ರಾಷ್ಟ್ರೀಯ ಯುವ‌ದಿನ

ಇಂದು ಜನವರಿ 12ನೇ ತಾರೀಖು ಇಡೀ ವಿಶ್ವದ ಯುವ ಜನತೆಗೆ ಒಂದು ವಿಶೇಷ ದಿನ. ಏಳಿ ಎದ್ದೇಳಿ ಗುರಿ ಮುಟ್ಟದವರೆಗೂ ನಿಲ್ಲದಿರಿ ಎಂದು ವಿಶ್ವದ ಯುವಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಜಯಂತಿ. ಸುಮಾರು160 ವರ್ಷಗಳ ಹಿಂದೆ ಕಲ್ಕತ್ತಾ ನಗರದಲ್ಲಿ ಜನವರಿ 12 1863ರ ಸಂಕ್ರಾಂತಿ ದಿನದಂದು ಶ್ರೀ ವಿಶ್ವನಾಥ ದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳ ಗರ್ಭದಲ್ಲಿ ಜನಿಸಿದ ನರೇಂದ್ರ ಮುಂದೆ ಸ್ವಾಮಿ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯನಾಗಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮಿ ವಿವೇಕಾನಂದರಾದರು.… Read More ರಾಷ್ಟ್ರೀಯ ಯುವ‌ದಿನ

ಯನಮದುರು ಶ್ರೀ ಶಕ್ತೇಶ್ವರ

ಹಿಂದಿನ ಕಾಲದಲ್ಲಿ ಹುಲುಮಾನವರು ಭಗವಂತನನ್ನು ಒಲಿಸಿಕೊಳ್ಳಲು ನಾನಾ ರೀತಿಯಲ್ಲಿ ಪೂಜೆ ಮಾಡುತ್ತಿದ್ದರು. ತಮ್ಮ ಭಕ್ತಿಗೆ ಆ ಭಗವಂತನು ಒಲಿಯದಿದ್ದಲ್ಲಿ ಅನ್ನ ನೀರು ಬಿಟ್ಟು ತಪಸ್ಸನ್ನು ಮಾಡುತ್ತಿದ್ದರು ಹಾಗೊಮ್ಮೆಯೂ ಒಲಿಯದಿದ್ದಲ್ಲಿ, ನಾನಾ ಭಂಗಿಗಳಲ್ಲಿ ನಿಂತು ಕಠೋರ ತಪಸ್ಸಿನ ಮೂಲಕ ಆ ಭಗವಂತನನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ತನ್ನ ತಾಯಿಯ ಬಯಕೆಯಂತೆ ಶಿವನನ್ನು ಒಲಿಸಿಕೊಂಡು ಶಿವನ ಆತ್ಮ ಲಿಂಗವನ್ನು ತರಲು ರಾವಣನಂತೂ ತನ್ನ ಕರುಳು ಬಳ್ಳಿಯನ್ನೇ ಬಗೆದು ಹೊರತೆಗೆದು ರುದ್ರವೀಣೆಯನ್ನಾಗಿಸಿ ಪರಶಿವನನ್ನು ಒಲಿಸಿಕೊಂಡಿದ್ದನಂತೆ. ಆದರಿಲ್ಲಿ ಭಗವಂತನೇ ತಲೆಕೆಳಗಾಗಿ ನಿಂತು ಭಕ್ತರ ಭವರೋಗವನ್ನು… Read More ಯನಮದುರು ಶ್ರೀ ಶಕ್ತೇಶ್ವರ

ಭಾರತೀಯ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಕ್ಷದ ಭವಿಷ್ಯವೇನು?

ಇಂಡಿಯನ್ ಕೌನ್ಸಿಲ್ ಆಫ್ ಜ್ಯೋತಿಷ್ಯ ವಿಜ್ಞಾನದಲ್ಲಿ (1997) ಎಮ್ಎ ಮಾಡಿರುವಂತಹ ವೈದಿಕ ಜ್ಯೋತಿಷ್ಯವನ್ನು ಅಭ್ಯಾಸ ಮಾಡುತ್ತಿರುವ, ಶ್ರೀಯುತರಾದ ರಾಜೀವ್ ಸೇಥಿ ಅವರು ಹೇಳುವ ಪ್ರಕಾರ ಇಂಟರ್ನೆಟ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವು 6/4/1980 ರಂದು ದೆಹಲಿಯಲ್ಲಿ ಬೆಳಿಗ್ಗೆ 11.45 ಕ್ಕೆ ರಚನೆಯಾಯಿತು ಎಂದು ತಿಳಿಯಬರುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ಲೆಕ್ಕ ಹಾಕಿದಲ್ಲಿ, ಬಿಜೆಪಿ 23/02/2019 ರಿಂದ 16/08/2020 ರವರೆಗೆ ಚಂದ್ರ ಮಹಾದಾಶ-ರಾಹು ಭುಕ್ತಿ ನಡೆಸುತ್ತಿದೆ. ಚಂದ್ರ ಮತ್ತು ರಾಹು ಪರಸ್ಪರ ಶತೃಗಳು ಮತ್ತು ಅವರ ದಶಾ-ಅಂತರ್ದಶಾ ಸರಿಯಾಗಿಲ್ಲದ… Read More ಭಾರತೀಯ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಕ್ಷದ ಭವಿಷ್ಯವೇನು?

ಡಿಸೆಂಬರ್ 31 ಆ ಕರಾಳ ರಾತ್ರಿ

ಡಿಸೆಂಬರ್ 31 ಮತ್ತು ಜನವರಿ 1 ಅಂತ ನೆನಪಿಸಿಕೊಂಡರೆ ಬಹುತೇಕರಿಗೆ ರೋಮಾಂಚನವಾಗುತ್ತದೆ. ಅನೇಕರು ಒಂದು ವಾರಕ್ಕಿಂತಲೂ ಮುಂಚೆಯೇ, ಆ ದಿನಗಳು ಮತ್ತು ಆ ದಿನವನ್ನು ಹೇಗೆ ಸಂಭ್ರಮಿಸಬೇಕು ಅಂತ ನಾನಾ ರೀತಿಯ ತಯಾರಿಗಳನ್ನು ಮಾಡಿಕೊಳ್ತಾ ಇದ್ರೇ ನಮಗೆ ಮಾತ್ರ ಆ ಕರಾಳ ನೆನಪನ್ನು ಹೇಗೆ ಮರೆಯುವುದಪ್ಪಾ ಅಂತಾ ಇರ್ತೀವಿ. ಅದೇನಪ್ಪಾ ಅಂತಹ ಕರಾಳ ನೆನಪು ಅಂತೀರಾ? ತಡೀರೀ ನಾನೂ ಹೇಳ್ತಾ ಹೋಗೀನಿ. ನೀವು ಕೇಳ್ತಾ ಹೋಗಿ. ಕೆಲ ವರ್ಷಗಳ ಹಿಂದೆ ಡಿಸೆಂಬರ್ 31 ಗುರುವಾರ, ಜನವರಿ 1… Read More ಡಿಸೆಂಬರ್ 31 ಆ ಕರಾಳ ರಾತ್ರಿ

ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ

ಮೊನ್ನೆ ಪೇಜಾವರ ಶ್ರೀಗಳು ವಿಧಿವಶರಾದಾಗ ಅವರ ಬಗ್ಗೆಯೇ ನಮ್ಮ ಸ್ನೇಹಿತರೆಲ್ಲಾ ಸೇರಿ ಅವರ ಸಾನಿಧ್ಯದ ನೆನಪನ್ನು ಮೆಲುಕು ಹಾಕುತ್ತಿದ್ದಾಗ ಶ್ರೀ ನಮ್ಮ ಜಾಲಹಳ್ಳಿಯ ವಿನಾಯಕ ಸೇವಾ ಮಂಡಳಿಯ ಗಣೇಶೋತ್ಸವಕ್ಕೆ ಬಂದದ್ದು ಅಲ್ಲಿ ನಮಗೆ ಮಾರ್ಗದರ್ಶನ ಮಾಡಿದ್ದರ ಕುರಿತು ಮಾತನಾಡುತ್ತಿದ್ದಾಗ, ಅದೇ ಸಮಯದಲ್ಲಿ ಆದಿಚುಂಚನಗಿರಿಯ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳ ಕುರಿತಂತೆಯೂ ವಿಷಯ ಪ್ರಸ್ತಾಪವಾಗಿ ಅವರು ಜಾಲಹಳ್ಳಿಗೆ ಬಂದಿದ್ದಾಗ ನಡೆದ ಒಂದು ವಿಶಿಷ್ಟ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡದ್ದು ಸದ್ಯದ ಪರಿಸ್ಥಿತಿಗೆ ಪ್ರಸ್ತುತವಾಗಿರುವ ಕಾರಣ ನಿಮ್ಮೊಂದಿಗೆ ಹಂಚಿಕೊಳ್ಳಲು… Read More ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ

ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್

ಕನ್ನಡ ಚಿತ್ರರಂಗ ಕಂಡ ಆತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ಆದರೆ ಅಷ್ಟೇ ದುರದೃಷ್ಟವಂತ ನಟ ಎಂದೇ ಜನಜನಿತವಾಗಿದ್ದ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ, ಸಾಧನೆ ಮತ್ತು ಅವರು ಅನುಭವಿಸಿದ ನೋವು ನಲಿವುಗಳ ಸಮಗ್ರ ಚಿತ್ರಣ ಇದೋ ನಿಮಗಾಗಿ

ನಿಮ್ಮವನೇ ಉಮಾಸುತ… Read More ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್

ಪೇಜಾವರ  ಶ್ರೀ ವಿಶ್ವೇಶ ತೀರ್ಥರು

ಉಡುಪಿ ಅಂದ ತಕ್ಷಣ ನಮಗೆ ನೆನಪಾಗೋದು ಶ್ರೀಕೃಷ್ಣ ಪರಮಾತ್ಮ ಕನಕನ ಕಿಂಡಿ, ಆಷ್ಟ ಮಠಗಳು ಮತ್ತು ಅಲ್ಲಿನ ದಾಸೋಹ. ಇವೆಲ್ಲವ್ವಕ್ಕೂ ಕಳಸ ಪ್ರಾಯವಾಗಿ, ಇಡೀ ದೇಶಕ್ಕೆ ಉಡುಪಿಯನ್ನು ಹೆಚ್ಚಾಗಿ ಪರಿಚಯಿಸಿದ ಮತ್ತು ದೇಶಾದ್ಯಂತ ಎಲ್ಲೇ ಧಾರ್ಮಿಕ ಚಟುವಟಿಕೆಗಳು ನಡೆಯಲಿ ಆಥವಾ ಧರ್ಮಾಧಾರಿತ ಯಾವುದೇ ಸಮಸ್ಯೆಗಳಾದಲ್ಲಿ ಅದಕ್ಕೆ ಪರಿಹಾರವಾಗಿ ಉಡುಪಿಯತ್ತಲೇ ಮುಖಮಾಡುವ ಹಾಗೆ ಮಾಡಿದ ಕೀರ್ತಿ ಪೇಜಾವರ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ… Read More ಪೇಜಾವರ  ಶ್ರೀ ವಿಶ್ವೇಶ ತೀರ್ಥರು

ದಾಸಯ್ಯ

ಬಿಳಿ ಪಂಚೆ, ಬಿಳಿ ಜುಬ್ಬಾ ಅಥವಾ ಷರಾಯಿ ಹಾಕಿಕೊಂಡು ತಲೆಯಮೇಲೆ ಸುತ್ತಿದ ಒಂದು ಪೇಟ ಹಣೆಯಲ್ಲಿ ಒಂದು ಅಥವಾ ಮೂರು ಗೆರೆಗಳ ನಾಮ ಹಾಕಿಕೊಂಡು ಎಡಗೈಯಲ್ಲಿ ಉರಿಯುತ್ತಿರುವ ದೀಪದ ಕಂಬ, ಬಲಗೈಯ್ಯಿಗೆ ಜಾಗಟೆ ಕಟ್ಟಿಕೊಂಡು ಕೈಗಳಲ್ಲಿ ಕೆಲವೊಮ್ಮೆ ಕಹಳೆ ಮತ್ತು ಹೆಚ್ಚಿನ ಬಾರಿ ಶಂಖವನ್ನು ಇಟ್ಟುಕೊಂಡು ಎರಡೂ ತೋಳುಗಳಿಗೆ ಜೋಳಿಗೆ ಏರಿಸಿಕೊಂಡು ಎಲ್ಲರ ಮನೆಯ ಮುಂದೆ ಬಂದು ನಿಂತು ವೇಂಕಟರಮಣ ಸ್ವಾಮಿ ಪಾದಕ್ಕೆ ಗೋವಿಂದಾ! ಗೋವಿಂದಾ!! ಆಂಜನೇಯ ವರದಸ್ವಾಮಿ ಗೋವಿಂದಾ!! ಗೋವಿಂದಾ!! ಎಂದು ಜೋರಾಗಿ ಭಗವಂತನ ನಾಮ… Read More ದಾಸಯ್ಯ

ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ

ಜಯ ಹನುಮಾನ್ ಜ್ಞಾನ ಗುಣ ಸಾಗರ! ಜಯ ಕಪೀಶ ತಿಹುಮ್ ಲೋಕ ಉಜಾಗರ! ರಾಮ ದೂತ ಅತುಲಿತ ಬಲ ಧಾಮ! ಅಂಜನೀ ಪುತ್ರ ಪವನ ಸುತ ನಾಮ! ರಾಮಾಯಣದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ನಂತರ ಅತ್ಯಂತ ಜನಪ್ರಿಯನಾಗಿರುವವನೇ ರಾಮನ ಭಂಟ ಆಂಜನೇಯ. ಮಾಯಾಜಿಂಕೆಯ ಜಾಲದಲ್ಲಿ ಮುಳುಗಿಸಿ ಸೀತಾಮಾತೆಯನ್ನು ಯಾರು ಅಪಹರಿಸಿಕೊಂಡು ಹೋಗಿರಬಹುದು ಎಂದು ವೈದೇಹೀ ಎನಾದಳೋ ಲಕ್ಷ್ಮಣಾ, ನನ್ನ ಸೀತೆಯನ್ನು ನೀವು ನೋಡಿದ್ದೀರಾ? ನೀವು ನೋಡಿದ್ದೀರಾ? ಎಂದು ಗಿಡ ಮರ ಬಳ್ಳಿಗಳನ್ನು, ಪ್ರಾಣಿ ಪಶು ಪಕ್ಷಿಗಳನ್ನು,… Read More ಅಂಜನಾದ್ರಿ ಮತ್ತು ಕಿಷ್ಕಿಂದ ಪರ್ವತ