ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಎರಡು ಮೂರು ವಾರಗಳ ಹಿಂದೆ ಕೇಳಿದ್ದರೆ, ಕೇಜ್ರಿವಾಲ್ ನಾಯಕತ್ವದ ಎಎಪಿ ಅತ್ಯಂತ ಸುಲಭವಾಗಿ ಮತ್ತೊಮ್ಮೆ ವಿಜಯಶಾಲಿಯಾಗುತ್ತದೆ ಎಂದು ಹೇಳಬಹುತಾಗಿತ್ತು. ಕಳೆದ ಬಾರಿಯಂತೆ ಅಭೂತಪೂರ್ವ ಯಶಸ್ಸಲ್ಲದಿದ್ದರೂ 70ಸೀಟಿನಲ್ಲಿ 45-55 ಮಂದಿ ಶಾಸಕರು ಗೆದ್ದು ಬಹಳ ಸುಲಭವಾಗಿ ಅಧಿಕಾರಕ್ಕೆ ಮತ್ತೊಮ್ಮೆ ಬರುತ್ತಾರೆ ಎಂದು ಹೇಳಬಹುದಾಗಿತ್ತು. ಆದರೆ ಕಳೆದ ಒಂದು ವಾರದಲ್ಲಿ ಈ ಚಿತ್ರ ಸಂಪೂರ್ಣವಾಗಿ ಬದಲಾಗಿ ಹೋಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ 50:50 ಆಗಿದೆ… Read More ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ

ಗಢ ಆಲಾ ಪಣ ಸಿಂಹ ಗೇಲಾ, ಸಿಂಹಗಡ ಕದನ

ಇಂದು ನಮ್ಮ ಭಾರತೀಯ ಸೇನೆ ಆಧುನಿಕ ಶಸ್ತ್ರಾಸ್ತಗಳ ಸಹಾಯದಿಂದ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಆಪರೇಷನ್ ಸಿಂಧೂರ್ ಗಳ ಮೂಲಕ ಶತ್ರುಗಳನ್ನು ಮಟ್ಟ ಹಾಕಬಹುದಾಗಿದೆ ಆದರೆ, ಸುಮಾರು 350 ವರ್ಷಗಳ ಹಿಂದೆ 1670ರ ಫೆಬ್ರವರಿ 4 ರಂದು ಶಿವಾಜಿ ಮಹಾರಾಜರ ಬಲಗೈ ಭಂಟ ತಾನಾಜಿ ಮಾಲುಸಾರೆ ಸಿಂಹಗಡ್ ಕೋಟೆಯನ್ನು ವಶಪಡಿಸಿಕೊಂಡು ಹುತಾತ್ಮನಾದ ದಿನ ಸಕಲ ಭಾರತೀಯರಿಗೂ ಹೆಮ್ಮೆಯ ದಿನವಾಗಿದ್ದು ಆ ವೀರ ಯಶೋಗಾಥೆ ಇದೋ ನಿಮಗಾಗಿ… Read More ಗಢ ಆಲಾ ಪಣ ಸಿಂಹ ಗೇಲಾ, ಸಿಂಹಗಡ ಕದನ

ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ

ಕಳೆದ ನವೆಂಬರ್ ನಲ್ಲಿ ನಮ್ಮ 21ನೇ ವಿವಾಹವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಾಗ ಎಲ್ಲಿಯಾದರೂ ದೂರದ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗೋಣ ಎಂದು ನಿರ್ಧರಿಸಿದಾಗ ಹಲವಾರು ಪ್ರದೇಶಗಳು ನಮ್ಮ ಮನಸ್ಸಿಗೆ ಬಂದು ಅಂತಿಮವಾಗಿ ಥೈಲ್ಯಾಂಡ್ ದೇಶಕ್ಕೆ ಹೋಗುವಂತೆ ನಿರ್ಧರಿಸಲಾಯಿತು. ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಬಗೆಗೆ ಒಂದಿಬ್ಬರು ಸ್ನೇಹಿತರನ್ನು ವಿಚಾರಿಸಿದರೆ, ಅವರಿಂದ ಸಕಾರಾತ್ಮಕ ಸ್ಪಂದನೆಗಿಂತ ಒಂದು ರೀತಿಯ ಕುಹಕಾತ್ಮಕ ಸ್ಪಂದನೆಯೇ ಬಂದಿತು. ಈ ವಯಸ್ಸಿನಲ್ಲಿ, ನೀವೂ ಅದೂ ಸಂಸಾರ ಸಮೇತರಾಗಿ ಥೈಲ್ಯಾಂಡಿಗೆ ಹೋಗುವುದು ಉಚಿತವಲ್ಲ. ಅದರಲ್ಲೂ ಸಸ್ಯಹಾರಿಗಳಿಗೆ ಅಲ್ಲಿ ಊಟೋಪಚಾರಗಳು ಸರಿಹೊಂದುವುದಿಲ್ಲ. ಅಲ್ಲಿಯ… Read More ಥೈಲ್ಯಾಂಡ್ ಪ್ರವಾಸದ ಮಾರ್ಗದರ್ಶಿ/ಕೈಪಿಡಿ

ರಥಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಯಜ್ಞ

ಆರೋಗ್ಯಭಾರತಿ ಯಲಹಂಕ ಭಾಗ ಮತ್ತು ಪಂತಜಲಿ ಯೋಗ ಶಾಖೆ ಸಹಯೋಗದಲ್ಲಿ ರಥಸಪ್ತಮಿಯ ಪ್ರಯುಕ್ತವಾಗಿ 108 ಸೂರ್ಯನಮಸ್ಕಾರಗಳ ಯಜ್ಞವನ್ನು ಪ್ರತ್ಯಕ್ಷ ದೇವರಾದ ಸೂರ್ಯನಾರಾಯಣನಿಗೆ ಸಮರ್ಪಿಸುವ ಕಾರ್ಯಕ್ರಮ ಇಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ನಿಗಧಿತ ಸಮಯಕ್ಕೆ ಸರಿಯಾಗಿ ದೊಡ್ಡಬೊಮ್ಮಸಂದ್ರದ ಕೆರೆಯಂಗಳದಲ್ಲಿರುವ ಕಲ್ಯಾಣಿಯ ಪ್ರಾಂಗಣಕ್ಕೆ ಬಂದಲ್ಲಿ , ಚುಮು ಚುಮ್ ಚಳಿಯ ವಾತಾವರಣ. ಸುತ್ತಮುತ್ತಲೂ ಮುಂಜಾನೆಯ ಮಬ್ಬುಗತ್ತಲು. ಆರಂಭದಲ್ಲಿ ಕೆಲವೇ ಕೆಲವು ಬೆರಳೆಣಿಕೆಯ ಮಂದಿ ಕೈಕಾಲು ಸಡಿಲಗೊಳಿಸುವ ವ್ಯಾಯಾಮಗಳನ್ನು ಮಾಡಿ, ಧನ್ವಂತ್ರಿ ಮುನಿಗಳಿಗೆ ದೀಪವನ್ನು ಬೆಳಗಿ, ಹೂವಿನ ಮಾಲಾರ್ಪಣೆ ಮಾಡಿ, ಸೂರ್ಯದೇವನ… Read More ರಥಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಯಜ್ಞ

ಸೂರ್ಯದೇವರ ಹುಟ್ಟಿದ ಹಬ್ಬ, ರಥಸಪ್ತಮಿ

ಮಾಘ ಶುಕ್ಲ ಸಪ್ತಮಿಯಂದು ದೇಶಾದ್ಯಂತ ಆಚರಿಸುವ ರಥಸಪ್ತಮಿ ಹಬ್ಬದ ಹಿನ್ನಲೆ, ವೈಶಿಷ್ಟ್ಯ ಮತ್ತು ಅಂದು ಎಕ್ಕದ ಎಲೆಯನ್ನು ಮೈಮೇಲೆ ಇಟ್ಟುಕೊಂಡು ಸ್ನಾನ ಮಾಡುವ ಹಿಂದಿರುವ ವೈಜ್ಞಾನಿಕ ಕಾರಣಗಳ ಸವಿವರಗಳು ಇದೋ ನಿಮಗಾಗಿ… Read More ಸೂರ್ಯದೇವರ ಹುಟ್ಟಿದ ಹಬ್ಬ, ರಥಸಪ್ತಮಿ

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -2

ಹಿಂದಿನ ಲೇಖನದಲ್ಲಿ ನಮ್ಮ ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ ಅಲಿಯಾಸ್, ಜಿ.ಕೆ. ಉರ್ಫ್ ಪಿಂಟು ಅಂದ್ರೇ ಯಾರು? ಅವನ ಪೂರ್ವಾಪರ ಏನು ಅಂತಾ ತಿಳಿದುಕೊಂಡಿದ್ವಿ. ಈ ಭಾಗದಲ್ಲಿ ನನಗೇಕೆ ಪಿಂಟೂನ ಬಗ್ಗೆ ಯಾಕೆ ಇಷ್ಟೊಂದು ಕಾಳಜಿ? ಅಂತಾಹದ್ದೇನು ಮಾಡಿದ್ದ ಎಂಬುದನ್ನು ತಿಳಿಯೋಣ. ಈಗಾಗಲೇ ತಿಳಿಸಿದ್ದಂತೆ ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಚಿಕ್ಕವನಾದರೂ ಅವನ ವ್ಯಕ್ತಿತ್ವ ಮತ್ತು ಆಕಾರದಿಂದಾಗಿ ನನಗೆ ಅಣ್ಣನ ಸ್ಥಾನದಲ್ಲಿದ್ದ. ನಾನು ಮೊದಲನೇ ವರ್ಷದ ಡಿಪ್ಲಮೋ ಓದುತ್ತಿರುವಾಗ ನನ್ನ ಸಹೋದರಿಯ ಮದುವೆಯ ಸಂಧರ್ಭದಲ್ಲಿ ನನ್ನ ಉಪನಯನವಾಗಿತ್ತು. ಆಗ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -2

ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯವನ್ನು ಗೆದಿದ್ದು ಸರಣಿ ಗೆಲ್ಲಲು ಎರಡೂ ತಂಡಗಳಿಗೆ ಈ ಪಂದ್ಯ ಬಹಳ ಮುಖ್ಯವಾಗಿರುವ ಪರಿಣಾಮವಾಗಿ ಈ ಪಂದ್ಯ ಬಹಳ ಜಿದ್ದಾ ಜಿದ್ದಿನಿಂದ ರೋಚಕವಾಗಿರುವುದರಲ್ಲಿ ಸಂದೇಹವೇ ಇಲ್ಲ. ಈ ಸಮಯದಲ್ಲಿ, ಇದೇ ಕ್ರೀಡಾಂಗಣದಲ್ಲಿ , ಇದೇ ತಂಡಗಳ ನಡುವೆ 1996ರಲ್ಲಿ ರೋಚಕವಾಗಿ ನಡೆದ ಟೈಟಾನ್ ಕಪ್ ಪಂದ್ಯವಳಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಹೊನಲು ಬೆಳಕಿನ ಆ ಪಂದ್ಯವನ್ನು ಕ್ರೀಡಾಂಗಣದಲ್ಲಿ… Read More ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ

ಮೊನ್ನೆ ತಾನೇ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಭಗವಾನ್ ವಿಷ್ಣುವಿಗೆ ಸಹಸ್ರನಾಮವಿರುವಂತೆ ನಮ್ಮೀ ಲೇಖನದ ನಾಯಕ ಶ್ರೀನಿವಾಸನಿಗೂ ಹಲವಾರು ನಾಮಗಳು. ಮನೆಯಲ್ಲಿ ಪೋಷಕರು ನಾಮಕರಣ ಮಾಡಿದ್ದು ಗಿಣಿಯ ಕೃಷ್ಣಮೂರ್ತಿ ಶ್ರೀನಿವಾಸ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ಮುರಳಿ ಎಂದು. ಇನ್ನು ಬಾಲ್ಯದಿಂದಲೂ ನೋಡಲು ಸ್ವಲ್ಪ ದಷ್ಟ ಪುಷ್ಟವಾಗಿದ್ದ ನಮ್ಮ ಶ್ರೀನಿವಾಸ, ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿನಯದ ನಾಗರಹೊಳೆ ಸಿನಿಮಾದಲ್ಲಿ ಬರುವ ಪಿಂಟೋ (ದಪ್ಪನೆಯ ಹುಡುಗ)ನನ್ನು ಹೋಲುತ್ತಿದ್ದ ಕಾರಣ ನೆರೆಹೊರೆಯವರು ಪ್ರೀತಿಯಿಂದ ಪಿಂಟೂ ಎಂದು ಕರೆಯುತ್ತಿದ್ದರೆ, ಶಾಲಾ ಕಾಲೇಜುಗಳಲ್ಲಿ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ

ಮಕರ ಸಂಕ್ರಾಂತಿ

ನೇಸರನು ತನ್ನ ಪಥವ ಬದಲಿಸಿ, ಮಾಗಿಯ ಚಳಿ ಮಾಯವಾಗಿ, ಜನ ಮಾನಸದಲ್ಲಿ ಹೊಸ ಚೈತನ್ಯ ಮೂಡಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯ ವೈಶಿಷ್ಟ್ಯತೆಗಳೇನು? ಈ ಹಬ್ಬದಲ್ಲಿ ಹುಗ್ಗಿ, ಎಳ್ಳು ಬೆಲ್ಲವನ್ನು ನೈವೇದ್ಯಕ್ಕೆ ಏಕೆ ಇಡುತ್ತಾರೆ? ಈ ಹಬ್ಬವನ್ನು ಎಲ್ಲೆಲ್ಲಿ ಹೇಗೇಗೇ ಆಚರಿಸುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ಮಕರ ಸಂಕ್ರಾಂತಿ