ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಅಂದು ಮಗುವನ್ನು ಆಡಿಸುವ ರೂಪದಲ್ಲಿ ಬಾಲ ಕೃಷ್ಣನನ್ನೇ ಕೊಲ್ಲಲು ಬಂದಿದ್ದ ಪೂತನಿಯ ಜಾಗದಲ್ಲಿ ಇಂದು ಹಸುಗೂಸು ಎಂದೂ ನೋಡದೇ, ತಮ್ಮ ಕಾಮದ ತೃಷೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕಾಮಾಂಧರು ಹೆಚ್ಚಾಗಿದ್ದಾರೆ. ಪರಿಚಿತ/ಅಪರಿಚಿತ ಸಣ್ಣವರು/ದೊಡ್ಡವರು ಎಂದು ನೋಡದೇ, ಪುಟ್ಟ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಬುದ್ಧ ಲೇಖನ ಇದೋ ನಿಮಗಾಗಿ… Read More ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಬಲರಾಮ ಜಯಂತಿ

ದ್ವಾಪರ ಯುಗದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಕಥೆಯಾದರೂ ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನು ಅತ್ಯಂತ್ಯ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ. ಒಂದು ರೀತಿ ಅತನೇ ಸೂತ್ರಧಾರಿಯಾಗಿ ಉಳಿದವರೆಲ್ಲರೂ ಆತ ಆಡಿಸಿಸಂತೆ ಆಡುವ ಪಾತ್ರಧಾರಿಗಳಂತೆ ಕಾಣುತ್ತಾರೆ ಎಂದರೂ ತಪ್ಪಾಗದು. ಮಹಾವಿಷ್ಣುವಿನ ದಶಾವತಾರದಲ್ಲಿ ಕೃಷ್ಣನದ್ದು 8ನೇ ಅವತಾರವಾದರೆ, ಅವರನ ಅಣ್ಣನಾಗಿ ಸದಾಕಾಲವೂ ಬೆಂಗಾವಲಾಗಿ ಬಲರಾಮನು ಇದ್ದೇ ಇರುತ್ತಾನೆ. ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನಿಗೆ ಆತನ ತಂಗಿ ದೇವಕಿಯ ಎಂಟನೇ ಸಂತಾನನಿಂದಲೇ ಅಂತ್ಯವಾಗುವನೆಂಬ ಅಶರೀರವಾಣಿಯ ಮಾತನ್ನು ಕೇಳಿದ ನಂತರ ಆತ… Read More ಬಲರಾಮ ಜಯಂತಿ

ಶ್ರೀ ಕೃಷ್ಣನ ತಂಗಿ ಯೋಗಮಾಯ

ಉಗ್ರಸೇನ ಎಂಬ ಪರೋಪಕಾರಿ ರಾಜನು ಮಥುರಾ ರಾಜ್ಯವನ್ನು ಆಳುತ್ತಿರಲು ಅತನ ಮಗನಾದ ಕಂಸನೇ ತನ್ನ ತಂದೆಯಿಂದ ಸಿಂಹಾಸನವನ್ನು ಕಸಿದುಕೊಂಡಿದ್ದಲ್ಲದೇ ಪ್ರಜಾಪೀಡಿತನಾಗಿದ್ದ. ಈತನ ದಬ್ಬಾಳಿಕೆಯನ್ನು ಹೇಗಾದರೂ ಪರಿಹಸಲೇ ಬೇಕೆಂದು ಜನ ಭಗವಂತನಲ್ಲಿ ಮೊರೆ ಹೋದಾಗ ಈತನನ್ನು ಸಂಹರಿಸಲು ಸಾಕ್ಷಾತ್ ವಿಷ್ಣು, ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಜನ್ಮ ತಳೆಯುವುದಾಗಿ ಭರವಸೆ ಕೊಟ್ಟಿದ್ದಲ್ಲದೇ, ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿಯೇ ಮಹಾ ವಿಷ್ಣು ಕೃಷ್ಣನಾಗಿ ಭೂಮಿಗೆ ಬರುವ ಮೊದಲು ವಿಷ್ಣುವಿನ ಆಸನವಾದ ಆದಿಶೇಷನು ವಾಸುದೇವ ಮತ್ತು ರೋಹಿಣಿ ದಂಪತಿಗಳಿಗೆ ಬಲರಾಮನ… Read More ಶ್ರೀ ಕೃಷ್ಣನ ತಂಗಿ ಯೋಗಮಾಯ

ಶ್ರೀ ಕೃಷ್ಣ ಜನ್ಮಾಷ್ಟಮಿ, ಕೃಷ್ಣಂ ವಂದೇ ಜಗದ್ಗುರುಂ

ಶ್ರಾವಣ ಬಹುಳ ಅಷ್ಟಮಿಯಂದು ಆಚರಿಸಲ್ಪಡುವ ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬದ ವೈಶಿಷ್ಠ್ಯಗಳೇನು? ದೇಶಾದ್ಯಂತ ಎಲ್ಲೆಲ್ಲಿ ಹೇಗೆಲ್ಲಾ ಹಬ್ಬವನ್ನು ಆಚರಿಸಲಾಗುತ್ತದೆ? ಶ್ರೀ ಕೃಷ್ಣನ ಜನ್ಮದಿನವನ್ನು ಎರಡು ವಿಭಿನ್ನ ದಿನಗಳಲ್ಲಿ ಏಕೆ ಆಚರಿಸುತ್ತಾರೆ? ಈ ಆಧುನಿಕ ಯುಗದಲ್ಲೂ ಶ್ರೀ ಕೃಷ್ಣ ಹೇಗೆಲ್ಲಾ ಪ್ರಸ್ತುತನಾಗುತ್ತಾನೆ? ಎಂಬೆಲ್ಲಾ ಕುತೂಹಲಕಾರಿ ಸಂಗ್ರಹ ಯೋಗ್ಯ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೃಷ್ಣ ಜನ್ಮಾಷ್ಟಮಿ, ಕೃಷ್ಣಂ ವಂದೇ ಜಗದ್ಗುರುಂ