ಮೌನವೇ ಪರಿಣಾಮಕಾರಿ ಅಸ್ತ್ರ
ಅಂದೊಂದು ದೊಡ್ಡ ಕಾಡು. ಅಲ್ಲಿ ಅನೇಕ ಬಗೆ ಬಗೆಯ ಗಿಡ ಮರಗಳು ನಾನಾ ರೀತಿಯ ಕಾಡು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು. ಎಲ್ಲಾ ಪ್ರಾಣಿ ಪಕ್ಷಿಗಳು ಸುಖಃದಿಂದ ನೆಮ್ಮದಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವಾದರೂ ಅಗಾಗ ಅವುಗಳಿಗೆ ಪಕ್ಕದ ಊರಿನ ಬೇಟೆಗಾರಿಂದ ಸದಾ ತೊಂದರೆಯಾಗುತ್ತಲೇ ಇತ್ತು. ಕಾಡಿನ ರಾಜ ಇದು ಕಾಡಿನಲ್ಲಿ ಆಗುವ ಸಹಜ ಪ್ರಕ್ರಿಯೆ ಎಂದು ಸದಾ ಸುಮ್ಮನಾಗಿ ಬಿಡುತ್ತಿರಿಂದ ದಿನೇ ದಿನೇ ಬೇಟೆಗಾರರ ಧಾಳಿ ಹೆಚ್ಚುತ್ತಿತ್ತು. ಇದರಿಂದ ಬೇಸತ್ತು ನರಸತ್ತ ರಾಜನನ್ನು ಬದಲಿಸಿ ಭಲಾಡ್ಯ ರಾಜನನ್ನು… Read More ಮೌನವೇ ಪರಿಣಾಮಕಾರಿ ಅಸ್ತ್ರ
ಅವರೇ ಮೇಳ
ರಂಗು ರಂಗಿನ ಶಬ್ಧ ಮತ್ತು ಬೆಳಕಿನ ಸಮ್ಮಿಳನದ ದೀಪಾವಳಿ ಹಬ್ಬ ಮುಗಿದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರನ್ನೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯಲ್ಲಿ ಪ್ರತೀವರ್ಷವೂ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನೆಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯೇನಲ್ಲ.… Read More ಅವರೇ ಮೇಳ
ಕನ್ನಡ ಚಿತ್ರರಂಗದ ಅಂಕಲ್ ಲೋಕನಾಥ್ ಅಜರಾಮರ
ಇಂದು ಕಛೇರಿಗೆ ಬರುತ್ತಿದ್ದಂತೆಯೇ ಮೊದಲಿಗೆ ನೋಡಿದ ಸುದ್ದಿ ರಂಗಭೂಮಿ ಮತ್ತು ಚಲನಚಿತ್ರ ರಂಗದ ಮೇರು ನಟ ಸಿ.ಎಚ್.ಲೋಕನಾಥ್ ಇನ್ನಿಲ್ಲ ಆ ಸುದ್ದಿ ಓದುತ್ತಿದ್ದಂತೆಯೇ ನನ್ನ ಮನಸ್ಸಿಗೆ ನಮ್ಮ ಮನೆಯವರನ್ನೊಬ್ಬರನ್ನೇ ಕಳೆದುಕೊಂಡಷ್ಟೇ ದುಃಖವಾಯಿತು. ಕನ್ನಡ ಚಿತ್ರರಂಗದಲ್ಲಿ ಅಂಕಲ್ ಎಂದೇ ಚಿರಪರಿಚಿತರಾಗಿದ್ದ ಲೋಕನಾಥರ ಅಕಾಲಿಕ ಅಗಲಿಗೆ ಕನ್ನಡ ಚಿತ್ರರಂಗಕ್ಕೆ ತುಂಬಲಾದರ ನಷ್ಟವೇ ಸರಿ. ಅವರನ್ನು ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹನೆಂದರೆ ತಪ್ಪಾಗಲಾರದು. ಡಿಸೆಂಬರ್ ಅಂತ್ಯಕ್ಕೂ ಕನ್ನಡ ಚಿತ್ರರಂಗಕ್ಕೂ ಕೂಡಿ ಬರುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಯಿತು. ಡಿ. 29 ಕಂಚಿನ… Read More ಕನ್ನಡ ಚಿತ್ರರಂಗದ ಅಂಕಲ್ ಲೋಕನಾಥ್ ಅಜರಾಮರ
ಆಭರಣ ಅಂಗಡಿಯ ಅವಾಂತರ
ಅದೊಮ್ಮೆ ಗಂಡ ತನ್ನ ಹೆಂಡತಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ನೆನಪಿನ ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ನೀಡಲು ಹತ್ತಿರದ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದರು. ಸೀರೆ, ಚಿನ್ನದ ಅಂಗಡಿಗಳಿಗೆ ಹೆಂಗಸರೊಂದಿಗೆ ಹೋದರೆ ಆಗಬಹುದಾದ ಸಮಯವೇ ಅಂದೂ ಕೂಡಾ ಆಗಿತ್ತು. ಇದು ತೋರಿಸಿ, ಅದು ತೋರಿಸಿ. ಇಷ್ಟೇ ದುಡ್ದಿನಲ್ಲಿ ಮತ್ತೊಂದು ಡಿಝೈನ್ ತೋರಿಸಿ. ಇದು ಸ್ವಲ್ಪ ದೊಡ್ಡದಾಯ್ತು. ಸ್ವಲ್ಪ ಚಿಕ್ಕದಿದ್ದರೆ ನೋಡಿ. ಇಲ್ಲಾ ಇಲ್ಲ ಇದು ತುಂಬಾನೇ ಚಿಕ್ಕದಾಯ್ತು ನನಗೆ ಸರಿ ಹೊಂದದು ಎಂದು ಹೀಗೇ ಹಾಗೆ ತರತರಹದ ಆಭರಣಗಳನ್ನು… Read More ಆಭರಣ ಅಂಗಡಿಯ ಅವಾಂತರ
ಸಹನೆ
ಇತ್ತೀಚೆಗೆ ಮಗಳನ್ನು ಕಾಲೇಜಿನ ಬಸ್ ಹತ್ತಿಸಲು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ನಿಧಾನವಾಗಿ ಹೋಗುತ್ತಿರುವಾಗ ಎದುರುಗಡೆಯಿಂದ ಮತ್ತೊಂದು ಭಾರೀ ವಾಹನ ಬಂದಾಗ ಸಹಜವಾಗಿಯೇ ರಸ್ತೆಯ ಬದಿಗೆ ಬಂದು ಎದುರುಗಡೆಯ ವಾಹನ ಸರಾಗವಾಗಿ ಹೋಗಲು ಅನುವು ಮಾಡಿಕೊಡುತ್ತಿರುವಾಗಲೇ, ಇದ್ದಕ್ಕಿದ್ದಂತೆಯೇ ಹಿಂದಿನಿಂದ ಜೋರು ಜೋರಾಗಿ ಕರ್ಕಶವಾದ ಹಾರ್ನ್ ಶಬ್ದ ಕೇಳಿಸಿ, ಅರೇ ಇರುವುದಷ್ಟೇ ಜಾಗ ಈಗಾಗಲೇ ರಸ್ತೆಯ ಅಂಚಿನಲ್ಲಿದ್ದೇನೆ. ಇನ್ನೇಷ್ಟು ಪಕ್ಕಕ್ಕೆ ಸರಿಯುವುದು ಎಂದು ಯೋಚಿಸಿ ಎದುರಿನ ವಾಹನ ಹೋದ ನಂತರ ಹಿಂದಿನವರಿಗೆ ಜಾಗ ಬಿಟ್ಟರಾಯಿತು ಎಂದು ನಿರ್ಧರಿಸುತ್ತಿರುವಾಗಲೇ ಕರ್ಕಶವಾದ ಹಾರ್ನ್… Read More ಸಹನೆ
ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್
ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಕನ್ನಡ ಚಿತ್ರರಂಗದ ದಿಗ್ಗಜರು. ಪ್ರತಿಭಾವಂತರು, ಸುರದ್ರೂಪಿಗಳು ಮೇಲಾಗಿ, ಸ್ವಾಭಿಮಾನಿಗಳು. ಕನ್ನಡ ನಾಡು, ನುಡಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದವರು. ಅವರನ್ನು ಅನುಸರಿಸುವ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದವರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಭೌತಿಕವಾಗಿ ಅವರುಗಳು ನಮ್ಮೊಂದಿಗೆ ಇಂದು ಇಲ್ಲವಾದರೂ, ಅವರು ತಮ್ಮ ಸಿನಿಮಾಗಳ ಮೂಲಕ ಇನ್ನೂ ನೂರಾರು ವರ್ಷಗಳವರೆಗೂ ನಮ್ಮ ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿರುತ್ತಾರೆ ಎನ್ನುವುದಂತೂ ಸತ್ಯ. ಸದಾ ನಮ್ಮ ಹಿರಿಯರನ್ನು ನೆನೆಸಿಕೊಳ್ಳುವುದು ನಮ್ಮ ಸಂಪ್ರದಾಯದ ಒಂದು… Read More ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್
ಪರಿಸರ ಸ್ನೇಹಿ Green Crackers
ಕಳೆದ ಸೋಮವಾರ News 9 ಆಂಗ್ಲ ಛಾನೆಲ್ಲಿನ ದೀಪಾವಳಿಯಲ್ಲಿ ಪಟಾಕಿಗಳಿಂದ ಪರಿಸರಕ್ಕಾಗುವ ಪರಿಣಾಮಗಳ ಬಗ್ಗೆ ನಡೆದ ವಿಶೇಷ ನೇರ ಪ್ರಸಾರದ ಚರ್ಚೆಯಲ್ಲಿ ನಾನು ಪಾಲ್ಗೊಂಡಿದ್ದ ಸಂಧರ್ಭದಲ್ಲಿ ವಾರ್ತಾವಾಚಕಿ ಪದೇ ಪದೇ Green Crackers ಬಗ್ಗೆ ಏನಾದರೂ ಯೋಚಿಸಬಹುದೇ ಎಂದು ಕೇಳುತ್ತಿದ್ದಾಗ ನನ್ನಲ್ಲೂ ಕುತೂಹಲ ಮೂಡಿತ್ತು. ಹೇಳಿ ಕೇಳಿ ದೀಪಾವಳಿ ಬೆಳಗಿನ ಹಬ್ಬ. ಇಲ್ಲಿ ಶಬ್ಧ ಮತ್ತು ಪ್ರಕಾಶಮಾನಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಅಂತಹ ಶಬ್ಧ ಮತ್ತು ಬೆಳಕನ್ನು ಪರಿಸರ ಸ್ನೇಹಿಯಾಗಿ ಹೇಗೆ ಮಾಡಬಹುದು ಎಂದು ಯೋಚಿಸುತ್ತಿರುವಾಗ ನೆನ್ನೆ ನಡೆದ… Read More ಪರಿಸರ ಸ್ನೇಹಿ Green Crackers
Nation First Everything Next
ಒಂದನೊಂದು ಊರಿನ ಪಕ್ಕದಲ್ಲಿ ಒಂದು ದೊಡ್ಡ ಕಾಡು ಇತ್ತು. ಆ ಕಾಡಿನ ಒಂದು ದೊಡ್ಡ ಮರವೊಂದರಲ್ಲಿ ಹಲವಾರು ಪಕ್ಷಿಗಳು ಸುಖವಾಗಿ ವಾಸಮಾಡಿ ಕೊಂಡಿದ್ದವು. ಅಂತಹ ಪಕ್ಷಿಗಳ ಸಂಕುಲಗಳಲ್ಲಿ ಒಂದು ಗಂಡುಬೇರುಂಡ ಪಕ್ಷಿಯೂ ಇತ್ತು. ಎಲ್ಲರಿಗೂ ತಿಳಿದಿರುವಂತೆ ಗಂಡುಬೇರುಂಡ ಪಕ್ಷಿಗೆ ಒಂದೇ ದೇಹ ಎರಡು ತಲೆಗಳು ಇರುತ್ತಿದ್ದವು. ಈಗ ಈ ಪಕ್ಷಿಗಳು ನಶಿಸಿ ಹೋಗಿರುವುದರಿಂದ ಅದರ ಜ್ಣಾಪಕಾರ್ಥವಾಗಿ ನಮ್ಮ ರಾಜ್ಯದ ಅಧಿಕೃತ ಲಾಂಛನದ ಮಧ್ಯಭಾಗದಲ್ಲಿ ಗಂಡುಬೇರುಂಡ ಪಕ್ಷಿಯನ್ನು ಅಳವಡಿಸಿಕೊಂಡಿದ್ದಾರೆ. ಇಂತಹ ಗಂಡುಬೇರುಂಡ ಪಕ್ಷಿಯು ಇತರೇ ಪಕ್ಷಿಗಳಂತೆ ಕಾಡಿನಲ್ಲಿದ್ದ ಹಲವಾರು… Read More Nation First Everything Next








