ಸಿದ್ದು ನಿಮಗೆ ವಯಸ್ಸಾಯ್ತು.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ವಿಜಯನಗರ ಜಿಲ್ಲೆಗೆ ಹೋಗಿದ್ದ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಪ್ಯಾಡಿನಲ್ಲಿ ಕಾರನ್ನು ಹತ್ತುವಾಗ ದಿಢೀರ್ ಎಂದು ಕುಸಿದು ಬಿದ್ದು ಕೆಲ ಕಾಲ ಆಂತಕವನ್ನು ಮೂಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಲ್ಲಾ ಅಧಿಕಾರವನ್ನೂ ಸವಿದಿರುವ ಸಿದ್ದರಾಮಯ್ಯನವರ ದೇಹ ಈ ಘಟನೆಯ ಮುಖಾಂತರ ತನಗೆ ವಿಶ್ರಾಂತಿ ಅವಶ್ಯಕತೆ ಎಂದು ಸ್ಪಷ್ಟವಾಗಿ ತಿಳಿಸುತ್ತಿರುವುದನ್ನು ವರುಣಾ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ತಾರೆ ಅಲ್ವೇ?
Read More ಸಿದ್ದು ನಿಮಗೆ ವಯಸ್ಸಾಯ್ತು.

ಶ್ರೀರಾಮ ನವಮಿ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದಿವಿ ಇದೇನು ಹೊಸಾ ಶ್ರೀರಾಮ ನವಮಿ ಸ್ಟ್ರೈಕ್ ಅಂತಾ ಯೋಚನೆ ಮಾಡ್ತಿರ್ತೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಇದುವರೆಗೂ ಯಾರಿಗೂ ಹೇಳಿದಿದ್ದ ಶ್ರೀರಾಮ ನವಮಿ ಸ್ಟ್ರೈಕ್ ಅಂತಹ ರೋಚಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ. ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಗ ತಾನೆ ಶುರುವಾಗಿದ್ದ ಸ್ಟಾರ್ಟಪ್ ಕಂಪನಿಯೊಂದರ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ. ಭಾರತೀಯರೊಬ್ಬರೇ ಅಮೇರಿಕಾದಲ್ಲಿ ಆರಂಭಿಸಿದ ಕಂಪನಿಯೊಂದರ ಶಾಖೆಯನ್ನು ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆರಂಭಿಸಿದ್ದರು. ಬೆಂಗಳೂರು… Read More ಶ್ರೀರಾಮ ನವಮಿ ಸ್ಟ್ರೈಕ್

ಮಜ್ಜಿಗೆ ಹುಳಿ

ಹಬ್ಬ ಹರಿದಿನಗಳಲ್ಲಿ ಮತ್ತು ಸಭೆ ಸಮಾರಂಭಗಳಲ್ಲಿ ಉಣಬಡಿಸುವ ಸಾಂಪ್ರದಾಯಕವಾದ ಮಜ್ಜಿಗೆಹುಳಿಯನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 5-6 ಜನರಿಗೆ ಸಾಕಾಗುವಷ್ಟು ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ/ಹುರಿಗಡಲೆ – 1 ಬಟ್ಟಲು ತೆಂಗಿನ ತುರಿ – 1 ಬಟ್ಟಲು ಮೊಸರು – 1 ಬಟ್ಟಲು ಜೀರಿಗೆ – 8-10 ಸಾಸಿವೆ – 8-10 ಒಣಮೆಣಸಿನಕಾಯಿ – 2-3 ಹಸೀಮೆಣಸಿನಕಾಯಿ – 6-8 ಖಾರಕ್ಕೆ ತಕ್ಕಷ್ಟು… Read More ಮಜ್ಜಿಗೆ ಹುಳಿ

ಅಂಬಿ ಮಜ್ಜಿಗೆ

ಇತ್ತೀಚೆಗೆ ನಮ್ಮ ಮನೆಯಿಂದ ಅಣ್ಣನ ಮನೆಉ ಕಡೆ ಹೋಗುವಾಗ ರಾಜಕುಮಾರ್ ಸ್ಮಾರಕ ದಾಟಿ ಸ್ವಲ್ಪ ‌ಮುಂದೆ ಹೋಗುತ್ತಿರುವಾಗ ವರ್ತುಲ ರಸ್ತೆಯ ಬದಿಯ ತಳ್ಳು ಗಾಡಿಯ ಮೇಲೆ ಅಂಬಿ ಮಜ್ಜಿಗೆ ಅನ್ನೋ ಬೋರ್ಡ್ ನೋಡಿ ಅರೇ ಇದೇನಪ್ಪಾ‌ ಒಂದು ತರಹದ ವಿಶೇಷವಾದ ಶೀರ್ಷಿಕೆ‌ ಇದೆಯಲ್ಲಾ? ಅಂಬಿ‌ (ಅಂಬರೀಷ್) ಅಭಿಮಾನಿಗಳ ‌ಅಭಿಮಾನಕ್ಕೆ ಕೊನೆಯೇ ಇಲ್ಲವೇ? ಎಂದು ಯೋಚಿಸುತ್ತಿರುವಾಗಲೇ, ಇದನ್ನೇ ಗಮನಿಸಿದ ನನ್ನ ಮಡದಿಯೂ ಕೂಡಾ ಅಂಬಿ‌ ಯಾವಾಗ ಇಲ್ಲಿಗೆ ಬಂದು ಮಜ್ಜಿಗೆ ಕುಡಿದಿದ್ರೋ? ಅವರು ಕುಡಿತಿದ್ದ ‌ಮಜ್ಜಿಗೆಯೇ ಬೇರೆ ಅಲ್ವೇ?… Read More ಅಂಬಿ ಮಜ್ಜಿಗೆ