ನಿರ್ಮಲ ಸೀತಾರಾಮನ್ ಅವರ ಸಂವಾದ ಕಾರ್ಯಕ್ರಮ

ಬೆಂಗಳೂರಿನ ವಿದ್ಯಾರಣ್ಯಪುರದ ಚಿಂತಕರ ಚಾವಡಿಯ ಆಶ್ರಯದಲ್ಲಿ ಇಂದು ದ್ವಾರಕ ಕನ್ವೆಂಷನ್ ಹಾಲ್ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಕಿಕ್ಕಿರಿದು ತುಂಬಿದ್ದ ದೇಶಭಕ್ತ ಆಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಸ್ಪೂರ್ತಿದಾಯಕವಾಗಿ ನರೆವೇರಿತು. ನಿರ್ಮಲ ಸೀತಾರಾಮ್ ಅವರು ಕಾರ್ಯಕ್ರಮಕ್ಕೆ ಆಗಮಿಸುವವರೆಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಇಂದಿನ ಮನ್ ಕೀ ಬಾತ್  ಮುದ್ರಿತ ಕಾರ್ಯಾಕ್ರಮವನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದ  ನೆರೆದಿದ್ದ ನೂರಾರು  ಕಾರ್ಯಕರ್ತರು, ನಿರ್ಮಲಾ ಸೀತಾರಾಮನ್ ಅವರು ಆಗಮಿಸುತ್ತಿದ್ದಂತೆಯೇ ಮುಗಿಲು ಮುಟ್ಟುವ ಹಾಗೇ ಬೊಲೋ ಭಾರತ್ ಮಾತಾ ಕೀ ಜೈ ಮತ್ತು… Read More ನಿರ್ಮಲ ಸೀತಾರಾಮನ್ ಅವರ ಸಂವಾದ ಕಾರ್ಯಕ್ರಮ

ಆಂಬ್ಯುಲೆನ್ಸ್ ಬಂತು ದಾರಿ ಕೊಡಿ

ನಾವುಗಳು ಎಂತಹದ್ದೇ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ  ಆಂಬ್ಯುಲೆನ್ಸ್ ಶಬ್ಧ ಕೇಳಿದ ತಕ್ಷಣ ಎಲ್ಲರೂ ಅಕ್ಕ ಪಕ್ಕಕ್ಕೆ ಕಷ್ಟ ಪಟ್ಟಾದರೂ ಸರಿದು ಆಂಬ್ಯುಲೆನ್ಸ್ ಹೋಗಲು ಜಾಗ ಮಾಡಿ ಕೊಡುತ್ತೇವೆ. ಅಕಸ್ಮಾತ್ ಯಾರಾದರೂ ಜಾಗ ಮಾಡಿ ಕೊಡಲು ತಡ ಮಾಡಿದಲ್ಲಿ ಅವರ ಮೇಲೆ ಜೋರು ಮಾಡಿಯಾದರೂ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಡುತ್ತೇವೆ.  ಏಕೆಂದೆರೆ,  ಆ ಆಂಬ್ಯುಲೆನ್ಸ್ ಗಾಡಿಯಲ್ಲಿ ಯಾವುದೋ ಒಂದು ಜೀವ  ಜೀವನ್ಮರಣ ಸ್ಥಿತಿಯಲ್ಲಿರುತ್ತದೆ. ಆ ಜೀವಕ್ಕೆ  ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ತಲುಪಿ ಸೂಕ್ತವಾದ ಚಿಕಿತ್ಸೆ ದೊರೆತು ಚೇತರಿಸಿಕೊಳ್ಳಬಹುದೇನೋ ಎನ್ನುವ… Read More ಆಂಬ್ಯುಲೆನ್ಸ್ ಬಂತು ದಾರಿ ಕೊಡಿ

1983 ಕ್ರಿಕೆಟ್ ವರ್ಲ್ಡಕಪ್, ಭಾರತದ ಯಶೋಗಾಥೆ

ಜೂನ್‌ 25, 1983, ಆಗ ನಾನು‌ ಎಂಟನೇ‌ ತರಗತಿಯಲ್ಲಿ‌ ಓದುತ್ತಿದೆ.‌ ಸಾಧಾರಣ ಮಧ್ಯಮ ಕುಟುಂಬದವರಾಗಿದ್ದ ನಮಗೆ ಸ್ವಂತ‌ ಟಿವಿ ಹೊಂದುವುದು ಕಷ್ಟಕರವಾದ ದಿನವದು. ಅಲ್ಲೋ ಇಲ್ಲೋ ಒಬ್ಬೊಬ್ಬರ ‌ಮನೆಯಲ್ಲಿ, ಕೋನಾರ್ಕ್ ಅಥವಾ ಸಾಲಿಡೇರ್ ಅಥವಾ ಡಯೋನೋರಾ ಅಥವಾ ಬಿಪಿಎಲ್ ಕಂಪನಿಗಳ ಕಪ್ಪು ಬಿಳಿಪಿನ ಟಿವಿ ಇರುತ್ತಿದ್ದ ಕಾಲವದು. ಮೂಗಿಗಿಂತ ಮೂಗಿನ ನತ್ತೇ ಭಾರವೆಂಬಂತೆ, ಟಿವಿಗಿಂತ ಆಂಟೆನಾ ಬಾರೀ ದೊಡ್ಡದಾಗಿರುತ್ತಿತ್ತು. ಮನೆಯ ಮೇಲಿನ ಆಂಟೆನಾದ ಗಾತ್ರದಿಂದಲೇ ಮನೆಯವರ ಸಿರಿತನ ಗುರುತಿಸುತ್ತಿದ್ದ ಕಾಲವದು. ಶಾಲೆ ಮುಗಿಸಿ ಮನೆಗೆ ಬಂದ ನನಗೆ… Read More 1983 ಕ್ರಿಕೆಟ್ ವರ್ಲ್ಡಕಪ್, ಭಾರತದ ಯಶೋಗಾಥೆ

ಗಮಕ ವಿದ್ವಾನ್ ಶ್ರೀ ಬಾ. ನಂ. ಶಿವಮೂರ್ತಿ

ಅಮ್ಮ ಸೊಂಟದಲ್ಲಿ ಮಗುವನ್ನಿಟ್ಟುಕೊಂಡು ತಾನು ಕಾಣುವ ಸಂಪತ್ತನ್ನು ತೋರಿಸಿದರೆ, ಅಪ್ಪ ಹೆಗಲ ಮೇಲೆ ಮಕ್ಕಳನ್ನು ಹೊತ್ತು ತಾನು ಕಾಣದಿರುವ ಜಗತ್ತೂ ಸಹಾ ಮಕ್ಕಳಿಗೆ ಕಾಣುವಂತಾಗಲಿ ಎಂದು ತೋರಿಸುತ್ತಾರೆ ಎನ್ನುವುದನ್ನು ಅಕ್ಷರಶಃ ಪಾಲಿಸಿ, ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಪ್ರದಾಯ, ಸ್ವಾಭಿಮಾನ ದೇಶಾಭಿಮಾನ ಕಲಿಸಿದ ಆದ್ಯ ಗುರು ನಮ್ಮ ತಂದೆ ಶ್ರೀ ಬಾ.ನಂ. ಶಿವಮೂರ್ತಿಗಳ ಸಂಸ್ಮರಣಾ ದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಗಮಕ ವಿದ್ವಾನ್ ಶ್ರೀ ಬಾ. ನಂ. ಶಿವಮೂರ್ತಿ

ಹಸಿವು

ಅದೊಂದು ಶನಿವಾರದ ದಿನ.  ಬೆಳಿಗ್ಗೆ ಶಂಕರ ಕಛೇರಿಗೆ ಹೊರಡಲು ಅನುವಾಗಿ ತಿಂಡಿ ತಿನ್ನುತ್ತಿದ್ದ. ಅಡುಗೆ ಮನೆಯೊಳಗೆ ಅವನ ಮಡದಿ ಮಯೂರಿ ಮಗ ಸಮೀರನೊಂದಿಗೆ ಏನೋ ಸಮಾಧಾನ ಮಾಡುತ್ತಿದ್ದಳು ಆದರೆ ಅದನ್ನು ಕೇಳಲು ತಯಾರಿಲ್ಲದ ಮಗ, ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಮಾಡುತ್ತಿದ್ದ. ಮೊದ ಮೊದಲು  ಅಮ್ಮಾ ಮಗನ ನಡುವಿನ ವಿಷಯಕ್ಕೆ ತಾನೇಕೇ ಹೋಗುವುದು ಎಂದು ಸುಮ್ಮನಿದ್ದರೂ, ಮಡದಿಯು ಪರಿಪರಿಯಾಗಿ ಸಂತೈಸಲು ಪ್ರಯತ್ನಿಸಿದ್ದರೂ ಒಪ್ಪಿಕೊಳ್ಳದೆ ಪಿರಿಪಿರಿ ಮಾಡುತ್ತಿದ್ದ ಮಗನನ್ನು ಕಂಡ ಶಂಕರ, ಏನದು? ಏನಾಗ್ತಾ ಇದೇ? ಎಂದು ತುಸು ಎತ್ತರದ… Read More ಹಸಿವು

ಅಹಂ

ಅದೊಂದು ಮಧ್ಯಮ ವರ್ಗದ ಕುಟುಂಬ. ಯಜಮಾನರು ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯೊಡತಿ ಅಪ್ಪಟ ಗೃಹಿಣಿ. ಇರುವ ಒಬ್ಬನೇ ಒಬ್ಬ ಮಗನನ್ನು ಹೊಟ್ಟೆ, ಬಟ್ಟೆ ಕಟ್ಟಿ  ಸಾಕಿ ಸಲಹಿ ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಿದರು. ಆ ಹುಡುಗನೂ ಅಷ್ಟೇ  ತಂಬಾ ಬುದ್ಧಿವಂತ. ಕಠಿಣ ಪರಿಶ್ರಮದಿಂದ ಓದಿ ಐದಂಕಿ ಸಂಬಳ ಪಡೆಯುವಷ್ಟು ಎತ್ತರಕ್ಕೆ ಬೆಳೆದ. ವಯಸ್ಸಿಗೆ ಬಂದ ಮಗನಿಗೆ ವಧು ಅನ್ವೇಷಣೆಗಾಗಿ ವಧುವರ ಕೇಂದ್ರಕ್ಕೆ  ಹೋಗಿದ್ದರು. ಅದೇ  ಸಮಯಕ್ಕೆ  ಊರಿನ ಮತ್ತೊಂದು ಭಾಗದಲ್ಲಿದ್ದ ಇನ್ನೊಂದು ಮಧ್ಯಮ ವರ್ಗದ ಕುಟುಂಬದ ಒಬ್ಬಳೇ … Read More ಅಹಂ

ಯಾವ ಹೂವು ಯಾರ ಮುಡಿಗೋ

ಶಂಕ್ರ, ಆನಂದ ಮತ್ತು ‌ನಂದ ಬಾಲ್ಯದ ‌ಗೆಳೆಯರು. ನಂದ ಮತ್ತು ಆನಂದ ಒಡಹುಟ್ಟಿದವರಾದರೆ, ಆನಂದ ಮತ್ತು ಶಂಕ್ರ ಸಹಪಾಠಿಗಳು. ಮೂವರೂ ಸದಾ ಆಟೋಟಗಳಲ್ಲಿ  ಜೊತೆಯಾಗಿದ್ದವರು. ಹಿರಿಯವನಾದ ನಂದ ಸ್ವಲ್ಪ ಅಂತರ್ಮುಖಿ. ತಾನಾಯಿತು ತನ್ನ ಪಾಡಾಯಿತು ಅನ್ನುವ ಹಾಗೆ. ಆದರೆ ಆನಂದ ಅಣ್ಣನಿಗೆ ತದ್ವಿರುದ್ಧ. ಸದಾ ಚಟುವಟಿಕೆಯಿಂದ ಇರುವವ. ಎಂತಹ ಕಲ್ಲಿನ ಹೃದಯದವರನ್ನು ಬೇಕಾದರೂ ‌ಮಾತಾನಾಡಿಸಿ ಒಲಿಸಿ‌ ಕೊಳ್ಳುವ ಛಾತಿ‌.  ಎಲ್ಲರೂ ಕಾಲೇಜು ಓದುತ್ತಿರುವ ಸಮಯದಲ್ಲಿ ‌ಆನಂದನ ತಂದೆಯವರು ನಿವೃತ್ತರಾಗಿ ಶಂಕ್ರನ ಮನೆಯ ಪ್ರದೇಶದಿಂದ ಬಹುದೂರಲ್ಲಿ ಸ್ವಂತ ಮನೆಯನ್ನು… Read More ಯಾವ ಹೂವು ಯಾರ ಮುಡಿಗೋ

ಕಿರಿ ಕಿರಿಯೋ ಇಲ್ಲವೇ ಕ್ರಿಕೆಟ್ಟೋ

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ  ಹೊಡೆದ್ದದ್ದಲ್ಲದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಶಿಕ್ಷಣ ಪದ್ದತಿ, ಗುಡಿ ಕೈಗಾರಿಕೆ, ಕೃಷಿ ಮತ್ತು ಹೈನುಗಾರಿಕೆಯನ್ನು ಹಾಳು ಗೆಡವುದರ ಜೊತೆ ಜೊತೆಗೆ ನಮ್ಮ ಜನರಿಗೆ ಅತ್ಯಂತ ಸೋಮಾರೀ ಆಟವಾದ ಕ್ರಿಕೆಟ್ಟನ್ನು ಕಲಿಸಿಕೊಟ್ಟು ಹೋದದ್ದು ನಮ್ಮ ದೇಶದ ಪರಮ ದೌರ್ಭಾಗ್ಯವೇ ಸರಿ.   ಆರಂಭದಲ್ಲಿ  ಕ್ರಿಕೆಟ್ಟನ್ನು  ಬಹಳ ಸಂಭಾವಿತರ ಆಟ ಎಂದೇ ಬಣ್ಣಿಸಲಾಗುತ್ತಿದ್ದರೂ ಇಂದು ಬೆಟ್ಟಿಂಗ್ ದಂಧೆ ಮತ್ತು ಆಟಗಾರರ ಕಳ್ಳಾಟಗಳಿಂದ ಕಳಂಕ ಗೊಂಡಿದೆ.  ಭಾರತ 1983ರ ಪೃಡೆಂಷಿಯಲ್ ವರ್ಲ್ಡ್ ಕಪ್… Read More ಕಿರಿ ಕಿರಿಯೋ ಇಲ್ಲವೇ ಕ್ರಿಕೆಟ್ಟೋ