ಹೆಣ್ಣು ಮಕ್ಕಳ ದಿನ

ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರವನ್ನು ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುವ ಮೂಲಕ ಆ ದಿನವನ್ನು ಕುಟುಂಬದಲ್ಲಿರುವ ಹೆಣ್ಣು ಮಕ್ಕಳಿಗೆ ಸಮರ್ಪಿಸಲಾಗಿದೆ. ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಮೃದು ಧೋರಣೆಯಿಂದ ನೋಡಿಕೊಳ್ಳುವುದನ್ನೇ ದುರುಪಯೋಗ ಪಡಿಸಿಕೊಂಡು ನಾನಾ ರೀತಿಯ ಅಪಸವ್ಯವಗಳಿಗೆ ಕಾರಣೀಭೂತರಾಗುತ್ತಿರುವ ಈ ಸಂಧರ್ಭದಲ್ಲಿ ಅರ್ಥಗರ್ಭಿತವಾಗಿ ಹೆಣ್ಣು ಮಕ್ಕಳ ದಿನವನ್ನು ಹೇಗೆ ಆಚರಿಸಬೇಕು ಎನ್ನುವ ಸವಿವರ ಇದೋ ನಿಮಗಾಗಿ… Read More ಹೆಣ್ಣು ಮಕ್ಕಳ ದಿನ

ಕ್ಷಮಯಾಧರಿತ್ರೀ

ಇಡೀ ದೇಶವೇ ಲಾಕೌಟ್ ಆಗಿ ಎಲ್ಲವೂ ಬಂದ್ ಆದಾಗ ನಮ್ಮ ಕ್ಷೇಮಕ್ಕಾಗಿ ಮಮ್ಮಲ ಮರುಗುವುದೇ. ನಮ್ಮ ದೇಶ ಮತ್ತು ನಮ್ಮ ಮನೆ. ಎರಡು ಜೀವಗಳು ಮಾತ್ರಾ ನಮ್ಮೆಲ್ಲಾ ತಪ್ಪುಗಳನ್ನೂ ಮನ್ನಿಸಿ ಒಪ್ಪಿಕೊಳ್ಳಲು ಸಿದ್ಧವಾಗಿರುತ್ತವೆ ಒಂದು ಹೆತ್ತ ತಾಯಿ ಮತ್ತೊಂದು ಕಟ್ಟಿಕೊಂಡ ಮಡದಿ. ಯಾವ ಬಂದ್ ಲೆಕ್ಕಿಸದೇ, ವರ್ಷದ ಮುನ್ನೂರೈವತ್ತೈದು ದಿನಗಳೂ, ದಿನದ ಇಪ್ಪತ್ನಾಲ್ಕು ಗಂಟೆಗಳೂ ನಮಗೆ ಆಶ್ರಯ ನೀಡಿರುವ ದೇಶ, ನಮಗೆ ಜನ್ಮ ನೀಡಿದ ತಾಯಿ ಮತ್ತು ಸಲಹುತ್ತಿರುವ ಮಡದಿ, ಈ ಕ್ಷಮಯಾಧರಿತ್ರೀಗಳಿಗೆ ಮತ್ತು ಅನ್ನಪೂರ್ಣೆಯರಿಗೆ ನಮ್ಮ… Read More ಕ್ಷಮಯಾಧರಿತ್ರೀ

ಸ್ತ್ರೀ ! ಕ್ಷಮಯಾಧರಿತ್ರಿ!!

ಹೆತ್ತವರಿಗೆ ಮಗಳು, ಒಡಹುಟ್ಟಿದವರಿಗೆ ಸಹೋದರಿ, ಸಹಪಾಠಿಗಳಿಗೆ ಗೆಳತಿ, ಮದುವೆಯಾದಾಗ ಒಬ್ಬರ ಮಡದಿ ಮತ್ತೊಬ್ಬರ ಸೊಸೆ‌, ಹೆತ್ತ ಮಕ್ಕಳಿಗೆ ತಾಯಿ, ತನ್ನ ಮಕ್ಕಳಿಗೆ ಮದುವೆಯಾದಾಗ, ಅಳಿಯಂದಿರಿಗೆ ಮತ್ತು ಸೊಸೆಯರಿಗೆ ಅತ್ತೆ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜಿ, ಹೀಗೆ ಬಹುರೂಪಿಯಾದ ಹೆಣ್ಣನ್ನು ಗೌರವಿಸುವುದು ಕೇವಲ ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಗೆ ಮಾತ್ರಾ ಸೀಮಿತವಾಗಿರದೇ, ಪ್ರತೀ ದಿನ, ಪ್ರತೀ ಕ್ಷಣವೂ ಆಕೆಗೆ ಚಿರಋಣಿಗಳಾಗಿರಬೇಕು ಅಲ್ವೇ?… Read More ಸ್ತ್ರೀ ! ಕ್ಷಮಯಾಧರಿತ್ರಿ!!

ಗೃಹಿಣಿ ಗೃಹಮುಚ್ಯತೆ

ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಆ ಮನೆಯ ಮಗಳಿಗೆ ಲೋಯರ್ ಸೆಕೆಂಡರಿಗಿಂತ ಹೆಚ್ಚಿಗೆ ಓದಲಾಗಲಿಲ್ಲ. ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ತನ್ನ ಹಿರಿಯರಿಂದ ಕಲಿತುಕೊಳ್ಳುತ್ತಾಳೆ. ಮುಂದೆ ಮದುವೆಯ ವಯಸ್ಸು ಬಂದಾಗ ನೋಡಲು ಸುರದ್ರೂ ಪವತಿಯಾಗಿದ್ದರೂ ಕಡಿಮೆ ಓದಿನ ನೆಪವೊಡ್ಡಿ ಒಂದೆರಡು ಸಂಬಂಧಗಳು ಕೂಡಿ ಬರುವುದಿಲ್ಲವಾದರೂ, ಹಾಗೆ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಬಂದು ಆಗಿನ ಕಾಲಕ್ಕೇ ಇಂಜಿನಿಯರಿಂಗ್ ಓದಿದ್ದ ಹುಡುಗನೊಂದಿಗೆ ಆಕೆಯ ಮದುವೆಯಾಗಿ ತುಂಬು ಕುಟುಂಬದ… Read More ಗೃಹಿಣಿ ಗೃಹಮುಚ್ಯತೆ