ಶಿವಪುರದ ಸತ್ಯಾಗ್ರಹ ಸೌಧ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ  ಸುಮಾರು 80 ಕಿಮಿ ದೂರ ಪ್ರಯಾಣಿಸಿ ಇನ್ನೇನು ವಿಶ್ವವಿಖ್ಯಾತ ಮದ್ದೂರು ತಲುಪುವ ಕೆಲವೇ ಕೆಲವು ಕಿಮೀ ದೂರದಲ್ಲಿ ಹೆದ್ದಾರಿಯಿಂದ ಬಲಗಡೆ ಕೂಗಳತೇ ದೂರದಲ್ಲೇ,  ದೇಶದ ರಾಜಧಾನಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯಂತೆ (ಐಹೊಳೆಯ ದುರ್ಗಾ ದೇವಾಲಯದ ಪ್ರತಿರೂಪ)  ಕಾಣುವ ವಿಶಾಲವಾದ ಕಟ್ಟಡ ಕಣ್ಣಿಗೆ ಬೀಳುತ್ತದೆ. ಕುತೂಹಲದಿಂದ  ಹತ್ತಿರ ಹೋಗಿ ವಿಚಾರಿಸಿದಲ್ಲಿ ಸ್ವಾತಂತ್ರ್ಯ ಸಂಗ್ರಮದ ಕಾಲದಲ್ಲಿ ಮಂಡ್ಯ ಜಿಲ್ಲೆಯ ಈ ಶಿವಪುರ ಕರ್ನಾಟಕದಲ್ಲಿ  ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಇತಿಹಾಸದಲ್ಲಿ ಅಗ್ರ ಸ್ಥಾನ ಪಡೆದುಕೊಂಡ… Read More ಶಿವಪುರದ ಸತ್ಯಾಗ್ರಹ ಸೌಧ

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು… Read More ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಬೀದಿ ದೀಪದ ಕೆಳಗೆ ಓದಿದ ಬಾಲಕನಿಂದ ಭಾರತ ರತ್ನದವರೆಗೆ! ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ವಾರನ್ನಾ ಮಾಡುತ್ತಾ, ಬೀದಿ ದೀಪದ ಕೆಳಗೆ ಓದಿ, ದೇಶ ಕಂಡ ಮಹಾನ್ ಇಂಜೀನಿಯರ್, ಭಾರತರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ, ಬಾಲ್ಯ, ಶಿಕ್ಷಣ, ಬದುಕು, ಇಂಜೀನಿಅರ್ ಆಗಿ, ದಿವಾನರಾಗಿ ಕೇವಲ ಮೈಸೂರಿಗಷ್ಟೇ ಅಲ್ಲದೇ ಇಡೀ ದೇಶಕ್ಕೆ ನೀಡಿದ ಕೊಡುಗೆಗಳು ಅವರ ಜನ್ಮದಿನವಾದ ಸೆಪ್ಟಂಬರ್ 15, ಇಂಜೀನಿಯರ್ಸ್ ಡೇ ದಂದು ಇದೋ ನಿಮಗಾಗಿ… Read More ಬೀದಿ ದೀಪದ ಕೆಳಗೆ ಓದಿದ ಬಾಲಕನಿಂದ ಭಾರತ ರತ್ನದವರೆಗೆ! ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ಮೈಸೂರಿನ ಶುಕವನ

ಮೈಸೂರು ಎಂದರೆ ನಮಗೆ ನೆನಪಿಗೆ ಬರುವುದು ಮೈಸೂರು ಅರಮನೆ, ಕನ್ನಂಬಾಡಿ ಕಟ್ಟೆ, ಚಾಮುಂಡಿ ಬೆಟ್ಟ, ಮೃಗಾಲಯ ಮತ್ತು ಜಂಜಾಟವಿಲ್ಲದ ವಿಶಾಲವಾದ ರಸ್ತೆಗಳು. ಇದರ ಜೊತೆ ಜೊತೆಗೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಮುಖಾಂತರ ಹೋಗುವ ತಪ್ಪಲಿನಲ್ಲಿಯೇ ನಂಜನಗೂಡಿನ ರಸ್ತೆಗೆ ಹೋಗುವ ಮಾರ್ಗದಲ್ಲಿಯೇ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ಪೀಠವಿದ್ದು ಅಲ್ಲಿಯ ದೇವಸ್ಥಾನಗಳ ಸಂಕೀರ್ಣ ನಯನ ಮನೋಹರವಾಗಿದೆ. ದೇವಸ್ಥಾನದ ಆವರಣದಲ್ಲಿಯೇ ಸ್ವಾಮೀಜಿಯವರು 2012 ರಲ್ಲಿ ನಿರ್ಮಿಸಿರುವ ಪಕ್ಷಿಗಳ ಪುನರ್ವಸತಿ ಕೇಂದ್ರ ಶುಕವನ ಮತ್ತು ಬೋನ್ಸಾಯ್  ಉದ್ಯಾನವನವಿದ್ದು ಮಕ್ಕಳೊಂದಿಗೆ ಅತ್ಯಗತ್ಯವಾಗಿ… Read More ಮೈಸೂರಿನ ಶುಕವನ

ಗರಡಿ ಮನೆ

ಸುಮಾರು ಎರಡು ದಶಕಗಳ ಹಿಂದೆ ನಮ್ಮ ದೇಶದ ಬಹುತೇಕ ಹಳ್ಳಿಗಳಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿಯೇ ಅಲ್ಲೊಂದು ಸುಮಾರಾಗಿರುವ ಕಟ್ಟಡ ಅದರ ಮೇಲೊಂದು ಕೇಸರಿ ಬಾವುಟ ಎದ್ದು ಕಾಣುತ್ತಿದ್ದಲ್ಲಿ ಆ ಊರಿನಲ್ಲಿ ಯಾವುದೇ ಕಳ್ಳಕಾಕರ ಭಯವಿಲ್ಲ. ಆ ಊರಿನ ಹೆಣ್ಣುಮಕ್ಕಳು ನಿರ್ಭಿಡೆಯಾಗಿ ಯಾವ ಹೊತ್ತಿನಲ್ಲಾದರೂ ಓಡಾಡಬಹುದು. ಅಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟವಿರುವುದಿಲ್ಲ ಎಂಬ ಭರವಸೆಯನ್ನು ಮೂಡಿಸುತ್ತಿದ್ದವು. ಅರೇ, ಒಂದು ಕಟ್ಟಡದಿಂದಾಗಿ ಇಷ್ಟೊಂದು ಸಾಮಾಜಿಕ ಬದಲಾವಣೆಯೇ ಎಂದು ತಿಳಿದಲ್ಲಿ, ಆ ಕಟ್ಟಡ ಸಾಮ್ಯಾನ್ಯ ಕಟ್ಟಡವಾಗಿರದೇ, ಅದನ್ನು ಗರಡಿ ಮನೆ… Read More ಗರಡಿ ಮನೆ

ಮೈಸೂರು ಪಾಕ್

ಮೈಸೂರು ಎಂದಾಕ್ಷಣ ಎಲ್ಲರಿಗೂ ಥಟ್ ಅಂತಾ ನೆನಪಿಗೆ ಬರುವುದೇ ಮೈಸೂರು ದಸರಾ, ಮೈಸೂರು ಅರಮನೆ, ಮೈಸೂರು ಮೃಗಾಲಯ ಇದರ ಜೊತೆಗೆ ಮೈಸೂರಿನ ಹೆಸರನ್ನು ಜಗದ್ವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಅರೇ! ಈ ಸಿಹಿ ತಿಂಡಿಗೂ ಮೈಸೂರಿಗೂ ಏನು ಸಂಬಂಧ? ಅಂತ ತಿಳಿಯ ಬೇಕಾದರೆ, ಆ ಸಿಹಿ ತಿಂಡಿ ಆವಿಷ್ಕಾರದ ಹಿಂದಿರುವ ರೋಚಕವಾದ ಸಂಗತಿ ತಿಳಿಯೋಣ ಬನ್ನಿ. 1884-1940ರ ವರೆಗೂ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ಮಡೀ ಕೃಷ್ಣರಾಜ ಒಡೆಯಯರ್ ಅವರಿಗೆ ಉಟೋಪಚಾರಗಳಲ್ಲಿ ವಿಶೇಷವಾದ ಆಸಕ್ತಿ… Read More ಮೈಸೂರು ಪಾಕ್

ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ಕನ್ನಡ ಸುಗಮ ಸಂಗೀತದ ಪ್ರವರ್ತಕರಾಗಿ ಕನ್ನಡದ ಬಹುತೇಕ ಕವಿಗಳ ಭಾವಗೀತೆಗಳಿಗೆ ಧ್ವನಿಯಾಗಿದ್ದ ಶ್ರೀ ಪಿ ಕಾಳಿಂಗರಾಯರ ಕುರಿತು ಹಿಂದಿನ ಮಾಲಿಕೆಯಲ್ಲಿ ಪರಿಚಯ ಮಾಡಿಕೊಂಡ ಮೇಲೆ ನಾವಿಂದು ಅವರ ಉತ್ತರಾಧಿಕಾರಿಗಳ ಪರಿಚಯ ಮಾಡಿಕೊಳ್ಳಲೇ ಬೇಕಲ್ಲವೆ? ತಮ್ಮ ಅದ್ಭುತ ಗಾಯನ ಮತ್ತು ರಾಗ ಸಂಯೋಜನೆಗಳಿಂದ ಸುಗಮ ಸಂಗೀತ ಕ್ಷೇತ್ರದ ಅನುಭಿಷಕ್ತ `ದೊರೆಯಾಗಿ ಮೆರೆದವರು, ಮ್ಯಾಂಡೊಲಿನ್, ತಬಲ, ಕೊಳಲು, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರೂ ಮತ್ತು ಕವನಗಳನ್ನು ರಚಿಸಬಲ್ಲ ಸಾಮರ್ಥ್ಯ ಹೊಂದಿದ್ದಂತಹ ಶ್ರೀ ಮೈಸೂರು ಅನಂತಸ್ವಾಮಿಗಳ ಬಗ್ಗೆ ನಾವಿಂದು ಅರಿತುಕೊಳ್ಳೋಣ.… Read More ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ದಸರಾಹಬ್ಬ ಮೈಸೂರು ಪ್ರಾಂತದ ನಾಡಹಬ್ಬ ಒಂಭತ್ತು ರಾತ್ರಿಗಳು ಸೇರಿ ಒಟ್ಟು ಹತ್ತು ದಿನಗಳು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಬಹುತೇಕರ ಮನೆಗಳಲ್ಲಿ ರಾಜಾ ರಾಣಿಯರ ಪಟ್ಟದ ಗೊಂಬೆಗಳ ಜೊತೆ ವಿವಿಧ ರೀತಿಯ ಅಲಂಕಾರಿಕ ಗೊಂಬೆಗಳನ್ನು ಇಟ್ಟು ಜೊತೆಗೆ ಕಳಸ ಮತ್ತು ದೇವಿಯನ್ನಿಟ್ಟು ಬಗೆ ಬಗೆಯ ರೀತಿಯ ಅಲಂಕಾರಗಳನ್ನು ಮಾಡಿ ಪ್ರತೀದಿನವೂ ಭಕ್ತಿಯಿಂದ ನೈವೇದ್ಯ ಮಾಡಿ ಮಕ್ಕಳಿಗೆ ಬೊಂಬೇ ಬಾಗಿಣ ಕೊಡುವುದು ಸಂಪ್ರದಾಯ. ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು,… Read More ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ವಿದ್ಯಾರಣ್ಯಪುರ ಮಂಥನದ ಹನ್ನೆರಡನೇ ಆವೃತ್ತಿಯ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಅರೇನಹಳ್ಳಿ ಧರ್ಮೇಂದ್ರ ಕುಮಾರ್(ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್, ಪ್ರವೃತ್ತಿಯಲ್ಲಿ ಖ್ಯಾತ ಲೇಖಕರು ಮತ್ತು ಇತಿಹಾಸಕಾರರು) ಮತ್ತು ಶ್ರೀ ನಾಗರಾಜ ಮೌದ್ಗಲ್ ಅವರುಗಳ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಅವರ ಸುಶ್ರಾವ್ಯ ಕಂಠದ ವಿಘ್ನವಿನಾಶಕನ ಸ್ತುತಿಸುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೈಸೂರು ಸಂಸ್ಥಾನದಲ್ಲಿ ಅರಮನೆಯ ಖ್ಯಾತ ವೈದ್ಯರಾಗಿದ್ದ… Read More ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು