# 10, ಜನಪಥ್ ಬಂಗಲೆ

ಈ ಬಂಗಲೆಯ ವಿಳಾಸ ಓದಿದ ಕೂಡಲೇ ಬಹುತೇಕ ಭಾರತೀಯರಿಗೆ ಗೊತ್ತಿರುವ ಸಂಗತಿಯೇನೆಂದರೆ, ಆ ಬಂಗಲೆಯಲ್ಲಿ ಸದ್ಯಕ್ಕೆ ವಾಸಿಸುತ್ತಿರುವವರು, ಅರ್ಹತೆ ಇಲ್ಲದಿದ್ದರೂ, ನಮ್ಮ ಸರ್ಕಾರದಲ್ಲಿ ಯಾವುದೇ ಉನ್ನತ ಹುದ್ದೆ ಹೊಂದಿರದಿದ್ದರೂ, ನಮ್ಮ ದೇಶದ ಅನೇಕ ಆಗುಹೋಗುಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣೀಭೂತರಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಹೌದು ನಿಮ್ಮ ಉಹೆ ಸರಿ. ನಾನೀಗ ಹೇಳ ಹೊರಟಿರುವುದು ನಮ್ಮ ಸರ್ಕಾರದ ಭಾಗವಾಗಿರದ ಕೇವಲ ಸಾಂಸದೆಯಾಗಿರುವ ಸೋನಿಯಾ ಗಾಂಧಿ ಅವರು ಹೇಗೆ ಈ ಬಂಗಲೆಯಲ್ಲಿ ಇನ್ನೂ ವಾಸಿಸುತ್ತಿದ್ದಾರೆ? ಇನ್ನೂ ಆ… Read More # 10, ಜನಪಥ್ ಬಂಗಲೆ

ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ಕರ್ನಾಟಕಾದ್ಯಂತ ಅತ್ಯಂತ ರುಚಿಕರವಾದ ಆರೋಗ್ಯಕರವಾದ ಮತ್ತು ಸಾಂಪ್ರದಾಯಕವಾಗಿ ತಯಾರಿಸುವ ಬಿಳಿ ಹೋಳಿಗೆ ಮತ್ತು ಇಂದಿನ ಕಾಲಕ್ಕೆ ಅನುಗುಣವಾಗಿ ಮಾವಿನ ಹಣ್ಣಿನ ಗೊಜ್ಜನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಬಿಳೀ ಹೋಳಿಗೆಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಅಕ್ಕಿ ಹಿಟ್ಟು – 2 ಬಟ್ಟಲು • ಮೈದಾ ಹಿಟ್ಟು – 1 ಬಟ್ಟಲು • ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ – 1 ಚಮಚ •… Read More ಬಿಳೀ ಹೋಳಿಗೆ ಮತ್ತು ಮಾವಿನ ಹಣ್ಣಿನ ಗೊಜ್ಜು

ತಿರುನಲ್ವೇಲಿ ಹಲ್ವಾ ಹರಿಸಿಂಗ್

ಐತಿಹಾಸಿಕವಾಗಿ ತಮಿಳುನಾಡಿನ ತಿರುನೆಲ್ವೇಲಿ ಒಂದು ಪ್ರಾಚೀನ ನಗರ. ಸುಮಾರು 2000 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ ಇತಿಹಾಸ ಈ ನಗರಕ್ಕಿದೆ. ತಾಮಿರಭರಣಿ ನದಿಯ ತಟದಲ್ಲಿರುವ ಈ ಪಟ್ಟಣ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚ್ಚಿ ಮತ್ತು ಸೇಲಂ ಹೊರತು ಪಡಿಸಿದರೆ ತಮಿಳು ನಾಡಿನ ಆರನೇ ಅತಿದೊಡ್ಡ ಪುರಸಭೆ ಹೊಂದಿರುವ ನಗರವಾಗಿದೆ. ಇದನ್ನು ಆರಂಭಿಕ ಕಾಲದಲ್ಲಿ ಪಾಂಡ್ಯರು, ಆನಂತರ ಚೋಳರು ಪುನಃ ಪಾಂಡ್ಯರ ಆಳ್ವಿಕೆ ಕಂಡು ಕೆಲ ಕಾಲ ನಮ್ಮ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಬ್ರಿಟಿಷರು… Read More ತಿರುನಲ್ವೇಲಿ ಹಲ್ವಾ ಹರಿಸಿಂಗ್

ನಾಟಿ ವೈದ್ಯ ಶ್ರೀ ನಾರಾಯಣಮೂರ್ತಿ

ಕಹಿಕಷಾಯವದೆಂದು, ಕಾರಚೂರ್ಣಮಾದೆಂದು| ಸಿಹಿಯ ಲೇಹ್ಯಮದೆಂದು ನಿನಗೆ ಹಿತವಹುದೋ|| ವಿಹಿತ ಗೈವನು ವೈದ್ಯ ನೀನಲ್ಲ, ರೋಗಿ ನೀಂ| ಗ್ರಹಿಸು ವಿಧಿಯೌಷದವ – ಮರುಳ ಮುನಿಯ|| ಎಂದು ಡಿ.ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗ ಭಾಗ-೨ ಅಥವಾ ಮಂಕುತಿಮ್ಮನ ತಮ್ಮ ಎಂದು ಕರೆದ ಗ್ರಂಥದಲ್ಲಿ ಬರೆದಿದ್ದಾರೆ. ಈ ಸಮಯದಲ್ಲಿ ವೈದ್ಯರಿಗೆ ಸಂಬಂಧಿಸಿದ ಪದ್ಯವನ್ನೇಕೆ ಹೇಳುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಾ? ಹೌದು ಕಾರಣವಿದೆ. ಖ್ಯಾತ ಆಯುರ್ವೇದ ಪಂಡಿತ ಕ್ಯಾನ್ಸರ್ ಅಂತಹ ಮಾರಣಾಂತಿಕ ರೋಗಕ್ಕೆ ರಾಮಬಾಣದಂತಹ ಔಷದವನ್ನು ನೀಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ… Read More ನಾಟಿ ವೈದ್ಯ ಶ್ರೀ ನಾರಾಯಣಮೂರ್ತಿ

ಹೇರಳೇಕಾಯಿ ಗೊಜ್ಜು

ಜನರ ಆಡುಭಾಷೆಯಲ್ಲಿ ಎಳ್ಳಿಕಾಯಿ, ದೊಡ್ಲೀಕಾಯಿ ಎಂದು ಕರೆಸಿಕೊಳ್ಳುವ ಹೇರಳೇಕಾಯಿ ಆಯುರ್ವೇದದಲ್ಲಿ ಹಲವು ಕಾಯಿಲೆಗಳಿಗೆ ದಿವ್ಯೌಷಧಿಯಾಗಿದೆ. ವಿಟಮಿನ್ ಸಿ ಆಗರವಾಗಿರುವ ಹೇರಳೇಕಾಯಿಯ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ರಕ್ತ ಪರಿಶುದ್ಧಗೊಳ್ಳುವುದಲ್ಲದೆ ಲಿವರ್ನ ಆರೋಗ್ಯವನ್ನೂ ಕಾಪಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಹಾನಿಕಾರಕ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೇರಳೇಕಾಯಿಯನ್ನು ನಮ್ಮ ಆಹಾರ ಪದ್ದತ್ತಿಯಲ್ಲಿ ಚಿತ್ರಾನ್ನ, ಉಪ್ಪಿನಕಾಯಿ, ಗೊಜ್ಜು ಹೀಗೇ ನಾನಾರೂಪದಲ್ಲಿ ಬಳೆಸುತ್ತೇವೆ. ಇಂದು ನಮ್ಮ ನಳಪಾಕ ಮಾಲಿಕೆಯಲ್ಲಿ ಹೇರಳೇಕಾಯಿ… Read More ಹೇರಳೇಕಾಯಿ ಗೊಜ್ಜು

ಬೇಲಿಯೇ ಎದ್ದು ಹೊಲವನ್ನು ಮೇಯ್ದರೇ ಕಾಯುವವರು ಯಾರು?

ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಗೊಳಿಸಿದ ಕೂಡಲೇ ಕೂರೋನ ಮಹಾಮಾರಿ ತಾಂಡವವಾಡುತ್ತಾ ಹತ್ತಾರು ಜನರನ್ನು ಬಲಿತೆಗೆದುಕೊಂಡದ್ದನ್ನು ನೋಡುತ್ತಲೇ ಭಯಭೀತರಾಗಿರುವ ರಾಜ್ಯದ ಜನತೆಗೆ ಸದ್ದಿಲ್ಲದೇ, ನೆನ್ನೆ ಸಂಜೆ ಬಹುಕೋಟಿ ಹಗರಣವಾದ ಐಎಂಎ ಪ್ರಕರಣದಲ್ಲಿ ಆರೋಪಿಯಾಗಿ, ಜೈಲು ಶಿಕ್ಷೆ ಅನುಭವಿಸಿದ್ದ ಹಿರಿಯ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಲೇ ಒಂದು ರೀತಿಯ ದುಃಖ, ಸಂತಾಪ ಸೂಚಿಸುತ್ತಿದ್ದರೆ,ಮತ್ತೆ ಹಲವರು ಆಕ್ರೋಶದ ನಿಟ್ಟಿಸಿರು ಬಿಡುತ್ತಿದ್ದಾರೆ. 1992ರ ಬ್ಯಾಚ್‌ ಕೆಎಎಸ್‌ ಅಧಿಕಾರಿಯಾಗಿ ಸರ್ಕಾರಿ ಸೇವೆ… Read More ಬೇಲಿಯೇ ಎದ್ದು ಹೊಲವನ್ನು ಮೇಯ್ದರೇ ಕಾಯುವವರು ಯಾರು?

ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು

ಮೊನ್ನೆ ಸುವರ್ಣ ನ್ಯೂಸ್ ಚಾನೆಲ್ಲಿನ ಅಜಿತ್ ಹನುಮಕ್ಕನವರ್ ಅವರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಎಲ್ಲರೂ ಕರೆ ನೀಡುತ್ತಿದ್ದಾರಲ್ಲಾ ಅದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಸೋಕಾಲ್ಡ್ ಬುದ್ಧಿವಂತ(??) ನಟ ಎಂದು ಕೊಂಡಿರುವ ಉಪೇಂದ್ರ ಅವರನ್ನು ಕೇಳಿದಾಗ, ಯಥಾ ಪ್ರಕಾರ ತಮ್ಮ ಸಿನಿಮಾಗಳ ಸಂಭಾಷಣೆಯಂತೆ ಇದೆಲ್ಲಾ ಯಾರೋ ದಡ್ಡರು ಆಡುವ ಮಾತು ನಾವುಗಳು ಚೀನೀ ವಸ್ತುಗಳನ್ನು ಹಾಗೆಲ್ಲಾ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಇದೆಲ್ಲಾ ಭ್ರಷ್ಟರಾಜಕಾರಣಿಗಳ ಹುನ್ನಾರ. ಅದಕ್ಕಾಗಿ ನಮ್ಮ ಪ್ರಜಾಕೀಯದ ವ್ಯವಸ್ಥೆ ಬರಬೇಕೆಂದು ಓತಪ್ರೋತಾವಾಗಿ ಕಾರ್ಯಸಾಧುವಾಗದ ಮತ್ತು ಕೇಳಿದ ಪ್ರಶ್ನೆಗೆ… Read More ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು

ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಕಡ್ಲೇಕಾಯ್..ಕಡ್ಲೇಕಾಯ್.. ತಾಜಾ ತಾಜಾ ಕಡ್ಲೇಕಾಯ್.. ಗರ್ಮಾ ಗರಂ ಕಡ್ಲೇಕಾಯ್ ಬಡವರ ಬಾದಾಮಿ ಕಡ್ಲೇಕಾಯ್ ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಕಡಲೇಕಾಯಿ ಆರೋಗ್ಯದಾಯಕವೂ ಮತ್ತು ಪೌಷ್ಟಿದಾಯಕವೂ ಹೌದು. ಹಾಗಾಗಿ ವಿವಿಧ ಖಾಧ್ಯಗಳ ರೂಪಗಳಲ್ಲಿ ಕಡಲೇಕಾಯಿಯನ್ನು ಸೇವಿಸುತ್ತೇವೆ. ನಾವು ಇಂದು ಮನೆಯಲ್ಲಿಯೇ ಸುಲಭವಾಗಿ ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ) ತಯಾರಿಸಿಕೊಳ್ಳುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಕಾಂಗ್ರೆಸ್ ಕಡಲೇ ಬೀಜ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೆಕಾಯಿ ಬೀಜ –… Read More ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಪುನರ್ಜನ್ಮ ನೀಡಿದ ಅಪ್ಪ

ಬಹುಷಃ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ನಿಂಬೇಹುಳಿ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ಚಾಕ್ಲೇಟ್ ಎಂದರೆ ಅದೊಂದೇ. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ನಾವು ಚಿಕ್ಕವರಿದ್ದಾಗ ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನ ರೂಪದಲ್ಲಿ ಸಿಗುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ… Read More ಪುನರ್ಜನ್ಮ ನೀಡಿದ ಅಪ್ಪ