ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ

ಉಡುಪಿಯ ಕುಂದಾಪುರದ ಬಳಿ ಕಾಂತಾರ ಚಿತ್ರ ಚಿತ್ರೀಕರಣವಾದ ಕೆರಾಡಿಯ ಸಮೀಲದಲ್ಲೇ ಸುಂದರ ಪ್ರಕೃತಿತಾಣದ ಮಧ್ಯೆ, ಗುಹೆಯಲ್ಲಿ ಜಲಾವೃತದ ಮಧ್ಯೆ ವಿರಾಜಮಾನವಾಗಿರುವ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ನ ದರ್ಶನವನ್ನು ಮಾಡಿಕೊಂಡು ಬರೋಣ ಬನ್ನಿ.… Read More ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ

ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ವಯಸ್ಸು 80+ ಎಲ್ಲಾ ರೀತಿಯ ರಾಜಕೀಯ ಅಧಿಕಾರವನ್ನೂ ಸವಿದ ನಂತರ, ಈಗ ಸ್ವತಂತ್ರವಾಗಿ ನಡೆಯಲಾಗದೇ, ಸ್ಪಷ್ಟವಾಗಿ ಮಾತನಾಡಲಾಗದೇ, ಡೈಪರ್ ಹಾಕಿಕೊಂಡು ವೀಲ್ ಛೇರ್ ಮೇಲೆ ಕುಳಿತು ಕೊಳ್ಳುವವರೆಲ್ಲಾ ಇನ್ನೂ ಅಧಿಕಾರದ ಆಸೆಯಿಂದಾಗಿ ಸಕ್ರೀಯ ಚುನಾವಣಾ ರಾಜಕಾರಣ ಮಾಡುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಅಧಿಕಾರಕ್ಕೆ ತರುವುದಕ್ಕೇ ಒದ್ದಾಡುತ್ತಿರುವವರಿಗೆ, ಐದು ಬಾರಿ ಜನಪ್ರಿಯ ಶಾಸಕರಾಗಿಯೂ ಮಂತ್ರಿಗಿರಿಗೆ ಲಾಭಿಯನ್ನು ನಡೆಸದೇ ತಮ್ಮ 72ನೇ ವಯಸ್ಸಿನಲ್ಲಿಯೇ ಸ್ವಯಂಪ್ರೇರಿತರಾಗಿ ಸಕ್ರೀಯ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವ ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿರ್ಧಾರ ಮೇಲ್ಪಂಕ್ತಿ ಆಗಬೇಕು ಅಲ್ವೇ?… Read More ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ಹನಿಗವನ ಚಕ್ರವರ್ತಿ ಎಚ್. ಡುಂಡಿರಾಜ್

ತಮ್ಮ ಹನಿಗವನಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತವಾಗಿರುವ ಶ್ರೀಯುತ ಎಚ್. ಡುಂಡಿರಾಜ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಯ ಪರಿಚಯ ಇದೋ ನಿಮಗಾಗಿ… Read More ಹನಿಗವನ ಚಕ್ರವರ್ತಿ ಎಚ್. ಡುಂಡಿರಾಜ್

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಶ್ರೀಕ್ಷೇತ್ರ ಕಮಲಶಿಲೆ

ಕುಂದಾಪುರದಿಂದ ಸುಮಾರು 35 ಕಿ.ಮೀ. ಸಿದ್ದಾಪುರದಿಂದ 6 ಕಿ.ಮೀ, ಕೊಲ್ಲೂರಿನಿಂದ ಸುಮಾರು 40 ಕಿ.ಮೀ. ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಸ್ಥಾನವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ನದಿಗಳ ಸಂಗಮ ಕ್ಷೇತ್ರವಾಗಿದೆ. ಇಲ್ಲಿ ದುರ್ಗಾದೇವಿ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ ಎಂಬ ಪ್ರತೀತಿಯಿದೆ. ದೇವಾಲಯದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ.… Read More ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಶ್ರೀಕ್ಷೇತ್ರ ಕಮಲಶಿಲೆ