ಅದು 2018ರ ಮಾರ್ಚ್-ಏಪ್ರಿಲ್ ಸಮಯ. ಕರ್ನಾಟಕದ ವಿಧಾನಸಭಾ ಚುನಾವಣೆಗಳ ಪ್ರಚಾರ ಭರಾಟೆಯಿಂದ ನಡೆಯುತ್ತಿದ್ದಂತಹ ಸಂದರ್ಭದಲ್ಲಿ, ಎರಡು ರಾಷ್ಟ್ರೀಯ ಪಕ್ಷಗಳಿಗೆ ತೊಡೆ ತಟ್ಟಿ ರಾಷ್ಟ್ರಾಧ್ಯಕ್ಷರನ್ನು ಹೊಂದಿಯೂ ಪ್ರಾದೇಶಿಕ ಪಕ್ಷ ಎಂದೇ ಹೇಳಿಕೊಳ್ಳುವ ಪಕ್ಷದ ನಾಯಕ ಕುಮಾರಸ್ವಾಮಿ ಈ ಬಾರಿ ತಮ್ಮ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ. ಒಂದು ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬಾರದೇ ಹೋದಲ್ಲಿ, ವಿಪಕ್ಷದಲ್ಲಿ ಕುಳಿತಿಕೊಳ್ಳುತ್ತೇವೆಯೇ ಹೊರತು ಯಾರ ಜೊತೆಯೂ ಚುನಾವಣೋತ್ತರ ಮೈತ್ರಿಯಿಂದ ಸರ್ಕಾರ ರಚಿಸುವುದಿಲ್ಲ ಎಂದು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದರು.
ಚುನಾಚಣಾ ಫಲಿತಾಂಶದ ದಿನ ಮಧ್ಯಾಹ್ನದ ಹೊತ್ತಿಗೆ ಅಡಳಿತ ವಿರೋಧಿ ಫಲಿತಾಂಶವಾಗಿ ಕಾಂಗ್ರೇಸ್ 80 ಸ್ಥಾನಗಳು, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದರೂ, ಜೆಡಿಎಸ್ 37 ಸ್ಥಾನಗಳನ್ನು ಗಳಿಸಿದರೆ, 104 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಬಹುಮತಕ್ಕೆ ಕೇವಲ 9 ಸ್ಥಾನಗಳನ್ನು ಕಡಿಮೆ ಹೊಂದುವ ಪರಿಸ್ಥಿತಿ ಎದುರಾಗುತ್ತಿದ್ದಂತೆಯೇ, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕೂಡಲೇ ಕ್ರಾಂಗ್ರೇಸ್ ಮತ್ತು ಜೆಡಿಎಸ್ ತ್ವರಿತವಾಗಿ ಮೈತ್ರಿ ಘೋಷಿಸಿ, ಕೇವಲ 3 ಜೆಲ್ಲೆಗಳಿಗೆ ಮಾತ್ರವೇ ಸೀಮಿತವಾಗಿ ಜನರಿಂದ ತಿರಸ್ಕರಿಸಲ್ಪಟ್ಟು 3ನೇ ಸ್ಥಾನಗಳಿದ್ದ ಕುಮಾರಸ್ವಾಮಿ ತಾವೇ ಆಡಿದ್ದ ಮಾತನ್ನು ಮುರಿದು ಸಮ್ಮಿಶ್ರ ಸರ್ಕಾರ ರಚಿಸುವ ಮೂಲಕ ಎರಡನೇ ಬಾರಿ ಮತ್ತೊಬ್ಬರ ಮುಲಾಜಿನಿಂದ ಮುಖ್ಯಮಂತ್ರಿ ಆಗುವ ಮೂಲಕ ಮತ್ತೊಮ್ಮೆ ವಚರಭ್ರಷ್ಟರಾಗಿದ್ದಲ್ಲದೇ, ಅಧಿಕಾರಕ್ಕಾಗಿ, ಯಾವಾಗ ಬೇಕಾದರೂ, ಯಾರಿಗಾದರೂ ಗುಲಾಮರಾಗುತ್ತೇವೆ ಎಂಬುದನ್ನು ಜಗಜ್ಜಾಹೀರಾತು ಮಾಡಿಬಿಟ್ಟಿದ್ದಂತೂ ಸುಳ್ಳಲ್ಲ.
ಅಧಿಕಾರಕ್ಕೇರಿದ 3 ತಿಂಗಳೊಳಗೇ ತಾನು ಸಾಂಧರ್ಭಿಕ ಶಿಶು, ಲಾಟರಿ ಮುಖ್ಯಮಂತ್ರಿ, ತನಗೆ ಕಾಂಗ್ರೇಸ್ ನವರು ಕಷ್ಟ ಕೊಡುತ್ತಿದ್ದಾರೆ ಎಂದು ಯಥಾ ಪ್ರಕಾರ ಕಣ್ಣೀರು ಸುರಿಸುತ್ತಲೇ ತಾಜ್ ವೆಸ್ಟ್ ಎಂಡ್ ರೂಮನ್ನು ಸೇರಿಕೊಂಡವರು ಹೊರಗೆ ಬರಲೇ ಇಲ್ಲ. ಸ್ವತಃ ಮುಖ್ಯಮಂತ್ರಿಯಾಗಿರುವಾಗಲೇ ಮಂಡ್ಯಾ ಕ್ಷೇತ್ರದಲ್ಲಿ ಅಷ್ಟೆಲ್ಲಾ ಖರ್ಚು ಮಾಡಿದರೂ ತಮ್ಮ ಮಗನನ್ನೂ ಮತ್ತು ಈ ಇಳೀ ವಯಸ್ಸಿನಲ್ಲಿ ಮತ್ತೊಬ್ಬ ಮೊಮ್ಮಗನಿಗಾಗಿ ತಮ್ಮ ಜಹಗೀರು ಎನ್ನುವಂತೆ ಹಾಸನ ಕ್ಷೇತ್ರವನ್ನು ಬಿಟ್ಟು ಕೊಟ್ಟು ತುಮಕೂರಿನಲ್ಲಿ ಸ್ಪರ್ಧಿಸಿದ್ದ ಮಾಜೀ ಪ್ರಧಾನಿ ತಮ್ಮ ತಂದೆ ದೇವಾಗೌಡರನ್ನೂ ಗೆಲ್ಲಿಸಿಕೊಳ್ಳಲಾಗದಷ್ಟು ಜನ ವಿರೋಧಿಗಳಾಗಿ ಅಂತಿಮವಾಗಿ ಅಧಿಕಾರ ಕಳೆದುಕೊಂಡ ನಂತರ ಅಲ್ಲೊಮ್ಮೆ ಇಲ್ಲೊಮ್ಮೆ ತಮ್ಮ ಅಸ್ಥಿತ್ವವನ್ನು ತೋರಿಸಿಕೊಳ್ಳುವುದಕ್ಕಾಗಿ ಹಿಟ್ & ರನ್ ಹೇಳಿಕೆ ಕೊಡುವುದರ ವಿನಃ ರಾಜ್ಯ ರಾಜಕಾರಣದಲ್ಲಿ ಅಪ್ರಸ್ತುತ ಎನಿಸಿಕೊಂಡಿದ್ದರು.
ಸೈಕಲ್ ಷಾಪಿನಲ್ಲಿ ಪಂಕ್ಛರ್ ಕೂಡಾ ಹಾಕಲು ಬಾರದ ಅಥವಾ ಲಾಯಕ್ಕಿಲ್ಲದ, ಎಂದಿಗೂ ಜನರಿಂದ ನೇರವಾಗಿ ಆಯ್ಕೆಯಾಗಲು ಸಮರ್ಥನಿಲ್ಲದ, ಸದಾಕಾಲವೂ ಅವರಿವರ ಕೈ ಕಾಲು ಹಿಡಿದುಕೊಂಡೇ ರಾಜ್ಯರಾಜಕಾರಣದಲ್ಲಿ ಜೋಕರ್ ಎಂದೇ ಪ್ರಖ್ಯಾತವಾಗಿರುವ ಎಡಬಿಡಂಗಿ ರಾಜಕಾರಣಿ ಇಬ್ರಾಹಿಂ, ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ಸಿನೊಂದಿಗೆ ಮುನಿಸಿಕೊಂಡು ಹಳೇ ಗಂಡನ ಪಾದ ಗತಿ ಎಂದು ಜನತಾದಳದತ್ತ ಮುಖ ಮಾಡಿದಾಗ, ರೊಟ್ಟಿ ಹಳಸಿತ್ತು ನಾಯಿ ಹಸಿದಿತ್ತು ಎನ್ನುವಂತೆ ಇಬ್ರಾಹಿಂನನ್ನು ಕೆಂಪು ಕಂಬಳಿಯನ್ನು ಹಾಸಿ ಸ್ವಾಗತ ಮಾಡಿದ ಇದೇ ಕುಮಾರಸ್ವಾಮಿ ಇದ್ದಕ್ಕಿದ್ದಂತೆಯೇ ರಾಜ್ಯದ ಅಷ್ಟೂ ಮುಸಲ್ಮಾನರಿಗೂ ತಾವೇ ಪ್ರತಿನಿಧಿ ಎಂಬ ಭ್ರಮೆಯಿಂದ ಮುಸಲ್ಮಾನರನ್ನು ತುಷ್ಟೀಕರಣ ಗೊಳಿಸುವ ಸಲುವಾಗಿ ಹಿಂದೂಗಳ ವಿರುದ್ಧದ ಆಣಿ ಮುತ್ತುಗಳ ಹೇಳಿಕೆಗಳನ್ನು ಪುಂಖಾನು ಪುಂಖವಾಗಿ ಉದುರಿಸ ತೊಡಗಿದಾಗಲೇ ಹಿಂದೂಗಳಿಗೆ ಕುಮಾರಸ್ವಾಮಿಯ ಪಕ್ಷದ ದೀಪ ಆರುವ ಮುನ್ನಾ ಜೋರಾಗಿ ಉರಿಯುತ್ತಿದೆ ಎಂದೆನಿಸಿದ್ದು ಸುಳ್ಳಲ್ಲ.
ಹಿಜಾಬ್ ನಿಂದ ಶುರುವಾಗಿ ಹೈಕೊರ್ಟ್ ತೀರ್ಪಿನ ವಿರುದ್ದ ಬಂದ್, ಹಿಂದೂ ಹುಡುಗ ಹರ್ಷಾನ ಕೊಲೆ ನಡೆದಾಗ ಮತ್ತು ಹಲಾಲ್ ವಿರೋಧವನ್ನು ನಡೆಸುವಾಗಲೂ ಸುಮ್ಮನೇ ಇದ್ದ ಕುಮಾರ ಸ್ವಾಮಿಯವರ ಮೇಲೆ, ಕರ್ಕಶ ಆಜಾನ್ ಕೂಗಿನ ವಿರುದ್ಧ ಹಿಂದೂಗಳು ಧ್ವನಿ ಎತ್ತಿದ ಕೂಡಲೇ ತಮ್ಮಲ್ಲಿದ್ದ ಮುಸಲ್ಮಾನ ಪ್ರೀತಿ ಇದ್ದಕ್ಕಿದ್ದಂತೆಯೇ ಜಾಗೃತವಾಗಿ ಹಿಂದೂ ಸಂಘಟನೆಯ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾ, ಮಾವಿನ ಹಣ್ಣಿನ ವ್ಯಾಪಾರದ ಕುರಿತು ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯನ್ನು ನೀಡಿ ಖರೀದಿಸಿ ರೈತ್ರ ಮಿತ್ರರಾಗಿರುವ ಮುಸಲ್ಮಾರನ್ನು ದ್ವೇಷಿಸುವುದು ಸರಿಯಲ್ಲ ಎಂಬ ಎಚ್ಚರಿಕೆಯ ಮಾತನ್ನೂ ನೀಡುವುದರ ಜೊತೆಗೆ ಅದೇಕೋ ಏನೋ, ಅದಾವ ನಶೆಯಲ್ಲೋ ಇದ್ದಕ್ಕಿದ್ದಂತೆಯೇ ಪುರೋಹಿತರು ದಕ್ಷಿಣೆ ಕಾಸಿಗಾಗಿ ಮಾತ್ರ ಪೂಜಿಸುತ್ತಾರೆ. ಕಾಸು ಸಿಗದಿದ್ದರೆ ಪೂಜಿಸುವುದಿಲ್ಲ ಎಂಬ ಮಾತನ್ನು ಹೇಳುವುದರ ಮೂಲಕ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಕುಟುಂಬದ ಚಟುವಟಿಕೆಗಳನ್ನು ಗಮನಿಸಿದಲ್ಲಿ ಲೋಕ ಕಲ್ಯಾಣ ಎಂಬ ಹೆಸರಿನಲ್ಲಿ (ಶತ್ರುಗಳ ನಾಶಕ್ಕಾಗಿ ಎಂದು ಹಲವರ ನಂಬಿಕೆ) ತಿಂಗಳಾನುಗಟ್ಟಲೇ ಶ್ರೀಕ್ಷೇತ್ರ ಶೃಂಗೇರಿಯಲ್ಲಿ ಮತ್ತು ಕೊಲ್ಲೂರಿನಲ್ಲಿ ಅತಿರುದ್ರ ಸ್ವಾಹಾಕಾರ ಯಗ್ಞ ಶೂಲಿನಿ ದುರ್ಗಾ ಆರಾಧನೆ ಹೀಗೆ ಹತ್ತು ಹಲವಾರು ಧಾರ್ಮಿಕ ಕಾರ್ಯಗಳನ್ನು ನೂರಾರು ಋತ್ವಿಕರ ಸಮ್ಮುಖದಲ್ಲಿ ಮಾಡಿಸಿದವರು ಏಕಾ ಏಕಿಯಾಗಿ 20% ಓಟಿಗೋಸ್ಕರ (ಎಲ್ಲರೂ ಇವರ ಪಕ್ಷಕ್ಕೇ ಹಾಕುತ್ತಾರೆ ಎಂಬ ನಂಬಿಕೆಯೂ ಇಲ್ಲ) ಮಸಲ್ಮಾನರ ಪರ ಶರಂಪರ ವಹಿಸಿಕೊಂಡು ಅವರನ್ನು ಓಲೈಸುವ ಸಲುವಾಗಿ ಇಡೀ ದೇಶಾದ್ಯಂತ ಕೇವಲ 2% ಇರುವ ಬುದ್ಧಿವಂತ, ಸ್ವಾಭಿಮಾನಿ, ಸ್ವಾವಲಂಭಿ ಪಂಗಡದ ವಿರುದ್ಧ ಹರಿಹಾಯ್ದದ್ದು ಏಕೆ? ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಯಾರಾದರೂ, ದಲಿತರನ್ನು ಜಾತಿಯ ಹೆಸರಿನಲ್ಲಿ ನಿಂದಿಸಿದರೆ, ಅವರ ಮೇಲೆ ಕೂಡಲೇ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಬೇಲ್ ಕೂಡಾ ಸಿಗದ ಹಾಗೆ ಒದ್ದು ಒಳಗೆ ಹಾಕಿ ರುಬ್ಬುವಂತಹ ಕಾನೂನು ಇರಬೇಕಾದರೆ, ಒಬ್ಬ ಮಾಜೀ ಮುಖ್ಯ ಮಂತ್ರಿಯಾಗಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆಣಿ ಮುತ್ತು ಉದುರಿಸುತ್ತಲೇ ಈ ರೀತಿಯಾಗಿ ಪುರೋಹಿತರನ್ನು ಸಾರ್ವಜನಿಕವಾಗಿ ನಿಂದಿಸಿರುವಾಗ ಕುಮಾರಸ್ವಾಮಿಯ ಮೇಲೆ ಜಾತಿ ನಿಂದನೆ ಕೇಸ್ ಹಾಕಲು ಈ ದೇಶದಲ್ಲಿ ಯಾವುದೇ ರೀತಿಯ ಕಾನೂನು ವ್ಯವಸ್ಥೆ ಇಲ್ಲದೇ ಇರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಎಲ್ಲರಿಗೊಂದೇ ಭೂತಲವೆಂದೇ, ಸರ್ವರಿಗೂ ಭಗವಂತನೇ ತಂದೇ ಎಂಬ ಕವಿಯ ಆಶಯದಂತೆ ಈ ದೇಶದಲ್ಲಿ ಒಂದು ದೇಶ ಒಂದೇ ಕಾನೂನು, ಒಂದೇ ಚುನಾವಣೆ ಎಂಬುದನ್ನು ಜಾರಿಗೆ ತರುವುದಕ್ಕೆ ಸಮಯ ಸೂಕ್ತವಾಗಿದೆ ಎಂದಿಸುತ್ತಿದೆ.
ನಿಜ ಹೇಳಬೇಕೆಂದರೆ ದೇವೇಗೌಡರ ಮಗ ಎಂಬುದರ ಹೊರತಾಗಿ ಕಾಲೇಜಿನಲ್ಲೇ ಕಾಪಿ ಹೊಡೆದು ಸಿಕ್ಕಿ ಬಿದ್ದಾಗ ಗುರುಗಳ ಕೈ ಕಚ್ಚಿ ಪರಾರಿಯಾಗಿದ್ದ ಕುಮಾರಸ್ವಾಮಿ, ಸಿನಿಮಾ ಮಂದಿರ, ಸಿನಿಮಾ ವಿತರಣೆ, ನಿರ್ಮಾಣ ಮಾಡಿಕೊಂಡು ರಾಜಕೀಯದಿಂದ ದೂರವಿದ್ದವರು, ಅಚಾನಕ್ಕಾಕಿ ರಾಮನಗರದಲ್ಲಿ ತಮ್ಮ ಜಾತಿ ಬಾಂಧವರು ಮತ್ತು ಇದೇ ಮುಸ್ಲಿಮ್ಮರ ಬೆಂಬಲದಿಂದ ಶಾಸಕರಾಗಿ ಧರ್ಮಸಿಂಗ್ ಕಾಲದ ಸಮ್ಮಿಶ್ರ ಸರ್ಕಾರದಲ್ಲಿ ಹಿಂದಿನ ಸಾಲಿನ ಹುಡುಗರು ಸಾರ್ ನಾವು ಕುರಿಗಳು ಎನ್ನುವಂತಿದ್ದರು. ಯಡೆಯೂರಪ್ಪನವರ ಸಹಕಾರದೊಂದಿಗೆ 20-20 ಸಮ್ಮಿಶ್ರ ಸರ್ಕಾರ ನಡೆಸಲು ಆಯ್ಕೆ ಆಗುವವರೆಗೂ ರಾಜ್ಯದ ಬಹುತೇಕರಿಗೆ ಕುಮಾರಸ್ವಾಮಿಯ ಪರಿಚಯವೇ ಇರಲಿಲ್ಲ ಎಂದರೂ ಅತಿಶಯವಲ್ಲ.
ಕುಮಾರ ಸ್ವಾಮಿ ನನ್ನ ವಿರುದ್ಧ ಬಿಜೆಪಿಯೊಂದಿಗೆ ಸರ್ಕಾರ ಮಾಡಿರುವ ಕಾರಣ ಆತ ತನ್ನ ಮಗನೇ ಅಲ್ಲಾ. ಅವನ ಜೊತೆಗೆ ಹೋಗಿರುವ ಅಷ್ಟೂ ಶಾಸಕರನ್ನು ಪಕ್ಷದಿಂದ ಹೊರಹಾಕಿದ್ದೇನೆ ಎಂಬ ಧೃತರಾಷ್ಟ್ರ ಪುತ್ರ ವ್ಯಾಮೋಹ ತೋರಿದ ದೇವೆಗೌಡರು, 20 ತಿಂಗಳುಗಳ ಕಾಲ ಮಗ ಅಧಿಕಾರವನ್ನು ಸವಿದು ತಮ್ಮ ಮಿತ್ರ ಪಕ್ಷ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಾದ ಸಮಯ ಬರುತ್ತಲೇ ಕರ್ನಾಟಕ ರಾಜ್ಯದ ಅಧಿಕಾರ ತಮ್ಮ ಕುಟುಂಬದ ಜಹಗೀರು ಎನ್ನುವಂತೆ, ಒಪ್ಪಂದದ ನಾಟಕವಾಡುತ್ತಾ ವಚನ ಭ್ರಷ್ಟರಾಗಿದ್ದನ್ನು ಮರೆತಂತಿದೆ. ಅದಾದ ನಂತರ ನಡೆದ ಬಹುತೇಕ ಎಲ್ಲಾ ಚುನಾವಣೆಗಳಲ್ಲೂ ರಾಜ್ಯದ ಕೆಲವೇ ಕೆಲವು ಪ್ರದೇಶಗಳಿಗೆ ಜಾತಿ ಆಧಾರಿತವಾಗಿ ಸೀಮಿತಗೊಂಡು ಆಟಕ್ಕುಟಂಟೂ ಲೆಕ್ಕಕ್ಕಿಲ್ಲಾ ಎನ್ನುವಂತೆ ಖಚಿತವಾಗಿ 25-30 ಸ್ಥಾನವಷ್ಟೇ ಗಳಿಸುತ್ತಾ 3ನೇ ಸ್ಥಾನಕ್ಕೇ ಸೀಮಿತವಾಗಿದೆ ಎಂಬುದನ್ನು ಮರೆತಂತಿದೆ
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ತಮ್ಮ ರಾಜಕೀಯದ ತೆವಲಿಗಾಗಿ ಅತಿಯಾಗಿ ಮುಸಲ್ಮಾನರನ್ನು ತುಷ್ಟೀಕರಿಸುವುದೂ ಸಹಾ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆಯೇ ಸರಿ ಎಂಬುದು ಅರಿವಿಲ್ಲವಾಗಿದೆ. ಇದೇ ರೀತಿ ಅವರನ್ನು ಸಾಕಿ ಸಲಹಿ ಪೋಷಿಸುತ್ತಾ ಹೋದಲ್ಲಿ, ಮುಂದೊಂದು ದಿನ ಇದೇ ಮುಸಲ್ಮಾನರು ರಾಮನಗರದಲ್ಲಿ ಬಹುಸಂಖ್ಯಾತರಾಗಿ ಕಶ್ಮೀರಿ ಫೈಲ್ಸ್ ಚಿತ್ರದಲ್ಲಿ ತೋರಿಸಿರುವಂತೆ ರಾತ್ರೋರಾತ್ರಿ ರಲಿವ್, ಗಲೀವ್, ಚಲಿವ್ ಎಂದು ಆಜಾನ್ ನಲ್ಲಿ ಅರುಚುತ್ತಾ ಕುಮಾರಸ್ವಾಮಿಯವರನ್ನು ಒಳಗೊಂಡು ಇಡೀ ಹಿಂದೂಗಳನ್ನು ಓಡಿಸುವ ಸಮಯ ಬಂದರೂ ಅಚ್ಚರಿ ಇಲ್ಲ.
ಬಹುಶಃ ಈ ಹಿಂದೆ ನಿಮ್ಮ ತಂದೆಯವರೇ ಹೇಳಿದಂತೆ, ನನಗೆ ಮುಂದಿನ ಜನ್ಮ ಅಂತ ಇದ್ದರೆ ನಾನು ಮುಸಲ್ಮಾನನಾಗಿ ಹುಟ್ಟಲು ಬಯಸುತ್ತೇನೆ. ಇನ್ನು ನಿಮ್ಮ ಮಗ ನಿಖಿಲ್ ಸಹ ನನಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ಸಿಗುವ ನೆಮ್ಮದಿ ದೇವಾಸ್ಥಾನಗಳಲ್ಲಿ ಸಿಗುವುದಿಲ್ಲ ಎಂಬ ಮಾತನ್ನು ಪುಷ್ಟೀಕರಿಸುವಂತೆ ನೀವೂ ಸಹಾ ಆರೋಗ್ಯದ ಸಮಸ್ಯೆಗಳ ನಡುವೆಯೂ ಮೂರು ಲೋಕದ ಗಂಡ ಎನ್ನುವಂತೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಗ್ರಾಮವಾಸ್ತವ್ಯ ಮಾಡುತ್ತಾ ಅಧಿಕೃತವಾಗಿಯೇ ಇನ್ನೂ ಮೂರ್ನಾಲ್ಕು ಮದುವೆ ಮಾಡಿಕೊಳ್ಳಬಹುದು ಎಂಬ ದೂರಾಲೋಚನೆಯಿಂದ ನೀವು ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ನಮ್ಮದೇನು ಅಡ್ಡಿ ಇಲ್ಲ. ಆದರೆ ನಿಮ್ಮ ರಾಜಕೀಯ ತೆವಲುಗಳಿಗಾಗಿ ಅವರ ಸಂತತಿಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಕಲ ಸೌಲಭ್ಯಗಳನ್ನೂ ಸರ್ಕಾರದ ಕಡೆಯಿಂದಲೇ ಮಾಡಿಕೊಟ್ಟು ಅಮಾಯಕ ಹಿಂದೂಗಳನ್ನೇಕೆ ಬಲಿಪಶುಗಳನ್ನಾಗಿ ಮಾಡುತ್ತೀರಿ?
ನಿಮ್ಮಂತಹ ರಾಜಕೀಯ ನಾಯಕರುಗಳ ಕುಮ್ಮಕ್ಕಿನಿಂದಲೇ ಈ ದೇಶದ ಕಾನೂನನ್ನು ಧಿಕ್ಕರಿಸುತ್ತಾ, ಈ ದೇಶದ ವಿರುದ್ಧವೇ ಘೋಷಣೆ ಕೂಗುತ್ತಾ, ನೆರೆ ರಾಷ್ಟ್ರ ಕ್ರಿಕೆಟ್ ಪಂದ್ಯ ಗೆದ್ದರೂ ಇಲ್ಲಿ ಸಂಭ್ರಮಿಸುತ್ತಾ ನಡೆಸುವ ದುಷ್ಕೃತ್ಯಗಳನ್ನೆಲ್ಲ ಕಂಡೂ ಕಾಣದಂತೆ ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ ನಟಿಸುವ ನಿಮ್ಮ ನಟನೆ ಈಗ ಇಡೀ ಕರ್ನಾಟಕದ ಜನತೆಗೆ ಗೊತ್ತಾಗಿದೆ. ಹಿಂದೂ ಎದ್ದರೆ ದೇಶ ಎದ್ದೀತು ಎಂಬುದು ಕಳೆದ ಮೂರ್ನಾಲ್ಕು ವಾರಗಳಲ್ಲಿನ ಹಿಂದೂ ಜಾಗೃತಿ ನಿಮಗೆ ಅರಿವಾಗಿದೆ ಎಂದು ನಂಬುತ್ತೇವೆ.
ಇಲ್ಲಾ ಎಂದಿನಂತೆ ನನಗೆಲ್ಲವೂ ಗೊತ್ತಿದೆ, ನಾನೊಬ್ಬ ಕಾಲ ಜ್ಞಾನಿ ದೇಶದಲ್ಲಿ ನಡೆಯುವ ಆಗು ಹೋಗುಗಳೆಲ್ಲವೂ ನನಗೆ ಎರಡು ಮೂರು ವರ್ಷಗಳ ಮುಂಚೆಯೇ ತಿಳಿಯುತ್ತದೆ ಎಂಬ ಹುಂಬ ತನದಿಂದ ಹಿಂದೂಗಳನ್ನು ಇದೇ ರೀತಿ ನಿಂದಿಸುವುದನ್ನು ಮುಂದುವರೆಸಿಕೊಂಡು ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಬಿಡಿ 20-30 ಗಳಿಸಿ ಕಿಂಗ್ ಮೇಕರ್ ಆಗುವುದಕ್ಕೂ ಆಗದೇ ನಿಮ್ಮ ಪಕ್ಷದ ಸಂಖ್ಯೆಯನ್ನು ಎರಡಂಕಿ ದಾಟುವುದಕ್ಕೂ ಜಾಗೃತ ಹಿಂದೂಗಳು ಬಿಡಲಾರರು ಎಂಬುದೇ ವಾಸ್ತವ.
ಜಾಣನಿಗೆ ಮಾತಿನ ಪೆಟ್ಟು. ಕೋಣನಿಗೆ ದೊಣ್ಣೇ ಪೆಟ್ಟು.
ಏನಂತೀರೀ?
ನಿಮ್ಮವನೇ ಉಮಾಸುತ
ನಿಮ್ಮ ವಿಶ್ಲೇಷಣೆ ತುಂಬಾ ಇಷ್ಟವಾಯಿತು
LikeLiked by 1 person
ಧನ್ಯೋಸ್ಮಿ
LikeLike