ಅರ್ಥಪೂರ್ಣ ಮಹಿಳಾ ದಿನಾಚರಣೆ

ಮಾರ್ಚ್ 8 ರಂದು ವಿಶ್ವಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಿಸಿಕೊಂಡು ಬರಲಾಗುತ್ತದೆ. ಇದೇ ಅಂಗವಾಗಿ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಇರುವ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಸಹಾ ಕಳೆದ ಕೆಲವು ವರ್ಷಗಳಿಂದಲೂ ನಮ್ಮ ನಿಮ್ಮೆಲ್ಲರ ನಡುವೆಯೇ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕಿಯರ ಸಾಧನೆಯನ್ನು ಗುರುತಿಸಿ ಅವರ ಸಾಧನೆಗಳು ಮತ್ತಷ್ಟು ಮಗದಷ್ಟು ಹೆಚ್ಚಾಗಲಿ ಎಂದು ಅವರಿಗೆ ಗೌರವ ಸಲ್ಲಿಸಿಕೊಂಡು ಬರುತ್ತಿದೆ. ಈ ಬಾರಿ ಯಲಹಂಕ ವಿಭಾಗದ ಆರೋಗ್ಯಭಾರತಿ ಸಹಯೋಗದೊಂದಿಗೆ ದಿನಾಂಕ 13-3-2022 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ… Read More ಅರ್ಥಪೂರ್ಣ ಮಹಿಳಾ ದಿನಾಚರಣೆ

ಕಲ್ಲಿನ ಮರಗಿ

ಮನುಷ್ಯ ಸಂಘಜೀವಿ. ಹಾಗಾಗಿ ತನ್ನೊಂದಿಗೆ ಜೀವಿಸಲು ಸಂಗಾತಿಯನ್ನು ಹುಡುಕಿಕೊಂಡ ನಂತರ ಹೊಟ್ಟೆ ಪಾಡಿಗೆ ಗೆಡ್ಡೆ ಗೆಣಸುಗಳನ್ನು ಮತ್ತು ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವಿಸತೊಡಗಿದ. ಯಾವಾಗ ಕಲ್ಲಿಗೆ ಕಲ್ಲನ್ನು ಉಜ್ಜಿ ಘರ್ಷಣೆಯಿಂದ ಬೆಂಕಿ ಹೊತ್ತಿಸುವುದನ್ನು ಕಲಿತುಕೊಂಡನೋ ಅಂದಿನಿಂದ ತನ್ನ ಗೆಡ್ಡೆ ಗೆಣಸು ಗಳನ್ನು ಮತ್ತು ಮಾಂಸಗಳನ್ನು ಸುಟ್ಟು ತಿನ್ನುವುದನ್ನು ಕಲಿತ. ತನ್ನ ಆತ್ಮರಕ್ಷಣೆಗಾಗಿ ಮತ್ತು ತಮ್ಮ ಆಹಾರದ ಬೇಟೆಗಾಗಿ ಕಲ್ಲಿನ ಆಯುಧಗಳನ್ನು ತಯಾರಿಸಿಕೊಳ್ಳುವುದನ್ನು ಕಲಿತುಕೊಂಡ. ಆಹಾರವನ್ನು ಅರೆಯಲು, ಕುಟ್ಟಲು, ಪುಡಿ ಮಾಡಲು ರುಬ್ಬುವ ಗುಂಡು, ಒರಳು ಮತ್ತು ಬೀಸೋಕಲ್ಲುಗಳನ್ನು… Read More ಕಲ್ಲಿನ ಮರಗಿ