ಆಭರಣ ಅಂಗಡಿಯ ಅವಾಂತರ

ಅದೊಮ್ಮೆ ಗಂಡ ತನ್ನ ಹೆಂಡತಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ನೆನಪಿನ ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ನೀಡಲು ಹತ್ತಿರದ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದರು. ಸೀರೆ, ಚಿನ್ನದ ಅಂಗಡಿಗಳಿಗೆ ಹೆಂಗಸರೊಂದಿಗೆ ಹೋದರೆ ಆಗಬಹುದಾದ ಸಮಯವೇ ಅಂದೂ ಕೂಡಾ ಆಗಿತ್ತು. ಇದು ತೋರಿಸಿ, ಅದು ತೋರಿಸಿ. ಇಷ್ಟೇ ದುಡ್ದಿನಲ್ಲಿ ಮತ್ತೊಂದು ಡಿಝೈನ್ ತೋರಿಸಿ. ಇದು ಸ್ವಲ್ಪ ದೊಡ್ಡದಾಯ್ತು. ಸ್ವಲ್ಪ ಚಿಕ್ಕದಿದ್ದರೆ ನೋಡಿ. ಇಲ್ಲಾ ಇಲ್ಲ ಇದು ತುಂಬಾನೇ ಚಿಕ್ಕದಾಯ್ತು ನನಗೆ ಸರಿ ಹೊಂದದು ಎಂದು ಹೀಗೇ ಹಾಗೆ ತರತರಹದ ಆಭರಣಗಳನ್ನು… Read More ಆಭರಣ ಅಂಗಡಿಯ ಅವಾಂತರ

ಸಹನೆ

ಇತ್ತೀಚೆಗೆ ಮಗಳನ್ನು ಕಾಲೇಜಿನ ಬಸ್ ಹತ್ತಿಸಲು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ನಿಧಾನವಾಗಿ ಹೋಗುತ್ತಿರುವಾಗ ಎದುರುಗಡೆಯಿಂದ ಮತ್ತೊಂದು ಭಾರೀ ವಾಹನ ಬಂದಾಗ ಸಹಜವಾಗಿಯೇ ರಸ್ತೆಯ ಬದಿಗೆ ಬಂದು ಎದುರುಗಡೆಯ ವಾಹನ ಸರಾಗವಾಗಿ ಹೋಗಲು ಅನುವು ಮಾಡಿಕೊಡುತ್ತಿರುವಾಗಲೇ, ಇದ್ದಕ್ಕಿದ್ದಂತೆಯೇ ಹಿಂದಿನಿಂದ ಜೋರು ಜೋರಾಗಿ ಕರ್ಕಶವಾದ ಹಾರ್ನ್ ಶಬ್ದ ಕೇಳಿಸಿ, ಅರೇ ಇರುವುದಷ್ಟೇ ಜಾಗ ಈಗಾಗಲೇ ರಸ್ತೆಯ ಅಂಚಿನಲ್ಲಿದ್ದೇನೆ. ಇನ್ನೇಷ್ಟು ಪಕ್ಕಕ್ಕೆ ಸರಿಯುವುದು ಎಂದು ಯೋಚಿಸಿ ಎದುರಿನ ವಾಹನ ಹೋದ ನಂತರ ಹಿಂದಿನವರಿಗೆ ಜಾಗ ಬಿಟ್ಟರಾಯಿತು ಎಂದು ನಿರ್ಧರಿಸುತ್ತಿರುವಾಗಲೇ ಕರ್ಕಶವಾದ ಹಾರ್ನ್… Read More ಸಹನೆ

ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್

ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಕನ್ನಡ ಚಿತ್ರರಂಗದ ದಿಗ್ಗಜರು.  ಪ್ರತಿಭಾವಂತರು, ಸುರದ್ರೂಪಿಗಳು ಮೇಲಾಗಿ, ಸ್ವಾಭಿಮಾನಿಗಳು. ಕನ್ನಡ ನಾಡು, ನುಡಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದವರು. ಅವರನ್ನು ಅನುಸರಿಸುವ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದವರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಭೌತಿಕವಾಗಿ ಅವರುಗಳು ನಮ್ಮೊಂದಿಗೆ ಇಂದು ಇಲ್ಲವಾದರೂ, ಅವರು ತಮ್ಮ ಸಿನಿಮಾಗಳ ಮೂಲಕ ಇನ್ನೂ ನೂರಾರು ವರ್ಷಗಳವರೆಗೂ ನಮ್ಮ ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿರುತ್ತಾರೆ ಎನ್ನುವುದಂತೂ ಸತ್ಯ. ಸದಾ ನಮ್ಮ ಹಿರಿಯರನ್ನು  ನೆನೆಸಿಕೊಳ್ಳುವುದು ನಮ್ಮ ಸಂಪ್ರದಾಯದ ಒಂದು… Read More ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್

ಪರಿಸರ ಸ್ನೇಹಿ Green Crackers

ಕಳೆದ ಸೋಮವಾರ News 9 ಆಂಗ್ಲ ಛಾನೆಲ್ಲಿನ ದೀಪಾವಳಿಯಲ್ಲಿ  ಪಟಾಕಿಗಳಿಂದ ಪರಿಸರಕ್ಕಾಗುವ ಪರಿಣಾಮಗಳ ಬಗ್ಗೆ ನಡೆದ ವಿಶೇಷ ನೇರ ಪ್ರಸಾರದ ಚರ್ಚೆಯಲ್ಲಿ ನಾನು ಪಾಲ್ಗೊಂಡಿದ್ದ  ಸಂಧರ್ಭದಲ್ಲಿ ವಾರ್ತಾವಾಚಕಿ ಪದೇ ಪದೇ Green Crackers ಬಗ್ಗೆ ಏನಾದರೂ ಯೋಚಿಸಬಹುದೇ ಎಂದು ಕೇಳುತ್ತಿದ್ದಾಗ ನನ್ನಲ್ಲೂ ಕುತೂಹಲ ಮೂಡಿತ್ತು.  ಹೇಳಿ ಕೇಳಿ ದೀಪಾವಳಿ ಬೆಳಗಿನ ಹಬ್ಬ. ಇಲ್ಲಿ ಶಬ್ಧ ಮತ್ತು ಪ್ರಕಾಶಮಾನಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಅಂತಹ ಶಬ್ಧ ಮತ್ತು ಬೆಳಕನ್ನು ಪರಿಸರ ಸ್ನೇಹಿಯಾಗಿ ಹೇಗೆ ಮಾಡಬಹುದು ಎಂದು ಯೋಚಿಸುತ್ತಿರುವಾಗ ನೆನ್ನೆ  ನಡೆದ… Read More ಪರಿಸರ ಸ್ನೇಹಿ Green Crackers

Nation First Everything Next

ಒಂದನೊಂದು ಊರಿನ ಪಕ್ಕದಲ್ಲಿ ಒಂದು ದೊಡ್ಡ ಕಾಡು ಇತ್ತು. ಆ ಕಾಡಿನ ಒಂದು ದೊಡ್ಡ ಮರವೊಂದರಲ್ಲಿ ಹಲವಾರು ಪಕ್ಷಿಗಳು ಸುಖವಾಗಿ ವಾಸಮಾಡಿ ಕೊಂಡಿದ್ದವು. ಅಂತಹ ಪಕ್ಷಿಗಳ ಸಂಕುಲಗಳಲ್ಲಿ ಒಂದು ಗಂಡುಬೇರುಂಡ ಪಕ್ಷಿಯೂ ಇತ್ತು. ಎಲ್ಲರಿಗೂ ತಿಳಿದಿರುವಂತೆ ಗಂಡುಬೇರುಂಡ ಪಕ್ಷಿಗೆ ಒಂದೇ ದೇಹ ಎರಡು ತಲೆಗಳು ಇರುತ್ತಿದ್ದವು. ಈಗ ಈ ಪಕ್ಷಿಗಳು ನಶಿಸಿ ಹೋಗಿರುವುದರಿಂದ ಅದರ ಜ್ಣಾಪಕಾರ್ಥವಾಗಿ ನಮ್ಮ ರಾಜ್ಯದ ಅಧಿಕೃತ ಲಾಂಛನದ ಮಧ್ಯಭಾಗದಲ್ಲಿ ಗಂಡುಬೇರುಂಡ ಪಕ್ಷಿಯನ್ನು ಅಳವಡಿಸಿಕೊಂಡಿದ್ದಾರೆ. ಇಂತಹ ಗಂಡುಬೇರುಂಡ ಪಕ್ಷಿಯು ಇತರೇ ಪಕ್ಷಿಗಳಂತೆ ಕಾಡಿನಲ್ಲಿದ್ದ ಹಲವಾರು… Read More Nation First Everything Next

ವೃಕ್ಷೋರಕ್ಷತಿ ರಕ್ಷಿತಃ

ನಮ್ಮ ಹಿರಿಕರು ಒಂದು ಗಾದೆಯನ್ನು ಹೇಳುತ್ತಿದ್ದರು. ತೆಂಗಿನ ಮರ ಕಲ್ಪವೃಕ್ಷ.  ಅದನ್ನು ಏಳು ವರ್ಷಗಳ ಕಾಲ  ಕಾಪಾಡಿ ಬೆಳೆಸು ಅದು ನಿನ್ನನ್ನು ಎಪ್ಪತ್ತು ವರ್ಷ ಕಾಪಾಡುತ್ತದೆ. ಹೌದು ಇದು ಅಕ್ಷರಶಃ ಸತ್ಯವಾದ ಮಾತು.  ಇಂದಿನ ಕಾಲದಲ್ಲಿ  ಮನೆಯ ಮುಂದೆ ಒಂದು ತೆಂಗಿನಮರ ಇದ್ದರೆ ಸಾಕು. ಅದು ಸಾಕಾಷ್ಟು ಆಮ್ಲಜನಕ ಉತ್ಪತ್ತಿ ಮಾಡುವುದಲ್ಲದೆ, ಕುಡಿಯಲು ಎಳನೀರು, ದೇವರ ಪೂಜೆಗೆ ಮತ್ತು ಅಡುಗೆಗೆ ತೆಂಗಿನ ಕಾಯಿ, ಉರುವಲಾಗಿ ತೆಂಗಿನಕಾಯಿಯ ಸಿಪ್ಪೆ, ಚೆಪ್ಪು ಹೆಡೆಮಟ್ಟೆ ಉರುವಲುಗಳಿಗಾದರೆ, ತೆಂಗಿನ ಗರಿಯನ್ನು ಶುಭಾಸಮಾರಂಭಗಳಲ್ಲಿ ಚಪ್ಪರಕ್ಕೆ… Read More ವೃಕ್ಷೋರಕ್ಷತಿ ರಕ್ಷಿತಃ

ಕೆಜಿಎಫ್-2

ಅದೊಮ್ಮೆ ಒಬ್ಬ ತಂದೆ ತನ್ನ ಮಕ್ಕಳೊಂದಿಗೆ ಪ್ರಾಣಿಸಂಗ್ರಹಾಲಯಕ್ಕೆ ಹೋಗಿರುತ್ತಾರೆ. ಆಲ್ಲಿ ಬಗೆ ಬಗೆ ಭಯಾನಕ, ಸಾಧು ಪ್ರಾಣಿಗಳು, ಪಶು ಪಕ್ಷಿಗಳು, ಸರಿಸೃಪಗಳು ಹೀಗೆ ಎಲ್ಲವನ್ನೂ ಗೂಡಿನಲ್ಲೋ‍, ಪಂಜರದೊಳಗೂ ಇಲ್ಲವೇ ಗಟ್ಟಿಯಾಗಿ ಬಂಧಿಸಲ್ಪಟ್ಟಂತೆ ನೋಡಿಕೊಂಡು ಬರುವಾಗ ಮತ್ಯಾಲಯದ ಬಳಿ ಬಂದು ಅಲ್ಲಿ ವಿಧ ವಿಧ ರೂಪದ ಬಣ್ಣ ಬಣ್ಣದ ಮೀನುಗಳನ್ನು ಕಣ್ತುಂಬ ನೋಡಿ ಆನಂದಿಸುತ್ತಿರುವಾಗ ಒಂದು ತೆರೆದ ಗಾಜಿನ ದೊಡ್ಡ ಬೋಗುಣಿಯಲ್ಲಿರುವ ಏಡಿಗಳನ್ನು ನೋಡಿ ಆಶ್ವರ್ಯ ಚಕಿತರಾಗಿ, ಅಪ್ಪಾ ಇಲ್ನೋಡಿ ಎಲ್ಲಾ ಪ್ರಾಣಿ ಪಕ್ಷಿಗಳು ತಪ್ಪಿಸಿಕೊಂಡು ಹೋಗದಂತೆ ಒಂದಲ್ಲಾ… Read More ಕೆಜಿಎಫ್-2

ಕೆಜಿಎಘ್-1

ಕೆಜಿಎಘ್ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯಂತ ವಿಶೇಷವಾಗಿ ಮತ್ತು ರೋಚಕಚಾಗಿ ಚಿತ್ರಿಕರಣವಾಗಿದೆ ಮತ್ತು ಬಿಡುಗಡೆಯ ಮುಂಚೆಯೇ ಪ್ರಪಂಚಾದ್ಯಂತ ಸದ್ದು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಡೀ ಚಿತ್ರತಂಡ ಸುಮಾರು ಎರಡು ಮೂರು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ ಪರಿಶ್ರಮ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟೀಸರ್ನಲ್ಲಿ ನೋಡಬಹುದಾಗಿದೆ.  ಕನ್ನಡದ ಹುಡುಗರೂ ಈ ರೀತಿಯಾಗಿ ಹಾಲಿವುಡ್ ಚಿತ್ರಗಳಿಗೆ ಸರಿಸಮನಾಗಿ ನಿಲ್ಲಬಲ್ಲಂತಹ ಚಿತ್ರಗಳನನ್ನು ಮಾಡಬಹುದು ಎಂದು ಜಗತ್ತಿಗೆ ತೋರಿಸಿರುವುದು ಮತ್ತು ಅದನ್ನು  ಈಗಾಗಲೇ ಚಲಚಿತ್ರ ರಂಗದ ನಾನಾ… Read More ಕೆಜಿಎಘ್-1

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ

ಅದೋಂದು ಗಿಜಿ ಗಿಜಿಯಿಂದ ವಕೀಲರು ಮತ್ತು ಕಕ್ಷೀದಾರರಿಂದ  ತುಂಬ್ಬಿದ್ದ  ನ್ಯಾಯಾಲಯ. ಅಲ್ಲೋಂದು ಕಳ್ಳತನದ ವಿಚಾರಣೆ ನಡೆದು ಅಂತಿಮ ತೀರ್ಮಾನ ನೀಡುವ ಸಂದರ್ಭವಾಗಿತ್ತು.  ವಾದ ಪ್ರತಿವಾದಗಳನ್ನೆಲ್ಲ  ಕೇಳಿ ಮುಗಿಸಿದ ನ್ಯಾಯಾಧೀಯರಿಗೆ ಆರೋಪಿ ತಪ್ಪು ಮಾಡಿರುವುದು ಸಾಭೀತಾಗಿ ಅವನಿಗೆ ಕಠಿಣ ಶಿಕ್ಷೆಯನ್ನು ವಿಧಿಸಿದ ನಂತರ ಆರೋಪಿಯತ್ತ ನೋಡಿ ಇನ್ನೆನಾದರೂ ಹೇಳಬೇಕಾಗಿದೆಯೇ ಎಂದು ವಿಚಾರಿಸಿದಾಗ, ಅದಕ್ಕಾಗಿಯೇ ಬಕ ಪಕ್ಷಿಂತೆ ಕಾಯುತ್ತಿದ್ದ ಆರೋಪಿ ನನ್ನ ತಾಯಿಯವರನ್ನು ಒಮ್ಮೆ ಮಾತನಾಡಿಸಲು ಅವಕಾಶ ಕೊಡಿ. ಅವರ ಬಳಿ ಮಾತಾನಾಡಿದ ನಂತರ ನೀವು ಹೇಳಿದ ಶಿಕ್ಷೆಯನ್ನು ಸಂತೋಷದಿಂದ… Read More ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ