ಎರಡು ಕೈ ಸೇರಿದರೆ ಮಾತ್ರವೇ ಚಪ್ಪಾಳೆ.

ಕಳೆದ ಎರಡ್ಮೂರು ತಿಂಗಳುಗಳಿಂದಲೂ ಶಾಲಾ ಕಾಲೇಜಿನ ಉಡುಪಿನ ವಿಷಯದಲ್ಲಿ ಉಡುಪಿಯಲ್ಲಿ ಸಣ್ಣದಾಗಿ ಕೆಲ ಮತಾಂಧ ಮುಸಲ್ಮಾನರು ಆರಂಭಿಸಿದ ತಿಕ್ಕಾಟ ರಾಜ್ಯಾದ್ಯಂತ ಈ ಪರಿಯಾಗಿ ಹಿಂದೂಗಳನ್ನು ಜಾಗೃತ ಗೊಳಿಸುತ್ತದೆ ಎಂಬುದರ ಅರಿವಿಲ್ಲದೇ ಅವಡು ಕಚ್ಚಿಕೊಳ್ಳುವ ಪರಿಸ್ಥಿತಿಗೆ ಬಂದು ಬೆಣೆ ತೆಗೆಯಲು ಹೋಗಿ ಬಾಲ ಸಿಕ್ಕಿಸಿಕೊಂಡ ಮಂಗನಂತಾಗಿದೆ ಅವರ ಸದ್ಯದ ಪರಿಸ್ಥಿತಿ ಎಂದರೂ ತಪ್ಪಾಗದು.

1947ರಲ್ಲಿ ಧರ್ಮಾಧಾರಿತವಾಗಿಯೇ ಈ ದೇಶ ಇಬ್ಬಗವಾಗಿ ಮುಸಲ್ಮಾನರಿಗೆ ಪೂರ್ವ ಮತ್ತು ಪಶ್ವಿಮ ಪಾಕಿಸ್ಥಾನಗಳು ಉದಯವಾಗಿ ಹಿಂದೂಗಳಿಗೆ ಹಿಂದೂಸ್ಥಾನ ಎಂಬುದಾಗಿ ಇದ್ದರೂ, ಈಶ್ವರ ಅಲ್ಲಾ ತೇರೇ ನಾಮ್ ಸಬ್ಕೋ ಸನ್ಮತಿ ದೇ ಭಗವಾನ್ ಎಂದು ಸದಾಕಾಲವೂ ಮುಸಲ್ಮಾನರ ಬಗ್ಗೆ ವಿಶೇಷ ಕಕ್ಕುಲತಿ ತೋರುತ್ತಿದ್ದ ಗಾಂಧಿಯವರ ದೂರದೃಷ್ಟಿಯ ಕೊರತೆಯಿಂದಾಗಿ ಸುಮಾರು 8% ಮುಸಲ್ಮಾನರು ಈ ದೇಶದಲ್ಲೇ ಉಳಿದುಕೊಳ್ಳುವಂತಾಗಿ, ವಿಶ್ವನಾಯಕನಾಗುವ ಭ್ರಮೆಯಲ್ಲಿದ್ದ ದೇಶದ ಮೊದಲ ಪ್ರಧಾನಿ ನೆಹರು ಕೈಯ್ಯಲ್ಲಿ ಚಿವುಟಿ ಹಾಕಬಹುದಾಗಿದ್ದ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದದ್ದಲ್ಲದೇ ಅಲ್ಪಸಂಖ್ಯಾತರಿಗೆಂದೇ ವಿಶೇಶ ಸೌಲಭ್ಯವಗಳನ್ನು ನೀಡುವ ಮೂಲಕ ಕಾಂಗ್ರೇಸ್ ಎಂದಿಗೂ ಮುಸಲ್ಮಾನರ ಪರ ಎಂಬುದನ್ನು ಪರೋಕ್ಶವಾಗಿ ತೋರಿಸಿಕೊಟ್ಟಿದ್ದರು. ಅವರ ನಂತರ ಆಡಳಿತಕ್ಕೆ ಬಂದ ಅವರ ಮಗಳು ಇಂದಿರಾಗಾಂಧಿ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರಚಿತವಾಗಿದ್ದ ಸಂವಿಧಾನದಲ್ಲಿ ಇಲ್ಲದೇ ಇದ್ದ ಜಾತ್ಯಾತೀತ ಎಂಬ ಪದವನ್ನು ಸೇರಿಸಿ ಭಾರತವನ್ನು ಜಾತ್ಯಾತೀತ ದೇಶ ಎಂದು ಕರೆದಾಗಲೇ ಈ ದೇಶದ ಅವನತಿ ಆರಂಭವಾಯಿತು ಎಂದರೂ ಅತಿಶಯವಲ್ಲ.

ದೇಶ ಮತ್ತು ಧರ್ಮದ ನಡುವಿನ ಅಂತರ ತಿಳಿಯದ ಕೆಲ ಮತಾಂಧ ಮುಸಲ್ಮಾನ ಮುಲ್ಲಾಗಳು ನಮ್ಮ ದೇಶದ ಬಗ್ಗೆ ಅಭಿಮಾನ ತುಂಬುವುದರ ಬದಲು ಅಮ್ಮನ ತೊಡೆಯಲ್ಲಿ ಅಮ್ಮನ ಎದೆ ಹಾಲು ಕುಡಿಯುವ ಮಕ್ಕಳಿಗೇ ನಮ್ಮ ದೇಶದ ಬಗ್ಗೆ ದುರಾಭಿಮಾನವನ್ನು ತುಂಬಿದ ಪರಿಣಾಮವೇ, ಹಿಂದೂ ಮುಸಲ್ಮಾನರ ಸೌಹಾರ್ಥತೆ ಕಡಿದು ಬಿತ್ತು. ಸರ್ವೇ ಜನಾಃ ಸುಖಿನೋ ಭವಂತು, ವಸುದೈವ ಕುಟುಂಬಕಂ ಎಂದು ಹಿಂದೂಗಳು ಪಠಿಸುತ್ತಿದ್ದರೆ, ಅಲ್ಲಾ ಹು ಅಕ್ಬರ್, ಅಲ್ಲಾ ಒಬ್ಬನೇ ಸರ್ವಶ್ರೇಷ್ಠ ಅವನನ್ನು ಆರಾಧಿಸದೇ ಇರುವವರೆಲ್ಲರೂ ಕಾಫೀರರು ಮತ್ತು ಅಂತಹ ಕಾಫೀರರನ್ನು ಕಂಡ ಕಂಡಲ್ಲಿ ನಾಶ ಮಾಡಿದಲ್ಲಿ ಸತ್ತು ಸ್ವರ್ಗ ಸೇರಿದ ನಂತರ 72  ಕನ್ಯೆಯರು ನಿಮ್ಮ ದಾಸಿಯಾಗುತ್ತಾರೆ ಎಂಬ ನಂಬಿಕೆ ಹುಟ್ಟಿಸಿದ ಪರಿಣಾಮ ಹಿಂದೂ ಮುಸಲ್ಮಾನರ ಸೌಹಾರ್ಧತೆಯ ಮಧ್ಯೆಯ ಕಂದಕ ದೊಡ್ಡದಾಗುತ್ತಲೇ ಹೋಗಿ, ಪದೇ ಪದೇ ಈ ದೇಶದ ಕಾನೂನನ್ನು ಧಿಕ್ಕರಿಸುತ್ತಾ, ತಾವೇನಿದ್ದರೂ, ತಮ್ಮ ಧರ್ಮಾಧಾರಿತ ಶರೀಯಾ ಕಾನೂನಷ್ಟೇ ಪಾಲುಸುತ್ತೇವೆ ಎಂಬ ನಂಬಿಕೆಯಡಿ, ಒಬ್ಬೊಬ್ಬ ಮುಸಲ್ಮಾನ ಕನಿಷ್ಟ ಪಕ್ಷ ಮೂರ್ನಾಲ್ಕು ಮದುವೆಯಾಗಿ ಹತ್ತಾರು ಮಕ್ಕಳನ್ನು ಹೆತ್ತ ಪರಿಣಾಮವೇ ಆ ಧರ್ಮದವರ ಒಟ್ಟು ಜನಸಂಖ್ಯೆ ದೇಶಾದ್ಯಂತ ಸರಾಸರಿ 20%ಕ್ಕೂ ಅಧಿಕವಾಗಿ ಹಲವಾರು ರಾಜ್ಯಗಳಲ್ಲಿ ಅವರೇ ಬಹುಸಂಖ್ಯಾತರಾದ ಪರಿಣಾಮ ಅವರನ್ನು ತಡೆಯದಂತಾಗಿ ಹೋಗಿದ್ದು ಈಗ ವಿಷಾಧನೀಯವಾದ ಸಂಗತಿ

hijabಈ ಎಲ್ಲಾ ಕಾರಣಗಳಿಂದಲೇ ಹಿಜಾಬ್ ಕುರಿತಾಗಿ ಆರಂಭವಾದ ಗಲಾಟೆ ಅದು ರಾಜ್ಯಾದ್ಯಂತ ಕಾಳ್ಗಿಚ್ಚಿನಲ್ಲಿ ಹಬ್ಬಿ ಏಟಿಗೆ ಎದಿರೇಟು ಎನ್ನುವಂತೆ ಹಿಂದೂ ಯುವಕರುಗಳು ತಿರುಗಿ ಬಿದ್ದಾಗ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋದ ಮುಸ್ಲಿಂ ಸಮುದಾಯ ಅಲ್ಲಿ ತಮ್ಮ ವಿರುದ್ಧವಾಗಿ ಬಂದ ತೀರ್ಪಿನ ವಿರುದ್ಧವಾಗಿ ಉಚ್ಚನ್ಯಾಯಾಲಯದಲ್ಲಿ ಅರ್ಜಿಸಲ್ಲಿರುವ ಎಲ್ಲಾ ಅವಕಾಶಗಳಿದ್ದರೂ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಲು ರಾಜ್ಯಾದ್ಯಂತ ಒಂದು ದಿನದ ಬಂದ್ ಆಚರಿಸಿದಾಗ, ತಮ್ಮ ತಮ್ಮ ಪ್ರದೇಶಗಳಲ್ಲಿ ಯಾರು ಈ ದೇಶದ ಪರ ಯಾರು ದೇಶದ ಕಾನೂನಿನ ವಿರುದ್ಧ ಇದ್ದಾರೆ ಎಂಬುದರ ಅರಿವಾಗಿದ್ದೇ ತಡಾ ಹಿಂದೂಗಳು ಜಾಗೃತವಾಗಿ ಈ ದೇಶದ ಕಾನೂನುನನ್ನು ವಿರೋಧಿಸುವ ಮತ್ತು ವಿಗ್ರಹಾರಾಧನೆಯನ್ನು ವಿರೋಧಿಸುವವರೊಂದಿಗೆ ಹಿಂದೂಗಳ ವ್ಯಾಪಾರ ಸಲ್ಲದು ಎಂಬ ಆರ್ಥಿಕ ದಿಗ್ಬಂಧನ ಹೇರಿದ ಕೂಡಲೇ ಬಹುತೇಕ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ಮುಸಲ್ಮಾನರು ಪತರಗುಟ್ಟಿ ಹೋದರು.

ಅದೇ ಸಮಯದಲ್ಲಿ ರಾಜ್ಯಾದ್ಯಂತ ಇರುವ ಸಾವಿರಾರು ದೇವಾಲಯಗಳ ಜಾತ್ರಾ ಮಹೋತ್ಸವವೂ ಆರಂಭವಾಗಿ 2002ರಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರವೇ ಜಾರಿಗೆ ತಂದಿದ್ದ, ಹಿಂದೂ ಧಾರ್ಮಿಕ ಕೇಂದ್ಗಗಳ ಸರಹದ್ದಿನಲ್ಲಿ ಹಿಂದೂಯೇತರು ಯಾವುದೇ ರೀತಿಯ ವ್ಯಾಪಾರ ನಡೆಸುವಂತಿಲ್ಲ ಮತ್ತು ಅವರಿಗೆ ತಾತ್ಕಾಲಿಕವಾಗಿಲೀ. ಶಾಶ್ವತವಾಗಲೀ ಗುತ್ತಿಗೆ ನೀಡುವಂತಿಲ್ಲ ಎಂಬ ಕಾನೂನಿನ ಸದುಪಯೋಗ ಪಡಿಸಿಕೊಂಡ ದಕ್ಷಿಣ ಕನ್ನಡದ ಹಿಂದೂ ಧಾರ್ಮಿಕ ಸಂಘ ಸಂಸ್ಥೆಗಳು ತಮ್ಮ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಭಹಿಷ್ಕಾರ ಹಾಕಿದ್ದು ಕಲವೇ ದಿನಗಳಲ್ಲಿ ರಾಜ್ಯಾಂದ್ಯಂತ ಹರಡಿಹೋಗಿದ್ದು ಈಗ ಇತಿಹಾಸ.

halalಇದೇ ಸಮಯದಲ್ಲಿಯೇ ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬವೂ ಬಂದು ಯುಗಾದಿ ಮಾರನೆಯ ದಿನ ಮಾಂಸಾಹಾರ ಸೇವಿಸುವ ಹಿಂದೂಗಳು ಜಾಗೃತವಾಗಿ ತಮ್ಮ ತಮ್ಮ ಬಡಾವಣೆಯಲ್ಲಿ ಮುಸ್ಲಿಂ ಧರ್ಮದಂತೆ ಅವರ ದೇವರಿಗೆ ಅರ್ಪಿಸಿದ ಹಲಾಲ್ ಮಾಂಸವನ್ನು ನಮ್ಮ ದೇವರುಗಳಿಗೆ ಅರ್ಪಿಸಿದಲ್ಲಿ ಅದು ಎಂಜಿಲಿನ ಸಮಾನ ಎಂದು ಭಾವಿಸಿ ಏಕ್ ಮಾರ್ ದೋ ತುಕಡಾ ಎನ್ನುವಂತೆ ಹಿಂದೂಗಳ ಸಂಪ್ರದಾಯದಲ್ಲಿ ಕತ್ತರಿಸಿದ ಜಟ್ಕಾ ಮಾಂಸವನ್ನು ಅದೂ ಹಿಂದೂಗಳ ಹತ್ತಿರವೇ ಖರೀಧಿಸುತ್ತೇವೆ ಎಂದು ಹೇಳಿದಾಗ ಮಾಂಸದ ವ್ಯವಹಾರವನ್ನೇ ವರ್ಷಾನು ವರ್ಷಗಟ್ಟಲೆ ಮಾಡಿಕೊಂಡು ಬಂದಿರುವ ಸಾವಿರಾರು ಮುಸಲ್ಮಾನರಿಗೆ ಆರ್ಥಿಕವಾಗಿ ಬಹುದೊಡ್ಡದಾಗಿ ಹೊಡೆತ ಬಿದ್ದಿದ್ದಂತೂ ಸುಳ್ಳಲ್ಲ.

ಪ್ರತೀ ಬಾರಿ ಕೋಮು ಗಲಬೆಯಾದಾಗ ತೋಳೇರಿಸಿಕೊಂಡು ಹೆಣಕ್ಕೆ ಹೆಣವೇ ಪ್ರತಿಕಾರ ಎಂದು ಮುಸಲ್ಮಾನರ ವಿರುದ್ಧ ತಿರುಗಿಬೀಳುತ್ತಿದ್ದ ಹಿಂದೂಗಳು ಈ ಬಾರಿ ಬಹಳ ಜಾಣ್ಮೆಯಿಂದ ಯಾವುದೇ ರೀತಿಯ ಘರ್ಷಣೆ ಇಲ್ಲದೇ, ಮಾತು ಕೇಳದೇ ತುಂಟಾಟಾ ಮಾಡುವ ವಿಧ್ಯಾರ್ಥಿಗಳಿಗೆ ಕಿವಿ ಹಿಂಡಿ ಬುದ್ಧಿ ಕಲಿಸುವ ಶಿಕ್ಶಕರಂತೆ ಬಹಳ ಸಂಯಮದಿಂದ ಮರ್ಮಘಾತವನ್ನು ಮಾಡಿದ್ದಲ್ಲದೇ ಬಹಳ ಎಚ್ಚರಿಕೆಯಿಂದ ಹಿಂದೂಗಳಿಗೆ ಹಲಾಲ್ ಎಂದರೆ ಏನು? (ಅದರ ಕುರಿತಾದ ಸಂಪೂರ್ಣ ಲೇಖನ) ತಲೆತಲಾಂತರದಿಂದಲೂ ಮಾಂಸಾಹಾರದ ವ್ಯವಹಾರವನ್ನೇ ನಂಬಿಕೊಂಡು ಜೀವನನಡೆಸುತ್ತಿದ್ದ ಹಿಂದೂ ಬಾಂಧವರ ಕೆಲಸಕ್ಕೆ ಹೇಗೆ ಕೊಡಲಿ ಬಿತ್ತು? ಹಲಾಲ್ ಪ್ರಮಾಣ ಪತ್ರ ಕೊಟ್ಟು ಹಿಂದೂಗಳಿಂದ ಹಣ ಪೀಕುವ ಮುಸಲ್ಮಾನರ ಸಂಸ್ಶೆಯೇ ಹಿಜಾಬ್ ವಿರುದ್ದದ ಹೋರಾಟದಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗಿದ ಹುಡುಗಿಗೆ 5 ಲಕ್ಷ ಬಹುಮಾನ ಕೊಡುವ ಮೂಲಕ ಸಣ್ಣ ವಯಸ್ಸಿನ ಹೆಣ್ಣುಮಕ್ಕಳಿಗೂ ಮತಾಂಧತೆಯನ್ನು ಹರಡುತ್ತಿದ್ದಾರೆ ಎಂಬ ಸಂಗತಿಯನ್ನು ಸವಿವರವಾಗಿ ವಿವರಿಸಿದ ಪರಿಣಾಮ ನೆನ್ನೆಯ ವರ್ಷ ತೊಡುಕಿನ ಮಾಂಸದ ವ್ಯವಹಾರದಲ್ಲಿ ಮುಸ್ಕಲ್ಮಾನ್ ವ್ಯಾಪಾರಿಗಳಿಗೆ ಸ್ಪಷ್ಟವಾಗಿ ನಷ್ಟವಾಗಿರುವುದಂತೂ ಅಕ್ಷರಶಃ ಸತ್ಯ.

jatka2ಜಟ್ಟಿಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಶಿಕ್ಶಣ, ವ್ಯಾಪಾರ ಮತ್ತು ಕೋಮು ಸೌಹಾರ್ಧತೆಗಿಂತಲೂ ತಮಗೆ ತಮ್ಮ ಧರ್ಮವೇ ಮುಖ್ಯ ಎನ್ನುವ ಅವರ ಮನಸ್ಥಿತಿ ಹೇಗೆ ಇರುತ್ತದೆ ಎನ್ನುವುದಕ್ಕೆ ಹಿಜಾಬ್ ಹೋರಾಟದಲ್ಲಿ ಪಾಲ್ಕ್ಗೊಂಡ ಅನೇಕ ಹುಡುಗಿಯರು ಪರೀಕ್ಷೆಯನ್ನೇ ಬರೆಯದೇ ಹೋದದ್ದು ಜ್ವಲಂತ ಉದಾಹರಣೆಯಾದರೆ, ನೆನ್ನೆಯ ವ್ಯಾಪಾರದ ಬಗ್ಗೆ ಟಿವಿ ವರದಿಗಾರನೊಬ್ಬ ಸ್ಥಳಿಯ ಮುಸ್ಲಿಂ ಮಾಂಸದ ವ್ಯಾಪಾರಿಯನ್ನು ವಿಚಾರಿಸಿದಾಗ ಆರಂಭದಲ್ಲಿ, ವ್ಯಾಪಾರದಲ್ಲಿ ನಮಗೆ ಅಂತಹದ್ದೇನೂ ವ್ಯತ್ಯಾಸವಾಗಲಿಲ್ಲ ಎಂಬ ತಿಪ್ಪೇ ಸಾರಿಸುವ ಸಿದ್ಧ ಉತ್ತರವನ್ನು ನೀಡಿದರೂ ನಂತರ ಮೇಲಿಂದ ಮೇಲೆ ವರದಿಗಾರ ಕೇಳುತ್ತಿದ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ, ಏನು ಮಾಡೋದು? ನಾವೂ ಸಹಾ ಅಂಗಡಿ ಬಾಡಿಗೆ ಕಟ್ಟಬೇಕು, ಕೆಲಸಗಾರರಿಗೆ ಸಂಬಳ ಕೊಡಬೇಕು. ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚಿಗಾಗಿ ಸಾಲಾಸೋಲ ಮಾಡಿದ್ದೇವೆ, ಈಗ ಯಾರೋ ಹೊಟ್ಟೆ ತುಂಬಿದ ಕೆಲವು ವ್ಯಕ್ತಿಗಳು ಹಲಾಲ್, ಜಟ್ಕಾ ಕಟ್ ಅಂತಾ ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂಬ ಅಳಲನ್ನು ತೋಡಿಕೊಂಡರು.

ಅದಕ್ಕೆ ಪ್ರತಿಯಾಗಿ ವರದಿಗಾರನು ನೀವೇಕೆ ಹಲಾಲ್ ಮತ್ತು ಜಟ್ಕಾ ಕಟ್ ಎರಡನ್ನೂ ನಿಮ್ಮ ಅಂಗಡಿಯಲ್ಲಿಟ್ಟು ಗ್ರಾಹಕರಿಗೇ ಆಯ್ಕೆಮಾಡಲು ಬಿಟ್ಟಲ್ಲಿ ನಿಮಗೂ ವ್ಯಾಪಾರ ಆಗುತ್ತದೆ, ಹಿಂದುಗಳ ನಂಬಿಕೆಯೂ ಉಳಿಯುತ್ತದೆ ಎಂದು ಕೇಳಿದಾಗ,

ತುಸು ಕೋಪದಿಂದಲೇ ಅಂಗಡಿಯವನು ಅದ್ಹೇಗೆ ಆಗುತ್ತೆ ಸಾಬ್? ನಮ್ಮಂಗಡಿಯಲ್ಲಿ ಹಲಾಲ್ ಮಾತ್ರ ಮಾರೋದು. ವ್ಯಾಪಾರ ಇಲ್ಲಾಂದ್ರು ಪರ್ವಾಗಿಲ್ಲ, ನಾವು ಜಟ್ಕಾ ಮಾಂಸ ಮಾರೋದಿಲ್ಲ ಎಂದು ಖಡಾ ಖಂಡಿತವಾಗಿ ವರದಿಗಾರನ ಮುಖಕ್ಕೆ ಹೊಡೆದಂತೆ ಹೇಳಿದ್ದು ನಿಜಕ್ಕೂ ಅಚ್ಚರಿಯನ್ನು ಮೂಡಿಸಿತು.

ಅದೇ ರೀತಿ ಹಿಂದೂಗಳ ಪರವಾಗಿ ಹಿಂದವೀ ಮಾರ್ಟ್ ಪರವಾಗಿ ಹೋರಾಡುತ್ತಿರುವ ಸಾಮಾಜಿಕ ಹೋರಾಟಗಾರನ ಸಂದರ್ಶನದಲ್ಲಿ ಮುಸಲ್ಮಾನರ ಕೋಮು ಸೌಹಾರ್ಧತೆಯ ಮನಸ್ಥಿತಿ ಎಂತಹದ್ದು ಎಂದು ಪರೀಕ್ಷಿಸುವ ಸಲುವಾಗಿ ವರದಿಗಾರ ನೇರ ಪ್ರಸಾರದಲ್ಲಿಯೇ ತನ್ನ ಮುಸಲ್ಮಾನ ಸ್ನೇಹಿತರಿಗೆ ಕರೆ ಮಾಡಿ, ನಿಮ್ಮ ಹಬ್ಬ ಹರಿದಿನಗಳಲ್ಲಿ ನಾವು ನಿಮ್ಮ ಮನೆಗೆ ಬಂದು ಮಟನ್, ಚಿಕ್ಕನ್ ಬಿರ್ಯಾನಿ ತಿಂದಿದ್ದೇವೆ. ಈಗ ಯುಗಾದಿ ಹಬ್ಬದ ಪ್ರಯುಕ್ತ ವರ್ಷತೊಡಕಿನಂದು ನೀವು ನಮ್ಮ ಮನೆಗೆ ಊಟಕ್ಕೆ ಬರಬೇಕು. ಅದರೆ ನಾವು ಜಟ್ಕಾ ಕಟ್ ಮಾಡಿದ್ದನ್ನೇ ಬಳಸುತ್ತೇವೆ ಎಂದು ಹೇಳಿದ ಕೂಡಲೇ ಗೆಳೆತನ ಎಲ್ಲವೂ ಹೌದಾದರೂ ನಾವು ನಮ್ಮ ಧರ್ಮದ ವಿರುಧವಾದ ಜಟ್ಕಾ ಮಾಂಸಾಹಾರ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಇದೇ ರೀತಿಯ ಅನುಭವ ಮತ್ತೊಬ್ಬ ಮುಸ್ಲಿಂ ಸ್ನೇಹಿತರೊಂದಿಗೂ ಆದಾಗ ಆ ವರದಿಗಾರನ ಬಾಯಿಯಿಂದ ಮಾತೇ ಬಾರದಂತಾದ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ಹೇಗೆ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲವೋ ಹಾಗೆಯೇ ಈ ಮತಾಂಧರಿಗೆ ರಾಜಕೀಯ ಪಕ್ಷಗಳ ಪರೋಕ್ಷವಾದ ಬೆಂಬಲ ಇರುವ ಕಾರಣವೇ ಈ ರೀತಿಯಾಗಿ ಹಾರಾಡುತ್ತಿದ್ದಾರೆ. ಹಿಜಾಬ್ ಪ್ರಕರಣದಲ್ಲಿ SDPI & CFI ಗಳನ್ನು ಮುಂದಾಗಿಟ್ಟುಕೊಂಡು ತನಗೆ ಇದರ ಬಗ್ಗೆ ಏನೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಕಾಂಗ್ರೇಸ್ ಪಕ್ಷ ಯಾವಾಗ ಈ ವಿಷಯ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಅದರ ಪರವಾಗಿ ಹೋರಾಡಲು ತಮ್ಮದೇ ಪಕ್ಷದ ವಕೀಲರನ್ನು ನೇಮಿಸಿದ ಕೂಡಲೇ ಈ ರೀತಿಯ ಕೋಮು ಸೌಹಾರ್ಧಕ್ಕೆ ಥಕ್ಕೆ ತರುವ ಹಿಂದೆ ಕಾಂಗ್ರೇಸ್ ಕೈವಾಡ ಸ್ಪಷ್ಟವಾಯಿತು.

ಮಹಾ ಕಾಲಜ್ಞಾನಿಯಂತೆ ಈ ರಾಜ್ಯ ಮತ್ತು ದೇಶದ ಆಗು ಹೋಗುಗಳ ಕುರಿತಾಗಿ ಎರಡು ವರ್ಷಗಳ ಮುಂಚೆಯೇ ಎಚ್ಚರಿಸಿದ್ದೆ ಎಂದು ಗೋಳಿಡುವ ವಿಕ್ಸ್ ಗಿರಾಕಿ, ಸಾಂಧರ್ಭಿಕ ಶಿಶು, ಅಧಿಕಾರಕ್ಕಾಗಿ ಯಾವುದೇ ಮಟ್ಟಕ್ಕೂ ಇಳಿಯಬಲ್ಲ ಕುಮಾರಸ್ವಾಮಿ ಆರಂಭದಲ್ಲಿ ಈ ವಿವಾದದಲ್ಲಿ ತಟಸ್ಥವಾಗಿದ್ದರೂ,  ಸೈಕಲ್ ಶಾಪಿನಲ್ಲಿ ಪಂಚರ್ ಹಾಕಲೂ ಬಾರದ, ಜನರಿಂದ ಎಂದೂ ನೇರವಾಗಿ ಆಯ್ಕೆಯಾಗಲು ತಾಕತ್ ಇಲ್ಲದ, ಅಧಿಕಾರಕ್ಕಾಗಿ ಆರು ಕೊಟ್ಟರೆ ಕಾಂಗ್ರೇಸ್ ಪರ, ಮೂರು ಕೊಟ್ಟರೆ ಜನತಾದಳದ ಪರ ಪಕ್ಷಾಂತರ ಮಾಡುವ ಸಿ.ಎಂ. ಇಬ್ರಾಹಿಂ ಅಧಿಕೃತವಾಗಿ ಕಾಂಗ್ರೇಸ್ ಪಕ್ಷಕ್ಕೆ ರಾಜೀನಾಮೆ ಇತ್ತು ಜನತಾದಳ ಸೇರಿಕೊಂಡು ರಾಜ್ಯ ಪಕ್ಷಾಧ್ಯಕ್ಷನ ಸ್ಥಾನ ವಹಿಸಿಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಹೇಳಿದರೋ, ಇದ್ದಕ್ಕಿದಂತೆಯೇ ಕುಮಾರಸ್ವಾಮಿ ಮೈ ಕೊಡವಿಕೊಂಡು ಬಿಜೆಪಿ, ವಿಶ್ವಹಿಂದೂ ಪರಿಷತ್ತು, ಬಜರಂಗದಳದ ಹುಡುಗರ ಮೇಲೆ ಏರಿ ಹೋಗಿದ್ದು ಕೈಲಾಗದ ಉತ್ತರ ಕುಮಾರ ಜಂಬ ಕೊಚ್ಚಿದಂತೆ ಕಂಡಿದ್ದಲ್ಲದೇ, ಹಳ್ಳಿ ಮೈಸೂರಿನ ಭಾಗದಲ್ಲಿ ಗಳಿಸಬಹುದಾಗಿದ್ದ ಹಿಂದೂಗಳ ಅಷ್ಟೂ ಇಷ್ಟೂ ಮತಗಳಿಗೂ ಕಲ್ಲು ಹಾಕಿಕೊಂಡಿದ್ದಂತೂ ಸತ್ಯ.

ಇಡೀ ಪ್ರಕರಣದಲ್ಲಿ ಕಾಳಿ ಸ್ವಾಮಿಗಳು, ಹಿಂದೂ ಜಾಗರಣ ವೇದಿಗೆ, ವಿಶ್ವಹಿಂದೂ ಪರಿಷತ್, ಭಜರಂಗ ದಳದ ಕಾರ್ಯಕರ್ತರು ಸೇರಿಗೆ ಸವ್ವಾಸೇರು ಎನ್ನುವಂತೆ ಕಾನೂನಾತ್ಮಕವಾಗಿ ಪ್ರತಿಯಾದ ಹೋರಾಟ ನಡೆಸಿರುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ಅನುಕರಣೀಯವೂ ಸರಿ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಎರಡೂ ಕೈ ಸೇರಿದಲ್ಲಿ ಮಾತ್ರವೇ ಚಪ್ಪಾಳೆ ಎನ್ನುವಂತೆ ಕೋಮು ಸೌಹಾರ್ಧತೆಗೆ ಎರಡೂ ಕೋಮಿನಿಂದಲೂ ಪರಸ್ವರ ಜೋಡಿಸುವಂತಾಗ ಬೇಕು. ಇಲ್ಲದೇ ಹೋದಲ್ಲಿ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆದಂತಾಗಿ ಈಗ ರಾಜ್ಯದಲ್ಲಿ ಸಣ್ಣದಾಗಿ ಹತ್ತಿಕೊಂಡಿರುವ ಕಿಡಿ ಕಾಳ್ಗಿಚ್ಚಿನಂತೆ ಆಗದಿರಲಿ ಎನ್ನುವುದೇ ಸಕಲ ಭಾರತಿಯರ ಆಶಯವಾಗಿದೆ.

ಕಡೆಯ ಮಾತು : ಇದುವರೆಗೂ ಸರ್ಕಾರದಿಂದ ಎಲ್ಲಾ ರೀತಿಯ ಸವಲತ್ತುಗಳನ್ನೂ ಪ್ರಶಸ್ತಿಗಳನ್ನೂ ಪಡೆದಕೊಂಡ ಸ್ವಘೋಷಿತ ಬುದ್ಧಿ ಜೀವಿಗಳು, ಹೋರಾಟಗಾರರು, ಚಿತ್ರನಟರುಗಳು ಮತ್ತು ತಮ್ಮ ಹೊಟ್ಟೆ ಪಾಡಿಗೆ ಕರ್ನಾಟಕ ರಾಜ್ಯಕ್ಕೆ ಬಂದು ಕನ್ನಡಿಗರ ಮತ್ತು ಹಿಂದೂಗಳ ಹೃದಯವೈಶಾಲ್ಯತೆಗಳನ್ನೂ ಬಳಸಿಕೊಂಡು ಕೋಟಿ ಕೋಟಿ ಲೂಟಿ ಹೊಡೆದು ಅನ್ಯ ಕೋಮಿನವರಿಗೆ ಹೇಳಲಾಗದೇ, ಕೇವಲ ಹಿಂದೂಗಳು ಮಾತ್ರವೇ ಕೋಮು ಸೌಹಾರ್ಧತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಿರುವವರು ತಮ್ಮ ವ್ಯಾಪಾರ ಮತ್ತು ವ್ಯವಹಾರಗಳನ್ನೂ ಮತ್ತು ಸರ್ಕಾರದಿಂದ ಪಡೆದ ಪ್ರಶಸ್ತಿ ಪತ್ರಗಳೊಂದಿಗೆ ಬಹುಮಾನದ ಮೊತ್ತವನ್ನೂ ಸರ್ಕಾರಕ್ಕೆ ಹಿಂದಿರುಗಿಸಿ ಅವರಿಗೆ ಅನುಕೂಲವಾದ ದೇಶಕ್ಕೆ ಹೋದಲ್ಲಿ ಯಾವುದೇ ಭಾರತೀಯರಿಗೆ ಅಭ್ಯಂತರವಿಲ್ಲ. ಉಕ್ರೇನ್ ಮತ್ತು ರಷ್ಯಾ ಯುದ್ದದ ಸಮಯಲ್ಲಿ ಭಾರತೀಯರ ತಟಸ್ಥ ನಿಲುವು ಮತ್ತು ಭಾರತೀಯ ವಿದ್ಯಾರ್ಥಿಗಳನ್ನು ಯಾವುದೇ ಧರ್ಮ, ಜಾತಿಯ ಬೇಧವಿಲ್ಲದೇ ಭಾರತಕ್ಕೆ ಕರೆತಂದ್ದನ್ನು ಇಡೀ ವಿಶ್ವವೇ ಕೊಂಡಾಡಿರುವ ಕಾರಣ, ನಿಮ್ಮ ಗೊಡ್ಡು ಬೆದರಿಕೆಗಳಿಂದ ಈ ದೇಶಕ್ಕೆ ಯಾವುದೇ ನಷ್ಟವಿಲ್ಲ. ಭಾರತದಲ್ಲಿ ಇರಬೇಕಿದ್ದಲ್ಲಿ ಬಹುಸಂಖ್ಯಾತ ಭಾರತೀಯರ ಆಶಯಗಳೊಂದಿಗೆ ಇದ್ದಲ್ಲಿ ಮಾತ್ರವೇ ನಿಮಗಿನ್ನು ಉಳಿಗಾಲ. ನಿಮ್ಮ ಆಯ್ಕೆ ನಿಮ್ಮದು ನಿಮ್ಮ ದಾರಿ ನಿಮ್ಮದು.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s