ಶ್ರೀ ಕೃ. ನರಹರಿ

ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಜ್ಯ ಶಿಕ್ಷಣ ಕ್ಷೇತ್ರ ಮತ್ತು ರಾಜಕೀಯದಲ್ಲೂ ಅಚ್ಚಳಿಯದ ಗುರುತನ್ನು ಮೂಡಿಸಿದ್ದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ವಿಧಾನಸೌಧಕ್ಕೆ ತಲುಪಿಸಿದಂತಹ ನಿಷ್ಠಾವಂತ ಜನನಾಯಕರಾಗಿದ್ದಂತಹ ಪ್ರೊ. ಕೃ.ನರಹರಿಯವರು ನಿಧನರಾದಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳೊಂದಿಗಿನ ನುಡಿ ನಮಗಳು ಇದೋ ನಿಮಗಾಗಿ… Read More ಶ್ರೀ ಕೃ. ನರಹರಿ

ಬರದಲ್ಲೂ ಸಚಿವರ ಕಾರಬಾರು

ಸಾಮಾನ್ಯವಾಗಿ ಜಪಾನ್ ದೇಶದ ತಂತ್ರಜ್ಞಾನದ ಕರ್ನಾಟಕದ ಬಿಡದಿಯ ಟಯೋಟ ಕಂಪನಿಯಲ್ಲಿ ತಯಾರಾಗುವ ಇನ್ನೋವಾ ಕಾರುಗಳು ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಸುಮಾರು 10 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ಕ್ರಮಿಸಬಹುದಾಗಿದ್ದು ಈ ವಿಭಾಗದಲ್ಲಿನ ಇತರ ಕಾರುಗಳಿಗೆ ಹೋಲಿಸಿದರೆ ಟೊಯೊಟಾ ಇನ್ನೋವಾಗಳು ಅತ್ಯಂತ ಆರಾಮದಾಯಕ ಪ್ರಯಾಣಕ್ಕಾಗಿ ವಿಶ್ವಾಸಾರ್ಹವಾಗಿವೆ. ಹಾಗಾಗಿಯೇ ಸರ್ಕಾರಿ ಅಧಿಕಾರಿಗಳು ಅದರಲ್ಲೂ ರಾಜ್ಯದ ಸಚಿವ ಸಂಪುಟದ ಸಚಿವರುಗಳಿಗೆ ಸರ್ಕಾರದ ವತಿಯಿಂದ ಸರ್ಕಾರೀ ಅಧಿಕೃತ ಉಪಯೋಗಕ್ಕಾಗಿ ಇನ್ನೊವ ಕಾರುಗಳನ್ನೇ ಕೊಡಲಾಗುತ್ತದೆ. 10 ಲಕ್ಷ ಕಿಲೋಮೀಟರ್‌ಗಿಂತಲೂ ಅಧಿಕ ಬಳಕೆ ಮಾಡಬಹುದು ಎಂದರೆ ಜನಸಾಮಾನ್ಯರು… Read More ಬರದಲ್ಲೂ ಸಚಿವರ ಕಾರಬಾರು

ರಾಜಭವನ

ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರ ಅಧಿಕೃತ ನಿವಾಸವಾದ ರಾಜಭವನದ ನಿರ್ಮಾಣ ಮತ್ತು ಅದರ ನಿರ್ವಹಣೆಯ ಕುರಿತಾಗಿ ರೋಚಕವಾದ ಹಿನ್ನಲೆಯಿದ್ದು, ಅದನ್ನು ನಿರ್ಮಿಸಿದವರು ಯಾರು? ಆ ಕಟ್ಟಡದಲ್ಲಿ ಇದುವರೆವಿಗೂ ಯಾರು ಯಾರು ವಾಸಿಸಿದ್ದರು? ಅದು ರಾಜಭವನ ಎಂದು ಮತ್ತು ಹೇಗಾಯಿತು? ಎಂಬೆಲ್ಲಾ ಕುರಿತಾದ ಸಂಪೂರ್ಣ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ರಾಜಭವನ

ವಿಧಾನಸೌಧ

ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಯಾರು? ಎಂದು? ಏಕಾಕಿ ನಿರ್ಮಿಸಿದರು? ಅದರ ವಿಶೇಷತೆಗಳು ಏನು? ಹೀಗೆ ವಿಧಾನ ಸೌಧ ನಿರ್ಮಾಣದ ಹಿಂದಿರುವ ರೋಚಕ ವಿಷಯಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಧಾನಸೌಧ

ಶ್ರೀ ರಾಮಕೃಷ್ಣ ಹೆಗಡೆ

ಸದುದ್ದೇಶಗಳಿಂದ,ಜನತೆಯ ಕೈಗೆ ಆಡಳಿತ ನೀಡಿ, ಯಾವುದೇ ಜಾತಿಯ ಹಂಗು ಮತ್ತು ಬೆಂಬಲವಿಲ್ಲದೇ, ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದನ್ನು ತೋರಿಸಿದ, ರಾಜ್ಯ ಕಂಡ ಧೀಮಂತ ಜನಾನುರಾಗಿ, ಶ್ರೀ ರಾಮಕೃಷ್ಣ ಹೆಗಡೆ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ರಾಮಕೃಷ್ಣ ಹೆಗಡೆ

ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಭ್ರಮದಿಂದ ನಾಡಹಬ್ಬದ ದಸರವನ್ನು ಆಚರಿಸಿದ ನಂತರ ಎಲ್ಲರ ಚಿತ್ತ ಮುಂದಿನ ತಿಂಗಳ ನವೆಂಬರ್-1 ನೇ ತಾರೀಖಿನತ್ತ ಎಂದರೂ ಅತಿಶಯೋಕ್ತಿಯೇನಲ್ಲ. ಸ್ವಾತ್ರಂತ್ರ್ಯಾ ನಂತರ 1956 ರ ನವೆಂಬರ್-1 ರಂದು, ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಮಾಡಲಾಯಿತು. ಆನಂತರ 1973 ನವೆಂಬರ್-1 ರಂದು ಮೈಸೂರು ರಾಜ್ಯವನ್ನು ಕನ್ನಡಿಗರು ಇರುವ ಕರುನಾಡು ಅರ್ಥಾತ್ ಕರ್ನಾಟಕ ಎಂದು ಹೆಸರಿಸಿದ ಸಂಭ್ರಮವೇ ನಾವೆಲ್ಲರೂ ಆಚರಿಸುವ ಕನ್ನಡ ರಾಜ್ಯೋತ್ಸವ… Read More ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

ರಂಗಕರ್ಮಿ ಆರ್. ಎಸ್. ರಾಜಾರಾಂ

ನೋಡಿದಾಕ್ಷಣ ಅರೇ ಇವರು ಯಾರೋ ನಮ್ಮ ತಾತನ ತರಹಾನೇ ಇದ್ದಾರಲ್ಲಾ! ಎನ್ನುವಷ್ಟು ಅಪ್ಯಾಯಮಾನತೆ,‌ ಇಳೀ ವಯಸ್ಸಿನಲ್ಲಿಯೂ ತುಂಟತನ ತೋರುವ ತಾತ, ಹೀಗೆ ತಮ್ಮ ಸಹಜ ಅಭಿನಯದ‌ ಮೂಲಕ ರಂಗಭೂಮಿ, ಹಿರಿತೆರೆ, ಕಿರಿತೆರೆಯಲ್ಲಿ ಸುಮಾರು ಆರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ರಂಗಕರ್ಮಿ ರಾಜಾರಾಂ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ರಂಗಕರ್ಮಿ ಆರ್. ಎಸ್. ರಾಜಾರಾಂ