ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ… ಎಂದು ಗೊಣಗುತ್ತಾ ಅಗ್ಗಾಗ್ಗೆ… Read More ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ತಂಗಳನ್ನ

ಸಾಮನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಬೆಳಗ್ಗೆ ಶುಚಿರುಚಿಯಾಗಿ ಅವರ ಕುಟುಂಬಕ್ಕೆ ಅವಶ್ಯಕತೆ ಇದ್ದಷ್ಟು ಅಡುಗೆಗಳನ್ನು ಮಾಡಿಕೊಂಡು ಬಿಸಿ ಬಿಸಿಯಾಗಿ ತಿನ್ನಲು ಬಯಸುತ್ತಾರೆ. ಎಷ್ಟೇ ಕಟ್ಟೆಚ್ಚೆರ ವಹಿಸಿದರೂ ಬಹುತೇಕ ಎಲ್ಲರ ಮನೆಗಳಲ್ಲಿಯೂ ಮಾಡಿದ ಆಹಾರ ಮಿಕ್ಕಿಬಿಡುತ್ತದೆ. ಹಾಗೆ ಮಿಕ್ಕಿ ಹೋದ ಆಹಾರವನ್ನು ತಂಗಳು ಆಹಾರ ಎಂದು ಅದನ್ನು ಮಾರನೆಯ ದಿನ ಉಪಯೋಗಿಸಿದೇ ಅದನ್ನು ಹೊರಗೆ ಚೆಲ್ಲುವ ಇಲ್ಲವೇ ಮನೆಯ ಸಾಕುಪ್ರಾಣಿಗಳಿಗೆ ಹಾಕುವ ಪದ್ದತಿಯು ಎಲ್ಲ ಕಡೆಯಲ್ಲಿಯೂ ರೂಢಿಯಲ್ಲಿದೆ. ಇನ್ನೂ ಕೆಲವರು ಆ ರೀತಿಯಾಗಿ ಚೆಲ್ಲಲು ಮನಸ್ಸು ಬಾರದೇ ಮಾರನೆಯ ದಿನ… Read More ತಂಗಳನ್ನ