ಹುಸ್ಕೂರು ಮದ್ದೂರಮ್ಮ ಜಾತ್ರೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು… Read More ಹುಸ್ಕೂರು ಮದ್ದೂರಮ್ಮ ಜಾತ್ರೆ

ಗೋವು ಕಳ್ಳರು

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ… Read More ಗೋವು ಕಳ್ಳರು

ಕಾರ ಹುಣ್ಣಿಮೆ

ನವರಾತ್ರಿಯಲ್ಲಿ ಆಯುಧಗಳಿಗೆ ಪೂಜೆ ಮಾಡುವಂತೆ, ಜೇಷ್ಠ ಮಾಸದ ಹುಣ್ಣಿಮೆಯಂದು ಉತ್ತರ ಕರ್ನಾಟಕದ ರೈತಾಪಿ ಜನರು ಮಳೆಗಾಲದ ಮುಂಚೆ ಸಡಗರ ಸಂಭ್ರಮಗಳಿಂದ ತಮ್ಮ ದನ ಕರುಗಳೊಂದಿಗೆ ಆಚರಿಸುವ ಕಾರಹುಣ್ಣಿಮೆಯ ಬಗ್ಗೆ ಸವಿರವಾದ ವಿವರಗಳು ಇದೋ ನಿಮಗಾಗಿ… Read More ಕಾರ ಹುಣ್ಣಿಮೆ