ಎತ್ತುಗಳ ನಿಯತ್ತು

ಕೂರೋನಾ ಲಾಕ್ ಡೌನ್ ಸಮಯದಲ್ಲಿ ತನ್ನೂರಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ ಎಂದು ಅಂಡಲೆಯುತ್ತಿದ್ದ ಸಾಫ್ಟ್‌ವೇರ್ ಇಂಜೀನಿಯರ್ ಒಬ್ಬ, ತನ್ನೂರಿನ ಎಣ್ಣೆ ತೆಗೆಯುವ ಗಾಣದಲ್ಲಿ ಎತ್ತುಗಳು ತಮ್ಮ ಪಾಡಿಗೆ ತಾವು ಸುತ್ತುತ್ತಿದ್ದರೆ, ರೈತನೊಬ್ಬ ಆರಾಮವಾಗಿ ನಿದ್ರಿಸುತ್ತಿದ್ದನ್ನು ನೋಡಿ ಆಶ್ಚರ್ಯ ಚಕಿತನಾದ. ನಿದ್ರಿಸುತ್ತಿದ್ದ ರೈತನನ್ನು ಎಬ್ಬಿಸಿ, ಈ ಎತ್ತುಗಳು ಗಾಣವನ್ನು ಅರೆಯುವುದನ್ನು ನಿಲ್ಲಿಸಿದರೆ ನಿಮಗೆ ಹೇಗೆ ತಿಳಿಯುತ್ತದೇ?ಎಂದು ಕುತೂಹಲದಿಂದ ಕೇಳಿದ. ರೈತ ಕೂಡಾ ಹಾಗೆಯೇ ಕಣ್ತೆರೆಯದೇ, ಸ್ಚಾಮೀ, ಎತ್ತುಗಳು ಸುತ್ತುವುದನ್ನು ನಿಲ್ಲಿಸಿದರೆ ಅವುಗಳ ಕತ್ತಿನಲ್ಲಿರುವ ಗಂಟೆಯ ಶಬ್ಧ ನಿಲ್ಲುತ್ತದೆ ಎಂದ.… Read More ಎತ್ತುಗಳ ನಿಯತ್ತು

ಸನಾತನ ಆಹಾರ ಪದ್ದತಿ

ಇತ್ತೀಚಿನ ದಿನಗಳಲ್ಲಿ ಪ್ರಪಂಚಾದ್ಯಂತ ಎಲ್ಲಡೆಯೂ, ಎಲ್ಲರಲ್ಲಿಯೂ ಗಂಡಸಲ್ಲಾಗಲೀ, ಹೆಂಗಸರಲ್ಲಾಗಲೀ ಕಾಣಬಹುದಾದ ಮತ್ತು ಕಾಡಬಹುದಾದ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಥೂಲಕಾಯ(obesity) ಎಂದರೆ ತಪ್ಪಾಗಲಾದರು. ಈ ಸ್ಥೂಲಕಾಯಕ್ಕೆ ಮುಖ್ಯವಾದ ಕಾರಣವೇ ನಮ್ಮ ಆಹಾರ ಪದ್ದತಿ ಎಂದರೆ ನಿಜಕ್ಕೂ ಆಶ್ಚರ್ಯವಾಗಬಹುದು. ನಮಗೆ ತಿಳಿದಂತೆ ನಮ್ಮ ಅಜ್ಜ, ಅಜ್ಜಿಯರು ಶತಾಯುಷಿಗಳಾಗಿದ್ದರು ಇಲ್ಲವೇ ಕನಿಷ್ಟ ಪಕ್ಷ ಎಂಬತ್ತಕ್ಕೂ ಹೆಚ್ಚಿನ ವಯಸ್ಸಿನವರೆಗೂ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ತುಂಬು ಜೀವನ ನಡೆಸಿದ್ದರು. ಇನ್ನು ನಮ್ಮ ಪುರಾಣ ಶಾಸ್ತ್ರಗಳಲ್ಲಿ ಓದಿ ತಿಳಿದಿರುವ ಪ್ರಕಾರ ನಮ್ಮ ಋಷಿಮುನಿಗಳು ಸಾವಿರಾರು… Read More ಸನಾತನ ಆಹಾರ ಪದ್ದತಿ

ರಾಮ್ ಪ್ರಸಾದ್ ಬಿಸ್ಮಿಲ್

ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ| ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ || ಶಿರವನರ್ಪಿಸುವ ಬಯಕೆ ಎನ್ನ ಮನದೊಳಿಹುದಿಂದು, ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು ಎಂಬ ಅರ್ಥ ಬರುವ ಈ ಕ್ರಾಂತಿಕಾರಿ ಕವಿತೆ ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಕ್ರಾಂತಿಯನ್ನು ಬಡಿದೆಚ್ಚರಿಸಿದ ಸಾಲುಗಳು. ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರುಗಳು ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿದ್ದಾಗ ಬಹಳ ಇಷ್ಟ ಪಟ್ಟು ಹಾಡುತ್ತಿದ್ದದ್ದೇ ಇದೇ ಹಾಡು.… Read More ರಾಮ್ ಪ್ರಸಾದ್ ಬಿಸ್ಮಿಲ್

ನಿಸ್ವಾರ್ಥ ಸೇವೆ

ಮೂಲತಃ ರಾಮನಾಥಪುರಂ ಜಿಲ್ಲೆಯವರಾದ 47 ವರ್ಷದ ಶ್ರೀಯುತ ಮೋಹನ್ ಅವರು ನಾವು ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬೀಡಾದ ಮಧುರೈನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಪ್ರತೀ ದಿನ ಸುಮಾರು 600 ರೂ. ಲಾಭ ಗಳಿಸುತ್ತಿದ್ದಾರೆ ಮತ್ತು ಅದನ್ನು ತಮ್ಮ ಮುದ್ದಿನ ಮಗಳಾದ 13 ವರ್ಷದ ನೇತ್ರಾಳ ವಿದ್ಯಾಭ್ಯಾಸಕ್ಕೆಂದು ಉಳಿಸುತ್ತಿದ್ದಾರೆ. ಕುಮಾರಿ ನೇತ್ರಾಳಿಗೆ ಐಎಎಸ್ ಅಧಿಕಾರಿಯಾಗಬೇಕೆಂದು ಆಸೆ ಅದಕ್ಕಾಗಿ ಆಕೆಯೂ ಸಹಾ ಸಾಕಷ್ಟು ಪರಿಶ್ರಮ ಪಡುತ್ತಿದ್ದಾಳೆ.   ಮಾರ್ಚ್ ತಿಂಗಳಿನಲ್ಲಿ ಕೂರೋನಾ ಮಹಾಮಾರಿಯ ಪ್ರಭಾವದಿಂದಾಗಿ ಪ್ರಪಂಚಾದ್ಯಂತ ಲಾಕ್ ಡೌನ್ ಪ್ರಾರಂಭವಾದಾಗ… Read More ನಿಸ್ವಾರ್ಥ ಸೇವೆ

ದಿಢೀರ್ ಓಟ್ಸ್  ದೋಸೆ

ಇತ್ತೀಚಿನ ದಿನಗಳಲ್ಲಿ  ಆರೋಗ್ಯದ ಕಡೆ ಎಲ್ಲರೂ ಕಾಳಜಿ ವಹಿಸುತ್ತಿರುವ ಕಾರಣ, ತೀರ್ಥ ತೆಗೆದುಕೊಂಡರೆ ಶೀತ  ಮಂಗಳಾರತೀ ತೆಗೆದುಕೊಂಡರೆ ಉಷ್ಣ ಅನ್ನುವ ರೀತಿಯಲ್ಲಿ ಆಡುತ್ತಾರೆ. ಹಾಗಾಗಿ  ಪ್ರತಿಯೊಂದು ಆಹಾರವನ್ನು ಸೇವಿಸುವಾಗಲೂ ಅದರ  ಕ್ಯಾಲೋರಿಗಳನ್ನು ಲಕ್ಕಾಚಾರ ಹಾಕಿ ಗುಣಾಕಾರ ಭಾಗಕಾರ ಹಾಗಿದ ಮೇಲೆನೇ ತಿನ್ನೋದು.   ಹಾಗಾಗಿ  ಕಡಿಮೆ ಕ್ಯಾಲೋರಿ ಇರುವ , ಆರೋಗ್ಯಕರವಾಗಿಯೂ, ರುಚಿಕರವಾಗಿರುವ ಮತ್ತು  ದಿಢೀರ್ ಎಂದು ತಯಾರಿಸಬಹುದಾದ ಓಟ್ಸ್ ದೋಸೆಯನ್ನು ಮಾಡುವ ವಿಧಾನವನ್ನು  ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಸುಮಾರು 4-5  ಜನರಿಗೆ ಆಗುವಷ್ಟು ದಿಢೀರ್… Read More ದಿಢೀರ್ ಓಟ್ಸ್  ದೋಸೆ

ಚಿರಂಜೀವಿ

ಚಿರಂಜೀವಿ ಎಂದರೆ ಸಾವಿಲ್ಲದವ ಎಂದರ್ಥ. ಆದರೆ ಜಾತಸ್ಯ ಮರಣಂ ಧೃವಂ ಎಂದರೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮವೂ ಹೌದು. ಹಾಗಾಗಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಅರಿವಿದ್ದರೂ, ಸಾವನ್ನೇ ಜಯಿಸಿ ಚಿರಂಜೀವಿಯಾಗುವ ಹಪಾಹಪಿಯಲ್ಲಿವವರಿಗೇನೂ ಕಡಿಮೆ ಇಲ್ಲ. ಆದರೆ ನಿಷ್ಕಲ್ಮಮಶವಾಗಿ ತಮ್ಮ ಮಗನಿಗೆ ಆ ಭಗವಂತ ದೀರ್ಘಾಯಸ್ಸು ನೀಡಲಿ ಎಂದು ತುಂಬು ಹೃದಯದಿಂದ ಚಿರಂಜೀವಿ ಎಂದು ಹೆಸರಿಸಿದ ಆ ಪೋಷಕರಿಗೂ ಭಗವಂತ ಈ ರೀತಿಯಾಗಿ ಮೋಸ ಮಾಡುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಹೌದು… Read More ಚಿರಂಜೀವಿ

ರಾಣಿ ಅಬ್ಬಕ್ಕ ಚೌಟ

ಕನ್ನಡನಾಡಿನ ವೀರ ವನಿತೆಯರು ಎಂದಾಕ್ಷಣ ಥಟ್  ಅಂತ ನಮ್ಮ ಮನಸ್ಸಿಗೆ ಬರುವುದೇ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ. ಇವರಷ್ಟೇ ಶಕ್ತಿಶಾಲಿಯಾದ   ಮತ್ತೊಬ್ಬ ವೀರ ಮಹಿಳೆಯ ಹೆಸರೇ ರಾಣಿ ಅಬ್ಬಕ್ಕ ಚೌಟ. ಅನೇಕರಿಗೆ ಆಕೆಯ ಪರಿಚಯವೇ ಇಲ್ಲದೇ ಹೋಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ. ಅಬ್ಬಕ್ಕ ರಾಣಿ, ಅಬ್ಬಕ್ಕ ಮಹಾದೇವಿ ಇಲ್ಲವೇ ರಾಣಿ ಅಬ್ಬಕ್ಕ ಚೌಟ ತುಳುನಾಡಿನ ದೇವಾಲಯಗಳ ನಗರಿ ಎಂದೇ ಖ್ಯಾತವಾಗಿರುವ  ಮೂಡುಬಿದಿರೆಯ ಪ್ರದೇಶ ವನ್ನಾಳಿದ ಜೈನ ಮತದ  ಚೌಟ ವಂಶಕ್ಕೆ ಸೇರಿದವಳು. ಬಂದರು… Read More ರಾಣಿ ಅಬ್ಬಕ್ಕ ಚೌಟ

ಚಿರೋಟಿ

ಕರ್ನಾಟಕದ ಅತ್ಯಂತ ಸಾಂಪ್ರದಾಯಕವಾದ, ರುಚಿಕರವಾದ ಚಿರೋಟಿಯನ್ನು ಮನೆಯಲ್ಲಿಯೇ ಸಾಂಪ್ರದಾಯಕವಾಗಿ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣಾ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಚಿರೋಟಿಗಳನ್ನು ಮಾಡಲು ಬೇಕಾಗುವಂತಹ ಸಾಮಗ್ರಿಗಳು • ಚಿರೋಟಿ ರವೆ – 1 ಬಟ್ಟಲು • ಅಕ್ಕಿ ಹಿಟ್ಟು – 1/2 ಬಟ್ಟಲು • ಸಕ್ಕರೆ ಪುಡಿ – 1 ಬಟ್ಟಲು • ತುಪ್ಪ – 2-3 ಚಮಚ ಚಿರೋಟಿ ಮಾಡುವ ವಿಧಾನ : ಮೊದಲನೇ ಹಂತ ಹಿಟ್ಟನ್ನು ಸಿದ್ದ ಮಾಡಿಕೊಳ್ಳುವ ವಿಧಾನ •… Read More ಚಿರೋಟಿ

ಅನಾನಸ್ ಆಸೆಪಟ್ಟು ಅವಸಾನವಾದ ಆನೆ (ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು)

ಈ ರಾಜ್ಯದ ಜನ ಹೆಮ್ಮೆಯಿಂದ ತಮ್ಮ ತಾಯ್ನಾಡಿನ ಬಗ್ಗೆ ಹೇಳಿಕೊಳ್ಳುವುದು ನಮ್ಮದು ದೇವರ ನಾಡು ಎಂದು ಅದಕ್ಕೂ ಒಂದು ಹೆಜ್ಜೆ ಮುಂದೇ ಹೋಗಿ ನಮ್ಮದು ಅಕ್ಷರಸ್ಥರ ನಾಡು ಎಂದು. ಅಂತಹ ಅಕ್ಷರಸ್ಥ ದೇವರ ನಾಡಿನಲ್ಲಿ ಮನುಷ್ಯನ ದುರಾಸೆಯ ಫಲವಾಗಿ ತುಂಬು ಗರ್ಭಿಣಿ ಆನೆಯೊಂದು ಹತವಾಗಿರುವುದು ನಿಜಕ್ಕೂ ಅಮಾನವೀಯ ಮತ್ತು ಅಕ್ಷಮ್ಯ ಅಪರಾಧವೇ ಸರಿ. ಸಕಲ ಪ್ರಾಣಿ ಸಂಕುಲಗಳು ಕಾಡಿನಲ್ಲಿ ಸ್ವಚ್ಚಂದವಾಗಿ ವಿಹರಿಸಿಕೊಂಡು ತಮ್ಮ ಪಾಡಿಗೆ ತಾವು ಸುಖಃವಾಗಿದ್ದವು. ತನ್ನ ದುರಾಸೆಗಾಗಿ ಮನುಷ್ಯರು ಆ ಕಾಡುಗಳನ್ನು ನಾಶ ಮಾಡಿ… Read More ಅನಾನಸ್ ಆಸೆಪಟ್ಟು ಅವಸಾನವಾದ ಆನೆ (ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು)