದ ನಂತರ ವಿಮಾನದ ವ್ಯವಸ್ಥೆ ಮಾಡಿದ್ದಾರೆ.  ಎಂದು ನಿರ್ಲಜ್ಜವಾಗಿ ಕೃತಘ್ನರಾಗಿ ಮಾತನಾಡುತ್ತಿರುವುದನ್ನು ಕೇಳಿ ನಿಜಕ್ಕೂ ರಕ್ತ ಕುದಿಯುವಂತಾಯಿತು.

WhatsApp Image 2022-03-02 at 10.04.56 PMವಾರಾತ್ಯಂತದಲ್ಲಿ ಸಾಲು ಸಾಲು  ರಜೆ ಬಂದರೂ  ನಮ್ಮ ಬೆಂಗಳೂರಿನಿಂದ ಪರಸ್ಥಳಗಳಿಗೆ ಹೋಗುವುದಕ್ಕೆ ಸರ್ಕಾರೀ ಮತ್ತು ಖಾಸಗೀ ಬಸ್ಸುಗಳನ್ನು ಹಾಕಲು ಹರಸಾಹಸ ಪಡುವಂತಹ ಸಮಯ ಇದ್ದಾಗ, ಯುದ್ಧ ನಡೆಯುತ್ತಿರುವ ದೇಶದಿಂದ ಇವರುಗಳನ್ನು ಸಕಲ ರಾಜ ಮಯಾದೆಯಿಂದ ಬಿರ್ಯಾನಿ ತಿನ್ನಿಸಿಕೊಂಡು ಕರೆದುಕೊಂಡು ಬರಬೇಕು  ಎಂದು ಬಯಸುವ  ಇಂತಹ ಪ್ರಭೂತಿಗಳ ಬೌದ್ಧಿಕ ದೀವಾಳಿತನಕ್ಕೆ ಏನನ್ನ ಬೇಕು?  ಭಾರತದಲ್ಲಿ ಶಿಕ್ಷಣದ ವ್ಯವಸ್ಥೆ ಸರಿ ಇಲ್ಲಾ ಎಂದು ಮೂದಲಿಸಿ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಹೋದ  ಇಂತಹವರು ಅಟ್ಟ ಹತ್ತಿದ ನಂತರ  ಏಣಿಯ ಹಂಗೇಕೇ? ಎಂದು ಹತ್ತಿದ ಏಣಿಯನ್ನೇ ಒದೆಯುವ ಇಂತಹ ಕೃತಘ್ನರಿಂದ ಇದಕ್ಕಿಂತಲೂ ಹೆಚ್ಚಿನದ್ದೇನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ದೇಶದ್ರೋಹಿಗಳನ್ನು ಕರೆತರಲು ನಮ್ಮ ನಿಮ್ಮೆಲ್ಲರ ತೆರಿಗೆ ಹಣವನ್ನೇಕೆ ಖರ್ಚು ಮಾಡಬೇಕಿತ್ತು? ಅವರನ್ನು ಕರೆತರಲು ಆದ ಸಂಪುರ್ಣ ವೆಚ್ಚವನ್ನು ಅವರಿಂದಲೇ ಕಕ್ಕಿಸಲೇಕು ಎಂಬ ಆಕ್ರೋಶವೂ ಮೂಡುತ್ತದೆ.

ಉಕ್ರೇನಿಂದ ಮುಂಬೈಗೆ ಬಂದಿಳಿದ ವಿದ್ಯಾರ್ಥಿನಿಯೊಬ್ಬಳ ಅಳಲು ಇದಕ್ಕಿಂತಲೂ ವಿಚಿತ್ರವಾಗಿದ್ದು, ಆಕೆಯನ್ನು ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ಯಾರು ಇರಲಿಲ್ಲವಂತೆ ಮತ್ತು ವಿಮಾನ ನಿಲ್ದಾಣದಿಂದ ಆಕೆಯ ಮನೆಗೆ ತಲುಪಿಸಲು ಸರ್ಕಾರದಿಂದ ವಾಹನ ವ್ಯವಸ್ಥೆ ಮಾಡಿರದ ಕಾರಣ ಆಕೆ 300-400 ರೂಪಾಯಿ ಖರ್ಛು ಮಾಡಿಕೊಂಡು ತನ್ನ ಮನೆಗೆ ತಲುಪಿರುವ ಕರುಣಾಜನಕ ಕಥೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದನ್ನು ನೋಡಿದಾಗ ಬದುಕಿದೆಯಾ ಬಡಜೀವ  ಎಂದು ಸುರಕ್ಷಿತವಾಗಿ ದೂರದ ಉಕ್ರೇನ್ ನಿಂದ ಅದೂ ಉಚಿತವಾಗಿ ಮುಂಬೈ ತಲುಪಿಸಿದ್ದೇ ಹೆಚ್ಚಾಗಿರುವಾಗ ಅದಕ್ಕಿಂತಲೂ ಹೆಚ್ಚಿನ ಸವಲತ್ತುಗಳನ್ನು ಅದು ಹೇಗೆ ನಿರೀಕ್ಷಿಸುತ್ತಾರೆ? ಎಂಬುದೇ ಅರ್ಥವಾಗುತ್ತಿಲ್ಲ.

WhatsApp Image 2022-03-03 at 12.04.36 PMಇನ್ನು ಮೋದಿ ಮತ್ತು ಬಿಜೆಪಿ ಪಕ್ಷದ ವಿರುದ್ಧ ತಮ್ಮ ಸೈದ್ಧಾಂತಿಕ ವಿರೋದಾಭಾಸದಿಂದಾಗಿ   ಕಮ್ಯೂನಿಷ್ಟ್ ಮನಸ್ಥಿಯ ಮಾಧ್ಯಮದವರು ಹುಡುಕೀ ಹುಡುಕೀ ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಎನ್ನುವಂತೆ   ಇಂತಹ ಪ್ರಭೂತಿಗಳ ವೀಡಿಯೋಗಳನ್ನೇ ತೋರಿಸುತ್ತಾ ದೇಶದ ಮಾನ ಹರಾಜು ಹಾಕುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.

WhatsApp Image 2022-03-04 at 6.10.32 AMವಿನಾಕಾರಣ ಒಬ್ಬ ವಿದ್ಯಾರ್ಥಿಯ (ಅದರಲ್ಲೂ ಕನ್ನಡಿಗ) ಸಾವನ್ನಪ್ಪಿದ್ದಕ್ಕೆ ದುಃಖವಿದ್ದರೂ,  ಇದಕ್ಕೆ ಸಂಬಂಧವೇ ಪಡದ ಭಾರತದ ಸರ್ಕಾರವನ್ನೂ ಮೋದಿಯವರನ್ನು  ತೆಗಳುವ ವಿರೋಧ ಪಕ್ಷಗಳು ಮತ್ತು ಮಾಧ್ಯಮದವರು, ಸಾವಿರಾರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೂ ಮುಜುಗರ ಪಡುತ್ತಿರುವುದು ಹೇಸಿಗೆ ತರಿಸುತ್ತಿದೆ. ಭಾರತ ತ್ರಿವರ್ಣಧ್ವಜ  ಹಿಡಿದುಕೊಂಡು ನಮ್ಮ  ಪ್ರಾಣ ಉಳಿಯಿತು ಎಂದು ಪಾಕಿಸ್ತಾನದ ವಿದ್ಯಾರ್ಥಿಗಳೂ  ಹೆಮ್ಮೆಯಿಂದ ಭಾರತಕ್ಕೆ ಧನ್ಯತಾಭಾವವನ್ನು ಅರ್ಪಿಸುತ್ತಿರುವಾಗ ಈ ಗುಲಾಮರಿಗೇಕೆ ಭಾರತದ ಮಹತ್ವ  ಅರಿವಾಗುತ್ತಿಲ್ಲ? ಎಂಬ ಕೋಪವೂ ಬರುತ್ತದೆ.

ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ, ವೈದ್ಯಕೀಯ ಶಿಕ್ಷಣದ ಬಹುತೇಕ ಕಾಲೇಜುಗಳು ಇರುವುದೇ ಇಡೀ  ಡಿಕೆಶಿ, ಪರಮೇಶ್ವರ್, ಜಾಲಪ್ಪ, ಕೋರೆ ಮತ್ತು ಮಠ ಮಾನ್ಯಗಳ ಹಿಡಿತದಲ್ಲಿಯೇ.  ಇವೆರಲ್ಲರಿಗೂ  ಉಕ್ರೇನಿನಿಂದ ಬಂದ ಮಕ್ಕಳ ಬಗ್ಗೆ ಕಾಳಜಿ ಇದ್ದಲ್ಲಿ ತಮ್ಮ ಕಾಲೇಜುಗಳಲ್ಲಿ ಉಚಿತ ಬೇಡ ಕನಿಷ್ಟ ಶುಲ್ಕದಲ್ಲಿ ವಿದ್ಯೆಯನ್ನು ಮುಂದುವರೆಸಲು ಅನುವು ಮಾಡಿಕೊಡಲು ಸಾಧ್ಯವೇ?

ಸ್ವದೇಶದಲ್ಲೇ ಆಗಲೀ ವಿದೇಶದಲ್ಲೇ ಆಗಲಿ ಕಲಿತ ವಿದ್ಯೆಯಿಂದ ದೇಶ ಪ್ರೇಮ, ಸೌಜನ್ಯ, ವಿನಯ, ವಿವೇಕ ಮತ್ತು ವಿವೇಚನೆ  ಬಾರದೇ ಹೋದಲ್ಲಿ ಅವರು ಕಲಿತ ವಿದ್ಯೆ ಕಳ್ಳಿಯ ಹಾಲಿಗೆ ಸಮಾನ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಧನ್ಯೋಸ್ಮಿ

ಜೀವನ ಎಂದರೆ ಕೇವಲ ಆಟ, ಪಾಠ, ಕೆಲಸ, ಊಟ, ನಿದ್ದೆಯಷ್ಟೇ ಅಲ್ಲದೇ ಅಭ್ಯಾಸ ಮತ್ತು ಹವ್ಯಾಸಗಳೂ ಸಹಾ ನಮ್ಮ ಜೀವನ ಅವಿಭಾಜ್ಯ ಅಂಗವಾಗಿರುತ್ತದೆ ಎಂದರೆ ತಪ್ಪಾಗದು. ಜೀವನದಲ್ಲಿ ಸುಖಃ ಮತ್ತು ದುಃಖಗಳು ಸಂಭವಿಸಿದಾಗ ಅವುಗಳನ್ನೆಲ್ಲಾ ಸರಿದೂಗಿಸಿಕೊಂಡು ಹೋಗಲು ಹವ್ಯಾಸಗಳು ಹೆಚ್ಚಿನ ಪಾತ್ರ ವಹಿಸುತ್ತವೆ. ಹಾಗಾಗಿಯೇ ಖುಷಿ ಮತ್ತು ದುಃಖಗಳ ಸಮಯದಲೂ ಹಾಡುಗಳನ್ನು ಗುಣುಗುವ ಮೂಲಕವೋ ಇಲ್ಲವೇ ನೃತ್ಯ ಮಾಡುವ ಮೂಲಕವೋ ಇಲ್ಲವೇ ಒಳ್ಳೆಯ ವಿಷಯಗಳನ್ನು ಓದುವ ಇಲ್ಲವೇ ಬರೆಯುವ ಇಲ್ಲವೇ, ಯಾವುದಾದರೂ ಪುಣ್ಯಕ್ಷೇತ್ರಗಳೋ ಇಲ್ಲವೇ ಪ್ರಕೃತಿ ತಾಣಕ್ಕೆ ಭೇಟಿ ನೀಡುವ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಗೆ ಹಾಕುವ ಮೂಲಕ ನಿರಾಳತೆಯನ್ನು ತಂದು ಕೊಳ್ಳುವುದು ಸಹಜ ಪ್ರಕ್ರಿಯೆ.

ಇದೇ ರೀತಿ ನಾನೂ ಸಹಾ ಚಿಕ್ಕವಯಸ್ಸಿನಿಂದಲೇ ಓದುವ ಹವ್ಯಾಸವನ್ನು ಬೆಳಸಿಕೊಂಡು ಸಮಯ ಸಿಕ್ಕಾಗಲೆಲ್ಲಾ ಏನಾದರೂ ಒದುತ್ತಲೇ ಹೋದೆ. ಮನೆಗೆ ಪ್ರತಿದಿನವೂ ಬರುತ್ತಿದ್ದ ವೃತ್ತ ಪತ್ರಿಕೆ, ವಾರ ಪತ್ರಿಕೆ ಪಾಕ್ಷಿಕ ಮತ್ತು ಮಾಸಿಕಗಳನ್ನು ಒಂದಕ್ಷರವು ಬಿಡದೇ ಓದಿ ಮುಗಿಸಿದ ಮೇಲೆ ತಾತ ಮತ್ತು ತಂದೆಯವರು ಜತನದಿಂದ ಸಂಗ್ರಹಿಸಿದ್ದ ಪೌರಾಣಿಕ, ಆಧ್ಯಾತ್ಮ ಪುಸ್ತಕಗಳನ್ನೂ ಬಿಡಲಿಲ್ಲ. ಶಾಲೆಯಲ್ಲಿ ಬಿಡಿವಿನ ವೇಳೆಯಲ್ಲಿಯೂ  ಗ್ರಂಥಾಲಯಕ್ಕೆ ಹೋಗಿ ಆರಂಭದಲ್ಲಿ ಎಲ್ಲರಂತೆ ಡಾಬು. ಶೂಜಾ, ಮಜ್ನೂ, ಪುಟ್ಟೀ, ಫ್ಯಾಂಟಮ್, ಬಹದ್ದೂರ್ ಗಳ ಜೊತೆಗೆ ಬಾಲ ಭಾರತಿಯ ದೇಶಭಕ್ತರ ಸಣ್ಣ ಸಣ್ಣ ಪುಸ್ತಕಗಳ ನಂತರ ಅಮರ ಚಿತ್ರಕಥೆ, ಚಂದಾಮಾಮಾ ಬಾಲಮಿತ್ರ, ಬಾಲ ಮಂಗಳ ಓದುತ್ತಿದ್ದವನು ಕ್ರಮೇಣ ಶಾರೀರಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆಯುತ್ತಾ ಹೋದಂತೆಲ್ಲಾ ವಾರಪತ್ರಿಕೆಗಳಲ್ಲಿ ಬರುತ್ತಿದ್ದ ಧಾರಾವಾಹಿಗಳಲ್ಲದೇ ಕಾದಂಬರಿಗಳನ್ನು ಸಹಾ ಓದುವ ಮೂಲಕ ಕನ್ನಡದ ಬಹುತೇಕ ಖ್ಯಾತ ಲೇಖಕರ ಕೃತಿಗಳನ್ನು ಓದಿಕೊಂಡಿದ್ದೆ . ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಕೆಲವು ಪ್ರಬಂಧ ಮತ್ತು ಚರ್ಚಾಸ್ಪರ್ಧೆಗಳಿಗೆ ಅಲ್ಪ ಸ್ವಲ್ಪ ಬರೆಯುತ್ತಿದ್ದೆನಾದರೂ ಬರವಣಿಗೆಯನ್ನು ಎಂದಿಗೂ ಗಂಭೀರವಾಗಿ ಹವ್ಯಾಸವನ್ನಾಗಿಸಿಕೊಳ್ಳುವ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ.

ನಿಜ ಹೇಳಬೇಕೆಂದರೆ, ಬರಹ ಎನ್ನುವುದು ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ನಮ್ಮ ತಾತ ಬಾಳಗಂಚಿ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ಗಮಕಿಗಳು, ಹೆಸರಾಂತ ಹರಿಕಥಾ ದಾಸರು ಮತ್ತು ಪ್ರಖ್ಯಾತ ವಾಗ್ಗೇಯಕಾರರಾಗಿದ್ದಲ್ಲದೇ, ಅನೇಕ ಪೌರಾಣಿಕ ನಾಟಕಗಳಿಗೆ ಮಟ್ಟುಗಳನ್ನು ಬರೆಯುತ್ತಿದ್ದರಲ್ಲದೇ, ಭಗವದ್ಗೀತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದರಲ್ಲದೇ ತಮ್ಮ ಸಾಹಿತ್ಯಿಕ ಚಟುಕವಟಿಕೆಗಳಿಗಾಗಿ ೭೦ ದಶಕದಲ್ಲೇ ರಾಜ್ಯಪ್ರಶಸ್ತಿ ಪುರಸ್ಕೃತರು. ಇನ್ನು ನಮ್ಮ ತಂದೆ. ದಿ. ಶಿವಮೂರ್ತಿಗಳು ಗಮಕಿಗಳು, ಲೇಖಕರು ಮತ್ತು ಮೋಚಿಂಗ್ ಕಲಾವಿದರಾಗಿದ್ದರು. ಹಾಗಾಗಿ ಉತ್ತಮ ಓದನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದೆನಾದರೂ, ಬರೆಯುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಯಾವಾಗ ಸಾಮಾಜಿಕ ಜಾಲತಾಣಗಳು ಪ್ರಸಿದ್ಧಿಗೆ ಬಂದವೋ ಆಗ ಧುತ್ತನೆ ನನ್ನಲ್ಲಿದ್ದ ಬರಹಗಾರ ಜಾಗೃತನಾಗಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಬೇಕೋ ಬೇಡವೋ ಹಲವರೊಡನೆ ಜಿದ್ದಾ ಜಿದ್ದಿಗೆ ಇಳಿದು ವಿತಂಡ ವಾದ ಮಾಡುವುದರೊಂದಿಗೆ ನನ್ನ ಬರವಣಿಗೆ ಆರಂಭವಾಯಿತು. ಇಂತಹ ಪ್ರಚೋದನಕಾರಿ ಬರವಣಿಗೆಯನ್ನೂ ಮೆಚ್ಚಿಕೊಂಡ ಅನೇಕ ಗೆಳೆಯರು ಅದೆಷ್ಟೋ ಗಂಪುಗಳಿಗೆ ನನ್ನನ್ನು ಸೇರಿಸಿ ಸುಖಾ ಸುಮ್ಮನೇ ಯಾವುದೋ ಅನಾವಶ್ಯಕ ವಿಷಯಗಳಿಗೆ ನನ್ನನ್ನು ರೊಚ್ಚಿಗೆಬ್ಬಿಸಿ ಆವೇಶ ಭರಿತ ಲೇಖನಗಳಿಗೆ ನನ್ನನ್ನು ಸೀಮಿತಗೊಳಿಸಿದ್ದರು. ಹಾಗೆ ಬರೆದ ಅನೇಕ ಲೇಖನಗಳಿಂದ ಗಳಿಸಿದ್ದು ಮಿತ್ರತ್ವಕ್ಕಿಂತ ಶತೃತ್ವವೇ ಹೆಚ್ಚು ಎನ್ನುವುದೇ ವಿಪರ್ಯಾಸ. ಇದರ ಜೊತೆಗೆ ಸುಖಾಸುಮ್ಮನೇ ಬೇಡದ ವಿವಾದಗಳನ್ನೂ ಮೈ ಮೇಲೆ ಹೇರಿಕೊಂಡು ಅವೆಲ್ಲವೂ ಕೇವಲ ಸಾಮಾಜಿಕ ಜಾಲತಾಣಕ್ಕೇ ಸೀಮಿತವಾಗದೇ ಮನೆಯವರೆಗೂ ಬಂದು ನಮ್ಮ ತಂದೆ ಮತ್ತು ಮಡದಿ ನನ್ನ ಪರವಾಗಿ ಕ್ಷಮೆಯಾಚಿಸ ಬೇಕಾದಂತಹ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಅದೆಷ್ಟೋ ಬಾರಿ ನನ್ನ ಮಕ್ಕಳ ಸ್ನೇಹಿತರೂ ಸಹಾ ಇದರ ಬಗ್ಗೆ ಕಳಕಳಿಯನ್ನು ವ್ಯಕ್ತ ಪಡಿಸಿದಾಗ ನನ್ನ ಮಕ್ಕಳೂ ಸಹಾ ಅಪ್ಪಾ ನಿಮ್ಯಾಕೆ ಕಂಡೋರ ಉಸಾಬರೀ? ಎಂದು ಗದರಿಸುವ ಮಟ್ಟಕ್ಕೂ ಬಂದಿತ್ತು.

ಇಂತಹ ಸಮಯದಲ್ಲೇ ಅನಿರೀಕ್ಷಿತವಾಗಿ ನಮ್ಮ ತಂದೆಯವರು ಅಕಾಲಿಕವಾಗಿ ನಿಧನರಾದಂತಹ ಸಂಧರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಬರೆದ ಲೇಖನವನ್ನು ಎಲ್ಲರೂ ಮೆಚ್ಚಿಕೊಂಡು, ಪರವಾಗಿಲ್ವೇ, ತಾತ ಮತ್ತು ಅಪ್ಪನ ತರಹ ನೀನೂ ಸಹಾ ಗಂಭೀರವಾಗಿ ಬರೆಯಬಲ್ಲೆ ಎಂದು ಹೇಳಿದಾಗ ಅವರು ನನ್ನನ್ನು ಹೊಗಳುತ್ತಿದ್ದಾರೋ? ಇಲ್ಲವೇ ತೆಗಳುತ್ತಿದ್ದಾರೋ? ಎಂಬುದೇ ತಿಳಿದೇ ಮತ್ತೆ ತೀಕ್ಷ್ಣವಾದ ರಾಜಕೀಯ ಬರಹದತ್ತಲೇ ಹರಿಯುತ್ತಿತ್ತು ಚಿತ್ತ. ಈ ಕುರಿತಂತೆ ನನ್ನ ಮಡದಿ ಮಂಜುಳ ಸದಾಕಾಲವೂ ಎಚ್ಚರಿಸುತ್ತಿದ್ದರೂ ಕೇಳದಿದ್ದ ನನಗೆ, ಅದೊಂದು ದಿನ ನನ್ನ ಗುರುಗಳಾದ ಶ್ರೀ ಮಹಾಬಲೇಶ್ವರ ಅವಧಾನಿಗಳು ತಲೆ ಗಟ್ಟಿ ಇದೇ ಎಂದು ಬಂಡೆಗೆ ಚಚ್ಚಿಕೊಳ್ಳುವುದು ಮೂರ್ಖತನ. ನಿನ್ನ ಬರವಣಿಗೆಯನ್ನು ಬದಲಿಸಿಕೋ ಎಂದು ಪ್ರೀತಿಪೂರ್ವಕದ ಆಜ್ಞೆ ಮಾಡಿದದರು.

Enantheeri_logoಅವರ ಮಾತಿಗೆ ಕಟ್ಟು ಬಿದ್ದು,  ಮೊತ್ತ ಮೊದಲ ಬಾರಿಗೆ ನಮ್ಮ ತಂದೆಯವರ ನೆನಪಿನಲ್ಲೇ ದುಡ್ಡಿನ ಮಹತ್ವ ಎನ್ನುವ ನನ್ನದೇ ಅನುಭವಗಳನ್ನು ಕಥಾ ರೂಪದಲ್ಲಿ ಬರೆದು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸಿದಾಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದಾದ ನಂತರ ಒಂದರ ಮೇಲೊಂದು ಲೇಖನಗಳನ್ನು ಬರೆಯುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾ ಹೋದಂತೆ ಸಮಾನ ಮನಸ್ಕರ ಗೆಳೆಯರ ಗುಂಪು ಬೆಳೆಯ ತೊಡಗಿತು. ಈ ರೀತಿ ಎಲ್ಲೆಲ್ಲೋ ಲೇಖನಗಳನ್ನು ಪ್ರಕಟಿಸುವ ಬದಲು ನಿಮ್ಮದೇ ಒಂದು ಬ್ಲಾಗ್ ಆರಂಭಿಸಿ ಎಂದು ನನ್ನ ಆತ್ಮೀಯ ಗೆಳೆಯ ಶ್ರೀ ವಾಸುದೇವ ಅವರು ಸೂಚಿಸಿದಾಗ 2019ರ ಶಿವರಾತ್ರಿಯಂದು (ಮಾರ್ಚ್ 7, 2019) ಆ ಪರಶಿವನ ಕೃಪಾಶೀರ್ವಾದದಿಂದ ಸಣ್ಣದಾಗಿ ಒಂದು ಬ್ಲಾಗ್ ಆರಂಭಿಸಿ ಈಗಾಗಲೇ ಬರೆದಿದ್ದ ಕೆಲವು ಲೇಖನಗಳನ್ನು ಅದರಲ್ಲಿ ಪ್ರಕಟಿಸಿ ನಿಮ್ಮೆಲ್ಲರ ಮುಂದೆ ಭಕ್ತಿಪೂರ್ವಕವಾಗಿ ನನ್ನೀ ಪ್ರಯತ್ನ ಹೇಗಿದೆ? ಎಂದು ಕೇಳಿದ್ದೆ. ಸ್ವಲ್ಪ ಕಾಲದ ನಂತರ ಅದಕ್ಕೊಂದು https://enantheeri.com ಎಂಬ ನಾಮಕರಣ ಮಾಡಿ ಎಲ್ಲರ(ವ)ನ್ನೂ ಪ್ರಶ್ನಿಸಿ ಮತ್ತು ಪರಿಹರಿಸಿಕೊಳ್ಳಿ ಎಂಬ ಟ್ಯಾಗ್ ಲೈನ್ ನೊಂದಿಗೆ ಏನಂತೀರಿ? ಎಂದು ಪ್ರಶ್ನಿಸಿದ್ದೆ. ಈ ಹವ್ಯಾಸೀ ಬರಹಗಾರನ ಪ್ರಯತ್ನವನ್ನು ನೀವೆಲ್ಲರೂ ಅತ್ಯಂತ ಆದರಾಭಿಮಾನಗಳಿಂದ ಅಪ್ಪಿಕೊಂಡಿರಿ ಮತ್ತು ಕಾಲ ಕಾಲಕ್ಕೆ ಸೂಕ್ತವಾದ ಸಲಹೆ ಮತ್ತು ಮಾಹಿತಿಗಳನ್ನು ನೀಡುವ ಮೂಲಕ ನನ್ನನ್ನು ತಿದ್ದಿ ತೀಡಿದ ಪರಿಣಾಮವಾಗಿಯೇ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಏನಂತೀರಿ.ಕಾಂ ಬ್ಲಾಗ್ ಮೂರು ವರ್ಷಗಳನ್ನು ದಾಟಿ ಅಮೋಘವಾಗಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದು ನಮ್ಮ ಬ್ಲಾಗಿನ ಅಂಕಿ ಅಂಶಗಳು ಈ ರೀತಿಯಾಗಿವೆ.

Year Total posts Total words Average  words per post Views
2019 269 209,927 780 53292
2020 317 217,934 688 153212
2021 246 191,834 780 188972
2022 40 31,722 793 27624
872 651417 760 423100

ನಮ್ಮ ಬ್ಲಾಗಿನಲ್ಲಿ ಒಟ್ಟು 872 ಲೇಖನಗಳು ಪ್ರಕಟಿತವಾಗಿದ್ದು, ಅದನ್ನು 423100 ಜನರು ಓದಿದ್ದಾರೆ. ಇಡೀ ಲೇಖನಗಳು 651417 ಪದಗಳಿದ್ದು ಪ್ರತೀ ಲೇಖನವೂ ಸುಮಾರು 760 ಪದಳಿಂದ ಕೂಡಿವೆ. ಈ ಮೂರು 3 ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 291 ಲೇಖನಗಳಂತೆ ಅಂದರೆ ತಿಂಗಳಿಗೆ 24 ಲೇಖನಗಳನ್ನು ಪ್ರಕಟಿಸುವುದನ್ನೇ ಗಮನಿಸಿ ಬಿಡುವಿಲ್ಲದ ಬರಹಗಾರ ಎಂದು ನನಗೆ ಬಿರುದನ್ನು ಕೊಟ್ಟ ಐಯ್ಯಂಗಾರ್ ಆಹಾರದ ಮಾಲಿಕರೂ, ಕವಿಗಳೂ ಅಪ್ಪಟ ಕನ್ನಡಿಗರಾದ ಸಹೃದಯೀ ಗೆಳೆಯ ಶ್ರೀ ವಿಜಯ್ ಹೆರಗು ಅವರ ಬಿರುದಿಗೆ ಅನ್ವರ್ಥವಾಗಿದ್ದೇನೆ ಎಂಬುದು ಖುಷಿ ಕೊಡುತ್ತದಾದರೂ ಇದರಿಂದ ಹೆಚ್ಚಿದ ಜವಾಬ್ಧಾರಿಯಿಂದಾಗಿ ಕೊಂಚ ಭಯವೂ ಆಗುತ್ತಿದೆ.

enangheeri_statsWhatsApp Image 2022-03-02 at 10.40.24 AMಮೂರು ವರ್ಷಗಳ ಕಾಲ ನಿರಂತರವಾಗಿ ಬರೆಯುತ್ತಾ ಸುಮಾರು  100 ಕ್ಕೂ ಅಧಿಕ ದೇಶಗಳಿಂದ ನಾಲ್ಕು ಲಕ್ಷಕ್ಕೂ ಅಧಿಕ ಓದುಗರ ಅಭಿಮಾನ ಗಳಿಸಿದ್ದು ಒಂದು ಹೆಮ್ಮೆಯ ಮೈಲಿಗಲ್ಲಾಗಿದೆ. ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯೋಸ್ಮಿ ಎಂದು ಹೇಳುವ ಮೂಲಕ ವಂದನೆ ಸಲ್ಲಿಸುವುದರೊಂದಿಗೆ ಸದಾಕಾಲವೂ ನನ್ನೊಂದಿಗೆ ಇದ್ದ ಕೆಲವರನ್ನು ನೆನೆಪಿಸಿಕೊಳ್ಳಲೇ ಬೇಕಾದದ್ದು ನನ್ನ ಆದ್ಯ ಕರ್ತವ್ಯವಾಗಿದೆ.

ಆರಂಭದಲ್ಲಿ ನನಗೆ ಜನ್ಮ ಕೊಟ್ಟಿದ್ದಲ್ಲದೇ ಮನೆಯೇ ಮೊದಲ ಪಾಠ ಶಾಲೇ ತಾಯಿ ತಂದೆಯರೇ ನನ್ನ ಮೊದಲ ಗುರುಗಳು. ಚೌಲದ ಸಮಯದಲ್ಲಿ ಅಪ್ಪಾ ಅಕ್ಷರಭ್ಯಾಸ ಮಾಡಿಸಿದರೆ, ಕಾಪೀ ಪುಸ್ತಕದಲ್ಲಿ, ಸ್ಲೇಟು ಬಳಪಗಳೊಂದಿಗೆ ಅಕ್ಷರಭ್ಯಾಸ ಮಾಡುವ ಸಹಜ ಪದ್ದತಿಯ ಹೊರತಾಗಿ ನಮ್ಮಮ್ಮ ಕೋಡುಬಳೆಯಲ್ಲಿ ಅ ಆ ಇ ಈ… ಮಾಡಿಕೊಟ್ಟು ಅದರ ಮೂಲಕ ವಿಭಿನ್ನವಾಗಿ ಕನ್ನಡವನ್ನು ಕಲಿಸಿದ್ದಲ್ಲದೇ, ಕೇವಲ ಐದು ವರ್ಷಗಳಿರುವಾಗಲೇ ದಿನಪತ್ರಿಕೆ, ವಾರಪತ್ರಿಕೆಗಳ ಮೂಲಕ ಓದುವುದನ್ನು ಅಭ್ಯಾಸ ಮಾಡಿಸಿದ ನಮ್ಮಮ್ಮ ಉಮಾ ಅವರಿಗೆ ಹೇಗೆ ಕೃತಜ್ಞತೆಯನ್ನು ಅರ್ಪಿಸುವುದು? ಎಂದು ಯೋಚಿಸುತ್ತಿರುವಾಗ ಹೊಳೆದದ್ದೇ ಉಮಾಸುತ ಎಂಬ ಅಂಕಿತನಾಮ. ಇನ್ನು ಐತಿಹಾಸಿಕ, ಪೌರಾಣಿಕ, ಹಬ್ಬ ಹರಿದಿನಗಳ ಕುರಿತಾದ ಲೇಖನಕ್ಕೆ ಬೇಕಾದಂತಹ ಎಲ್ಲಾ ಜ್ಞಾನವನ್ನೂ ನನ್ನ ಮಸ್ತಕ್ಕೆ ತುಂಬಿ ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಶಕ್ತಿಯೇ ನಮ್ಮ ಪೂಜ್ಯ ತಾತ ಮತ್ತು ತಂದೆಯವರು ಹಾಗಾಗಿ ಈ ಮೂವರಿಗೂ ನಾನು ಸದಾಕಾಲವೂ ಚಿರಋಣಿಯಾಗಿರುತ್ತೇನೆ.

ಇನ್ನು ಲೇಖನಗಳನ್ನು ಪ್ರಕಟಿಸಿದ ಕೂಡಲೇ ಅದನ್ನು ತಪ್ಪದೇ ಓದಿ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯ ಜೊತೆಗೆ ಮತ್ತಷ್ಟು ಪೂರಕ ಮಾಹಿತಿಗಳನ್ನು ನೀಡುವ ಮೂಲಕ ಲೇಖನದ ಮೆರಗನ್ನು ಹೆಚ್ಚಿಸಿ ನನ್ನನ್ನು ಪ್ರೋತ್ಸಾಹಿಸುವ ಗೆಳೆಯರಾದ ಹರಿ, ಸುರೇಶ್, ಕನ್ನಡದ ಮೇಷ್ಟ್ರು ಶ್ರೀ ನರಸಿಂಹ ಮೂರ್ತಿಗಳು, ಆತ್ಮೀಯರಾದ ಶ್ರೀ ವೆಂಕಟರಂಗ ಶ್ರೀ ಭರತ್, ಅನಂತಕೃಷ್ಣ, ಜಯಸಿಂಹ, ಅಣ್ಣಾ, ನಮ್ಮ ಪ್ರತೀ ಹಬ್ಬಗಳ ಆಚರಣೆ ಮತ್ತು ಅದರ ವಿಶೇಷತೆಗಳನ್ನೇಕೆ ಓದುಗರಿಗೆ ಸುಲಭವಾಗಿ ಪರಿಚಯಿಸಬಾರದು? ಎಂಬ ಸಲಹೆ ನೀಡಿ ಹಬ್ಬಗಳ ಕುರಿತಾದ ಲೇಖನಗಳನ್ನು ಬರೆಯಲು ಪ್ರೇರಣೆ ನೀಡಿದ ಯುವಾ ಬ್ರಿಗೇಡ್ ಗೆಳೆಯ ನಿತ್ಯಾನಂದ ಗೌಡ, ಆತ್ಮಕಥನಗಳನ್ನೇ ಕಥಾರೂಪದಲ್ಲಿ ಬರೆದಲ್ಲಿ ಹೆಚ್ಚಿನ ಜನರಿಗೆ ತಲುಪುತ್ತದೆ ಎಂದು ಸಲಹೆ ನೀಡಿದ್ದಲ್ಲದೇ ನನ್ನ ಪ್ರತಿ ಲೇಖನದ ಒಂದಕ್ಷರವನ್ನೂ ಬಿಡದೇ ಓದಿ ಪ್ರತಿಕ್ರಿಯಿಸುವ ಶ್ರೀಮತಿ ಉಷಾ ವಾಸು ಇವರೆಲ್ಲರಿಗೂ ಹೃದಯಪೂರ್ವಕ ವಂದನೆಗಳನ್ನು ಹೇಳಲೇ ಬೇಕು.

ನನಗೆ ಬರಹದ ಜೊತೆಗೆ ನಳಪಾಕವೂ ಅಚ್ಚು ಮೆಚ್ಚಿನ ಹವ್ಯಾಸವಾಗಿದೆ. ಅಮ್ಮ ಚಿಕ್ಕಮ್ಮ ಮತ್ತು ಅಜ್ಜಿಯರಿಂದ ಕಲಿತಿದ್ದ ಪಾಕಶಾಸ್ತ್ರವನ್ನೇ ಒಂದೊಂದಾಗಿ ಲೇಖನರೂಪದಲ್ಲಿ ನಳಪಾಕ ವಿಭಾಗದಲ್ಲಿ ಪ್ರಕಟಿಸಿ ಜನಮನ್ನಣೆಗಳಿಸಿದ್ದಾಗ ನನ್ನ ಸಹೋದರಿ ಲಕ್ಷ್ಮೀ ಆನಂದ್, ನನಗೆ ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ಪರಿಚಯವಾದ ಶ್ರೀಮತಿ ಮಾಧುರ್ಯ ಮುರಳೀಧರ್ ಮತ್ತು ಶೈಲಾ ಅನಂತ್ (ಹರಿಯ ಚಿಕ್ಕಮ್ಮ) ಅವರೂ ಸಹಾ ಅನೇಕ ಪಾಕಶಾಸ್ತ್ರಗಳನ್ನು ಪ್ರಕಟಿಸಲು ನೆರವಾಗಿದ್ದಾರೆ. ಹಾಗಾಗಿ ಅವರಿಗೂ ಸಹಾ ಹೃತ್ಪೂರ್ವಕ ಧನ್ಯವಾದಗಳು.

ಸಜ್ಜನರ ಸಂಘ, ಹೆಜ್ಜೇನು ಸವಿದಂತೆ ಎನ್ನುವಂತೆ, ತಿಂಗಳ ಅಂಗಳದ ಸಮಾನ ಮನಸ್ಕ ಸಾಹಿತ್ಯಾಸಕ್ತರ ಗುಂಪಿನ ಮೂಲಕ ಪರಿಚಿತರಾಗಿ ನನ್ನನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿಗೆ ಪರಿಚಯಿಸಿದ ವಿಜಯ್ ಭರ್ತೂರ್ ಮತ್ತು ಅಭಾಸಾಪ ಸಂಘಟನೆಯಲ್ಲಿ ನನಗೆ ಪರಿಚಿತರಾದ ಶ್ರೀ ತಿಮ್ಮಣ್ಣ ಭಟ್, ನಾರಾಯಣ ಶೇವಿರೆ, ರಘುನಂದನ್ ಭಟ್, ಪೊ. ಪ್ರೇಮಶೇಖರ್, ರೋಹಿತ್ ಚಕ್ರತೀರ್ಥ ಇವರೆಲ್ಲರ ಒಡನಾಟದಿಂದ ಅವರ ಮಾತುಗಳು ಮತ್ತು ಕೃತಿಗಳೂ ನನ್ನ ಲೇಖನದ ಮೇಲೆ ಪ್ರಭಾವ ಬೀರಿರುವ ಕಾರಣ ಅವರಿಗೂ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ.

ನಮ್ಮೀ ಬ್ಲಾಗಿನಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಹೆಚ್ಚಿನವು ಸ್ವಕೃತಿಗಳಾಗಿದ್ದರೆ ಇನ್ನೂ ಕೆಲವು ಸಾಮಾಜಿಕ ಜಾಲತಾಣಗಳಲ್ಲಿನ ಅನುವಾದಿತ ಕೃತಿಗಳಾಗಿವೆ. ಇಡೀ ಬ್ಲಾಗನ್ನು ಗಮನಿಸಿದಲ್ಲಿ ಯಾವುದೇ ಒಂದು ಸಿದ್ಧಾಂತಗಳಿಗೆ ಮತ್ತು ಕಟ್ಟು ಪಾಡುಗಳಿಗೆ ಬೀಳದೆ, ಕನ್ನಡ ನಾಡು, ಭಾಷೆ, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯ, ಕ್ರೀಡೆಗಳು, ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಪ್ರವಾಸ, ಇತಿಹಾಸ, ವ್ಯಕ್ತಿಪರಿಚಯ ನಳಪಾಕವೂ ಸೇರಿದಂತೆ ಸುಮಾರು 26 ವರ್ಗಗಳಿದ್ದು ಓದುಗರಾದ ನಿಮಗೆ ಯಾವುದೇ ರೀತಿಯಲ್ಲಿ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಲೇಖನಗಳನ್ನು ಬರೆದಿದ್ದೇನೆ ಎನ್ನುವುದಕ್ಕಿಂತ ನಿಮ್ಮೆಲ್ಲರ ಪ್ರೋತ್ಸಾಹದಿಂದ ಬರೆಸಿಕೊಂಡು ಹೋಗಿದ್ದೀರೀ ಎಂದರೆ ತಪ್ಪಾಗಲಾರದು. ಹಾಗಾಗಿ ನಮ್ಮ ಬ್ಲಾಗಿನ ಸಮಸ್ತ ಓದುಗರಿಗೂ ಅನಂತಾನಂತ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ.

ಒಟ್ಟಿನಲ್ಲಿ ಈ ಬ್ಲಾಗಿನ ಮೂಲಕ ನೂರಾರು ಸಾಹಿತ್ಯಾಸಕ್ತ ಗೆಳೆಯರು ಪರಿಚಯವಾಗಿದ್ದಲ್ಲದೇ ಅನೇಕ ಉಪಯುಕ್ತ ಮಾಹಿತಿಗಳನ್ನೂ ತಿಳಿಯುವಂತಾಯಿತು ತನ್ಮೂಲಕ ತಿಳಿಸುವಂತಾಯಿತು. ಈ ಎಲ್ಲಾ ಬೆಳವಣಿಗೆಯನ್ನು ಕಣ್ಣಾರೆ ನೋಡಿ ಸಂಭ್ರಮಿಸಲು ನಮ್ಮ ತಂದೆಯವರು ನಮ್ಮೊಂದಿಗೆ ಇಲ್ಲವಲ್ಲಾ ಎಂಬ ಕೊರಗಿದ್ದರೂ ಅವರ ಜಾಗದಲ್ಲಿ ನಿಮ್ಮಂತಹ ಸಾವಿರಾರು ಹಿತೈಷಿಗಳು ಮತ್ತು ಮಾರ್ಗದರ್ಶಿಗಳು ನನಗೆ ದೊರತದ್ದು ನನ್ನ ಪೂರ್ವ ಜನ್ಮದ ಸುಕೃತವೇ ಸರಿ.

ಕಡೆಯದಾಗಿ ತಮ್ಮೆಲ್ಲರಲ್ಲೂ ನನ್ನದೊಂದು ಸಣ್ಣ ಮನವಿ. ನಮ್ಮ ಬ್ಲಾಗಿನ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಇದನ್ನು ಮತ್ತಷ್ಟು ಹೇಗೆ ಉತ್ತಮ ಪಡಿಸ ಬಹುದು ಎಂಬದರ ಕುರಿತಾಗಿ ಸೂಕ್ತ ಸಲಹೆಗಳನ್ನು ಈ ಕೂಡಲೇ ನೀಡುವ ಮುಖಾಂತರ ನಿಮ್ಮೀ ಬ್ಲಾಗನ್ನು ಮತ್ತಷ್ಟು ಮಗದಷ್ಟು ಉತ್ತಮ ಸಾಹಿತ್ಯತಾಣವನ್ನಾಗಿ ಮಾಡಬೇಕೆಂದು ಕೋರುತ್ತೇನೆ. ತನ್ಮೂಲಕ ಇದುವರೆಗೂ ನಮ್ಮ ಮಸ್ತಕದಲ್ಲಿ ಇದ್ದದ್ದನ್ನು ಡಿಜಿಟಲ್ ಪುಸ್ತಕ ರೂಪದಲ್ಲಿ ಸಂಗ್ರಹಿಸಿ ನಮ್ಮ ಮುಂದಿನ ಪೀಳಿಗೆಯವರಿಗೂ ಅದನ್ನು ಉಳಿಯುವಂತೆ ಮಾಡುವ ಜವಾಬ್ಧಾರಿ ನಮ್ಮ ನಿಮ್ಮೆಲರ ಮೇಲಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳವಾಗಿದ್ದು ಅಲ್ಲಿ ನಮ್ಮ ಸನಾತನ ಧರ್ಮದ  ಆಧಾರದಲ್ಲಿ ಪೂಜೆ ಪುನಸ್ಕಾರಗಳು ನಡೆಯುವ ಮೂಲಕ ಶ್ರದ್ಧಾ ಕೇಂದ್ರಗಳಾಗಿವೆ. ಭಕ್ತಾದಿಗಳು ದೇವಾಲಯಕ್ಕೆ ಹೋಗಿ ತಮ್ಮ ಶಕ್ತ್ಯಾನುಸಾರ ದೇವರನ್ನು ಪೂಜಿಸಿ ನೈವೇದ್ಯವನ್ನು ಅರ್ಪಿಸಿ ಯಥಾ ಶಕ್ತಿ ಕಾಣಿಕೆಯನ್ನು ಅರ್ಪಿಸಿ ಬರುತ್ತಾರೆ. ಇನ್ನು ದೇವಾಲಯಗಳೂ ಸಹಾ ಭಕ್ತರಿಂದ ಆ ರೀತಿಯಾಗಿ ಪಡೆದ ದೇಣಿಗೆಯಿಂದ ಭಕ್ತಾದಿಗಳಿಗೆ ದಿನ ನಿತ್ಯವೂ ದಾಸೋಹ ನಡೆಸುವುದಲ್ಲದೇ, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಹೋಮ ಹವನಗಳನ್ನು ನಡೆಸುತ್ತಾ, ವಸುದೈವ ಕುಟುಂಬಕಂ ಎಂಬ ತತ್ವದಡಿಯಲ್ಲಿ, ಸರ್ವೇ ಜನಾಃ ಸುಖಿನೋ ಭವಂತು. ಲೋಕಾಃ ಸಮಸ್ತಾಃ ಸನ್ಮಂಗಳಾನಿ ಭವಂತು ಎಂದು ಎಲ್ಲರಿಗೂ ಹಾರೈಸುತ್ತವೆ.

t5ಅದೇ ರೀತಿಯಲ್ಲೇ ಧರ್ಮ ಸ್ಥಾಪನೆಗಾಗಿ, ಭಕ್ತರ ಒಳಿತಿಗಾಗಿ ತಿರುಪತಿಯಲ್ಲಿ ವೆಂಕಟರಮಣ ಸ್ವಾಮಿ ಸಾವಿರಾರು ವರ್ಷಗಳಿಂದಲೂ ನೆಲೆಸಿದ್ದು ದೇಶ ವಿದೇಶಗಳಿಂದಲೂ ಲಕ್ಷಾಂತರ ಭಕ್ತಾದಿಗಳು ತಿಮ್ಮಪ್ಪನ ದರ್ಶನಕ್ಕಾಗಿ ಬರುವುದಲ್ಲದೇ ತಮ್ಮ ಮನೋಭಿಷ್ಟಗಳನ್ನು ಈಡೇರಲೆಂದು ವಿವಿಧ ಸೇವೆಗಳನ್ನು ಮಾಡಿಸುವುದಲ್ಲದೇ ಯಥಾಶಕ್ತಿ ದೇವರ ಹುಂಡಿಗೆ ಧನಕನಕಗಳನ್ನು ಅರ್ಪಿಸಿಸುತ್ತಾರೆ. ಹಾಗಾಗಿಯೇ ತಿರುಪತಿಯ ದೇವಾಲಯ ನಮ್ಮ ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. 

kuberaಇನ್ನು ಭಕ್ತಾದಿಗಳು ತಿರುಪತಿಯ ಹುಂಡಿಗೆ ಯಥಾ ಶಕ್ತಿ ಧನಕನಕಗಳನ್ನು ಹಾಕುವ ಹಿಂದೆಯೋ ರೋಚಕವಾದ ಪೌರಾಣಿಕ ಕಥೆಯಿದೆ. ತ್ರೇತಾಯುಗದಲ್ಲಿ ಭಗವಾನ್ ಶ್ರೀನಿವಾಸನು ತಾಯಿ ಪದ್ಯಾವತಿಯನ್ನು ಮದುವೆಯಾಗಲು ಬಯಸಿದಾಗ ಆತನ ಬಳಿ ವಿವಾಹವಾಗಲು ಹಣವಿರಲಿಲ್ಲವಂತೆ. ಆಗ ಶ್ರೀನಿವಾಸನು ದೇವಲೋಕದ ಧನಿಕನಾದ ಕುಬೇರನ ಬಳಿ, ವೈಶಾಖಮಾಸದ, ಶುಕ್ಲಪಕ್ಷದ, ಸಪ್ತಮಿ ದಿನದಂದು, 14 ಲಕ್ಷ ಸುವರ್ಣ ವರಹಗಳನ್ನು ಸಾಲ ರೂಪದಲ್ಲಿ ಪಡೆದು, ವಿವಾಹವಾಗಿ ಸಾವಿರ ವರ್ಷಗಳ ಒಳಗಾಗಿ ಹದಿನಾಲ್ಕು ಲಕ್ಷ ವರಹಗಳ ಸಾಲವನ್ನು ಬಡ್ಡಿಯ ಸಮೇತ ತೀರಿಸುವುದಾಗಿ ಪಡೆದುಕೊಂಡಿರುತ್ತಾನೆ. ಶ್ರೀನಿವಾಸ ಪದ್ಮಾವತಿಯ ಮದುವೆಯಾಗಿ ಸಾವಿರಾರು ವರ್ಷಗಳು ಕಳೆದರೂ ಇನ್ನೂ ಕುಬೇರನ ಸಾಲವನ್ನು ಶ್ರೀನಿವಾಸನು ತೀರಿಸದಿರುವ ಕಾರಣ, ತಿಮ್ಮಪ್ಪನ ಹುಂಡಿಗೆ ಭಕ್ತಾದಿಗಳು ಯಥಾಶಕ್ತಿ ಕಾಣಿಕೆಯನ್ನು ಹಾಕುವ ಮೂಲಕ ಶ್ರೀನಿವಾಸನನ್ನು ಋಣಮುಕ್ತ ಮಾಡುವ ಅಚರಣೆ ರೂಡಿಯಲ್ಲಿದೆ.

promicery_noteಶ್ರೀನಿವಾಸರು ಕುಬೇರನಿಂದ ತನ್ನ ವಿವಾಹಕ್ಕಾಗಿ ಬ್ರಹ್ಮದೇವರ ಸಮಕ್ಷಮ ಮತ್ತು ಸಾಕ್ಷಿಯಲ್ಲಿ ಭಗವಾನ್ ರಾಮ ಮುದ್ರೆಯಿರುವ ಚಿನ್ನದ ನಾಣ್ಯಗಳನ್ನು ಸಾಲವಾಗಿ ಪಡೆದು ಕೊಂಡ ಪುರಾವೆಯಾಗಿ ಈ ಲೋಹದ ಶಾಸನವು ಇಂದಿಗೂ ತಿರುಪತಿ ದೇವಾಲಯದಲ್ಲಿ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ

t2ಸಾಮಾನ್ಯ ದಿನಗಳಲ್ಲಿ ಸರ್ವ ದರ್ಶನಕ್ಕೆ 18 ಗಂಟೆಗಳು ಮತ್ತು ವಿಶೇಷ ಹಬ್ಬ ಹರಿದಿನಗಳಲ್ಲಿ 20 ಗಂಟೆಗಳ ಕಾಲ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಭಕ್ತಾದಿಗಳು ತಮ್ಮ ಅನುಕೂಲದಂತೆ  ಈ ಸಮಯದಲ್ಲಿ ನಡೆಯುವ ವಿವಿಧ ಸೇವೆಗಳಿಗೆ ಸೇವಾಶುಲ್ಕ ಕಟ್ಟಿ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನದ ಪಡೆದು ಸ್ವಾಮಿಯ ಕೃಪಾಶೀರ್ವಾವಾದ ಪಡೆಯುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.

ದುರಾದೃಷ್ಟವಷಾತ್  ಅಂಧ್ರಪ್ರದೇಶದ ಸರ್ಕಾರ ಮತ್ತು ತಿರುಪತಿ ದೇವಾಲಯದ ಆಡಳಿತ ಮಂಡಳಿ ಅದೊಂದು ಧಾರ್ಮಿಕ ಶ್ರದ್ಧಾ ಕೇಂದ್ರ ಎಂಬುದನ್ನು ಮರೆತು ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ದೇವಾಲಯವನ್ನು ವ್ಯಾಪಾರಿತಾಣವಾಗಿ ಪರಿವರ್ತಿಸಿ, ಭಕ್ತಾದಿಗಳು ಹುಂಡಿಗೆ ಹಾಕುವ ಹಣವನ್ನು ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಭಾವಿಸಿ, ದೇವಾಲಯದ ವಿವಿಧ ಸೇವಾ ಶುಲ್ಕವನ್ನು ಏಕಾಏಕಿ ಹೆಚ್ಚಿಸುವ ಮೂಲಕ ದೇವಾಲಯವನ್ನು ಆದಾಯದ ಕೇಂದ್ರವನ್ನಾಗಿಸಿ ಮಾಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

t3ನಿಜ ಹೇಳ ಬೇಕೆಂದರೆ, ಕಳೆದ ಮೂರ್ನಾಲ್ಕು ದಶಕಗಳಲ್ಲಿ ಆಂಧ್ರ ಪ್ರದೇಶದಲ್ಲಿ ಭಾರೀ ಪ್ರಮಾಣದ ಆಮಿಷದ ಮತಾಂತರವಾಗುತ್ತಿದ್ದು ದಿನೇ ದಿನೇ ಹೆಸರಿಗಷ್ಟೇ  ಹಿಂದೂಗಳಾಗಿದ್ದು ಅವರ ಆಚಾರ ವಿಚಾರಗಳಲ್ಲಿ ಕ್ರೈಸ್ತರಾಗಿ ಹೋಗಿರುವುದಕ್ಕೆ ಮಾಜೀ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ್ ರೆಡ್ಡಿ ಮತ್ತು ಪ್ರಸ್ತುತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರೇ ಸಾಕ್ಷಿ. ವೈ.ಎಸ್.ಆರ್ ರೆಡ್ಡಿ ಮುಖ್ಯಮಂತ್ರಿಯದ ಮೇಲಂತೂ ತಿರುಪತಿಯ ತಿರುಮಲ ದೇವಾಲಯದ ಅಡಳಿತ ಮಂಡಳಿ ಮತ್ತು  ಕೆಲಸಗಾರರಲ್ಲಿ ಹಿಂದೂಯೇತರರು ಇರಬಾರದೆಂಬ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಆಯಕಟ್ಟಿನ ಜಾಗಗಳಲ್ಲಿ ತಮ್ಮ ಸಂಬಂಧೀಕರನ್ನೇ ನೇಮಕ ಮಾಡುವ ಮೂಲಕ ದೇವಾಲಯದಲ್ಲಿ  ಅರ್ಥಿಕ ಅವ್ಯವಸ್ಥೆಗಳಿಗೆ ಕಾರಣವಾಗಿದ್ದಲ್ಲದೇ ತಿರುಪತಿಯ ಸಪ್ತಗಿರಿಗಳಲ್ಲೇ  ಭಾರೀ ದೊಡ್ಡದಾದ ಚರ್ಚ್ ಕಟ್ಟಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಹೋಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ತಮ್ಮ ರಾಜಕೀಯದ ತೆವಲುಗಳಿಗಾಗಿ ವಿವಿಧ ರೀತಿಯ ಆಮಿಷಗಳು,  ಉಚಿತ ಭಾಗ್ಯಗಳನ್ನು ಜನರಿಗೆ  ಕೊಡುವ ಮೂಲಕ ಆಂಧ್ರ ಪ್ರದೇಶದ ಸರ್ಕಾರೀ ಖಜಾನೆಯನ್ನು ಬರಿದು ಮಾಡಿ ಸರ್ಕಾರವನ್ನು ನಡೆಸಲು ಹಣವಿಲ್ಲದೇ ತಿರುಪತಿ ದೇವಸ್ಥಾನಗಳ ಆಸ್ತಿಯನ್ನು ಹರಾಜು ಮಾಡುವಷ್ಟರ ಮಟ್ಟಿಗೆ ದಿವಾಳಿಯಾಗಿದೆ. ಇದಕ್ಕೆ ಭಕ್ತರು ಮತ್ತು ನ್ಯಾಯಾಲಯವೂ ವಿರೋಧ ವ್ಯಕ್ತಪಡಿಸಿದ ಕಾರಣ, ಸದ್ಯಕ್ಕೆ ಆದನ್ನು ಕೈ ಬಿಟ್ಟ ಸರ್ಕಾರ, ಪರೋಕ್ಷವಾಗಿ ದೇವಾಲಯದ ಸೇವಾಶುಲ್ಕವನ್ನು ಹೆಚ್ಚಿಸಲು ಹೊರಟಿರುವುದು ಅಕ್ಷಮ್ಯ  ಅಪರಾಧವೆಂದರೂ ತಪ್ಪಾಗದು.

ಕಳೆದ ವಾರ ಫೆ. 17ರಂದು  ಟಿಟಿಡಿ ಟ್ರಸ್ಟ್‌ ಸಭೆಯಲ್ಲಿ ವಿವೇಚನಾ ಕೋಟಾಕ್ಕೆ ಸಂಬಂಧಿಸಿದ ಸೇವೆಗಳ ದರದಲ್ಲಿ ಬದಲಾವಣೆ ಮಾಡುವ ಪ್ರಸ್ತಾಪನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಹಿಂದಿದ್ದ ಸೇವಾ ಶುಲ್ಕವನ್ನು ಅವೈಜ್ಞಾನಿಕವಾಗಿ ಯದ್ವಾ ತದ್ವಾ ಈ ರೀತಿಯಲ್ಲಿ ಏರಿಸಲಾಗಿದೆ.

ಸೇವೆಗಳು

ಹಾಲಿ ದರ 

ಉದ್ದೇಶಿತ ದರ ₹

ಸುಪ್ರಭಾತ ಸೇವೆ 240 2000
ತೋಮಲ ಸೇವೆ ಮತ್ತು ಅರ್ಚನೆ 440 5000
ಕಲ್ಯಾಣೋತ್ಸವ 1000 2500
ವೇದಾಶೀರ್ವಾದ 3000 10000
ವಸ್ತ್ರಾಲಂಕಾರ 50000 100000

t4ಸುಪ್ರಭಾತ ಸೇವೆಯನ್ನು ₹ 120 ರಿಂದ ₹ 1000 ಕ್ಕೆ ಹೆಚ್ಚಿಸುವಂತೆ ಕೆಲವರು ಪ್ರಸ್ತಾಪಿಸಿದಾಗ, ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ತರಕಾರಿ ಮಂಡಿಯಲ್ಲಿ ಹರಾಜು ಹಾಕುವಂತೆಯೋ ಇಲ್ಲವೇ ಕುರಿ ವ್ಯಾಪಾರ ಮಾಡುವಂತೆಯೋ, ಹೇ ಅದನ್ನು ₹2000ಕ್ಕೆ ಹೆಚ್ಚಿಸಿದರೆ ಏನಾಗುತ್ತದೆ? ಎಂಬ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದರೆ ಅವರ ದೃಷ್ಟಿಯಲ್ಲಿ ಅವರ  ದೇವಾಲಯ ಧಾರ್ಮಿಕ ಕೇಂದ್ರ ಎನ್ನುವುದಕ್ಕಿಂತಲೂ ವ್ಯಾಪಾರ ಕೇಂದ್ರ ಎಂದು ಭಾವಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ರೀತಿ ತಿರುಮಲದಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿನ ಆರ್ಜಿತ ಸೇವೆಗಳ ಶುಲ್ಕಗಳಲ್ಲಿ ಗಣನೀಯವಾಗಿ ಪರಿಷ್ಕರಣೆ ಮಾಡುವುದರಿಂದ ವಿವೇಚನಾ ಕೋಟಾದ ಮೇಲೆ ಇರುವ ಒತ್ತಡ ತಗ್ಗಿಸಲು ಪ್ರಯತ್ನ ಮಾಡಲಾಗುತ್ತಿದೆ ಹೊರತು  ಇದರಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗದು  ಎಂದು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗಿತ್ತಿದೆ.

ladduಇನ್ನು ತಿರುಪತಿಯ ತಿಮ್ಮಪ್ಪನಂತೆಯೇ, ತಿರುಪತಿ ದೇವಾಲಯದ  ಪ್ರಸಾದವಾದ ಲಾಡು ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ತಿರುಪತಿಗೆ ಯಾರೇ ಹೋಗುತ್ತೇವೆ ಎಂದರು ಬಹುತೇಕರು ಅವರ ಕೈಯ್ಯಲ್ಲಿ ಹುಂಡಿಗೆ ಹಾಕಲು ಯಥಾಶಕ್ತಿ ಕಾಣಿಕೆಯನ್ನು ನೀಡುವುದಲ್ಲದೇ, ಬಂದ ನಂತರ ನಮಗೂ ಪ್ರಸಾದ ತನ್ನಿ ಎಂದು ಲಡ್ಡು ತರಲು  ಹಲವರು ಹಣ ಕೊಡುವುದು ವಾಡಿಕೆಯಾಗಿದೆ.  ತಿರುಪತಿ ಲಡ್ಡುವಿಗೆ ಇರುವ ಅಪಾರವಾದ ಬೇಡಿಕೆಯಿಂದಾಗಿ ಟಿಟಿಡಿಯು ಸಹಾ ನರೆರಾಜ್ಯದ ಪ್ರಮುಖ ಪಟ್ಟಣಗಲಲ್ಲಿ ತಿಮ್ಮಪ್ಪನ ದೇವಸ್ಥಾನವನ್ನು ಕಟ್ಟಿಸಿ ಅಲ್ಲಿಯೂ ತಿರುಪತಿ ಪ್ರಸಾದ ಲಭ್ಯವಾಗುವಂತೆ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ. ಅದೇ ರೀತಿಯಾಗಿ ಕೊರೊನಾ ಸಮಯದಲ್ಲಿ ಆನ್​ಲೈನ್​ ಮೂಲಕ   ಅರ್ಚನೆ, ಅಭಿಷೇಕ ಮುಂತಾದ ರೀತಿಯ ಸೇವೆಯನ್ನು ಮಾಡಿಸಿದವರಿಗೆ ಅಂಚೆಯ ಮೂಲಕವೂ  ಪ್ರಸಾದವನ್ನು ಕಳುಹಿಸಲಾಗುತ್ತಿದೆ.  ಈ ರೀತಿಯಾಗಿ ಬಹಳ ವಿಶೇಷವಾದ ರುಚಿ ಹೊಂದಿರುವ ತಿರುಪತಿಯ ಪ್ರಸಾದದ ಬೆಲೆಯನ್ನು ಸದ್ದಿಲ್ಲದೇ ಏರಿಕೆ ಮಾಡಿದ್ದಾರೆ.  ನೇರವಾಗಿ  ಲಡ್ಡುವಿನ ಪ್ರಸಾದ ಬೆಲೆಯನ್ನು ಏರಿಕೆ ಮಾಡಿಲ್ಲವಾದರೂ, ಕೇವಲ 100 ರೂಪಾಯಿ ಇದ್ದ ಜಿಲೇಬಿ ಪ್ರಸಾದದ ಬೆಲೆಯನ್ನು ಈಗ 500 ರೂಪಾಯಿಗೆ ಏರಿಸಿದೆ.

ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್‌ಗೆ ಪ್ರಸ್ತುತ 100 ರೂ.ಗೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲವನ್ನು 2000 ರೂ.ಗೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ನಿಜ ಹೇಳಬೇಕೆಂದರೆ,  ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿಗೆ ಆಗುವ ವೆಚ್ಚ ಕೇವಲ 147.50 ರೂ. ಆಗಿದ್ದು ಅದನ್ನು ಶೇಕಡಾ 239ರಷ್ಟು ಹೆಚ್ಚುವರಿ ಮಾಡಿ ಪ್ರಸಾದದಲ್ಲೂ ಲಾಭವನ್ನು ನಿರೀಕ್ಷೆ ಮಾಡುತ್ತಿರುವುದು ನಿಜಕ್ಕೂ ದುಃಖಕರವಾಗಿದೆ.

ಹಿಂದೂ ಭಕ್ತರಿಂದ ಈ ರೀತಿಯಾಗಿ ಲೂಟಿ ಮಾಡಿದ ಹಣವನ್ನು ಕ್ರೈಸ್ತ ಮತಾಂತರಕ್ಕೆ ಬಳಸಿಕೊಳ್ಳುವುದರ ಜೊತೆಗೆ ತಮ್ಮ ರಾಜಕೀಯದ ತೆವಲುಗಳಿಗೆ ಬಳಸಿಕೊಳ್ಳಲು ಮುಂದಾಗಿರುವ ಈ ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಒಕ್ಕೊರಲಿನಿಂದ ಪ್ರತಿಭಟನೆ ಮಾಡುವುದಲ್ಲದೇ, ತಿರುಪತಿ ಹುಂಡಿಗೆ ಹಾಕುವ ಹಣವನ್ನು ತಮ್ಮ ಊರಿನಲ್ಲೇ ಇರುವ ದೇವಾಲಯದ ಜೀರ್ಣೋದ್ಧಾರಕ್ಕಾಗಲೀ ಇಲ್ಲವೇ,  ನಮ್ಮ ಪ್ರದೇಶದ ಸುತ್ತ ಮುತ್ತಲೂ ನಡೆಯುವ ಧಾರ್ಮಿಕ ಚಟುವಟಿಕೆಗಳು ಮತ್ತು ಹಿಂದೂಗಳ ಸಂರಕ್ಷಣೆಗಾಗಿ ಸದ್ಬಳಕೆ ಮಾಡುವ ಮೂಲಕ ಸದ್ದಿಲ್ಲದೇ ದೇವಾಲಯದ ಆದಾಯವನ್ನು ಕಡಿಮೆ ಮಾಡುವ ಮೂಲಕ  ಈ ಹಿಂದೂ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠವನ್ನು ಕಲಿಸಬಹುದಾಗಿದೆ ಅಲ್ಲವೇ?

ಒಂದು ಗೆರೆಯನ್ನು ಮುಟ್ಟದೇ ಸಣ್ಣದಾಗಿ ಮಾಡ ಬೇಕೆಂದರೆ, ಅದರ  ಪಕ್ಕದಲ್ಲಿ ಒಂದು ದೊಡ್ಡದಾದ ಗೆರೆಯನ್ನು ಎಳೆಯುವ ಮೂಲಕ ಸಣ್ಣ ಮಾಡುವಂತೆ, ಯಾವುದೇ ರೀತಿಯ ಹಾರಾಟ, ಚೀರಾಟ,  ಹೋರಾಟ,  ಪ್ರತಿಭಟನೆಗಳು ಇಲ್ಲದೇ ಸದ್ದಿಲ್ಲದೇ ಆರ್ಥಿಕ ದಿಗ್ಭಂಧನ ಹೇರುವ ಮೂಲಕ ಸರಿದಾರಿಗೆ ತರಬಹುದಾಗಿದೆ ಅಲ್ಲದೇ, ಈಗಾಗಲೇ ನ್ಯಾಯಾಲಯದಲ್ಲಿ ತೀರ್ಪಿತ್ತಿರುವಂತೆ, ದೇವಾಲಯದ ಆಡಳಿತವನ್ನು ಸರ್ಕಾರ ಕೈಯಿಂದ ಸ್ಥಳೀಯ ಆಡಳಿತ ಮಂಡಳಿಗೆ ವರ್ಗಾಯಿಸಿ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ಅಲ್ಲೇ ಡ್ರಾ  ಅಲ್ಲೇ ಬಹುಮಾನ ಎನ್ನುವಂತೆ  ಅದೇ ದೇವಾಲಯದ ಜೀರ್ಣೋದ್ಧಾರ ಮತ್ತು ವಿವಿಧ ಹಿಂದೂ ಧಾರ್ಮಿಕ ಕಾರ್ಯಗಳಿಗೆ ಬಳಸಿಕೊಳ್ಳುವ ಸಮಯ ಬಂದಿದೆ. ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಗೆಲ್ಲುವ ಛಲವಿದೆ ಅಲ್ವೇ?

ತಿರುಪತಿ ತಿಮ್ಮಪ್ಪನನ್ನು ಋಣಮುಕ್ತನಾಗಿ ಮಾಡುವ ಸಲುವಾಗಿ ಭಕ್ತಾದಿಗಳು ಹುಂಡಿಗೆ ಹಾಕುವ ಹಣವನ್ನು ಈ ಭ್ರಷ್ಟ ಹಿಂದೂ ವಿರೋಧಿಗಳು ಈ ರೀತಿಯಾಗಿ ಧರ್ಮವಿರೋಧಿ ಕಾರ್ಯಗಳಿಗೆ ಮತ್ತು ತಮ್ಮ ಖಜಾನೆಯನ್ನು ತಂಬಿಕೊಳ್ಳಲು ದುರ್ಬಳಕೆ ಮಾಡಿ ಕೊಳ್ಳುತ್ತಿರುವುದು ಧರ್ಮದ್ರೋಹವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ

WhatsApp Image 2022-02-06 at 11.00.00 AMತಮ್ಮ 12ನೇ ವಯಸ್ಸಿನಿಂದ 90ನೇ ವಯಸ್ಸಿನ ವರೆಗೂ ಸುಮಾರು ಎಂಟು ದಶಕಗಳ ಕಾಲ ಸುದೀರ್ಘ ವೃತ್ತಿಜೀವನದಲ್ಲಿ 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದ ಭಾರತದ ಗಾನ ಕೋಗಿಲೆ, ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀಮತಿ ಲತಾ ಮಂಗೇಶ್ಕರ್ ಅವರ ತಮ್ಮ 92ನೇ ವಯಸ್ಸಿನಲ್ಲಿ ಸುದೀರ್ಘವಾದ ಆರೋಗ್ಯದಿಂದ ನಿಧನರಾದದ್ದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟವೇ ಸರಿ.

ನೆನ್ನೆ ಬೆಳಿಗ್ಗೆ ಅವರ ನಿಧನದ ಸುದ್ದಿ ಕೇಳಿದ ತಕ್ಷಣವೇ, ಆತ್ಮಕ್ಕೆ ಸದ್ಗತಿಯನ್ನು‌ ಕೊಡಲಿ ಎಂದು ಶ್ರದ್ಧಾಂಜಲಿಯನ್ನ ಅರ್ಪಿಸುವಾಗ ಶ್ರೀಮತಿ. ಲತಾ ಮಂಗೇಶ್ಕರ್ ಎಂದು ಸಂಬೋಧಿಸಿದ್ದನ್ನು ನೋಡಿದ ಆತ್ಮೀಯರೊಬ್ಬರು ಅವರು ಅವಿವಾಹಿತರಾಗಿಯೇ ಇದ್ದಾಗ ಅದು ಹೇಗೆ ಶ್ರೀಮತಿ ಎಂದು ಬರೆದಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳಿದಾಗ, ಹೌದು ನಿಜ. ಆಕೆ 92 ವರ್ಷದ ಅವಿವಾಹಿತೆ ಎನ್ನುವ ಕಾರಣ ಕುಮಾರಿ ಲತಾ ಮಂಗೇಶ್ಕರ್ ಎಂದರೆ ಹಾಸ್ಯಾಸ್ಪದ ಆಗುವ ಕಾರಣ‌ ಶ್ರೀಮತಿ ಎಂದು ಗೌರವದಿಂದ ‌ಸಂಭೋಧಿಸಿದ್ದೇನೆ ಎಂಬ ಸಮಜಾಯಿಶಿ ನೀಡಿದನಾದರೂ ಇಷ್ಟು ವರ್ಷಗಳಾದರೂ ಅವರೇಕೆ ಮದುವೆ ಆಗಿರಲಿಲ್ಲ? ಎಂಬ ಹುಳ ತಲೆಗೆ ಬಿಟ್ಟುಕೊಂಡು ಸ್ವಲ್ಪ ಅಂತರ್ಜಾಲದಲ್ಲಿ ತಡಕಾಡಿದಾಗ ಅವರ ಬಗ್ಗೆ ಎಷ್ಟೋ ಜನರಿಗೆ ತಿಳಿಯದಿದ್ದ ವಿಷಯಗಳನ್ನು ತಿಳಿಸಲೆಂದೇ ಈ ಲೇಖನವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.

dinanathನಮಗೆಲ್ಲಾ ತಿಳಿದಿರುವಂತೆ ಲತಾ ಮಂಗೇಶ್ಕರ್ ಅವರು ಮಹಾರಾಷ್ಟ್ರದ ಮುಂಬೈಯಲ್ಲಿ ಇದ್ದ ಕಾರಣ ಬಹುತೇಕರು ಆಕೆಯನ್ನು ಮರಾಠಿಗರು ಎಂದೇ ಭಾವಿಸಿರುತ್ತಾರೆ. ನಿಜ ಹೇಳಬೇಕೆಂದರೆ ಆಕೆ ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಆದರೂ ಆಕೆಯ ತಂದೆ ಗೋವಾದ ಮೂಲದ ಗೌಡಸಾರಸ್ವತ ಬ್ರಾಹ್ಮಣರು ಮತ್ತು ಅವರ ತಾಯಿ ಗೋಮಾಂತಕ್ ಮರಾಠಾ ಬ್ರಾಹ್ಮಣರು. ಗೋವಾದ ರಾಜಧಾನಿ, ಪಣಜಿ (ಪಂಜಿಮ್)ಯಿಂದ ಸುಮಾರು 21 ಕಿಮೀ ದೂರ ದಲ್ಲಿರುವ ಮಂಗೇಶಿಯ ಮಂಗೇಶಿ ದೇವಾಲಯವು ಅವರ ಕುಲದೇವರು. ಇಂತಹ ಮಂಗೇಶಿ ಊರಿನಲ್ಲಿ ಹುಟ್ಟಿ ಬೆಳೆದ ಲತಾ ಅವರ ತಂದೆ ದೀನಾನಾಥ್ ಅವರ ಮನೆತನದ ಹೆಸರು ಹರ್ಡಿಕರ್ ಎಂದಿದ್ದು ಸಂಗೀತ ಮತ್ತು ನಾಟಕದ ಶಿಕ್ಷಕರಾಗಿದ್ದ ದೀನಾನಾಥ್ ಹರ್ಡೀಕರ್ ಅವರು ತಮ್ಮದೇ ಆದ ನಾಟಕ ಕಂಪನಿಯನ್ನು ಸ್ಥಾಪಿಸುವ ಸಲುವಾಗಿ ಕೊಲ್ಹಾಪುರಕ್ಕೆ ಹೋದಾಗ, ತಮ್ಮೂರಿನ ಭಗವಾನ್ ಶಿವ ಅರ್ಥಾತ್ ಮಂಗೇಶ್ ದೇವರ ಮೇಲಿನ ಗೌರವದಿಂದಾಗಿ ಅವರು ತಮ್ಮ ಉಪನಾಮವನ್ನು ಮಂಗೇಶ್ಕರ್ ಎಂದು ಬದಲಾಯಿಸಿಕೊಂಡರು. ಈ ಮೂಲಕ ತಮ್ಮ ಮನೆದೇವರು ಮತ್ತು ಹುಟ್ಟೂರು ಎರಡನ್ನು ಒಂದೇ ಉಪನಾಮದೊಂದಿಗೆ ಸೇರಿಸಿಕೊಂಡ ಪರಿಣಾಮ ಲತಾ ಅವರ ಹೆಸರಿನೊಂದಿಗೆ ಮಂಗೇಶ್ಕರ್ ಉಪನಾಮ ಸೇರಿಕೊಂಡಿತು. ಹಾಗಾಗಿಯೇ ತಮ್ಮ ಜೀವಮಾನವಿಡೀ ಮಂಗೇಶಿ ದೇವಾಲಯದೊಂದಿಗೆ ಅವಿನಾಭಾವ ಸಂಬಂಧ ಇಟ್ಟು ಕೊಂಡಿದ್ದಲ್ಲದೇ ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ. ಲತಾ ಮಂಗೇಶ್ಕರ್ ಅವರಿಂದಾಗಿ ತಮ್ಮ ಗ್ರಾಮ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಅಲ್ಲಿನ ಸ್ಥಳೀಯರು ಹೆಮ್ಮೆ ಪಡುತ್ತಾರೆ. ಲತಾ ಮಂಗೇಶ್ಕರ್ ಅವರು ಸಾಯುವ ಒಂದು ವಾರದ ಮೊದಲು, ಮಂಗೇಶಿ ದೇವಸ್ಥಾನದಲ್ಲಿ ಅವರ ಆರೋಗ್ಯಕ್ಕಾಗಿ ಪೂಜೆ ನಡೆಸಲಾಗಿತ್ತು.

ಲತಾ ಅವರ ಮೂಲ ಹೆಸರು ಹೇಮಾ ಮಂಗೇಶ್ಕರ್ ಎಂದಿತ್ತು. ನಂತರ ಆಕೆಯ ತಂದೆಯ ಭಾವ ಬಂಧನ ಎಂಬ ನಾಟಕದಲ್ಲಿ ಬರುವ ಸ್ತ್ರೀ ಪಾತ್ರವಾದ ಲತಿಕಾ ಎಂಬ ಪಾತ್ರದಿಂದ ಪ್ರೇರಿತರಾಗಿ ತಮ್ಮ ಮಗಳಿಗೆ ಲತಾ ಎಂದು ಮರುನಾಮಕರಣ ಮಾಡಿದರು

ಸಣ್ಣ ವಯಸ್ಸಿನಲ್ಲಿ ಎಲ್ಲರಂತೆ ಲತಾ ಅವರನ್ನು ಅವರ ಮನೆಯ ಸಮೀಪದ ಶಾಲೆಗೆ ಸೇರಿಸಿ, ಶಾಲೆಗೆ ಹೋದ ಮೊದಲನೇ ದಿನವೇ ಆವರ ಶಿಕ್ಷಕರು ಅದಾವುದೋ ಕಾರಣಕ್ಕೆ ಗದರಿದ್ದನ್ನೇ ನೆಪಮಾಡಿಕೊಂಡು ಮುಂದೆಂದೂ ಲತಾ ಶಾಲೆಗೆ ಹೋಗಲಿಲ್ಲ ಎನ್ನುವುದು ಅದೆಷ್ಟು ಜನರಿಗೆ ತಿಳಿದಿದೆ?

ಲತಾರವರು ಹಿನ್ನಲೆ ಗಾಯಕಿಯಗುವ ಮುನ್ನ ಕೆಲವೊಂದು ಚಿತ್ರಗಳಲ್ಲಿ ನಟನೆಯನ್ನೂ ಸಹಾ ಮಾಡಿದ್ದರು. ಆರಂಭದಲ್ಲಿ ಆಕೆಯದ್ದು ಕೀರಲು ಧ್ವನಿ ಎನ್ನುವ ಕಾರಣ ನೀಡಿ ಹಿನ್ನಲೆ ಗಾಯಕಿ ಆಗಲು ನಾಲಾಯಕ್ ಎಂದು ಜರಿದ್ದವರೇ ನಂತರ ಆಯೇಗಾ ಆನೇ ವಾಲಾ ಆಯೇಗ ಹಾಡು ಸೂಪರ್ ಡ್ಯೂಪರ್ ಹಿಟ್ ಆಗುತ್ತಿದ್ದಂತೆಯೇ ತಮ್ಮ ಚಿತ್ರಗಳಿಗೆ ಹಾಡಬೇಕೆಂದು ದಂಬಾಲು ಬಿದ್ದದ್ದಂತೆ.

ತಾವು ಹಾಡುವ ಪ್ರತಿಯೊಂದು ಹಾಡುಗಳನ್ನು ಸ್ವತಃ ತಮ್ಮ ಕೈಬರಹಗಳಲ್ಲಿಯೇ ಬರೆದುಕೊಂಡು ಹಾಡುತ್ತಿದ್ದ ಲತಾರವರು ಹಾಡುಗಳನ್ನು ತಮ್ಮ ಪುಸ್ತಕಗಳಲ್ಲಿ ಬರೆಯುವ ಮುನ್ನಾ ಶ್ರೀ ಎಂದು ಬರೆಯುತ್ತಿದ್ದದ್ದು ಗಮನಾರ್ಹವಾಗಿತ್ತು. ಅದೇ ರೀತಿ ರೆಕಾರ್ಡಿಂಗ್ ಸ್ಟುಡಿಯೋ ಎನ್ನುವುದು ದೇವಾಲಯವಿದ್ದಂತೆ ಎಂದು ಭಾವಿಸಿದ್ದ ಕಾರಣ ರೆಕಾರ್ಡಿಂಗ್ ಸ್ಟುಡಿಯೋ ಪ್ರವೇಶಿಸುವ ಮುನ್ನಾ ತಮ್ಮ ಪಾದರಕ್ಷೆಗಳನ್ನು ಹೊರಗಿಟ್ಟೇ ಬರಿ ಗಾಲಿನಲ್ಲಿಯೇ ಹಾಡುಗಳನ್ನು ಹಾಡುತ್ತಿದ್ದದ್ದು ಅಭಿನಂದನಾರ್ಹ.

ಸಾಮಾನ್ಯವಾಗಿ ಮೆಣಸಿನಕಾಯಿ ಖಾರ ಎಂದು ಬಹುತೇಕರು ಜರಿದರೆ, ತಮ್ಮ ಕಂಠ ಇಂಪಾಗಲು ಕೊಲ್ಹಾಪುರಿ ಮೆಣಸಿನಕಾಯಿಯೇ ಕಾರಣ ಎಂದು ಬಲವಾಗಿ ನಂಬಿದ್ದ ಲತಾ ತಮ್ಮ ಆಹಾರದಲ್ಲಿ ಹೆಚ್ಚಾಗಿ ಕೊಲ್ಹಾಪುರಿ ಮೆಣಸಿನಕಾಯಿ ಸೇವಿಸುತ್ತಿದ್ದದ್ದೂ ಅಚ್ಚರಿಯ ಸಂಗತಿಯಾಗಿದೆ.

photographyಸಂಗೀತ ಬಿಟ್ಟರೆ ಲತಾ ಅವರಿಗಿದ್ದ ಮತ್ತೊಂದು ಹವ್ಯಾಸವೆಂದರೆ ಛಾಯಾ ಗ್ರಹಣ. ಹಾಗಾಗಿ ಲತಾ ಅವರು ಎಲ್ಲೇ ಹೋದರೋ ಅವರ ಜೊತೆ ಕ್ಯಾಮೆರಾ ಅವಿಭಾಜ್ಯ ಅಂಗವಾಗಿರುತ್ತಿತ್ತು. ಹಾಡುಗಳ ರೆಕಾರ್ಡಿಂಗ್ ಎಂದು ಸ್ಟುಡಿಯೋಗೆ ಹೋಗುವಾಗಲೂ ಕ್ಯಾಮೆರಾ ತೆಗೆದುಕೊಂಡು ಹೋಗಿ ಅಲ್ಲಿನ ಸಹಗಾಯಕರು ಮತ್ತು ಸಂಗೀತಗಾರ ಪೋಟೋಗಳನ್ನು ತೆಗೆಯುವುದು ಅವರ ಹವ್ಯಾಸವಾಗಿತ್ತು. ಇದೇ ಕಾರಣದಿಂದಾಗಿಯೇ 1946ರಲ್ಲಿಯೇ 1200 ರೂಪಾಯಿಗಳಿಗೆ ರೋಲಿಫ್ಲೆಕ್ಸ್ ಕ್ಯಾಮೆರಾ ಖರೀದಿಸಿ ಹತ್ತು ಹಲವಾರು ಪೋಟೋಗಳನ್ನು ತೆಗೆದು ಅದಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಅಂದಿನ ಮಸೂರದ ಕ್ಯಾಮೆರಾದ ಮೂಲಕ ಸೆರೆ ಹಿಡಿಯುವ ಮಜಾ ಇಂದಿನ ಡಿಜಿಟಲ್ ಇಲ್ಲವೇ ಮೊಬೈಲ್ ಕ್ಯಾಮೆರಾಗಳಲ್ಲಿ ಇರುವುದಿಲ್ಲ ಎಂದು ಹಲವಾರು ಬಾರಿ ಹೇಳುತ್ತಿದ್ದರು.

ಬಾಲ್ಯದಲ್ಲೇ ಅವರ ತಂದೆಯವರು ನಿಧನರಾದ ಕಾರಣ ಸಂಸಾರದ ನೊಗವನ್ನು ಹೊರಲು ಸಂಗೀತವನ್ನು ಆಶ್ರಯಿಸದ ಕಾರಣ ಅವರು ಅವಿವಾಹಿತರಾಗಿಯೇ ಉಳಿದರು ಎನ್ನುವುದು ಎಲ್ಲರ ಅಭಿಪ್ರಾಯವಾದರೂ ಅವರ ಸಣ್ಣವಯಸ್ಸಿನಲ್ಲಿ ಅವರ ಪ್ರಣಯಕ್ಕೆ ಭಂಗವಾದ ಕಾರಣ ಜೀವನ ಪರ್ಯಂತ ಭಗ್ನ ಪ್ರೇಮಿಯಾಗಿಯೇ ಉಳಿದರು ಎನ್ನುವುದು ಕುತೂಹಲಕಾರಿಯಾದ ಸತ್ಯವಾಗಿದೆ

rajsinghಸಂಗೀತ ಬಿಟ್ಟರೆ ಕ್ರಿಕೆಟ್ ಅವರ ಅಚ್ಚು ಮೆಚ್ಚಿನ ವಿಷಯವಾಗಿತ್ತು. ಅದಕ್ಕೆ ಕಾರಣ, ಲತಾ ಅವರ ಸಹೋದರಾಗಿದ್ದ ಶ್ರೀ ಹೃದಯನಾಥ್ ಮಂಗೇಶ್ಕರ್ ಅವರು ಒಳ್ಳೆಯ ಕ್ರಿಕೆಟ್ ಆಟಗಾರರಾಗಿದ್ದರು. ಸ್ವತಃ ಕ್ಲಬ್ ಮಟ್ಟದ ಕ್ರಿಕೆಟ್ಟಿಗರಾಗಿದ್ದು ಮುಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿದ್ದಲ್ಲದೇ ಇನ್ನೂ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ ರಾಜ್ ಸಿಂಗ್ ಡುಂಗರ್ಪುರ್ ಅವರ ಉತ್ತಮ ಸ್ನೇಹಿತರಾಗಿದ್ದರು. ಹಾಗಾಗಿ ರಾಜ್ ಸಿಂಗ್ ಡುಂಗರ್ಪುರ್ ಅವರು ಅನೇಕ ಬಾರಿ ಲತಾ ಅವರ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಆರಂಭದಲ್ಲಿ ಆದ ಸ್ನೇಹ ನಂತರ ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದರು.

lathaರಾಜ್ ಸಿಂಗ್ ಡುಂಗರ್ಪುರ್ ರಾಜಸ್ಥಾನದ ರಾಜಮನೆತನಕ್ಕೆ ಸೇರಿದರೆ, ಲತಾ ರವರು ಸಾಮಾನ್ಯ ಮನೆತನದವರು. ಹಾಗಾಗಿ ರಾಜ್ ಡುಂಗರ್‌ಪುರ್ ಅವರ ತಂದೆ ಮಹಾರಾವಲ್ ಲಕ್ಷ್ಮಣ್ ಸಿಂಗ್‌ಜಿಯವರು ಲತಾರವರು ರಾಜಮನೆತನದವರಲ್ಲದ ಕಾರಣ ಅವರಿಬ್ಬರ ಮದುವೆಗೆ ಒಪ್ಪದೇ ಹೋದಾಗ, ತಂದೆಯ ನಿರ್ಧಾರಕ್ಕೆ ಕಟಿ ಬದ್ಧರಾಗಿ ತನ್ನ ಜೀವನದಲ್ಲಿ ಯಾರನ್ನೂ ಮದುವೆಯಾಗುವುದಿಲ್ಲ ಎಂದು  ರಾಜ್ ಡುಂಗರ್‌ಪುರ್ ನಿರ್ಧರಿಸಿದರೆ, ಅವರ ನಿರ್ಧಾರಕ್ಕೆ ಪ್ರತಿಯಾಗಿ ಲತಾರವರೂ ಸಹಾ ತಾನೂ ಕೂಡಾ ಅವಿವಾಹಿತರಾಗಿಯೇ ಉಳಿಯುವ ನಿರ್ಧಾರವನ್ನು ಕೈಗೊಂಡರು. ಅವರಿಬ್ಬರೂ ಮದುವೆಯಾಗದಿದ್ದರೂ ಸಹಾ ಜೀವಮಾನವಿಡೀ ಪರಸ್ಪರ ಬದ್ಧತೆ, ಗೌರವ, ಪ್ರೀತಿ ಮತ್ತು ಅದರದಿಂದಲೇ ಉತ್ತಮ ಗೆಳೆಯರಾಗಿದ್ದರು. ಲತಾ ಅವರನ್ನು ರಾಜ್ ಸಿಂಗ್ ಪ್ರೀತಿಯಿಂದ ಮಿಥೂ ಎಂದು ಕರೆಯುತ್ತಿದ್ದರಿಂದ ಅದೇ ಹೆಸರು ಮುಂದೆ ಲತಾ ಅವರ ಅಡ್ಡ ಹೆಸರಾಗಿತ್ತು.

1983ರಲ್ಲಿ ಕಪಿಲ್ ದೇವ್ ಅವರ ನೇತೃತ್ವದ ತಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಚ್ಚರಿಯಾಗಿ ಫೈನಲ್ಸ್ ತಪುಪಿದ್ದಾಗ, ಇದೇ ರಾಜ್ ಸಿಂಗ್ ಡುಂಗಾಪುರ್ ತಂಡದ ಮ್ಯಾನೇಜರ್ ಅಗಿದ್ದರು. ಲತಾ ಅವರೊಂದಿಗಿನ ಗೆಳೆತನದಿಂದಾಗಿಯೇ ಫೈನಲ್ಸ್ ಪಂದ್ಯಕ್ಕೂ ಮುನ್ನಾ ಇಡೀ ಭಾರತ ತಂಡಕ್ಕೆ ಲತಾ ತಮ್ಮ ಸ್ವಂತ ಖರ್ಚಿನಲ್ಲಿ ಭರ್ಜರಿಯಾದ ಔತಣಕೂಟವನ್ನು ಏರ್ಪಡಿಸಿ ವಿಜಯಶಾಲಿಳಾಗಿ ಎಂದು ಹಾರೈಸಿದ್ದಲ್ಲದೇ, ಲಾರ್ಡ್ಸ್ ನ ಫೈನಲ್ ಪಂದ್ಯವನ್ನು ಖುದ್ದಾಗಿ ವೀಕ್ಷಿಸಿ ಭಾರತ ತಂಡ ವಿಶ್ವಕಪ್ ಗೆದ್ದಾಗ ಸಂಭ್ರಮಿಸಿದ್ದರು.

worldcupಮುಂದೆ ವಿಜಯೀಶಾಲಿ ತಂಡಕ್ಕೆ ನಗದು ಬಹುಮಾನವನ್ನು ನೀಡಲು ಬಿಸಿಸಿಐನ ಬಳಿ ಹಣವಿಲ್ಲದಿದ್ದಾಗ ಲತಾಮಂಗೇಶ್ಕರ್ ಅವರು ಆಟಗಾರರ ಸಹಾಯಾರ್ಥ ಸಂಗೀತ ರಸಂಜೆಯನ್ನು ಏರ್ಪಡಿಸಿ ಅಂದಿನ ಕಾಲಕ್ಕೆ ಸುಮಾರು 25-30 ಲಕ್ಷ ಹಣವನ್ನು ಸಂಗ್ರಹಿಸಿಕೊಟ್ಟಿದ್ದರು. ಇದರ ಕೃತಜ್ಞತೆಗಾಗಿ ಅಂದಿನಿಂದ ಭಾರತದಲ್ಲಿ ನಡೆಯುವ ಪ್ರತೀ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಲತಾ ಮಂಗೇಶ್ಕರ್ ಅವರಿಗೆ ಎರಡು ಟಿಕೆಟ್ಗಳನ್ನು ಮೀಸಾಗಿಡುವ ಅಲಿಖಿತ ನಿಯಮ ಜಾರಿಗೆಯಲ್ಲಿತ್ತು.

sachinಸಚಿನ್ ತೆಂಡುಲ್ಕರ್ ಅವರನ್ನು ತಮ್ಮ ಮಗನೆಂದೇ ಸಂಭೋಧಿಸುತ್ತಿದ್ದ ಲತಾರವರು ದ್ರಾವಿಡ್, ಗಂಗೂಲಿ, ವಿವಿಎಸ್ ಲಕ್ಷಣ್ ಅವರ ಬಗ್ಗೆಯೂ ಒಲವಿತ್ತು. ಸಚಿನ್ 99 ಅಂತರಾಷ್ಟೀಯ ಶತಕಗಳನ್ನು ಗಳಿಸಿ 100 ನೇ ಶತಕಕ್ಕಾಗಿ ಎರಡು ಮೂರು ವರ್ಷಗಳ ಕಾಲ 90ರ ಗಡಿಗೆ ಬಂದು ಪರದಾಡುತ್ತಿದ್ದಾಗ ಇದೇ ಲತಾರವರು ಸಚಿನ್ ತೆಂಡೂಲ್ಕರ್ ಅವರಿಗೆ ಧೈರ್ಯ ತುಂಬಿದ್ದರು.

savarkarಲತಾ ಮಂಗೇಶ್ಕರ್ ಅವರ ಕುಟುಂಬಕ್ಕೂ ಅಪ್ರತಿಮ ಸ್ವಾತಂತ್ಯ್ರ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ (ವೀರ್ ಸಾವರ್ಕರ್) ಅವರಿಗೂ ಅವಿನಾಭಾವ ಗೆಳೆತನವಿತ್ತು ಹಾಗಾಗಿಯೇ ಲತಾ ಮಂಗೇಶ್ಕರ್ ಅವರು ಸಾವರ್ಕರ್ ಅವರನ್ನು ಪ್ರೀತಿಯಿಂದ ತಾತ್ಯಾ ಎಂದು ಕರೆಯುತ್ತಿದ್ದರಲ್ಲದೇ, ದೀನದಲಿತರ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಸಾವರ್ಕರ್ ಅವರು ಆಯೋಜಿಸುತ್ತಿದ್ದ ಅಂತರ-ಜಾತಿ ಸಹಪಂಕ್ತಿ ಭೋಜನಗಳಿಗೆ ತಮ್ಮ ತಂದೆಯವರೊಡನೆ ಲತಾ ಅವರೂ ಸಹಾ ಅನೇಕ ಬಾರಿ ಭಾಗಿಗಳಗಿದ್ದರು.

ಇದೇ ಪ್ರೀತಿಯ ಕಾರಣದಿಂದಾಗಿ ಮುಂದೆ ಲತಾ ಮಂಗೇಶ್ಕರ್ ಅವರು ಸಾವರ್ಕರ್ ಅವರು ಬರೆದ ಜಯೋಸ್ತುತೇ ಜಯೋಸ್ತುತೇ, ಶ್ರೀ ಮಹಾನ್ಮಾಂಗ್ಲೀ, ನೀ ಮಜಾಸಿ ನೇ, ಪರರ್ಟ್ ಮಾತೃಭೂಮಿಲಾ, ಸಾಗರ ಪ್ರಾಣ ತಲಮಲಾಲ ಇನ್ನು ಮುಂತಾದ ಹಲವಾರು ಹಾಡುಗಳಿಗೆ ಧನಿಯಾಗಿ ಹಾಡುಗಳನ್ನು ವಿಶ್ವವಿಖ್ಯಾತಿ ಗೊಳಿಸಿದರು.

ಹೀಗೆ ಬರೆಯುತ್ತಾ ಹೋದಲ್ಲಿ ಲತಾ ಅವರ ಕುರಿತಾಗಿ ಅದೆಷ್ಟೋ ಅವಿತಿಟ್ಟ ವಿಷಯಗಳನ್ನು ಬರೆಯ ಬಹುದಾದರೂ, ಲತಾರವರು ಭೌತಿಕವಾಗಿ ನಮ್ಮನ್ನಗಲಿದ್ದರೂ ಅವರ ಹಾಡುಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಹಚ್ಚ ಹಸಿರಾಗಿಯೇ ಇರುತ್ತಾರೆ ಎನ್ನುವ ಆಶಯ ನಮ್ಮದಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಗುಬ್ಬಚ್ಚಿ

gubbi2ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಶಾಲೆಗಳಲ್ಲಿ ಕವಿ ಶ್ರೀ ಎ. ಕೆ. ರಾಮೇಶ್ವರ ಅವರು ಬರೆದಿರುವಂತಹ

ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು?
ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು?
ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನಲ್ಲಿ?
ಕಾಳನು ಹುಡುಕುತ ನೀರನು ನೋಡುತ ಅಲೆಯುವೆ ಏಕಿಲ್ಲಿ?
ಕಾಳನು ಕೊಟ್ಟು ನೀರನು ಕುಡಿಸುವೆ ಆಡಲು ಬಾ ಇಲ್ಲಿ
ಹಣ್ಣನು ಕೊಟ್ಟು ಹಾಲನು ನೀಡುವೆ ನಲಿಯಲು ಬಾ ಇಲ್ಲಿ?
ಎಂಬ ಕವಿತೆಯನ್ನು ಹೇಳಿಕೊಡುತ್ತಿದ್ದರು. ಆಗೆಲ್ಲಾ ನಮ್ಮೆಲ್ಲರ ಮನೆಗಳ ಮುಂದೆ ಗುಬ್ಬಚ್ಚಿ ಸರ್ವೇಸಾಮನ್ಯವಾಗಿ ಹಾರಾಡುತ್ತಿದ್ದರಿಂದ ಅವುಗಳ ಪರಿಚಯ ಮನಗೆ ಚೆನ್ನಾಗಿಯೇ ಇದ್ದ ಕಾರಣ ಆ ಹಾಡು ನಮಗೆ ಬಹಳ ಆಪ್ಯಾಯಮಾನವಾಗುತ್ತಿತ್ತು.

ಇಂದಿಗೂ ಸಹಾ ಅನೇಕ ಶಿಶುವಿಹಾರಗಳಲ್ಲಿ ಅದೇ ಹಾಡನ್ನು ಹೇಳಿಕೊಡುತ್ತಾರಾದರೂ, ಇಂದು ಆ ಹಾಡನ್ನು ಹಾಡುವ ಮಕ್ಕಳಲ್ಲಿ ಅಂದು ನಾವು ಹಾಡುತ್ತಿದ್ದಂತಹ ಉತ್ಸಾಹ ಕಾಣಸಿಗುವುದಿಲ್ಲ.  ವಿಪರೀತವಾದ ನಗರೀಕರಣದಿಂದಾಗಿ ಇಂದಿನ ಕಾಂಕ್ರೀಟ್ ಕಾಡಿನಲ್ಲಿ ಹುಟ್ಟಿ ಬೆಳೆದ ಮಕ್ಕಳು ಕೇವಲ ಪುಸ್ತಕದಲ್ಲಿ ಮಾತ್ರ ಗುಬ್ಬಚ್ಚಿಯನ್ನು ನೋಡಿರುತ್ತಾರೆಯೇ ಹೊರತು, ಜೀವಂತವಾಗಿ ಗುಬ್ಬಿಯ ಅರಿವಿಲ್ಲದಿರುವುದರಿಂದ ಆ ಮಕ್ಕಳಿಗೆ ಗುಬ್ಬಚ್ಚಿಯ ನಡುವೆ ಭಾವನಾತ್ಮಕ ಸಂಬಂಧವೇ ಇಲ್ಲದಿರುವ ಕಾರಣ ಆ ರೀತಿಯ ಭಾವನೆಗಳನ್ನು ನಿರೀಕ್ಷಿಸುವುದು ತಪ್ಪಾದೀತು.

gubbi3ನಾವೆಲ್ಲಾ ಚಿಕ್ಕವರಿದ್ದಾಗ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುವ ಹೆಚ್ಚಾಗಿ ಬೆಳ್ಳಗೇ ಇರುವ, ಗಂಟಲ ಸುತ್ತಲೂ ಕಂದು ಬಣ್ಣದ ಪಟ್ಟೆ ಇರುವ ನೂರಾರು ಗುಬ್ಬಚ್ಚಿಗಳು ಗುಂಪು ಗುಂಪಾಗಿ ನಮ್ಮೆಲ್ಲರ ಮಧ್ಯೆ ಕಾಣಸಿಗುತ್ತಿತ್ತು ಮನೆಯ ಮುಂದೆ ಚಿಲ್ಲಿರುತ್ತಿದ್ದ ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ಕೊಕ್ಕಿನಲ್ಲಿ ಚುಚ್ಚಿ ತಿನ್ನುತ್ತಾ ಚಿಂವ್ ಚಿಂವ್ ಎನ್ನುತ್ತಾ ಶಬ್ಧ ಮಾಡುತ್ತಿದ್ದದ್ದು ನಮಗೆಲ್ಲಾ ಹಿತವಾಗಿರುತ್ತಿತ್ತು. ಸಾಧಾರಣವಾಗಿ ಮನೆಗಳ ಛಾವಣಿಯ ಜಂತುವಿನಲ್ಲೋ ಇಲ್ಲವೇ ಯಾರೂ ಮುಟ್ಟದಂತಹ ಜಾಗಗಳಲ್ಲಿ ಗೂಡನ್ನು ಕಟ್ಟಿಕೊಂಡು ಅವುಗಳ ಸುಖಃ ಸಂಸಾರ ಫಲವಾಗಿ ಇಡುತ್ತಿದ್ದ ಮೊಟ್ಟೆಗಳನ್ನು ನೋಡುವುದೇ ನಮಗೆ ಆನಂದವಾಗುತ್ತಿತ್ತು. ಆ ಮೊಟ್ಟೆಯೊಡೆದು ಮರಿಗಳಾಗಿ ಅವುಗಳಿಗೆ ಅಮ್ಮ ಆಹಾರವನ್ನು ತಿನ್ನಿಸುವುದನ್ನು ವರ್ಣಿಸುವುದಕ್ಕಿಂತಲು ನೋಡಿ ಅನುಭವಿಸಿದವರಿಗೇ ಗೊತ್ತು ಅದರ ಗಮ್ಮತ್ತು. ಹಾಗಾಗಿಯೇ ಅಂದು ಬಹಳಷ್ಟು ಮನೆಗಳಲ್ಲಿ ತಮ್ಮ ಮುದ್ದಿನ ಮಕ್ಕಳಿಗೆ ಪ್ರೀತಿಯಿಂದ ಗುಬ್ಬೀ ಗುಬ್ಬೀ ಎಂದೇ ಪ್ರೀತಿಯಿಂದ ಸಂಭೋದಿಸುತ್ತಿದ್ದದ್ದೂ ಇದೆ.

WhatsApp Image 2022-02-02 at 9.47.41 PM (1)ದುರದೃಷ್ಟವಷಾತ್ ಇತ್ತೀಚಿನ ವರದಿಗಳ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಗುಬ್ಬಚ್ಚಿಯೂ ಸೇರಿರುವುದು ಅತ್ಯಂತ ಕಳವಳಕರಿಯಾದ ವಿಷಯವಾಗಿದೆ. ಮಕ್ಕಳ ಪ್ರೀತಿಯ, ರೈತರ ಸ್ನೇಹಿ, ಪರಿಸರ ಪ್ರೇಮಿ ಗುಬ್ಬಿಯ ಸಂತತಿ ದಿನೇ ದಿನೇ ಕ್ಷೀಣಿಸುತ್ತಿದ್ದು, ಒಂದು ಅಧ್ಯಯನದ ಪ್ರಕಾರ ಗುಬ್ಬಚ್ಚಿಗಳ ಸಂಖ್ಯೆ ಶೇ 80 ರಷ್ಟು ಇಳಿಕೆಯಾಗಿದೆ.

WhatsApp Image 2022-02-02 at 9.47.41 PMನಿಜ ಹೇಳ ಬೇಕೆಂದರೆ, ಗುಬ್ಬಚ್ಚಿ ರೈತರ ಮತ್ತು ಜನಸಾಮಾನ್ಯರ ಜೀವನದ ಪ್ರಮುಖ ಭಾಗವಾಗಿತ್ತು. ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಗಳು ಕೀಟಗಳನ್ನು ತಿನ್ನುತ್ತಿದ್ದದ್ದಲ್ಲದೇ ಮನೆಯ ಮುಂದೆ ಕುಟ್ಟಿ, ಬೀಸಿ ಚೆಲ್ಲಿರುತ್ತಿದ್ದ ಧಾನ್ಯಗಳನ್ನು ತಿಂದು ಪರಿಸರವನ್ನು ಸ್ವಚ್ಚಗೊಳಿಸುತ್ತಿದ್ದವು. ಅದೇ ರೀತಿ ಹೊಲದಲ್ಲಿ ಗಿಡಗಳಿಗೆ ಆವರಿಸಿಕೊಂಡಿರುತ್ತಿದ್ದ ಕೀಟಗಳನ್ನು ತಿನ್ನುವ ಮೂಲಕ ರೈತರ ಸ್ನೇಹಿತರಾಗಿದ್ದರು.

gibbi4ನಿಜ ಹೇಳಬೇಕೆಂದರೆ ಮನುಷ್ಯರ ಜೀವನ ಶೈಲಿ ಬದಲಾದ ಕಾರಣದಿಂದಾಗಿಯೇ ಈ ಗುಬ್ಬಚ್ಚಿಗಳು ಅವಸಾನಕ್ಕೆ ತಲುಪಿವೆ ಎಂದರೆ ಅಚ್ಚರಿಯಾದರೂ ಅದು ನಂಬಲೇ ಬೇಕಾದ ವಿಷಯವಾಗಿದೆ. ಆಧುನಿಕ ತಂತ್ರಜ್ಞಾನದಿಂದಾಗಿ ಹಳೆಯ ವಿಶಾಲವಾದ ಹೆಂಚಿನ ಕಟ್ಟಡಗಳ ಜಾಗದಲ್ಲಿ ಎತ್ತಎತ್ತರದ ಸಿಮೆಂಟ್ ಕಟ್ಟಡಗಳು ಎದ್ದ ಕಾರಣ, ಗುಬ್ಬಚ್ಚಿಗಳು ತಮ್ಮ ಆವಾಸಸ್ಥಾನವನ್ನು ಕಂಡುಕೊಳ್ಳದ ಆಕಾರಕ್ಕೆ ಬದಲಾಗಿವೆ. ಇಂದು ಯಾರ ಮನೆಯಲ್ಲಿಯೂ ಅಕ್ಕಿ, ಗೋಧಿ, ಇತರೇ ಆಹಾರ ಧಾನ್ಯಗಳನ್ನು ತಂದು ಕೇರುವುದಾಗಲೀ, ಬೀಸುವುದಾಗಲೀ ಮಾಡದೇ ಎಲ್ಲರೂ ಯಂತ್ರೀಕೃತ ಶುದ್ಧೀಕರಿಸಿದ ಪ್ಯಾಕೆಟ್‌ಗಳಲ್ಲಿ ಸಿಗುವ ವಸ್ತುಗಳನ್ನೇ ಖರೀಧಿಸುವ ಕಾರಣ ಮನೆಯಲ್ಲೂ ಮತ್ತು ಹಳೆಯ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತಿದ್ದ ಆಹಾರ ಧಾನ್ಯಗಳು ಗುಬ್ಬಚ್ಚಿಗಳಿಗೆ ಸಿಗುತ್ತಿಲ್ಲದ ಕಾರಣ ಆಹಾರ ಅರಸುತ್ತ ನಗರಗಳಿಂದ ಕಾಣೆಯಾಗಿವೆ. ಇದಲ್ಲದೇ ಎಗ್ಗಿಲ್ಲದೇ ಎಲ್ಲೆಂದರಲ್ಲಿ ಮುಗಿಲೆತ್ತರದ ಮೊಬೈಲ್ ಟವರ್ಗಳನ್ನು ಅಳವಡಿಸಿರುವ ಕಾರಣ ಅವುಗಳು ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳು ಸಹ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಅಷ್ಟೆ ಅಲ್ಲದೇ ರೈತರೂ ಸಹಾ ಕೀಟಗಳನ್ನು ಕೊಲ್ಲುವುದಕ್ಕಾಗಿ ಶಕ್ತಿಯುತ ಕೀಟನಾಶಕಗಳನ್ನು ಬಳಸುವ ಕಾರಣ, ಆ ಕೀಟನಾಶಕ ಸಿಂಪಡಿಸಿದ ಕೀಟಗಳನ್ನೇ ಗುಬ್ಬಚ್ಚಿಗಳು ತಿನ್ನುವ ಮೂಲಕ ಅವುಗಳ ಅವಸಾನದ ಹಾದಿ ಹಿಡಿದಿವೆ. ಕಾಡುಗಳನ್ನು ನಾಶಪಡಿಸಿ ಆಧುನಿಕ ಕಟ್ಟಡಗಳು, ಮಾಲ್‌ಗಳು, ಕೈಗಾರಿಕೆಗಳು ಇತ್ಯಾದಿಗಳನ್ನು ನಿರ್ಮಿಸುವ ಮೂಲಕ ಅರಣ್ಯದ ನಾಶವೂ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು  ಕಾರಣವಾಗಿದೆ. 

WhatsApp Image 2022-02-02 at 9.47.41 PM (2)ಒಂದು ಕಾಲದಲ್ಲಿ ಪಟ್ಟಣಗಳಲ್ಲಿ ಮಾತ್ರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಹಳ್ಳಿಗಳಲ್ಲಿಯೂ ಇದೇ ಆಧುನಿಕತೆ ಮನೆ ಮಾಡಿ, ಹಳ್ಳಿಯಲ್ಲಾಗಲೀ ದಿಲ್ಲಿಯಲ್ಲಾಗಲೀ, ಹೆಂಚಿನ ಮತ್ತು ಸಾಂಪ್ರದಾಯಿಕ ಮಡಿಗೆ ಮನೆಗಳು ಮಾಯವಾಗಿ ಅವುಗಳ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಕಟ್ಟಿ ಸಂಸಾರ ನಡೆಸುವುದಕ್ಕಾಗದೇ ಹೋಗದಿರುವುದೂ ಸಹಾ ಗುಬ್ಬಚ್ಚಿಯ ಸಂತತಿ ಕ್ಷೀಣಿಸಲು ಮತ್ತೊಂದು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

gubbiಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ನೇಚರ್ ಫಾರ್ ಎವರ್ ಸೊಸೈಟಿಯ ಸಂಸ್ಥಾಪಕ ಮೊಹ್ಮದ್ ದಿಲಾವರ್ ಮತ್ತು ಎಕೊ- ಸಿಸ್ ಆ್ಯಕ್ಷನ್ ಫೌಂಡೇಷನ್ ಫ್ರಾನ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷವೂ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಅಚರಿಸಲು 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತಾದರೂ ಅದು ಕೇವಲ ಅಚರಣೆಯಾಗಿಯೇ ಉಳಿದಿದ್ದು ವಾಸ್ತವಾಗಿ ಯಾವುದೇ ರೀತಿಯ ಬದಲಾವಣೆಯನ್ನು ಕಾಣದಾಗಿದೆ. ಗುಬ್ಬಿ ಸಂತತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಸಂರಕ್ಷಿಸಲು 2012ರಲ್ಲಿ ದೆಹಲಿಯೂ ಗುಬ್ಬಚ್ಚಿಯನ್ನು ತನ್ನ ರಾಜ್ಯ ಪಕ್ಷಿಯಾಗಿ ಘೋಷಿಸಲಾಗಿದೆ.

gubbi4ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ ಎನ್ನುವಂತೆ, ಇನ್ನೂ ಕಾಲ ಮಿಂಚಿಲ್ಲ.  ನಮ್ಮ ಸುತ್ತಮುತ್ತಲೂ ಅದಷ್ಟೂ ಮರಗಳನ್ನು ಬೆಳೆಸುವ ಮೂಲಕ ಗುಬ್ಬಿಗಳು ಮತ್ತೆ ಅಲ್ಲಿ ಬರುವಂತೆ ಮಾಡಬಹುದಾಗಿದೆ. ಅದೇ ರೀತಿ ರಸ್ತೆಬದಿಯ ಮರಗಳ ಟೊಂಗೆಯಲ್ಲಿ ಆಹಾರ ಮತ್ತು ನೀರನ್ನು ಇಡುವುದು, ನಮ್ಮ ಮನೆಗಳ ತಾರಸಿಯ ಮೇಲೂ ಸಹಾ ನೀರು ಮತ್ತು ಆಹಾರದ ಜೊತೆಗೆ ಚೆಂದನೆಯ ಬೆಚ್ಚನೆಯ ಗೂಡುಗಳನ್ನು ತೂಗು ಹಾಕುವ ಮೂಲಕ ಗುಬ್ಬಿಗಳನ್ನು ಆಕರ್ಷಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೂ ಜೀವಂತ ಗುಬ್ಬಿಯನ್ನು ತೋರಿಸಬಹುದಾಗಿದೇ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು

ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಈ ಮಾತನ್ನು ನಮ್ಮ ಹಿರಿಯರು ಬಹುಶಃ ಮುಂದೊಂದು ದಿನ ಸ್ವಘೋಷಿತ ನಾದಬ್ರಹ್ಮ, ಮಹಾಗುರು ಎಂಬ ಬಿರುದಾಂಕಿತ ಗಂಗರಾಜು ಎಂಬ ದುರಹಂಕಾರ ಅವಿವೇಕಿಗೆಂದೇ ಬರೆದಿರಬೇಕು ಎಂದರು ಅತಿಶಯವಲ್ಲ. ಒಮ್ಮೆ ಮಾಡಿದರೆ ತಪ್ಪು ಪುನಃ ಪುನಃ ಅದೇ ತಪ್ಪನ್ನು ಮಾಡಿದಲ್ಲಿ ಪ್ರಮಾದ ಎಂದಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಗಂಗರಾಜುವಿನ ಅರಿವಿಗೆ ಬರಲಿಲ್ಲವೇ?

ಕೆಲ ದಿನಗಳ ಹಿಂದೆಯಷ್ಟೇ ತನ್ನ ಸುತ್ತಲೂ ಇರುವ ವಂದಿಮಾಗಧರನ್ನು ಮೆಚ್ಚಿಸಲು ಮತ್ತವರ ಚಪ್ಪಾಳೆಗಾಗಿ ಓತಪ್ರೋತವಾಗಿ ಪೇಜಾವರ ಶ್ರೀಗಳು, ಬಿಳಿಗಿರಿರಂಗ ಮತ್ತು ಸೋಲಿಗರ ಪವಿತ್ರ ಸಂಬಂಧದ ಬಗ್ಗೆ ಅಸಭ್ಯವಾಗಿ ಸಾರ್ವಜನಿಕವಾಗಿ ಮಾತನಾಡಿ ನಂತರ ಹೇಡಿಯಂತೆ ಕಾಟಾಚಾರಕ್ಕೆ ನಾಲ್ಕು ಗೋಡೆಗಳ ಮಧ್ಯೆ ಕ್ಷಮೆ ಕೇಳಿದಂತಹ ನಾಟಕವಾಡಿ, ನಂತರ ದಲಿತ ಬಲಿತ ಎಂಬ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಲೇ ಇರುವ ದ್ವಾರಕಾನಾಥ್, ಬಲ್ಪ್ ಹರೀಶ ಮತ್ತು ಚೇತನ್ ಅಹಿಂಸ ಎಂಬ ವಿದೇಶೀ ತಳಿಯನ್ನು ಬೆನ್ನ ಹಿಂದೆ ಕಟ್ಟಿ ಕೊಂಡು ಓಡಾಡುತ್ತಾ, ಎಲ್ಲಾ ಮಾತುಗಳು ವೇದಿಕೆಗಲ್ಲಾ ಎಂದು ಹೇಳುತ್ತಲೇ ತನ್ನ ಮನಸ್ಸಿನ ವಿಷವನ್ನು ಸಾರ್ವಜನಿಕವಾಗಿ ಕಕ್ಕಿದ್ದ ಗಂಗರಾಜು ಮತ್ತೊಮ್ಮೆ ಅದೇ ರೀತಿಯ ಪ್ರಮಾದವನ್ನು ಎಸೆಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಆಗಿದೆ.

ನಾನಂದು ಆ ರೀತಿ ಮಾತನಾಡಿದ್ದು ನನ್ನ ಮನೆಯೊಡತಿಗೂ ಇಷ್ಟ ಆಗಲಿಲ್ಲ ಅದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದ ಗಂಗರಾಜು ಗಾಂಧಿ ಭವನದಲ್ಲಿ ನಡೆದ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ ಎಂ ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ, ನಿಮಗೆ ಧೈರ್ಯವನ್ನು ನೀಡಲೆಂದೇ ನಿಮ್ಮನ್ನು ಇಲ್ಲಿಗೆ ಕರೆಸಿದ್ದೇವೆ ಎಂದು ಆಯೋಜಕರು ಹೇಳಿದಾಗ, ನಾನು ಮಾಗಡಿ ರೋಡ್‍ನಲ್ಲಿ ದೊಡ್ಡ ದೊಡ್ಡ ಪೋಲಿ ಆಟವನ್ನು ಆಡಿ ಬಂದವನು ದೊಡ್ಡ ತಂಡವನ್ನು ಕಟ್ಟಿಕೊಂಡಿದ್ದೆ ಹಾಗಾಗಿ ನನಗೇನೂ ಭಯವಿಲ್ಲ ಎಂದು ಮತ್ತೊಮ್ಮೆ ತಾನು ಬೂದಿ ಮುಚ್ಚಿದ ಕೆಂಡ ಎಂದು ತೋರಿಸಿಕೊಂಡಿದ್ದಲ್ಲದೇ, ಈಗ ನನಗೆ ಎಪ್ಪತ್ತು. ತಿನ್ನೋದು ಒಪ್ಪತ್ತು ಉಳಿದ ಇನ್ನೂ 2 ಹೊತ್ತು ಏನು ಹಸಿವು ಆಗುತ್ತದೆ. ಅದೇನು ಹಸಿವಾ? ಅದು ಬರೀ ಬಸವಾ, ಬಸವನ ಹಸಿವು ಇನ್ನೂ ಎರಡು ಹೊತ್ತಿಗೂ ಪ್ರೋಟಿನ್ಸ್ ಕೊಡುತ್ತೆ. ಒಂದು ಹೊತ್ತು ತಿನ್ನುತ್ತೇವೆ. 70 ಆದರೆ ಏನಂತೆ ಇನ್ನೊಂದಷ್ಟು ವರ್ಷ ಇರತ್ತೇವೆ. ಜೀವನದಲ್ಲಿ ಅಂದುಕೊಂಡದನ್ನ ಸಾಧಿಸಿ ಬಿಟ್ಟು ಹೋಗೋದಿದೆ. ಅದಷ್ಟೇ ನಮ್ಮ ಗುರಿ ಅದನ್ನು ಮಾಡೋದಕ್ಕೆ ನಾವು ಸಿದ್ದವಾಗಿದ್ದೇವೆ ಎಂದು ಹೇಳುತ್ತಲೇ ಕಡೆಯಲ್ಲಿ ಧರ್ಮೋಕ್ರಸಿ ತೊಲಗಲಿ, ಡೆಮಾಕ್ರಸಿ ಗೆಲ್ಲಲಿ ಎಂದು ಹೇಳುತ್ತಲೇ ವೇದಿಕೆಯ ಮೇಲಿದ್ದ ರಾಜ್ಯ ಕಂಡ ಅತ್ಯಂತ ಭಂಡ ರಾಜಕಾರಣಿ ಸಿದ್ಧಾರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದಿರುವ ಸಾಲುಗಳು ಒಂದಷ್ಟು ಪ್ರಶ್ನೆಗಳು ಮತ್ತು ಚರ್ಚೆಯನ್ನು ಹುಟ್ಟು ಹಾಕಿದೆ.

ಮುಂದಿನ ಚುನಾವಣೆಯಲ್ಲಿ ತಾನು ಗೆಲ್ಲ ಬಲ್ಲ ಕ್ಷೇತ್ರವೇ ಸಿಗದೇ ಕರ್ನಾಟಕಾದ್ಯಂತ ಅಂಡು ಸುಟ್ಟ ಬೆಕ್ಕಿನಂತೆ ಗೆಲ್ಲಬಲ್ಲ ಸುರಕ್ಷಿತ ಕ್ಷೇತ್ರಕ್ಕಾಗಿ ಅಲೆಯುತ್ತಿರುವ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಗಂಗರಾಜು ಹೇಳಿದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ ಅದಕ್ಕೆ ಯಾರದ್ದೇ ಅಕ್ಷೇಪವೂ ಇಲ್ಲ. ಆದರೆ ಅದಕ್ಕೂ ಮೊದಲು ಹೇಳಿದ ಪದ ಇದೆಯಲ್ಲಾ ಧರ್ಮೋಕ್ರೆಸಿ ಅದರ ಕುರಿತಾಗಿ ಖಂಡಿತವಾಗಿಯೂ ಈ ದೇಶದ ಜನರ ಮುಂದೆ ಸ್ಪಷ್ಟನೆ ನೀಡಲೇ ಬೇಕಾಗುತ್ತದೆ. ಸಂಗೀತಕ್ಕೆ ಅನುಗುಣವಾಗಿ ಪಡ್ಡೇ ಹುಡುಗರ ಮನ ಸೆಳೆಯಲು ಹೊಸಾ ಹೊಸಾ ಪೋಲಿ ಪದಗಳ ರಚನೆ ಮಾಡುವುದರಲ್ಲಿ ಗಂಗರಾಜು ನಿಸ್ಸೀಮರು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಅದರೆ ಇಂದು ಅವರಾಡಿದ ಆ ಧರ್ಮೋಕ್ರಸಿ ಎಂದರೆ ಏನರ್ಥ? ಧರ್ಮೋಕ್ರಸಿ ಎಂದರೆ ಧರ್ಮ ಆಧಾರಿತ ಆಡಳಿತವೇ? ಅಥವಾ ಈ ದೇಶದಲ್ಲಿ ಧರ್ಮ ನಾಶವಾಗಬೇಕೇ? ಎನ್ನುವುದಕ್ಕೆ ‌ಮತ್ತೆ ಸಾರ್ವಜನಿಕವಾಗಿಯೇ ಉತ್ತರ ನೀಡಬೇಕಾಗುತ್ತದೆ.

ಇಡೀ ಪ್ರಪಂ‍ಚಕ್ಕೇ ಗೊತ್ತಿರುವಂತೆ ಭಾರತ ದೇಶ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ (ಡೆಮೆಕ್ರೆಸಿ) ದೇಶವಾಗಿರಬೇಕಾದರೆ, ಇಲ್ಲಿ ಪ್ರಜೆಗಳಿಂದಲೇ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವೇ, ಸಂವಿಧಾನಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಯ ಸರ್ಕಾರವನ್ನು ವಿರೋಧಿಸುವಷ್ಟು ಗಂಗರಾಜುವಿಗೆ ದಾಷ್ಟ್ಯತನವೇ? ಬಹುಶಃ 70ರ ದಶಕದಲ್ಲಿ ಈ ದೇಶದ ಮೇಲೆ ಇದೇ ಸಿದ್ದರಾಮಯ್ಯನವರ ಪಕ್ಷದ ಇಂದಿರಾಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿ ಮತ್ತು 90ರ ದಶಕದಲ್ಲಿ ಬಾಬರೀ ಮಸೀದಿ ಧ್ವಂಸದ ಸಮಯದಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ನರಸಿಂಹರಾವ್ ಅವರು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ಬಿಜೆಪಿ ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿದಾಗ ಪ್ರಜಾಪ್ರಭುತ್ವದ ಕಗ್ಗೊಲೆಯ ಹೊರತಾಗಿ ಉಳಿದೆಲ್ಲಾ ಸಮಯದಲ್ಲೂ ಡೆಮಾಕ್ರಸಿಗೇ ಗೆಲುವಾಗಿರುವಾಗ, ಯಾವಾಗ ಡೆಮಾಕ್ರಸಿಗೆ ಸೋಲಾಯಿತು? ಇಂದಿಗೂ ಈ ದೇಶದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಸರ್ಕಾರಗಳೇ ಇರುವಾಗ ಧರ್ಮಾಧಾರಿತವಾಗಿರುವುದು ಯಾವಾಗ?

ಇನ್ನು ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದಿದ್ದಾರೆ. ಹಾಗಾದರೇ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ಮಾತ್ರವಷ್ಟೇ ಡೆಮಾಕ್ರಸಿಯೇ? ಬೇರೆಯವರು ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿ ಆದಲ್ಲಿ ಧರ್ಮಾಕ್ರೆಸಿಯೇ? ಈ ರೀತಿ ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯನ್ನು ಆರಾಧಿಸುವುದು ವ್ಯಕ್ತಿ ಪೂಜೆಯಾಗಿ ಸರ್ವಾಧಿಕಾರಿ ಧೊರಣೆಯಾಗುತ್ತದೆಯೇ ಹೊರತು ಪ್ರಜಾಪ್ರಭುತ್ವ ಹೇಗಾದೀತು?

ಇದೇ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಶಾದಿ ಭಾಗ್ಯ ಕೊಟ್ಟಿದ್ದು, ಕೆಲವೇ ಕೆಲವು ಜಾತಿಯ ಶಾಲಾ ಮಕ್ಕಳಿಗೆ ತಿನ್ನಲು ಮೊಟ್ಟೆ, ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಅನ್ಯ ಕೋಮಿನವರನ್ನು ಓಲೈಸುವ ಸಲುವಾಗಿ ಛದ್ಮ ವೇಷಧಾರಿಯಾಗುವುದು, ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಒಂದು ಧರ್ಮಕ್ಕೆ ಸಾವಿರಾರು ಕೋಟಿ ಅನುದಾನವನ್ನು ಕೊಡುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಡುವುದು ಡೆಮಾಕ್ರೆಸಿಯೋ? ಧರ್ಮಾಕ್ರೆಸಿಯೋ?

ನೀವೇ ಹೇಳಿಕೊಂಡಂತೆ ಈ 70ರ ಇಳೀ ವಯಸ್ಸಿನಲ್ಲಿ ಪದೇ ಪದೇ ಈ ರೀತಿಯಾಗಿ ಅಸಂಬದ್ಧ ಹೇಳಿಕೆಗಳನ್ನು ಆಡುವ ಮೂಲಕ ಅದಾವ ರಹಸ್ಯ ಕಾರ್ಯಸೂಚಿಯನ್ನು ತರಲು ಬಯಸುತ್ತಿದ್ದೀರೀ? ಚಪ್ಪಾಳೆ ತಟ್ಟುವ ಜನರು ಸುತ್ತಮುತ್ತಲೂ ಇದ್ದ ಕೂಡಲೇ ನಿಮ್ಮ ಮನಸ್ಸು ಸ್ಥಿಮಿತವನ್ನು ಕಳೆದು ಕೊಂಡು ನಾಲಿಗೆಯನ್ನು ಓತ ಪ್ರೋತವಾಗಿ ಹರಿಸುತ್ತಿದೆ ಎಂದಾದಲ್ಲಿ ದಯವಿಟ್ಟು ಯಾವುದಾದರೂ ಬಲಿತ ವೈದ್ಯರು (ಮತ್ತೇ ದಲಿತ ವೈದ್ಯರ ಬಳಿ ಚಿಕಿತ್ಸೆ ಪಡೆದಲ್ಲಿ ನಿಮ್ಮ ವ್ಯಾಧಿ ಹೆಚ್ಚಾಗುವ ಅಪಾಯವಿದೆ) ಬಳಿ ಹೋಗಿ ಚಿಕಿತ್ಸೆ ಪಡೆದು ಮಾನಸಿಕ ಸ್ಥಿಮಿತವನ್ನು ಕಂಡುಕೊಳ್ಳಿ. ಇಲ್ಲವೇ, ನಿಮಗೆ ವಯಸ್ಸಾಯಿತು ಎಂದು ಕೊಂಡು ಮನೆಯಲ್ಲಿ ಕುಳಿತು ರಾಮ ಕೃಷ್ಣ ಗೋವಿಂದಾ (ಅಯ್ಯೋ ದೇವರನ್ನು ನೆನೆಸಿಕೊಂಡಲ್ಲಿ ಕೋಮುವಾದವೆನಿಸಿ ಮನುವಾದಿ ಆಗುವ ಭಯ ಕಾಡಬಹುದೇನೋ? ) ಎಂದು ಭಗವಂತನ ಧ್ಯಾನ ಮಾಡಿದರೆ ನಿಮಗೂ ಒಳ್ಳೆಯದೂ ಸಮಾಜಕ್ಕೂ ಒಳ್ಳೆಯದು.

ನಿಮ್ಮ ಅರ್ಥದಲ್ಲಿ ಭಾರತ ಧರ್ಮಾಕ್ರೇಸಿ ಆಗಿದಲ್ಲಿ, ಪಾಕಿಸ್ತಾನ, ಅಫ್ಘಾನಿಸ್ತಾನ, ವ್ಯಾಟಿಕನ್ ಸಿಟಿಯಂತ ದೇಶಗಳಲ್ಲಿ ಡೆಮಾಕ್ರೆಸಿ ಇದೆಯೇ? ಭಾರತದಲ್ಲಿ ಧರ್ಮಾಕ್ರಸಿ ಇದ್ದಿದ್ದರೇ ನೀವಿಂದು ಈ ರೀತಿಯಾಗಿ ದೇಸಿ ಸಂಗೀತಗಾರರಾಗುವುದು ಬಿಡಿ ಈ ರೀತಿಯಾಗಿ ಹುಚ್ಚುಚ್ಚಾಗಿ ಮಾತನಾಡಲು ಸಹಾ ಆಗುತ್ತಿರಲಿಲ್ಲ ಎನ್ನುವುದರ ಅರಿವಿದೆಯೇ?

ಸಂಗೀತಕ್ಕೆ ಯಾವುದೇ ಧರ್ಮ , ಜಾತಿ ಭಾಷೆ ಇಲ್ಲ ಎಂದು ಹೇಳುತ್ತಲೇ, ಹೇಳುವುದು ಶಾಸ್ತ್ರ ತಿನ್ನುವುದು ಬದನೇಕಾಯಿ ಎನ್ನುವಂತೆ, ಈ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಈ ಪರಿಯಾಗಿ ಜನರನ್ನು ಭಾಷೆ, ಜಾತಿ, ಧರ್ಮಧಾರಿತವಾಗಿ ಕೆಣಕುವುದು ಎಷ್ಟು ಸರಿ? ಪದೇ ಪದೇ ಸಿದ್ದರಾಮಯ್ಯರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಗುಜರಿ, ವಾಚ್ಮನ್ ಜಮೀರನ ಮಟ್ಟಕ್ಕೆ ನೀವೇಕೆ ಇಳಿದಿರಿ ಗಂಗರಾಜು? ಸಾರ್ವಜನಿಕವಾಗಿ ಮೇಲಿಂದ ಮೇಲೆ ತಪ್ಪು ಮಾಡುತ್ತಾ, ಕಡೆಗೆ ಮಡದಿಯ ಸೆರಗನ್ನು ಗುರಾಣಿ ಮಾಡಿಕೊಳ್ಳುವುದು ನಿಮಗೇ ಅವಮಾನ ಎನಿಸುವುದಿಲ್ಲವೇ?

ಒಮ್ಮೆ ಆದ ತಪ್ಪಿಗೇ ಸ್ವಘೋಷಿತ ನಾದ್ರಬ್ರಹ್ಮ ಮಹಾಗುರು ಬಿಡಿ ನಿಮ್ಮ ಅಂಕಿತನಾಮ ಹಂಸಲೇಖ ಎಂಬ ಹೆಸರೇ ಜನರಿಂದ ಮಾಯವಾಗಿ ಸಾಧಾರಣ ಗಂಗರಾಜುವಾಗಿ ಹೋಗಿದ್ದೀರೀ. ಅಂದು ಆಡಿದ ಒಂದು ಮಾತಿನಿಂದಲೇ ನಿಮ್ಮ ಜೀ ಸರಿಗಮಪ ಕಾರ್ಯಕ್ರಮದ ಟಿ.ಆರ್.ಪಿ ಬಿದ್ದು ಹೋಗಿ ಅದನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ರವಿಚಂದ್ರನ್, ಅನಿಲ್ ಕುಂಬ್ಲೆ ಈಗ ಟಿವಿ ಧಾರವಾಹಿಯ ವಿವಿಧ ಖ್ಯಾತ ನಾಮರ ಮೊರೆ ಹೋಗಬೇಕಾಗಿರುವ ದೈನೇಸಿ ಸ್ಥಿತಿ ತಲುಪಿಯಾಗಿದೆ. ಈಗ ಈ ರೀತಿ ಧರ್ಮಾಕ್ರೇಸಿ ಅಳಿಯಲಿ ಡೆಮಾಕ್ರೆಸಿ ಗೆಲ್ಲಲ್ಲಿ ಎನ್ನುವ ಅಸಂಬದ್ಧ ಮಾತಿನ ಮೂಲಕ ನಿಮ್ಮ ಮನಸ್ಸಿನಲ್ಲಿರುವ ಕಾರ್ಕೋಟಕ ವಿಷವನ್ನು ಮತ್ತೊಮ್ಮೆ ಕಕ್ಕುವ ಮೂಲಕ ಈ ನಾಡಿನಲ್ಲಿ ನೀವು ಖಂಡಿತವಾಗಿಯೂ ಅಪ್ರಸ್ತುತವಾಗುತ್ತಿದ್ದೀರೀ ಎನಿಸುತ್ತಿಲ್ಲವೇ? ಇಷ್ಟು ವರ್ಷ ನೀವೇ ಕಷ್ಟ ಪಟ್ಟು ಕಟ್ಟಿಕೊಂಡಿದ್ದ ನಿಮ್ಮ ಘನತೆ ಗೌರವವನ್ನು ನಿಮ್ಮೀ ಅಸಂಬದ್ಧ ಪ್ರಲಾಪಗಳ ಮೂಲಕ ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಲ್ಲವೇ?

ಇನ್ನು ನಾನು ಮಾಗಡಿ ರೋಡಿನ ಮಹಾ ಪೋಲಿ ನನಗೇಗೆ ಭಯ ? ಎನ್ನುವ ಆಣಿಮುತ್ತನ್ನೂ ಉದುರಿಸಿದ್ದೀರಿ. ದಯವಿಟ್ಟು ನಿಮ್ಮ ಆ ಪೋಲಿತನವೆಲ್ಲಾ ನಿಮ್ಮ ಮನೆ ಮತ್ತು ನಾಲ್ಕು ಗೋಡೆಗಳ ಮಧ್ಯೆ ನೀವು ಹೇಳುವ ಅಸಂಬದ್ಧಕ್ಕೆಲ್ಲಾ ಚಪ್ಪಾಳೆ ತಟ್ಟಿ ಕೇಕೇ ಹಾಕುವ, ಮಾತು ಮಾತಿಗೂ ಬಹುಪರಾಕ್ ಹೇಳುವ ಮಂದಿಗಷ್ಟೇ ಸೀಮಿತವಾಗಿರಬೇಕೇ ಹೊರತು ಪ್ರಬುದ್ಧ ಸಮಾಜದ ಮುಂದಲ್ಲಾ ಎನ್ನುವುದು ನೆನಪಿರಲಿ.

ಧರ್ಮೋ ರಕ್ಷತಿ ರಕ್ಷಿತಃ. ಮಾತು. ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು. ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು. ಎನ್ನುವ ಗಾದೆ ಮಾತುಗಳು ನಿಮಗೆ ಬಹುಶಃ ತಿಳಿದಿರಬಹುದು. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಅಲ್ವೇ ಗಂಗರಾಜು?

ಏನಂತೀರಿ?
ನಿಮ್ಮವನೇ ಉಮಾಸುತ

ವಿಧಾನ ಪರಿಷತ್ತು ಚಿಂತಕರ ಚಾವಡಿಯೋ? ಕುಟುಂಬ, ರಾಜಕೀಯ ನಿರಾಶ್ರಿತರ ತಾಣವೋ?

ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ನೆನ್ನೆ ಪ್ರಕಟವಾಗಿ ಬೆಜೆಪಿ ಮೇಲ್ನೋಟಕ್ಕೆ 11 ಸ್ಥಾನ ಪಡೆದು ಬಹುಮತ ಗಳಿಸಿದೆ ಎನಿಸಿದರೂ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನವನ್ನು ಗಳಿಸಿ ಆಡಳಿತ ಪಕ್ಷದೊಡನೆ 11 ಸ್ಥಾನ ಪಡೆದು ಸಮಬಲ ಸಾಧಿಸಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಬೀಗುತ್ತಿದೆ. ಇನ್ನು6 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧಿಸಿ ಕನಿಷ್ಟ ಪಕ್ಷ 3 ಸ್ಥಾನಗಳಲ್ಲಿ ಗೆದ್ದೇ ತೀರುತ್ತೇವೆ ಎಂದು ತೊಡೆ ತಟ್ಟಿದ್ದ ಜೆಡಿಎಸ್ ಯಥಾ ಪ್ರಕಾರ ಕೇವಲ 2 ಸ್ಥಾನವನ್ನು ಗಳಿಸಿದ್ದಲ್ಲಿ ಅಚ್ಚರಿಯಾಗಿ ಒಬ್ಬ ಪಕ್ಷೇತರ ಆರಿಸಿ ಬಂದಿದ್ದಾರೆ. ಫಲಿತಾಂಶವನ್ನು ಸ್ವಲ್ಪ ಕೂಲಂಕಶವಾಗಿ ನೋಡಿದರೆ ಪಕ್ಷಾತೀತವಾಗಿ ಕುಟುಂಬ ರಾಜಕಾರಣ ಢಾಳಾಗಿ ಕಣ್ಣಿಗೆ ರಾಚುವಂತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಶರ ವಸಾಹತುವಾಗಿದ್ದ ನಮ್ಮ ದೇಶ ಸುಮಾರು 550+ ಸಣ್ಣ ಪುಟ್ಟ ರಾಜ್ಯಗಳಾಗಿ ವಿಭಜಿತವಾಗಿ ವಂಶಪಾರಂಪರ್ಯ ರಾಜರುಗಳು ಆಡಳಿತದಲ್ಲಿತ್ತು. ಸ್ವಾತಂತ್ರ್ಯಾ ನಂತರ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ದಿಟ್ಟತನದಿಂದಾಗಿ ಈ ಎಲ್ಲಾ ರಾಜ್ಯಗಳನ್ನೂ ಒಗ್ಗೂಡಿಸಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರವೇ, ಪ್ರಜೆಗಳೇ ಆರಿಸಿ ಕಳುಹಿಸುವಂತಹ ಪ್ರಜಾಪ್ರಭುತ್ವವದ ಆಡಳಿತದ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

neh

ಆರಂಭದಲ್ಲಿ ಎಲ್ಲವೂ ಚನ್ನಾಗಿದೆ ಎನಿಸಿದ್ದಲ್ಲದೇ, ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶ ಎಂದು ಹೆಮ್ಮೆಯಿಂದ ಬೀಗ ತೊಡಗಿತು. ಆದರೆ ಪ್ರಜಾಪ್ರಭುತ್ವದ ಅಡಿಯಲ್ಲಿಯೇ ನಿಧಾನವಾಗಿ ಕುಟುಂಬ ರಾಜಕಾರಣಕ್ಕೆ ದೇಶದ ಪ್ರಥಮ ಪ್ರಧಾನಿ ನೆಹರು ಅವರೇ ನಾಂದಿ ಹಾಡಿದರು ಎಂದರೂ ತಪ್ಪಾಗದು. ತಮ್ಮ ನಂತರ ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಮಗಳು ಇಂದಿರಾಗಾಂಧಿಯವರೇ ಇರಬೇಕೆಂದು ಬಯಸಿ ನಿಧಾನವಾಗಿ ಪಕ್ಷದ ನಿಷ್ಥಾವಂತ ಕಾರ್ಯಕರ್ತರನ್ನು ಬದಿಗೊತ್ತಿ ತಮ್ಮ ಮಗಳನ್ನು ಮುಂಚೂಣಿಯಲ್ಲಿ ತಂದಿದ್ದಲ್ಲದೇ ನೆಹರು ಅವರ ನಿಧನನದ ನಂತರ ಅವರ ಚೇಲಾಗಳ ಒತ್ತಡದ ನಡುವೆಯೂ ಉಳಿದ ಕಾಂಗ್ರೇಸ್ಸಿಗರ ಒತ್ತಾಯದ ಮೇರೆಗೆ ಲಾಲ ಬಹದ್ದೂರ್ ಶಾಸ್ತ್ರಿಗಳು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿದರೂ, ಕೇವಲ 20 ತಿಂಗಳುಗಳ ಕಾಲ ಪ್ರಧಾನಿಯಾಗಿ ರಷ್ಯಾದ ತಾಷ್ಕೆಂಟಿನಲ್ಲಿ ಪಾಕ್ ಜೊತೆ ಒಪ್ಪಂದದ ನಂತರ ವಿವಾದಾತ್ಮಕವಾಗಿ ನಿಧನ ಹೊಂದಿದ ನಂತರ ಅಧಿಕಾರಕ್ಕೆ ಬಂದ ಇಂದಿರಾ, ಆಕೆಯ ಎರಡನೆಯ ಪುತ್ರ ಸಂಜಯ್ ಗಾಂಧಿ ಪುಂಡಾಟಿಕೆಗಳನ್ನು ಈ ದೇಶ ಸಹಿಸಿಕೊಳ್ಳಬೇಕಾಗಿ ಬಂದದ್ದು ದುರಾದೃಷ್ಟಕರ

ಇಂಡಿಯಾ ಎಂದರೆ ಇಂದಿರಾ ಎನ್ನುವಷ್ಟರ ಮಟ್ಟಿಗಿನ ಭಟ್ಟಂಗಿಗಳ ನಡುವೆ ಆಕೆಯೇ ಸಾಕಿ ಸಲಹಿದ್ದ ಖಲೀಸ್ಥಾನ್ ಬೆಂಬಲಿಗರಾದ ಆಕೆಯ ಅಂಗರಕ್ಷಕರಿಂದಲೇ ಹತ್ಯೆಗೊಳಗಾಗಿ 24 ಗಂಟೆ ಕಳೆಯುವುದರೊಳಗೆ ಸಾಂಸದನಾಗುವುದು ಬಿಡಿ, ಯಾವುದೇ ರಾಜಕೀಯದ ಹುದ್ದೆಯ ಅನುಭವವಿಲ್ಲದೇ ವಿಮಾನ ಚಾಲಕನಾಗಿದ್ದ ಇಂದಿರಾ ಅವರ ಮೊದಲನೇ ಮಗ ರಾಜೀವ್ ಗಾಂಧಿಯನ್ನು ರಾತ್ರೋರಾತ್ರಿ ಪ್ರಧಾನಮಂತ್ರಿ ಮಾಡಿದಾಗಲೇ ಪ್ರಜಾಪ್ರಭುತ್ವ ಸಂಪೂರ್ಣವಾಗಿ ನೆಲಕಚ್ಚಿತ್ತು.

ಕೇಂದ್ರದ ಹಿರಿಯ ನಾಯಕರುಗಳೇ ಕುಟುಂಬ ರಾಜಕಾರಣದಲ್ಲಿ ಮುಳುಗಿ ತೇಲುತ್ತಿರುವಾಗ ಇನ್ನು ರಾಜ್ಯಗಳನ್ನು ಕೇಳಬೇಕೇ? ಇಂದಿರಾಗಾಂಧಿ ನಿಧನರಾದ ನಂತರ, ರಾಜ್ಯಗಳಲ್ಲಿ ಕುಟುಂಬ ಕೇಂದ್ರೀಕೃತ ಪ್ರಾದೇಶಿಕ ಪಕ್ಷಗಳು ಉದಯಿಸಿದವು. ಹಾಗಾಗಿಯೇ ಕೇಂದ್ರದಲ್ಲಿ ಅಪ್ಪನಿದ್ದರೆ, ರಾಜ್ಯದಲ್ಲಿ ಮಗ, ಜಿಲ್ಲಾ ಪಂಚಾಯತ್ ನಲ್ಲಿ ಹೆಂಡತಿ ಇಲ್ಲವೇ ಕುಟುಂಬದ ಇತರೇ ಸದಸ್ಯರುಗಳೇ ಅಧಿಕಾರವನ್ನು ಅನುಭವಿಸತೊಡಗಿದರು. ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಸೆರೆಮನೆಗೆ ಹೋಗುವ ಸಂಧರ್ಭ ಎದುರಾದಾಗ, ಕೇವಲ ಮಕ್ಕಳನ್ನು ಹೆರುವ ಯಂತ್ರದಂತೆ ಗೃಹಿಣಿಯಾಗಿದ್ದ ಅನಕ್ಷರಸ್ಥೆ ರಾಬ್ಡಿ ದೇವಿಯನ್ನು ಮುಖ್ಯಮಂತ್ರಿಯಾಗಿಸಿ ಸೆರೆಮನೆಯಿಂದಲೇ ಬಿಹಾರವನ್ನು ಆಳ್ವಿಕೆ ನಡೆಸಿದ ಉದಾಹರಣೆಯೂ ಇದೆ.

devegowda

ಇನ್ನು ರಾಜ್ಯದ ರಾಜಕಾರಣದಲ್ಲಿಯೂ ಕುಟುಂಬ ರಾಜಕಾರಣ ಪ್ರಖರವಾಗಿದ್ದು ದೇವೇಗೌಡರು ಮುಂಚೂಣಿಯಲ್ಲಿ ಮುನ್ನಡೆಸುತ್ತಿದ್ದಾರೆ. ಅಪ್ಪಾ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಬೀಗರು, ಸಂಬಂಧಿಗಳೇ ಶಾಸಕರು, ಸಾಂಸದರು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಕುಟುಂಬ ರಾಜಕಾರಣ ಕೇವಲ ಅದೊಂದೇ ಪಕ್ಷದಲ್ಲಿ ಇದೆ ಎಂದರೆ ತಪ್ಪಾದೀತು. ನೆನ್ನೆ ಪರಿಷತ್ತಿನ ಚುನಾವಣೆಯಲ್ಲಿ ಗೆದ್ದು ಬಂದಿರುವ ಅಭ್ಯರ್ಥಿಗಳನ್ನು ನೋಡಿದಲ್ಲಿ, ಡಿ.ಕೆ. ಶಿವಕುಮಾರ್ ಅವರ ಬಂಧುಗಳಾದ ರವಿ, ಸುಜಾ ಕುಶಾಲಪ್ಪ ಅವರ ಒಬ್ಬ ಸಹೋದರ ಶಾಸಕನಾಗಿದ್ದಲ್ಲಿ ಮತ್ತೊಬ್ಬರು ನಿರ್ಗಮಿತ ಎಂಎಲ್ಸಿ. ಪ್ರದೀಪ್ ಶೆಟ್ಟರ್ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಶಾಸಕ ಜಗದೀಶ್ ಶೆಟ್ಟರ್ ಅವರ ಸಹೋದರ, ಮಾಜೀ ಪರಿಷತ್ತಿನ ಸಭಾಪತಿಗಳಾಗಿದ್ದ ಡಿ.ಹೆಚ್. ಶಂಕರ ಮೂರ್ತಿಗಳ ಮಗ ಡಿ ಎಸ್ ಅರುಣ್ ಶಿವಮೊಗ್ಗದಿಂದ ಬಿಜೆಪಿ ಪಕ್ಷದಿಂದ ಗೆದ್ದಿದ್ದಾರೆ. ಜೆಡಿಎಸ್ ನಿಂದ ಹೊಳೇನರಸೀಪುರದ ಶಾಸಕ ರೇವಣ್ಣನವರ ಪುತ್ರ ಸೂರಜ್ ಗೆಲುವು ಸಾಧಿಸಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯಂತೂ ಕತ್ತಿ, ಕೋರೆ, ಜಾರಕೀಹೊಳೆ ಕುಟುಂಬದ್ದೇ ರಾಜಕಾರಣವಾಗಿ ಅವರ ಕಿರಿಯ ಸಹೋದರ ಲಖನ್ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದರೆ, ಈಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತಮ್ಮ ಚನ್ನರಾಜ್ ಹಟ್ಟಿಹೊಳಿ ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿ ನಾಲ್ಕನೇ ಕುಟುಂಬ ರಾಜಕಾರಣ ಆರಂಭವಾಗಿದೆ. ಹೀಗೆ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳೂ ಕುಟುಂಬ ರಾಜಕಾರಣ ಮಾಡತೊಡಗಿದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆಯಾದರೂ ಹೇಗೆ ಬರುತ್ತದೆ? ಕುಟುಂಬದವರನ್ನೇ ಬೆಳೆಸುತ್ತಾ ಹೋದಲ್ಲಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಾಡೇನು? ಎಂಬ ಪ್ರಶ್ನೆ ಕಾಡುತ್ತದೆ.

parishat

ವಿಧಾನಸಭೆಯನ್ನು ಕೆಳಮನೆ ಎಂದು ಕರೆದರೆ, ವಿಧಾನ ಪರಿಷತ್ತನ್ನು ಶಾಸಕಾಂಗದ ಮೇಲ್ಮನೆ ಎಂದು ಕರೆಯಲಾಗುತ್ತದೆ. ಹೆಮ್ಮೆಯ ವಿಷಯವೇನೆಂದರೆ, ಭಾರತದಲ್ಲಿ ಸಂವಿಧಾನ ಜಾರಿಗೆ ಬರುವ ಮೊದಲೇ 1907ರಲ್ಲಿಯೇ ಚಿಂತಕರ ಚಾವಡಿ ಎಂದು ಮೈಸೂರು ಸಂಸ್ಥಾನದಲ್ಲಿ ಮೇಲ್ಮನೆ ಸ್ಥಾಪನೆಯಾಗಿತ್ತು. ಇದೇ ಮುಂದೆ ರಾಷ್ಟ್ರ ಮಟ್ಟದಲ್ಲಿ ರಾಜ್ಯಸಭೆ ಸ್ಥಾಪನೆಗೂ ಸ್ಫೂರ್ತಿಯಾಗಿತ್ತು.

parh2

ಶಾಸನ ನಿರೂಪಣೆ ಮತ್ತು ಆಡಳಿತ ವಿಚಾರಗಳಲ್ಲಿ ಸರ್ಕಾರಕ್ಕೆ ಸಹಕಾರಿಯಾಗಲೆಂಬ ಉದ್ದೇಶದಿಂದ ಕರ್ನಾಟಕ ವಿಧಾನ ಪರಿಷತ್ತು ಅಸ್ತಿತ್ವಕ್ಕೆ ಬಂತು. ಈ ವಿಧಾನ ಪರಿಷತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿನ ತಜ್ಞರು, ಅನುಭವಿಗಳು ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದೇ ಇರುವನ್ನು ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಆಯ್ಕೆ ಮಾಡಿದರೆ, ಕೆಲವು ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ. ಶ್ರೀ ಕೆ.ಟಿ.ಭಾಷ್ಯಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಂ.ಪಿ.ಎನ್.ಶಾಸ್ತ್ರಿ, ಬಸವರಾಜ ಕಟ್ಟೀಮನಿಮುಂತಾದ ಅನೇಕ ಮಹನೀಯರು ಪರಿಷತ್ತಿನ ಸದಸ್ಯರಾಗಿದ್ದರು. ಆರಂಭದಲ್ಲಿ ಯಾವುದೇ ರಾಜಕೀಯ ಪಕ್ಷಗಳ ದಾಕ್ಷಿಣ್ಯದಿಂದ ಮುಕ್ತರಾದ, ಪೂರ್ವಗ್ರಹ ಪೀಡಿತರಾಗದ ಈ ರೀತಿಯ ಹಿರಿಯರು ಹಾಗೂ ತಜ್ಞರ ಸಲಹೆ-ಸೂಚನೆಗಳು ಸಿಗಬೇಕೆಂಬುದು ಮೇಲ್ಮನೆ ರಚನೆಯ ಉದ್ದೇಶವಾಗಿತ್ತು. ಆನಂತರ ನಿಧಾನವಾಗಿ ಪರಿಷತ್ತಿನಲ್ಲಿಯೂ ರಾಜಕೀಯದ ಗಂಧಗಾಳಿ ಬೀಸ ತೊಡಗಿ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಚಯಿಸಿದ ನೀರ್ ಸಾಬ್ ಎಂದೇ ಖ್ಯಾತರಾಗಿದ್ದ ಅಬ್ದುಲ್ ನಜೀರ್ಸಾಬ್, ವೈಕುಂಠ ಬಾಳಿಗಾ, ಮೊದಲ ಬಾರಿ ಮುಖ್ಯಮಂತ್ರಿಯಾದಾಗ ರಾಮಕೃಷ್ಣ ಹೆಗಡೆ, ಪ್ರಚಂಡ ವಿರೋಧಪಕ್ಷದ ನಾಯಕ ಎಂದೇ ಖ್ಯಾತಿ ಪಡೆದಿದ್ದ ಬಿಜೆಪಿಯ ಎ.ಕೆ.ಸುಬ್ಬಯ್ಯ ಮಳ್ಳೂರು ಆನಂದರಾವ್ ಮುಂತಾದ ಮಹನೀಯರುಗಳು ಮೇಲ್ಮನೆ ಸದಸ್ಯರಾಗಿದ್ದ ಕಾರಣ, ಪರಿಷತ್ತಿನಲ್ಲಿ ಗಂಭೀರ ಚರ್ಚೆಗಳು ನಡೆದು ಉತ್ತಮವಾದ ಕಾನೂನುಗಳು ರೂಪಿತಗೊಂಡವು.

pari3

90ರ ದಶಕದಿಂದ ಈಚೆಗಂತೂ, ವಿಧಾನ ಸಭೆಯಲ್ಲಿ ಸೋತವರು, ಜನರಿಂದ ನೇರವಾಗಿ ಆಯ್ಕೆಯಾಗಲಾಗದ ನಾಯಕರುಗಳು ಪರಿಷತ್ತಿಗೆ ಹಿಂಬಾಗಿಲಿನಿಂದ ಆಯ್ಕೆಯಾಗುವ ಮೂಲಕ ಪರಿಷತ್ತು ರಾಜಕೀಯ ನಾಯಕರುಗಳ ನಿರಾಶ್ರಿತ ತಾಣವಾಗಿರುವುದು ವಿಪರ್ಯಾಸವೇ ಸರಿ. ಈಗಂತೂ ವಿಧಾನ ಪರಿಷತ್ತಿನ ಶಾಸಕತ್ವ ಒಂದು ರೀತಿಯ ವ್ಯಾಪಾರವಾಗಿ ವಿವಿಧ ರಾಜಕೀಯ ಪಕ್ಷಗಳು ಹಣಕ್ಕಾಗಿ ಪರೋಕ್ಷವಾಗಿ ಶಾಸಕತ್ವವನ್ನು ಮಾರಾಟ ಮಾಡುವ ಮಟ್ಟಿಗೆ ಇಳಿದು ಬಿಟ್ಟಿವೆ. ಹಾಗಾಗಿ ಕೋಟ್ಯಾಂತಹ ಹಣವನ್ನು ಖರ್ಚು ಮಾಡಿ ಪರಿಷತ್ತಿ ಆಯ್ಕೆಯಾಗಲು ನೂರಾರು ಜನರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಈ ಬಾರಿಯಂತೂ ಮತಗಳು ಲಕ್ಷ ಲಕ್ಷ ರೂಪಾಯಿಗಳಿಗೆ ಬಿಕರಿಯಾಗಿ, ಹಣ ಕೊಟ್ಟವರು ಧರ್ಮಸ್ಥಳ ಮಂಜುನಾಥಸ್ವಾಮಿ ಮತ್ತು ತಿರುಪತಿ ತಿಮ್ಮಪ್ಪನ ಫೋಟೋದ ಮೇಲೆ ಆಣೆ ಮಾಡಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದರು ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು ನಿಜಕ್ಕೂ ಛೇದದ ಸಂಗತಿಯಾಗಿದೆ.

ಹೀಗೆ ಹಣ ಕೊಟ್ಟು ಆಯ್ಕೆಯಾದವರು ಪಕ್ಷ ಸಿದ್ಧಾಂತ ಈ ರೀತಿ ಯಾವುದೇ ಕಟ್ಟು ಪಾಡುಗಳಿಗೆ ಬದ್ಧರಾಗದೇ, ಗಾಳಿ ಬಂದಾಗ ತೂರಿಕೋ ಎನ್ನುವಂತೆ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿಗಳಾಗಿ ಇಂದಿನ ರಾಜಕೀಯದಲ್ಲಿ ಯಾವುದೇ ನೈತಿಕತೆಯು ಉಳಿದಿಲ್ಲದೇ, ಲಾಭದಾಯಕ ವ್ಯವಹಾರವಾಗಿ ಅಧಿಕಾರಕ್ಕಾಗಿ ತಮ್ಮ ಕುಟುಂಬದ ಸದಸ್ಯರನ್ನೇ ಕರೆತಂದು ತಮ್ಮ ವ್ಯಾಪಾರ ಸಾಮ್ರಾಜ್ಯದ ವಿಸ್ತರಣಾವಾದಿಗಳಾಗಿದ್ದಾರೆ. ಹಾಗಾಗಿಯೇ ಕಾಂಗ್ರೇಸ್ಸಿನ ಸಿದ್ದರಾಮಯ್ಯ ಮತ್ತು ಅವರ ಪುತ್ರ ಶಾಸಕರಾಗಿದ್ದರೆ, ಇನ್ನು ದೇವೇಗೌಡರ ಇಡೀ ಕುಟುಂಬವೇ ಸಕ್ರೀಯ ರಾಜಕಾರಣದಲ್ಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿಯ ಯಡಿಯೂರಪ್ಪನವರ ಇಬ್ಬರು ಪುತ್ರರೂ ರಾಜಕೀಯದಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಶಾಸಕರಾದರೆ, ಡಿ.ಕೆ. ಸುರೇಶ್ ಸಾಂಸದರು. ಇನ್ನೂ ಹೇಳ ಬೇಕೆಂದರೆ, ಪ್ರಸಕ್ತ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರೂ ಮಾಜೀ ಸಿಎಂ ಅವರ ಪುತ್ರರೇ. ಹಾಗಾಗಿ ಈಗ ಕುಟುಂಬ ರಾಜಕಾರಣಕ್ಕೆ ಯಾವುದೇ ಪಕ್ಷವೂ ಹೊರತಾಗಿಲ್ಲ. ದೇಶದಲ್ಲಿ ಕುಟುಂಬ ರಾಜಕಾರಣ ಹೀಗೆಯೇ ಮುಂದು ವರೆದಲ್ಲಿ ಪ್ರಜಾಪ್ರಭುತ್ವದ ಉದ್ದೇಶಕ್ಕೆ ಮಾರಕವಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳು ಎನ್ನುವ ಮಾತಿದೆ ಹಾಗಾಗಿ ಇನ್ನು ಮುಂದೆಯಾದರೂ ಧರ್ಮ, ಜಾತಿ, ಪಕ್ಷ, ಸಿದ್ಧಾಂತ ಹಣ, ಹೆಂಡ ಎಲ್ಲವನ್ನು ಮರೆತು ನಿರ್ಧಾಕ್ಷಿಣ್ಯವಾಗಿ ಕುಟುಂಬ ರಾಜಕಾರಣಿಗಳನ್ನು ಧಿಕ್ಕರಿಸಿದಾಗಲೇ ಇದಕ್ಕೊಂದು ಶಾಶ್ವತವಾದ ಪರಿಹಾರವನ್ನು ತರಬಹುದು ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಸರ್ಕಾರೀ ಶಾಲೆಗಳೋ? ಗಂಜೀ ಕೇಂದ್ರಗಳೋ?

ಅದು ಎಪ್ಪತ್ತರ ದಶಕ ನಾನು ಸರ್ಕಾರೀ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾಗ, ನಮ್ಮ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ರುಕ್ಮಿಣಿಯ ಮಗ ಉಮೇಶ, ನನ್ನ ಕೂದಲು ಕತ್ತರಿಸುತ್ತಿದ್ದ ನವೀನ್ ಸಲೂನ್ ಅಂಗಡಿಯವರ ಮಗ ನವೀನ, ನಾಗರಾಜ ಶೆಟ್ಟರ ಮಗ ರಂಗನಾಥ, ಸೈಕಲ್ ಶಾಪ್ ಶಫಿಯವರ ಮಗ ಅಬ್ದುಲ್ಲಾ ಎಲ್ಲರೂ ಒಟ್ಟಿಗೇ ಒಂದೇ ತರಗತಿಯಲ್ಲಿ ಪಕ್ಕ ಪಕ್ಕದಲ್ಲಿಯೇ ಕುಳಿತುಕೊಂಡು ಓದುತ್ತಿದ್ದೆವು. ಅಮ್ಮಾ ಬಟ್ಟೆ ಹಾಕಿ ಎಣ್ಣೆ ಹಚ್ಚಿ ಬೈತಲೆ ತೆಗೆದು ಕೂದಲು ಬಾಚಿದರೆ ಹೆಗಲ ಮೇಲೊಂದು ಹಡಪ, ಆ ಹಡಪದಲ್ಲಿ ಸ್ಲೇಟು ಬಳಪ, ಮಗ್ಗೀ ಪುಸ್ತಕದ ಜೊತೆ ಓದಲು ಪುಸ್ತಕ ಇಟ್ಟುಕೊಂಡು, ಹುಟ್ಟಿದ ಹಬ್ಬಕ್ಕೆ ಅಪ್ಪಾ ಉಡುಗೊರೆಯಾಗಿ ಕೊಡಿಸಿದ್ದ ಹವಾಯ್ ಚಪ್ಪಲಿ ಹಾಕಿಕೊಂಡು ಸಂತೋಷದಿಂದ ಶಾಲೆಗೆ ಹೋಗುತ್ತಿದ್ದೆ.

Art of Giving workshop, May 9, 2017

ತರಗತಿಯ ಒಳಗೆ ಹೋಗುವ ಮುನ್ನಾ ತರಗತಿಯ ಹೊರಗೆ ಚಪ್ಪಲಿ ಬಿಟ್ಟು ಸಾಲಾಗಿ ಜೋಡಿಸಿಡ ಬೇಕಾಗುತ್ತಿತ್ತು. ತರಗತಿ ಎನ್ನುವುದು ಶಾರದಾ ಮಾತೆಯ ಮಂದಿರ. ಅಲ್ಲಿಗೆ ಚಪ್ಪಲಿ ಹಾಕಿಕೊಂಡು ಹೋಗಬಾರದು ಎನ್ನುವುದನ್ನು ನಮ್ಮ ಶಿಕ್ಷಕರು ಹೇಳುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಅವರವರ ಮನೆಗೆ ಹೋಗಿ ಊಟ ಮಾಡಿಕೊಂಡು ಮತ್ತೆ ಶಾಲೆಗೆ ಬರುತ್ತಿದ್ದೆವು. ಆಗ ಇವತ್ತಿಗಿಂತಲೂ ಬಡತನವಿತ್ತಾದರು ನಾವೆಲ್ಲರೂ ಶಾಲೆಗೆ ಹೋಗುತ್ತಿದ್ದದ್ದು ಕೇವಲ ವಿದ್ಯಾ ಬುದ್ಧಿಯನ್ನು ಕಲಿಯುವ ಸಲುವಾಗಿ. ನಮ್ಮ ಪಕ್ಕ ಕೂರುತ್ತಿದ್ದ ಹುಡುಗನ ಜಾತಿ, ಮತ, ಕುಲವಾಗಲೀ ಆತ ಹಾಕಿಕೊಳ್ಳುವ ಬಟ್ಟೆಯಾಗಲೀ, ಆತ ಬರೀಗಾಲಿನಲ್ಲಿ ಬಂದರೂ ನಮಗೆ ಯಾವುದೇ ರೀತಿಯ ಭಾವನೆಗಳು ಮೂಡದೇ, ಕೇವಲ ಜ್ಞಾನಾರ್ಜನೆಗೆ ಮಾತ್ರವೇ ಶಾಲೆಗೆ ಹೋಗುತ್ತಿದ್ದವೆಯೇ ಹೊರತು ಬೇರಾವುದೇ ಉದ್ದೇಶಗಳು ಇರಲಿಲ್ಲ.

kid6

ಎಂಭತ್ತರ ಆರಂಭದಲ್ಲಿ, ಅಲ್ಲೊಂದು ಇಲ್ಲೊಂದು ಆಂಗ್ಲ ಮಾಧ್ಯಮದ ಖಾಸಗೀ ಶಾಲೆಗಳು ಆರಂಭವಾಗಿ ಮಕ್ಕಳು ಒಂದೇ ರೀತಿಯ ಸಮವಸ್ತ್ರ ಧರಿಸಿ ಟಸ್ ಪುಸ್ ಎಂದು ಇಂಗ್ಲೀಶ್ ಮಾತನಾಡುತ್ತಾ ಅಮ್ಮಾ ಅಪ್ಪಾ ಜಾಗದಲ್ಲಿ, ಡ್ಯಾಡೀ ಮಮ್ಮೀ ಮಾತನಾಡ ತೊಡಗಿದರೋ ಇದ್ದಕ್ಕಿದ್ದಂತೆಯೇ ನಮ್ಮ ರಾಜಕಾರಣಿಗಳಿಗೆ ಸರ್ಕಾರಿ ಶಾಲೆಯ ಮಕ್ಕಳಲ್ಲಿಯೂ ಸಮಾನತೆ ಬರಲಿ ಎನ್ನುವ ಉದ್ದೇಶದಿಂದ ಸಮವಸ್ತ್ರಗಳನ್ನು ಕೊಡಬೇಕು ಎನ್ನುವ ಮನಸ್ಸು ಮೂಡಿದ್ದು ನಿಜಕ್ಕೂ ಸದ್ಭಾವನೆಯಿಂದ ಕೂಡಿತ್ತು. ಆದೇ ರೀತಿ ನೂರಾರು ಮಕ್ಕಳು ಹಸಿದುಕೊಂಡು ಶಾಲೆಗೆ ಬರುತ್ತಾರೆ. ಬಡತನದಿಂದಾಗಿ ಪೌಷ್ಠಿಕ ಆಹಾರ ದೊರೆಯದೇ, ಸೋರಗಿ ಹೋಗಿರುವುದರಿಂದ ಮಕ್ಕಳಿಗೆ ಬಿಸಿ ಊಟ ಕೊಡುವ ಪದ್ದತಿ ಆರಂಭವಾಯಿತು.

kid4

ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೊಗುತ್ತಿತ್ತು. ಹೇಗೆ ಜೇನುಗೂಡಿನಿಂದ ಜೇನನ್ನು ತೆಗೆದ ನಂತರ ಸೋರುತ್ತಿರುವ ಜೇನುತುಪ್ಪವನ್ನು ನೆಕ್ಕುತ್ತಾರೋ ಅದೇ ರೀತಿ ಇಷ್ಟೊಂದು ಹಣದ ವಹಿವಾಟು ನಡೆಯುವಾಗ ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿಧಾನವಾಗಿ ಶಾಲಾ ಸಮವಸ್ತ್ರ, ಪುಸ್ತಕ, ಬಿಸಿಯೂಟದಲ್ಲಿಯೂ ಹಣ ಹೊಡೆಯಲು ಆರಂಭಿಸಿದರೋ? ಅಂದಿನಿಂದ ಸಮಾನತೆ ಎನ್ನುವುದು ಗಾಳಿಗೆ ತೂರಿದ್ದಲ್ಲದೇ ಮಕ್ಕಳಿಗೆ ಏನು ಬೇಕು ಬೇಡಾ ಎನ್ನುವುದರ ಹೊರತಾಗಿ ತಮಗೆ ಯಾವುದು ಹೆಚ್ಚಿನ ಆದಾಯ ತರುತ್ತದೆಯೋ ಆಂತಹ ಯೋಜನೆಗಳನ್ನು ಪಕ್ಷಾತೀತವಾಗಿ ಜಾರಿಗೆ ತಂದ ಪರಿಣಾಮವೇ, ಚಿಕ್ಕವಯಸ್ಸಿನ ಮಕ್ಕಳಲ್ಲಿಯೇ ಜಾತಿಯ ವಿಷ ಬೀಜವನ್ನು ಬಿತ್ತಿದ್ದಲ್ಲದೇ, ಒಂದು ಪಂಗಡವರಿಗೆ ಒಂದು ಆಹಾರ ಮತ್ತೊಂದು ಮಕ್ಕಳಿಗೆ ಮತ್ತೊಂದು ರೀತಿಯ ಆಹಾರ ಒಂದು ಪಂಗಡವರಿಗೆ ಪ್ರವಾಸ ಮತ್ತೊಂದು ಮಕ್ಕಳಿಗೆ ಮೋಸ ಮಾಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಡುವ ಕಾರ್ಯದ ಮುಂದುವರೆದ ರೂಪವೇ ಶಾಲಾಮಕ್ಕಳಿಗೆ ಮೊಟ್ಟೆ ಕೊಡುವ ಕಾರ್ಯಕ್ರಮ ಎಂದರೂ ತಪ್ಪಾಗದು. ಇತ್ತೀಚೆಗೆ ಮೊಟ್ಟೆಯ ಖರೀದಿಯ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಸಚಿವೆಯೊಬ್ಬರ ಮೇಲೆ ಆರೋಪ ಬಂದಿದ್ದದ್ದು ಅದಕ್ಕೆ ಜ್ವಲಂತ ಉದಾಹರಣೆ.

kid5

ಶಾಲೆಯಲ್ಲಿ ಈ ರೀತಿ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ಕೆಲ ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ರಾಜ್ಯಾಂದ್ಯಂತ ಇದರ ಪರ ವಿರೋಧಗಳು ವ್ಯಕ್ತವಾಗುತ್ತಿದ್ದಂತಯೇ, ಕೊಪ್ಪಳದ ವಿದ್ಯಾರ್ಥಿನಿಯೊಬ್ಬಳು ತಾನು ವಿಧ್ಯಾರ್ಥಿ ಎನ್ನುವುದನ್ನೇ ಮರೆತು, ರಾಜಕೀಯ ಧುರೀಣೆಯಂತೆ, ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ. ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಬದುಕುವುದು ಬೇಕಾ? ನಿಮಗೆ ಮೊಟ್ಟೆ ಕೊಡದಿರುವುದು ಬೇಕಾ? ಎಂದು ಮಠಾಧೀಶರಿಗೇ ಸವಾಲನ್ನು ಹಾಕಿದ್ದಾಳೆ.

student

ಹೌದು ನಿಜ. ಊಟ ತನ್ನಿಷ್ಟ ನೋಟ ಪರರಿಷ್ಟ ಎನ್ನುವ ಗಾದೆಯ ಮಾತಿನಂತೆ ಒಬ್ಬರ ಆಹಾರ ಪದ್ದತಿಯನ್ನು ಮತ್ತೊಬ್ಬರು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅದರೆ ಇದು ಸಾರ್ವಜನಿಕರ ತೆರಿಗೆಯ ಹಣದಲ್ಲಿ ಸಮಾನತೆಯ ಸಾಕಾರವಾಗಿರಬೇಕಾದ ಸರ್ಕಾರಿ ಶಾಲೆಯಲ್ಲಿ ಅಲ್ಲಾ ಅಲ್ವೇ? ಆಕೆ ತನ್ನ ಹಣದಲ್ಲಿ ತನ್ನ ಮನೆಯಲ್ಲಿ ಮೊಟ್ಟೆ ಮಾಂಸವನ್ನು ತಿಂದಲ್ಲಿ ಅದನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ. ಆದರೆ ಶಾಲೆಯಲ್ಲಿ ಸಮಾನತೆಗಾಗಿ ಎಲ್ಲರೂ ಒಂದೇ ರೀತಿ ಬಟ್ಟೆ, ಆಟಾ ಪಾಠಗಳು ಇರುವಾಗ ಈಗ ಆಹಾರದಲ್ಲೇಕೆ ಅಸಮಾನತೆ ತರಬೇಕು? ಎಂದು ಆಕೆಯ ಬಾಯಿಯಲ್ಲಿ ಆಷ್ಟು ದೊಡ್ಡ ಮಾತುಗಳನ್ನು ಆಡಿಸಿರುವ ಆ ಕಾಣದ ಕೈಗಳನ್ನು ಪ್ರಶ್ನಿಸಲೇ ಬೇಕಿದೆ. ಇತ್ತೀಚಿಗೆ ಟಿವಿ ಚಾನೆಲ್ ಗಳ ಮೈಕ್ ಮುಖದ ಮುಂದೆ ಹಿಡಿದ ಕೂಡಲೇ ಹೇಗೇಗೋ ಮಾತನಾಡುವ ಕೆಟ್ಟ ಚಾಳಿ ಆರಂಭವಾಗಿರುವುದು ದೌರ್ಭಾಗ್ಯ. ಇದರ ಬಗ್ಗೆ ಪೋಷಕರು ಈಗಲೇ ಜಾಗೃತಿ ವಹಿಸದೇ ಹೋದಲ್ಲಿ ಮುಂದೇ ಭಾರೀ ಪರಿಣಾಮವನ್ನು ಎದುರಿದಬೇಕಾಬಹುದು.

ಮಕ್ಕಳಿಗೆ ವಿದ್ಯಾರ್ಥಿ ಜೀವನವು ಬಹಳ ಪ್ರಾಮುಖ್ಯವಾಗಿದ್ದು, ಒಬ್ಬ ವಿದ್ಯಾರ್ಥಿಯ ಲಕ್ಷಣಗಳು ಹೇಗಿರಬೇಕು ಎಂಬುದನ್ನು ನಮ್ಮ ಹಿರಿಯರು ಬಹಳ ಸೊಗಸಾಗಿ ಹೇಳಿದ್ದಾರೆ.

ಕಾಕದೃಷ್ಟಿ ಬಕಧ್ಯಾನಂ, ಶ್ವಾನ ನಿದ್ರಾ ತಥೈವಚಾ |
ಅಲ್ಪಾಹಾರೀ ಮಲೀನ ವಸ್ತ್ರಂ ವಿದ್ಯಾರ್ಥಿ ಪಂಚ ಲಕ್ಷಣಂ||

ನೆಲದ ಮೇಲೆ ಬಿದ್ದಿರುವ ಸಣ್ಣ ಸಣ್ಣ ಆಹಾರವನ್ನು ಸೂಕ್ಷ್ಮವಾಗಿ ಗಮನಿಸುವ ಕಾಗೆಯಷ್ಟು ತೀಕ್ಷ್ಣವಾದ ದೃಷ್ಟಿ, ಒಂಟಿ ಕಾಲಿನಲ್ಲಿ ನೀರಿನಲ್ಲಿ ಅಚಲವಾಗಿ ಧ್ಯಾನ ಮಾಡುವಂತೆ ನಿಂತು ಮೀನು ಬಂದ ತಕ್ಷಣ ಲಭಕ್ ಎಂದು ತಿನ್ನುವ ಕೊಕ್ಕರೆಯಂತಹ ಏಕಾಗ್ರತೆಯನ್ನು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಧಿಗಳು ಹೊಂದಿರಬೇಕು. ಎಂತಹ ನಿದ್ದೆಯಲ್ಲಿದ್ದರೂ ಸಣ್ಣ ಸಪ್ಪಳಕ್ಕೂ ಎಚ್ಚೆತ್ತು ಕೊಳ್ಳುವ ನಾಯಿಯಂತೆ ವಿದ್ಯಾರ್ಥಿ ಸದಕಾಲವೂ ಜಾಗೃತನಾಗಿರಬೇಕು. ಎಲ್ಲದ್ದಕ್ಕಿಂತಲೂ ವಿದ್ಯೆ ಕಲಿಯುವ ವಿದ್ಯಾರ್ಥಿಯು ಮಿತವಾದ ಉದರಕ್ಕೂ, ಮನಸ್ಸಿಗೂ ಹಿತವಾಗುವ ಸಾತ್ವಿಕ ಆಹಾರ ಸೇವಿಸಬೇಕು ಎಂದಿರುವದಲ್ಲದೇ, ವಿದ್ಯಾರ್ಥಿಗಳ ಗಮನ ತಮ್ಮ ವಿದ್ಯಾಭ್ಯಾಸದ ಕಡೆಗೆ ಇರಬೇಕೇ ಹೊರತು, ತನ್ನ ಉಡುಗೆ ತೊಡಿಗೆಗಳಿಗೇ ಹೆಚ್ಚಿನ ಸಮಯ ವ್ಯರ್ಥ ಮಾಡುತ್ತಾ ಅಲಂಕಾರ ಸಿದ್ಧಾರ್ಥಿ ಈ ವಿದ್ಯಾರ್ಥಿ ಎನಿಸಿಕೊಳ್ಳದೇ, ಸರಳವಾದ ಶುಭ್ರವಾದ ವಸ್ತ್ರವನ್ನು ಧರಿಸಬೇಕು ಎನ್ನುತ್ತದೆ ಈ ಶ್ಕೋಕ.

ಖಂಡಿತವಾಗಿಯೂ ಈ ಐದು ನಿಯಮಗಳನ್ನು ಪಾಲಿಸುವ ವಿದ್ಯಾರ್ಥಿಯು ಸಫಲತೆಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ ಎನ್ನುವುದರ ಅರಿವಿದ್ದರೂ ದುರಾದೃಷ್ಟವಷಾತ್ ಇಂದಿನ ಬಹುತೇಕ ವಿದ್ಯಾರ್ಥಿಗಳು ಈ ಐದೂ ಗುಣಗಳಿಗೆ ಎಳ್ಳೂ ನೀರು ಬಿಟ್ಟು ಈ ರೀತಿ ಹಾದಿ ಬೀದಿಯಲ್ಲಿ ಯಾರದ್ದೂ ಕುಮ್ಮಕ್ಕಿನಿಂದ ಪ್ರತಿಭಟನೆ ಮಾಡುತ್ತಾ ತಮ್ಮ ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಹಾಳು ಮಾಡುಕೊಳ್ಳುತ್ತಿರುವುದು ಈ ದೇಶದ ವಿಪರ್ಯಾಸವೇ ಸರಿ.

ವಿದ್ಯಾ ದದಾತಿ ವಿನಯಂ, ವಿನಯಾದ್ ಯಾತಿ ಪಾತ್ರತಾಂ

ಪಾತ್ರತ್ವಾದ್ ಧನಮಾಪ್ನೋತಿ, ಧನಾದ್ ಧರ್ಮಂ, ತತಃ ಸುಖಮ್ ॥

ವಿದ್ಯೆ ಸರಿಯಾಗಿ ಕಲಿತಲ್ಲಿ ವಿನಯ ಬರುತ್ತದೆ, ವಿನಯವಿದ್ದಲ್ಲಿ ಸಮಾಜದಲ್ಲಿ ಗೌರವ ದೊರೆಯುತ್ತದೆ. ಅದೇ ಗೌರವದಿಂದ ರಾಶಿ ರಾಶಿ ಧನ ಲಾಭವಾಗಿ ಅದರಿಂದ ಸುಖಃವಾಗಿರಬಹುದು ಎನ್ನುತ್ತದೆ ಮತ್ತೊಂದು ಶ್ಲೋಕ.

ಹಾಗಾಗಿ ಆ ಪುಟ್ಟ ಹುಡುಗಿ ವಯಸ್ಸಿಗೆ ತಕ್ಕಂತೆ ಮೊದಲು ಓದಿನ ಕಡೆ ಗಮನ ಕೊಡಬೇಕೇ ಹೊರತು, ದಿಢೀರಾಗಿ ಪುಕ್ಸಟ್ಟೇ ಪ್ರಚಾರ ಸಿಗುತ್ತದೆ ಎಂದು ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆಯ ಅರಿವಿಲ್ಲದೇ ಬಾಯಿಗೆ ಬಂದಂತೆ ಬಡಬಡಾಯಿಸಬಾರದು,

ವಿದ್ಯಾತುರಾಣಾಂ ನ ಸುಖಂ ನ ನಿದ್ರಾ ಎನ್ನುವ ಮತ್ತೊಂದು ಶ್ಲೋಕವೊಂದಿದೆ ಅದರ ಪ್ರಕಾರ ವಿದ್ಯೇ ಕಲಿಯಲು ಬಯಸುವರು ಸುಖಾ ಮತ್ತು ನಿದ್ರೆಯನ್ನು ತ್ಯಜಿಸಬೇಕು ಎನ್ನುವುದು ಇದರ ಅರ್ಥವಾಗಿದೆ ಹಾಗಾಗಿ ಶಾಲೆಯಲ್ಲಿ ಕಲಿಕೆಗಷ್ಟೇ ಸೀಮಿತಗೊಳಿಸಿ ಅಕಸ್ಮಾತ್ ತಿನ್ನಲು ಕೊಟ್ಟಲ್ಲಿ ಅದು ಎಲ್ಲರೂ ಒಟ್ಟಿಗೆ ಯಾವುದೇ ಬೇಧಭಾವವಿಲ್ಲದೇ ಕುಳಿತು ಕೊಟ್ಟಿದ್ದು ತಿಂದುಕೊಂಡು ಶಿಕ್ಷಣದ ಕಡೆ ಗಮನ ಹರಿಸು ಎಂದು ಆಕೆಯ ಪೋಷಕರು ಮತ್ತು ಗುರು ಹಿರಿಯರು ತಿದ್ದಿ ಹೇಳಬೇಕಾಗಿದೆ.

ಜಾತಿ, ಭಾಷೆಯ ಹೆಸರಿನಲ್ಲಿ ಈಗಾಗಲೇ ಜನರನ್ನು ಒಡೆದದ್ದಾಗಿದೆ. ಈಗ ತಮ್ಮ ರಾಜಕೀಯ ತೆವಲುಗಳಿಗೆ ಆಹಾರ ಪದ್ದತಿಯಲ್ಲಿ ದೇಶ ಒಡೆಯುವ ಹುನ್ನಾರ ನಡೆಸಿದ್ದಾರೆ. ಒಟ್ಟಿನಲ್ಲಿ ಕೆಲವು ಪಟ್ಟ ಭದ್ರಹಿತಾಸಕ್ತಿಗಳಿಗೆ ಈ ದೇಶ ಒಗ್ಗಟ್ಟಿನಲ್ಲಿ ಇರಬಾರದಷ್ಟೇ ಎನ್ನುವ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಲೇ ಬೇಕು.

kid2

ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಶಾಲೆಗೆ ಪಾಠ ಕಲಿಯೋದಿಕ್ಕೆ ಹೋಗಬೇಕೇ ಹೊರತು ತಿನ್ನೋದಕ್ಕಲ್ಲ. ಆ ಹುಡುಗಿಗೆ ಪೌಷ್ಟಿಕಾಂಶದ ಬಗ್ಗೆ ಅಷ್ಟು ಕಾಳಜಿ ಇದ್ದಲ್ಲಿ‌ ಮನೆಯಲ್ಲೇ ಮೊಟ್ಟೆ ತಿಂದು ಬರಲಿ. ಅದೂ ಅಲ್ಲದೇ ಮೊಟ್ಟೆಯ ಹೊರತಾಗಿಯೂ ಎಲ್ಲರೂ ಸಮಾನತೆಯಿಂದ ಸೇವಿಸುವಂತಹ ಸಸ್ಯಾಹಾರದಲ್ಲೂ ಪೌಷ್ಠಿಕಾಂಷವಿದೆ ಎನ್ನುವುದನ್ನು ಅಷ್ಟು ಚಿಕ್ಕವಯಸ್ಸಿನ ಹೆಣ್ಣುಮಗುವಿನ ಬಾಯಲ್ಲಿ ಅಷ್ಟು ದೊಡ್ಡ ಮಾತುಗಳನ್ನು ಆಡಿಸುತ್ತಿರುವ ಆ ಕಾಣದ ‌ಕೈಗಳಿಗೆ ತಿಳಿಸಿ ಕೊಡುವ ಮೂಲಕ ಶಾಲೆಯಲ್ಲಿ ಸಮಾನತೆಯನ್ನು ಕಾಪಾಡ ಬೇಕಾಗಿದೆ

ಶಾಲೆಗಳು ವಿದ್ಯೆಗಷ್ಟೇ ಮೀಸಲಾಗಿರ ಬೇಕೇ ಹೊರತು ಅದು ಕಣ್ಣಿಗೆ ಕಾಣದ ಕೆಲ ಗಂಜೀ ಗಿರಾಕಿಗಳ ಗಂಜೀ ಕೇಂದ್ರವಾಗಬಾರದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಎದುರು ಮನೆಯಲ್ಲಿ ಮಕ್ಕಳು ಹುಟ್ಟಿದ್ರೇ ನಮ್ಮನೆಲೀ ತೊಟ್ಟಿಲು ಆಡ್ಸೋದೇ?

ಕಳೆದ ಒಂದು ವಾರದಲ್ಲಿ ಭಾರತೀಯ ಮೂಲದ ಇಬ್ಬರು ಹೆಸರುಗಳು ಎಲ್ಲೆಡೆಯಲ್ಲೂ ಪ್ರಸಿದ್ದಿ ಪಡೆದಿತ್ತು. ಮೊದಲನೆಯದ್ದು ಭಾರತೀಯ ಮೂಲದ ಅಮೆರಿಕನ್ ಪರಾಗ್ ಅಗರವಾಲ್, ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾದರೆ, ಎರಡನೆಯದ್ದು ಮುಂಬೈನಲ್ಲಿ ಹುಟ್ಟಿ ಬಾಲ್ಯದಲ್ಲಿಯೇ ಕುಟುಂಬದೊಂದಿಗೆ ನ್ಯೂಜಿಲೆಂಡಿಗೆ ಹೋಗಿ ಅಲ್ಲಿಯ ಕ್ರಿಕೆಟ್ ತಂಡದ ಭಾಗವಾಗಿ ಭಾರತದ ವಿರುದ್ದ ಮುಂಬೈ ಕ್ರಿಕೆಟ್ ಟೆಸ್ಟಿನ ಮೊದಲನೇ ಇನ್ನಿಂಗ್ಸಿನಲ್ಲಿ ಎಲ್ಲಾ 10 ವಿಕೆಟ್ ಪಡೆದು ವಿಶ್ವ ದಾಖಲೆಯನ್ನು ಸರಿಗಟ್ಟಿದ ಅಜಾಜ್ ಪಟೇಲ್ ಬಗ್ಗೆ.

ಪ್ರತೀ ಬಾರಿಯೂ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಜಾಗತಿಕ ಮಟ್ಟದಲ್ಲಿ ಅಥವಾ ಬಹುರಾಷ್ಟ್ರೀಯ ಕಂಪನಿಯ ಸಿಇಒ ಆದಾಗ ನಾವು ಬಹಳಷ್ಟು ಸಂಭ್ರಮಿಸುತ್ತೇವೆ. ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಲು ಆರಂಭಿಸುತ್ತೇವೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ನೆರೆ ರಾಷ್ಟ್ರ ಪಾಕಿಸ್ಥಾನ ತನ್ನ ದೇಶದ ಪ್ರಜೆಗಳನ್ನು ಭಯೋತ್ಪಾಕರನ್ನಾಗಿ ಮಾಡುತ್ತಿದ್ದರೆ, ನಾವು ಭಾರತೀಯರು ಅಮೇರಿಕನ್ ಕಾರ್ಪೊರೇಟ್ಗಳನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆಯುತ್ತಿದ್ದೇವೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೊಚ್ಚಿಕೊಳ್ಳುತ್ತೇವೆ.

CEO

ಆದರೆ ವಾಸ್ತವದ ಸಂಗತಿಯೇನೆಂದರೆ, ಅಮೇರಿಕಾದ ಉಪಾಧ್ಯಕ್ಷೆ, ಪೆಪ್ಸಿ, ಗೂಗಲ್‌, ಮೈಕ್ರೋಸಾಫ್ಟ್‌, ಟ್ವಿಟರ್ ನ ಸಿಇಒಗಳು ಭಾರತೀಯ ಯುವಜನರ ಬೌದ್ಧಿಕ ಶಕ್ತಿಯನ್ನು ತಮ್ಮ ಕಂಪನಿಯ ಬೆಳವಣಿಗೆ ಹೇಗೆ ಬೆಳೆಸಿಕೊಳ್ಳಬಹುದೆಂಬ ಆಸಕ್ತಿ ಹೊಂದಿರುತ್ತಾರೆಯೇ ಹೊರತು ಅವರಿಂದ ಭಾರತದ ಅಭಿವೃದ್ಧಿಗೆ ಕಿಂಚಿತ್ತೂ ಅನುಕೂಲವಿರುವುದಿಲ್ಲ. ಏಕೆಂದರೆ ಅವರೆಲ್ಲರೂ ಭಾರತೀಯ ಮೂಲದವರೇ ಹೊರತು ಅವರು ಭಾರತೀಯರಲ್ಲ. ಅವರು ಭಾರತೀಯ ಪೌರತ್ವವನ್ನು ಎಂದೋ ಹಿಂದಿರುಗಿಸಿ ಅಮೇರಿಕನ್ನರಾಗಿ ಹೋಗಿರುತ್ತಾರೆ ಎನ್ನುವದಷ್ಟೇ ಸತ್ಯ.

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು, ಅಪ್ಪಟ ಭಾರತೀಯರೇ ಆದ, ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಮಹೇಂದ್ರಾ, ಇನ್ಫೋಸಿಸ್ ಮುಂತಾದ ಕಂಪನಿಗಳು ಭಾರತದಲ್ಲಿ ಹೊಸಾ ಯೋಜನೆಗಳು ಕೈಗೆತ್ತಿಕೊಂಡಲ್ಲಿ ಅಥವಾ ಸರ್ಕಾರದ ಸಂಸ್ಥೆಗಳು ಖಾಸಗೀಕರಣಗೊಂಡಾಗ ಅವುಗಳನ್ನು ಕೈಗೆತ್ತಿಕೊಂಡಲ್ಲಿ ಇದ್ದಕ್ಕಿದ್ದಂತೆಯೇ ಮೈಮೇಲೆ ಬೆಂಕಿ ಬಿದ್ದಂತೆ ಆಡುವುದನ್ನು ಕಂಡಾಗ, ಸ್ವಾತ್ರಂತ್ಯ್ರ ಬಂದು 70 ವರ್ಷಗಳು ಕಳೆದರೂ ಇನ್ನೂ ಬಿಳಿ ತೊಗಲಿನವರ ಗುಲಾಮಿತನದಿಂದ ಹೊರಬಂದಿಲ್ಲದಿರುವುದಕ್ಕೆ ವಿಪರ್ಯಾಸ ಎನಿಸುತ್ತದೆ.

ಸ್ವಲ್ಪ ತಾಳ್ಮೆ ವಹಿಸಿ ನೋಡಿದಲ್ಲಿ ಈ ಭಾರತೀಯರ ಎಲ್ಲಾ ಕಂಪನಿಗಳು ಭಾರತದಲ್ಲಿಯೇ ಭಾರತೀಯರಿಗಾಗಿಯೇ ಆರಂಭವಾಗಿದ್ದು ಭಾರತೀಯ ಉತ್ಪನ್ನಗಳನ್ನು ಸೃಷ್ಟಿಸಿವೆ. ಇದೇ ಕಂಪನಿಗಳು ಸಾಮಾನ್ಯ ಜನರಿಗೆ ದೊಡ್ಡ ಷೇರುದಾರರ ಸಂಪತ್ತನ್ನು ಸೃಷ್ಟಿಸಿದ್ದಲ್ಲದೇ, ನಮ್ಮ ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಜೊತೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರ, ತೈಲ ಮತ್ತು ಅನಿಲ, ಆಹಾರ ಪೂರೈಕೆ ಸರಪಳಿ, ಬಟ್ಟೆ, ದೂರಸಂಪರ್ಕ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ತಂದಿದ್ದನ್ನು ನೆನಪಿಸಿಕೊಳ್ಳುವುದೇ ಇಲ್ಲ. ರಿಲಯನ್ಸ್ ಕಂಪನಿ ರೂ 500/-ಕ್ಕೆ ಸಿ.ಡಿ.ಎಮ್.ಎ ಪೋನ್ ಆರಂಭಿಸಿದಾಗಲೇ ಸಾಮಾನ್ಯ ಭಾರತೀಯನ ಕೈಯಲ್ಲೂ ಮೊಬೈಲ್ ರಿಂಗಣಿಸಗೊಟಗಿತ್ತು. ಅದೇ ಜಿಯೋ ಬಂದಾಗಲಷ್ಟೇ ಕೇವಲ ತಿಂಗಳಿಗೆ 300/- ವೆಚ್ಚದಲ್ಲಿ ಅನಿರ್ಧಿಷ್ಟ ಕರೆಗಳ ಜೊತೆಗೆ ಇಂಟರ್ನೆಟ್ ಸೇವೆಯನ್ನು ಪಡೆಯಲಾರಂಭಿಸಿದರು ಎನ್ನುವುದನ್ನು ಕೆಲವರು ಜಾಣತನದಿಂದ ಮರೆಮಾಚುತ್ತಾರೆ.

indian2

ವಾಸ್ತವವೆಂದರೆ, ನಾವು ಭಾರತೀಯರು ಕೇವಲ ಭಾವನಾತ್ಮಕವಾಗಿ ವ್ಯವಹರಿಸುತ್ತೇವೆಯೇ ಹೊರತು ವಾಸ್ತವದ ಅಂಕಿ ಅಂಶಗಳತ್ತ ಗಮನವನ್ನು ಹರಿಸುವುದೇ ಇಲ್ಲ. 20 ನಾದೆಲ್ಲಾ, 200 ಪಿಚೈ & 1000 ಪರಾಗ್‌ಗಳಿಗಿಂತ 10 ಪಟ್ಟು ಹೆಚ್ಚಿನ ಉದ್ಯೋಗಾವಕಾಶವನ್ನು ಅಂಬಾನಿ, ಅದಾನಿ, ಟಾಟ, ಬಿರ್ಲಾಗಳು ಭಾರತದಲ್ಲಿ ಸಂಪತ್ತು ಮತ್ತು ಉದ್ಯೋಗಗಳನ್ನು ಸೃಷ್ಟಿಸಿದ್ದರೂ ಭಾರತದಲ್ಲಿ ಅವರನ್ನು ದ್ವೇಷಿಸುವರೇ ಹೆಚ್ಚಾಗಿರುವುದು ಅಚ್ಚರಿಯಾಗಿದೆ.

ಈ ಕೆಳಗಿನ ಅಂಕಿ ಅಂಶಗಳತ್ತ ಒಮ್ಮೆ ಕಣ್ಣಾಡಿಸಿ.

  • Tata Group 7,50,000 ಉದ್ಯೋಗಿಗಳನ್ನು ಹೊಂದಿದೆ.
  • L&T 3,38,000 ಜನರನ್ನು ನೇಮಿಸಿಕೊಂಡಿದೆ.
  • Infosys 2,60,000 ಉದ್ಯೋಗಿಗಳನ್ನು ಹೊಂದಿದೆ.
  • Mahindra 2,60,000 ಉದ್ಯೋಗಿಗಳನ್ನು ಹೊಂದಿದೆ.
  • Reliance Industries 2,36,000 ಜನರನ್ನು ಹೊಂದಿದೆ.
  • WIPRO 2,10,000 ಉದ್ಯೋಗಿಗಳನ್ನು ಹೊಂದಿದೆ.
  • HCL 1,67,000 ಉದ್ಯೋಗಿಗಳನ್ನು ಹೊಂದಿದೆ.
  • HDFC ಬ್ಯಾಂಕ್ 1,20,000 ಉದ್ಯೋಗಿಗಳನ್ನು ಹೊಂದಿದೆ.
  • ICICI ಬ್ಯಾಂಕ್ 97,000 ಉದ್ಯೋಗಿಗಳನ್ನು ಹೊಂದಿದೆ.
  • TVS group 60,000 ಉದ್ಯೋಗಿಗಳನ್ನು ಹೊಂದಿದೆ.

ಈ ಹತ್ತು ಕಾರ್ಪೊರೇಟ್‌ಗಳಿಂದಲೇ ಸುಮಾರು 25 ಲಕ್ಷಕ್ಕೂ ಅಧಿಕ ಭಾರತೀಯರಿಗೆ ಉದ್ಯೋಗ ದೊರೆತಿದೆ. ಈ ಎಲ್ಲಾ ಕಂಪನಿಯ ತಮ್ಮ ಕೆಲಸಗಾರರಿಗೆ ಅತ್ಯಂತ ಗೌರವಾನ್ವಿತ ಸಂಬಳವನ್ನು ನೀಡುತ್ತವೆಯಲ್ಲದೇ, ಈ ಎಲ್ಲಾ ಕೆಲಸಗಾರರ ತೆರಿಗೆಗಳು ಮೂಲದಲ್ಲಿ ತೆರಿಗೆ ಕಡಿತವಾಗಿ (TDS) ಭಾರತದ ಆದಾಯವನ್ನು ಹೆಚ್ಚಿಸುತ್ತಿದ್ದರೆ, ಇನ್ನು ಪರೋಕ್ಷವಾಗಿ ಇವರೆಲ್ಲರೂ ಮಾಡುವ ವಿವಿದ ಖರ್ಚಿನಿಂದ ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ದೊರೆತಿರುವುದೂ ಸುಳ್ಳೇನಲ್ಲ. ಈ ಕಾರ್ಪೊರೇಟ್ ಕಂಪನಿಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡಿರುವ ಕೆಲಸದ( ಸುಮಾರು 50-52 ಲಕ್ಷ) ಅರ್ಧದಷ್ಟು ಉದ್ಯೋಗಿಗಳಿಗೆ ಆಶ್ರಯ ನೀಡಿದ್ದರೆ ಆರ್ಥಿಕವಾಗಿ ಸರ್ಕಾರೀ ನೌಕರರಿಗಿಂತಲೂ ಅದೆಷ್ಟೋ ಪಾಲು ಹೆಚ್ಚಿನ ಆರ್ಥಿಕವಾದ ಸಧೃಢತೆಯನ್ನು ನೀಡಿವೆ ಎನ್ನುವುದೂ ಸತ್ಯ.

ಒಟ್ಟಿನಲ್ಲಿ ಸರ್ಕಾರವು ಒಂದು ಕೋಟಿ ಜನರಿಗೆ (1%) ಉದ್ಯೋಗಗಳನ್ನು ಒದಗಿಸಿದರೆ, ಖಾಸಗಿ ಮತ್ತು ಸಂಘಟಿತ ವಲಯವು 6-8% ಅನ್ನು ಒದಗಿಸುತ್ತದೆ ಮತ್ತು ಉಳಿದ 92% ಜನರು ಅಸಂಘಟಿತ ವಲಯದಲ್ಲಿ ಉದ್ಯೋಗಿಗಳಾಗಿದ್ದಾರೆ.

indian

ಹಾಗಾಗಿ, ನಮ್ಮ ದೇಶಕ್ಕೆ ಒಂದು ಚೂರು ಉಪಯೋಗವಿಲ್ಲದ, ಭಾರತದ ಪೌರತ್ವವನ್ನು ಎಂದೋ ತ್ಯಜಿಸಿದವರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಸ್ಥಾನ ಪಡೆದಾಗ ಎದುರು ಮನೆಯಲ್ಲಿ ಮಗು ಹುಟ್ಟಿದಾಗ ನಮ್ಮ ಮನೆಯಲ್ಲಿ ತೊಟ್ಟಿಲು ಆಡಿಸುವಂತೆ ಸಂಭ್ರಮಿಸುವ ಬದಲು. ನಮ್ಮ ಪ್ರಧಾನಿಗಳ ಆಶಯದಂತೆ ಆತ್ಮನಿರ್ಭರ್ (ಸ್ವಾಭೀಮಾನಿ) ಗಳಾಗಿ ಪರೋಕ್ಷವಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಅನಗತ್ಯವಾಗಿ ತಲೆಯ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುವುದಕ್ಕಿಂತಲೂ ಭಾರತೀಯರು, ಭಾರತದಲ್ಲೇ ಅರಂಭಿಸಿರುವ ಕಂಪನಿಗಳ ಉತ್ಪನ್ನಗಳನ್ನು ಕೊಳ್ಳುವುದರ ಮೂಲಕ, ಭಾರತದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸೋಣ. ಭಾರತದಲ್ಲಿ, ಭಾರತಕ್ಕಾಗಿ, ಭಾರತೀಯರಾಗಿ ಕೆಲಸ ಮಾಡುತ್ತಿರುವವರ ಬಗ್ಗೆ ಹೆಮ್ಮೆ ಪಡೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಆಂಗ್ಲ ಸಂದೇಶವೊಂದರಿಂದ ಪ್ರೇರಿತವಾದ ಲೇಖನ