ಡಿಸೆಂಬರ್ ತಿಂಗಳ ಕಡೆಯ ವಾರ ಬಂದಿತೆಂದರೆ ಸಾಕು ನಮಗೆ ಕೇಳಿಬರುವ ಎರಡು ವಾಕ್ಯಗಳೆಂದರೆ Happy Christmas ಮತ್ತು New year Plan/resolution ಏನು? ಈ ಮಾತುಗಳನ್ನು ಈ ದೇಶದಲ್ಲಿರುವ 5% ಕ್ರೈಸ್ತರು ಕೇಳುತ್ತಾರೆ ಎಂದರೆ ನನಗೆ ಯಾವ ಬೇಸರವೂ ಆಗುವುದಿಲ್ಲ. ಅವರಿಗೆ ನಿಮಗೂ ಸಹಾ ಶುಭಾಶಯಗಳು ಎಂದು ಹೇಳಿ ಸುಮ್ಮನಾಗುತ್ತೇನೆ. ಆದರೆ ಈ ರೀತಿಯಾಗಿ ಹೇಳುವವರು ನಮ್ಮ ಹಿಂದೂಗಳೇ ಆಗಿದ್ದು ಅದರಲ್ಲೂ ಬಹುತೇಕರು ನನ್ನ ಸ್ವಭಾವ ಗೊತ್ತಿದ್ದೂ ಕೆರಳಿಸಲೆಂದೇ ಹೇಳುವುದು ಮತ್ತಷ್ಟು ಬೇಸರವನ್ನು ಮೂಡಿಸುತ್ತದೆ.
ನಾವು ಚಿಕ್ಕವರಿದ್ದಾಗ ಕ್ರಿಸ್ಮಸ್ ಹಬ್ಬಕ್ಕೆ ಕೇವಲ ಒಂದು ದಿನ ಮಾತ್ರ ರಜ ಇರುತ್ತಿತ್ತು ಮತ್ತು ನಮ್ಮ ಮನೆಯ ಹತ್ತಿರವಿದ್ದ ಕ್ರೈಸ್ತರ ಮನೆಗಳಿಗೆ ಹಬ್ಬಕ್ಕೂ ಒಂದು ವಾರದ ಮುಂಚೆ ಚರ್ಚುಗಳಿಂದ ಕ್ಯಾರಲ್ ಹಾಡಲು ಬರುತ್ತಿದ್ದರು ಮತ್ತು ಅವರ ಜೊತೆ ಸಾಂತಾಕ್ಲಾಸ್ ಉಡುಪನ್ನು ಹಾಕಿಕೊಂಡಂತಹ ದಡೂತಿ ಮನುಷ್ಯರೊಬರು ಇರುತ್ತಿದ್ದದ್ದ್ನು ನೋಡಿದ್ದೆವಷ್ಟೇ. ಆದರೆ 90ರ ದಶಕದಲ್ಲಿ ಜಾಗತೀಕರಣದಿಂದಾಗಿ ದೇಶದಲ್ಲಾದ ಭಾರೀ ಬದಲಾವಣೆಯಿಂದಾಗಿ ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬರಲಾರಂಭಿಸುತ್ತಿದ್ದಂತೆಯೇ, ಅಲ್ಲಿನ ಜನರನ್ನು ಓಲೈಸಿಕೊಳ್ಳುವ ಸಲುವಾಗಿಯೇ ಇಲ್ಲಿಯ ನಮ್ಮವರು ಕ್ರಿಸ್ಮಸ್ ಹಬ್ಬಕ್ಕೆ ಎರಡು ವಾರಗಳ ಮುಂಚೆಯೇ ತಮ್ಮ ತಮ್ಮ ಕಛೇರಿಗಳಲ್ಲಿ ಪ್ಲಾಸ್ಟಿಕ್ ಕ್ರಿಸ್ಮಸ್ ಗಿಡವನ್ನಿಟ್ಟು ಅದಕ್ಕ ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳು ಮತ್ತು ಸೀರಿಯಲ್ ಸೆಟ್ಟುಗಳನ್ನು ಹಾಕಿ ಆದರ ಪೋಟೋಗಳನ್ನು ತಮ್ಮ ಅಮೇರಿಕಾದ ಮೇಲಧಿಕಾರಿಗಳಿಗೆ ಕಳುಹಿಸಿ ತಾವು ಮಹಾನ್ ಜಾತ್ಯಾತೀತರು ಎಂಬ ಭಾವನೆಯನ್ನು ಮೂಡುವಂತೆ ಮಾಡಿ ಅವರಿಂದ ತಮಗೆ ಆನುಕೂಲವಂತಾಗಲು ಮಾಡಿದ ಹುನ್ನಾರ ಎಂದರೂ ತಪ್ಪಾಗದು.
ಈ ರೀತಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಜೊತೆಗೇ ಹುಟ್ಟಿಕೊಂಡ international school & collegeಗಳಲ್ಲಿಯೂ ಇದೇ ಪದ್ದತಿ ಮುಂದುವರೆದು ಅದುವರೆವಿಗೂ ಸಣ್ಣ ಸಣ್ಣ ಮಕ್ಕಳಿಗೆ ಕೃಷ್ಣಜನ್ಮಾಷ್ಟಮಿಯಂದ ಶ್ರೀಕೃಷ್ಣ ಮತ್ತು ರಾಧೆಯ ವೇಷಭೂಷಣಗಳನ್ನು ಹಾಕಿಸುತ್ತಿದ್ದವರು ಈಗ ಇಡೀ ಶಾಲೆಯಲ್ಲೇ ಕ್ರಿಸ್ಮಸ್ ಹಬ್ಬವನ್ನು ಅಧಿಕೃತಗೊಳಿಸಿ ಎಲ್ಲಾ ತರಗತಿಯಲ್ಲೂ ಮಕ್ಕಳಿಂದಲೇ ಕ್ರಿಸ್ಮಸ್ ಗಿಡಗಳ ಅಲಂಕಾರ ಮಾಡಿಸುವುದಲ್ಲದೇ ಶಾಲೆಯ ದೊಡ್ಡವರು ಚಿಕ್ಕವರು ಎನ್ನದೇ ಎಲ್ಲಾ ಮಕ್ಕಳ ತಲೆಯೆಅ ಮೇಲೆ ಖಡ್ಡಾಯವಾಗಿ ಸಾಂತಕ್ಲಾಸ್ ಟೋಪಿಯನ್ನು ಹಾಕಿಸಿ ಸಾಂತಾಕ್ಲಾಸ್ ಎಂಬುವವ ಬಂದು ಮಕ್ಕಳಿಗೆಲ್ಲಾ ಉಡುಗೊರೆ ಕೊಡ್ತಾರೆ ಎಂಬ ನಂಬಿಕೆ ಮೂಡಿಸುತ್ತಿರುವುದು ನಿಜಕ್ಕೂ ಹಿಂದೂಸ್ಥಾನದಲ್ಲಿ ಕಳವಳಕಾರಿಯಾಗಿದೆ. ಒಬ್ಬ ಜವಾಬ್ಧಾರಿ ಮಕ್ಕಳ ತಂದೆಯಾಗಿ ಈ ರೀತಿಯ ಆಚರಣೆಗಳ ಕುರಿತಾಗಿ ಶಾಲೆಯಲ್ಲಿ ವಿಚಾರಿಸಲು ಹೋದರೆ, ಮಕ್ಕಳಲ್ಲಿ ಈ ರೀತಿಯ ಜಾತಿ ಮತ್ತು ಧರ್ಮದ ವಿಷವನ್ನೇಕೆ ಬಿತ್ತುತ್ತೀರಿ ಎಂದು ನಮಗೇ ದಬಾಯಿಸಿ ಕೋಮುವಾದಿಗಳೆಂಬ ಹಣೆಪಟ್ಟಿ ಕಟ್ಟುವುದು ನಿಜಕ್ಕೂ ಅಚ್ಚರಿಯ ಮೂಡಿಸುತ್ತದೆ.
ಈಗಾಗಲೇ ತಿಳಿಸಿದಂತೆ ಇತ್ತೀಚೆನ ಕೆಲವರ್ಷಗಳಿಂದ ಈ ಕ್ರಿಸ್ಮಸ್ ಮತ್ತು ಆಂಗ್ಲರ ಹೊಸವರ್ಷ ಒಂದು ರೀತಿಯಲ್ಲಿ ಗ್ರೀಟಿಂಗ್ ಕಾರ್ಡ್ಸ್ ತಯಾರಕರು, ವಿವಿಧ ರೀತಿಯ ಉಡುಗೊರೆಯ ತಯಾರಕರು, ಸಿದ್ಧವಸ್ತುಗಳ ತಯಾರಕರು, ಪ್ರವಾಸಿ ತಾಣಗಳ ಹೋಟೆಲ್ ಮತ್ತು ಟ್ರಾವೆಲ್ಲರ್ಸಗಳ ವ್ಯಾಪಾರಕ್ಕಾಗಿ ವಾಣಿಜ್ಯೀಕರಣ ಗೊಂಡಿರುವುದು ಸುಸ್ಪಷ್ಟವಾಗಿದೆ. ಹಾಗೆ ನೋಡಿದರೆ, ಶಾಂತಿದೂತ ದೇವಪುರುಷ ಯೇಸು ಕ್ರಿಸ್ತರು ಜೋಸೆಫ್ ಮತ್ತು ಮೇರಿಯ ಸುಪುತ್ರನಾಗಿ ಜನಿಸಿದ್ದು ಡಿಸೆಂಬರ್ 25ರಂದು ಎಂಬುದಕ್ಕೆ ನಿಖರವಾಗಿ ಯಾವ ಆಧಾರಗಳು ಇಲ್ಲ ಎನ್ನುವುದೇ ನೈಜ ಸತ್ಯವಾದರೂ, ಕ್ರೈಸ್ತ ಧರ್ಮೀಯರು ಬಹಳ ವರ್ಷಗಳಿಂದ ನಂಬಿಕೆಯ ಪ್ರಕಾರ ಸಾಂಪ್ರದಾಯಿಕವಾಗಿ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ಕ್ರೈಸ್ತ ಸಮುದಾಯಗಳಲ್ಲಿ ಒಂದಾದ, ಬ್ರದರಿನ್ ಮತ್ತು ಬೆತ್ಸಾಯಿದ ಚರ್ಚಿನವರು, ಡಿಸೆಂಬರ್ 25ರಂದು ಕ್ರಿಸ್ತನ ಜನ್ಮದಿನಾಚರಣೆಯನ್ನು ಆಚರಿಸದೇ, ಬದಲಾಗಿ ನೇರವಾಗಿ ಜನವರಿ ಒಂದರಂದು ಹೊಸ ವರ್ಷಾಚರಣೆಯನ್ನು ಆಚರಿಸುತ್ತಾರೆ.
ಒಟ್ಟಿನಲ್ಲಿ ಕ್ರಿಸ್‌ಮಸ್ ಎಂಬುದು ಕ್ರೈಸ್ತಧರ್ಮೀಯರಿಗೆ ಪವಿತ್ರ ದಿನ ಹಾಗಾಗಿ ಅವರುಗಳು ಅವರ ನಂಬಿಕೆಯಂತೆ ಸಡಗರ ಸಂಭ್ರಮಗಳಿಂದ ಆಚರಿಸಿದರೆ ನಮ್ಮದೇನೂ ಆಕ್ಷೇಪವಿಲ್ಲ. ಆದರೆ ಜಾತ್ಯಾತೀತೆಯ ಹೆಸರಿನಲ್ಲಿ ಮೋಜು ಮಸ್ತಿ ಮತ್ತು ತಮ್ಮ ಉತ್ಪನ್ನಗಳ ವ್ಯಾಪಾರೀಕರಣಕ್ಕಾಗಿ ಕ್ರಿಸ್ಮಸ್ ಮತ್ತು ಕ್ರೈಸ್ತರ ಹೊಸವರ್ಷಾಚರಣೆಯನ್ನು ಬಲವಂತವಾಗಿ ಹಿಂದೂಗಳ ಮೇಲೆ ಹೇರುತ್ತಿರುವುದಕ್ಕೆ ಸಮಸ್ತ ಹಿಂದೂಗಳ ಬಲವಾದ ಆಕ್ಷೇಪ ಮತ್ತು ಆಕ್ರೋಶವೂ ಇದೆ. ಯೇಸು ಕ್ರಿಸ್ತ ಪ್ಯಾಲೆಸ್ಟೈನ್ ದೇಶದಲ್ಲಿ (ಈಗಿನ ಇಸ್ರೇಲ್) ಯಹೂದಿಯಾಗಿ ಜನಿಸುತ್ತಾನೆ. ಯಹೂದಿ ಸಂಸ್ಕೃತಿಯಲ್ಲಿ ಮಾನವ ಕುಲಕ್ಕೆ ಮಾರಕವಾದ ಕಂದಾಚಾರ, ಮೂಢನಂಬಿಕೆಯಂತಹ ಅನಿಷ್ಟಪದ್ಧತಿಗಳು ಇದ್ದದ್ದನ್ನು ವಿರೋಧಿಸಿ ಸಕಲರಿಗೂ ಲೇಸನ್ನು ಬಯಸುವ ಮಾನವೀಯತೆಯ ತಳಹದಿಯಲ್ಲಿ ತನ್ನದೇ ಆದ ಕ್ರೈಸ್ತ ಧರ್ಮವನ್ನು ಸ್ಥಾಪಿಸಿದ ಕಾರಣ, ಯಹೂದಿ ಪುರೋಹಿತಷಾಹಿಗಳ ವಿರೋಧ ಕಟ್ಟಿಕೊಂಡು ರಾಜದ್ರೋಹದ ಆಪಾದನೆಯಿಂದಾಗಿ, ಕಠಿಣ ಚಿತ್ರಹಿಂಸೆಗೆ ಗುರಿಯಾಗಿದ್ದಲ್ಲದೇ, ಅಂತಿಮವಾಗಿ ಶಿಲುಬೆಗೆ ಏರಿಸಿ ಕೈಕಾಲುಗಳಿಗೆ ಮೊಳೆಯನ್ನು ಹೊಡೆದು ಮರಣದಂಡನೆಯ ಶಿಕ್ಷೆಗೆ ಗುರಿಯಾಗಿಸುತ್ತಾರೆ. ಯೇಸು ಶಿಲುಬೆಗೇರಿದ ಮೂರನೆಯ ದಿನ ಪುನರುತ್ಥಾನಗೊಂಡು ತನ್ನ ಆಪ್ತೇಷ್ಟರನೇಕರಿಗೆ ದರ್ಶನಕೊಟ್ಟಿದ್ದಲ್ಲದೇ, ನಂತರ 40 ದಿನಗಳ ಕಾಲ ತಮ್ಮ ಶಿಷ್ಯಕೋಟಿಯ ಜೊತೆಯಲ್ಲಿದ್ದು ಅವರ ಸಮ್ಮುಖದಲ್ಲೇ ಒಂದು ದಿನ ಸ್ವರ್ಗದತ್ತ ಪಯಣ ಬೆಳೆಸಿದರು ಎಂದು ನಂಬಲಾಗಿದ್ದು, ಅಂತಹ ದಿನವನ್ನೇ ಯೇಸುವಿನ ಸ್ವರ್ಗಾರೋಹಣ ದಿನ ಎಂದು ಕರೆಯುತ್ತಾರೆ. ಹೀಗೆ ಯೇಸುವಿನ ಜನನ, ಮರಣ, ಪುನರುತ್ಥಾನ ಹಾಗೂ ಸ್ವರ್ಗಾರೋಹಣ ದಿನಗಳು ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ದಿನಗಳಾಗಿವೆ.
ಸಾಧಾರಣವಾಗಿ ಕ್ರೈಸ್ತರು ಮತಾಂತರ ಮಾಡುವ ಸಮಯದಲ್ಲಿ ನಮ್ಮ ಹಿಂದೂ ದೇವರುಗಳನ್ನು ಮತ್ತು ನಮ್ಮ ಧಾರ್ಮಿಕ ನಂಬಿಕೆಗಳ ವಿರುದ್ಧವಾಗಿ ಮಾತನಾಡುತ್ತಾರೆ. ಶ್ರೀಕೃಷ್ಣನಿಗೆ 16,000 ಹೆಂಡತಿಯರು ಇದ್ದರು. ಅಯ್ಯಪ್ಪ ಹರಿ ಹರಿಗೆ ಹೇಗೆ ಹುಟ್ಟಿದ? ಮಹಾಭಾರತದಲ್ಲಿ ಮದುವೆಯೇ ಆಗದ ಕನ್ಯೆ ಕುಂತೀದೇವಿ ಕರ್ಣನಿಗೆ ಹೇಗೆ ಜನ್ಮ ನೀಡಲು ಸಾಧ್ಯ? ಇತ್ಯಾದಿ ಇತ್ಯಾದಿ. ಅಚ್ಚರಿಯ ಸಂಗತಿಯಂದರೆ, ಜೋಸೆಫ್‌ನೊಡನೆ ವಿವಾಹ ನಿಶ್ಚಯವಾಗಿದ್ದ ಮೇರಿ ಅವರಿಬ್ಬರ ಮದುವೆಯೇ ಮುನ್ನವೇ ಕನ್ಯೆಯಾಗಿದ್ದಾಗಲೇ ಭಗವಂತನ ಅನುಗ್ರಹದಿಂದ ಯೇಸುಕ್ರಿಸ್ತನಿಗೆ ಜನ್ಮ ನೀಡಿರುವುದನ್ನು ಸ್ವತಃ ಕ್ರೈಸ್ತರೇ ಒಪ್ಪಿಕೊಳ್ಳುತ್ತಾರೆ. ಜನಗಣತಿಗಾಗಿ ಜೋಸೆಫ್-ಮೇರಿ ಜೊತೆಯಾಗಿ ಬೆತ್ಲೆ ಹೆಮ್‌ಗೆ ಹೋಗಿದ್ದಾಗ ಅಲ್ಲಿ ಮೇರಿ ಕುರಿಯ ಕೊಟ್ಟಿಗೆಯಲ್ಲಿ ಯೇಸು ಕ್ರಿಸ್ತನಿಗೆ ಜನ್ಮ ನೀಡುತ್ತಾಳೆ ಹಾಗೆ ಕ್ರಿಸ್ತನ ಜನನವಾದಾಗ, ಇಡೀ ಬೆತ್ಲೆಹೆಮ್ ನಗರದಲ್ಲಿ ಮಿಂಚು ಹೊಳೆದಂತಹ ಅನುಭವ ಆಗಿತ್ತು ಎನ್ನುತ್ತಾರೆ. ಅದೇ ಶ್ರೀಕೃಷ್ಣ ಮಥುರಾದಲ್ಲಿ ತನ್ನ ಸೋದರಮಾವ ಕಂಸನ ಸೆರೆಮನೆಯಲ್ಲಿ ವಸುದೇವ ಮತ್ತು ದೇವಕಿ ದಂಪತಿಗಳಿಗೆ ಜನಿಸಿದಾಗ ಸೆರೆಮನೆಯ ಬೀಗ ತಂತಾನೇ ತೆರೆದು ಕೊಂಡಿತು ಎಂಬುದನ್ನು ಅಪಹಾಸ್ಯ ಮಾಡುತ್ತಾರೆ.
ಅದೇ ರೀತಿಯಲ್ಲೇ ಜನರ ಸುಖಃಕ್ಕಾಗಿ ಜೀಸಸ್ ಶಿಲುಬೆಯಲ್ಲಿ ನೇತಾಡುತ್ತಾ ಅಸುನೀಗಿದರು ಎಂದು ಹಾಗಾಗಿ ಅವರು ಬಹಳ ಪವಿತ್ರರು ಎಂದು ವಾದಿಸುತ್ತಾರೆ. ಅದೇ ನಾವು ಲೋಕಕಲ್ಯಾಣಕ್ಕಾಗಿಯೇ ಸುರ ಮತ್ತು ಅಸುರರು ಸೇರಿಕೊಂಡು ಸಮುದ್ರಮಥನ ಮಾಡುವಾಗಿ ಉತ್ಪತ್ತಿಯಾದ ವಿಷದಿಂದಾಗಿ ಇಡೀ ಲೋಕವೇ ನಾಶವಾಗುವ ಸಂದರ್ಭಬಂದಾಗ, ದೇವಾನು ದೇವತೆಗಳ ಕೋರಿಕೆಯ ಮೇರೆ ನಮ್ಮ ಪರಶಿವನು ಹಾಲಹಲವನ್ನು ಕುಡಿದು ವಿಷಕಂಠ, ನೀಲಕಂಠ, ಶ್ರೀಕಂಠನಾಗಿ ಇಡೀ ಪ್ರಪಂಚವನ್ನು ರಕ್ಷಿಸಿದ ಎಂದರೆ ಆಡಿಕೊಳ್ಳುತ್ತಾರೆ.
ಇನ್ನು ಯೇಸುಕ್ರಿಸ್ತರಿಗೆ ಎರೆಡು ಕೈಗಳು ಮತ್ತು ಎರಡು ಕಾಲುಗಳು ಸೇರಿಸಿ ಒಟ್ಟು ನಾಲ್ಕು ಮೊಳೆಗಳು ಮೂಲಕ ಶಿಲುಬೆಯ ಮೇಲೆ ಕೇವಲ ಒಂದು ದಿನ ಮಾತ್ರ ನೇತು ಹಾಕಿರುವ ಚಿತ್ರಗಳನ್ನು ನೋಡಿದ್ದೇವೆ, ಅದೇ ಮಹಾಭಾರತದಲ್ಲಿ ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ, ಉತ್ತರಾಯಣದ ಪುಣ್ಯಕಾಲದಲ್ಲೇ ತನ್ನ ಪ್ರಾಣ ಹೋಗಬೇಕೆಂದು ಇಚ್ಚಾಮರಣಿಯಾದ ಭೀಷ್ಮಾಚಾರ್ಯರು ಬಯಸಿದಾಗ ನೂರಾರು ಬಾಣಗಳ ಹಾಸಿಗೆಯ ಮೇಲೆ 58 ದಿನಗಳ ಕಾಲ ಅರ್ಜುನ ತನ್ನ ತಾತನವರನ್ನು ಮಲಗಿಸಿದ್ದ ಮತ್ತು ಹಾಗೆ ಭಿಷ್ಮಾಚಾರ್ಯರು ಬಾಣಗಳ ಮೇಲೆ ಮಲಗಿದ್ದಾಗಲೂ ಲೋಕ ಕಲ್ಯಾಣಕ್ಕಾಗಿ ಜೀವನ, ಆಧ್ಯಾತ್ಮಿಕತೆ, ಜ್ಞಾನದ ಬಗ್ಗೆ ಅಮೂಲ್ಯವಾದ ಪ್ರವಚನಗಳನ್ನು ನೀಡಿದರು ಎಂಬ ಉದಾಹರಣೆ ನೀಡಿದರೆ ಕೇಳಲು ಮುಜುಗೊರ ಪಟ್ಟುಕೊಳ್ಳುತ್ತಾರೆ.
ಒಂದು ಗೆರೆಯೊಂದನ್ನು ಬರೆದು ಅದನ್ನು ಮುಟ್ಟದೇ ಹೇಗೆ ಸಣ್ಣದಾಗಿ ಮಾಡಬಹುದು? ಎಂದು ಕೇಳಿದರೆ, ಸರಳವಾಗಿ ಅದರ ಪಕ್ಕದಲ್ಲೊಂದು ದೊಡ್ಡ ಗೆರೆಯೊಂದನ್ನು ಎಳೆದು ಮೊದಲಿನ ಗೆರೆಯನ್ನು ಹೇಗೆ ಸಣ್ಣದಾಗಿ ಮಾಡಬಹುದೋ ಅದೇ ರೀತಿಯಲ್ಲಿ ವಿನಾಕಾರಣ ಕೋಮುಸೌಹಾರ್ಧತೆಗೆ ಧಕ್ಕೆ ತಾರದಂತೆ ಅನ್ಯಧರ್ಮೀಯರ ಹಬ್ಬಹರಿದಿನಗಳನ್ನು ನಾವು ಆಚರಿಸುವ ಕೆಟ್ಟ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ನಮ್ಮ ಹಬ್ಬವನ್ನೂ ಸಹಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಆಚರಿಸಬಹುದಾಗಿದೆ ಎಂಬುದಕ್ಕೆ ಈ ಪ್ರಸಂಗವೇ ಜ್ವಲಂತ ಉದಾಹರಣೆಯಾಗಿದೆ.
ಸುಮಾರು 20 ವರ್ಷಗಳ ಹಿಂದೆ ಆಗಷ್ಟೇ ಭಾರತೀಯರೇ ಆರಂಭಿಸಿದ್ದ ಬಹುರಾಷ್ಟ್ರೀಯ Startups ಕಂಪನಿಯೊಂದರಲ್ಲಿ ಎರಡನೇ ನೌಕರನಾಗಿ ಸೇರಿಕೊಂಡಿದ್ದೆ. ಕಂಪನಿಯ ಎರಡನೇ ಉದ್ಯೋಗಿ ಎಂದರೆ ಜವಾಬ್ಧಾರಿ ಹೆಚ್ಚಾಗಿಯೇ ಇತ್ತು. ಪ್ರತಿಯೊಂದುಕ್ಕೂ ಅಳದೂ ತೂಗಿ ಹೆಚ್ಚು ಹಣ ಪೋಲು ಮಾಡದೇ, ಎಷ್ಟು ಬೇಕೋ ಅಷ್ಟನ್ನೇ ಖರ್ಚು ಮಾಡಿ ಅಗತ್ಯವಿದ್ದ Laptops, Desktops, Switches & Servers ಖರೀದಿಸಿ ಕಂಪನಿಗೆ ಚಾಲನೆ ಮಾಡಿದ್ದಲ್ಲದೇ ಅಪ್ಪಟ್ಟ ಕನ್ನಡಿಗ ಮತ್ತು ಹಿಂದೂ ಮನಸ್ಥಿತಿಯುಳ್ಳವನಾಗಿದ್ದ ಕಾರಣ, ನಮ್ಮ Servers ಗಳಿಗೆ ಭೀಮಾ, ಕರ್ಣ, ಅಶ್ವಿನಿ ಭರಣಿ, ಗಂಗಾ, ಯಮುನಾ ಸರಸ್ವತಿ ಕಾವೇರಿ, ನರ್ಮದಾ, ಮಲ್ಲಿಗೆ, ಸಂಪಿಗೆ, ಕೇದಿಗೆ, ಎಂದಿದ್ದರೆ, ಹೊಸಾ ಪ್ರಾಜೆಕ್ಟಿಗಾಗಿ ಕೊಟ್ಟಿದ್ದ ಎರಡು ಸರ್ವರ್ಗಳಿಗೆ ಲವ-ಕುಶ ಎಂದು ಹೆಸರು ಕೊಟ್ಟಿದ್ದೆ. ಇನ್ನು ನಮ್ಮ Conference Roomಗಳಿಗೆ ಅಜಂತಾ, ಎಲ್ಲೋರ, ಐಹೊಳೆ, ಬಾದಾಮಿ ಎಂದು ನಾಮಕರಣ ಮಾಡುವ ಮೂಲಕ ಇಲ್ಲಿನ ದೇಸೀ ಮಣ್ಣಿನ ಸೊಗಡನ್ನು ಹರಡಿಸಲು ಸಫಲನಾಗಿದ್ದೆ.
ನಮ್ಮ ಕಂಪನಿಗೆ ಹೊಸದಾಗಿ ಸೇರಿಕೊಳ್ಳುತ್ತಿದ್ದ ಸಹೋದ್ಯೋಗಿಗಳಿಗೂ ಸಹಾ ಈ ಹೆಸರುಗಳು ಬಲು ಅಪ್ಯಾಯಮಾನವಾಗಿ ಮೆಚ್ಚುಗೆಯನ್ನೂ ಸೂಚಿಸಿದ್ದರು. ಅದೇ ಸಮಯದಲ್ಲೇ ದಸರಾ ಹಬ್ಬ ಬಂದು ನಾವೂ ಸಹಾ ನಮ್ಮ ಆ ಹೊಸಾ ಕಂಪನಿಯಲ್ಲಿ ಅದ್ದೂರಿಯಾಗಿ ಆಯುಧಪೂಜೆಯನ್ನು ಮಾಡಬೇಕೆಂದು ನಿರ್ಧರಿಸಿ, ಅಲಂಕಾರಕ್ಕೆ ಮತ್ತು ಪೂಜೆಗಳಿಗೆ ಬೇಕಾಗುವ ಸಾಮಾನುಗಳ ಪಟ್ಟಿ ಮಾಡಿ ಅಡ್ಮಿನ್ ಡಿಪರ್ಟ್ಮೆಂಟಿಗೆ ಕೊಟ್ಟಷ್ಟೇ ಶರವೇಗದಲ್ಲಿ ಅದು ಹಿಂದಕ್ಕೆ ಬಂದಿತ್ತು. ಕಾರಣ ಕೇಳಿದರೇ, ನಮ್ಮದು MNC ಕಂಪನಿ ಹಾಗಾಗಿ ಇಲ್ಲಿ ಯಾವುದೇ ಧಾರ್ಮಿಕ ಆವರಣೆಗೆ ಅವಕಾಶವಿಲ್ಲ ಹಾಗಾಗಿ ಆಯುಧ ಪೂಜೆಗೆ ಖರ್ಚು ಮಾಡಲಾಗದು ಎಂದು ಫೈನಾನ್ಸ್ ಕಂಪನಿಯವರು ಹೇಳಿದ್ದರಂತೆ. ಆದರೆ ಆಯುಧಪೂಜೆ ಮಾಡಲೇ ಬೇಕೆಂದು ನಾನು ನಿರ್ಧರಿಸಿದ್ದರಿಂದ ನಾನೇ ಸ್ವಂತ ಖರ್ಚಿನಲ್ಲಿ ಸರಳವಾಗಿಯಾದರೂ ಅರ್ಥಪೂರ್ಣವಾಗಿ ಆಯುಧ ಪೂಜೆ ಮಾಡಿ ಮುಗಿಸಿದ್ದೆ.
ಅಕ್ಟೋಬರ್ ನವೆಂಬರ್ ಕಳೆದು ಡಿಸೆಂಬರ್ ಎರಡನೇ ವಾರದಲ್ಲಿ ಬೆಳ್ಳಂಬೆಳಿಗ್ಗೆ ಕಛೇರಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಝಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಕ್ರಿಸ್ಮಸ್ ಗಿಡ ನೋಡುತ್ತಿದ್ದಂತೆ ಎದೆ ಝಲ್ ಎಂದು, ಇದನ್ನು ಯಾರು ಹಾಕಿದ್ದು? ಎಂದು ಸ್ವಾಗರಕಾರಿಣಿಯನ್ನು ಕೇಳಿದಾಗ, ಆಕೆ ಮುಗ್ಧವಾಗಿ ನೆನ್ನೆ ಸಂಜೆ ಅಡ್ಮಿನ್ ಡಿಪಾರ್ಟ್ಮೆಂಟಿನವರು ಇದನ್ನು ಮಾಡಿಹೋದರು ಎಂದಳು. ಅರೇ, ನಾವು ಇಲ್ಲಿನ ಸಂಪ್ರದಾಯದ ಅನುಗುಣವಾಗಿ ಆಯುಧಪೂಜೆ ಮಾಡ್ತೀವಿ ಅಂದಾಗ ಇಲ್ಲಾ ಎಂದವರು ಈಗ ಕ್ರಿಸ್ಮಸ್ ಹಬ್ಬವನ್ನು ಹೇಗೆ ಆಚರಿಸುತ್ತೀರೀ? ಎಂದು ಅಡ್ಮಿನ್ ಡಿಪಾರ್ಟ್ಮೆಂಟ್ ಅವರನ್ನು ದಬಾಯಿಸಿದ್ದೆ. ನಂತರ ಮಧ್ಯಾಹ್ನ ಊಟದ ಸಮಯದಲ್ಲಿ ಇದೇ ಕುರಿತಂತೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ತಿಳಿದು ಬಂದ ವಿಷಯವೇನೆಂದರೆ ನಮ್ಮ ಸ್ವಾಗತಕಾರಣಿಯೂ ರೋಮನ್ ಕ್ಯಾಥೋಲಿಕ್ ಆಗಿದ್ದು ಈ ಹುನ್ನಾರದಲ್ಲಿ ಆಕೆಯದ್ದೂ ಪರೋಕ್ಷವಾದ ಹಸ್ತಕ್ಷೇಪವಿತ್ತು.
ಆಗ ಸುಮ್ಮನಿದ್ದು ಸಂಕ್ರಾಂತಿ ಹಬ್ಬದಲ್ಲಿ ಮನೆಯಿಂದ ಎಳ್ಳು ಬೆಲ್ಲವನ್ನು ತಂದು ಇಡೀ ಕಛೇರಿಯ (30-40) ಸಿಬ್ಬಂಧಿಗೆ ಹಂಚುವ ಮೂಲಕ ನಮ್ಮ ಹಿಂದೂ ಭಾವನೆ ಮೂಡಿಸುವುದರಲ್ಲಿ ಸಫಲನಾಗಿ ಯುಗಾದಿ ಕಳೆದ ನಂತರ ರಾಮನವಮಿಯಲ್ಲಿ ಸರಳವಾಗಿ ನಾಲ್ಕೈದು ಜನ ಕೈಯ್ಯಿಂದ ದುಡ್ಡು ಹಾಕಿಕೊಂಡು ಕಛೇರಿಯಲ್ಲೇ ರಾಮನವಮಿ ಆಚರಿಸಿ ಎಲ್ಲರಿಗೂ ಮೊದಲನೇ ವರ್ಷ ಕೇವಲ ಪಾನಕ ಕೋಸಂಬರಿ ಕೊಟ್ಟಾಗ ಯಾರೂ ಸಹಾ ಆಕ್ಷೇಪಣೆ ಮಾಡದೇ ಇದ್ದಾಗ ಮುಂದಿನ ದಿನಗಳಲ್ಲಿ ಎಲ್ಲರಿಂದಲೂ ಹಣ ಸಂಗ್ರಹಿಸಿ ಅದ್ದೂರಿಯಿಂದ ಪ್ರತೀವರ್ಷವೂ ರಾಮನವಮಿ ಹಬ್ಬವನ್ನು ಆಚರಿಸುವ ಸತ್ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೆ.
ಅದೇ ರೀತಿ Desktop Decoration ಸ್ಪರ್ಧೆಯನ್ನು ಏರ್ಪಡಿಸಿದಾಗಲೂ ನಮ್ಮ ದಸರಾ ಗೊಂಬೆಗಳನ್ನು ಇಟ್ಟು ನಮ್ಮ ತನವನ್ನು ಮೆರೆಸಿದ ನಂತರ ನಮ್ಮ ಕಂಪನಿಯಲ್ಲಿ ಮುಂದೆ ಯಾವುದೇ ಅಡ್ಡಿ ಆತಂಕವಿಲ್ಲದೇ, ನಮ್ಮ ಯುಗಾದಿ, ಗೌರೀ ಗಣೇಶ, ದಸರಾ ದೀಪಾವಳಿಗಳ ಹಿಂದೆ ಅಥವಾ ಮುಂದೆ ಕ್ಯಾಂಟೀನಿನಲ್ಲಿ ಕಂಪನಿಯ ಕಡೆಯಿಂದಲೇ ಹಬ್ಬದ ಊಟವನ್ನು ಹಾಕಿಸುವ ಮತ್ತು ಅಧಿಕೃತವಾಗಿ ರಾಮನವಮಿ ಮತ್ತು ಹೋಲಿಯನ್ನು ಆಚರಿಸುವ ಸಂಪ್ರದಾಯವನ್ನು ಜಾರಿಗೆ ತರುವ ಮೂಲಕ ನಮ್ಮ ತನವನ್ನು ಜಾಗೃತಿ ಮೂಡಿಸಿದ ಕಾರಣ ಕ್ರಮೇಣ ಕ್ರಿಸ್ಮಸ್ ಆಚರಣೆ ಅಂತ ಸೀಕ್ರೆಟ್ ಸಾಂತಾ, ಅಲಂಕಾರ, ಆಚರಣೆ ಇವೆಲ್ಲವೂ ಕೇವಲ ಆಯಾಯಾ ಧರ್ಮೀಯರ ಆಚರಣೆಗೆ ಸೀಮಿತವಾಗುವಂತೆ ಮಾಡಿದ ಹೆಮ್ಮೆಯಿದೆ.
ನಮ್ಮ ಪೂರ್ವಜರು ಆನುಸರಿಸುತ್ತಿದ್ದ ಸನಾತನ ಸಂಸ್ಕೃತಿಯ ಹಿಂದೆ ಖಂಡಿತವಾಗಿಯೂ ವೈಜ್ಞಾನಿಕ ಕಾರಣವಿದೆ. ದುರಾದೃಷ್ಟವಷಾತ್ ಅದರ ಪರಿಚಯವನ್ನು ನಾವುಗಳು ಮಾಡಿಕೊಳ್ಳದೇ ವಿನಾಕಾರಣ ಅನ್ಯಧರ್ಮೀಯರ ಮಾತುಗಳಿಂದ ಮುಜುಗೊರಕ್ಕೆ ಒಳಗಾಗುವುದಲ್ಲದೇ, ಯಾರನ್ನೋ ಮೆಚ್ಚಿಸುವ ಸಲುವಾಗಿ ಅಂಧ ಪಾಶ್ಚಾತ್ಯೀಕರಣದಿಂದ ಕ್ರಿಸ್ಮಸ್ ಅಲಂಕಾರ, ಸೀಕ್ರೇಟ್ ಸಾಂಟಾ, ಹೊಸಾ ವರ್ಷಾಚರಣೆ ಎಂಬ ಅವೈಜ್ಞಾನಿಕ ಆಚರಣೆಯ ಬೂಟಾಟಿಕೆ ಸಿಕ್ಕಿಹಾಕಿ ಕೊಳ್ಳುವ ಬದಲು, ನಮ್ಮ ಹೆಮ್ಮೆಯ ಪರಂಪರೆಯನ್ನು ಅರ್ಥಮಾಡಿಕೊಂಡು ಅದನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇಂತಹ ವಿಷವರ್ತುಲದಿಂದ ನಮ್ಮ ಇಂದಿನ ಮತ್ತು ಮುಂದಿನ ಜನಾಂಗವನ್ನು ರಕ್ಷಿಸಿಸೋಣ. ನಮ್ಮ ದೇಶ ಸಂತರ ನಾಡೇ ಹೊರತು ಸ್ಯಾಂಟಾರ ನಾಡಲ್ಲ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ