ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ

ಅದು 1973-74ನೇ ಇಸ್ವಿಯಿರಬಹುದು. ವಾಟಾಳ್ ನಾಗರಾಜರ ಕನ್ನಡ ಹೋರಾಟದ ಉಚ್ಛ್ರಾಯ ಸ್ಥಿತಿ. ರಾಜಾಜೀನಗರದ ಬಳಿ ಅವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮಾ.ಹಿರಣ್ಣಯ್ಯನವರ ನಾಟಕ ಪ್ರದರ್ಶನಕ್ಕೆ ಕರೆದುಕೊಂಡು ಹೋದ ನಮ್ಮ ತಂದೆಯವರು ಮೊತ್ತ ಮೊದಲಬಾರಿಗೆ ನನಗೆ ಶ್ರೀ ಮಾ.ಹಿರಣ್ಣಯ್ಯನವರ ಪರಿಚಯ ಮಾಡಿಸಿಕೊಟ್ಟರು. ಆನಂತರ ಪ್ರತೀ ವರ್ಷವೂ ನಮ್ಮ ಬಿಇಎಲ್ ಲಲಿತಕಲಾ ಅಕಾಡೆಮಿಯವರು ನಡೆಸುತ್ತಿದ್ದ ಬೇಸಿಗೆ ಮೇಳದಲ್ಲಿ ಹಿರಣ್ಣಯ್ಯನವರ ಒಂದಲ್ಲಾ ಒಂದು ನಾಟಕದ ಪ್ರದರ್ಶನ ಕಡ್ಡಾಯವಾಗಿದ್ದು, ಅವರ ನಾಟಕಗಳನ್ನು ನೋಡಿ ಬೆಳೆದೆ ಎಂದರೆ ತಪ್ಪಾಗಲಾರದು. ಇನ್ನು ಎಂಬತ್ತರ ದಶಕದಲ್ಲಿ ಟೇಪ್… Read More ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ

ವೀರ ಸಾವರ್ಕರ್

ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ. ಕ್ರಾಂತಿಕಾರಿಗಳಿಗೆ ಸ್ಪೂರ್ತಿ. ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ.… Read More ವೀರ ಸಾವರ್ಕರ್

ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಯೋಗಾನರಸಿಂಹ ಸ್ವಾಮಿ ಜಗದ್ವಿಖ್ಯಾತವಾದ ದೇವಾಲಯಗಳು. ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುನುಜಾಚಾರ್ಯರ ಆರಾಧ್ಯ ದೈವವೂ ಹೌದು. ಪ್ರತಿನಿತ್ಯ ನೂರಾರೂ ಮತ್ತು ವಾರಾಂತ್ಯದಲ್ಲಿ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈರಮುಡಿ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರುವ ಸ್ಥಳವಾಗಿದೆ. ಕಡಿದಾದ ಬೆಟ್ಟದ ತುದಿಯಲ್ಲಿ ಕಟ್ಟಿರುವ ದೇವಾಲಯ ನಿಜಕ್ಕೂ ಅಂದಿನ ದಿನದ ವಾಸ್ತುಪಂಡಿತರ ಮತ್ತು ಕುಶಲ ಕರ್ಮಿಗಳ ಅಧ್ಭುತ ಪರಿಣಿತಿಯ ದ್ಯೋತಕವಾಗಿದೆ. ಸುಮಾರು 300 ರಷ್ಟು ಕಡಿದಾದ ಎತ್ತರದ ಮೆಟ್ಟುಲುಗಳ… Read More ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಸಿದ್ದಗಂಗಾ ಶ್ರೀಗಳು

ಒಂದೂರಲ್ಲೊಬ್ಬ ನಾಸ್ತಿಕನಿದ್ದ. ಅವನು ದೇವರನ್ನೂ ನಂಬುತ್ತಿರಲಿಲ್ಲ ಹಾಗೆಯೇ ಜ್ಯೋತಿಷಿಗಳನ್ನೂ ನಂಬುತ್ತಿರಲಿಲ್ಲ. ಹೇಗಾದರೂ ಮಾಡಿ ಜ್ಯೋತಿಷಿಗಳ ಬಂಡವಾಳವನ್ನು ಬಯಲು ಮಾಡಬೇಕೆಂದು ಹವಣಿಸುತ್ತಿದ್ದ. ಒಂದು ದಿನ ಅವನ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಗೆ ಬಂದಿದ್ದ ಪ್ರಖ್ಯಾತ ಜ್ಯೋತಿಷಿಗಳನ್ನು ಇವನಿಗೆ ಪರಿಚಯಿಸಲಾಯಿತು. ಇಂತಹದ್ದೇ ಸುಸಂಧರ್ಭವನ್ನು ಎದುರು ನೋಡುತ್ತಿದ್ದ ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೇ ಬಿದ್ದಹಾಗಾಯಿತು.  ಹಾಗೆಯೇ ಜ್ಯೋತಿಷಿಗಳನ್ನು ಮಾತಿಗೆಳೆದು ನನ್ನಲ್ಲಿ ಒಂದು ಸಮಸ್ಯೆಯಿದೆ ಅದನ್ನು ಸ್ವಲ್ಪ ಬಗಹರಿಸುವಿರಾ ಎಂದು ಕೇಳಿದ. ಅವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದ ಜ್ಯೋತಿಷಿಗಳು ಮುಗುಳ್ನಗೆಯಿಂದ… Read More ಸಿದ್ದಗಂಗಾ ಶ್ರೀಗಳು

ಜಾರ್ಜ್ ಫರ್ನಾಂಡೀಸ್

ಕಾರ್ಮಿಕ ನಾಯಕ, ಜನ ಪರ ಹೋರಾಟಗಾರ,  ಪ್ರಭುಧ್ಧ ವಾಗ್ಮಿ, ಅಪ್ಪಟ ದೇಶ ಪ್ರೇಮಿ, ಸರಳ ವ್ಯಕ್ತಿತ್ವ,  ನಡೆ ಮತ್ತು ನುಡಿಗಳಲ್ಲಿಯೂ ಅಕ್ಷರಶಃ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಧೀಮಂತ ನಾಯಕ, ಮಾಜೀ ರಕ್ಷ್ಣಣಾ ಮಂತ್ರಿ ಶ್ರೀ ಜಾರ್ಜ್ ಫರ್ನಾಂಡೀಸ್ ಅವರು ಇಂದು ಮುಂಜಾನೆ  ವಯೋಸಹಜ ಮತ್ತು  ದೀರ್ಘಕಾಲೀನ ಅನಾರೋಗ್ಯದ ಪರಿಣಾಮವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕರ.   ಇಂದಿನ ಅಧಿಕಾರಶಾಹಿ ರಾಜಕಾರಣಿಗಳ ಮಧ್ಯೆಯೂ ಅಪರೂಪವಾಗಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ. 1930 ಜೂನ್ 3 ರಂದು … Read More ಜಾರ್ಜ್ ಫರ್ನಾಂಡೀಸ್