ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಶತ್ರುಗಳನ್ನು ಸೋಲಿಸಲು ಕೇವಲ ಯುದ್ದ ಮಾಡಬೇಕೆಂದೇನು ಇಲ್ಲಾ. ತಮ್ಮ ಅಪರಿಮಿತ ಸ್ವಾಭಿಮಾನ ಮತ್ತು ದೇಶಪ್ರೇಮದಿಂದ ಶತ್ರುಗಳ ವಿರುದ್ಧ ನ್ಯಾಯಾಲಯಗಳಲ್ಲಿ ಹೋರಾಡಿ, ಇಡೀ ವ್ಯವಸ್ಥೆಯೇ ತನ್ನ ವಿರುದ್ಧವಿದ್ದರೂ, ತಮ್ಮ ದೇಶದ ಅಸ್ಮಿತೆ ಮತ್ತು ಅಸ್ತಿತ್ವಗಳನ್ನು ಎತ್ತಿ ಹಿಡಿಯುವ ಮೂಲಕ. ನ್ಯಾಯಾಲಯದ ತೀರ್ಪಿನಲ್ಲಿ ಸೋತರೂ ಜನಮಾನಸದಲ್ಲಿ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾನ್ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್ ಅವರನ್ನು ಪ್ರತಿಯೊಬ್ಬ ಭಾರತೀಯರೂ ನೆನಪಿಸಿಕೊಳ್ಳಲೇ ಬೇಕು.

nairಕೇರಳದ ಪಾಲಕ್ಕಾಡ್ ಜಿಲ್ಲೆಯ ಮಂಕರದ ಮಮ್ಮಾಯಿಲ್ ರಾಮುನ್ನಿ ಪಣಿಕ್ಕರ್ ಮತ್ತು ಪಾರ್ವತಿ ಅಮ್ಮ ಚೆಟ್ಟೂರ್ ಎಂಬ ಶ್ರೀಮಂತ ದಂಪತಿಗಳ ಮಗನಾಗಿ 11 ಜುಲೈ 1857 ಚೆಟ್ಟೂರು ಶಂಕರನ್ ನಾಯರ್ ಅವರ ಜನನವಾಗುತ್ತದೆ. ಶಂಕರನ್ ನಾಯರ್ ಅವರ ಆರಂಭಿಕ ಶಿಕ್ಷಣವೆಲ್ಲರೂ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಾರಂಭವಾಗಿ ನಂತರ ಮಲಬಾರ್‌ನ ಶಾಲೆಗಳಲ್ಲಿ ಮುಂದುವರೆದು, ಕ್ಯಾಲಿಕಟ್‌ನ ಪ್ರಾಂತೀಯ ಶಾಲೆಯಿಂದ ಕಲಾ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗುತ್ತಾರೆ. ಅದಾದ ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿಕೊಂಡು, 1877 ರಲ್ಲಿ ಅವರು ತಮ್ಮ ಕಲಾ ಪದವಿಯನ್ನು ಪಡೆದನಂತರ ಮತ್ತೆ ಎರಡು ವರ್ಷಗಳ ಮದ್ರಾಸ್ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕಾನೂನು ಪದವಿ ಪಡೆಯುತ್ತಾರೆ.

ಹೀಗೆ ಕಾನೂನು ಪದವಿಯವನ್ನು ಪಡೆದ ನಾಯರ್ ಒಬ್ಬ ಅಪ್ರತಿಮ ನ್ಯಾಯವಾದಿಗಳಾಗಿದ್ದರು. ಯಾವುದೇ ಭಾರತೀಯರೂ ಬ್ರಿಟಿಷ್ ಬ್ಯಾರಿಸ್ಟರ್ ಅವರೊಂದಿಗೆ ಕಾನೂನಾತ್ಮಕವಾಗಿ ಕೆಲಸ ಮಾಡಬಾರದು ಎಂದು ಅಂದಿನ ವಕೀಲರ ಸಂಘ ನೀಡಿದ್ದ ಆದೇಶಗಳನ್ನು ಧಿಕ್ಕರಿಸಿದ್ದಲ್ಲದೇ, ಕಕ್ಷಿದಾರರಿಗೆ ತಮ್ಮ ವಕೀಲರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ. ಅವರಿಗೆ ವಕೀಲರ ಚರ್ಮದ ಬಣ್ಣಕ್ಕಿಂತ ನ್ಯಾಯ ಮುಖ್ಯವಾಗಿರುತ್ತದೆ ಎಂಬುದನ್ನು ಬಲವಾಗಿ ವಾದಿಸುವ ಮೂಲಕ ಸಾಮಾಜಿಕ ಸುಧಾರಣೆಗಳ ಅಬ್ಬರದ ಪ್ರತಿಪಾದಕರಾಗಿದ್ದರು.

nair2ಇಂತಹ ನಾಯರ್ ಅವರು 1880 ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾರಂಭಿಸಿ, ಕೆಲವೇ ದಿನಗಳಲ್ಲಿ ಅತ್ಯಂತ ಬುದ್ಧಿವಂತ ವಕೀಲ ಎಂದೇ ಪ್ರಸಿದ್ಧರಾದದ್ದನ್ನು ಗ್ರಹಿಸಿದ ಅಂದಿನ ಮದ್ರಾಸ್ ಸರ್ಕಾರ, 1884 ರಲ್ಲಿ ಅವರನ್ನು ಮಲಬಾರ್ ಜಿಲ್ಲೆಯ ತನಿಖೆಗಾಗಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿತು. ಏತನ್ಮಧ್ಯೆ, 1902 ರಲ್ಲಿ, ವೈಸರಾಯ್ ಲಾರ್ಡ್ ಕರ್ಜನ್ ಅವರನ್ನು ರೇಲಿ ವಿಶ್ವವಿದ್ಯಾಲಯ ಆಯೋಗಕ್ಕೆ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಅವರ ಸೇವೆಗಳನ್ನು ಗುರುತಿಸಿ, ಅವರನ್ನು 1904 ರಲ್ಲಿ ರಾಜ-ಚಕ್ರವರ್ತಿಯವರು ಭಾರತೀಯ ಸಾಮ್ರಾಜ್ಯದ ಸಹಚರರಾಗಿ ನೇಮಕವಾಗಿದ್ದರು. 1908 ರವರೆಗೆ ಅವರು ಸರ್ಕಾರದ ಅಡ್ವೊಕೇಟ್ ಜನರಲ್ ಆಗಿದ್ದಲ್ಲದೇ, ಕಾಲಕಾಲ ಹಂಗಾಮಿ ನ್ಯಾಯಾಧೀಶರಾಗಿದ್ದರು. 1908 ರಿಂದ 1915 ರವರೆಗೆ ಅವರು ಮದ್ರಾಸ್‌ನ ಹೈಕೋರ್ಟ್‌ನಲ್ಲಿ ಖಾಯಂ ನ್ಯಾಯಾಧೀಶರಾಗಿ,ಸಿ.ಎ. ವೈಟ್, ವಿಲಿಯಂ ಆಯ್ಲಿಂಗ್ ಅವರೊಂದಿಗೆ ಕಲೆಕ್ಟರ್ ಆಶೆ ಕೊಲೆ ಪ್ರಕರಣವನ್ನು ವಿಚಾರಣೆ ನಡೆಸಿದ ಪೀಠದ ಭಾಗವಾಗಿದ್ದರು. ಅವರ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರ್ಕಾರ ಅವರಿಗೆ 1912 ರಲ್ಲಿ ಅವರು ನೈಟ್ ಪದವಿಯನ್ನು ನೀಡಿ ಗೌರವಿಸಿತ್ತು.

nair31915 ರಲ್ಲಿ ಶಿಕ್ಷಣ ಖಾತೆಯ ಉಸ್ತುವಾರಿಯೊಂದಿಗೆ ವೈಸರಾಯ್ ಕೌನ್ಸಿಲ್‌ನ ಸದಸ್ಯರಾಗಿ ನೇಮಕಗೊಂಡರು ಹೀಗೆ ಸದಸ್ಯರಾಗಿದ್ದಾಗಲೇ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿವಿಧ ದೋಷಗಳನ್ನು ಎತ್ತಿ ತೋರಿಸಿದರು ಮತ್ತು ಸುಧಾರಣೆಗಳನ್ನು ಸೂಚಿಸಿದರು. ಬ್ರಿಟಿಷ್ ಸರ್ಕಾರದ ಭಾಗವಾಗಿಯೂ ಈ ರೀತಿಯಾಗಿ ಬ್ರಿಟಿಷ್ ಸರ್ಕಾರದ ವಿರುದ್ಧವೇ ಒಬ್ಬ ಭಾರತೀಯನಾಗಿ ಅಂತಹ ಟೀಕೆಗಳನ್ನು ನೀಡುವುದು ಮತ್ತು ಅಂತಹ ಬೇಡಿಕೆಗಳನ್ನು ಮಾಡುವುದು ಆ ದಿನಗಳಲ್ಲಿ ನಂಬಲಸಾಧ್ಯವಾಗಿದ್ದರೂ, ಬ್ರಿಟಿಷ್ ಸರ್ಕಾರವು ಅವರ ಅನೇಕ ಶಿಫಾರಸುಗಳನ್ನು ಒಪ್ಪಿಕೊಂಡಿತ್ತು ಎಂದರೆ ಅವರ ಪ್ರಭಾವ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.

bagh2ಹೀಗೆ ಬ್ರಿಟೀಷ್ ಸರ್ಕಾರದಲ್ಲಿ ಅತ್ಯಂತ ಜವಾಬ್ಧಾರಿಯುತ ಹುದ್ದೆಯಲ್ಲಿದ್ದಾಗಲೇ, ಪಂಬಾಬಿನ ಜಲಿಯನ್ ವಾಲಾಬಾಗ್ ನಲ್ಲಿ ಏಪ್ರಿಲ್ 13 1919 ರಂದು ನಡೆದ ಹತ್ಯಾಕಾಂಡದ ನಾಯರ್ ಅವರ ದೇಶಭಕ್ತಿಯನ್ನು ಜಾಗೃತ ಗೊಳಿಸಿತು. ಬ್ರಿಟೀಷರ  ಅಮಾನುಷ ಕ್ರಮವನ್ನು ವಿರೋಧಿಸಿ ಕೂಡಲೇ ಅವರು ವೈಸರಾಯ್ ಕೌನ್ಸಿಲ್‌ಗೆ ರಾಜೀನಾಮೆ ನೀಡಿದ್ದಲ್ಲದೇ ಆ ಸಮಯದಲ್ಲಿ ಸ್ವಾತ್ರಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿಕೊಂಡಿದ್ದ ಗಾಂಧಿಯವರ ನಡೆಗಾಗಿ ಬೇಸತ್ತು, ಗಾಂಧಿ ಮತ್ತು ಅರಾಜಕತೆ ಎಂಬ ಪುಸ್ತಕವನ್ನು ಬರೆದದ್ದಲ್ಲದೇ, ಅದರಲ್ಲಿ ಅದರಲ್ಲಿ ಜಲಿಯನ್ ವಾಲ ಭಾಗ್ ಹತ್ಯಾಕಾಂಡದ ಪ್ರಮುಖ ರೂವಾರಿ ಅಂದಿನ ಪಂಜಾಬ್ ಗವರ್ನರ್ ಆಗಿದ್ದ ಮೈಕೆಲ್ ಓ’ಡ್ವೈರ್ (ಶಹೀದ್ ಉಧಮ್ ಸಿಂಗ್ ಅವರನ್ನು ಗುಂಡು ಹಾರಿಸಿ ನಂತರದ ದಿನಗಳಲ್ಲಿ ಹತ್ಯ ಮಾಡಿದ್ದರು) ಎಂದು ಬಹಿರಂಗವಾಗಿ ಆರೋಪಿಸಿದರು. ನಾಯರ್ ಅವರು ಹೀಗೆ ತಮ್ಮ ಮೇಲೆ ಆರೋಪ ಮಾಡಿದ್ದಕ್ಕೆ ಕೆಂಡಾ ಮಂಡಲವಾದ ಒ’ಡ್ವೈರ್ ನಾಯರ್ ವಿರುದ್ಧ ಬ್ರಿಟನ್ನಿನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು.

ghandhi_bookಬ್ರಿಟಿಷ್ ನ್ಯಾಯಾಲಯದಲ್ಲಿ ಬ್ರಿಟಿಷ್ ನ್ಯಾಯಾಧೀಶರು ಮತ್ತು ಬ್ರಿಟಿಷ್ ತೀರ್ಪುಗಾರರ ಅಧ್ಯಕ್ಷತೆಯಲ್ಲಿ ಬ್ರಿಟಿಷ್ ವ್ಯಕ್ತಿಯ ವಿರುದ್ಧ ಮಾಡಲಾದ ಆರೋಪಕ್ಕೆ ಸ್ವತಃ ನಾಯರ್ ಆವರೇ ಮೊಕದ್ದಮೆಯನ್ನು ಎದುರಿಸಿದರು. ಅಲ್ಲಿನ ಸಮಯ ಸಂದರ್ಭಗಳು ಮತ್ತು ವ್ಯವಸ್ಥೆಗಳೆಲ್ಲವೂ ಅವರ ವಿರುದ್ಧವಾಗಿಯೇ ಇದ್ದರೂ ಸಹಾ ಅವರು ಧೈರ್ಯದಿಂದ ತಮ್ಮ ವಾದವನ್ನು ಮಂಡಿಸಿದರು. ಸುಮಾರು ಐದೂವರೆ ವಾರಗಳ ಕಾಲ ಸುದೀರ್ಘವಾಗಿ ನಡೆದ ಆ ವಿಚಾರಣೆಯು ಅಂದಿನ ಕಾಲಕ್ಕೆ ಲಂಡನ್ ನೋಡಿದ ಅತ್ಯಂತ ಸುದೀರ್ಘವಾದ ಸಿವಿಲ್ ಪ್ರಕರಣವಾಗಿತ್ತು. ತಮ್ಮ ವಾದದದಲ್ಲಿ ಅಮಾಯಕ ಭಾರತೀಯರ ಮೇಲೆ ಬ್ರಿಟಿಷರು ನಡೆಸುತ್ತಿದ್ದ ಅಮಾನವೀಯ ದೌರ್ಜನ್ಯವನ್ನು ಬಯಲಿಗೆಳೆದ ಕಾರಣ, ಈ ಪ್ರಕರಣಕ್ಕೆ ವ್ಯಾಪಕವಾದ ಪತ್ರಿಕಾ ಪ್ರಚಾರ ಪಡೆದದ್ದಲ್ಲದೇ ದೇಶವಿದೇಶಗಳಲ್ಲಿಯೂ ಹೆಚ್ಚಿನ ರೀತಿಯಲ್ಲಿ ಸುದ್ದಿ ಮಾಡಿತು. ಭಾರತೀಯರ ಸ್ವರಾಜ್ಯದ ಕರೆ ಬಂಡಾಯ ಅಥವಾ ದೇಶದ್ರೋಹವಲ್ಲ ಎಂಬುದನ್ನು ಸಮರ್ಥವಾಗಿ ಮಂಡಿಸಿದ ನಾಯರ್ ಅವರ ವಾದವನ್ನು ಬ್ರಿಟಿಷ್ ಸಾರ್ವಜನಿಕರು ಮೊದಲ ಬಾರಿಗೆ ಅರ್ಥಮಾಡಿಕೊಂಡರು.

dyerಅಷ್ಟೆಲ್ಲಾ ಸಮರ್ಥವಾಗಿ ವಾದವನ್ನು ಮಂಡಿಸಿದರೂ, ಪೂರ್ವಾಗ್ರಹ ಪೀಡಿತವಾಗಿದ್ದ ಅಲ್ಲಿನ ನ್ಯಾಯಾಲಯದ ಮುಂದೆ ನಾಯರ್ ಅವರು ತೀವ್ರವಾಗಿ ಸೋಲನ್ನು ಅನುಭವಿಸಿದ್ದಲ್ಲದೇ, ಈ ಪ್ರಕರಣದಲ್ಲಿ 500 ಪೌಂಡ್‌ಗಳ ದಂಡವನ್ನು ಪಾವತಿಸ ಬೇಕಾಯಿತು. ನಾಯರ್ ಅವರು ಕ್ಷಮೆಯಾಚಿಸಿದರೆ ಆ ಮೊತ್ತವನ್ನು ಬಿಟ್ಟುಕೊಡುವುದಾಗಿ ಓ’ಡ್ವೈರ್ ಹೇಳಿದಾಗ, ಅದಕ್ಕೆ ಪ್ರತಿಯಾಗಿ ಸರ್ ಚೆಟ್ಟೂರ್ ಶಂಕರನ್ ನಾಯರ್ ವರು ಅಪರಾಧವನ್ನು ಮಾಡಿಯೂ, ದುರಹಂಕಾರದಿಂದ ಮಾಡಿದ ತಪ್ಪನ್ನು ಒಪ್ಪಿಕೊಳ್ಳದಿರುವ ಅಮಾನವೀಯ ವ್ಯಕ್ತಿಗಳ ಬಳಿ ಕ್ಷಮೆ ಕೇಳುವುದಕ್ಕಿಂತಲೂ 500 ಪೌಂಡ್‌ಗಳನ್ನು ಪಾವತಿಸಿ ಸ್ವಾಭಿಮಾನಿಯಾಗಿ ತಲೆ ಎತ್ತಿಕೊಂಡು ತಿರುಗಾಡಲು ಬಯಸುತ್ತೇನೆ ಎಂದು ಘರ್ಜಿಸಿದ್ದರು. ಅವರ ಈ ನಿರ್ಭೀತ ಸ್ವಭಾದಿಂದಾಗಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಇಡೀ ಪ್ರಪಂಚವೇ ತಿಳಿಯುವಂತೆ ಮಾಡಿದ್ದಲ್ಲದೇ, ನ್ಯೂಯಾರ್ಕ್‌ನಿಂದ ಪ್ಯಾರಿಸ್‌ವರೆಗೆ, ಬರ್ಲಿನ್‌ನಿಂದ ಮಾಸ್ಕೋವರೆಗೆ, ಪ್ರಬಲ ಬ್ರಿಟಿಷ್ ಸಾಮ್ರಾಜ್ಯದ ಚಿತ್ರಣವನ್ನು ಕೇವಲ ಐದು ವಾರಗಳವರೆಗೆ ನಾಯರ್ ಅವರು ಅಲ್ಲಾಡಿಸಿದ್ದರು.

WhatsApp Image 2023-03-25 at 16.39.55ತಮ್ಮ ರಾಜಕೀಯ ಲಾಭಕ್ಕಾಗಿ, ದೇಶ ವಿದೇಶಗಳಲ್ಲಿ ತಮ್ಮ ದೇಶವನ್ನೇ ಅವಹೇಳನ ಮಾಡುವ, ತಮ್ಮ ಶತ್ರುರಾಷ್ಟ್ರಗಳನ್ನು ಹೊಗಳುವ, ವಿದೇಶಗಳು ತಮ್ಮ ದೇಶದ ವಿರುದ್ಧ ಆರ್ಥಿಕ ದಿಗ್ಬಂಧ ಹೇರಬೇಕೆಂದು ಕೇಳಿಕೊಳ್ಳುವ, ತನ್ನ ಹರುಕು ಬಾಯಿಯ ಮೂಲಕ ಕಳ್ಳರ ಜೊತೆ ದೇಶದ ಜವಾಬ್ಧಾರಿಯುತ ವ್ಯಕ್ತಿಯನ್ನು ವಯಕ್ತಿಯವಾಗಿಹಯೂ ಮತ್ತು ಅವರ ಜಾತಿಯ ಮೂಲಕವೂ ಸಾರ್ವಜನಿಕವಾಗಿ ನಿಂದನೆ ಮಾಡಿದ ನಂತರವೂ ತಮ್ಮ ತಪ್ಪನ್ನು ಅರ್ಥೈಸಿಕೊಳ್ಳದೇ ತಾವು ಮಾಡಿದ್ದೇ ಸರಿ, ತಮ್ಮದು ಅಂತಹ ವಂಶ ಇಂತಹ ವಂಶ. ಅಪ್ರತಿಮ ಹೋರಾಟಗಾರ ವೀರ ಸಾವರ್ಕರ್ ಅವರ ಧೂಳಿಗೂ ಸಮಾನವಿಲ್ಲದಂತಹ ವ್ಯಕ್ತಿ, ಕ್ಷಮೆ ಕೋರುವುದಕ್ಕೆ ತಾನೇನೂ ಸಾವರ್ಕರ್ ಅಲ್ಲಾ ಎಂದು ಹೇಳುತ್ತಾ, ದೇಶದಲ್ಲಿ ದೊಂಬಿ ಎಬ್ಬಿಸುತ್ತಾ, ಸಾರ್ವಜನಿಕರ ಮುಂದೆ ಬೆತ್ತಲಾಗುತ್ತಿರುವ ಸಂದರ್ಭದಲ್ಲಿ, ಬ್ರಿಟೀಷರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರೂ, ದೇಶವಾಸಿಗಳ ಮೇಲೆ ಮಾಡಿದ ಅಮಾನವೀಯ ಹತ್ಯಾಕಾಂಡದ ವಿರುದ್ಧ ಸೆಟೆದೆದ್ದು, ತಮ್ಮ ಗೌರವಯುತವಾದ ಕೆಲಸಕ್ಕೆ ರಾಜೀನಾಮೇ ನೀಡಿ ಬ್ರಿಟೀಷರ ವಿರುದ್ಧ ನ್ಯಾಯಯುತವಾಗಿ ಹೋರಾಡಿ, ವಿರೋಚಿತ ಸೋಲನ್ನು ಅನುಭವಿಸಿದರೂ, ಬ್ರಿಟೀಷರು ಮಾಡಿದ ಅಮಾನವೀಯ ಕೃತ್ಯವನ್ನು ಇಡೀ ಪ್ರಪಂಚಕ್ಕೆ ತಿಳಿಸಿದಂತಹ ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಅಲ್ವೇ?
jw_Bagh
ಒಬ್ಬ ವ್ಯಕ್ತಿ, ಕೆಲವು ಕುಟುಂಬಗಳ ಹೋರಾಟ, ತ್ಯಾಗ ಮತ್ತು ಬಲಿದಾನಗಳಿಂದ ಈ ದೇಶಕ್ಕೆ ಸ್ವಾತ್ರಂತ್ರ್ಯ ದೊರೆಯಿತು ಎಂಬ ಗಿಳಿ ಪಾಠವನ್ನೇ ನಮ್ಮ ಮಕ್ಕಳಿಗೆ ಕಲಿಸುವ ಮೂಲಕ ಸರ್ ಚೆಟ್ಟೂರು ಶಂಕರನ್ ನಾಯರ್ ಅವರಂತಹ ಲಕ್ಷಾಂತರ ಸ್ವಾಭಿಮಾನಿ ದೇಶಭಕ್ತರ ಅಹಿಂಸಾತ್ಮಕ ಮತ್ತು ಕಾನೂನಾತ್ಮಕ ಹೋರಾಟಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸದೇ ಇರುವುದು ದೊಡ್ಡ ದುರಂತವೇ ಸರಿ. ತನ್ನ ದೇಶದ ಇತಿಹಾಸವನ್ನು ಮರೆತವರು ಮತ್ತು ಇತಿಹಾಸವನ್ನು ಅರಿಯದವರು, ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು. ಹಾಗಾಗಿ ನಮ್ಮ ದೇಶದ ನೈಜ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ತಲುಪಿಸುವ ಗುರುತರವಾದ ಜವಾಬ್ಧಾರಿ ನಮ್ಮ ಮತ್ತು ನಿಮ್ಮ ಮೇಲೆಯೇ ಇದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s