ಕಣ್ಣೀರು ಸುರಿಸುವ ಅಂಜನೇಯ

ಸಾಮಾನ್ಯವಾಗಿ ಮನುಷ್ಯರು ಸಂತೋಷ ಮತ್ತು ದುಃಖವನ್ನು ವ್ಯಕ್ತ ಪಡಿಸುವ ಸಲುವಾಗಿ ಕಣ್ಣೀರು ಸುರಿಸುವುದು ಸಹಜ.ಪ್ರಕ್ರಿಯೆಯಾಗಿದೆ. ಬೆಂಗಳೂರಿನ ದೇವಸ್ಥಾನವೊಂದರ ಆಂಜನೇಯಸ್ವಾಮಿ ವರ್ಷಕ್ಕೊಮ್ಮೆ ಕಣ್ಣೀರು ಸುರಿಸುವ ಆಶ್ಚರ್ಯಕರವಾದ ಸಂಗತಿಯ ಬಗ್ಗೆ ತಿಳಿದು ಕೊಳ್ಳೋಣ. ಬಾಣಸವಾಡಿ ಬೆಂಗಳೂರಿನ ಈಶಾನ್ಯಕ್ಕೆ ನಗರದ ಕೇಂದ್ರದಿಂದ ಸುಮಾರು 6-8 ಕಿ.ಮೀ ದೂರದಲ್ಲಿದ್ದು ಈ ಹಿಂದೆ ಚಿಕ್ಕ ಬಾಣಸವಾಡಿ ಮತ್ತು ದೊಡ್ಡ ಬಾಣಸವಾಡಿ ಎಂಬ ಎರಡು ಗ್ರಾಮಗಳು ಇದ್ದವು. ಹೆಚ್ಚಾಗುತ್ತಿರುವ ನಗರೀಕರಣದಿಂದ ಈ ಎರಡೂ ಹಳ್ಳಿಗಳೂ ಕಣ್ಮರೆಯಾಗಿ ಕೇವಲ ದೊಡ್ಡ ಬಾಣಸವಾಡಿ ಎಂಬ ಸುಸಜ್ಜಿತವಾದ ಬಡಾವಣೆಯು ಇಂದು… Read More ಕಣ್ಣೀರು ಸುರಿಸುವ ಅಂಜನೇಯ

ನೀರು, ಕಣ್ಣೀರು

ಕೆಲ ವರ್ಷಗಳ ಹಿಂದೆ ಹೊರಗೆಲ್ಲೋ ಹೋಗಿದ್ದಾಗ ಬಾಯರಡಿಕೆಯಾದಾಗ, ಸೀದಾ ಯಾವುದಾದರೂ ಹೋಟೆಲ್ಗಳಿಗೆ ಹೋಗಿ ಯಾರನ್ನೂ ಕೇಳದೇ ನೀರನ್ನು ಕುಡಿದು ಬರಬಹುದಾಗಿತ್ತು. ಅದೇ ರೀತಿ ಯಾವುದೇ ಅಪರಿಚಿತರ ಮನೆಯ ಕದವನ್ನು ತಟ್ಟಿ ಕುಡಿಯಲು ನೀರನ್ನು ಕೇಳಿದರೆ, ನಿಸ್ಸಂಕೋಚವಾಗಿ ನೀರನ್ನು ಕೊಡುತ್ತಿದ್ದರು. ಇನ್ನೂ ಕೆಲವರ ಮನೆಯವರು ನೀರಿನ ಜೊತೆ ಬೆಲ್ಲವನ್ನೂ ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅದೂ ಇಲ್ಲದೇ ಹೋದಲ್ಲಿ, ಅನೇಕ ಸಂಘಸಂಸ್ಥೆಗಳು ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಅರವಟ್ಟಿಕೆಗಳನ್ನು ಸ್ಥಾಪಿಸಿ ಎಲ್ಲರ ನೀರಡಿಕೆಯನ್ನು ನೀಗಿಸುತ್ತಿದ್ದರು. ಆದರೆ ಇಂದು ಅವೆಲ್ಲವೂ… Read More ನೀರು, ಕಣ್ಣೀರು