ಮಧುಗಿರಿ ಏಕಶಿಲಾ ಬೆಟ್ಟ

ಕರ್ನಾಟಕ ರಾಜ್ಯವು ಪ್ರಕೃತಿ ಸೌಂದರ್ಯಗಳಿಗೆ ಮತ್ತು ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ತಾಣವಾಗಿದ್ದು ಇಲ್ಲಿನ ರಮಣೀಯ ಪ್ರಕೃತಿತಾಣಗಳು ದೇಶವಿದೇಶದ ಪ್ರವಾಸಿಗರನ್ನು ಚಾರಣಿಗರನ್ನು ಕೈಬೀಸಿ ಕರೆಯುತ್ತಲಿರುತ್ತದೆ. ತುಮಕೂರು ಜಿಲ್ಲೆಗೆ ಸೇರಿರುವ ಮಧುಗಿರಿಯ ಏಕಶಿಲಾ ಬೆಟ್ಟವೂ ಸಹಾ ಅಂತಹದದ್ದೇ ಒಂದು ಸುಂದರ ರಮಣೀಯವಾದ ಪ್ರದೇಶವಾಗಿದ್ದು, ವಾರಾಂತ್ಯದಲ್ಲಿ ಆ ಬೆಟ್ಟವನ್ನು ನೋಡಲು/ಏರಲು ಸಹಸ್ರಾರು ಚಾರಣಿಗರು ಬರುವಂತಹ ಪ್ರದೇಶವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 102 ಕಿ.ಮೀ. ಮತ್ತು ಜಿಲ್ಲಾ ಕೇಂದ್ರ ತುಮಕೂರಿನಿಂದ 43 ಕಿ.ಮೀ. ಕೊರಟಗೆರೆಯಿಂದ 18, ಕಿ.ಮಿ. ಮತ್ತು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಗುವ… Read More ಮಧುಗಿರಿ ಏಕಶಿಲಾ ಬೆಟ್ಟ

ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ

ಪ್ರಪಂಚದಲ್ಲಿ ಹೆಣ್ಣನ್ನು ಪರಮಪೂಜ್ಯಳೆಂದು ಗೌರವಿಸುವ  ಯಾವುದಾದರೂ ದೇಶದಲ್ಲಿ ಅದು ಖಂಡಿತವಾಗಿಯೂ ನಮ್ಮ ಭಾರತದೇಶ ಎಂದು ಹೆಮ್ಮೆಯಾಗಿ ಹೇಳಬಹುದು. ಅದಕ್ಕಾಗಿಯೇ ನಮ್ಮ ಪೂರ್ವಜರು ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ |  ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ || ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ. ಅದೇ ರೀತಿ ಎಲ್ಲಿ  ಸ್ತ್ರೀಯರನ್ನು ದೂಷಣೆ ಮಾಡುತ್ತರೋ ಅಲ್ಲಿ ಸಮಾಜವು ನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಿಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿ… Read More ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ

ಕೋತಿ ರಾಜ್ ಉರ್ಫ್ ಜ್ಯೋತಿರಾಜ್

ಜೀವಶಾಸ್ತ್ರದಲ್ಲಿ ನಾವೆಲ್ಲರೂ ಓದಿದಂತೆ ಮಂಗನಿಂದ ಮಾನವನಾಗಿ ಪರಿವರ್ತನೆಯಾದ ಎಂದು ಕೇಳಿದ್ದೇವೆ. ಅದಕ್ಕೆ ಪುರಾವೆ ಎನ್ನುವಂತೆ ಇಲ್ಲೊಬ್ಬ ಮನುಷ್ಯ ಅಕ್ಷರಶಃ ಮಂಗನಂತೆ ಚಂಗನೆ ಒಂದು ಕೆಡೆಯಿಂದ ಮತ್ತೊಂದು ಕಡೆಗೆ ಹಾರುತ್ತಾ ಎತ್ತೆರತ್ತರದ ಯಾವುದೇ ಅಸರೆ ಇಲ್ಲದ ಬಂಡೆಗಳನ್ನು ಯಾವುದೇ ಅಥವಾ ಯಾರದ್ದೇ ಸಹಾಯವಿಲ್ಲದೇ ಏರುತ್ತಾ ಇಳಿಯುತ್ತಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆಗಳನ್ನು ಮಾಡಿರುವ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಅವರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಸಂದರ್ಶನವೊಂದರಲ್ಲಿ ಜ್ಯೋತಿರಾಜ್ ಅವರೇ ಹೇಳಿದಂತೆ ಅವರು ಮೂಲತಃ ತಮಿಳುನಾಡಿನವರು. 1988 ಆಗಸ್ಟ್ 15… Read More ಕೋತಿ ರಾಜ್ ಉರ್ಫ್ ಜ್ಯೋತಿರಾಜ್