ಒಂದು ಸಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ.
ಬ್ರಾಹ್ಮಣರು ತಮ್ಮ ಜಾತಿಗೆ ಅವಮಾನ ಮಾಡಲಾಗಿದೆ ಆ ಪೂಜಾರಿ ಪಾತ್ರಧಾರಿಯ ಹೆಗಲಮೇಲೆ ಕಾಲಿಟ್ಟ ದೃಶ್ಯವನ್ನು ಕತ್ತರಿಸಬೇಕೆಂದು ಪ್ರತಿಭಟನೆ ಮಾಡುತ್ತಾರಂತೆ..😛
ಆದರೆ ಮತ್ತೊಬ್ಬ ಸಹಕಲಾವಿದನ ತಲೆಯಮೇಲೆ ಕಾಲಿಟ್ಟರು ಅದನ್ನು ಕೇಳುವವರು ಯಾರಿಲ್ಲ ಯಾಕೆಂದರೆ ಇಲ್ಲಿ ಮನುಷ್ಯನಿಗಿಂತ ಆತ ಪ್ರತಿನಿಧಿಸುವ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ…🤨
ಒಂದುವೇಳೆ ಪೂಜಾರಿಯ ಸೀನನ್ನು ಕತ್ತರಿಸುವುದಾದರೆ ಸಹಕಲಾವಿದನ ಸೀನನ್ನು ಕತ್ತರಿಸಬೇಕು ಅಷ್ಟೇ ಇಲ್ಲಿ ಎಲ್ಲರೂ ಒಂದೇ ಯಾರು ವಿಶೇಷರಲ್ಲ…👍
ಈ ರೀತಿಯಾದ ಇನ್ನೂ ಅನೇಕ ವಿತಂಡವಾದಗಳು ನೆನ್ನೆ ಮೊನ್ನೆಯಿಂದ ಆರಂಭವಾಗಿದೆ. ಈ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿತಂಡ ವಾದ ಮಂಡನೆ ಮಾಡುತ್ತಿರುವವರೆಲ್ಲರೂ ಅನ್ಯ ಧರ್ಮೀಯರಾಗಿರದೇ ನಮ್ಮ ಹಿಂದೂಗಳೇ ಎನ್ನುವುದು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಈ ರೀತಿಯಾಗಿ ಓತ ಪ್ರೋತವಾಗಿ ವಾದ ಮಂಡಿಸುತ್ತಿರುವ ಬೌದ್ಧಿಕ ದಿವಾಳಿತನದ ಬಗ್ಗೆ ನಿಜಕ್ಕೂ ಕಾಳಜಿಯಾಗುತ್ತಿದೆ.
ಆರಂಭದಿಂದಲೂ ಹಿಂದೂಗಳನ್ನು ಒಡೆಯುವ ಹುನ್ನಾರ ನಡೆಯುತ್ತಲೇ ಇತ್ತು. ಹಾಗೆ ಹಿಂದೂಗಳನ್ನು ಒಡೆಯ ಬೇಕೆಂದರೆ ಅವರಲ್ಲಿಯೇ ಒಡಕು ಮೂಡಿಸಬೇಕು, ಹಾಗೆ ಒಡಕು ಮೂಡಿಸಬೇಕೆಂದರೆ ಅವರಿಗೆ ಸುಲಭವಾಗಿ ಸಿಕ್ಕಿದ್ದೇ ಬ್ರಾಹ್ಮಣರು. ಹಾಗಾಗಿ ಅವರು ಬ್ರಾಹ್ಮಣರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಅವರ ವಿರುದ್ಧ ಇತರೇ ಹಿಂದೂಗಳನ್ನು ಎತ್ತಿ ಕಟ್ಟುವುದಕ್ಕೆ ನಿರಂತರವಾಗಿ ಪ್ರಯಾಸ ಪಡುತ್ತಲೇ ಇದ್ದರು. ಕೆಲವು ಬುದ್ಧಿ ಜೀವಿ ಎನಿಸಿಕೊಂಡವರು ತಮ್ಮ ಲೇಖನದ ಮೂಲಕವೋ ಇಲ್ಲವೇ ತಮ್ಮ ಚಲನ ಚಿತ್ರಗಳಲ್ಲಿ ಕಥೆಗೆ ಅನುಗುಣವಾಗಿ, ಇಲ್ಲವೇ ಕಥೆಗೆ ಪೂರಕವಾಗಿದೆ ಎಂದು ಒಂದೋ ಇಲ್ಲಾ ಎರಡು ದೃಶ್ಯಗಳಲ್ಲಿ ಬ್ರಾಹ್ಮಣರನ್ನು ನಿಂದಿಸುವಂತಹ ಸನ್ನಿವೇಶಗಳನ್ನು ತುರುಕುವ ಮೂಲಕ ವಿಕೃತ ಮನಸ್ಥಿತಿಯನ್ನು ಮೆರೆಸುತ್ತಿದ್ದರು.
ಅಂದು ಕಿತ್ತೂರು ಸಂಸ್ಥಾನದಲ್ಲಿ ಇದ್ದ ಮಲ್ಲಪ್ಪ ಶೆಟ್ಟರ ಸಂತಾನ ಇಂದು ರಕ್ತ ಬೀಜಾಸುರರಂತೆ ಬುದ್ಧಿ ಜೀವಿಗಳು ಕಮ್ಯೂನಿಷ್ಟರು ಮತ್ತು ಜಾತ್ಯಾತೀತ ರಾಜಕಾರಣಿಗಳ ರೂಪದಲ್ಲಿ ದೇಶಾದ್ಯಂತ ಹರಡಿ ಹಿಂದೂಗಳನ್ನು ಜಾತಿ ಜಾತಿಯಡಿಯಲ್ಲಿ ಒಡೆದು ಹಿಂದೂ ಧರ್ಮವನ್ನೂ ಭಾರತವನ್ನೂ ಛಿದ್ರ ಮಾಡುವ ಹುನ್ನಾರ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದಾರೆ. ಈ ಕುಕೃತ್ಯಕ್ಕೆ ಮೊದಲು ಕ್ರೈಸ್ತ ಮಿಷನರಿಗಳು ಮತ್ತು ಪಾಕಿಸ್ತಾನದ ಬೆಂಬಲವಿತ್ತು. ಈಗ ಅವರ ಜೊತೆ ಖಲೀಸ್ಥಾನಿಗಳು ಮತ್ತು ನಮ್ಮ ವಿವಿಧ ಮಠಾಧಿಪತಿಗಳೂ ಕೈ ಜೋಡಿಸಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ. ಬ್ರಿಟೀಷರೂ ಹಿಂದೂಗಳನ್ನು ಒಡೆಯಲು ಇದೇ ಬ್ರಾಹ್ಮಣರನ್ನೇ ನಿಂದಿಸುತ್ತಿದ್ದರು. ಈಗಲೂ ಹಾಗೆಯೇ ಬ್ರಾಹ್ಮಣರ ಮುಖಾಂತರ ಹಿಂದೂಗಳನ್ನು ಒಡೆಯುವ ಹುನ್ನಾರ.
ಈಗ ವಿವಾದ ಎಬ್ಬಿಸಿರುವ ಚಿತ್ರದಲ್ಲಿ ಬ್ರಾಹ್ಮಣರ ನಿಂದನೆ ಕೇವಲ ಒಂದು ಸನ್ನಿವೇಶದಲ್ಲಿ ಆಗಿದ್ದಲ್ಲಿ ಕಥೆಗೆ ಪೂರಕ ಎಂದು ಹಿಂದೆ ಸುಮ್ಮನಿದ್ದಂತೆ ಈಗಲೂ ಬ್ರಾಹ್ಮಣರು ಸುಮ್ಮನಿರುತ್ತಿದ್ದರೋ ಏನೋ? ಆದರೆ ದುರಾದೃಷ್ಟವಶಾತ್ ಇಡೀ ಸಿನಿಮಾದಲ್ಲಿ ಬ್ರಾಹ್ಮಣರ ಅವಹೇಳನ ಮಾಡುವಂತಹ ಹತ್ತಾರು ದೃಶ್ಯಗಳು ಇರುವುದು ನಿಜಕ್ಕೂ ದುಖಃಕರವೇ ಸರಿ.
ನಾಯಕನನ್ನು ವಿಜೃಂಭಿಸಲು, ಕಥೆಗೆ ಪೂರಕ ಎನ್ನುವ ಸಬೂಬು ನೀಡಿ ನಾಯಕ ಹೋಮ ಮಾಡುತ್ತಿದ್ದ ಪುರೋಹಿತರ ಭುಜದ ಮೇಲೆ ಕಾಲು ಇಡುವುದು, ನಂತರ ಪುರೋಹಿತರನ್ನು ತಲೆಕೆಳಗೆ ನೇತು ಹಾಕಿ ಅವರ ಗಡ್ಡವನ್ನು ಕತ್ತರಿಸುವುದು ಎಷ್ಟು ತಪ್ಪು ಎಂದು ಹೇಳುತ್ತೇವೆಯೋ ಅದೇ ರೀತಿ ಸಹ ಕಲಾವಿದನ ತಲೆಯ ಮೇಲೆ ಕಾಲನ್ನು ಇಡುವುದನ್ನೂ ಖಂಡಿಸುತ್ತೇವೆ. ಕೆಲ ತಿಂಗಳುಗಳ ಹಿಂದೆ ವಿನಯ್ ಗುರೂಜಿ ಎಂಬ ಸ್ವಘೋಷಿತ ಅವಧೂತರೊಬ್ಬರು ಈಜುಕೊಳದಲ್ಲಿದ್ದ ತಮ್ಮ ಭಕ್ತನ ತಲೆಮೇಲೆ ಕಾಲಿಟ್ಟಾಗಲೂ ಆದನ್ನು ಖಂಡಿಸಿದ್ದೆವು. ತಪ್ಪು ಯಾರು ಮಾಡಿದರೂ ಅದು ತಪ್ಪೇ ಅದರ ಕುರಿತಂತೆ ಯಾವುದೇ ತಾರತಮ್ಯವಿಲ್ಲ.
ನಮ್ಮ ಧರ್ಮದಲ್ಲಿ ಪ್ರತಿಯೊಬ್ಬರಲ್ಲೂ ಭಗವಂತನನ್ನು ಕಾಣುತ್ತೇವೆ. ಅದು ಮನುಷ್ಯ, ಪ್ರಾಣಿ, ಪಶು ಪಕ್ಷಿ ಕಡೆಗೆ ವಾಹನಗಳಲ್ಲಿಯೂ ದೇವರನ್ನು ಕಾಣುತ್ತೇವೆ. ಅಕಸ್ಮಾತ್ ತಿಳಿದೋ ತಿಳಿಯದೋ ಒಬ್ಬರ ಕಾಲು ಮತ್ತೊಬ್ಬರಿಗೆ ತಗುಲಿದರೇ ಸಾಕು. ನಮಗೆ ನಮ್ಮ ಹಿರಿಯರು ಕೂಡಲೇ ಅವರಲ್ಲಿರುವ ಭಗವಂತನಿಗೆ ನಮ್ಮಿಂದ ಅಪಚಾರವಾಗಿದೆ ಎಂದು ಅವರನ್ನು ಮುಟ್ಟಿ ನಮಸ್ಕಾರ ಮಾಡುವನ್ನು ಹೇಳಿಕೊಟ್ಟಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ, ಭೂಮಿಯನ್ನು ಸ್ಪರ್ಷಿಸಿ ಭೂತಾಯಿ ಎಂದು ನಮಸ್ಕರಿಸುತ್ತೇವೆ. ಹಸುಗಳನ್ನು ಸಹಾ ಗೋಮಾತೇ ಎಂದೇ ಪೂಜಿಸುತ್ತೇವೆ, ನಮಸ್ಕರಿಸುತ್ತೇವೆ. ಇನ್ನು ನಾವು ಓಡಾಡಲು ಬಳಸುವ ಕುದುರೆಯನ್ನಾಗಲೀ ಇಲ್ಲವೇ ವಾಹನಗಳನ್ನು ಹತ್ತಿ ಕೂರುವ ಮುನ್ನ ಅದಕ್ಕೆ ನಮಸ್ಕರಿಸಿಯೇ ಕುಳಿತು ಕೊಳ್ಳುವ ಸಂಸ್ಕಾರ ನಮ್ಮದಾಗಿದೆ.
ನೆನ್ನೆ ಮೊನ್ನೆ ಬ್ರಾಹ್ಮಣರು ಜಾಗೃತಗೊಂಡು ದಿಟ್ಟತನದಿಂದ ನಡೆಸುತ್ತಿರುವ ಈ ಹೋರಾಟದ ಪರಿಣಾಮ ಆ ಚಿತ್ರದ ನಿರ್ದೇಶಕ ಕ್ಷಮೆಯಾಚಿಸಿದ್ದಲ್ಲದೇ, ಆ ಚಿತ್ರದಲ್ಲಿದ್ದ ಎಲ್ಲಾ ಅವಹೇಳನಕಾರಿ ದೃಶ್ಯಗಳನ್ನು ಕತ್ತರಿಸಿ ಹಾಕಲು ಒಪ್ಪಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಹೋರಾಟ ಕೇವಲ ಬ್ರಾಹ್ಮಣರ ಜಾತಿಗೆ ಮೀಸಲಾಗಿರುವ ಹೋರಾಟ ಎಂದು ಭಾವಿಸಿದ್ದರೆ ಅದು ಅಂತಹವರ ಬೌದ್ಧಿಕ ದಿವಾಳಿತನ ಎನ್ನಬೇಕಾಗುತ್ತದೆ.
ಈ ಹೋರಾಟ ಕೇವಲ ಬ್ರಾಹ್ಮಣರ ಹೋರಾಟವಾಗಿರದೇ, ಸಕಲ ಹಿಂದೂ ಪರ ಹೋರಾಟವಾಗಿದೆ. ಈ ಹೋರಾಟದ ಪರಿಣಾಮವಾಗಿ ಇನ್ನು ಮುಂದೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಯಾವುದೋ ಒಂದು ಜಾತಿ, ಧರ್ಮದ ಕುರಿತಂತೆ ಇಂತಹ ವಿವಾದಾತ್ಮಕ ಕಥೆ ಸಂಭಾಷಣೆಗಳನ್ನು ಬರೆಯುವ, ಅಂತಹ ಚಿತ್ರಗಳನ್ನು ನಿರ್ದೇಶಿಸುವ ಇಲ್ಲವೇ ನಿಮಾಣ ಮಾಡುವ ಮುನ್ನ ಹತ್ತು ಹಲವಾರು ಬಾರಿ ಯೋಚಿಸುತ್ತಾರೆ. ಇನ್ನು ಮುಂದೆ ನಟ ನಟಿಯರು ಖಂಡಿತವಾಗಿಯೂ ಯಾವುದೇ ಜಾತಿ ಅಥವಾ ಧರ್ಮವನ್ನು ಅವಹೇಳನ ಮಾಡುವ ದೃಶ್ಯಗಳಲ್ಲಿ ನಟಿಸುವ ದುಸ್ಸಾಹಸಕ್ಕೆ ಇಳಿಯುವುದಿಲ್ಲ ಎನ್ನುವ ಆಶಾಭಾವನೆ ಈ ಪ್ರತಿಭಟನೆಯ ಮೂಲಕ ಮೂಡಿದೆ.
ಹಿಂದೂ ಎದ್ದರೆ ದೇಶ ಎದ್ದೀತು. ಹಿಂದೂ ಉಳಿದರೆ ಮಾತ್ರವೇ ದೇಶ ಉಳಿದೀತು. ಹಿಂದೂಗಳು ನೆಮ್ಮದಿಯಾಗಿದ್ದಲ್ಲಿ ಮಾತ್ರವೇ ಈ ದೇಶದಲ್ಲಿ ಅನ್ಯಧರ್ಮೀಯರೂ ನೆಮ್ಮದಿಯಾಗಿ ತಮ್ಮ ತಮ್ಮ ಥರ್ಮಾಚರಣೆಯನ್ನು ಮಾಡಿಕೊಳ್ಳುತ್ತಾ ಬಾಳಬಹುದು ಇಲ್ಲದಿದ್ದಲ್ಲಿ ಯಾವುದೋ ಒಂದು ಧರ್ಮಾನುಸಾರವಾಗಿ ಬಾಳಬೇಕಾದ ಸರ್ವಾಧಿಕಾರಿತನದ ಅನಿವಾರ್ಯತೆ ಬಂದೊದಗಬಹುದು.
ಈ ಪ್ರತಿಭಟನೆಯ ಮೂಲಕ ಸಮಸ್ತ ಹಿಂದೂಗಳ ಒಗ್ಗಟ್ಟಿಗೆ ಬುನದಿ ಹಾಕಿದೆ ಎಂದರೂ ತಪ್ಪಾಗಲಾರದು. ಇಂದು ಕನ್ನಡಿಗರು ನಡೆಸಿದ ಹೋರಾಟದ ಮೂಲಕ ಕನ್ನಡ ಚಿತ್ರರಂಗ ಮಾರ್ಪಾಟಾದಲ್ಲಿ ಕ್ರಮೇಣ ಈ ಉತ್ತಮ ಬೆಳವಣಿಗೆಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಅಂತಿಮವಾಗಿ ಹಾಲಿವುಡ್ಡಿನಲ್ಲೂ ಬದಲಾವಣೆ ಗಾಳಿ ಬೀಸುವುದರಲ್ಲಿ ಅನುಮಾನವೇ ಇಲ್ಲ.
ಹಿಂದೂಗಳು ಎಂದೂ, ಯಾವತ್ತೂ, ಯಾರ ಮೇಲೂ ಹಿಂದೂ ಧಾಳಿ ನಡೆಸಿಲ್ಲ ಮತ್ತು ಮುಂದೂ ಧಾಳಿ ನಡೆಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಹಿಂದಿನಂತೆ ತನ್ನ ಮೇಲೆ ಅವ್ಯಾಹತವಾಗಿ ಧಾಳಿ ನಡೆಸುತ್ತಿದ್ದರೆ ಸುಮ್ಮನೆ ಕೈ ಕಟ್ಟಿ ಕೂರುವ ಮನಸ್ಥಿತಿ ಇಂದಿನ ಹಿಂದೂಗಳಿಗಿಲ್ಲ.
ಸ್ನೇಹಕ್ಕೆ ಬದ್ಧ. ಸಮರಕ್ಕೂ ಸಿದ್ದ. ಸಮರ ಎಂದರೆ ಕೇವಲ ಖಡ್ಗ ಹಿಡಿದಾಗಲೀ ಇಲ್ಲವೇ ಮತ್ತೊಬ್ಬರ ಮೇಲೆ ದಾಳಿ ಮಾಡುವುದಲ್ಲ. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವುದರ ಮೇಲೆ ನಂಬಿಕೆ ಇರುವವರು ನಾವು. ಹಾಗಾಗಿ ಹಿಂದುಗಳು ಎಂದೂ ಮೂಲಭೂತವಾದಿಗಳಾಗಲು ಸಾಧ್ಯವೇ ಇಲ್ಲ.
ಏನಂತೀರೀ?
ನಿಮ್ಮವನೇ ಉಮಾಸುತ
ಸಿನಿಮಾದಲ್ಲಿ ಒಬ್ಬ ಜನಿವಾರಿಧಾರಿಯ ಮೇಲೆ ಕಾಲಿರಿಸುವುದನ್ನು ಹಿಂದೂಗಳ ಮೇಲಿನ ಆಕ್ರಮಣ ಎಂದೆಲ್ಲಾ ಘೋಷಿಸುವುದರಲ್ಲೇ ಗೊತ್ತಾಗುತ್ತದೆ ಹಿಂದೂ ಮೂಲಭೂತವಾದ ಎಷ್ಟು ಬೆಳೆಯುತ್ತಿದೆ ಎಂದು. ಹಿಂದೆ ಒಂದು ಪ್ರವಾದಿಯ ಕಾರ್ಟೂನ್ ಬಿಡಿಸಿದ್ದಕ್ಕೆ ದಾಳಿ ಮಾಡುತ್ತಿದ್ದ ಮುಸಲ್ಮಾನ ಮೂಲಭೂತವಾದಿಗಳ ಸ್ವರೂಪವನ್ನೇ ಪಡೆಯುತ್ತಿದೆ. ಜನಿವಾರಧಾರಿ ಬ್ರಾಹ್ಮಣರು ಯಾರೂ ಕೆಟ್ಟದ್ದನ್ನೇ ಮಾಡಿಲ್ಲವೇ? ಜನಿವಾರಧಾರಿ ಬ್ರಾಹ್ಮಣ ಕೆಟ್ಟದ್ದನ್ನು ಮಾಡಿದ್ದರೆ ಅವನನ್ನು ಶಿಕ್ಷಿಸುವ ಹಕ್ಕಿಲ್ಲವೇ? ಸಮಾಜದಲ್ಲಿರುವ ಕೆಟ್ಟ ಜನಿವಾರಧಾರಿ ಬ್ರಾಹ್ಮಣರನ್ನು ತೋರಿಸುವ ಸ್ವಾತಂತ್ರ್ಯ ಸಿನಿಮಾ ಮಾಧ್ಯಮದವರಿಗಿಲ್ಲವೇ?
LikeLike
ರೀ ಸ್ವಾಮೀ, ಆ ಚಿತ್ರದ ಸನ್ನಿವೇಶದಲ್ಲಿ ಜನಿವಾರಧಾರಿ ಋತ್ವಿಕರು ಲೋಕ ಕಲ್ಯಾಣಕ್ಕಾಗಿ ಯಾಗ ಮಾಡುತ್ತಿರುವಾಗ ಯಾರೋ ಪುಡಾರೀ ಅವರ ಹೆಗಲು ಮೇಲೆ ಕಾಲಿಟ್ಟಿದ್ದು ಅಕ್ಷಮ್ಯ ಅಪರಾಧ. ಅದೇ ರೀತಿ ಮತ್ತೊಂದು ಸನ್ನಿವೇಶದಲ್ಲಿ ಮತ್ತೊಬ್ಬರ ತಲೆ ಮೇಲೆ ನಾಯಕ ಕಾಲಿಟ್ಟಿದ್ದೂ ತಪ್ಪು.
ಒಟ್ಟಿನಲ್ಲಿ ಇದು ಚಿತ್ರ ಕಥೆಯನ್ನು ಹೆಣೆದ,ಅದನ್ನು ನಿರ್ದೇಶಿಸಿದ ಮತ್ತು ಅದನ್ನು ನಿರ್ಮಿಸಿದವರ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ಪ್ರತಿಭಟಿಸುವುದು ಮೂಲಭೂತವಾದ ಹೇಗಾಗುತ್ತದೆ?
ಮೂಲಭೂತವಾದ ಎಂದರೆ,ಕೆಲ ದಶಕಗಳ ಹಿಂದೆ ಮಲಯಾಳಂನಲ್ಲಿ ಪ್ರಕಟಿತವಾಗಿದ್ದ ಒಂದು ಕಥೆಯನ್ನು Indian Express ಪತ್ರಿಕೆ Englishಗೆ ಅನುವಾದಿಸಿದ್ದರು. ಅ ಕಥೆಯ ನಾಯಕನ ಹೆಸರು ಮೊಹಮ್ಮದ್ ಎಂದಾಗಿದ್ದು, ಕಥೆಯ ಅಂತ್ಯದಲ್ಲಿ Is Mohammed Idiot? ಎಂಬ ಪ್ರಶ್ನೆಯೊಂದಿಗೆ ಕಥೆ ಮುಗಿಸಿದ್ದನ್ನು ಖಂಡಿಸಿ ಎರಡು ದಿನ ಬೆಂಗಳೂರನ್ನು ಸುಟ್ಟುಹಾಕಿದ್ದು,
Mohd. Azar ಭಾರತದ ತಂಡದ ನಾಯಕನಾಗಿದ್ದಾಗ, ಯಾವುದೋ ಶೂ ಕಂಪನಿಯ Brand Ambassador ಆಗಿ ಆ ಶೂಗಳ ಮೇಲೆ mohd. Aazaruddin ಎಂಬ ಸಹಿ ಇದ್ದದ್ದಕ್ಕೆ ಭಾರೀ ಪ್ರತಿಭಟನೆ ನೆಡಸಿದ್ದು,
ಕೆಲವೇ ತಿಂಗಳ ಹಿಂದೆ DJಹಳ್ಳಿಯಲ್ಲಿ ತಾವೇ Chethan ನನ್ನು ಪ್ರಚೋದಿಸಿ, ಅದಕ್ಕೆ ಆತ ನೀಡಿದ ಕಮೆಂಟ್ ಹಿಡಿದುಕೊಂಡು ಆ ಪ್ರದೇಶಗಲ್ಲಿ ದಾಂದಲೆ ಎಬ್ಬಿಸಿದ್ದು ಮೂಲಭೂತವಾದ ಎನಿಸುತ್ತದೆ.
ಬ್ರಾಹ್ಮಣರಾಗಲೀ ಅಥವಾ ಯಾವ ಜಾತೀ ಅಥವಾ ಯಾವುದೇ ಧರ್ಮದ ವ್ಯಕ್ತಿ ತಪ್ಪು ಮಾಡಿದ್ದಲ್ಲಿ ಅತನನ್ನು ಶಿಕ್ಷಿಸುವ ಹಕ್ಕು ಕಾನೂನಾತ್ಮಕವಾಗಿರಬೇಕೇ ಹೋರತು,ಯಾವುದೋ ಪುಂಡುಪೋಕರಿಗಳು ಕಾನೂನನ್ನೇ ತಮ್ಮ ಕೈಗೆ ತೆಗೆದುಕೊಳ್ಳುವುದಲ್ಲ.
ಇಡೀ ಪ್ರಕರಣದಲ್ಲಿ ಬ್ರಾಹ್ಮಣ ಸಮುದಾಯ, ಪ್ರಜಾತಾಂತ್ರಿಕವಾಗಿ ಪ್ರತಿಭಟನೆ ನಡೆಸಿ, ಜಯ ಪಡೆಯಿತೇ ಹೊರತು, ಹಿಂಸಾತ್ಮಕವಾಗಿ ಯಾರನ್ನೂ ಪ್ರಚೋದಿದಲಿಲ್ಲ ಎನ್ನುವುದು ಗಮನಾರ್ಹ.
ಇದು ಎಲ್ಲರಿಗೂ ಮಾರ್ಗದರ್ಶಿ ಆಗಬೇಕು.
LikeLike
ಬ್ರಾಹ್ಮಣ ಸಭಾದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಎನ್ನುವವರು ಪೊಗರು ಚಿತ್ರಕ್ಕೆ ಕತೆ ಬರೆದವನನ್ನು ಸೂಳೆಮಗ ಎಂದು ಬಹಿರಂಗವಾಗಿ ಹೀಯಾಳಿಸಿದ್ದಾರೆ. ಈ ಮಾತನ್ನು ಹೇಳಬೇಕಾದರೆ ಅವರು ಜನಿವಾರಧಾರಿಯೇ ಆಗಿದ್ದರು ಅಲ್ಲವೇ? ಹಾಗೆಯೇ ಜನಿವಾರಧಾರಿ ಬ್ರಾಹ್ಮಣರು ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸುವ ಹಾಗೂ ಅದಕ್ಕೆ ಪ್ರತಿಕ್ರಿಯೆಗಳು ಬರುತ್ತವೆ ಎನ್ನುವುದನ್ನು ತೋರಿಸುವ ಅಧಿಕಾರ ಸಿನಿಮಾ ಮಾಡಿದವರಿಗೆ ಇದೆ. ಜನಿವಾರ ತೊಟ್ಟುಕೊಂಡು ಇನ್ನೊಬ್ಬರಿಗೆ ಸೂಳೆಮಗ ಎಂದೆಲ್ಲಾ ಕರೆದರೂ ಯಾರೂ ಅವರ ಮೇಲೆ ಪ್ರತಿಕ್ರಿಯಿಸಬಾರದು ಎಂಬ ಮನಸ್ಥಿತಿಯಿಂದ ಹೊರಗೆ ಬರಬೇಕಾದ ಅವಶ್ಯಕತೆಿಯಿದೆ.
LikeLike