ವಾರನ್ನ

ಇತ್ತೀಚೆಗೆ ಮುಖಪುಟದಲ್ಲಿ ಒಬ್ಬರು ವಾರನ್ನದ ಬಗ್ಗೆ  ಹೇಳುತ್ತಾ ಹಿಂದೆಲ್ಲಾ ನಮ್ಮ ಮನೆಗೆ ವಾರಾನ್ನದ ಹುಡುಗರು ಊಟಕ್ಕೆ ಬರ್ತಾ ಇದ್ದರು..ಅವರು ವಾರದ ಏಳು ದಿನಗಳೂ ..ದಿನಕ್ಕೊಬ್ಬರ ಮನೆಯಂತೆ ಒಪ್ಪಂದ ಮಾಡ್ಕೊಳ್ತಿದ್ರು..ನಮ್ಮ ಮನೆಗೂ ಒಬ್ಬ ಕಾಲೇಜು ಓದುವ ಹುಡುಗ ಸೋಮವಾರದ ದಿನ ಎರಡೂ ಹೊತ್ತು ಬಂದು ಊಟ ಮಾಡಿ ಹೋಗ್ತಿದ್ದ..ಕಷ್ಟದ ಕಾಲ..ವಿಧ್ಯೆ ಕಲಿಯುವ ಆಸೆ..ತುಂಬಾ ಕಷ್ಟ ಪಟ್ಟು ಓದಿ ,ವಾರಾನ್ನ ತಿಂದವರೂ ಈಗಲೂ ಅದೆಷ್ಟೋ ಮಂದಿ ಇಂದು ಒಳ್ಳೊಳ್ಳೆ ಉದ್ಯೋಗದಲ್ಲಿರಬಹುದು ಅಲ್ವೇ ಬಂಧುಗಳೇ..ನಿಮಗೂ ಗೊತ್ತೆ ? ಅಂತಾ ಪ್ರಶ್ನಿಸಿದ್ದರು. ಹಿಂದೆಲ್ಲಾ… Read More ವಾರನ್ನ

ಡೆಬಿಟ್ ಕಾರ್ಡ್ ಅವಾಂತರ

ಇನ್ನೇನು ಸಂಕ್ರಾಂತಿ ಹಬ್ಬ‌‌ ಬರ್ತಾ‌ಇದೆ. ಸಂಕ್ರಾಂತಿಯಿಂದ ರಥ ಸಪ್ತಮಿ ಮುಗಿಯುವವರೆಗೂ ಎಲ್ಲರ ಮನೆಯಲ್ಲಿ ಸಂಭ್ರಮದ ವಾತಾವರಣ. ಸಂಬಂಧೀಕರ ಮತ್ತು ಆಪ್ತ ಸ್ನೇಹಿತರ ಮನೆಗೆಳಿಗೆ ಹೋಗಿ ಎಳ್ಳು ಬೀರುತ್ತಾ, ಎಳ್ಳು ಬೆಲ್ಲಾ ತಿಂದು ಒಳ್ಳೇ ಮತಾನಾಡೋಣ ಎನ್ನುತ್ತಾ ಬಾಂಧ್ಯವ್ಯ/ಗೆಳೆತನ ಹೆಚ್ಚಿಸುಕೊಳ್ಳುವ ಉತ್ತಮ ಕಾರ್ಯಕ್ರಮ. ನಮ್ಮ ಎಲ್ಲಾ ಹಬ್ಬಗಳ ಹಿಂದಿನ ಸಾರವೂ ಅದೇ. ಹಬ್ಬಗಳ ನೆಪದಲ್ಲಿ ಎಲ್ಲಾ ಕಷ್ಟಗಳನ್ನು, ದ್ವೇಷಗಳನ್ನು ಮರೆತು ಒಟ್ಟಿಗೆ ಒಂದೆಡೆ ಸೇರಿ ಯಥಾಶಕ್ತಿ ಅಥಿತಿ ಸತ್ಕಾರ ಮಾಡುತ್ತಲೋ ಇಲ್ಲವೇ ಮಾಡಿಸಿಕೊಳ್ಳುವ ಸತ್ ಸಂಪ್ರದಾಯ ನಮ್ಮಲ್ಲಿ ಹಿಂದಿನಿಂದಲೂ… Read More ಡೆಬಿಟ್ ಕಾರ್ಡ್ ಅವಾಂತರ

 ಸಾವಯವ ಸಂತೆ ವಿದ್ಯಾರಣ್ಯಪುರ

ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸ್ವದೇಶೀ ಜಾಗರಣ ಮಂಚ್ ನೇತೃತ್ವದಲ್ಲಿ ನೆಡೆಯುತ್ತಿರುವ ಸಾವಯವ ಸಂತೆ ನಿಮ್ಮೆಲ್ಲರ ಸಹಕಾರದಿಂದ ಇಂದೂ ಕೂಡಾ ಅಭೂತಪೂರ್ವ ಯಶಸ್ವಿಯಾಗಿ ನಡೆಯಿತು ಎಂದು ತಿಳಿಸಲು ಹರ್ಷಿಸುತ್ತೇವೆ. ಇಂದು ಬೆಳಿಗ್ಗೆ ನಿಗಧಿತ ಸಮಯವಾದ 8.00 ಗಂಟೆಗೆ ಆರಂಭವಾಗುತ್ತದೆ ಎಂದು ತಿಳಿಸಿದ್ದರೂ ಹಲವಾರು ಜನ 7:30 ಕ್ಕೆಲ್ಲಾ ಆಗಮಿಸಿ ಕಾರ್ಯಕ್ರಮದ ಆಯೋಜಕರಿಗೆ ಇನ್ನೂ ಯಾಕೆ ಶುರುಮಾಡಿಲ್ಲ ಎಂದು ಪ್ರಶ್ನಿಸುತ್ತಿದ್ದದ್ದು ನಿಜಕ್ಕೂ ಅದ್ಭುತವಾಗಿತ್ತು. ಇನ್ನೂ ಕೆಲವು ಸಾರ್ವಜನಿಕರು ರೈತರಿಗೆ ಅವರ ತರಕಾರಿ ಮತ್ತು… Read More  ಸಾವಯವ ಸಂತೆ ವಿದ್ಯಾರಣ್ಯಪುರ

ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ಫೆಬ್ರವರಿ 4 ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಎಂಬ ಮಹಾಮಾರಿ ಬಾರದಂತೆ ತಡೆಗಟ್ಟಲು ಅಥವಾ ಅದರಿಂದ ಗುಣವಾಗಲು ಆನುಸರಿಸಬೇಕಾದ ಉತ್ತಮ ಜೀವನ ಶೈಲಿ ಇದೋ ನಿಮಗಾಗಿ… Read More ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ರಾಮ ರಾವಣ -2

ನಾವೆಲ್ಲಾ ಓದಿದಂತೆ‌ ಇಲ್ಲವೇ ಕೇಳಿ ತಿಳಿದಂತೆ ರಾಮ‌ ಒಳ್ಳೆಯವನು‌ ಮತ್ತು ರಾವಣ ಕೆಟ್ಟವನು ಅದ ಕಾರಣ ರಾವಣ ‌ಮಾಡಿದ ಎಲ್ಲ ಕೆಲಸಗಳನ್ನೂ ದ್ವೇಷಿಸ‌ಬೇಕು ಮತ್ತು ರಾಮ ಏನನ್ನೇ ಮಾಡಿದರು ಸಹಿಸಿಕೊಳ್ಳಬೇಕು ಎಂದು ನಮ್ಮ ಮನಃಪಠದಲ್ಲಿ ಅಚ್ಚೊತ್ತಿದೆ. ಆದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ‌ಹಾಗೂ‌‌ ಕೆಟ್ಟ ಗುಣಗಳಿದ್ದು ಅದು ಸಂದರ್ಭಕ್ಕನುಗುಣವಾಗಿ ‌ಪ್ರಕಟಿತಗೊಳ್ಳುತ್ತವೆ. ಒಳ್ಳೆಯ ಕೆಲಸ‌‌‌ ಮಾಡಿದಾಗ ಪ್ರೋತ್ಸಾಹಿಸಿ, ಕೆಟ್ಟ‌ ಕೆಲಸಗಳನ್ನು ಮಾಡಿದಾಗ ದಾಕ್ಷಿಣ್ಯವಿಲ್ಲದೆ ಖಂಡಿಸೋಣ. ನಾನು ವಿವರಿಸಿದ ಎರಡೂ ಸಂದರ್ಭಗಳಲ್ಲಿ ಶಕ್ತಿಶಾಲಿ ರಾಮ, ವಿವೇಕವಂತ ರಾಮ, ಪತ್ನಿಯನ್ನು ಅತ್ಯಂತ ಗೌರವಾದರದಿಂದ… Read More ರಾಮ ರಾವಣ -2

ರಾಮ ರಾವಣ-1

ರಾಕ್ಷಸೀ ಗುಣವುಳ್ಳ‌ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನೆನಿಸ‌ ಬಹುದಾದರೂ, ಆತಾ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ‌ಸಂಗೀತಗಾರ, ಶಿವನನ್ನು ‌ಒಲಿಸಿಕೊಳ್ಳುವ ಸಲುವಾಗಿ‌ ತನ್ನ‌ ಕರಳುಗಳನ್ನೇ ಹೊರ‌ತೆಗೆದು‌ ರುದ್ರ ವೀಣೆಯನ್ನಾಗಿಸಿ‌‌ ನುಡಿಸಿ‌ ಶಿವನನ್ನು ಒಲಿಸಿಕೊಂಡು‌ ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು. ರಾಮ‌‌ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು‌‌ ಲಂಕೆಯಲ್ಲಿ ಪುರೋಹಿತರು ‌ಯಾರೂ‌ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ‌ ರಾಮ‌… Read More ರಾಮ ರಾವಣ-1

ದುಡ್ಡಿನ ಮಹತ್ವ

ಸುಮಾರು ಸಾವಿರದ ಒಂಬೈನೊರ ಎಂಬತ್ತಾರು, ಎಂಬತ್ತೇಳರ ಸಮಯ, ನಾನಿನ್ನೂ ಆಗಷ್ಟೇ ಕಾಲೇಜಿಗೆ ಸೇರಿದ್ದನಷ್ಟೆ. ಕಾಲೇಜಿಗೆ ಹೋಗುವ ಹುಡುಗನಾದರೂ ನೋಡಲು ಏಳು ಅಥವಾ ಎಂಟನೇ ತರಗತಿಯ ‌ವಿದ್ಯಾರ್ಥಿ ಅನ್ನುವ ಹಾಗೆ ಕಾಣುತ್ತಿದೆ. ಕುಳ್ಳಗೆ ಸಣ್ಣಗಿದ್ದ ನನ್ನನ್ನು ನನ್ನ ತಾಯಿ ವೈದ್ಯರ ಬಳಿ‌ ಕರೆದುಕೊಂಡು ಹೋಗಿ‌ ಡಾಕ್ಟ್ರೇ ನನ್ನ ‌ಮಗನಿಗೆ ಯಾವುದಾದರು ವಿಟಮಿನ್ ಟಾನಿಕ್‌ ಕೊಡಿ‌ ಸ್ವಲ್ಪ ಉದ್ದ ಮತ್ತು ಗಾತ್ರವಾಗಲಿ‌ ಎಂದು‌‌ ಕೋರಿದ್ದೂ ಉಂಟು. ಆದರೆ ನನ್ನ ತಂದೆ ‌ನಮ್ಮ ವಂಶದಲ್ಲಿ ಗಂಡುಮಕ್ಕಳೆಲ್ಲರೂ ಹದಿನೆಂಟರ ನಂತರವೇ ಬೆಳಯುವುದು ಎಂದು‌… Read More ದುಡ್ಡಿನ ಮಹತ್ವ

ಬುದ್ಧಿವಂತ ರೈತ

ಅದೊ೦ದು ಪುಟ್ಟ ಹಳ್ಳಿ, ಅಲ್ಲೊಬ್ಬ ರೈತ ತನ್ನ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೊತೆ ಜೊತೆಗೆ ಹೈನುಗಾರಿಕೆ ಮಾಡುತ್ತಾ ತನ್ನ ಸಂಸಾರದೊಂದಿಗೆ ಸುಖ:ದಿಂದಿದ್ದನು. ಅವನ ಬಳಿ ಇದ್ದ ಒಂದು ದೇಸೀ ಹಸು ದಷ್ಟ ಪುಷ್ಟವಾಗಿದ್ದು ಪ್ರತಿದಿನ ಬೆಳಿಗ್ಗೆ‍ ಸಂಜೆ ಸುಮಾರು ಎಂಟರಿಂದ ಹತ್ತು ಲೀಟರ್ ಹಾಲನ್ನು ಕೊಡುತ್ತಿದ್ದರಿಂದ ಆ ಹಸು ಆ ರೈತನ ಅಚ್ಚುಮೆಚ್ಚಾಗಿತ್ತು. ಒಂದು ದಿನ ಅಚಾನಕ್ಕಾಗಿ ಆ ಹಸುವಿಗೆ ಕಾಯಿಲೆ ಬಂದು, ಇದ್ದಕ್ಕಿದ್ದಂತೆ ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಿ, ಬರಬರುತ್ತಾ ಹಸು ಬಡಕಲಾಗ ತೊಡಗಿತು.… Read More ಬುದ್ಧಿವಂತ ರೈತ

ಮೊಬೈಲ್ ಫೋನ್ ಅನಾಹುತ

ಎಂದಿನಂತೆಯೇ  ಇಂದು ಬೆಳ್ಳಂಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದೈನಂದಿನ ವ್ಯಾಯಮವನ್ನು ಮುಗಿಸಿ ಮನೆಗೆ ಬಂದು ವಾಟ್ಸಾಪ್ ಸಂದೇಶಗಳನ್ನು ಓದುತ್ತಿದ್ದಾಗ,15 ವರ್ಷಗಳ ನನ್ನ ಮಗನಷ್ಟೇ ವಯಸ್ಸಿನ   ಪರಿಚಯಸ್ಠ ಬಾಲಕನ ಅಕಾಲಿಕ ಮರಣ ಸುದ್ದಿ ಓದಿ  ಕರಳು ಚುರುಕ್ ಎಂದಿತು. ಆಟ ಪಾಠಗಳಲ್ಲಿ ಚುರುಕಾಗಿದ್ದ ಹುಡುಗ, ಹಾಡು, ಅಮೃತವಚನ, ಶ್ಲೋಕಗಳನ್ನು ನಿರ್ಗಳವಾಗಿ ಹೇಳುತ್ತಿದ್ದದ್ದು ಕಣ್ಣುಮುಂದೆ ಬಂದು ಕಣ್ಣಂಚಿನಲ್ಲಿ ನೀರೂರಿ, ಅಭ್ಯಾಸದ ಬಲದಂತೆ  ಭಗವಂತನು ಮೃತನ ಆತ್ಮಕ್ಕೆ  ಶಾಂತಿ ಕೊಡಲಿ ಹಾಗು ಮಗನನ್ನು ಕಳೆದು ಕೊಂಡ ಕುಟುಂಬವರ್ಗದವರಿಗೆ   ದುಖಃ  ಭರಿಸುವ ಶಕ್ತಿಯನ್ನು… Read More ಮೊಬೈಲ್ ಫೋನ್ ಅನಾಹುತ