ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಇತ್ತೀಚೆಗೆ ವಾಟ್ಸಾಪಿನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಈ ಭಾವಾನುವಾದವನ್ನು ಮೊದಲು ಓದಿದ ನಂತರ ವಿಚಾರಕ್ಕೆ ಬರೋಣ. ಒಂದೂರಿನಲ್ಲಿದ್ದ  ದೇವಸ್ಥಾನವೊಂದಕ್ಕೆ ಪ್ರತಿದಿನ ಮುಂಜಾನೆ ಒಂದು ಚಿಕ್ಕ ಹುಡುಗಿ ಬಂದು ದೇವರ ಮುಂದೆ ನಿಂತು, ಕಣ್ಗಳನ್ನು ಮುಚ್ಚಿ, ಕೈಗಳನ್ನು ನಮಸ್ಕಾರ ಸ್ಥಿತಿಯಲ್ಲಿಸಿಕೊಂಡು ಒಂದೆರಡು ನಿಮಿಷಗಳ ಕಾಲ ಏನನ್ನೋ ಗೊಣಗುತ್ತಾ, ನಂತರ ಕಣ್ಣು ತೆರೆದು, ನಮಸ್ಕರಿಸಿ, ನಗುತ್ತಾ ಓಡಿಹೋಗುತ್ತಿದ್ದಳು. ಇದು ಆಕೆಯ ದೈನಂದಿನ ಕಾರ್ಯವಾಗಿತ್ತು. ಅ ಪುಟ್ಟ ಹುಡುಗಿಯನ್ನು ಪ್ರತಿದಿನವೂ ಗಮನಿಸುತ್ತಿದ್ದ ದೇವಸ್ಥಾನದ ಅರ್ಚಕರಿಗೆ ಅಷ್ಟು ಸಣ್ಣ ಹುಡುಗಿಗೆ ಧರ್ಮ ಆಚಾರ… Read More ಶಾಸ್ತ್ರ – ಸಂಪ್ರದಾಯ, ಆಚಾರ – ವಿಚಾರ

ಸುಧರ್ಮ, ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ

ಸಂಸ್ಕೃತ ಪ್ರಪಂಚದ ಅತ್ಯಂತ ಪುರಾತನ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ. ಜಗತ್ತಿನ ಬಹುತೇಕ ಭಾಷೆಗಳಿಗೆ ಮೂಲಭಾಷೆಯೇ ಸಂಸ್ಕೃತ ಎಂಬ ಅಗ್ಗಳಿಕೆಯೂ ಇದೆ. ಎಲ್ಲದ್ದಕ್ಕಿಂತಲೂ  ಸಂಸ್ಕೃತದ ಭಾಷೆಯ ಮೂಲ ನಮ್ಮ ಭಾರತ ಮತ್ತು ನಮ್ಮ ಸನಾತನ ಧರ್ಮದ ಅಷ್ಟೂ ವೇದಶಾಸ್ತ್ರಗಳು ಮತ್ತು ಪುರಾಣಗಳ ಮೂಲ ಕೃತಿಗಳು ಸಂಸ್ಕೃತದಲ್ಲಿಯೇ ಇದೆ ಎನ್ನುವುದು ಗಮನಾರ್ಹ.  ಹೀಗೆ ಪುರಾಣ ಗ್ರಂಥಗಳು ಸಂಸ್ಕೃತದಲ್ಲಿ ಇದೆ ಎಂದಾದಲ್ಲಿ ಅಂದಿನ ಕಾಲದಲ್ಲಿ ಎಲ್ಲಡೆಯೂ ಸಂಸ್ಕೃತ  ಆಡು ಭಾಷೆಯಾಗಿತ್ತು ಮತ್ತು ದೇವರು ಮತ್ತು ಮಾನವರ ನಡುವಿನ ವ್ಯಾವಹಾರಿಕ  ಸಂಭಾಷಣೆಯ… Read More ಸುಧರ್ಮ, ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ

ಮಡಿ ಬಟ್ಟೆ

ಶಂಕರ ಆಗಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ.  ಬೇಸಿಗೆಯ ರಜೆಯಲ್ಲಿ  ಸುಮ್ಮನೆ ಮನೆಯ ಬಳಿ ಹುಡುಗರೊಂದಿಗೆ ಬಿಸಿಲಿನಲ್ಲಿ ಬೀದಿ ಸುತ್ತುವ ಬದಲು, ಬೇಸಿಗೆ ರಜೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಅವನ ತಾಯಿ ಅವನನ್ನು ಮಂಗಳೂರಿನ ಸಮೀಪದ ವೇದಶಿಬಿರಕ್ಕೆ ಕಳುಹಿಸಿದರು. ನಾಲ್ಕುವಾರಗಳ ಉಚಿತ ವೇದಶಿಬಿರ.  ಬೆಳಿಗ್ಗೆ  4.45ಕ್ಕೇ ಎಲ್ಲರೂ ಎದ್ದು ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಿ 5:30 ಕ್ಕೆಲ್ಲಾ ನಿತ್ಯಪೂಜೆಯಿಂದ ಆರಂಭವಾಗುವ ದಿನಚರಿ ಯೋಗಾಭ್ಯಾಸ, ವೇದಾಧ್ಯಯನ, ಸಂಸ್ಕೃತ ಪಾಠ, ತಿಂಡಿ, ಊಟಗಳ ಜೊತೆ ರಾತ್ರಿ  10 ಘಂಟೆಗೆ ಅನೌಪಚಾರಿಕದೊಂದಿಗೆ ದಿನ ಮುಕ್ತಾಯವಾಗುತ್ತಿತ್ತು. ಆರಂಭದಲ್ಲಿ… Read More ಮಡಿ ಬಟ್ಟೆ