ಬಾಲಸೋರ್‌ ರೈಲ್ವೇ ಅಪಘಾತವೇ? ವಿದ್ವಂಸ ಕೃತ್ಯವೇ?

ನಾವು ZERO ಪ್ರಯಾಣಿಕರ ಸಾವಿನ ದಾಖಲೆಯನ್ನು ಸಾಧಿಸುವ ಮೂಲಕ ಕಳೆದ 166 ವರ್ಷಗಳ ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೊಂದು ಅತ್ಯುತ್ತಮವಾದ ಸುರಕ್ಷತಾ ದಾಖಲೆ ಎಂದು ಇತ್ತೀಚೆಗಷ್ಟೇ ರೈಲ್ವೇ ಇಲಾಖೆಯ ಕೇಂದ್ರ ಮಂತ್ರಿಗಳಾದ ಶ್ರೀ ಅಶ್ವಿನಿ ವೈಷ್ಣವ್ ಹೇಳಿದ್ದ ಸಮಯದಲ್ಲೇ ಒರಿಸ್ಸಾದ ಬಾಲಸೋರ್ ಬಳಿಯಲ್ಲಿ ನಡೆದಿರುವ ರೈಲ್ವೇ ಅಪಘಾತ ನೂರಾರು ಆಯಾಮಗಳನ್ನು ಹುಟ್ಟುಹಾಕಿದ್ದು, ಆ ಕುರಿತಂತೆ ವಸ್ತು ನಿಷ್ಟ ವರದಿ ಇದೋ ನಿಮಗಾಗಿ
Read More ಬಾಲಸೋರ್‌ ರೈಲ್ವೇ ಅಪಘಾತವೇ? ವಿದ್ವಂಸ ಕೃತ್ಯವೇ?

ಟೀಕೆಗಳಿಗೂ ಒಂದು ತೂಕವಿರಬೇಕು

ವಿದೇಶಗಳಿಂದ ಆಮದು ಮಾಡಿಕೊಳ್ಳುವ ರೈಲಿಗಿಂತ ಸುಮಾರು 40% ಅಗ್ಗವಾಗಿರುವ ಸ್ವದೇಶಿ ನಿರ್ಮಿತ ಸೆಮಿ-ಹೈ ಸ್ಪೀಡ್ ವಂದೇಮಾತರಂ ಎಕ್ಸ್‌ಪ್ರೆಸ್ ರೈಲಿಗೆ ಎಮ್ಮೆಯೊಂದು ಡಿಕ್ಕಿ ಹೊಡೆದು ರೈಲಿನ ಮುಂಭಾಗ ಜಕಂ ಆಗಿದ್ದೇ ಮಹಾಪರಾಧ ಎನ್ನುವಂತೆ ಟೀಕಿಸುತ್ತಿರುವವರಿಗೆ ವಂದೇ ಭಾರತ್ ರೈಲಿನ ವೈಶಿಷ್ಯ್ತತೆಗಳೇನು? ಆ ರೈಲು ಇತರೇ ರೈಲಿಗಿಂತ ಹೇಗೆ ವಿಭಿನ್ನವಾಗಿದೆ ಎಂಬ ಸವಿವರ ಇದೋ ನಿಮಗಾಗಿ… Read More ಟೀಕೆಗಳಿಗೂ ಒಂದು ತೂಕವಿರಬೇಕು

ಟೀ.. ಚಾಯ್… ಕಾಪೀ.. ಕಾಪೀ…

ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ. ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ‌ ಕಾಫಿಯ… Read More ಟೀ.. ಚಾಯ್… ಕಾಪೀ.. ಕಾಪೀ…

ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ನಾವೆಲ್ಲಾ ಚಿಕ್ಕವರಿದ್ದಾಗ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಅದೇನೋ ಸಂಭ್ರಮ. ಪ್ರಯಾಣಕ್ಕೆ ಒಂದೆರಡು ದಿನಗಳ ಮಂಚೆಯೇ, ನಮ್ಮೆಲ್ಲಾ ಸ್ನೇಹಿತರಿಗೂ ರೈಲಿನಲ್ಲಿ ಹೋಗುತ್ತಿರುವುದನ್ನು ಹೇಳೀ ಅವರ ಹೊಟ್ಟೆಯನ್ನು ಉರಿಸುತ್ತಿದ್ದಲ್ಲದೇ, ರೈಲಿನಿಂದ ಪುನಃ ಹಿಂದಿರುಗಿದ ನಂತರ ಗೆಳೆಯರ ಬಳೀ ಅದೇ ಕುರಿತಾಗಿಯೇ ಮಾತು ಕತೆ. ಇನ್ನು ಎರಡು ಮೂರು ದಿನಗಳ ಮಟ್ಟಿಗೆ ಪ್ರಯಾಣಿಸಿದರಂತೂ ರೈಲಿನ ಕುಲುಕಾಟದ ಭಾಸವೇ ನಮಗಾಗುತ್ತಿತ್ತು. ಇನ್ನು ರೈಲಿನಲ್ಲಿ ಕುಳಿತುಕೊಳ್ಳಬೇಕಾದರೇ ನಾನು ಕಿಟಕಿ ಪಕ್ಕ ನಾನು ಕಿಟಕಿ ಪಕ್ಕ ಎಂದು, ಅಣ್ಣಾ ತಮ್ಮಾ, ಅಕ್ಕತಂಗಿಯರೊಂದಿಗೆ ಶರಂಪರ ಕಿತ್ತಾಡಿದ್ದೂ ಉಂಟು. ರೈಲಿನಲ್ಲಿ… Read More ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ… Read More ಆಪದ್ಭಾಂಧವ ಅಪ್ಪ