ಮಸಾಲೇ ದೋಸೆ

ದೋಸೆ ಎಂದ ತಕ್ಶಣ ನಮ್ಮೆಲ್ಲರ ಮನದಲ್ಲಿ ಥಟ್ ಅಂತಾ ಮೂಡೋದೇ, ಮಸಾಲೇ ದೋಸೆ. ಈಗ ಇರೋ ಬೇಲೆ ನೋಡಿದರೆ ಹೋಟೆಲ್ಗಳಿಗೆ ಹೋಗಿ ಹೊಟ್ಟೇ ತುಂಬಾ ದೋಸೆ ತಿನ್ನೋದು ಸಾಧ್ಯವೇ ಇಲ್ಲದ ಮಾತು. ಇನ್ನು ಮಸಾಲೇ ದೋಸೆಗೆ ರುಚಿ ಕೊಡೋದೇ ಒಳಗೆ ಹಾಕೋ ಕೆಂಪು ಚೆಟ್ನಿ, ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ಕೆಂಪು ಚೆಟ್ನಿ ಮಾಡೋದೇ ಇಲ್ಲ. ಅದರ ಬದಲಾಗಿ ಚೆಟ್ನೀ ಪುಡಿಯನ್ನು ಉದುರಿಸಿಕೊಡುತ್ತಾರಾದರೂ, ಮಸಾಲೇ ದೋಸೆ ರುಚಿ ಬರೋದಿಲ್ಲ. ಅದಕ್ಕಾಗಿಯೇ ದೋಸೆಗಳ ರಾಜ ಮಸಾಲೇ ದೋಸೆಯನ್ನು ಸಾಂಪ್ರದಾಯಿಕವಾಗಿ… Read More ಮಸಾಲೇ ದೋಸೆ

ಅಮೃತಸರೀ ಚೆನ್ನಾ ಚೋಲೇ ಬತೂರ

ಸುಮಾರು  5-6  ಜನರಿಗೆ ಸಾಕಾಗುವಷ್ಟು  ಸಾಂಪ್ರದಾಯಿಕ ರೀತಿಯಲ್ಲಿ  ಅಮೃತಸರೀ ಚೆನ್ನಾ ಚೋಲೇ ಬತೂರ  ತಯಾರಿಸಲು  ಬೇಕಾಗುವ ಸಾಮಗ್ರಿಗಳು ಈ ರೀತಿಯಲ್ಲಿದೆ. ನೆನೆಸಿದ ಕಾಬೂಲ ಕಡಲೇ 1/2  ಕೆಜಿ ಅಚ್ಚ ಖಾರದ ಪುಡಿ 3 ಟೇಬಲ್ ಸ್ಪೂನ್ ದನಿಯಾ ಪುಡಿ 3 ಟೇಬಲ್ ಸ್ಪೂನ್ ಚೆನ್ನಾ ಮಸಾಲ 3 ಟೇಬಲ್ ಸ್ಪೂನ್ ಲವಂಗ 4-5 ಏಲಕ್ಕಿ 3-4 ದೊಡ್ಡ ಏಲಕ್ಕಿ 2 ಅಡುಗೆ ಎಣ್ಣೆ 4 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 2  ಟೇಬಲ್ ಸ್ಪೂನ್ ತುರಿದ… Read More ಅಮೃತಸರೀ ಚೆನ್ನಾ ಚೋಲೇ ಬತೂರ

ಪಲಾವ್

ಮಕ್ಕಳು ಅದೇ ಸಾರು, ಹುಳಿ, ಪಲ್ಯ ತಿಂದು ಬೇಜಾರಾದಾಗ ವಾರಾಂತ್ಯದಲ್ಲಿ ಅಥವಾ ದಿಡೀರ್ ಎಂದು ಯಾರಾದರೂ ಮನೆಗೆ ಬಂದಾಗ ಏನಪ್ಪಾ ಮಾಡುವುದು ಎಂದು ಹೆಚ್ಚಿಗೆ ಯೋಚಿಸದೇ, ನಾವು ತಿಳಿಸಿರುವಂತೆ ಆರೋಗ್ಯಕರವಾದ ಮತ್ತು ರುಚಿಕರವಾದ ಪಲಾವ್ ಮಾಡಿ ನೋಡಿ. ನಿಮ್ಮ ಮನೆಗೆ ಬಂದ ಅತಿಥಿಗಳು ಮತ್ತು ಮಕ್ಕಳು ಖಂಡಿತವಾಗಿಯೂ ಇಷ್ಟ ಪಡುತ್ತಾರೆ. 3 ಪಾವು ಅಕ್ಕಿಗೆ ಅನುಗುಣವಾಗಿ ಸುಮಾರು 8-10 ಜನರಿಗೆ ಸಾಕಾಗುವಷ್ಟು ಪಲಾವ್ ಮಾಡಲು ಬೇಕಾಗುವ ಸಾಮಗ್ರಿಗಳು ತರಕಾರಿಗಳು ಕ್ಯಾರೆಟ್ 2 ದೊಡ್ಡ ಗಾತ್ರದ್ದು ಹುರಳೀಕಾಯಿ 1… Read More ಪಲಾವ್

ಕಟ್ಲೇಟ್

ಸಂಜೆ ಹೊತ್ತು ಟೀ/ ಕಾಫಿಯ ಜೊತೆಗೆ ಏನಾದರೂ ಬಿಸಿ ಬಿಸಿಯಾಗಿ ಖಾರವಾಗಿ ತಿನ್ನಲು ಕುರುಕಲು ಇದ್ದರೆ ಚೆನ್ನಾ ಎನಿಸುವುದು ಸಹಜ. ಹಾಗಾಗಿ ನಿಮಗೆ ಥಟ್ ಅಂತಾ ಮಾಡುವ ರುಚಿಕರವಾದ ವಿವಿಧ ರೀತಿಯ ಕಟ್ಲೆಟ್ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇನೆ. ಅವಲಕ್ಕಿ/ಅನ್ನದ ಕಟ್ಲೇಟ್ ಅವಲಕ್ಕಿ ಕಟ್ಲೇಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ನೆನಸಿದ ಅವಲಕ್ಕಿ                         2 ಬಟ್ಟಲು ಅಕ್ಕಿ ಹಿಟ್ಟು         … Read More ಕಟ್ಲೇಟ್

ವಿಶ್ವ ಆರೋಗ್ಯ ದಿನಾಚರಣೆ

ವಿಶ್ವ ಆರೋಗ್ಯ ದಿನವು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು, ಪ್ರತಿವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತದೆ. ಆರೋಗ್ಯದ ಕಾಳಜಿ ಕುರಿತಾಗಿ ವಿಶ್ವಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷವೂ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ವೆಂದು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ… Read More ವಿಶ್ವ ಆರೋಗ್ಯ ದಿನಾಚರಣೆ

ಹೆಸರುಬೇಳೆ ಇಡ್ಲಿ

ಇಡ್ಲಿ ಎಂದರೆ ಎಲ್ಲರ ಕಣ್ಣುಮುಂದೆ ಬರುವುದೇ ಹಬೆಯಲ್ಲಿ ಬೇಯಿಸಿದ, ಉಬ್ಬಿದ ಬಿಸಿ ಬಿಸಿಯಾದ ಮೃದುವಾದ ದಕ್ಷಿಣ ಭಾರತದ ಪ್ರಖ್ಯಾತವಾದ ತಿಂಡಿ. ಇಂತಹ ಇಡ್ಲಿಯ ಜೊತೆಗೆ ರುಚಿಕರವಾದ ಕಾಯಿ ಚಟ್ನಿ ಮತ್ತು ಸಾಂಬಾರ್ ಇದ್ದರಂತೂ ಬೇರಾವ ತಿಂಡಿಯೂ ಮನಸ್ಸಿಗೆ ಬೇಡ ಎನ್ನಿಸುತ್ತದೆ ಎಂದರೆ ಸುಳ್ಳಲ್ಲ. ಯಾವುದೇ ರೀತಿಯ ಎಣ್ಣೆ ಅಥವಾ ಜಿಡ್ಡಿಲ್ಲದೇ ಕೇವಲ ಅಕ್ಕಿ ಮತ್ತು ಉದ್ದಿನ ಬೇಳೆಯ ಸರಿಯದ ಪ್ರಮಾಣದ ಮಿಶ್ರಿತವಾಗಿ ಹಬೆಯಲ್ಲಿ ಬೆಂದು ಸರಿಸಮಾನದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಇರುವ ಅತ್ಯಂತ ಕಡಿಮೆ ಕ್ಯಾಲೋರಿ ಇರುವ,… Read More ಹೆಸರುಬೇಳೆ ಇಡ್ಲಿ

ಕಾಯಿಹಾಲು

ಸುಮಾರು 20-25 ಲೋಟಗಳಷ್ಟು ಸಾಂಪ್ರದಾಯಿಕ ರೀತಿಯಲ್ಲಿ ಕಾಯಿಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಲ್ಲಿದೆ. ಕಾಯಿಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ತೆಂಗಿನ ಕಾಯಿ ತುರಿ 2 ಕಪ್ ಬೆಲ್ಲ 1/2 ಕೆಜಿ ಅಕ್ಕಿ 1/4 ಕಪ್ ದ್ರಾಕ್ಷಿ 1/4 ಕಪ್ ಗೋಡಂಬಿ 1/4 ಕಪ್ ಬಾದಾಮಿ 1/4 ಕಪ್ ಗಸಗಸೆ 4 ಚಮಚ ಏಲಕ್ಕಿ ಪುಡಿ. 1 ಚಮಚ ಕಾಯಿ ಹಾಲು ಮಾಡುವ ವಿಧಾನ • ಮೊದಲು ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಬೇಕು • ಅಕ್ಕಿ ಮತ್ತು ಗಸಗಸೆಯನ್ನು… Read More ಕಾಯಿಹಾಲು

ಕಲ್ಲಿನ ಮರಗಿ

ಮನುಷ್ಯ ಸಂಘಜೀವಿ. ಹಾಗಾಗಿ ತನ್ನೊಂದಿಗೆ ಜೀವಿಸಲು ಸಂಗಾತಿಯನ್ನು ಹುಡುಕಿಕೊಂಡ ನಂತರ ಹೊಟ್ಟೆ ಪಾಡಿಗೆ ಗೆಡ್ಡೆ ಗೆಣಸುಗಳನ್ನು ಮತ್ತು ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವಿಸತೊಡಗಿದ. ಯಾವಾಗ ಕಲ್ಲಿಗೆ ಕಲ್ಲನ್ನು ಉಜ್ಜಿ ಘರ್ಷಣೆಯಿಂದ ಬೆಂಕಿ ಹೊತ್ತಿಸುವುದನ್ನು ಕಲಿತುಕೊಂಡನೋ ಅಂದಿನಿಂದ ತನ್ನ ಗೆಡ್ಡೆ ಗೆಣಸು ಗಳನ್ನು ಮತ್ತು ಮಾಂಸಗಳನ್ನು ಸುಟ್ಟು ತಿನ್ನುವುದನ್ನು ಕಲಿತ. ತನ್ನ ಆತ್ಮರಕ್ಷಣೆಗಾಗಿ ಮತ್ತು ತಮ್ಮ ಆಹಾರದ ಬೇಟೆಗಾಗಿ ಕಲ್ಲಿನ ಆಯುಧಗಳನ್ನು ತಯಾರಿಸಿಕೊಳ್ಳುವುದನ್ನು ಕಲಿತುಕೊಂಡ. ಆಹಾರವನ್ನು ಅರೆಯಲು, ಕುಟ್ಟಲು, ಪುಡಿ ಮಾಡಲು ರುಬ್ಬುವ ಗುಂಡು, ಒರಳು ಮತ್ತು ಬೀಸೋಕಲ್ಲುಗಳನ್ನು… Read More ಕಲ್ಲಿನ ಮರಗಿ

EatOut

ಧಾರವಾಡದ ಸಾಧನ ಕೇರಿಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದಲ್ಲಾ ಒಂದು ಸಾಹಿತಿಗಳ ಮನೆಯ ಮೇಲೆ ಬೀಳುವಂತೆ  ಬೆಂಗಳೂರಿನ ವಿದ್ಯಾರಣ್ಯಪುರದ ಯಾವುದೇ ಭಾಗದಲ್ಲಿ ನಿಂತು ಕಲ್ಲೆಸೆದರೆ ಅದು ಬೀಳುವುದು ಒಂದೋ ಯಾವುದಾದರೂ ಐಟಿ ಬಿಟಿ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಯ ಮನೆಗೋ ಇಲ್ಲವೇ ಯಾವುದಾದರೂ ಉಪಹಾರ ಗೃಹಗಳಿಗೋ  ಎಂದರೆ ಅತಿಶಯೋಕ್ತಿಯೇನಲ್ಲ. ಮಧ್ಯಮ ವರ್ಗದವರು ಇಲ್ಲವೇ ತುಸು ಹೆಚ್ಚಿನ ಮಧ್ಯಮವವರ್ಗದವರೇ ಹೆಚ್ಚಾಗಿಯೇ ನೆಲಸಿರುವ ವಿದ್ಯಾರಣ್ಯಪುರ, ಪ್ರಖ್ಯಾತವಾಗಿರುವುದು  ಇಲ್ಲಿರುವ ಜಗತ್ಪ್ರಸಿದ್ಧ ದೇವಾಲಯಗಳಿಗೆ ಮತ್ತು  ಕೈಗೆಟುಕುವ ಬೆಲೆಯಲ್ಲಿ ರುಚಿ ರುಚಿಯಾಗಿ ಸಿಗುವ ಬಗೆ ಬಗೆ… Read More EatOut