ಯುನೈಟೆಡ್ ಇಂಡಿಯಾ ಥಾಲಿ, ಅರ್ಡರ್ 2.1, ದೆಹಲಿ

ನಮ್ಮ ದೇಶ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವಂತಹ ರಾಷ್ಟ್ರ, ಸದ್ಯಕ್ಕೆ ನಮ್ಮ ದೇಶ 28 ರಾಜ್ಯ ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಅಧಿಕೃತವಾಗಿ 15 ಭಾಷೆಗಳು ಎಂದು ಘೋಷಿಸಲ್ಪಟ್ಟಿದ್ದರೂ ಸಾವಿರಾರು ಭಾಷೆ ಮತ್ತು ಉಪಭಾಷಿಗರನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ಹಾಗಾಗಿ ಇದು ಒಂದು ದೇಶ ಎನ್ನುವುದಕ್ಕಿಂತಲೂ ಒಂದು ಉಪಖಂಡ ಎಂದರೂ ಉತ್ರ್ಪೇಕ್ಷೇಯೇನಲ್ಲ. ಇಷ್ಟೊಂದು ಭಾಷೆಗಳು ಇರುವ ಈ ದೇಶದಲ್ಲಿ ಆದಕ್ಕೆ ಅನುಗುಣವಾಗಿ ಸಂಪ್ರದಾಯ, ಸಂಸ್ಕೃತಿ, ಆಹಾರ ಪದ್ದತಿ ಮತ್ತು ಜೀವನ ಶೈಲಿಯು ವಿಭಿನ್ನವಾಗಿದೆ. ಹಾಗಾಗಿಯೇ ಬಹುತೇಕ ಭಾರತೀಯರು ದೇಶ ವಿದೇಶಗಳಿಗೆ ಹೋದಾಗ, ಆ ಪ್ರದೇಶಗಳಲ್ಲಿ ತಮ್ಮ ಶೈಲಿಯ ಆಹಾರ ಸಿಗುವ ಸ್ಥಳಗಳನ್ನು ಹುಡುಕುತ್ತಾರೆ. ಅದಕ್ಕಾಗಿಯೇ ಬಹು ಪಾಕ ಪದ್ದತಿಯ (multi cuisine) ಹೋಟೆಲ್ಗಳು ಎಲ್ಲಾ ಕಡೆಯಲ್ಲಿಯೂ ಇದ್ದು ಸುಮಾರು ಮೂರ್ನಾಲ್ಕು ಭಾರತೀಯ ಆಹಾರ ಶೈಲಿಯನ್ನು ಉಣಬಡಿಸುತ್ತದೆ.

ಇಡೀ ದೇಶದ ಎಲ್ಲಾ 28 ರಾಜ್ಯಗಳ ಆಹಾರಗಳನ್ನು ಅಯಾಯಾ ರಾಜ್ಯಗಳ ಬಾಣಸಿಗರೇ ತಯಾರಿಸಿ ಒಂದೇ ಸ್ಥಳದಲ್ಲಿ ಸಿಗಬಹುದೇ ಎಂದು ನೋಡುತ್ತಿದ್ದಾಗ ಕಣ್ಣಿಗೆ ಬಿದ್ದದ್ದೇ, ದೆಹಲಿಯ ಕನಾಟ್ ಪ್ಲೇಸ್ ನ ಅರ್ಡರ್ 2.1 ರೆಸ್ಟೋರೆಂಟಿನ ಯುನೈಟೆಡ್ ಇಂಡಿಯಾ ಥಾಲಿ. ಹೆಸರಿಗೆ ತಕ್ಕಂತೆಯೇ ಭಾರತದ ಆಹಾರಗಳ ವೈವಿಧ್ಯತೆಯನ್ನು ಭಾರತದ ನಕ್ಷೆಯ ಆಕಾರದಲ್ಲಿರುವ ತಟ್ಟೆಯಲ್ಲಿ ಉಣಬಡಿಸುವುದನ್ನು ನೋಡುವ ಮೊದಲ ನೋಟದಲ್ಲಿಯೇ ಮನಸೂರೆಗೊಳ್ಳುತ್ತದೆ. ಭಾರತದ ಭೂಪಟ ಆಕಾರದ ಈ ತಟ್ಟೆಯಲ್ಲಿ ಆಯಾಯಾ ರಾಜ್ಯಗಳ ಜಾಗದಲ್ಲಿ ಅಲ್ಲಿಯ ಆಹಾರ ಸಂಸ್ಕೃತಿ ಬಿಂಬಿಸುವ ಖಾದ್ಯಗಳನ್ನು ಜೋಡಿಸಿರುವುದನ್ನು ಕಣ್ತುಂಬಿಸಿಕೊಳ್ಳುತ್ತಿದ್ದಂತೆಯೇ, ಬಾಯಿಯಲ್ಲಿ ನೀರೂರುತ್ತಲ್ಲದೇ, ಹೊಟ್ಟೆಯೂ ತುಂಬಿ ಹೋಗುತ್ತದೆ ಎಂದರೂ ತಪ್ಪಾಗಲಾರದು.

ಸುಮಾರು 5-10 ಕೆಜಿ ತೂಗಬಹುದಾದ ಈ ಧಾಲಿಯಲ್ಲಿ ಶಾಖಾಹಾರಿ ಮತ್ತು ಮಾಂಸಾಹಾರಿ ಪದ್ದತಿಗಳು ಲಭ್ಯವಿದ್ದು ಮೂರರಿಂದ ನಾಲ್ಕು ಮಂದಿ ಇರುವ ಕುಟುಂಬವರು ಅಚ್ಚು ಕಟ್ಟಾಗಿ ಹೊಟ್ಟೇ ತುಂಬ ತಿನ್ನಬಹುದಾಗಿದೆ. ನಿಜವಾಗಿಯೂ ಬಕಾಸರರಂತೆ ಭಕ್ಷಿಸುವ ಮಂದಿಯಿದ್ದಲ್ಲಿ ಇಬ್ಬರಿಗೆ ಸಾಕಾಗಬಹುದೇನೋ? ಗುಜರಾತ್‌ನ ಢೋಕ್ಲ, ಪಂಜಾಬ್‌ನ ಚನ್ನಾ ಚೋಲೆ, ಬಂಗಾಳದ ರಸಗುಲ್ಲಾ, ಮಹಾರಾಷ್ಟ್ರದ ವಡಾ ಪಾವ್‌, ದಕ್ಷಿಣ ಭಾರತದ ಬಿಸಿ ಬೇಳೆ ಭಾತ್‌, ಇಡ್ಲಿ ವಡೆ ಮುಂತಾದ ಕೆಲವು ಖಾದ್ಯಗಳಲ್ಲದೇ, ಚೌಕಿದಾರ್‌ ಪರೋಟ, ಭಾಂಗ್‌ ಕಿ ಚಟ್ನಿ, ಪುದೀನ ಚಟ್ನಿ, ರಸಂ ಇತ್ಯಾದಿಗಳಿರುತ್ತವೆ.

ಯಾವ ಯಾವ ರಾಜ್ಯದ ಯಾವ ಖಾದ್ಯಗಳು ಆ ದಿನದ ಊಟದ ತಟ್ಟೆಯಲ್ಲಿ ಲಭ್ಯವಿರುತ್ತದೆ ಎಂಬುದನ್ನು ಸುಂದರವಾಗಿ ಮುದ್ರಿಸಿ ಪ್ರಸ್ತುತ ಪಡಿಸುವುದು ನಿಜಕ್ಕೂ ಅಭಿನಂದನೀಯವಾಗಿದೆ.

 

 

 

ಈ ರೆಸ್ಟೋರೆಂಟಿನ ಮಾಲಿಕರಾದ ಶ್ರೀ ಸುವೀತ್ ಕಲ್ರಾ ಮತ್ತು ಶ್ರೀ ಮೇಘ್ ಭಾಟಿಯಾ ಕಲ್ರಾ ಅವರು ಈ ಮೊದಲು ಮೋದಿ ಜೀ 56-ಇಂಚಿನ ಥಾಲಿ ಮತ್ತು ಬಾಹುಬಲಿ ಥಾಲಿಯನ್ನು ಪರಿಚಯಿಸಿದ್ದರು, ಇವರೆಡು ಸಹಾ ದೆಹಲಿಯಲ್ಲಿ ಅತ್ಯಂತ ಪ್ರಖ್ಯಾತವಾದ ಫುಡ್ ಪ್ಲ್ಯಾಟರ್ ಆಗಿದ್ದು ಅದರಲ್ಲಿಯೂ ಸಹಾ ವಿವಿಧ ರಾಜ್ಯಗಳ ಪಾಕ ಪದ್ದತಿಗಳೊಂದಿಗೆ 4 ಜನರಿಗೆ ಅನಿಯಮಿತ ರೋಟ್ಟಿಗಳನ್ನು ಉಣಬಡಿಸುತ್ತಿದ್ದರು.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಬಾಹುಬಲಿ ಧಾಲಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿ, ಮೊದಲ ಸುತ್ತಿನ ಚುನಾವಣೆಗಳು ಪ್ರಾರಂಭವಾದ ದಿನಾಂಕದಂದು ಯುನೈಟೆಡ್ ಇಂಡಿಯಾ ಥಾಲಿ ಯನ್ನು ಪರಿಚಯಿಸಿದರು. 2019ರ ಏಪ್ರಿಲ್ 11ರಂದು ಭಾರತದ ನಕ್ಷೆಯಂತೆ ರೂಪಿಸಲ್ಪಟ್ಟ ಈ ಥಾಲಿ 28 ಭಾರತೀಯ ರಾಜ್ಯಗಳಿಂದ 28 ವಿಭಿನ್ನ ಆಹಾರ ವಿಶೇಷತೆಗಳೊಂದಿಗೆ 29 ನೇ ಆಹಾರವಾಗಿ ಉಣಬಡಿಸುವ ಚೌಕಿದಾರ್ ಪರಾಥಾ ಎಲ್ಲರ ಮನಸ್ಸನ್ನು ಸೂರೆಗೊಂಡಿದೆ.

ಇದಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿ ಆಲೋಚಿಸಿ, ಪ್ರತೀ ರಾಜ್ಯದ ಚುನಾವಣೆಯ ದಿನಾಂಕದಂದು ಆ ರಾಜ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ವಿಶೇಷವಾಗಿ ತಯಾರಿಸಿ ಅವುಗಳನ್ನು ಅನಿನಿಯತವಾಗಿ ಆ ರೆಸ್ಟೋರೆಂಟಿನ ಅತಿಥಿಗಳಿಗೆ ಉಣಬಡಿಸಲಾಯಿತು.

ವಿಳಾಸ:
ಅರ್ಡರ್ 2.1, ಎನ್ -55 / 56 & 88/89,
ಔಟರ್ ಸರ್ಕಲ್, ಕೊನಾಟ್ ಪ್ಲೇಸ್, ನವದೆಹಲಿ

ಬೆಲೆ:
ಶಾಖಾಹಾರಿ ಥಾಲಿ – 1999 ರೂ + ತೆರಿಗೆಗಳು
ಮಾಂಸಾಹಾರಿ ಥಾಲಿ – ರೂ 2999 + ತೆರಿಗೆಗಳು
ದೂರವಾಣಿ ಸಂಖ್ಯೆ 011 66103786

ಇನ್ನೇಕ ತಡಾ ಮುಂದಿನ ಬಾರಿ ದೆಹಲಿಗೆ ಹೋದಾಗ ಈ ರೆಸ್ಟೋರೆಂಟಿಗೆ ಕುಟುಂಬ ಸಮೇತರಾಗಿ ಹೋಗಿ ಈ ಎಲ್ಲಾ ಖಾದ್ಯಗಳನ್ನು ಸವಿದು ಅದರ ರುಚಿಯನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

One thought on “ಯುನೈಟೆಡ್ ಇಂಡಿಯಾ ಥಾಲಿ, ಅರ್ಡರ್ 2.1, ದೆಹಲಿ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: