ಕಡಲೇಕಾಯಿ ಬಾತ್

ಮನೆಯಲ್ಲಿ ಅದೇ ಚಿತ್ರಾನ್ನ, ಮೊಸರನ್ನ, ಪಲಾವ್, ಮೆಂತ್ಯಾಬಾತ್, ಫ್ರೈಡ್ ರೈಸ್ ಜೀರಾರೈಸ್ ಇಲ್ಲವೇ ಘೀರೈಸ್ ಮುಂತಾದ ಅನ್ನದ ತಿಂಡಿಗಳನ್ನು ತಿಂದು ಬೇಸರವಾಗಿದ್ದಾಗ, ಬದಲಾವಣೆಯಾಗಿ ನಾವು ತಿಳಿಸಿಕೊಡುವ ಅತ್ಯಂತ ಸರಳವಾದ ಕಡಲೇಕಾಯಿ ಬಾತ್ ಮಾಡಿಕೊಡಿ. ಖಂಡಿತವಾಗಿಯೂ ನಿಮ್ಮ ಕುಟುಂಬದವರೆಲ್ಲರೂ ಇಷ್ಟ ಪಟ್ಟು ಮತ್ತಷ್ಟು ಮತ್ತು ಮಗದಷ್ಟು ತಿನ್ನದೇ ಇದ್ದರೆ ನೋಡಿ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಡಲೇಕಾಯಿ ಬಾತ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ – 2 ಬಟ್ಟಲು ಎಳ್ಳು – 1 ಚಮಚ (ಬಿಳಿ ಅಥವಾ… Read More ಕಡಲೇಕಾಯಿ ಬಾತ್

ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ಕರ್ನಾಟಕಾದ್ಯಂತ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಬಿಳಿ ಹೋಳಿಗೆ ಮತ್ತು ಇಂದಿನ ಕಾಲಕ್ಕೆ ಅನುಗುಣವಾಗಿ ಮಾವಿನ ಹಣ್ಣಿನ ಗೊಜ್ಜನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಬಿಳೀ ಹೋಳಿಗೆಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಅಕ್ಕಿ ಹಿಟ್ಟು – 2 ಬಟ್ಟಲು • ಮೈದಾ ಹಿಟ್ಟು – 1 ಬಟ್ಟಲು • ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ – 1 ಚಮಚ •… Read More ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ತಿರುನಲ್ವೇಲಿ ಹಲ್ವಾ ಹರಿಸಿಂಗ್

ಐತಿಹಾಸಿಕವಾಗಿ ತಮಿಳುನಾಡಿನ ತಿರುನೆಲ್ವೇಲಿ ಒಂದು ಪ್ರಾಚೀನ ನಗರ. ಸುಮಾರು 2000 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ ಇತಿಹಾಸ ಈ ನಗರಕ್ಕಿದೆ. ತಾಮಿರಭರಣಿ ನದಿಯ ತಟದಲ್ಲಿರುವ ಈ ಪಟ್ಟಣ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚ್ಚಿ ಮತ್ತು ಸೇಲಂ ಹೊರತು ಪಡಿಸಿದರೆ ತಮಿಳು ನಾಡಿನ ಆರನೇ ಅತಿದೊಡ್ಡ ಪುರಸಭೆ ಹೊಂದಿರುವ ನಗರವಾಗಿದೆ. ಇದನ್ನು ಆರಂಭಿಕ ಕಾಲದಲ್ಲಿ ಪಾಂಡ್ಯರು, ಆನಂತರ ಚೋಳರು ಪುನಃ ಪಾಂಡ್ಯರ ಆಳ್ವಿಕೆ ಕಂಡು ಕೆಲ ಕಾಲ ನಮ್ಮ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಬ್ರಿಟಿಷರು… Read More ತಿರುನಲ್ವೇಲಿ ಹಲ್ವಾ ಹರಿಸಿಂಗ್

ಹೇರಳೇಕಾಯಿ ಗೊಜ್ಜು

ಜನರ ಆಡುಭಾಷೆಯಲ್ಲಿ ಎಳ್ಳಿಕಾಯಿ, ದೊಡ್ಲೀಕಾಯಿ ಎಂದು ಕರೆಸಿಕೊಳ್ಳುವ ಹೇರಳೇಕಾಯಿ ಆಯುರ್ವೇದದಲ್ಲಿ ಹಲವು ಕಾಯಿಲೆಗಳಿಗೆ ದಿವ್ಯೌಷಧಿಯಾಗಿದೆ. ವಿಟಮಿನ್ ಸಿ ಆಗರವಾಗಿರುವ ಹೇರಳೇಕಾಯಿಯ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ರಕ್ತ ಪರಿಶುದ್ಧಗೊಳ್ಳುವುದಲ್ಲದೆ ಲಿವರ್ನ ಆರೋಗ್ಯವನ್ನೂ ಕಾಪಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹಾನಿಕಾರಕ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೇರಳೇಕಾಯಿಯನ್ನು ನಮ್ಮ ಆಹಾರ ಪದ್ದತ್ತಿಯಲ್ಲಿ ಚಿತ್ರಾನ್ನ, ಉಪ್ಪಿನಕಾಯಿ, ಗೊಜ್ಜು ಹೀಗೇ ನಾನಾರೂಪದಲ್ಲಿ ಬಳೆಸುತ್ತೇವೆ. ಇಂದು ನಮ್ಮ ನಳಪಾಕ ಮಾಲಿಕೆಯಲ್ಲಿ ಹೇರಳೇಕಾಯಿ… Read More ಹೇರಳೇಕಾಯಿ ಗೊಜ್ಜು

ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಕಡ್ಲೇಕಾಯ್..ಕಡ್ಲೇಕಾಯ್.. ತಾಜಾ ತಾಜಾ ಕಡ್ಲೇಕಾಯ್.. ಗರ್ಮಾ ಗರಂ ಕಡ್ಲೇಕಾಯ್ ಬಡವರ ಬಾದಾಮಿ ಕಡ್ಲೇಕಾಯ್ ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಕಡಲೇಕಾಯಿ ಆರೋಗ್ಯದಾಯಕವೂ ಮತ್ತು ಪೌಷ್ಟಿದಾಯಕವೂ ಹೌದು. ಹಾಗಾಗಿ ವಿವಿಧ ಖಾಧ್ಯಗಳ ರೂಪಗಳಲ್ಲಿ ಕಡಲೇಕಾಯಿಯನ್ನು ಸೇವಿಸುತ್ತೇವೆ. ನಾವು ಇಂದು ಮನೆಯಲ್ಲಿಯೇ ಸುಲಭವಾಗಿ ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ) ತಯಾರಿಸಿಕೊಳ್ಳುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಾಂಗ್ರೆಸ್ ಕಡಲೇ ಬೀಜ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ –… Read More ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಉದ್ದಿನ ಕಡುಬು ಮತ್ತು ಶುಂಠಿ ಚೆಟ್ನಿ

ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಉದ್ದಿನ ಕಡುಬು ಮತ್ತು ರುಚಿಕರ ಹಾಗೂ ಜೀರ್ಣಕಾರಿ ಶುಂಠಿ ಚೆಟ್ನಿಯನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 25-30 ಉದ್ದಿನ ಕಡುಬುಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಉದ್ದಿನ ಬೇಳೆ – 1 ಪಾವು • ಇಡ್ಲಿ ತರಿ – 2 ಪಾವು • ಕಡಲೇಬೇಳೆ – 1/2 ಬಟ್ಟಲು •… Read More ಉದ್ದಿನ ಕಡುಬು ಮತ್ತು ಶುಂಠಿ ಚೆಟ್ನಿ

ಕಡಲೇಕಾಯಿ ಮಿಠಾಯಿ (ಚಿಕ್ಕಿ)

ಮನೆಯಲ್ಲಿ ಮಕ್ಕಳು ತಿನ್ನಲು ಏನಾದರೂ ಆರೋಗ್ಯಕರವಾದ ಕುರುಕಲು ತಿಂಡಿ ಬಯಸಿದಲ್ಲಿ, ದಿಢೀರ್ ಆಗಿ ಕೇವಲ ಬೆಲ್ಲ, ಕಡಲೇಕಾಯಿ ಮತ್ತು ತುಪ್ಪ ಉಪಯೋಗಿಸಿ ಆರೋಗ್ಯಕರವಾದ ಮತ್ತು ಪೌಷ್ಟಿಕರವಾದ ಕಡಲೆಕಾಯಿ ಮಿಠಾಯಿ (ಚಿಕ್ಕಿ)ಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 15-20 ಕಡಲೇಕಾಯಿ ಮಿಠಾಯಿಯನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇಕಾಯಿ ಬೀಜ – 1 ಬಟ್ಟಲು ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು ಗೊಡಂಬಿ – 10-15 ಬಾದಾಮಿ – 10-15 ಏಲಕ್ಕಿ… Read More ಕಡಲೇಕಾಯಿ ಮಿಠಾಯಿ (ಚಿಕ್ಕಿ)

ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯ

ಉತ್ತರ ಕರ್ನಾಟಕದ ಅತ್ಯಂತ ಸಾಂಪ್ರದಾಯಕವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯವನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಬಟ್ಟಲು ಕಡುಬುಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಜೋಳದ ಹಿಟ್ಟು – 1 ಬಟ್ಟಲು • ಜೀರಿಗೆ – 1/2 ಚಮಚ • ಚಿಟುಕೆ ಇಂಗು • ರುಚಿಗೆ ತಕ್ಕಷ್ಟು ಉಪ್ಪು ಬಟ್ಟಲು ಕಡುಬುಗಳನ್ನು ತಯಾರಿಸುವ ವಿಧಾನ : ಒಂದು ಪಾತ್ರೆಯಲ್ಲಿ… Read More ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯ

ಸನಾತನ ಆಹಾರ ಪದ್ದತಿ

ಇತ್ತೀಚಿನ ದಿನಗಳಲ್ಲಿ ಪ್ರಪಂಚಾದ್ಯಂತ ಎಲ್ಲಡೆಯೂ, ಎಲ್ಲರಲ್ಲಿಯೂ ಗಂಡಸಲ್ಲಾಗಲೀ, ಹೆಂಗಸರಲ್ಲಾಗಲೀ ಕಾಣಬಹುದಾದ ಮತ್ತು ಕಾಡಬಹುದಾದ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಥೂಲಕಾಯ(obesity) ಎಂದರೆ ತಪ್ಪಾಗಲಾದರು. ಈ ಸ್ಥೂಲಕಾಯಕ್ಕೆ ಮುಖ್ಯವಾದ ಕಾರಣವೇ ನಮ್ಮ ಆಹಾರ ಪದ್ದತಿ ಎಂದರೆ ನಿಜಕ್ಕೂ ಆಶ್ಚರ್ಯವಾಗಬಹುದು. ನಮಗೆ ತಿಳಿದಂತೆ ನಮ್ಮ ಅಜ್ಜ, ಅಜ್ಜಿಯರು ಶತಾಯುಷಿಗಳಾಗಿದ್ದರು ಇಲ್ಲವೇ ಕನಿಷ್ಟ ಪಕ್ಷ ಎಂಬತ್ತಕ್ಕೂ ಹೆಚ್ಚಿನ ವಯಸ್ಸಿನವರೆಗೂ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ತುಂಬು ಜೀವನ ನಡೆಸಿದ್ದರು. ಇನ್ನು ನಮ್ಮ ಪುರಾಣ ಶಾಸ್ತ್ರಗಳಲ್ಲಿ ಓದಿ ತಿಳಿದಿರುವ ಪ್ರಕಾರ ನಮ್ಮ ಋಷಿಮುನಿಗಳು ಸಾವಿರಾರು… Read More ಸನಾತನ ಆಹಾರ ಪದ್ದತಿ