ಅಂತರಾಷ್ಟ್ರೀಯ ಟೂಲ್ ಕಿಟ್ ಮತ್ತು ಆಂತರಿಕ ಪಿತೂರಿ

ಕಳೆದ ಕೆಲವು ವಾರಗಳಲ್ಲಿ ದೇಶದ್ಯಂತ ಕೆಲವೊಂದು ಘಟನೆಗಳ ಕುರಿತಾಗಿ ಅತ್ಯಂತ ಚರ್ಚೀಗೆ ಗ್ರಾಸವಾಗಿದ್ದು ಎಲ್ಲವನ್ನು ಒಂದೊಂದಾಗಿ ಚರ್ಚಿಸಿ ನಂತರ ಅವೆಲ್ಲವನ್ನೂ ಒಂದಾಗಿ ತಾಳೆ ಹಾಕಿದಲ್ಲಿ ಬಹಳ ಅಚ್ಚರಿಯ ಮತ್ತು ದೇಶವಿಭಜಕ ಶಕ್ತಿಗಳು ಹೇಗೆ ಸದ್ದಿಲ್ಲದೇ ಕೆಲಸ ಮಾಡುತ್ತಿವೆ ಎಂಬುದರ ಅರಿವಾಗುತ್ತದೆ.

2022ರ ಮೇ ತಿಂಗಳಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ “ಭಾರತದಲ್ಲಿ 75” ಎಂಬ ಶೀರ್ಷಿಕೆಯ ಕುರಿತಾದ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಸಲುವಾಗಿ ಕಾಂಗ್ರೇಸ್ ಸಾಂಸದ ರಾಹುಲ್ ಗಾಂಧಿ ಹೋಗಿ ಯಥಾಪ್ರಕಾರ ಅಲ್ಲಿ ನರೇಂದ್ರ ಮೋದಿ ಮತ್ತು ಭಾರತದ ವಿರುದ್ಧವೇ ಅಸಂಬದ್ಧವಾಗಿ ತಮ್ಮ ಅಪ್ರಬುದ್ಧತೆಯ ಮಾತುಗಳನ್ನಾಡಿ ಬರುತ್ತಾರೆ. ಇದೇ ಸಮಯದಲ್ಲಿಯೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಅದರಲ್ಲೂ ಕಾಂಗ್ರೇಸ್ ಗೆಲ್ಲಲು ಶ್ರಮಿಸುವಂತೆ, ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಯುಕೆ ಸದಸ್ಯರಿಗೆ ರಾಹುಲ್ ಗಾಂಧಿ ಸೋನಿಯಾಗಾಂಧಿ ಇಂಗ್ಲೇಂಡಿನಲ್ಲ್ರಿರುವ ಸಾಗರೋತ್ತರ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ ನಂತರ ಮಾಡಬೇಕಾದ ಕೆಲಸವನ್ನೆಲ್ಲಾ ಮಾಡಲಾಗಿದೆ ಇನ್ನು ಅದರ ಪಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡುತ್ತಾರೆ.

Raga7 ಸೆಪ್ಟೆಂಬರ್ 2022ರಂದು ರಾಹುಲ್ ಗಾಂಧಿಯವರು ತಮ್ಮ ತಂದೆ ರಾಜೀವ್ ಗಾಂಧಿ, ಸ್ವಾಮಿ ವಿವೇಕಾನಂದ ಮತ್ತು ತಮಿಳು ಕವಿ ತಿರುವಳ್ಳುವರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಸುಮಾರು 150 ದಿನಗಳ ಕಾಲದಲ್ಲಿ 4,080 ಕಿಲೋಮೀಟಗಳನ್ನು ನಡಿಗೆಯ ಮೂಲಕ ಭಾರತ ಜೋಡೋ ಎಂಬ ಯಲ್ಲಿ ಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಪೂರ್ವನಿಯೋಜನೆಯಂತೆ ಹಿಂದೂ ಧರ್ಮ ಮತ್ತು ಭಾರತದ ದೇಶದ ವಿರುದ್ಧ ಸದಾಕಾಲವೂ ವಿಷಕಕ್ಕುವ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯುವುದು ಅತಂಕಕಾರಿಯಾದ ಬೆಳವಣಿಗೆ ಎನಿಸಿಕೊಳ್ಳುತ್ತದೆ.

raga1ಅಲ್ಲಿಂದ ಮುಂದಿನ 150 ದಿನಗಳ ಯಾತ್ರೆಯಲ್ಲಿ ತುಕ್ಡೇ ಗ್ಯಾಂಗಿನ ಕನ್ನಯ್ಯ ಸೇರಿದಂತೆ ಸಕಲ ದೇಶವಿರೋಧಿಗಳೂ, ಕ್ರಿಮಿನಲ್ಗಳು ಒಬ್ಬೊಬ್ಬರಾಗಿ ರಾಹುಲ್ ಜೊತೆ ಹೆಜ್ಜೆ ಹಾಕುತ್ತಾ, ದಾರಿಯುದ್ದಕ್ಕೂ ತನ್ನ ಜೋಕರ್ ಮನಸ್ಥಿತಿಯನ್ನು ಜಗಜ್ಜಾಹೀರಾತು ಮಾಡುತ್ತಾ, ಅಗ್ಗಾಗ್ಗೇ ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಲೇ, 29 ಜನವರಿ 2023ರಂದು ಹವಾಮಾನ ವೈಪರೀತ್ಯಗಳ ನಡುವೆಯೂ ರಾಹುಲ್ ಗಾಂಧಿ ಮತ್ತವರ ಸಹೋದರಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿದುವ ಮೂಲಕ ತಮ್ಮ ಪಾದಯಾತ್ರೆಯನ್ನು ಅಂತ್ಯಗೊಳಿಸುತ್ತಾರೆ.

bbcಜನವರಿ 17 ರಂದು ಇದ್ದಕ್ಕಿದ್ದಂತೆಯೇ ಬ್ರಿಟನ್ ಮೂಲದ ಬಿಬಿಸಿ ಸಂಸ್ಥೆ 2002 ರಲ್ಲಿ ಗುಜರಾತಿನಲ್ಲಿ ನಡೆದ ಮುಸ್ಲಿಂ ವಿರೋಧಿ ದಂಗೆಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತಾಗಿ ಅತ್ಯಂತ ಕೀಳು ಮಟ್ಟದ ಸಾಕ್ಷ್ಯಚಿತ್ರವೊಂದನ್ನು ಪ್ರಸಾರಮಾಡುತ್ತದೆ. ಭಾರತದ ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟು ಸುಮಾರು ೨೦ ವರ್ಷಗಳ ಕಾಲ ಸುದೀರ್ಘವಾದ ತನಿಖೆಗೆ ಯಾವುದೇ ತೊಂದರೆ ಇಲ್ಲದೇ ಹಾಜರಾಗಿ ಆ ಗಲಬೆಯಲ್ಲಿ ಮೋದಿಯವರ ಪಾತ್ರವಿಲ್ಲ ಎಂಬ ತೀರ್ಪು ಬಂದಿರುವುದು ಈಗಾಗಲೇ ಜಗಜ್ಜಾಹೀರಾತಾಗಿರುವಾಗ ಈ ರೀತಿಯ ಸಾಕ್ಷಚಿತ್ರ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ ಸರ್ಕಾರ ಕೂಡಲೇ ಅದನ್ನುನಿಷೇಧಿಸಿದರೂ ಯಥಾಪ್ರಕಾರ ಸ್ವಯಂಘೋಷಿತ ಬುದ್ದಿ ಜೀವಿಗಳು, ವಿಮರ್ಶಕರು, ಪ್ರಧಾನಿಗಳ ವಿರೋಧಿಗಳು ಈ ಕ್ರಮವನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದು ಖಂಡಿಸುವುದಲ್ಲದೇ ಅಕ್ರಮವಾಗಿ ಹೈದರಾಬಾದಿನ ಉಸ್ಮಾನಿಯಾ, ದೆಹಲಿಯ ಜವಹರ್ ಲಾಲ್ ವಿಶ್ವವಿದ್ಯಾನಿಯಲದ ತುಕ್ಡೇ ಗ್ಯಾಂಗ್ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರದರ್ಶನ ಮಾಡುತ್ತಾರೆ.

hidden_burgಜನವರಿ 24ರಂದು ಅಮೇರೀಕಾ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಎಂಬ ಹಣಕಾಸು ಸಂಶೋಧನಾ ಸಂಸ್ಥೆ ದೇಶದ ಹೆಸರಾಂತ ಉದ್ಯಮಿ ಮತ್ತು ವಿಶ್ವದ ಮೊದಲ ೫ ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿಯವರ ವ್ಯವಹಾರದ ಅಭ್ಯಾಸಗಳು, ಆಡಳಿತ ಮತ್ತು ಆರ್ಥಿಕ ಕಾರ್ಯಕ್ಷಮತೆ ಕುರಿತಾಗಿ ಒಂದು ವರದಿಯನ್ನು ಬಿಡುಗಡೆ ಗೊಳಿದ ತಕ್ಷಣವೇ, ಪ್ರಪಂಚಾದ್ಯಂತ ಶೇರು ಮಾರುಕಟ್ಟೆಯಲ್ಲಿ ತಲ್ಲಣವಾಗಿ ಅದಾನಿ ಒಡೆತನದ ಗುಂಪು ಸುಮಾರು $120 ಶತಕೋಟಿ ಮೌಲ್ಯವನ್ನು ಕಳೆದುಕೊಂಡಿದ್ದಲ್ಲದೇ, ವಿಶ್ವದ ೨೦ ಶ್ರೀಮಂತರ ಪಟ್ಟಿಯಿಂದ ಕೆಳಗೆ ಇಳಿಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದೇ ವಿ‌ಷಯದ ಕುರಿತಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷ ಅದಾನಿ ಮತ್ತು ಪ್ರಧಾನಿ ಮೋದಿಯವರ ಸಂಬಂಧದ ಕುರಿತಾಗಿ ಓತಪ್ರೋತವಾಗಿ ಮಾತನಾಡುವುದಲ್ಲದೇ, ಅದಾನಿ ಕಂಪನಿಯಿಂದಾಗಿ ಜೀವವಿಮಾನಿಗಮ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಅಪ್ ಹೆಚ್ಚು ಹಣ ಕಳೆದುಕೊಂಡಿದೆ ಎಂದು ಜನರನ್ನು ದಿಕ್ಕು ತಪ್ಪಿಸುವ ಕಾಯಕಕ್ಕೆ ಇಳಿಯುತ್ತದೆ.

moodofnationಇವೆಲ್ಲದರ ನಡುವೆ ಇಂಡಿಯಾ ಟುಡೇ ಮ್ಯಾಗಜೀನ್‌ನ ಇತ್ತೀಚಿನ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಸುಮಾರು 72% ಆಗಿದ್ದು, ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನುಕೂಲಕರವಾಗಿ ಪರಿಣಮಿಸುತ್ತದೆ ಎಂದು ಹೇಳಿದರೆ. ಮತ್ತೊಂದು ಅಂತರಾಷ್ಟ್ರೀಯ ಮ್ಯಾಗಜೀನ್ ತನ್ನ ಸಮೀಕ್ಷೆಯಲ್ಲಿ 72% ನೊಂದಿಗೆ ಮೋದಿ ಅತ್ಯಂತ ಜನಪ್ರಿಯ ಜಾಗತಿಕ ನಾಯಕ ಎಂದು ಘೋಷಿಸುತ್ತದೆ. ಮೋದಿಯವರ ನಂತರ ಎರಡನೇ ಸ್ಥಾನದಲ್ಲಿರುವ ಜೋ ಬಿಡೆನ್ ಅವರ ಜನಪ್ರಿಯತೆ ಕೇವಲ 48% ಇದ್ದು ಮೊದಲ ಮತ್ತು ಎರಡನೇ ಸ್ಥಾನಗಳ ನಡುವೆ ಭಾರೀ ಅಂತರವಿದೆ ಎಂದೂ ಸಹಾ ಹೇಳುತ್ತದೆ.

ಈಗ ಈ ಎಲ್ಲಾ ವಿಷಯಗಳನ್ನೂ ಒಂದಕ್ಕೊಂದು ಜೋಡಿಸಿ ತಾಳೆ ಮಾಡಿದಲ್ಲಿ ಈ ದೇಶದ ಘನತೆ ಗೌರವವನ್ನು ಹಾಳಿ ಮಾಡಿಯಾದರೂ, ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕಾಂಗ್ರೇಸ್ ಜೊತೆಗೆ ಎಡಪಂಥೀಯರು ಹವಣಿಸುತ್ತಿದ್ದರೆ, ಪ್ರಪಂಚಾದ್ಯಂತ ಆರ್ಥಿಕವಾಗಿ ತಲ್ಲಣಗೊಂಡಿದ್ದರೂ ಭಾರತ ದೇಶ ಸುಭದ್ರ ನಾಯಕತ್ವದಿಂದಾಗಿ ವಿಶ್ವ ಗುರುವಾಗುವತ್ತ ಹೆಜ್ಜೆ ಹಾಕುತ್ತಿರುವುದನ್ನು ತಡೆಯುವ ಸಲುವಾಗಿ ಮತ್ತು ಅದಾನಿಯವರನ್ನೂ ಸದ್ದಿಲ್ಲದೇ ಮೂಲೆ ಗುಂಪುಮಾಡುವ ಸಲುವಾಗಿ ಕೆಲವು ಭಾರತೀಯ ಕೈಗಾರಿಕೋದ್ಯಮಿಗಳು ಸೇರಿಕೊಂಡು ನಡೆಸಿರುವ ಹುನ್ನಾರ ಬೆಳಕಿಗೆ ಬರುತ್ತಲಿದೆ.

premjiಅದಾನಿ ವಿರುದ್ಧದ ಷಡ್ಯಂತ್ರದ ಸೂತ್ರಧಾರಾಗಿ ಕೈಗಾರಿಕೋದ್ಯಮಿ ಅಜೀಂ ಪ್ರೇಮ್‌ಜಿಯವರತ್ತ ಅನೇಕರು ಬೆರಳು ಮಾಡಿ ತೋರಿಸುತ್ತಿರುವುದಕ್ಕೂ ಬಲವಾದ ಕಾರಣಗಳಿವೆ. ಹಿಂಡೆನ್‌ಬರ್ಗ್‌ನ ಹಿಂದೆ ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿ ಅವರ ಪತ್ನಿ ದಿ ವೈರ್‌ನ ಸಂಪಾದಕಿ ಸೀಮಾ ಚಿಶ್ತಿ, ಎನ್‌ಜಿಒ, ನ್ಯಾಷನಲ್ ಫೌಂಡೇಶನ್ ಫಾರ್ ಇಂಡಿಯಾ, ಎಡಪಂಥೀಯ ವೆಬ್‌ಸೈಟ್. ಇವೆಲ್ಲವೂ ಅಜೀಂ ಪ್ರೇಮ್‌ಜಿಯವರ NGO, IPSMF ನಿಂದ ಧನಸಹಾಯಗಳನ್ನು ಪಡೆದಿವೆ. ಅದಾನಿ ವಿರುದ್ಧ, ಬಾಬ್ ಬ್ರೌನ್ ಫೌಂಡೇಶನ್ (BBF), ಆಸ್ಟ್ರೇಲಿಯಾದ NGO, Adaniwatch.org ಎಂಬ ವೆಬ್‌ಸೈಟ್ ಅನ್ನು ನಡೆಸುತ್ತದೆ. ಅದಾನಿಯವರ ಬ್ರ್ಯಾಂಡ್ ಇಮೇಜ್ ಅನ್ನು ಹಾಳುಮಾಡುವ ಗುರಿಯನ್ನು ಹೊಂದಿರುವ ಈ ವೆಬ್‌ಸೈಟ್‌ಗೆ ಅಜೀಂ ಪ್ರೇಮ್‌ಜಿಯ ಎನ್‌ಜಿಒ, ಸೊರೊಸ್, ಫೋರ್ಡ್ ಫೌಂಡೇಶನ್, ರಾಕ್‌ಫೆಲ್ಲರ್, ಒಮಿಡ್ಯಾರ್, ಬಿಲ್ ಗೇಟ್ಸ್‌ನಿಂದ ಹಣಕಾಸು ಒದಗಿಸಲಾಗಿದೆ. ಹಿಂಡೆನ್ಬರ್ಗ್ ಸಂಸ್ಥೆಯ ಹೆಗಲ ಮೇಲೆ ಬಂದೂಕನ್ನು ಇಟ್ಟು ಗುಂಡನ್ನು ಮಾಸ್ಟರ್ ಮೈಂಡ್ ಅಜೀಂ ಪ್ರೇಮ್‌ಜಿ ಮತ್ತು ಅವರ ಎಂಜಲು ಕಾಸಿಗಾಗಿ ಕೆಲಸ ಮಾಡುವ ಎಡಪಂಥೀಯ ಗ್ಯಾಂಗ್‌ಗಳು ಮಾಡಿರುವುದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ನಾನು ತಿನ್ನುವುದಿಲ್ಲ. ನಾನು ತಿನ್ನಲು ಬಿಡುವುದಿಲ್ಲ ಎಂದು ಕಳೆದ ೯ ವರ್ಷಗಳ ಕಾಲ ಹಗರಣ ಮುಕ್ತ ಆಡಳಿತವನ್ನು ನೀಡುತ್ತಿರುವ ಮೋದಿಯವರ ಜನಪ್ರಿಯತೆಯನ್ನು ಕುಗ್ಗಿಸುವ ಸಲುವಾಗಿ, ಮೋದಿ ಮತ್ತು ಅದಾನಿ ಇಬ್ಬರೂ ಗುಜರಾತಿನ ಮೂಲದವರಾಗಿದ್ದು ಮೋದಿಯರಿಂದಾಗಿಯೇ ಆದಾನಿ ಈ ಪರಿಯಾಗಿ ಅತ್ಯಂತ ಕ್ಷಿಪ್ರವಾಗಿ ಜಾಗತಿಕ ಮಟ್ಟದಲ್ಲಿ ಬೆಳೆದ್ದಾರೆ ಎಂಬ ಹಸೀ ಸುಳ್ಳನ್ನು ನೂರು ಬಾರಿ ಹೇಳುತ್ತಾ ಅದನ್ನೇ ಸತ್ಯ ಮಾಡಿ 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದಾಗಿಯೇ ಅಜೀಂ ಪ್ರೇಮ್‌ಜಿಯ ಆದಿಯಾಗಿ ಎಲ್ಲಾ ಮೋದಿ ವಿರೋಧಿಗಳು ಆಲ್ಟ್‌ನ್ಯೂಸ್, ದಿ ವೈರ್, ದಿ ಕ್ಯಾರವಾನ್, ದಿ ನ್ಯೂಸ್ ಮಿನಿಟ್‌ ಈಗ ಬಿಬಿಸಿ ಮತ್ತು ಹಿಡನ್ಬರ್ಗ್ ಮುಂತಾದವುಗಳಿಗೆ ಭಾರೀ ಮೊತ್ತದ ಆರ್ಥಿಕ ನೆರವನ್ನು ನೀಡಿದ್ದಕ್ಕೆ ಸಾಕ್ಷಿ ಇದೆ.

Lic_SBIಈಗಾಗಲೇ ತಿಳಿಸಿದಂತೆ ಜೀವವಿಮಾ ನಿಗಮದ ಒಟ್ಟು ಹೂಡಿಕೆಗಳು ಸುಮಾರು ರೂ. 40 ಲಕ್ಷ ಕೋಟಿಗಳಿದ್ದು ಅದರಲ್ಲಿ ಅದಾನಿ ಷೇರುಗಳಲ್ಲಿನ ಹೂಡಿಕೆ ಕೇವಲ ರೂ. 36,475 ಕೋಟಿಗಳು ಅಂದರೆ ಶೇಕಡಾವಾರು ಲೆಖ್ಖಾಚಾರದಲ್ಲಿ 0.90% ಮಾತ್ರ ಆಗಿದೆ. ಈ ಪರಿಯಾಗಿ ಆರ್ಥಿಕ ಕುಸಿತದ ನಂತರವೂ ಅದಾನಿ ಷೇರುಗಳಲ್ಲಿನ ಎಲ್‌ಐಸಿ ಹೂಡಿಕೆಯ ಪ್ರಸ್ತುತ ಮಾರುಕಟ್ಟೆ ಮೌಲ್ಯವು ರೂ. 56142 ಕೋಟಿ ಆಗಿರುವುದರಿಂದ LIC ಲಾಭದಲ್ಲೇ ಇದೆ.

ಇನ್ನು ಎಸ್‌ಬಿಐ ಅದಾನಿ ಸಮೂಹಕ್ಕೆ 27000 ಕೋಟಿಗಳನ್ನು ಸಾಲದ ರೂಪವಾಗಿ ನೀಡಿದ್ದು ಈ ಅಷ್ಟೂ ಸಾಲಗಳಿಗಿಂತಲೂ ಹೆಚ್ಚಿನ ಮೊತ್ತದ ಮೇಲಾಧಾರ ಭದ್ರತೆಗಳಿಂದಲೇ ಸುರಕ್ಷಿತಗೊಳಿಸಲಾಗಿದೆಯೇ ಹೊರತು ಯಾವುದೇ ಈಕ್ವಿಟಿ ಷೇರುಗಳ ಮೇಲೆ ಸಾಲವನ್ನು ನೀಡಲಾಗಿಲ್ಲ ಎಂದು ಎಸ್‌ಬಿಐ ದೃಢಪಡಿಸಿದೆ. ಇದೇ ರೀತಿಯಾಗಿ ಅಪೆಕ್ಸ್ ಬ್ಯಾಂಕ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಹಣಕಾಸು ವಲಯವು ಸದೃಢವಾಗಿದೆ ಮತ್ತು ಎಲ್ಲಾ ನಿಯಂತ್ರಣ ಕಾರ್ಯವಿಧಾನಗಳು ಮತ್ತು ನಿಯಮಗಳು ಜಾರಿಯಲ್ಲಿವೆ ಎಂದು ಸ್ಪಷ್ಟಪಡಿಸಿದ್ದು ಈಗಾಗಲೇ ಅದಾನಿಯವರೇ ಹೇಳಿರುವಂತೆ ಅವರು ತಮ್ಮ ವ್ಯಾಪಾರದ ವಿಸ್ತರಣೆಗೆ ಭಾರತೀಯ ಬ್ಯಾಂಕುಗಳಿಗಿಂತಲೂ ಹೆಚ್ಚಾಗಿ ವಿದೇಶಿ ಹಣಕಾಸು ಸಂಸ್ಥೆಯಿಂದಲೇ ಪಡೆದಿರುವಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಆರ್‌ಬಿಐ ಜೀವವಿಮಾ ನಿಗಮ ಮತ್ತು ಎಸ್‌ಬಿಐನಂತಹ ಈ ದೇಶದ ಶಾಸನಬದ್ಧ ಸಂಸ್ಥೆಗಳು ಮತ್ತು ಸರ್ವೋಚ್ಚ ನ್ಯಾಯಾಲದ ತೀರ್ಪನ್ನು ನಂಬಲು ಹಿಂಜರಿಯುವ ನಮ್ಮ ದೇಶದ ವಿರೋಧ ಪಕ್ಷಗಳು ಯಾವುದೇ ಅಧಿಕೃತ ಮಾನ್ಯತೆ ಇಲ್ಲದ ವಿದೇಶಿ ಹಿಂಡೆನ್ಬರ್ಗ್ ವರದಿ ಮತ್ತು ಬಿಬಿಸಿ ಸಾಕ್ಷಚಿತ್ರವನ್ನು ಆಧಾರವಾಗಿಟ್ಟು ಕೊಂಡು ಈ ಪರಿಯ ಗದ್ದಲವನ್ನು ಸಂಸತ್ತಿನಲ್ಲಿ ಮಾಡುತ್ತಿರುವುದು ಸ್ಪಷ್ಟವಾಗಿ ಟೂಲ್ ಕಿಟ್ಟಿನ ಭಾಗವಾಗಿ, ಅದಾನಿ, ಎಲೈಸಿ, ಎಸ್‌ಬಿಐ ಮುಂದಿಟ್ಟುಕೊಂಡು ಮೋದಿ ಸರ್ಕಾರಕ್ಕೆ ಕಳಂಕ ತರಲು ಮುಂದಾಗಿರುವುದು ಅವರ ಸ್ಪಷ್ಟ ಉದ್ದೇಶವಾಗಿದೆ

ಮೋದಿಯವರ ಜೊತೆಗೆ ಅದಾನಿ ಇರುವ ಪೋಟೋವನ್ನು ಸಂಸತ್ತಿನಲ್ಲಿ ತೋರಿಸಿದ ರಾಹುಲ್ ಅದೇ ತಮ್ಮ ಸ್ವಕ್ಷೇತ್ರ ಕೇರಳ, ತಮ್ಮ ಪರಮಾಪ್ತೆ ಮಮತಾ ಬ್ಯಾನರ್ಜಿಯ ಬಂಗಾಳ, ಮತ್ತು ತಪ್ಪದೇ ಕಾಂಗ್ರೇಸ್ ಸರ್ಕಾರ ಇರುವ ರಾಜಸ್ಥಾನ, ಮತ್ತು ಛತ್ತೀಸ್‌ಗಢ ಮುಂತಾದ ರಾಜ್ಯಗಳಲ್ಲಿ ಸಾವಿರ ಸಾವಿರ ಕೋಟಿಗಳ ವಿವಿಧ ಯೋಜನಎಗಳಿಗೆ ಹೂಡಿಕೆ ಮಾಡಿರುವುದು ಇದೇ ಅದಾನಿಯೇ ಅಲ್ಲವೇ? ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೂ ಸಹಾ ಅದಾನಿಯ ಜೊತೆಗೆ ನಿಂತುಕೊಂಡಿರುವ ಫೋಟೋಗಳು ಸಾರ್ವಜನಿಕವಾಗಿ ಲಭ್ಯ ಇರುವಾಗ, ಈ ಪರಿಯಾಗಿ ಅವರ ಮೋದಿ ಹಿಂದೆ ಬಿದ್ದಿದ್ದಾದರೂ ಏಕೇ? ಭಾರತದಾದ್ಯಂತ 22 ರಾಜ್ಯಗಳಲ್ಲಿ ಅದಾನಿಯವರು ಕಾನೂನು ಬದ್ಧವಾಗಿಯೇ ವ್ಯವಹಾರ ನಡೆಯುತ್ತಿರುವುದಲ್ಲದೇ, ಇತರೇ 9 ದೇಶಗಳಲ್ಲಿಯೂ ಸಹಾ ಪ್ರಮುಖ ಒಪ್ಪಂದಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ.

ಯಾರು ಇಲ್ಲಿ ಅದಾನಿಯವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರ ವ್ಯವಹಾರದ ಬಗ್ಗೆ ಅಕ್ಷೇಪ ಇದ್ದಲ್ಲಿ, ನ್ಯಾಯ ಸಮ್ಮತವಾಗಿ ದೂರು ಸಲ್ಲಿಸಿ SEBI ಅಥವಾ RBI ನಂತಹ ನಿಯಂತ್ರಕ ಸಂಸ್ಥೆಯಿಂದ ತನಿಖೆಗೆ ಒತ್ತಾಯಿಸಲಿ, ಆ ತನಿಖೆಯಿಂದ ತಪ್ಪಿತಸ್ಥರೆಂದು ಕಂಡುಬಂದರೆ, ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಅಗತ್ಯ ಅನುಸರಣಾ ಕಾನೂನು ಕ್ರಮವನ್ನು ತೆಗೆದುಕೊಳ್ಳಲಿ. ಅದು ಬಿಟ್ಟು ತೋಳ ಬಂತು ತೋಳ ಎನ್ನುವಂತೆ ಯಾವುದೇ ಆಧಾರ ಇಲ್ಲದೇ ಸಂಸತ್ತನ್ನು ಸ್ತಬ್ಧಗೊಳಿಸಿ ಸರ್ಕಾರದ ಮೇಲೆ ಆರೋಪ ಹೊರಿಸುವುದು ಎಷ್ಟು ನ್ಯಾಯ ಮತ್ತು ಸಮರ್ಥನೀಯ?

ಕಳೆದ ಬಾರಿಯ ಲೋಕಸಭಾ ಚುನಾವಣಾ ಸಮಯದಲ್ಲಿ ಹೋದ ಬಂದ ಕಡೆಯಲ್ಲೆಲ್ಲಾ ಚೌಕಿದಾರ್ ಚೋರ್ ಹೈ ಎಂದು ರಫೇಲ್ ಕುರಿತಾಗಿ ತಪ್ಪು ಮಾಹಿತಿಯನ್ನು ನೀಡಿ ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದ ರಾಹುಲ್ ಮತ್ತವರ ತಂಡ ನಂತರ ನ್ಯಾಯಾಂಗ ತನಿಖೆಯಲ್ಲಿ ರಫೇಲ್ ಒಪ್ಪಂದ ನ್ಯಾಯ ಸಮ್ಮತವಾಗಿದೆ ಎಂದು ತಿಳಿದು ಬಂದ ನಂತರ ಸುಮ್ಮನಾದರೂ, ಚುನಾವಣೆ ಸಮಯದಲ್ಲಿ ಮೋದಿಯವರ ಕುರಿತಾಗಿ ಕೆಲವಷ್ಟು ಮಂದಿಗಾದರೂ ಕೆಟ್ಟ ಆಲೋಚನೆ ಬರುವಂತೆ ಮಾಡಿದ್ದಂತೂ ಸತ್ಯ್. ಈ ಪ್ರಕರಣದಲ್ಲೂ ಅದೇ ರೀತಿಯಾಗಿಯೇ ಈ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಮೋದಿಯವದು ದಿನೇ ದಿನೇ ಬೆಳೆಯುತ್ತಲಿದ್ದು, ಅವರ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ, ವಿದೇಶಿಗರ ಸಹಾಯದಿಂದ ಈ ಪರಿಯಾಗಿ ದೇಶ ಮಾನವನ್ನು ಟೂಲ್ ಕಿಟ್ಗಳ ಸಹಾಯದಿಂದ ಹರಾಜು ಹಾಕುತ್ತಿರುವ ದೇಶವಿದ್ರೋಹಿ ಸಂಘಟನೆಗಳಿಗೆ ದೇಶವಿದ್ದಲ್ಲಿ ಮಾತ್ರವೇ ತಮ್ಮ ಬೇಳೇ ಕಾಳು ಬೆಳೆಯುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ಹೋಗಿರುವುದೇ ಈ ಎಲ್ಲಾ ಅಪಸವ್ಯಗಳಿಗೂ ಕಾರಣವಾಗಿದೆ. ಇಂದಿನ ಪ್ರಜ್ಞಾವಂತ ಪ್ರಜೆಗಳು ಈಗ ಜಾಗೃತರಾಗಿರುವ ಕಾರಣ ಇವರೆಲ್ಲರ ಆಟ ನೆಡೆಯದು ಎನ್ನುವುದಕ್ಕೆ ಒಂದು ವಾರದಿಂದ ಬಿದ್ದು ಹೋಗಿದ್ದ ಅದಾನಿ ಕಂಪನಿಯ ಶೇರುಗಳು ನೆನ್ನೇ ಮೊನ್ನೇ ಏರಿಕೆಯಾಗಿರುವುದು ಸಾಕ್ಷಿಯಾಗಿದೆ ಅಲ್ವೇ? ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದು ಅದು, ಈ ಲೋಕಕ್ಕೆ ಕಾಣದು ಎಂದು ತಿಳಿದರೆ ಅದು ಬೆಕ್ಕಿನ ತಪ್ಪು ಕಲ್ಪನೆಯೇ ಹೊರತು ಜನರದ್ದು ಅಲ್ಲಾ ಅಲ್ವೇ? ಟೂಲ್ ಕಿಟ್ ರೂಪದಲ್ಲಿ ತೈಲ ಎಷ್ಟೇ ಸುರಿದು ಬೆಂಕಿ ಹಚ್ಚಿದರೂ, ಅದು ಕ್ಷಣಿಕವಾಗಿ ಅಕ್ಕ ಪಕ್ಕದವರನ್ನು ಸುಡಬಹುದಾದರೂ, ಚುನಾವಣೆಯಲ್ಲಿ ಈ ಬೆಂಕಿಯನ್ನು ಶಾಶ್ವತವಾಗಿ ನಂದಿಸುವ ಶಕ್ತಿ ಈ ದೇಶದ ಪ್ರಜ್ಞಾವಂತರಿಗಿದೆ ಅಲ್ವೇ?ಟೂಲ್ ಕಿಟ್ ರೂಪದಲ್ಲಿ ತೈಲ ಎಷ್ಟೇ ಸುರಿದು ಜಾತಿ ಧರ್ಮಗಳನ್ನು ಒಡೆದು, ಆರ್ಥಿಕವಾಗಿ ಬೆಂಕಿ ಹಚ್ಚಿದರೂ, ಅದು ಕ್ಷಣಿಕವಾಗಿ ಅಕ್ಕ ಪಕ್ಕದವರನ್ನು ಸುಡಬಹುದಾದರೂ, ಚುನಾವಣೆಯಲ್ಲಿ ಈ ಬೆಂಕಿಯನ್ನು ಶಾಶ್ವತವಾಗಿ ನಂದಿಸುವ ಶಕ್ತಿ ಈ ದೇಶದ ಪ್ರಜ್ಞಾವಂತರಿಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment