ಶ್ರೀರಾಮ ನವಮಿ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದಿವಿ ಇದೇನು ಹೊಸಾ ಶ್ರೀರಾಮ ನವಮಿ ಸ್ಟ್ರೈಕ್ ಅಂತಾ ಯೋಚನೆ ಮಾಡ್ತಿರ್ತೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಇದುವರೆಗೂ ಯಾರಿಗೂ ಹೇಳಿದಿದ್ದ ಶ್ರೀರಾಮ ನವಮಿ ಸ್ಟ್ರೈಕ್ ಅಂತಹ ರೋಚಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ. ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಗ ತಾನೆ ಶುರುವಾಗಿದ್ದ ಸ್ಟಾರ್ಟಪ್ ಕಂಪನಿಯೊಂದರ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ. ಭಾರತೀಯರೊಬ್ಬರೇ ಅಮೇರಿಕಾದಲ್ಲಿ ಆರಂಭಿಸಿದ ಕಂಪನಿಯೊಂದರ ಶಾಖೆಯನ್ನು ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆರಂಭಿಸಿದ್ದರು. ಬೆಂಗಳೂರು… Read More ಶ್ರೀರಾಮ ನವಮಿ ಸ್ಟ್ರೈಕ್

ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ

ನಾವೆಲ್ಲರೂ ಕೇಳಿ, ಓದಿ, ನೋಡಿ ತಿಳಿದಿರುವಂತೆ ಅಯೊಧ್ಯೆ ಪ್ರಭು ಶ್ರೀರಾಮ ಚಂದ್ರನ ಜನ್ಮಸ್ಥಳ. ಆತ ತನ್ನ ಆದರ್ಶಗಳಿಂದಾಗ ಮರ್ಯಾದಾ ಪುರುಶೋತ್ತಮ ಎನಿಸಿಕೊಂಡಿದ್ದಲ್ಲದೇ, ಸಕಲ ಹಿಂದೂಗಳ ಆರಾಧ್ಯ ದೈವವಾಗಿ ಪ್ರತಿನಿತ್ಯವೂ ಪ್ರಪಂಚಾದ್ಯಂತ ಕೋಟ್ಯಾಂತರ ಮನ ಮತ್ತು ಮನೆಗಳಲ್ಲಿ ಪೂಜೆಗೆ ಪಾತ್ರರಾಗುತ್ತಿದ್ದಾನೆ. ವಾಲ್ಮೀಕಿ ವಿರಚಿತ ರಾಮಯಣ ಪ್ರಪಂಚದ ಅತ್ಯಂತ ಪುರಾತನ ಗ್ರಂಥವಾಗಿದ್ದು ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಪ್ರಪಂಚಾದ್ಯಂತ ಹಲವಾರು ದೇಶಗಳಲ್ಲಿ ಪ್ರಭು ಶ್ರೀರಾಮ ಆಡಳಿತಾತ್ಮಕವಾಗಿ ಆದರ್ಶ ಪುರುಷನಾಗಿ ಆರಾಧಿಸುತ್ತಾರೆ. ಇಂತಹ ಪ್ರಭು ಶ್ರೀರಾಮನ ಮಂದಿರ ಕೆಲವು ಮತಾಂಧರ… Read More ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ

ಶ್ರೀ ರಾಮ ಜನ್ಮಭೂಮಿ ನಡೆದು ಬಂದ ಹಾದಿ

ನಮ್ಮ ದೇಶದ ಯಾವುದೇ ಪ್ರದೇಶಕ್ಕೆ ಹೋಗಿ ಯಾರನ್ನಾದರೂ ನಿಮ್ಮ ಹೆಸರೇನು? ನಿಮ್ಮ ತಂದೆಯ ಹೆಸರೇನು? ನಿಮ್ಮ ತಾತನ ಹೆಸರೇನು? ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಮುತ್ತಾತನ ಹೆಸರೇನು? ಎಂದು ಕೇಳ ಬಹುದು ಅದಕ್ಕಿಂತ ಹೆಚ್ಚಿನದ್ದೇನೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅದೇ ರಾಮನ ಬಗ್ಗೆ ಕೇಳಿ ಆತ ಥಟ್ ಅಂತಾ,‌ ಪ್ರಭು ಶ್ರೀ ರಾಮಾ, ವಿಷ್ಣುವಿನ ದಶಾವತಾರದಲ್ಲಿ ಏಳನೇ ಅವತಾರ. ದಶರಥನಿಗೆ ಮೂರು ಜನ ಆಧಿಕೃತವಾದ ರಾಣಿಯರಿದ್ದರೂ ಮಕ್ಕಳಾಗದಿದ್ದಾಗ ಪುತ್ರಕಾಮೇಷ್ಟಿ ಯಾಗದ ಫಲವಾಗಿ ಜನಿಸಿದ ನಾಲ್ಕು… Read More ಶ್ರೀ ರಾಮ ಜನ್ಮಭೂಮಿ ನಡೆದು ಬಂದ ಹಾದಿ

ಅಳಿಲು ಸೇವೆ

ಅದು ಎಂಭತ್ತನೇ ದಶಕದ ಆರಂಭದ ದಿನಗಳು. ನಾನಾಗ ಇನ್ನೂ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದೆ. ಅದೊಂದು ರಾತ್ರಿ ನನ್ನ ತಂಗಿಗೆ ಜ್ವರ ಬಂದಿದ್ದ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯನ್ನು ಸೈಕಲ್ಲಿನ ಮುಂದುಗಡೆಯ ಬಾರ್ ಮೇಲಿನ ಚಿಕ್ಕ ಸೀಟಿನಲ್ಲಿ ಕೂರಿಸಿಕೊಂಡು ಮನೆಗೆ ಹಿಂತಿರುಗುವಾಗ ಇಳಿಜಾರಿನಲ್ಲಿ ಆಕೆ ಅಚಾನಕ್ಕಾಗಿ ಸೈಕಲ್ ಮುಂದಿನ ಚಕ್ರಕ್ಕೆ ತನ್ನ ಕಾಲು ಕೊಟ್ಟ ಪರಿಣಾಮ ಆಕೆಯ ಕಾಲಿನ ಹಿಮ್ಮಡಿ ಕಿತ್ತು ಬಂದು ಎಂಟು ಹತ್ತು ಹೊಲಿಗೆ ಹಾಕಿದ್ದಲ್ಲದೇ ಸಣ್ಣ ಪುಟ್ಟ ಗಾಯಗಳಾಗಿದ್ದವು. ಸೈಕಲ್ಲಿನಿಂದ ಕೆಳಗೆ… Read More ಅಳಿಲು ಸೇವೆ

ಶ್ರೀ ರಾಮ ನವಮಿ

ಸಮಸ್ತ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಶೋತ್ತಮ, ದಶರಥ ಪುತ್ರ, ಶ್ರೀ ರಾಮಚಂದ್ರ ಪ್ರಭು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ತ್ರೇತಾಯುಗದಲ್ಲಿ ಸರಯೂ ನದಿ ತಟದ ಅಯೋಧ್ಯೆಯಲ್ಲಿ ಜನಿಸಿದ ದಿನ. ಈ ದಿನವನ್ನು ದೇಶಾದ್ಯಂತ ಭಕ್ತಿಭಾವದಿಂದ, ಶ್ರಧ್ಧಾ ಪೂರ್ವಕವಾಗಿ ಬಹಳ ಸಂಭ್ರಮದಿಂದ ಹಬ್ಬವಾಗಿ ಆಚರಿಸುತ್ತಾರೆ. ಕರ್ನಾಟಕದ ಬಹಳಷ್ಟು ಮನೆಗಳಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ಅಂದರೆ ಯುಗಾದಿ ದಿನದಿಂದ ಮುಂದಿನ ಒಂಭತ್ತು ದಿನ ಅಂದರೆ ನವಮಿ, ರಾಮ ನವಮಿಯವರೆಗೆ ಪ್ರತೀ ದಿನ ರಾಮಾಯಣ ಪಾರಾಯಣ… Read More ಶ್ರೀ ರಾಮ ನವಮಿ